ಕಿಕ್ಕಿರಿದಸಂಖ್ಯ ಒಂಟಿಕಾಲಿನ ತೆಂಗು
ಗರಿಗೆದರಿ ನಿಂತ ದಡಗಳ ನಡುವೆ
ಸ್ಪಂದಿಸಿವೆ ದೋಣಿ. ತಂಪಾಗಿ, ಕಣ್ಣಿಗಿಂಪಾಗಿ
ಹೊಂಬಿಸಿಲಲ್ಲಿ ನಿದ್ದೆ ಮಾಡಿವೆ ಗದ್ದೆ.
ಊರೂರು ಕೇರಿಗಳ ಮೇಲೆ ಏರಿಳಿವ
ರಿಬ್ಬನ್ನು ದಾರಿಯ ಬದಿಗೆ ಕೇರಳದ
ಹೆಣ್ಣುಗಳ ಕಣ್ಣುಗಳ ಹಿಂದೆ ಕಪ್ಪು ಮುಡಿ
ಬೆನ್ನ ತುಂಬಾ ಹರಡಿ ನೆಳಲು ಬೆಳಕಿನ
ಮೋಡಿ. ಅಲ್ಲಲ್ಲಿ ದಟ್ಟಗಾಡಿನ ಬೆಟ್ಟಸಾಲಿನ
ಮೇಲೆ ಮೋಡಗಳಾಡಿ ಎಂಥದೋ ಗಾರುಡಿ.