ಶಿವ ಲೋಕದಿಂದ ಒಬ್ಬ ಸಾದು ಬಂದನವ್ವ |
ಒಬ್ಬ ಯೋಗಿ ಬಂದನವ್ವ | ಶಿವನಾಮ
ಶಬ್ಧ ಕೇಳಿ ಅಲ್ಲೆ ನಿಂದನವ್ವ | ಕೇಳ್
ಹಡೆದವ್ವ ಕೇಳ್ ಹಡೆದವ್ವ || ಶಿವ ||

ಮೈಯಿಗೆ ಬೂದಿ ಬಳಿದು ಕಪಟಿ ಹಾಕನವ್ವ |
ಕೊರಳೊಳ್ ರುದ್ರಾಕ್ಷಿ ಹಾಕನವ್ವ | ಕೈಯಲ್ಲಿ
ತ್ರಿಶೂಲ ಹಿಡಿದು ಅವನೇ ನಿಂತನವ್ವ
ಕೇಳ್ ಹಡೆದವ್ವ, ಕೇಳ್ ಹಡೆದವ್ವ || ಶಿವ ||

ಭಿಕ್ಷವ ನೀಡಿದರೆ ಬೇಡ ಅನ್ವನವ್ವ ಗುರುವು
ಬೇಡ ಅನ್ವವ್ವ | ಊಟಕ್ಕೆ ಕೆರೆದರೆ ಬೇಡ ಅನ್ವವ್ವ
ಕೇಳ್ ಹಡೆದವ್ವ | ಕೇಳ್ ಹಡೆದವ್ವ || ಶಿವ ||

ಊರಿಂದ ಹೊರಗೆ ಒಂದು ಮಠವ ಕಟ್ಟಿದನವ್ವ |
ಒಂಭತ್ತು ಬಾಗಿಲನು ಅವನೇ ನಿಂತನವ್ವ
ಕೇಳ್ ಹಡೆದವ್ವ ಕೇಳ್ ಹಡೆದವ್ವ || ಶಿವ ||

ವಸವೀಯೊಳಗೆ ನಮ್ಮ ಶಿಶುನಾಳ ಅತ್ತನವ್ವ
ಗುರು ಗೋವಿಂದತ್ತನವ್ವ | ನಿತ್ಯಲಾಲಿ ಪುರುಷನ
ಸತ್ಯ ಬಾಬು ನಿತ್ಯ ನೀನೇ ಅಪ್ಪ
ಕೇಳ್ ಹಡೆದವ್ವ ಕೇಳ್ ಹಡೆದವ್ವ || ಶಿವ ||