ಗುರು ಸೇವೆ ಕೊನೆ ಸಾಗಲಿಲ್ಲ
ಈ ಮರಣ ಭೀತಿಯು ಪೋಗಲಿಲ್ಲ ಗುರು
ಕರಣವ ಬೀರಿಟ್ಟು ಭರಣದೊಳಗಿಟ್ಟು
ಸಿರಿತನವನ್ನು ಬಿಟ್ಟು ಜರಿಸುವರಾರಿಲ್ಲ         || ಗುರು ||

ಕೇಳಿಧರ್ಮವು ನಿಲ್ಲಲಿಲ್ಲ ಮುಂದೆ
ಕೇಳಲೇನದು ಫಲವಿಲ್ಲ
ಕಾಲುಗಳ ಹೊದಿಸಿಲ್ಲ ಗಮನವೆಂತವ
ಬಲ್ಲ ಕೇಳು ಮೇಲರಿಯದೆ ಪಾಲಾಯಿತು ಜವೆಲ್ಲಾ      || ಗುರು ||

ರಾಗಾದಿಗಳು ಪೋಗಲಿಲ್ಲ
ಸುಖವಾಗಲೆಂದೊಡೆ ಸಾಗದಲ್ಲ
ರೋಗ ಪೋಗದ ರಸ ಸೇವಿಸಿ ಫಲವಿಲ್ಲ
ಯೋಗ ನಿಲ್ಲದೆ ಶಿವಬಾಗಿದೊಡನಲ್ಲ || ಗುರು ||

ಹರುಷ ತನ್ನೊಳಗೇರಲಿಲ್ಲ ಸಾಧು
ಚರಣ ಕೈವಶವಾಗಲಿಲ್ಲ
ನರಬಾವ ಕೊಡಲಿಲ್ಲ ಕೊರತೆಗೆ ಕಡೆಯಿಲ್ಲ
ಗುರು ಶಂಕರನೊಳು ಎನ್ನ ಎರಕ ತೋರಿಸಲಿಲ್ಲ       || ಗುರು ||