1. ಬದುಕೆಂಬ ಬಂಡಿಯಲಿ

ಸಂಪಾಜೆ, ಕೊಡಗು ಮತ್ತು ದಕ್ಷಿಣಕನ್ನಡ ಜಿಲ್ಲೆಗಳ ಸಂಗಮ ಸ್ಥಳ. ಸುತ್ತಲಿನ ಬೆಟ್ಟ ಗುಡ್ಡ ಮತ್ತು ಊರಲ್ಲಿ ಹರಿಯುವ ಎರಡು ಹೊಳೆಗಳಿಂದಾಗಿ ಸದಾ ತಂಪಾಗಿರುವ ಈ ಊರಿನ ಹೆಸರಿಗೆ ಕಾರಣ ಇಲ್ಲಿನ ಹವಾಮಾನವೆಂದು ಹಿರಿಯರು ಹೇಳುತ್ತಾರೆ. ಸಂಪಾಜೆ ಎರಡೂ ಜಿಲ್ಲೆಗಳಲ್ಲಿ ಹಂಚಿ ಹೋಗಿದೆ. ಮಂಗಳೂರು-ಮೈಸೂರು ರಸ್ತೆ ಊರ ಮಧ್ಯದಲ್ಲಿ ಹಾದು ಹೋಗದಿರುತ್ತಿದ್ದರೆ ಸಂಪಾಜೆ ಹೊರ ನಾಡಿಗರ ನೆನಪಲ್ಲಿ ಉಳಿಯುತ್ತಿರಲಿಲ್ಲ.

ಕೆಲವು ಊರುಗಳು ತಮ್ಮನ್ನು ಅಲ್ಲಿನ ಸಾಧಕರೊಡನೆ ಸಮೀಕರಿಸುವುದುಂಟು. ಆಗ ಊರು ಒಂದು ವ್ಯಕ್ತಿತ್ವವಾಗಿ ಮಾರ್ಪಾಡುಗೊಳ್ಳುತ್ತದೆ. ಮಂಜೇಶ್ವರ ಎಂದಾಗ ನಮಗೆ ನೆನಪಾಗುವುದು ಊರಲ್ಲ; ಗೋವಿಂದ ಪೈಗಳು! ಕುಪ್ಪಳ್ಳಿ ಎಂದಾಗ ಕುವೆಂಪು ನಮ್ಮ ಮುಂದೆ ಪ್ರತ್ಯಕ್ಷರಾಗಿ ಬಿಡುತ್ತಾರೆ. ಸುಳ್ಯದ ಹೆಸರು ಬಂದ ತಕ್ಷಣ ಕುರುಂಜಿ ವೆಂಕಟ್ರಮಣ ಗೌಡರ ಹೆಸರು ನೆನಪಾಗುತ್ತದೆ. ಸಂಪಾಜೆ ಎಂದಾಗ ಜನರು ನೆನಪಿಸಿಕೊಳ್ಳುವುದು ದೇವಿ ಪ್ರಸಾದರನ್ನು.

ಅದು ನಂಜಯ್ಯನ ಮನೆ

ದೇವಿಪ್ರಸಾದರ ತಂದೆ ನಂಜಯ್ಯನ ಮನೆ ಸಣ್ಣಯ್ಯ ಪಟೇಲರು. ನಂಜಯ್ಯ ಐತಿಹ್ಯ ಪುರುಷನಾದರೆ ಸಣ್ಣಯ್ಯ ಪಟೇಲರು ತಮ್ಮ ಸಾಧನೆಗಳಿಂದ ಕೊಡಗಿನ ಇತಿಹಾಸದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದವರು. 1834ರಲ್ಲಿ ಕೊಡಗಿನ ರಾಜ ಚಿಕ್ಕವೀರನನ್ನು ಪದಚ್ಯುತಿಗೊಳಿಸಿ ರಾಜ್ಯದ ಆಡಳಿತವನ್ನು ಈಸ್ಟ್ ಇಂಡಿಯಾ ಕಂಪೆನಿ ಕೈಗೆತ್ತಿಕೊಂಡಿತು. ದಕ್ಷಿಣ ಕೊಡಗು ಇದಕ್ಕೆ ಯಾವುದೇ ಪ್ರತಿಕ್ರಿಂುೆು ತೋರಲಿಲ್ಲ. ಉತ್ತರ ಕೊಡಗಿನಲ್ಲಿ ಸ್ವಾಮಿ ಅಪರಂಪರ, ಹುಲಿ ಕಡಿದ ನಂಜಯ್ಯ, ಕಲ್ಯಾಣ ಸ್ವಾಮಿ ಮತ್ತು ಪುಟ್ಟ ಬಸವ ಜನರನ್ನು ಬ್ರಿಟಿಷರ ವಿರುದ್ಧ ಸಂಘಟಿಸಿ ರಾಜ ಪ್ರಭುತ್ವವನ್ನು ಮರಳಿ ತರಲು ಯತ್ನಿಸಿದರು. 1834ರ ವರೆಗೆ ಕೊಡಗಿನ ಭಾಗವಾಗಿದ್ದ ಸುಳ್ಯ ಮತ್ತು ಪುತ್ತೂರುಗಳ 110 ಗ್ರಾಮಗಳನ್ನು ಬ್ರಿಟಿಷರು ಆಡಳಿತದ ಅನುಕೂಲಕ್ಕಾಗಿ ದಕ್ಷಿಣ ಕನ್ನಡಕ್ಕೆ ಸೇರಿಸಿದರು. ದಕ್ಷಿಣ ಕನ್ನಡದಲ್ಲಿ ಉತ್ಪತ್ತಿಯ ಸುಮಾರು ಶೇ. 50 ರಷ್ಟನ್ನು ಕಂದಾಯ ರೂಪದಲ್ಲಿ ಕಟ್ಟಬೇಕಿತ್ತು. ಉಪ್ಪು-ಹೊಗೆಸೊಪ್ಪುಗಳ ವ್ಯಾಪಾರ ಸರಕಾರದ ಸ್ವಾಮ್ಯಕ್ಕೊಳಪಟ್ಟು ಅವುಗಳ ಬೆಲೆ ಯದ್ವಾತದ್ವಾ ಏರಿತ್ತು. ಬ್ರಿಟಿಷ್ ಕೃಪಾ ಪೋಷಿತ ವ್ಯಾಪಾರಿಗಳು ಸಂದರ್ಭದ ದುರ್ಲಾಭ ಪಡೆದುಕೊಂಡರು. ಕಂದಾಯ ಕಟ್ಟಲಾಗದ ರೈತರು ಭೂಮಿಯನ್ನು ವ್ಯಾಪಾರಿಗಳಿಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಉದ್ಭವವಾಯಿತು.

ಇದು ಅಮರ ಸುಳ್ಯ ಸೀಮೆಯಲ್ಲಿ ರೈತರ ಸಂಘಟನೆಗೆ ಅವಕಾಶ ಕಲ್ಪಿಸಿಕೊಟ್ಟಿತು. ಕೂಜುಗೋಡಿನ ಪಟೇಲ ಮಲ್ಲಪ್ಪ ಮತ್ತು ಸೋದರ ಅಪ್ಪಯ್ಯ, ಕೆದಂಬಾಡಿ ರಾಮಗೌಡ, ಗುಡ್ಡೆಮನೆ ಅಪ್ಪಯ್ಯ ಮತ್ತು ತಮ್ಮಯ್ಯ, ಪೆರಾಜೆ ಊಕಣ್ಣ, ಮುಳ್ಯ ಸೋಮಯಾಜಿ ಮುಂತಾದವರು ರೈತರನ್ನು ಬ್ರಿಟಿಷರ ವಿರುದ್ಧ ಸಂಘಟಿಸುವುದರಲ್ಲಿ ಸಫಲರಾದರು. ಕ್ರಾಂತಿಯ ರೂಪುರೇಷೆಗಳನ್ನು ಸಿದ್ಧಪಡಿಸಿದವನು ಹುಲಿಕಡಿದ ನಂಜಯ್ಯ. ಜನರ ಬೆಂಬಲ ದೊರೆಯಬೇಕೆಂಬ ಉದ್ದೇಶದಿಂದ ಕೊಡಗಿನ ಕೊನೆಯ ರಾಜ ಚಿಕ್ಕವೀರನ ದೊಡ್ಡಪ್ಪ ಅಪ್ಪಾಜಿ ರಾಜನ ಇಬ್ಬರು ಮಕ್ಕಳು ಜೀವಂತವಿದ್ದಾರೆ ಮತ್ತು ಬಂಡಾಯದ ನೇತೃತ್ವ ಅವರದು ಎಂಬ ಸುದ್ದಿ ಹಬ್ಬಿಸಲಾಯಿತು. ಹೋರಾಟದ ವಿವಿಧ ಹಂತಗಳಲ್ಲಿ ಸ್ವಾಮಿ ಅಪರಂಪರ ಮತ್ತು ಕಲ್ಯಾಣಸ್ವಾಮಿ ಬಂದಿಸಲ್ಪಟ್ಟರು. ಆಗ ಹುಲಿಕಡಿದ ನಂಜಯ್ಯ ಪುಟ್ಟ ಬಸವನನ್ನು ಪೂಮಲೆಗೆ ಕರೆತಂದು ಮಂಗಳೂರನ್ನು ಬ್ರಿಟಿಷರಿಂದ ವಿಮುಕ್ತಿಗೊಳಿಸುವ ಂುೋಜನೆ ರೂಪಿಸಿದ. ಕ್ರಾಂತಿ ಆರಂಭದಲ್ಲಿ ಯಶಸ್ವಿಯಾದರೂ ಕೊನೆಗೆ ಬ್ರಿಟಿಷರು ಮೇಲುಗೈ ಪಡೆದು ಕ್ರಾಂತಿಯನ್ನು ಹತ್ತಿಕ್ಕಿ ಬಿಟ್ಟರು. ಒಂದು ಸ್ವಾತಂತ್ರ ್ಯ ಸಮರವನ್ನು ಕಲ್ಯಾಣ ಸ್ವಾಮಿಯ ಕಾಟಕಾಯಿ ಎಂದು ಲಘುವಾಗಿ ಕರೆದರು.

ಎನ್.ಎಸ್.ಡಿ.- ಹೃಸ್ವವನ್ನು ದೀರ್ಘಗೊಳಿಸಿದರೆ ನಂಜಯ್ಯನ ಮನೆ ಸಣ್ಣಯ್ಯ ಪಟೇಲ ದೇವಿಪ್ರಸಾದ್ ಎಂದಾಗುತ್ತದೆ. ಅವರ ರಂಗಾಸಕ್ತಿಗಾಗಿ ಆಪ್ತರು ಅವರನ್ನು ನ್ಯಾಶನಲ್ ಸ್ಕೂಲ್ ಓಫ್ ಡ್ರಾಮಾಸ್ – ಎಂದು ಕರೆಯುವುದುಂಟು. ಅವರ ಮನೆಗೆ ಆ ಹೆಸರು ಬರಲು ಕಾರಣನಾದ ನಂಜಯ್ಯ ಯಾರು ಎನ್ನುವುದು ಈಗಲೂ ನಿಗೂಢವಾಗಿದೆ. ಆತ ಅಮರ ಸುಳ್ಯ ರೈತ ಬಂಡಾಯಕ್ಕೆ ಮಾರ್ಗದರ್ಶನ ಮಾಡಿದ ಹುಲಿಕಡಿದ ನಂಜಯ್ಯ ನಿರಬಹುದೆಂಬ ಗುಮಾನಿ ಕೆಲವು ವಿದ್ವಾಂಸರದು. ಆತ ಹುಲಿಯಿಂದ ಕಚ್ಚಿಸಿಕೊಂಡು ಹುಲಿಕಡಿದ ನಂಜಯ್ಯನಾದನೋ ಅಥವಾ ಹುಲಿಯನ್ನು ಕತ್ತಿಯಿಂದ ಕಡಿದು ಓಡಿಸಿದ್ದಕ್ಕೆ ಆ ಹೆಸರು ಬಂತೋ – ಸ್ಪಷ್ಟ ಆಧಾರಗಳಿಲ್ಲ. ಸ್ವತಃ ದೇವಿಪ್ರಸಾದರಿಗೆ ತನ್ನ ಕುಟುಂಬದ ಮೂಲಪುರುಷ ಹುಲಿಕಡಿದ ನಂಜಯ್ಯನಿರಬಹುದೆಂಬ ಊಹೆಯ ಬಗ್ಗೆ ಆಸಕ್ತಿಯೇನಿಲ್ಲ. ಮೂಲದ ಶೋಧನೆಯಿಂದ ಸಾದಿಸುವುದೇನಿಲ್ಲ. ನದಿ-ಋಷಿ-ಸ್ತ್ರೀ ಮೂಲಗಳಂತೆ ವಂಶ ಮೂಲವನ್ನು ಶೋದಿಸಬಾರದು. ನಾವು ವಿಘಟನೆಗೊಳ್ಳುವ ಯಾವ ವಿಷಯದ ಬಗ್ಗೆಯೂ ನನಗೆ ಆಸಕ್ತಿ ಇಲ್ಲ” ಎನ್ನುತ್ತಾರೆ ಅವರು.

ತುಂಬ ಸಿರಿವಂತಿಕೆಯ ಹಿನ್ನೆಲೆಯ ದೇವಿಪ್ರಸಾದರ ಮನೆಯ ಬಗ್ಗೆ ಇನ್ನೊಂದು ಐತಿಹ್ಯವಿದೆ. ಅಲ್ಲೊಂದು ಕೊಪ್ಪರಿಗೆ (ನಿದಿ) ಕಾಣಸಿಕ್ಕಿತು. ಸಣ್ಣಯ್ಯ ಪಟೇಲರು ಅದನ್ನು ಸರಪಳಿಗಳಿಂದ ಕಟ್ಟಿ ಹಾಕಿದ್ದಾರೆ. ಅದು ಈಗಲೂ ಇದೆ – ಎನ್ನುವ ಮಾತು ಜನಜನಿತ ವಾಗಿದೆ. ದೇವಿಪ್ರಸಾದರ ಮನೆಯಂಗಳದಲ್ಲಿ ವೀರಭದ್ರನ ಗುಡಿಯಿದೆ. ಅಲ್ಲೆಲ್ಲೋ ನಿದಿ ಇರಬಹುದೆಂದು ಚೋರರು ಒಂದೆರಡು ಬಾರಿ ಅಂಗಳವನ್ನು ಅಗೆದಿದ್ದರು. “ಅಗೆಯುವವರೆಲ್ಲಾ ಬಂದು ಅಗೆಯಲಿ. ನಿದಿ ಸಿಕ್ಕವರು ಅರ್ಧಪಾಲು ನನಗೆ ಕೊಡಲಿ” ಎಂದು ದೇವಿಪ್ರಸಾದರು ನಿದಿ ಚೋರರಿಗೆ ಮುಕ್ತ ಆಹ್ವಾನ ನೀಡಿದ್ದಾರೆ!

ಸಣ್ಣಯ್ಯ ಎಂಬ ಪಟೇಲರು

ದೇವಿಪ್ರಸಾದರ ತಂದೆ ಸಣ್ಣಯ್ಯ ಸಂಪಾಜೆ ಗ್ರಾಮದ ಪಟೇಲರಾಗಿದ್ದವರು. ಬ್ರಿಟಿಷರ ಯುಗದ ಪಟೇಲತನ ಈಗಿನ ಜಿಲ್ಲಾದಿಕಾರಿಯ ಸ್ಥಾನಕ್ಕೆ ಸಮಾನ! ಸಣ್ಣಯ್ಯ ಪಟೇಲರು ಅದಿಕಾರವಿರುವುದು ಜನರ ಕಲ್ಯಾಣಕ್ಕಾಗಿ ಎಂಬ ಅರಿವಿದ್ದವರು. ಸುಳ್ಯ- ಸಂಪಾಜೆ ಸೀಮೆಗಳ ಬಹುಸಂಖ್ಯಾತರಾದ ಅರೆಭಾಷಿಕ ಗೌಡ ಸಮುದಾಯ ಆಗ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಹಳ ಹಿಂದುಳಿದಿತ್ತು. ಅಜ್ಞಾನ, ಅನಕ್ಷರತೆ, ಮೂಢನಂಬಿಕೆ ಮತ್ತು ಪುರೋಹಿತಶಾಹಿ ಶೋಷಣೆಗಳಿಂದ ಈ ಜನಾಂಗವನ್ನು ಪಾರು ಮಾಡಲು ಸಂಘಟನೆಯೊಂದರ ಅಗತ್ಯವಿದೆಯೆಂಬುದನ್ನು ಸಣ್ಣಯ್ಯ ಪಟೇಲರು ಮನಗಂಡರು. ಗೌಡ ಸಮುದಾಯಕ್ಕಿಂತಲೂ ಹಿಂದುಳಿದ ಜನಾಂಗಗಳ ಅಬಿವೃದ್ಧಿಯತ್ತಲೂ ಅವರು ಮನಸ್ಸು ಮಾಡಿದರು. ಅದರ ಫಲವಾಗಿ ಸಂಪಾಜೆಯಲ್ಲೊಂದು ಶಾಲೆ ಸ್ಥಾಪನೆಯಾಯಿತು. ಅದು ಹಿಂದುಳಿದವರನ್ನು ಸಾಮಾಜಿಕವಾಗಿ ಮೇಲೆತ್ತುವ ಒಂದು ಪ್ರಯತ್ನವಾಗಿತ್ತು. ಸಣ್ಣಯ್ಯ ಪಟೇಲರ ಭಗೀರಥ ಯತ್ನವು ಸಂಪಾಜೆಯಲ್ಲೊಂದು ಸಹಕಾರಿ ಸಂಘವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಯಿತು. ಅದು ಎಲ್ಲರನ್ನೂ ಒಗ್ಗೂಡಿಸಿ ಪ್ರಗತಿ ಪಥದಲ್ಲಿ ಮುನ್ನಡೆಯುವ ಅಪೂರ್ವ ಪ್ರಯತ್ನವಾಗಿತ್ತು.

ಪಟೇಲನಾಗಿದ್ದು ಎಲ್ಲರೊಡನೆ ವ್ಯವಹರಿಸಿ ಅಪಾರ ಲೋಕಜ್ಞಾನ ಹೊಂದಿದ್ದ ಸಣ್ಣಯ್ಯ ಪಟೇಲರು ತನ್ನ ಜಾತಿ ಮಾತ್ರ ಉದ್ಧಾರವಾದರೆ ಸಾಕೆಂಬ ಸ್ವಾರ್ಥಿಯಾಗಿರಲು ಸಾಧ್ಯವಿರಲಿಲ್ಲ. ಅವರೊಬ್ಬರು ಐತಿಹ್ಯ ಪುರುಷರಾಗಿ ಈಗಲೂ ಜನರ ಮಧ್ಯೆ ಬದುಕಿದ್ದರೆ ಅದಕ್ಕೆ ಅವರ ಸರ್ವ ಸಮಾನತಾ ಭಾವವೇ ಕಾರಣ. ದೇವಿಪ್ರಸಾದರು ಅಪ್ಪ ಹೇಳುತ್ತಿದ್ದ ಇದೊಂದು ಮಾತನ್ನು ಆಗಾಗ ಉದ್ಧರಿಸುತ್ತಿರುತ್ತಾರೆ : “ಭಾಷೆ, ಗಡಿ, ಜಾತಿ ಇತ್ಯಾದಿಗಳು ನೀವು ಮಾಡಿಕೊಂಡಿರುವ ವ್ಯವಸ್ಥೆಗಳು. ಅಗತ್ಯ ಬಿದ್ದಾಗ ಅವುಗಳನ್ನು ಮೀರಿ ನಿಲ್ಲುವುದೇ ಮಾನವೀಯತೆ.”

ಸಣ್ಣಯ್ಯ ಪಟೇಲರು ಆ ಕಾಲದಲ್ಲಿ ಕೆಲವು ದಾಖಲೆಗಳನ್ನು ನಿರ್ಮಿಸಿದ್ದನ್ನು ಹಿರಿಯರು ನೆನಪಿಸಿಕೊಳ್ಳುವುದುಂಟು. ಸಂಪಾಜೆ ಆಸುಪಾಸಿನಲ್ಲಿ ಮೊದಲ ಕಾರು ತೆಗೆದವರು ಅವರು! ಕೊಡಗಿನ ನಾಲ್ಕು ನಾಡು ಅರಮನೆಯನ್ನು ಹೋಲುವ ಮೊದಲ ಮಹಡಿ ಮನೆ ಕಟ್ಟಿಸಿದ್ದು ಅವರ ಇನ್ನೊಂದು ದಾಖಲೆ. ಕೊಡಗು ಸಿ ರಾಜ್ಯದ ಸ್ಥಾನಮಾನ ಹೊಂದಿದ್ದಾಗ ಕೊಡಗಿನ ಚೀಫ್ ಕಮೀಶನರ್ ಆಗಿದ್ದವರು ದಯಾಸಿಂಗ್ ಬೇಡಿಯವರು. ಅವರು ಸಣ್ಣಯ್ಯ ಪಟೇಲರ ಮನೆಗೆ ಬಂದು ಆತಿಥ್ಯ ಸ್ವೀಕರಿಸುವಷ್ಟು ಆತ್ಮೀಯರಾಗಿದ್ದರು. ಕೊಡಗಿನಲ್ಲಿ ವಿನೋಬಾ ಭಾವೆಯವರಿಗೆ ಭೂದಾನ ಮಾಡಿದ ಪ್ರಥಮ ವ್ಯಕ್ತಿ, ಮತ್ತೆ ಅವರೇ, ಸಣ್ಣಯ್ಯ ಪಟೇಲರು!

ಈ ಘಟನೆಯನ್ನು ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಹೀಗೆ ವಿವರಿಸಿದ್ದಾರೆ : ‘‘1957ನೆಯ ಇಸವಿ ಸೆಪ್ಟೆಂಬರ್ ತಿಂಗಳಲ್ಲಿ ಭೂದಾನ ಯಜ್ಞದ ಜನಕ ಸಂತ ವಿನೋಬಾ ಭಾವೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೊಡಗು ಜಿಲ್ಲೆಗೆ ಕಾಲಿಡುವ ಸನ್ನಿವೇಶ. ಅವರೊಡನೆ ನಾನೂ ಒಬ್ಬ ಸರ್ವೋದಯ ಕಾರ್ಯಕರ್ತನಾಗಿ ಸುತ್ತುತ್ತಿದ್ದ ಕಾಲ… ಕೊಡಗಿಗೆ ಸರ್ವೋದಯ ನಾಯಕರು ಕಾಲಿಡುತ್ತಿದ್ದಂತೆ ವಿನೋಬಾರನ್ನು ಸ್ವಾಗತಿಸಲು ಸಂಪಾಜೆ ಸಣ್ಣಯ್ಯ ಪಟೇಲರು ನಿಂತಿದ್ದರು. ಆ ದಿನ ಕೊಡಗಿನ ಪ್ರಪ್ರಥಮ ಭೂದಾನ, ಐದು ಎಕರೆ ಉತ್ತಮ ಜಮೀನು ವಿನೋಬಾರಿಗೆ ಪಟೇಲರಿಂದ ದೊರಕಿತು. ಆ ಸಭೆಯಲ್ಲಿ ವಿನೋಬಾರವರು – ಆಂಧ್ರದ ಪೋ ಚಂಪಲ್ಲಿಯ ರಾಮರೆಡ್ಡಿ ಮೊದಲನೇ ಭೂದಾನಿಯಾದರೆ, ಪುಟ್ಟ ಜಿಲ್ಲೆ ಕೊಡಗಿನಲ್ಲಿ ಸಣ್ಣಯ್ಯ ಪಟೇಲರು ಭೂದಾನಕ್ಕೆ ನಾಂದಿ ಹಾಡಿದ್ದಾರೆ – ಎಂದು ಸಾರಿದರು.’’ (ಸಮರಸ, 2003. ಪು. 150.)

ಸಣ್ಣಯ್ಯ ಪಟೇಲರು ಕೊಡಗಿನಲ್ಲಿ ಭೂದಾನ ಮಾಡಿದ ಪ್ರಥಮ ವ್ಯಕ್ತಿ ಮಾತ್ರವಲ್ಲ ಏಕೈಕ ವ್ಯಕ್ತಿ ಇರಬೇಕೆಂದು ಅಪ್ಪಣ್ಣ ದಾಖಲಿಸಿದ್ದಾರೆ. ಸಣ್ಣಯ್ಯ ಪಟೇಲರು ಸಮಾಜ ಸೇವೆಗಾಗಿ ರಾಜ್ಯ ಪ್ರಶಸ್ತಿ ಪಡೆದವರು. ಅವರಿಂದ ತಾನು ಎರಡು ಪಾಠಗಳನ್ನು ಕಲಿತುಕೊಂಡದ್ದಾಗಿ ದೇವಿಪ್ರಸಾದರು ಹೇಳುತ್ತಿರುತ್ತಾರೆ.

ಪಾಠ ಒಂದು : ಕೇವಲ ನಿನಗಾಗಿ ಮಾತ್ರ ಬದುಕಬೇಡ.

ಪಾಠ ಎರಡು : ಎಂತಹ ಸಂದರ್ಭದಲ್ಲೂ ಮನುಷ್ಯತ್ವ ಬಿಡಬೇಡ.

ಸಣ್ಣಯ್ಯ ಪಟೇಲರು ಕಟ್ಟಿಸಿದ ನಂಜಯ್ಯನ ಮನೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಒಳಭಾಗದಲ್ಲಿ ಮತ್ತು ಎಡಭಾಗದಲ್ಲಿ ದೇವಿಪ್ರಸಾದರು ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾರೆ. ಅವರ ಮನೆ ಒಂದು ಐತಿಹಾಸಿಕ ಸ್ಮಾರಕದಂತಿದೆ. ಅದರ ದಿವಾನಖಾನೆ, ಬೋದಿಗೆ ಕಂಬಗಳು, ಪತ್ತಾಯ, ಅಟ್ಟ, ನೆಲಮಾಳಿಗೆ – ನಮ್ಮನ್ನು ಅಜ್ಞಾತಲೋಕಕ್ಕೆ ಒಯ್ಯುತ್ತವೆ. ಅವರ ಅಬಿರುಚಿಯನ್ನು ಸಾರುವ ಶಿಲ್ಪಗಳು, ಐತಿಹಾಸಿಕ ವಸ್ತುಗಳು, ಸುಂದರ ವರ್ಣಚಿತ್ರಗಳು ಒಪ್ಪವಾಗಿ ಜೋಡಿಸಿಡಲ್ಪಟ್ಟಿವೆ. ಆ ಮನೆಯನ್ನು ನೋಡುವಾಗೆಲ್ಲಾ ನನಗೆ ದಕ್ಷಿಣ ಫ್ರಾನ್ಸಿನಲ್ಲಿ ನಾನು ನೋಡಿದ್ದ, ಪೆಜೆನಾಸ್ ಪಟ್ಟಣ ನೆನಪಿಗೆ ಬರುತ್ತದೆ. ಅದು ಖ್ಯಾತ ನಾಟಕಕಾರ ಮೋಲಿಯೇರ್ ಬಾಳಿ ಬದುಕಿ, ಬಣ್ಣ ಹಚ್ಚಿ ಕುಣಿದ ಪಟ್ಟಣ. ಅಲ್ಲಿನ ಮನೆಗಳ ಹೊರಸ್ವರೂಪವನ್ನು ಬದಲಾಯಿಸಲು ಪುರಸಭೆ ಬಿಡುತ್ತಿಲ್ಲ. ಅಲ್ಲಿ ಹೊಸಮನೆಗಳನ್ನು ಕಟ್ಟಿಕೊಳ್ಳಲು ಅನುಮತಿಯಿಲ್ಲ. ಕಟ್ಟಡಗಳಿಗೆ ಯಾವ ಬಣ್ಣ ಬಳಿಯಬೇಕೆಂಬುದನ್ನು ಪುರಸಭೆ ನಿರ್ಧರಿಸುತ್ತದೆ. ಹಾಗಾಗಿ ಇಡೀ ಪಟ್ಟಣಕ್ಕೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಬಂದು ಬಿಟ್ಟಿದೆ. ಅದು ಇತಿಹಾಸವನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವ ಬಗೆ. ದೇವಿಪ್ರಸಾದರ ಆಸಕ್ತಿಯ ಕ್ಷೇತ್ರಗಳೂ ಅವೇ ಇತಿಹಾಸ ಮತ್ತು ಸಂಸ್ಕೃತಿ.

ಸಾರೋಟಿನ ಸಾಹುಕಾರ

ಸಂಪಾಜೆ ಸಣ್ಣಯ್ಯ ಪಟೇಲ ಮತ್ತು ಪೂವಮ್ಮ ದಂಪತಿಯರಿಗೆ ಮಗನಾಗಿ 1942ರ ಎಪ್ರಿಲ್ 27ರಂದು ದೇವಿಪ್ರಸಾದ್ ಜನಿಸಿದಾಗ ದೇಶದಲ್ಲಿ ಬ್ರಿಟಿಷರ ವಿರುದ್ಧ ಭಾರತ ಬಿಟ್ಟು ತೊಲಗಿ ಚಳವಳಿ ಬೀಜ ರೂಪದಲ್ಲಿತ್ತು. ಈ ಮೊದಲಿನವು ಹೆಣ್ಣು ಮಕ್ಕಳಾಗಿದ್ದುದರಿಂದ ಗಂಡೊಂದು ಬೇಕೆಂದು ಕಟೀಲು ಮಾತೆಗೆ ಹರಿಕೆ ಹೇಳಿದ ಕಾರಣ ಹುಟ್ಟಿದ್ದಕ್ಕೆ ದೇವಿಪ್ರಸಾದ್ ಎಂದು ಹೆಸರಿಟ್ಟದ್ದು! ಹಾಗಂತ ತನ್ನ ಹೆಸರಿನ ಮೂಲವನ್ನು ಅವರು ಬಹಿರಂಗಪಡಿಸುತ್ತಾರೆ. ದೇವಿಪ್ರಸಾದರ ಸಹಧರ್ಮಿಣಿ ಇಂದಿರಾ. ಈ ದಂಪತಿಗೆ ಸಹನಾ, ಪ್ರಜ್ಞಾ ಎಂಬೆರಡು ಹೆಣ್ಮಕ್ಕಳಾದ ಬಳಿಕ ಜನಿಸಿದ ದೇವಿ ಚರಣ ಕಟೀಲು ಮಾತೆಗೆ ಹರಿಕೆ ಹೇಳಿದ್ದರಿಂದಲೇ ಜನಿಸಿದವ ಎಂದು ದೇವಿಪ್ರಸಾದರು ಹೇಳುತ್ತಿರುತ್ತಾರೆ. ದೇವಿಚರಣನನ್ನು ನೋಡಿದರೆ ದೇವಿಪ್ರಸಾದರು ಯವ್ವನದ ದಿನಗಳಲ್ಲಿ ಹೇಗಿದ್ದಿರಬಹುದು ಎಂದು ಧಾರಾಳ ಊಹಿಸಬಹುದು. ತಂದೆಗೆ ತಕ್ಕ ಮಗ!

ದೇವಿಪ್ರಸಾದರದು ಸುಂದರ ರೂಪ ಮತ್ತು ಭವ್ಯ ನಿಲುವು. ಅವರು ಮೈಸೂರಲ್ಲಿ ಓದುತ್ತಿದ್ದಾಗ ಅನೇಕ ಮಲ್ಲಿಗೆಗಳ ಹೃದಯಗಳಿಗೆ ಲಗ್ಗೆ ಹಾಕಿದ್ದರೆ ಅದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಸಂಪಾಜೆಯ ಅವರ ನಂಜಯ್ಯನ ಮನೆ ಅದು ಒಂದು ಕಾಲದಲ್ಲಿ ಊರವರ ಪಾಲಿಗೆ ನ್ಯಾಯ ದೇಗುಲ.

ದೇವಿಪ್ರಸಾದರ ಸೋದರಳಿಯ ಎಂ.ಬಿ. ಸದಾಶಿವ ಆ ದಿನಗಳನ್ನು ನೆನೆದುಕೊಳ್ಳುತ್ತಾರೆ : “ನನ್ನ ಮಾವ ದೇವಿಪ್ರಸಾದರು ಬಾಲ್ಯದ ದಿನಗಳಿಂದಲೇ ನನ್ನ ಜೀವನಕ್ಕೆ ಸ್ಫೂರ್ತಿಯಾದವರು. ಹತ್ತರ ಹರೆಯದಲ್ಲಿದ್ದಾಗ ತಾಯಿಯ ತವರಿನ ಉಪ್ಪರಿಗೆಯ ಕೋಣೆಯಲ್ಲಿ ಸಾಲಾಗಿ ಜೋಡಿಸಿ ನೇತಾಡಿಸಿದ್ದ ಅವರ ಡಜನುಗಟ್ಟಲೆ ಟೈ, ಕೋಟುಗಳನ್ನು ಸ್ಪರ್ಶಿಸಿ ದಿಗ್ಭ್ರಮೆಗೊಳ್ಳುತ್ತಿದ್ದುದು; ಅವರ ಕಾಲೇಜಿನ ದಿನಗಳ ವೈಭವದಲ್ಲಿ ಮಹಾರಾಜಾ ಕಾಲೇಜಿನ ಯುವರಾಜನಂತೆ ಮೆರೆಯಲು ಅವರಿಗಿದ್ದ ಒಂದು ‘ಸಾರೋಟು’ ಅದನ್ನು ತಳ್ಳಲೆಂದೇ ಅವರು ಸ್ನೇಹಿತರನ್ನು ಸದಾ ಜತೆಗಿರಿಸಿಕೊಳ್ಳುತ್ತಿದ್ದ ರಂಗಿನ ಕತೆಗಳು. ಅವರು ನನ್ನ ಪಾಲಿನ ಹೀರೋ ಆಗಿ ಮನದಲ್ಲಿ ಆರಾಧ್ಯರಾಗಿ ಪ್ರತಿಷ್ಠಾಪಿಸಲ್ಪಟ್ಟರು. ಆಗಿನ ಹೀರೋಗಳಾಗಿದ್ದ ಕಲ್ಯಾಣಕುಮಾರ್, ರಾಜಕುಮಾರ್, ರಾಜೇಂದ್ರಕುಮಾರ್, ರಾಜ್ಕುಮಾರ್, ಶಮ್ಮಿ ಕಪೂರ್ಗಳಿಗಿಂತ ಸುಂದರಾಂಗ ನನ್ನ ಮಾವ. ಅವರನ್ನು ನನ್ನ ಫ್ಯಾಂಟಸಿಯಲ್ಲೂ, ವಾಸ್ತವಿಕವಾಗಿಯೂ ಹೀರೋ ಎಂದೇ ಭಾವಿಸಿದವನು. ಅದು ಇಂದಿಗೂ ಬದಲಾಗಿಲ್ಲ!” (ಸಮರಸ 2001. ಪುಟ. 17).

ದೇವಿಪ್ರಸಾದರು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪಡೆದದ್ದು ಮುಂಬಯಿಯಲ್ಲಿ. ಅಲ್ಲಿ ಅವರಿಗೆ ಬಾಲಿವುಡ್ನ ಪರಿಚಯವಾಯಿತು. ಅವರ ಮುಂದೆ ಮೂರು ಆಯ್ಕೆಗಳಿದ್ದವು : ಒಂದು – ಬಾಲಿವುಡ್ ಪ್ರವೇಶಿಸಿ ನಟನಾಗುವುದು. ಎರಡು – ಮುಂಬಯಿಯಲ್ಲಿ ಪತ್ರಿಕೋದ್ಯಮಿಯಾಗುವುದು. ಮೂರು – ಸಂಪಾಜೆಗೆ ಮರಳಿ ಅಪ್ಪನ ಹೆಜ್ಜೆ ಜಾಡಿನಲ್ಲಿ ಮುನ್ನಡೆಯುವುದು. ಅವರ ಸ್ಫುರದ್ರೂಪಕ್ಕೆ ಅವರು ಸಿನಿಮಾ ನಟರಾಗಲು ಸುಲಭವಾಗಿ ಸಾಧ್ಯವಿತ್ತು. ಆಗುತ್ತಿದ್ದರೆ ಬಹುಶಃ ಅವರು ದೇವಾನಂದ್, ರಾಜಕಪೂರ್ ಸಾಲಲ್ಲಿ ನಿಲ್ಲುತ್ತಿದ್ದರು. ಅವರಿಗೆ ಸಿನಿಮಾ ನಿರ್ಮಾಣ ಮಾಡುವ ಆರ್ಥಿಕ ತಾಕತ್ತೂ ಇತ್ತು. ಅವರ ಇಂಗ್ಲಿಷ್ ಭಾಷಾ ಪ್ರಭುತ್ವ ಮತ್ತು ಚಿಂತನಾ ಕ್ರಮದಿಂದ ಅವರು ಒಳ್ಳೆಯ ಪತ್ರಕರ್ತರಾಗುವ ಸಾಧ್ಯತೆಯಿತ್ತು. ಅದಾಗುತ್ತಿದ್ದರೆ ಅವರು ಎಂ.ವಿ. ಕಾಮತ್, ಕುಲ್ದೀಪ್ ನಯ್ಯರ್, ಖುಷ್ವಂತ ಸಿಂಗ್ರ ಸಾಲಲ್ಲಿ ನಿಲ್ಲುತ್ತಿದ್ದರು. ಆದರೆ ಅವರು ಮೂರನೇ ಹಾದಿಯನ್ನು ಅನಿವಾರ್ಯವಾಗಿ ಆಯ್ಕೆಯ ಮಾಡಬೇಕಾಯಿತು. ಅದುವೇ ಅವರು ‘ಮೂರು ದಾರಿಗಳು’ ಸಿನಿಮಾ ನಿರ್ಮಿಸಲು ಕಾರಣವಾಗಿರಬೇಕು!

ದೇವಿಪ್ರಸಾದರು ಸಂಪಾಜೆಯಂತಹ ಹಳ್ಳಿಯಲ್ಲಿದ್ದು ದೇಶ ವಿದೇಶಗಳನ್ನು ಸುತ್ತಿದವರು. ಮದುವೆಯಾದ ಹೊಸತರಲ್ಲಿ ಅವರು ಪತ್ನಿ ಸಹಿತರಾಗಿ ಉತ್ತರ ಭಾರತ ಸಂಚರಿಸಿ ಜೀವನವನ್ನು ಅನುಭವಿಸಿದವರು. ದೇವಿಪ್ರಸಾದರ ಮಡದಿ ಇಂದಿರಾ ಪತಿಯ ಮನಸ್ಸನ್ನು ಅರಿತು ನಡೆಯುವ ಸತಿ. ಜಯಪುರದ ಅಂಬರ್ ಪ್ಯಾಲೇಸಿನಲ್ಲಿ ಆನೆ ಮೇಲೆ ಕೂತು ತೆಗೆಸಿದ ಅವರಿಬ್ಬರ ಚಿತ್ರ ರಾಜ-ರಾಣಿಯರ ಜಂಬೂ ಸವಾರಿಯನ್ನು ನೆನಪಿಸುವಂತಿದೆ. ಕಾಶ್ಮೀರದ ಸುಪ್ರಸಿದ್ಧ ದಾಲ್ ಲೇಕ್ನಲ್ಲಿ ಈ ಜೋಡಿ ಹೊಡೆಯಿಸಿಕೊಂಡ ಫೋಟೋ 1960ರ ದಶಕದ ಹಿಂದಿ ಚಲನಚಿತ್ರಗಳ ನಾಯಕ-ನಾಯಕಿಯರನ್ನು ನೆನಪಿಸುತ್ತದೆ. ಸಂಪಾಜೆಗೆ ಆನಂದ್ ಔರ್ ಆನಂದ್ ಚಿತ್ರದ ಶೂಟಿಂಗಿಗೆ ಬಂದಿದ್ದ ಹಿಂದಿಯ ಹಿರಿಯ ನಟ ದೇವಾನಂದ್ – “ನೀವು ಹೀರೋ ಆಗಲು ನನಗಿಂತಲೂ ಅರ್ಹರು” ಎಂದಿದ್ದರು. ಅದರಲ್ಲಿ ಉತ್ಪ್ರೇಕ್ಷೆಯೇನಿರಲಿಲ್ಲ. ಇವರು ಧರ್ಮಸ್ಥಳದಲ್ಲಿ ಬಿಳಿ ಪಂಚೆ ಮತ್ತು ಶಲ್ಯಗಳಲ್ಲಿ ಕಾಣಿಸಿಕೊಂಡರೆ ಕಾಲಿಗೆ ಬೀಳುವ ಮಂದಿಗೆ ಕೊರತೆಯೇನಿಲ್ಲ! ಸ್ವತಃ ವೀರೇಂದ್ರ ಹೆಗ್ಗಡೆಯವರೇ ಅದನ್ನು ಒಪ್ಪಿಕೊಳ್ಳುತ್ತಾರೆ.

ಬಹುಮುಖೀ ಸಂಸ್ಕೃತಿ

ದೇವಿಪ್ರಸಾದರು ಸಂಸ್ಕೃತಿಯ ಬಹುತ್ವವನ್ನು ಒಪ್ಪಿಕೊಂಡು ಗೌರವಿಸುವವರು. ಅವರ ಮನೆಯಲ್ಲೊಂದು ದೇವರ ಕೋಣೆಯಿದೆ. ಅದರಲ್ಲಿರುವುದು ದುರ್ಗಾಪರಮೇಶ್ವರಿ ಮತ್ತು ಗಣಪತಿಯ ಮೂರ್ತಿಗಳು. ಮನೆಯೊಳಗೆ ದೈವಗಳ ನೆಲೆಯಿಲ್ಲ. ಆದರೆ ಜಾಗದಲ್ಲಿ ದೈವಗಳ ಗುಡಿಗಳಲ್ಲಿ ಚಾವಡಿಗಳೂ ಇವೆ. ಮನೆಯ ದಕ್ಷಿಣ ಭಾಗದಲ್ಲಿರುವ ಗುಡಿಯ ವೀರಭದ್ರ ಮನೆತನದ ದೇವರು. ಮಡಿಕೇರಿಯಿಂದ ವರ್ಷಕ್ಕೊಮ್ಮೆ ಲಿಂಗಾಯಿತ ಜಂಗಮನೊಬ್ಬ ಬಂದು ವೀರಭದ್ರನಿಗೆ ಕಾಲಾವದಿ ಪೂಜೆ ಸಲ್ಲಿಸುತ್ತಾನೆ.

ಅವರ ಜಾಗದಲ್ಲಿರುವ ದೈವಗಳ ಬಗ್ಗೆ ಡಾ|| ಕಣಿಯೂರು ಹೀಗೆ ಬರೆದಿದ್ದಾರೆ : “ಮನೆಯ ನೈಋತ್ಯ ಭಾಗದಲ್ಲಿ ಕೇದಗೆ ಬನವಿದೆ. ಇಲ್ಲಿ ನಾಗ ಚಾವಡಿ ಇದೆ. ಜೊತೆಗೆ ದೊಡ್ಡ ಚಾವಡಿಯೂ ಇದ್ದು ಇದರಲ್ಲಿ ಕುಪ್ಪೆ ಪಂಜುರ್ಲಿ, ಮಲರಾಯ, ಕುಂಡ ಮಲ್ಲ (ಭೂತಾಳ ಪಾಂಡ್ಯನ ಇತಿಹಾಸದಲ್ಲಿ ಬರುವ ಭೂತ) ದೈವಗಳು ಆರಾಧನೆಗೊಳ್ಳುತ್ತವೆ. ಅಲ್ಲಿಯೇ ಸನಿಹದಲ್ಲಿ ಹಿತ್ಲು ಚಾವಡಿಯೆಂದು ಕರೆಸಿಕೊಳ್ಳುವ ಸಣ್ಣ ಚಾವಡಿ ಇದೆ. ಇದರಲ್ಲಿ ಬೀರ್ನಾಳ ಪಂಜುರ್ಲಿಯ ಆರಾಧನೆ ನಡೆಯುತ್ತದೆ. ಮನೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ, ಮನೆಯ ಈಶಾನ್ಯ ಭಾಗದಲ್ಲಿ ತೋಟದ ಮಧ್ಯೆ ದೊಡ್ಡ ಚಾವಡಿ ಇದ್ದು, ಉಳ್ಳಾಕುಲು, ಪುರುಷ ಭೂತಗಳು ಆರಾಧನೆಗೊಳ್ಳುತ್ತಿದ್ದವು. ಇದೇ ಸ್ಥಳದಲ್ಲಿ ಸಣ್ಣ ಚಾವಡಿ ಇದ್ದು ಇದರಲ್ಲಿ ಗುಳಿಗ, ಪಾಷಾಣ ಮೂರ್ತಿ, ಕೊರಗ, ಪೊಟ್ಟ, ಕೂಜಿಗಳು ಹೀಗೆ ನೂರೊಂದು ಭೂತಗಳು ಪುರಸ್ಕಾರಗೊಳ್ಳುತ್ತವೆ. ಸಂಪಾಜೆ ಬೈಲಿಗೆ ಕೇಂದ್ರವಾಗಿಯೂ ಈ ಮನೆ ತನ್ನ ಛಾಪನ್ನೊತ್ತಿದೆ. ಮನೆಯ ಯಜಮಾನರ ಮುಂದಾಳುತ್ವದಲ್ಲಿ ಊರ ದೈವಗಳು ಆರಾಧನೆಗೊಳ್ಳುತ್ತವೆ. ಆರಾಧನೆಗೊಳ್ಳುವ ದೈವಗಳಲ್ಲಿ ಬೆರ್ಮೆರೆ ದೈವ, ಬಚ್ಚ ನಾಯ್ಕ, ಕರಿಯಣ್ಣ ನಾಯ್ಕ, ಅಡಿಮಂತಾಯ, ಶಿರಾಡಿ ಭೂತ, ರಾಜನ್ದೈವಗಳು ಮುಖ್ಯವಾದವುಗಳು.” (ಸಮರಸ 2003, ಪು. 22)

ಸಂಪಾಜೆ ಪಂಚಲಿಂಗೇಶ್ವರ ದೇವಾಲಯದ ಮೊಕ್ತೇಸರಿಕೆ ಆನುವಂಶೀಯವಾಗಿ ದೇವಿಪ್ರಸಾದರಿಗೆ ಬಂದಿದೆ. 1947ರಲ್ಲಿ ಅಂದಿನ ಮೊಕ್ತೇಸರ ಸಣ್ಣಯ್ಯ ಪಟೇಲರು ದೇವಸ್ಥಾನದ ಜೀರ್ಣೊದ್ಧಾರ ಮಾಡಿ ಬ್ರಹ್ಮಕಲಶವಾಗಿತ್ತು. 2006ರಲ್ಲಿ ದೇವಿಪ್ರಸಾದರು ಮತ್ತೆ ಆ ದೇಗುಲದ ಜೀರ್ಣೊದ್ಧಾರವಾಗುವಂತೆ ನೋಡಿಕೊಂಡು ಬ್ರಹ್ಮಕಲಶೋತ್ಸವಕ್ಕೆ ಕಾರಣರಾದರು. ಅವರೀಗ ಸಂಪಾಜೆ ಪಂಚಲಿಂಗೇಶ್ವರ ಕೃಪಾಪೋಷಿತ ಮಕ್ಕಳ ಯಕ್ಷಗಾನ ತಂಡವನ್ನು ಸಿದ್ಧಗೊಳಿಸಿ ಕಾಲಮಿತಿ ಪ್ರದರ್ಶನಗಳ ಮೂಲಕ ಕೊಡಗಿನಲ್ಲಿ ಯಕ್ಷಗಾನಕ್ಕೆ ಜನಮನ್ನಣೆ ದೊರಕಿಸುವ ಸಿದ್ಧತೆಯಲ್ಲಿದ್ದಾರೆ.

ದೇವಿಪ್ರಸಾದರದು ಸಹಕಾರ ರಂಗದಲ್ಲಿ ದೊಡ್ಡ ಹೆಸರು. ಅವರ ತಂದೆ ಸಣ್ಣಯ್ಯ ಪಟೇಲರು ಸಂಪಾಜೆಯಲ್ಲಿ ಮಲ್ಲೇಶ್ವರ ಸಹಕಾರ ಸಂಘ ಸ್ಥಾಪಿಸಿ ಈ ಭಾಗದ ರೈತರ ಭಾಗ್ಯದ ಬಾಗಿಲುಗಳನ್ನು ತೆರೆಯುವಂತೆ ಮಾಡಿದರು. ದೇವಿಪ್ರಸಾದರು ಅದರ ಅಧ್ಯಕ್ಷರಾಗಿ ಶ್ಲಾಘನೀಯ ಕೆಲಸಗಳನ್ನು ಮಾಡಿದರು. ಪೆರಾಜೆಯಲ್ಲಿ ಕೋಮಾ ಸ್ಟೇಜಿನಲ್ಲಿದ್ದ ಜೈ ಹಿಂದ್ ಸಹಕಾರಿ ಮಾರಾಟ ಸಂಘಕ್ಕೆ ಪುನರ್ಜನ್ಮ ನೀಡಿದರು. ಸಂಪಾಜೆ ಪಯಸ್ವಿನಿ ಸಹಕಾರ ಸಂಘದ ಅಧ್ಯಕ್ಷರಾಗಿ ಅದನ್ನು ಮುನ್ನಡೆಸಿದರು. ಮಡಿಕೇರಿ ಸಹಕಾರಿ ಭೂ ಅಬಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ಅದರ ಶ್ರೇಯೋಭಿವೃದ್ಧಿಗೆ ಕಾರಣರಾದರು. ರಾಜ್ಯ ಭೂ ಅಬಿವೃದ್ಧಿ ಬ್ಯಾಂಕಿನ ನಿರ್ದೇಶಕರಾಗಿ ರಾಜ್ಯಮಟ್ಟದ ಖ್ಯಾತಿ ಪಡೆದರು. ಈ ನಡುವೆ 1968ರಲ್ಲಿ ಪೆರಾಜೆಯಲ್ಲಿ ಮುಚ್ಚುಗಡೆಯಾಗಲಿದ್ದ ಅಂಚೆ ಕಛೇರಿಗೆ ಕಾಯಕಲ್ಪ ನೀಡಿ ಅದನ್ನು ಬದುಕಿಸಿದರು. ಕೊಡಗು-ದ.ಕ. ಜಿಲ್ಲಾ ಗೌಡ ಸಮಾಜದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು. ಸುಳ್ಯದ ಅಮರಶಿಲ್ಪಿ ಎಂಬ ಖ್ಯಾತಿಗೆ ಪಾತ್ರರಾಗಿರುವ ಡಾ|| ಕುರುಂಜಿ ವೆಂಕಟ್ರಮಣ ಗೌಡರ ಷಷಬ್ದ ಸಮಿತಿ ಅಧ್ಯಕ್ಷರಾಗಿ ಕಾರ್ಯಕ್ರಮವನ್ನು ನ ಭೂತೋ ನ ಭವಿಷ್ಯತಿ ಎಂಬಂತೆ ನಡೆಸಿಕೊಟ್ಟು ಶಿಕ್ಷಣ ಪ್ರೇಮಿಗಳ ಮೆಚ್ಚುಗೆ ಗಳಿಸಿದರು.

ದೇವಿಪ್ರಸಾದರು ಲಯನ್ಸ್ ಸೇವಾ ಸಂಸ್ಥೆಯಲ್ಲಿ ಅನೇಕ ಪದವಿಗಳನ್ನು ಅಲಂಕರಿಸಿ ರಾಜ್ಯದಾದ್ಯಂತ ಪರಿಚಿತರಾಗಿದ್ದಾರೆ. ಲಯನ್ಸ್ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಪಾಲ್ಗೊಂಡಿದ್ದಾರೆ. ಅವರ ಹೆಣ್ಮಕ್ಕಳಲ್ಲಿ ಹಿರಿಯಾಕೆ ಅಮೇರಿಕೆಯಲ್ಲಿದ್ದರೆ ಕಿರಿಯವಳಿರುವುದು ಆಸ್ಟ್ರೇಲಿಯಾದಲ್ಲಿ. ದೇವಿಪ್ರಸಾದರು ಇವೆರಡು ದೇಶಗಳಲ್ಲಿ ಪತ್ನಿಯೊಡನೆ ವ್ಯಾಪಕ ಪ್ರವಾಸ ನಡೆಸಿದ್ದಾರೆ. ಲಯನ್ಸ್, ರೋಟರಿ, ಜೇಸೀಸ್ನಂತಹ ಸಂಸ್ಥೆಗಳಲ್ಲಿರುವವರು ಜಾತಿವಾದಿಗಳಾಗಲು ಸಾಧ್ಯವಿಲ್ಲ ಎಂದು ತಮ್ಮ ಲಯನ್ಸ್ ನಂಟಿಗೆ ಕಾರಣ ಕೊಡುವ ದೇವಿಪ್ರಸಾದರು ಸಂಪಾಜೆಯಂತ ಪುಟ್ಟ ಊರಲ್ಲಿ ಲಯನ್ಸ ಕ್ಲಬ್ಬೊಂದನ್ನು ಸ್ಥಾಪಿಸಲು ಕಾರಣರಾಗಿದ್ದಾರೆ.

ನಾಟಕಕಾರನಾಗಿ, ನಿರ್ದೇಶಕನಾಗಿ, ಚಲನಚಿತ್ರ ನಿರ್ಮಾಪಕನಾಗಿ, ಸಂಶೋಧಕ ನಾಗಿ, ಹೋರಾಟಗಾರನಾಗಿ, ಶಿಕ್ಷಣ ಮತ್ತು ಯಕ್ಷಗಾನ ಪ್ರೇಮಿಯಾಗಿ ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುವ ದೇವಿಪ್ರಸಾದರು ಶಿರಾಡಿ ಭೂತ (1995) ಮತ್ತು ಹೆಂಗಿತ್ತ್ ಹೇಂಗಾತ್ (1999) ಎಂಬೆರಡು ನಾಟಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕೃತಿ ಅಮರ ಸುಳ್ಯದ ಸ್ವಾತಂತ್ರ್ತ್ಯ ಸಮರ (1999) ಸಂಶೋಧನಾ ಕ್ಷೇತ್ರಕ್ಕೊಂದು ಅಮೂಲ್ಯ ಕೊಡುಗೆ. ಅವರ ಸಂಪಾದಿತ ಕೃತಿ ಕೊಡಗಿನಲ್ಲಿ ಭಾಷಾ ಸಾಂಸ್ಕೃತಿಕ ಸಾಮರಸ್ಯ (2003) ಕೊಡಗನ್ನು ಜಾತಿವಾದಿಗಳಿಂದ ರಕ್ಷಿಸಿ ಕರ್ನಾಟಕದಲ್ಲೇ ಉಳಿಸಿಕೊಳ್ಳಬೇಕು ಎಂಬ ಅವರ ಕಾಳಜಿಗೆ ಸಾಕ್ಷಿ. 1995ರಲ್ಲಿ ಅವರು ಹೊರತಂದ ಕೊಡಗಿನಲ್ಲಿ ಜಾತೀಯತೆ ಎಂಬ ಕೃತಿ ಕೊಡಗಿನಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳಾದ ಸಮಾನತೆ ಮತ್ತು ಜಾತ್ಯತೀತತೆ ಭದ್ರವಾಗಿ ನೆಲೆಗೊಳ್ಳಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿತ್ತು.

ದೇವಿಪ್ರಸಾದರು ಪುಸ್ತಕ ಪ್ರೇಮಿ. ಅವರ ಗ್ರಂಥ ಭಂಡಾರದಲ್ಲಿ ಅಮರ ಸುಳ್ಯ ಮಾಗಣೆಗಳ ರೈತರು 1837ರಲ್ಲಿ ಬ್ರಿಟಿಷರ ವಿರುದ್ಧ ಬಂಡೆದ್ದುದರ ಬಗೆಗಿನ ಅಮೂಲ್ಯ ಕಾಗದ ಪತ್ರಗಳ, ವರದಿಗಳ ಮತ್ತು ಸಂಶೋಧನಾತ್ಮಕ ಕೃತಿಗಳ ಸಂಗ್ರಹವಿದೆ. ಸುಳ್ಯದ ಸಾಹಿತಿಗಳ ಉತ್ಕೃಷ್ಟ ಕೃತಿಗಳನ್ನು ಅವರು ಸಂಗ್ರಹಿಸಿಟ್ಟಿದ್ದಾರೆ. ಅವರ ಎರಡು ಕೃತಿಗಳನ್ನು ವಿಮರ್ಶಿಸುತ್ತಾ ಪ್ರೊ. ಪೂಜಾರಿ ಮೊಣ್ಣಪ್ಪ ಹೀಗೆ ಅಬಿಪ್ರಾಯ ಪಟ್ಟಿದ್ದಾರೆ. “ಇದನ್ನು ಗಮನಿಸಿದರೆ ಸಂಪಾಜೆ ದೇವಿಪ್ರಸಾದರದು ಜಾತ್ಯತೀತ, ಪಕ್ಷಾತೀತ, ಭಾಷಾತೀತ ಮತ್ತು ಸರ್ವ ಸಮಾನತೆಯನ್ನು ಬಯಸಿ ಪ್ರಜಾಸತ್ತೆಯ ಮೌಲ್ಯಗಳಿಗೆ ಗೌರವ ನೀಡುವ ಬಹುದೊಡ್ಡ ಮನಸ್ಸು ಎನ್ನುವುದು ವೇದ್ಯವಾಗುತ್ತದೆ. ಇಂಥವರೆ ಭಾರತದ ಪ್ರಜಾಸತ್ತೆಯ ಆಧಾರ ಸ್ತಂಭಗಳು. ಅದಕ್ಕಾಗಿ ದೇವಿಪ್ರಸಾದರನ್ನು ನಾಡು ಗೌರವಿಸಬೇಕಾಗುತ್ತದೆ.” (ಸಮರಸ 2003, ಪುಟ 116.)

ಹೆಣ್ಣಿನ ನೋವನ್ನು ಹೆತ್ತವ್ವ ಬಲ್ಲಳು! ಸ್ವತಃ ಬರಹಗಾರರಾದ ದೇವಿಪ್ರಸಾದರಿಗೆ ಕನ್ನಡದ ಬರಹಗಾರರು ತಮ್ಮ ಕೃತಿ ಮಾರಾಟಕ್ಕೆ ಪಡಬೇಕಾದ ಸಂಕಷ್ಟಗಳ ಅರಿವಿದೆ. ಆದುದರಿಂದ ಅವರು ಒಳ್ಳೆಯ ಕೃತಿಗಳನ್ನು ಕೊಂಡು ಓದುತ್ತಾರೆ. ಡಾ|| ಚಂದ್ರಶೇಖರ ದಾಮ್ಲೆ ಈ ಬಗ್ಗೆ ಹೀಗೆ ಬರೆಯುತ್ತಾರೆ : “ಸಾಮಾನ್ಯವಾಗಿ ಶ್ರೀಮಂತರು ಸಾಹಿತಿಗಳ ಗೆಳೆತನವನ್ನು ಸಂಪಾದಿಸುವುದು ತೀರಾ ವಿರಳ. ಏಕೆಂದರೆ ಅವರವರಿಗೆ ಮಾತಾಡಲು ವಿಷಯವೇ ಇರುವುದಿಲ್ಲ. ಒಂದು ಪೆಗ್ ರಮ್ಮಿಗೆ ಹಾಕುವ ದುಡ್ಡಿಗಿಂತಲೂ ಕಮ್ಮಿ ನೀಡಿ ಒಂದು ಪುಸ್ತಕ ಖರೀದಿಸುವ ದೊಡ್ಡ ಮನಸ್ಸು ಕೂಡಾ ಅನೇಕ ಸಿರಿವಂತರಿಗಿರುವುದಿಲ್ಲ. ಅವರು ಟಿ.ವಿ. ಹಾಕಿ ಮೈ ಮನಸ್ಸು ಕೆಡಿಸುವ ಮನರಂಜನೆಯಲ್ಲಿ ಮುಳುಗಿರುತ್ತಾರಷ್ಟೆ ಹೊರತು ನಮ್ಮ ಜಾನಪದ ಕಲೆಯ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಹೀಗಿರುತ್ತ, ಸಾಹಿತ್ಯ ಕಲಾರಾಧಕನಾಗಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಸಿರಿವಂತರಲ್ಲೊಬ್ಬರು ನಮ್ಮ ದೇವಿಪ್ರಸಾದರು. ಹಾಗಾಗಿ ಸಂಪಾಜೆಯ ಅವರ ಮನೆಯ ಗೋಡೆ, ಕಂಬ, ಕವಾಟುಗಳಿಗೆ ಸಾಹಿತಿ ಕಲಾವಿದರ ಪರಿಚಯವಿರುವಷ್ಟು ಇತರ ಸಿರಿವಂತರದ್ದಿರಲಾರದು.” (ಸಮರಸ 2003, ಪು. 123)

2. ಸಾಂಸ್ಕೃತಿಕ ಸಾಧಕ

ದೇವಿಪ್ರಸಾದರ ಜೀವನದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾದದ್ದು ಹಾಸ್ಯಬ್ರಹ್ಮ ಬೀಚಿಯವರ ಅದೊಂದು ಮಾತು.

“ನೀವು ಈಗ ಮಾಡ್ತಿರೋದೆಲ್ಲಾ ಥ್ಯಾಂಕ್ಲೆಸ್ಸು ಜಾಬು. ಏನಾದರೂ ಬರೆಯಿರಿ. ಇಷ್ಟು ಅನುಭವವಿರುವ ನಿಮಗೆ ಬರೆಯಲು ಸಾಧ್ಯವಿದೆ. ನೀವು ಬರೆದದ್ದು ಚೆನ್ನಾಗಿದ್ದರೆ ಸತ್ತ ಬಳಿಕವೂ ಜನರ ಮಧ್ಯೆ ಬದುಕಿರುತ್ತೀರಿ. ವಿದ್ಯಾವಂತರು ಸಾಂಸ್ಕೃತಿಕ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಹತ್ತು ಜನ ನಾಲ್ಕು ದಿನವಾದರೂ ನೆನಪಿಟ್ಟುಕೊಳ್ಳುವ ಕೃತಿ ರಚಿಸಿ ಬದುಕಿರುವಾಗಲೇ ಜೀವನ ಸಾರ್ಥಕತೆ ಅನುಭವಿಸಬೇಕು. ಸತ್ತ ಮೇಲೆ ನಾವು ಯಾರ ಸ್ಮೃತಿ ಪಟಲದಲ್ಲೂ ಉಳಿದಿರುವುದಿಲ್ಲ.”

ತಮ್ಮ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಾಧನೆಗಳನ್ನು ಯಾರಾದರೂ ಶ್ಲಾಘಿಸಿದರೆ ದೇವಿಪ್ರಸಾದರು ವಿನೀತರಾಗುತ್ತಾರೆ : “ಎಲ್ಲಾ ಕ್ರೆಡಿಟ್ಟು ಬೀಚಿಯವರಿಗೆ ಹೋಗಬೇಕು. ಅವರು ನಮ್ಮ ಮನೆಯಲ್ಲಿ ಹಲವಾರು ದಿನಗಳನ್ನು ಕಳೆದರು. ಅದು ಅವರ ಮಗ ನಿಧನ ಹೊಂದಿದ್ದ ಅತಿ ವಿಷಾದದ ಸಂದರ್ಭ. ಪುತ್ರ ಶೋಕಂ ನಿರಂತರಂ. ಆದರೆ ಬೀಚಿ ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿದ್ದರು. ನೋವು ನುಂಗಿ ನಗುವ ಕಲೆಯನ್ನು ನಾನು ಅವರಿಂದ ಕಲಿತೆ.”

ಯಕ್ಷ ರಂಗಾಸಕ್ತ

ಸಂಪಾಜೆ ಯಕ್ಷ ಕಲಾವಿದರ ಆಡುಂಬೊಲ. ತೆಂಕುತಿಟ್ಟಿನ ಮೇರು ಕಲಾವಿದ ಬಣ್ಣದ ಮಾಲಿಂಗರು ಅಲ್ಲಿ ನೆಲೆಗೊಂಡಿದ್ದರು. ಸಮರ್ಥ ರಾಜವೇಷಧಾರಿ ಶೀನಪ್ಪ ರೈಗಳು ಸಂಪಾಜೆಯ ಸಮೀಪದ ಕಲ್ಲುಗುಂಡಿಯವರು. ಸಾಮಾಜಿಕ ರಂಗದಲ್ಲಿ ಬಲುದೊಡ್ಡ ಹೆಸರು ಪಡೆದಿದ್ದ ಕೀಲಾರು ಗೋಪಾಲಕೃಷ್ಣಯ್ಯ ಅಲ್ಲಿನವರು. ಅವರು ವರ್ಷಕ್ಕೊಮ್ಮೆ ಎಲ್ಲಾ ಮೇಳಗಳ ಪ್ರಸಿದ್ಧ ಕಲಾವಿದರನ್ನು ಕರೆಯಿಸಿ ಯಕ್ಷಗಾನ ಹಬ್ಬ ನಡೆಸುತ್ತಿದ್ದರು. ಅವರ ನಿಧನಾ ನಂತರ ಸರಕಾರೀ ಆಯುಕ್ತ ಶ್ಯಾಂ ಭಟ್ಟರು ಅದನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಶ್ಯಾಂ ಭಟ್ಟರು ಪುಸ್ತಕ ಪ್ರಕಾಶನ, ಸಾಹಿತಿ ಮತ್ತು ಕಲಾವಿದರಿಗೆ ಸನ್ಮಾನ ಮಾಡುವ ಮೂಲಕ ಕೀಲಾರು ಪ್ರತಿಷ್ಠಾನದ ಕಾರ್ಯ ವ್ಯಾಪ್ತಿ ಹೆಚ್ಚಿಸಿದ್ದಾರೆ. ಯಕ್ಷಗಾನ ಅರ್ಥಧಾರಿಯಾಗಿ ಬಹಳ ಪ್ರಸಿದ್ಧಿ ಪಡೆದ ಜಬ್ಬಾರ್ ಸಮೊ, ಭರವಸೆಯ ಯುವ ಕಲಾವಿದ ದಿವಾಕರ, ಮಡಿಕೇರಿ ಆಕಾಶವಾಣಿಯಲ್ಲಿ ತನ್ನ ಕಂಚಿನ ಕಂಠ ಮೊಳಗಿಸುತ್ತಿರುವ ಸುಬ್ರಾಯ ಸಂಪಾಜೆ, ಬಣ್ಣದ ಮಾಲಿಂಗರ ಮಗ ಬಣ್ಣದ ಸುಬ್ರಾಯ, ಹವ್ಯಾಸಿ ಕಲಾವಿದರಾದ ಕೊರಗಪ್ಪ ಮಣಿಯಾಣಿ, ಶಿವಪ್ಪ ಆಚಾರ್ಯ – ಇನ್ನೂ ಹಲವರು ಸಂಪಾಜೆ ಮತ್ತು ಆಸುಪಾಸಿನವರು. ದೇವಿಪ್ರಸಾದರು ಸ್ವತಃ ಯಕ್ಷಗಾನ ಕಲಾವಿದರಲ್ಲ. ಆದರೆ ಅದರ ಸಾಧ್ಯತೆಗಳ ಅರಿವಿರುವವರು. ಕೀಲಾರು ಪ್ರತಿಷ್ಠಾನಕ್ಕೆ ಅವರು ನೈತಿಕ ಬೆಂಬಲ ನೀಡುತ್ತಾ ಬಂದಿದ್ದಾರೆ. ಕಲಾವಿದರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ. ಬಣ್ಣದ ಮಾಲಿಂಗ, ಕೇದಗಡಿ ಗುಡ್ಡಪ್ಪ ಗೌಡ ಮತ್ತು ಕಲ್ಲುಗುಂಡಿ ಶೀನಪ್ಪ ರೈಯವರು ದೇವಿಪ್ರಸಾದರಿಂದ ಸಾಕಷ್ಟು ಉಪಕೃತರಾಗಿದ್ದಾರೆ.

ಚಂದ್ರಶೇಖರ ದಾಮ್ಲೆಯವರ ನೇತೃತ್ವದಲ್ಲಿ ನಾವು ಯಕ್ಷಗಾನದ ಸಾಂಪ್ರದಾಯಿಕತೆಯ ಉಳಿವಿಗಾಗಿ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯನ್ನು ಸೃಷ್ಟಿಸಿದ್ದೆವು. ಶೇಣಿ ಗೋಪಾಲಕೃಷ ಭಟ್ಟರ ನಿರ್ದೇಶನದಲ್ಲಿ ಸಾಂಪ್ರದಾಯಿಕ ಯಕ್ಷಗಾನ ಹಾಡುಗಾರಿಕೆಯ ಕ್ಯಾಸೆಟ್ಟು ಹೊರತರಲು, ಬಣ್ಣದ ಮಾಲಿಂಗರನ್ನು ಸನ್ಮಾನಿಸಲು, ಯಕ್ಷಗಾನ ಹಾಸ್ಯಗಾರರ ಸಮ್ಮೇಳನ ನಡೆಸಲು ದೇವಿಪ್ರಸಾದರು ದೊಡ್ಡ ಮಟ್ಟಿನಲ್ಲಿ ನೆರವಾಗಿದ್ದಾರೆ. ದೇವಿಪ್ರಸಾದರು ಅದನ್ನು ಒಂದೆಡೆ ಉಲ್ಲೇಖಿಸಿದ್ದಾರೆ : “ತೆಂಕುತಿಟ್ಟು ಹಿತರಕ್ಷಣಾ ವೇದಿಕೆಯ ಮೂಲಕ ನಾಡಿನ ಸುಪ್ರಸಿದ್ಧ ವೇಷಧಾರಿ ಬಣ್ಣದ ಮಾಲಿಂಗ ಸಂಪಾಜೆ, ಶಿಶಿಲರನ್ನು ನನಗೆ ಹತ್ತಿರ ಆಗುವಂತೆ ಮಾಡಿದರು. ಹಾಗೆ ಅವರು ನನಗೆ ಹತ್ತಿರವಾಗದಂತೆ ಮಾಡಲು ಪ್ರಯತ್ನಿಸಿದವರೂ ಇದ್ದಾರೆ. ‘ಶಿಶಿಲರ ಬಗ್ಗೆ ಎಚ್ಚರ ಇರಿ. ಅವರೊಬ್ಬ ಕಮ್ಯುನಿಸ್ಟ್’ ಅಂದಿದ್ದರು ಒಬ್ಬರು. ಸ್ವತಃ ಧನಿಕನಲ್ಲದ ಆ ವ್ಯಕ್ತಿಗೆ ಹೇಳಿದ್ದೆ. ನಾನೊಬ್ಬ ಕ್ಯಾಪಿಟಲ್ ಇರುವ ಲೆಪ್ಟಿಸ್ಟ್. ನೀವು ಮಾತ್ರ ಕ್ಯಾಪಿಟಲ್ ಇಲ್ಲದ ಕ್ಯಾಪಿಟಲಿಸ್ಟ್. ಅನಂತರ ನಮ್ಮ ಅನ್ಯೋನ್ಯತೆಗೆ ಹುಳಿ ಹಿಂಡಲು ಯಾರೂ ಬರಲಿಲ್ಲ.” (ಹೆಜ್ಜೆ 2003, ಪುಟ 65)

ಸುಳ್ಯದ ಬಹುತೇಕ ಗೌಡರ ಆಡುಭಾಷೆ ಅರೆಗನ್ನಡ. ಅದನ್ನು ಅವರು ಜಾನಪದೀಯವಾಗಿ ಅರೆಬಾಸೆ ಎನ್ನುತ್ತಾರೆ. ಹಳಗನ್ನಡದ ಅನೇಕ ಶಬ್ದಗಳು ಅದರಲ್ಲಿವೆ. ಅದು ಯಾವ ಕಾಲದಲ್ಲಿ ಯಾವ ಚಾರಿತ್ರಿಕ ಒತ್ತಡದಿಂದ ಸೃಷ್ಟಿಯಾಯಿತೋ ಗೊತ್ತಿಲ್ಲ. ಸುಳ್ಯದಲ್ಲಿ ತಮಿಳರು ಮತ್ತು ಮಲೆಯಾಳಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. 1966ರ ಸಿರಿಮಾವೋ-ಲಾಲ್ ಬಹಾದೂರ್ ಶಾಸ್ತ್ರಿ ಒಪ್ಪಂದದನ್ವಯ ಶ್ರೀ ಲಂಕೆಯ ತಮಿಳರು ಸುಳ್ಯಕ್ಕೆ ಬಂದು ಬೀಡು ಬಿಟ್ಟು ತಮಿಳರು ಇಲ್ಲಿನ ಸಮೃದ್ಧ ರಬ್ಬರ್ ಬೆಳೆಗೆ ಕಾರಣರಾದರು. ಸುಳ್ಯವು ಕೇರಳಕ್ಕೆ ತಾಗಿಕೊಂಡಂತಿದೆ. ಗಡಿ ಪ್ರದೇಶಗಳಲ್ಲಿ ಸಾಕಷ್ಟು ಮಲೆಯಾಳಿಗಳಿದ್ದಾರೆ. ಸುಳ್ಯದ ಬಹುಸಂಖ್ಯಾತ ವ್ಯಾಪಾರಿಗಳು ಮಲೆಯಾಳ ಮಾತಾಡುವ ಮುಸಲ್ಮಾನರು. ಇವರೆಲ್ಲಾ ಲೀಲಾ ಜಾಲವಾಗಿ ಅರೆಬಾಸೆ ಮಾತಾಡುತ್ತಾರೆ. ಅನೇಕರು ಇದುವೇ ನಿಜವಾದ ಕನ್ನಡವೆಂದು ತಿಳಿದುಕೊಂಡದ್ದೂ ಇದೆ! “ನಮ್ಮದು ಹವ್ಯಕ ಕನ್ನಡವಾದರೆ ನಿಮ್ಮದು ಗೌಡ ಕನ್ನಡ”ವೆಂದು ಭಾಷಾತಜ್ಞ ಪ್ರೊ. ಮರಿಯಪ್ಪ ಭಟ್ಟರು ಒಮ್ಮೆ ಹೇಳಿದ್ದರು. ಈ ಭಾಷೆಯ ಸಾಹಿತ್ಯಿಕ ಸಾಂಸ್ಕೃತಿಕ ವಿಸ್ತರಣೆಗಾಗಿ ಕುಂದಾಪುರದ್ದನ್ನು ಕುಂದಗನ್ನಡವೆನ್ನುವಂತೆ ಇದನ್ನು ಸುಳ್ಯಗನ್ನಡವೆಂದು ಕರೆಯುವುದು ಹೆಚ್ಚು ಸೂಕ್ತ ಎಂಬ ನನ್ನ ಮಾತನ್ನು ದೇವಿಪ್ರಸಾದರು ಅನುಮೋದಿಸಿದ್ದರು.

ಅದಕ್ಕೆ ವೇದಿಕೆ ಒದಗಿಸಿದ್ದು ಯಕ್ಷಗಾನ ಕೊಳ್ತಿಗೆ ನಾರಾಯಣ. ಮಳೆಗಾಲದ ಆರು ತಿಂಗಳುಗಳಲ್ಲಿ ಯಕ್ಷಗಾನ ಕಲಾವಿದರಿಗೆ ಯಾವ ಆದಾಯವೂ ಇರುವುದಿಲ್ಲ. ಎಲ್ಲಾದರೂ ಸಹಾಯಾರ್ಥ ಪ್ರದರ್ಶನ ನಡೆಸಿ ಜೀವನೋಪಾಯ ಕಂಡುಕೊಳ್ಳಬೇಕು. ಅದೊಂದು ಮಳೆಗಾಲ ಕೊಳ್ತಿಗೆ ನಾರಾಯಣ ಒಂದು ಪ್ರದರ್ಶನ ಏರ್ಪಡಿಸಿದರು. ಪ್ರಸಂಗ ಕೃಷ್ಣಾರ್ಜುನ ಕಾಳಗ. ಸ್ಥಳ ಪರಿವಾರಕಾನದ ಕುರುಂಜಿ ಅಮರಶ್ರೀ ಭವನ. ಪ್ರದರ್ಶನದ ಪದ್ಯ ಹೊರತಾಗಿ ಸಂಭಾಷಣೆ ಪೂರ್ತಿ ಅರೆಭಾಷೆಯಲ್ಲೇ. ಸುಳ್ಯದ ಮಟ್ಟಿಗೆ ಅದು ಹೊಸ ದಾಖಲೆ. ಭಾಷೆಯ ಮೇಲಿನ ಅಬಿಮಾನದಿಂದ ಅರೆಭಾಷಿಕರು ಹೌಸ್ಫುಲ್ ದಾಖಲೆ ಮಾಡಿ ಬಿಡುತ್ತಾರೆಂದು ನಾರಾಯಣ ಭಾವಿಸಿದ್ದರು. ಅಂದು ಮೈಕು ಪ್ರಚಾರಕ್ಕೆ ಹಣವಿಲ್ಲದೆ ನನ್ನಿಂದಲೇ ತೆಗೆದುಕೊಂಡ ಕೊಳ್ತಿಗೆ – ಗೇಟ್ ಕಲೆಕ್ಷನ್ನಿಂದ ಕೊಟ್ಟು ಬಿಡ್ತೇನೆ ಮೇಸ್ಟ್ರೇ ಎಂದಿದ್ದರು.

ಅರೆಭಾಷೆ ಬಲ್ಲ ಯಕ್ಷಗಾನ ಕಲಾವಿದರು ಸಿಗದೆ ಕೊಳ್ತಿಗೆ ಪರದಾಡಿದರು. ಕೊಳ್ತಿಗೆಯ ಅರ್ಜುನ, ಉಬರಡ್ಕ ಉಮೇಶ ಶೆಟ್ಟರ ಕೃಷ್ಣ, ನನ್ನ ಬಲರಾಮ, ಸುಧಾಕರರ ಬೀಮ, ರೆಂಜಾಳ ರಾಮಕೃಷ್ಣರ ಮಕರಂದ, ತೊಡಿಕಾನ ಬಾಬು ಮತ್ತು ವಿಶ್ವನಾಥರ ಸುಭದ್ರೆ ಮತ್ತು ರುಕ್ಮಿಣಿ. ಪ್ರದರ್ಶನವೇನೋ ಚೆನ್ನಾಗಿಂುೆುೀ ಬಂತು. ಬಂದಿದ್ದ ಕಲಾರಸಿಕರ ಸಂಖ್ಯೆ ಕೇವಲ ಎಪ್ಪತ್ತೈದು! ಯಕ್ಷಗಾನಕ್ಕೆ ಮುನ್ನ ತುದಿಯಡ್ಕ ವಿಷ್ಣಯ್ಯ – ಭಾಷೆ ಯಾವುದಾದರೇನು ರೂಪ ಕೆಡದಿದ್ದರಾಯಿತು ಎಂದರು. ಸಭಾಧ್ಯಕ್ಷ ದೇವಿಪ್ರಸಾದರು ಅರೆಭಾಷೆಯನ್ನು ಸುಳ್ಯಗನ್ನಡವಾಗಿ ವಿಸ್ತರಿಸಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚು ಬಳಸಿ ಭಾಷೆಯನ್ನು ಉಳಿಸಬೇಕು ಅಂದರು. ಅಂದು ದೇವಿಪ್ರಸಾದರ ಸಹಾಯವಲ್ಲದಿರುತ್ತಿದ್ದರೆ ಹಾಲ್ ಬಾಡಿಗೆ ಕೊಡಲಿಕ್ಕೂ ಕೊಳ್ತಿಗೆಯವರಿಗೆ ಸಾಧ್ಯವಿರಲಿಲ್ಲ.

1981ರಲ್ಲಿ ಸುಳ್ಯದಲ್ಲಿ ಅಬಿನಯ ನಾಟಕ ಸಂಘಟನೆ ಹುಟ್ಟಿಕೊಂಡು ಆರ್. ನಾಗೇಶರ ನಿರ್ದೇಶನದಲ್ಲಿ ಶಿವರಾಮ ಕಾರಂತರ ಚೋಮನ ದುಡಿಯನ್ನು ನಾಟಕವಾಗಿಸಿ ಪ್ರಂುೋಗಿಸಿ ಯಶಸ್ಸನ್ನು ಕಂಡಿತು. ಅದಾದ ಬಳಿಕ ಮಾಲತಿ ರಾವ್ ಲಂಕೇಶರ ತೆರೆಗಳು ನಾಟಕವನ್ನು ನಿರ್ದೇಶಿಸದರು. ಅದನ್ನು ಯಕ್ಷ ರೂಪದಲ್ಲಿ ಪ್ರದರ್ಶಿಸುವುದು ಅವರ ಇಚ್ಛೆಯಾಗಿತ್ತು. ಪದ ರಚಿಸುವ ಮತ್ತು ಮಾಲತಿ ರಾವ್, ಬಿಳಿಮಲೆ, ಕೆ.ವಿ. ಶರ್ಮ, ತುಕಾರಾಮ ಏನೆಕಲ್ಲು, ಕುಮಾರಸ್ವಾಮಿ, ಏ.ಕೆ. ಹಿಮಕರ, ದೇವರಾಜ – ಮುಂತಾದ ನಟ ಭಯಂಕರರಿಗೆ ನಾಟ್ಯ ಕಲಿಸುವ ಜವಾಬ್ದಾರಿ ನನ್ನ ಮೇಲೆ ಬಿತ್ತು. ಆಗೆಲ್ಲಾ ದೇವಿಪ್ರಸಾದರು ರಿಹರ್ಸಲ್ ನೋಡಲು ಬರುತ್ತಿದ್ದರು. ಸಲಹೆ ಸೂಚನೆ ನೀಡುತ್ತಿದ್ದರು. ಅದರ ಯಶಸ್ಸು ರಂಗಭೂಮಿಯಲ್ಲಿ ಕೆಲವು ಆವಿಷ್ಕಾರಗಳನ್ನು ಮಾಡಲು ಪ್ರೇರೇಪಿಸಿದ್ದನ್ನು ಅವರು ಪ್ರಾಂಜ್ವಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ.

ಅದಾಗಿ ಕೆಲವರ್ಷಗಳ ಬಳಿಕ ಕನ್ಯಾಕುಮಾರಿಯಿಂದ ಮುಂಬಯಿಯವರೆಗೆ ಪರಿಸರವಾದಿಗಳು ಪಶ್ಚಿಮಘಟ್ಟ ಉಳಿಸಿ ಚಳವಳಿ ನಡೆಸಿದರು. ಈ ಸಂಬಂಧ ಒಂದು ಪಾದಯಾತ್ರೆ ನಡೆಯಿತು. ಪಾದಯಾತ್ರಾ ತಂಡ ಕೊಡಗಿನಿಂದ ದ.ಕ.ಕ್ಕೆ ಸಂಪಾಜೆ ಮಾರ್ಗವಾಗಿ ಪ್ರವೇಶಿಸಿ ಕಲ್ಲುಗುಂಡಿಯಲ್ಲಿ ಆ ರಾತ್ರಿ ತಂಗಿತು. ಅದನ್ನು ಎದುರುಗೊಂಡವರಲ್ಲಿ ವೀರೇಂದ್ರ ಹೆಗ್ಗಡೆ ಮತ್ತು ದೇವಿಪ್ರಸಾದರು ಪ್ರಮುಖರು. ಅಂದು ಪಂಚವಟಿ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು. ಶೂರ್ಪನಖಿಯ ಪಾತ್ರ ವಹಿಸಿ ನಾನು ರಕ್ಕಸರು ಅರಣ್ಯದ ಆದಿವಾಸಿಗಳೆಂದೂ, ಋಷಿಮುನಿಗಳು ಮತ್ತು ರಾಮ ಲಕ್ಷ ್ಮಣರು ದ್ರಾವಿಡ ಸಂಸ್ಕೃತಿಯನ್ನು ಮತ್ತು ಅರಣ್ಯಗಳನ್ನು ನಾಶಮಾಡಲು ಬಂದ ಆರ್ಯರೆಂದೂ ರಂಗದಲ್ಲಿ ಹೇಳಿದೆ. ಶೂರ್ಪನಖಿಯ ಪಾತ್ರಕ್ಕೆ ನಾನು ನೀಡಿದ ಆಯಾಮವನ್ನು ಮೆಚ್ಚಿಕೊಂಡ ದೇವಿಪ್ರಸಾದರು ಈ ಸಾಂಪ್ರದಾಯಿಕ ಕಲೆಯನ್ನು ಜನಪರ ಚಳವಳಿಗಳಲ್ಲಿ ಧಾರಾಳ ಬಳಸಬಹುದು ಎಂದರು. ಸುಳ್ಯ ತಾಲೂಕಲ್ಲಿ ಸಾಕ್ಷರತಾ ಆಂದೋಲನ ಕಾಲದಲ್ಲಿ ದಾಮ್ಲೆಯವರು ಮತ್ತು ನಾನು ಸುಳ್ಯದ ಹಳ್ಳಿ ಹಳ್ಳಿಗಳಲ್ಲಿ ಗೆಜ್ಜೆ ಕಟ್ಟಿ ಕುಣಿದು ಅನಕ್ಷರಸ್ಥರನ್ನು ಅಕ್ಷರದತ್ತ ಆಕರ್ಷಿಸುವ ಕೆಲಸ ಮಾಡಿದಾಗ ಸಂಪೂರ್ಣ ಸಹಕಾರ ನೀಡಿದರು.

ಯಕ್ಷಗಾನ ನೃತ್ಯ ಗುರು ಕರ್ಗಲ್ಲು ವಿಶ್ವೇಶ್ವರ ಭಟ್ಟರು ಅರೆಭಾಷೆಯಲ್ಲಿ ಯಕ್ಷಗಾನ ಕ್ಯಾಸೆಟ್ಟು ಹೊರತರುವ ಸಾಹಸ ಮಾಡಿದರು. ಅದು ಬಿಡುಗಡೆಗೊಂಡದ್ದು ದೇವಿಪ್ರಸಾದರ ನಂಜಯ್ಯನ ಮನೆಯಲ್ಲಿ ಅವರಿಂದಲೇ. ಅಂದು ನಾನು ಮತ್ತು ನಿತ್ಯಾನಂದ ಮುಂಡೋಡಿ ಮುಖ್ಯ ಅತಿಥಿಗಳಾಗಿದ್ದೆವು. ಅರೆಭಾಷೆಯನ್ನು ಸುಳ್ಯಗನ್ನಡವಾಗಿಸುವ ಅಥವಾ ಅದನ್ನು ಅರೆಭಾಷೆಯಾಗಿಂುೆುೀ ಇರಗೊಟ್ಟು ಅದನ್ನಾಡುವ ಮಂದಿಗಳಿಗೆ ಭಾಷಾ ಅಲ್ಪಸಂಖ್ಯಾತರ ಮೀಸಲಾತಿಗೆ ಯತ್ನಿಸುವ ಬಗ್ಗೆ ನಾವು ತುಂಬಾ ಚರ್ಚಿಸಿದೆವು. ಗೌಡ ಯುವ ಸಂಘ ಸ್ಥಾಪಿಸಿ ಯುವಕರಿಗೆ ಶಿಕ್ಷಣ, ಸಾಹಿತ್ಯ, ಕಲೆಗಳಲ್ಲಿ ಆಸಕ್ತಿ ಮೂಡಿಸಲು ಯತ್ನಿಸುತ್ತಿದ್ದ ನಿತ್ಯಾನಂದ ಮುಂಡೋಡಿಗೆ ಈ ಪ್ರಸ್ತಾಪ ತುಂಬಾ ಇಷ್ಟವಾಯಿತು.

ಯಕ್ಷಗಾನ ಗೋಷ್ಠಿಗಳು ಮತ್ತು ಪ್ರದರ್ಶನಗಳು ಎಲ್ಲೇ ನಡೆದರೂ ದೇವಿಪ್ರಸಾದರಿಗೆ ಆಮಂತ್ರಣವಿರುತ್ತಿತ್ತು. ನನ್ನನ್ನು ಅಂತಹ ಸಮಾರಂಭಗಳಿಗೆ ದೂರದ ಊರುಗಳ ಜನರು ಕರೆದಾಗ, ನನಗೂ ದೇವಿಪ್ರಸಾದರಿಗೂ ಒಟ್ಟಿಗೇ ಅವಕಾಶ ನೀಡಿ ಎನ್ನುತ್ತಿದ್ದೆ. ಇದರಿಂದ ನನಗೆ ಎರಡು ಲಾಭಗಳಾಗುತ್ತಿದ್ದವು. ನಾನು ದೇವಿಪ್ರಸಾದರ ವಾಹನದಲ್ಲಿ ನಿರಾಯಾಸವಾಗಿ ಹೋಗಿ ಬರಬಹುದಿತ್ತು ಮತ್ತು ಅವರೊಡನೆ ಮುಕ್ತವಾಗಿ ಅನೇಕ ವಿಷಯಗಳ ಬಗ್ಗೆ ಚರ್ಚಿಸಲು ಸಾಧ್ಯವಾಗುತ್ತಿತ್ತು. ಕಲೆ ಮತ್ತು ಸಾಹಿತ್ಯಿಕ ವ್ಯಸನ ನಮ್ಮನ್ನು ತುಂಬಾ ಹತ್ತಿರ ಮಾಡಿ ಬಿಟ್ಟಿತು.

ಜಗವೆ ನಾಟಕ ರಂಗ

ನಾಟಕ ದೇವಿಪ್ರಸಾದರ ಅಬಿವ್ಯಕ್ತಿಯ ಪ್ರಮುಖ ಮಾಧ್ಯಮ. ರಂಗಭೂಮಿಯಲ್ಲಿ ಅವರು ನಾಟಕಕಾರ, ನಿರ್ದೇಶಕ, ನಟ ಮತ್ತು ಪ್ರೋತ್ಸಾಹಕನಾಗಿ ಕಾಣಿಸಿಕೊಂಡವರು. 1980ರಲ್ಲಿ ನಮ್ಮ ಅಬಿನಯ ತಂಡವು ರಾ. ನಾಗೇಶರ ನಿರ್ದೇಶನದಲ್ಲಿ ಚೋಮ ನಾಟಕವನ್ನು ನಿರ್ದೇಶಿಸುತ್ತಿದ್ದಾಗ ದೇವಿಪ್ರಸಾದರು ಆಗಾಗ ಭೇಟಿ ಕೊಟ್ಟು ಸಲಹೆ ಸೂಚನೆ ನೀಡುತ್ತಿದ್ದರು. ಸಂಪಾಜೆಯಲ್ಲಿ ರಂಗಭೂಮಿ ಚಟುವಟಿಕೆಗಳಿಗೆ ಭದ್ರವಾದ ಅಡಿಪಾಯ ಹಾಕಿ ಕೊಟ್ಟವರು ಅವರು. ಸಂಪಾಜೆ ಪದವಿಪೂರ್ವ ಕಾಲೇಜಿನ ಪ್ರಾಂಗಣದಲ್ಲಿ ನಿರ್ಮಿಸಿದ ನಿಸರ್ಗ ಬಯಲು ರಂಗಮಂದಿರ ಈ ಸೀಮೆಯ ರಂಗಚಟುವಟಿಕೆಗಳ ಅಬಿವೃದ್ಧಿಗೆ ದೇವಿಪ್ರಸಾದರ ಬಹುದೊಡ್ಡ ಕೊಡುಗೆ. ನೆಲವನ್ನು ಸಮತಟ್ಟಾಗಿ ಆಳಕ್ಕೆ ಅಗೆದು ಮೂರು ಹಂತಗಳಲ್ಲಿ ನಿರ್ಮಿಸಿದ ಅರ್ಧಚಂದ್ರಾಕೃತಿಯ ಪ್ರೇಕ್ಷಕಾಂಗಣ, ಯಾವ ಮೂಲೆಯಿಂದ ವೀಕ್ಷಿಸಿದರೂ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುವ ವೇದಿಕೆ, ರಂಗದ ಮುಂಭಾಗದ ಪ್ರಕೃತಿ ರಮಣೀಯತೆ – ರಂಗಮಂದಿರಕ್ಕೆ ವಿಶೇಷ ಮಹತ್ವ ತಂದುಕೊಟ್ಟಿವೆ.

ಸಂಪಾಜೆಯ ಬಯಲು ರಂಗಮಂದಿರದ ವೈಶಿಷ್ಟದ ಬಗ್ಗೆ ರಂಗತಜ್ಞ ಅಯ್ಕೆಯ ಬೊಳುವಾರು ಮತ್ತು ಮೋಹನ ಸೋನಾ ಹೀಗೆ ಬರೆಯುತ್ತಾರೆ : “ಪ್ರೇಕ್ಷಕರ ದೃಷ್ಟಿ ಪಥ ಮತ್ತು ದೃಷ್ಟಿ ಕಿರಣಗಳ ಸಂಗಮ ಕ್ಷೇತ್ರ ಪೂರ್ಣ ರಂಗವನ್ನು ಒಂದು ಕಣ್ಣಿನ ರೂಪದಲ್ಲಿ ಕೇಂದ್ರೀಕರಿಸುತ್ತದೆ. ಒಂದು ವಸ್ತುವಿನಿಂದ ಹೊರಟು ಬರುವ ಎಲ್ಲಾ ಬೆಳಕಿನ ಕಿರಣಗಳು ದೃಶ್ಯ ಪರದೆಯ ಮೇಲೆ ಮೂಡುತ್ತವೆ. ಪ್ರೇಕ್ಷಕಾಂಗಣದಿಂದ ಹೊರಟ ಎಲ್ಲಾ ಪ್ರೇಕ್ಷಕರ ದೃಷ್ಟಿ ಪಥಗಳು ಏಕ ಕೇಂದ್ರದತ್ತ ಸೆಳೆಯಲ್ಪಡುತ್ತವೆ. ವೇದಿಕೆ ತನ್ನ ಮೇಲಿರುವ ಯಾವತ್ತೂ ನಟರನ್ನು ಕಿಂಚಿತ್ ಚಲನೆಯಿಂದಾಗಿ ಅದ್ಭುತ ದೃಶ್ಯ ಪರಿಣಾಮವನ್ನು ಸೃಷ್ಟಿಸಲು ಸಮರ್ಥವಾಗುತ್ತದೆ. ಪ್ರೇಕ್ಷಕರಿಗೆ ತಾವು ಕುಳಿತಲ್ಲೇ ನಟರ ಚಲನೆಯ ವಿರುದ್ಧ ದಿಸೆಯಲ್ಲಿ ಸಾಗಿದಂತಾಗುತ್ತದೆ. ರಂಗ ಕ್ಷಿತಿಜ ಇನ್ನೊಂದು ಸೆಳೆತ ನೀಡುತ್ತದೆ. ಪ್ರೇಕ್ಷಕರನ್ನು ಮೂರು ವರ್ಗಗಳನ್ನಾಗಿ ನಿರ್ಮಿಸುವ ಈ ಪಾತಳಿ ಮೇಲ್ನೋಟ, ಸಮನೋಟ, ಕೆಳನೋಟಗಳನ್ನು ಅನಾಯಾಸವಾಗಿ ಕಟೆದು ಎಡ-ಬಲ, ಮೇಲೆ-ಕೆಳಗೆ, ಎದುರು ಸಾನಿಧ್ಯ ಘನ ಪರಿಣಾಮಗಳನ್ನು ತೋರಿಸುತ್ತದೆ.” (ಸಮರಸ 2003, ಪು. 138)

1990ರ ಎಪ್ರಿಲ್ 10ರಂದು ಆಗಿನ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ಐ.ಎಂ. ವಿಠಲಮೂರ್ತಿಯವರು ನಿಸರ್ಗ ಬಯಲು ರಂಗಮಂದಿರವನ್ನು ಉದ್ಘಾಟಿಸಿದರು. ಎಪ್ರಿಲ್ 10ರಿಂದ 27ರ ವರೆಗಿನ ಹಿರಿಯರ ಮತ್ತು ಕಿರಿಯರ ರಂಗ ಶಿಬಿರಗಳನ್ನು ನಾಟಕ ತಜ್ಞ ಬಿ.ವಿ. ಕಾರಂತರು ಉದ್ಘಾಟಿಸಿದರು. ನಾಟಕಕಾರ ಚಂದ್ರಶೇಖರ ಕಂಬಾರ ಅಧ್ಯಕ್ಷತೆ ವಹಿಸಿ ದೇವೀಪ್ರಸಾದರ ರಂಗ ಕೊಡುಗೆಯನ್ನು ಶ್ಲಾಘಿಸಿದರು. ಅಂದು ಕರ್ನಾಟಕ ನೃತ್ಯ ಅಕಾಡೆಮಿ ಅಧ್ಯಕ್ಷೆ ಮಾಯಾರಾವ್ರ ಬಳಗ ಭಾರತೀಯ ನೃತ್ಯಗಳ ಸ್ಥೂಲ ಪರಿಚಯವನ್ನು ರಂಗಾಸಕ್ತರಿಗೆ ನೀಡಿತು. ಸಂಪಾಜೆಯ ರಂಗ ಚಟುವಟಿಕೆಗಳಿಗೆ ಅದೊಂದು ಅದ್ಭುತ ಆರಂಭವಾಗಿತ್ತು.

ಈ ನಿಸರ್ಗ ರಂಗ ಸಂಭ್ರಮ ಕಾರ್ಯಕ್ರಮದ ಫಲಸ್ವರೂಪವಾಗಿ ಅಯ್ಕೆ ಬೊಳುವಾರು, ಮೋಹನ ಸೋನಾ, ಮೂರ್ತಿ ದೇರಾಜೆ, ಗೋಪಾಡ್ಕರ್, ಶಂಕರ ಪ್ರಸಾದ್, ಸುರೇಶ ಶೆಟ್ಟಿಗಾರ್, ಫೋನ್ ಶೀನಪ್ಪ, ಕುಮಾರಸ್ವಾಮಿ – ಮುಂತಾದವರನ್ನು ಒಳಗೊಂಡ ಜಿಲ್ಲಾಮಟ್ಟದ ನಿರತ ನಿರಂತ ಗ್ರಾಮೀಣ ಕಲಾವಿದರ ಸಂಘಟನೆ ಹುಟ್ಟಿಕೊಂಡಿತು. ಜಿಲ್ಲಾ ಮಟ್ಟದಲ್ಲಿ ರಂಗಭೂಮಿಗೆ ಹೊಸ ಆಯಾಮವನ್ನು ತಂದು ಕೊಡುವುದು ಇದರ ಉದ್ದೇಶವಾಗಿತ್ತು. ನಿಸರ್ಗ ರಂಗ ಮಂಚದಲ್ಲಿ ಪುಟ್ಟಿ ಕಾಡಿಗೆ ಹೋದದ್ದು, ಜೂಲಿಯಸ್ ಸೀಸರ್, ಹನ್ನೊಂದು ಹಂಸಗಳು ಮತ್ತು ಕತ್ತಲೆ ದಾರಿ ದೂರ ನಾಟಕಗಳು ಪ್ರದರ್ಶನಗೊಂಡವು. ದೇವಿಪ್ರಸಾದರ ಶ್ರಮದಿಂದಾಗಿ ಸಂಪಾಜೆ, ಸುಳ್ಯ ಸೀಮೆಗಳ ರಂಗಭೂಮಿ ಚಟುವಟಿಕೆಗಳಿಗೆ ಹೊಸ ಉತ್ತೇಜನ ದೊರೆಯಿತು.

ದೇವಿಪ್ರಸಾದರು ನೀನಾಸಂ ತಿರುಗಾಟದ ಎಲ್ಲಾ ಪ್ರದರ್ಶನಗಳಿಗೆ ಸಂಪಾಜೆಯಲ್ಲಿ ವೇದಿಕೆ ಒದಗಿಸಿದ್ದಾರೆ. ಇಕ್ಬಾಲ್ ಅಹಮದ್ ಮತ್ತು ಬಾಸುಮ ನಿರ್ದೇಶನದ ‘ಮೂರು ಕಾಸಿನ ಸಂಗೀತ’ ನಾಟಕ ಪ್ರದರ್ಶನ ಆರ್ಥಿಕವಾಗಿ ಸೋತಾಗ ನಷ್ಟವನ್ನು ತುಂಬಿ ಕಲಾವಿದರನ್ನು ಪ್ರೋತ್ಸಾಹಿಸಿದ್ದಾರೆ. ‘ಚಿಣ್ಣ ಬಣ್ಣ’ ತಂಡದ ಮಕ್ಕಳ ನಾಟಕಕ್ಕೆ ಸುಳ್ಯದಾದ್ಯಂತ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಮಣಿಪುರದ ನಾಟಕ ತಂಡದವರನ್ನು ಸಂಪಾಜೆಗೆ ಕರೆಸಿ ‘ಚಕ್ರವ್ಯೆಹ’ ನಾಟಕವನ್ನು ರಂಗಮಂಟಪವೇರಿಸಿ ಕಲೆ, ನಾಟಕ, ಸಂಗೀತಗಳಿಗೆ ಭಾಷೆ ತಡೆಗೋಡೆಯಾಗುವುದಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ದೇವಿಪ್ರಸಾದರು ರಚಿಸಿದ ‘ಶಿರಾಡಿ ಭೂತ’ ನಾಟಕ ರಾಜ್ಯದಾದ್ಯಂತ ಕುತೂಹಲವನ್ನು ಸೃಷ್ಟಿಸಿತ್ತು. ಅದರ ಹಾಡುಗಳ ಧ್ವನಿಮುದ್ರಣಕ್ಕೆ ಈಗಲೂ ಬೇಡಿಕೆಯಿದೆ. ನಾಟಕ ವಿಮರ್ಶಕ ಡಾ. ನಾ.ದಾ. ಶೆಟ್ಟಿ ಈ ನಾಟಕದ ಬಗ್ಗೆ ಹೀಗೆ ಬರೆದಿದ್ದಾರೆ : “ಶಿರಾಡಿ ಭೂತ ಹಾಗೂ ಬಚ್ಚ ನಾಯಕನ ಪಾಡ್ದನಗಳನ್ನು ಬಳಸಿಕೊಂಡು ಅದರ ಮೂಲಕ ಗೌಡ ಜನಾಂಗದಲ್ಲಿ ಬೆಳೆದು ಬಂದ ಭೂತಾರಾಧನಾ ನಂಬಿಕೆಯ ಹಿನ್ನೆಲೆಯನ್ನು ತಿಳಿಯ ಹೇಳುವ ಪ್ರಯತ್ನ ಇಲ್ಲಿದೆ. ಪಾಡ್ದನದ ಒಳಗೆ ಹುದುಗಿರುವ ಅದೆಷ್ಟೋ ಕತೆಗಳು ಮನುಷ್ಯ ಮನಸ್ಸುಗಳಲ್ಲಿ ದೃಶ್ಯರೂಪವಾಗಿ ಅರಳದೆ ನಶಿಸುವಂತಹ ಸಂದರ್ಭಗಳೇ ಹೆಚ್ಚು. ಅಂತಹುದರಲ್ಲಿ ಪಾಡ್ದನದ ಮೂಲಕ ಒಂದು ಜನಾಂಗದ ಪೂರ್ವಕತೆಯನ್ನು ದೃಶ್ಯೀಕರಿಸುವ ಯತ್ನ ಇಂತಹ ಅನೇಕ ಪ್ರದರ್ಶನಗಳು ದೃಶ್ಯರೂಪಕ್ಕೆ ಅಳವಡುವಂತಾಗಲು ನಾಂದಿಯಾಗಬಹುದು. ದೇವಿಪ್ರಸಾದ್ ರಚಿಸಿದ ಈ ನಾಟಕವನ್ನು ಇಕಬಾಲ್ ಅಹಮದ್ ಸಮರ್ಥವಾಗಿ ನಿರ್ದೇಶಿಸಿದ್ದಾರೆ.” (ಸಮರಸ 2003, ಪು. 134). ಶಿರಾಡಿ ಭೂತ ನಾಟಕದಿಂದಾಗಿ ಬಂಟೋಡಿ ವೇಣುಗೋಪಾಲ, ಜಬ್ಬಾರ ಸಮೊ, ಬಾಸುಮ ಕೊಡಗು – ಮುಂತಾದವರು ನಟರಾಗಿ ಹೊಸ ಎತ್ತರಕ್ಕೆ ಏರಿದರು. ಈ ನಾಟಕ ದೂರದರ್ಶನದಲ್ಲೂ ಪ್ರಸಾರವಾಗಿ ದೇವಿಪ್ರಸಾದರಿಗೆ ನಾಟಕಕಾರನ ಪಟ್ಟವನ್ನು ಗಟ್ಟಿಗೊಳಿಸಿತು.

ದೇವಿಪ್ರಸಾದರಿಗೆ ನಾಟಕ ರಚಿಸಿ ರಂಗವೇರಿಸಲು ಮೂಲ ಸ್ಫೂರ್ತಿ ದೊರಕಿದ್ದು ಚಲನಚಿತ್ರದಿಂದ. ಯಶವಂತ ಚಿತ್ತಾಲರ ‘ಮೂರು ದಾರಿಗಳು’ ಕಾದಂಬರಿಯನ್ನು ದೇವಿಪ್ರಸಾದರು ಚಲನಚಿತ್ರವಾಗಿ ಮಾರ್ಪಡಿಸಿದರು. ಗಿರೀಶ್ ಕಾಸರವಳ್ಳಿ ದಿಗ್ದರ್ಶಿಸಿದ ಈ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ದೊರೆಯಿತು. ರಾಜ್ಯ ಸರಕಾರ ಐದು ಪ್ರಶಸ್ತಿಗಳನ್ನು ನೀಡಿತು. ಪ್ರಶಸ್ತಿ ವಿಜೇತ ಸಿನಿಮಾಗಳು ಟಾಕೀಸುಗಳಲ್ಲಿ ಪ್ರದರ್ಶನಗೊಳ್ಳುವುದು ತೀರಾ ಕಡಿಮೆ. ಪ್ರದರ್ಶನಗೊಂಡರೂ ಜನರನ್ನು ಅವು ಆಕರ್ಷಿಸುವುದಿಲ್ಲ. ಆರ್ಥಿಕವಾಗಿ ಕೈ ಸುಟ್ಟುಕೊಂಡ ದೇವಿ ಪ್ರಸಾದರಿಗೆ ಸಿನಿಮಾ ನಿರ್ಮಾಣದಿಂದ ಆದ ಲಾಭವೆಂದರೆ ಕಾಸರವಳ್ಳಿ ಕುಟುಂಬದ ಸ್ನೇಹ ಮತ್ತು ಒಡನಾಟ ಮಾತ್ರ!

ರಂಗತಜ್ಞ ಸದಾನಂದ ಸುವರ್ಣರ ‘ಗುಡ್ಡದ ಭೂತ’ ಟಿ.ವಿ. ಧಾರಾವಾಹಿಯಲ್ಲಿ ನಟಿಸಿ ಸುಳ್ಯದಲ್ಲೊಂದು ಸಂಚಲನಕ್ಕೆ ಕಾರಣರಾದ ದೇವಿಪ್ರಸಾದರು ‘ಅಪಹರಣ’ ಟೆಲಿಪಿಲಂ ನಿರ್ಮಿಸಿದ್ದು ಇನ್ನೊಂದು ಸಾಹಸ ಗಾಥೆ. ಅದರ ಮೂಲಕತೆ, ನಿರ್ಮಾಣ ಮತ್ತು ನಿರ್ದೇಶನ ದೇವಿಪ್ರಸಾದರದು. ಚಿತ್ರಕತೆ ಮತ್ತು ಸಂಭಾಷಣೆ ನಾನು ರಚಿಸಿದ್ದು. ಛಾಯಾಗ್ರಹಣ ಆರ್.ಕೆ. ಭಟ್. ದ.ಕ.ದ ರಂಗಭೂಮಿಯ ನಟರನ್ನು ಬಳಸಿ, ನಂಜಯ್ಯನ ಮನೆಯಲ್ಲಿ ಒಳಾಂಗಣ, ಸಂಪಾಜೆ ಸುತ್ತಮುತ್ತ ಹೊರಾಂಗಣ ಚಿತ್ರೀಕರಣ ನಡೆಸಿ ಲೋ ಬಜೆಟ್ಟಿನಲ್ಲಿ ನಿರ್ಮಿಸಿದ ಅರ್ಧಗಂಟೆಯ ಈ ಟೆಲಿಚಿತ್ರವನ್ನು ಯಾವ ಟಿ.ವಿ.ಯವರೂ ಬಿತ್ತರಿಸಲಿಲ್ಲ. ಒಂದೇ ವೀಡಿಂುೋ ಕ್ಯಾಮರಾದ ಬಳಕೆಯಿಂದಾಗಿ ಚಿತ್ರದ ಒಟ್ಟು ಪರಿಣಾಮ ಮಿತಿಗೊಳಪಟ್ಟಿತ್ತು. ಇನ್ನೂ 11 ಎಪಿಸೋಡ್ ಸೇರಿಸಿ ಅದನ್ನೊಂದು ಧಾರಾವಾಹಿ ಮಾಡುತ್ತಿದ್ದರೆ ಪ್ರದರ್ಶನಕ್ಕೆ ಅವಕಾಶ ಸಿಗುತ್ತಿತ್ತೇನೋ? ಚಿತ್ರ ಡಬ್ಬದಲ್ಲೇ ಉಳಿದರೂ ದೇವಿಪ್ರಸಾದರು ನನಗೆ ಮತ್ತು ಛಾಯಾಗ್ರಾಹಕರಿಗೆ ಗೌರವ ಧನ ನೀಡಲು ಬಂದರು. ನಾವು ನಯವಾಗಿಯೇ ನಿರಾಕರಿಸಿದೆವು.

ನಾಟಕ-ಸಿನಿಮಾಗಳಲ್ಲಿ ನಷ್ಟ ಅನುಭವಿಸಿದರೂ ದೇವಿಪ್ರಸಾದರದು ತೆಪ್ಪಗಿರುವ ಜೀವವಲ್ಲ. ಅದಕ್ಕಾಗಿ ಲೇಖಕ ಜೋಯಪ್ಪನವರು ಅವರನ್ನು ಸೋಲರಿಯದ ಸಾಧಕ ಎಂದು ಕರೆದು ಅದಕ್ಕೆ ಕಾರಣವನ್ನು ಹೀಗೆ ತೋರಿಸಿದ್ದಾರೆ : “ಎಲ್ಲರೂ ಬದುಕಿನ ಬೇಸಾಯ ಮಾಡಿದವರೇ. ಆದರೆ ಆ ಬೇಸಾಯಕ್ಕಾಗಿ ಗಟ್ಟಿ ಕಾಳನ್ನು ಆಯ್ದುಕೊಂಡವರು ಎಷ್ಟು ಮಂದಿ? ಹುಟ್ಟಿದ್ದಕ್ಕೆ ಹೇಗಾದರೂ ಬದುಕು ಸವೆಸುವ, ಅರ್ಥವಿಲ್ಲದ ಬಾಳನ್ನು ವ್ಯರ್ಥಗೊಳಿಸುವ ಉದ್ದೇಶರಹಿತರ ಸಂಖ್ಯೆಯೇ ಹೆಚ್ಚು. ನಾವು ಯಾಕಾಗಿ ಬದುಕಿದ್ದೇವೆ ಎಂದು ಎಂದಿಗೂ ಸ್ವವಿಮರ್ಶೆ ಮಾಡಿಕೊಳ್ಳದ ಮಂದಿಗಳ ಮಧ್ಯೆ ಬದುಕೆಂದರೆ ಇದು ಎಂದು ತೋರಿಸಿಕೊಟ್ಟ ದೇವಿಪ್ರಸಾದರು ಸಾರ್ಥಕ ಬದುಕು” (ಸಮರಸ 2003, ಪುಟ 152)

ಸಾಹಿತಿಯಾಗಿ, ಜಾನಪದ ತಜ್ಞನಾಗಿ ಕರಾವಳಿ ಕರ್ನಾಟಕದಲ್ಲಿ ಅಗ್ರಸ್ಥಾನ ಪಡೆದಿರುವ ಪ್ರೊ. ಅಮೃತ ಸೋಮೇಶ್ವರರು ದೇವಿಪ್ರಸಾದರ ಬಗ್ಗೆ ಹೀಗಂದಿದ್ದಾರೆ : “ಇತಿಹಾಸ, ಸಂಸ್ಕೃತಿ, ಪರಂಪರೆ, ಸಾಮಾಜಿಕ ಜಾಗೃತಿ ಮೊದಲಾದ ವಿಚಾರಗಳಲ್ಲಿ ಸಕ್ರಿಯವಾಗಿಯೂ, ಆಳವಾದ ಕಾಳಜಿಯಿಂದ ತೊಡಗಿಸಿಕೊಳ್ಳುವವರು ಬಹಳ ವಿರಳ. ಅದಕ್ಕೆ ತೀವ್ರವಾದ ಆಸಕ್ತಿ, ಅಧ್ಯಯನ, ಪರಿಶ್ರಮ, ನಾಡು ನುಡಿಗಳ ಗಾಢ ಪ್ರೇಮ, ಜನಸಂಪರ್ಕ, ಸಂಘಟನಾ ಸಾಮರ್ಥ್ಯ, ಸಂವಹನ ಶಕ್ತಿ ಬೇಕಾಗುತ್ತದೆ. ಅಲ್ಪತೃಪ್ತರಿಗೂ, ಸುಲಭ ಜೀವಿಗಳಿಗೂ, ಐಷಾರಾಮ ಪ್ರಿಯರಿಗೂ ಅದು ದಕ್ಕುವ ದಾರಿಯಲ್ಲ. ಅಂತಹ ದುರ್ಗಮ ಪಥವನ್ನು ಆರಿಸಿಕೊಂಡ ದೇವಿಪ್ರಸಾದರದು ಚೇತೋಹಾರಿ ಪ್ರತಿಭೆಯ, ಬಹುಮುಖ ಕ್ರಿಯಾಶೀಲತೆಯ ವರ್ಣಮಯ ವ್ಯಕ್ತಿತ್ವ. ಅವರ ಆಸಕ್ತಿಯ ಮತ್ತು ವ್ಯವಸಾಯದ ಕ್ಷೇತ್ರಗಳು ಹಲವು. ಸಾಹಿತ್ಯ, ಇತಿಹಾಸ, ಕಲೆ, ಸಂಸ್ಕೃತಿ, ರಾಜಕಾರಣ, ಶಿಕ್ಷಣ, ಸಹಕಾರ, ನಾಟಕ, ಚಲನಚಿತ್ರ, ಪತ್ರಿಕೋದ್ಯಮ, ಸಮಾಜ ಜಾಗೃತಿ, ಸಂಘಟನೆ ಇತ್ಯಾದಿ. ಆದರ್ಶ ಕನಸುಗಳನ್ನು ಹೊತ್ತ ಅವರ ಉತ್ಸಾಹಪೂರ್ಣ ಮನಸ್ಸು ಉನ್ನತ ಮೌಲ್ಯಗಳಿಗಾಗಿ ತುಡಿಯುತ್ತಿರುತ್ತದೆ. ಸದಾ ಸಂಘಜೀವಿಯಾದ ಅವರಿಗೆ ನಮ್ಮ ಸಂಸ್ಕೃತಿ ಪರಂಪರೆಯ ಸತ್ಫಲಗಳನ್ನು ಸಮಾಜಕ್ಕೆ ಒದಗಿಸುವ ಹಂಬಲ. ಅದಕ್ಕಾಗಿ ಎಷ್ಟು ಪಾಡು ಪಡಲಿಕ್ಕೂ, ಎಂಥ ತ್ಯಾಗಕ್ಕೂ ಸಿದ್ಧ. ಕಾಯಕದ ಮುಂದೆ ಶರೀರದ ಆರೋಗ್ಯವೂ ಅವರಿಗೆ ಗೌಣ.” (ಸಮರಸ 2003, ಪು. 144)

ಪ್ರಸಿದ್ಧ ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಷಿಯವರ ಪ್ರಕಾರ “ಮಿತ್ರರಾದ ದೇವಿಪ್ರಸಾದರ ಸಾಂಸ್ಕೃತಿಕ ಸ್ಪಂದನ ಶೀಲತೆ ಅಸಾಧಾರಣವಾದುದು. ಹತ್ತಾರು ಕನಸುಗಳನ್ನು ಹೊತ್ತು, ತನ್ನದೇ ರೀತಿಯಿಂದ ಅವುಗಳ ಸಾಕಾರಕ್ಕೆ ಹೆಣಗಾಡುತ್ತ, ಕೆಲಸ ಮಾಡುತ್ತ, ಮಾಡಿಸುತ್ತಾ ಇರುವ ದೇವಿಪ್ರಸಾದ್ ಓರ್ವ ಪ್ರೇರಕ ವ್ಯಕ್ತಿ. ಬೇರೆಯವರು ಮಾಡುತ್ತಿರುವ ಕೆಲಸಗಳನ್ನು ಪ್ರೀತಿಯಿಂದ ಗಮನಿಸುತ್ತ, ಅದಕ್ಕೆ ತನ್ನಿಂದಾಗುವ ಪ್ರೋತ್ಸಾಹ, ಮೆಚ್ಚುಗೆ, ಭಾಗವಹಿಸುವಿಕೆಗಳನ್ನು ನೀಡುವ ಶ್ಲಾಘ್ಯ ವ್ಯಕ್ತಿತ್ವವುಳ್ಳ ಸಹಜ ಸ್ನೇಹಶೀಲರು.” (ಸಮರಸ 2003, ಪು. 148)

“ಒಂದು ಕಲೆಗೆ ನೆಲೆ ಬೆಲೆ ಕೊಟ್ಟಾಗ ಕಲಾವಿದನಿಗೆ ಗೌರವದ ಜೊತೆಗೆ ಕಲೆಯ ಅಸ್ತಿತ್ವದ ಗಟ್ಟಿತನ ಸ್ಥಿರವಾಗುತ್ತದೆ. ಅಂತಹ ಕಲೆಗಳಾದ ನಾಟಕ, ಯಕ್ಷಗಾನ, ನೃತ್ಯ ಪ್ರಕಾರಗಳನ್ನು ಸಂಪಾಜೆಯಂತಹ ಗ್ರಾಮೀಣ ಪ್ರದೇಶಕ್ಕೆ ಪರಿಚಯಿಸಿದ್ದು ದೇವಿ ಪ್ರಸಾದರ ಹೆಚ್ಚುಗಾರಿಕೆಯಾಗಿದೆ. ಅವರು ಬಹುಶ್ರುತರು ಮತ್ತು ಮಹು ಕೃತರು” ಎಂದು ಎ. ಐತಪ್ಪನವರು ಸರಿಯಾಗಿಂುೆುೀ ಗುರುತಿಸಿದ್ದಾರೆ. (ಸಮರಸ 2003, ಪುಟ 163)

3. ಪೊಮ್ಮಾಲೆ ಕೊಡಗಿನ ಉಳಿವಿಗಾಗಿ

ಕೊಡಗಿನಲ್ಲಿ ಪ್ರತ್ಯೇಕತಾವಾದ

1992ರಲ್ಲಿ ಪ್ರತ್ಯೇಕತಾವಾದಿಗಳು ಕೊಡಗಿನಲ್ಲಿ ಲಿಬರೇಷನ್ ಆರ್ಮಿ ಓಫ್ ಕೂರ್ಗ್ ಎಂಬ ಸಂಘಟನೆಯೊಂದನ್ನು ರಚಿಸಿ ‘ಮೂಲ ನಿವಾಸಿಗಳಿಗೆ ಮಾತ್ರ ಕೊಡಗು – ವಲಸೆಗಾರರಿಗಲ್ಲ ’ ಎಂಬ ಘೋಷಣೆಯ ಮೂಲಕ ಬೀತಿಯ ವಾತಾವರಣವನ್ನು ಮೂಡಿಸಿ ಕೊಡಗು ಪ್ರತ್ಯೇಕ ರಾಜ್ಯವಾಗಬೇಕೆಂಬ ಚಳವಳಿ ಆರಂಬಿಸಿದರು. ಈ ಸಂಘಟನೆಯ ಪ್ರಕಾರ ಕನ್ನಡಿಗರು, ಮಲೆಯಾಳಿಗಳು ಮತ್ತು ತುಳುವರು ‘ಹೊರಗಿನವರು’. ಈ ಪ್ರತ್ಯೇಕತಾವಾದಿ ಗುಂಪಿನ ಘೋಷಣೆಯಿಂದಾಗಿ ‘ಹೊರಗಿನವರು’ ಆಗಾಗ ಹಲ್ಲೆಗೊಳಗಾಗಿ ಭಯದ ವಾತಾವರಣದಲ್ಲಿ ಬದುಕಬೇಕಾಯಿತು. 1970ರ ದಶಕದಲ್ಲಿ ಮುಂಬಯಿ ಮಹಾರಾಷ್ಟ್ರಿಗರಿಗೆ ಮಾತ್ರ ಎಂದು ಹೇಳಿ ಬಾಳಾ ಠಾಕ್ರೆ ಭಯೋತ್ಪಾದನೆಗೆ ಕಾರಣನಾಗಿದ್ದ. ಅಲ್ಲಿ ಕನ್ನಡಿಗರು ಮತ್ತು ತುಳುವರು ದುರ್ಭರ ದಿನಗಳನ್ನು ಕಳೆಯಬೇಕಾಗಿತ್ತು. ಅದೇ ಪರಿಸ್ಥಿತಿ ಕೊಡವ ಭಾಷೆಯಾಡದ ಮಂದಿಗಳಿಗೆ ಕೊಡಗಿನಲ್ಲಿ ಎದುರಾಯಿತು. ಲಿಬರೇಶನ್ ಆರ್ಮಿಯ ಭಯೋತ್ಪಾದನೆಗೆ ನೆರೆಯ ರಾಜ್ಯಗಳ ಭಯೋತ್ಪಾದಕ ಸಂಘಟನೆಗಳ ಸಹಾನುಭೂತಿ ದೊರಕಿತು. ಲಿಬರೇಶನ್ ಆರ್ಮಿಯು ಪ್ರತ್ಯೇಕ ಕೊಡಗು ರಾಜ್ಯದ ಬೇಡಿಕೆ ಮುಂದಿಟ್ಟಾಗ ತಮಿಳುನಾಡು ಕಾವೇರಿ ನದಿ ನೀರನ್ನು ಪೂರ್ತಿ ತಾನು ಬಳಸಿಕೊಳ್ಳ ಬಹುದೆಂದು ಲೆಕ್ಕಾಚಾರ ಹಾಕಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸಿತು. ಹೋರಾಟ ನಡೆಸಿ ಪ್ರತ್ಯೇಕ ರಾಜ್ಯ ಗಿಟ್ಟಿಸಿಕೊಂಡಿದ್ದ ಜಾರ್ಖಂಡಿನ ಶಿಬು ಸೊರೇನ್ ಪ್ರತ್ಯೇಕತಾವಾದಿಗಳಿಗೆ ಬೆಂಬಲ ಸಾರಿದ. ರಾಜಕೀಯ ಪಕ್ಷವೊಂದು ತನ್ನ ರಾಷ್ಟ್ರೀಯತಾವಾದವನ್ನು ಬದಿಗೊತ್ತಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸಿ ಬಿಟ್ಟಿತು. ಪ್ರತ್ಯೇಕತಾವಾದಿಗಳ ಬೇಡಿಕೆಯನ್ನು ಕೆಲವು ಪತ್ರಿಕೆಗಳು ಬೆಂಬಲಿಸಿದ್ದು, ಪ್ರಭುತ್ವವು ಪ್ರತ್ಯೇಕತಾವಾದಿಗಳ ಬಗ್ಗೆ ಮೃದು ಧೋರಣೆ ತಾಳಿದ್ದು ಪರಿಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿತು.

ಸ್ವಭಾವತಃ ಶಾಂತಿಪ್ರಿಯರಾದ ಕೊಡಗಿನ ಜನರಿಗೆ ಲಿಬರೇಶನ್ ಆರ್ಮಿಯ ನಿಜವಾದ ಉದ್ದೇಶವೇನು ಎನ್ನುವುದು ಅರ್ಥವಾದಾಗ ತೀರಾ ತಡವಾಗಿತ್ತು. ಅಲ್ಲಲ್ಲಿ ಹಲ್ಲೆ, ದೊಂಬಿ, ಆಸ್ತಿಪಾಸ್ತಿ ಹಾನಿಗಳು ಸಂಭವಿಸಿದವು. ಷಣ್ಮುಖಂ ಎಂಬ ರಾಜಕೀಯ ಕಾರ್ಯಕರ್ತನ ಕೊಲೆಯಾಯಿತು. ಲಿಬರೇಶನ್ ಆರ್ಮಿ ತನ್ನ ಹೆಸರನ್ನು ಕೊಡಗು ರಾಜ್ಯ ಮುಕ್ತಿ ಮೋರ್ಚಾ ಎಂದು ಬದಲಾಯಿಸಿಕೊಂಡಿತು. ಅದರ ಮುಂದಿನ ಬೆಳವಣಿಗೆಯನ್ನು ತಂಬಂಡ ವಿಜಯ ಪೂಣಚ್ಚ ಹೀಗೆ ದಾಖಲಿಸಿದ್ದಾರೆ : “ಕೊಡಗಿನ ಮೂಲನಿವಾಸಿಗಳ ವಕ್ತಾರ ಎಂದು ಕೊಡಗು ರಾಜ್ಯ ಮುಕ್ತಿ ಮೋರ್ಚಾವು ವಲಸೆಗಾರರ ವಿರುದ್ಧ ದಮನಕಾರಿ ಮಾರ್ಗಗಳನ್ನು, ಅವರನ್ನು ಭಯಬೀತರನ್ನಾಗಿಸುವ ಉದ್ದೇಶದಿಂದ ಮಾಡತೊಡಗಿತು. ‘ಕೊಡಗೇತರರು’ ಅವರಲ್ಲಿ ಮುಖ್ಯವಾಗಿ ಮಲೆಯಾಳಿಗಳು, ಅವರಲ್ಲೂ ‘ಮುಸ್ಲಿಮರು’, ಕನ್ನಡಿಗರು, ಕನ್ನಡ ಭಾಷೆ ಮಾತಾಡುವ ಗೌಡ, ಲಿಂಗಾಯಿತ ಮೊದಲಾದವರು ಇವರ ‘ವಲಸೆಗಾರ’ ವ್ಯಾಖ್ಯಾನದ ಕೆಳಗೆ ಬರುತ್ತಿದ್ದರು. 1956ರ ಹಿಂದೆ ಇದ್ದ ರಾಮರಾಜ್ಯವನ್ನು (?) ಮತ್ತೆ ಅನುಷ್ಠಾನಕ್ಕೆ ತರಬೇಕೆಂದು ಫ್ಯಾಸಿಸ್ಟರ ರೀತಿ ದಾದಾಗಿರಿ ಮಾಡುತ್ತಿದ್ದಾಗ ಕೊಡಗೇತರ ಮೂಲನಿವಾಸಿಗಳು ಪ್ರತಿಭಟಿಸಿದರು. ಕೊಡಗಿನ ಚರಿತ್ರೆಯಲ್ಲಿ ಪ್ರಥಮ ಬಾರಿಗೆ ಕೊಡಗು ಭಾಷೆ ಮಾತಾಡುವ ದುರ್ಬಲ ಸಮುದಾಯಗಳು ಪ್ರತ್ಯೇಕ ರಾಜ್ಯದ ಹೋರಾಟದ ವಿರುದ್ಧ ಕೊಡಗು ಮೂಲನಿವಾಸಿಗಳ ಸಂಘ ಎನ್ನುವ ಸಂಘಟನೆಯನ್ನು ರಚಿಸಿದವು. ಕೊಡಗು ಹೆಗ್ಗಡೆ ಸಮಾಜದ ಕೊಕ್ಕೆರ ಸುಬ್ಬಯ್ಯ, ಅಮ್ಮ ಕೊಡವ ಸಮಾಜದ ಎನ್.ಬಿ. ಕೃಷ್ಣ ಮತ್ತು ಐರಿ ಸಮಾಜದ ಕಾಮೆಯಂಡ ಮುತ್ತಣ್ಣ ಈ ಸಂಘಟನೆಯ ವಕ್ತಾರರಾಗಿದ್ದರು. 1996ರಲ್ಲಿ ಗೊಲ್ಲ, ಕೆಂಬಟ್ಟಿ ಮುಂತಾದ ಸಮುದಾಯಗಳು ಈ ಸಂಘವನ್ನು ಸೇರಿಕೊಂಡು – 1956ರ ಹಿಂದೆ ಇದ್ದದ್ದು ಕೊಡಗೇತರರ ಮೇಲಣ ದೌರ್ಜನ್ಯ. ಕೊಡಗಿನ ಬಲಾಢ್ಯ ಕೊಡವರನ್ನು ಬಿಟ್ಟರೆ ಉಳಿದವರಿಗೆ ಅದು ರಾಮರಾಜ್ಯವಾಗಿರಲಿಲ್ಲ. ಆದುದರಿಂದ ಪ್ರತ್ಯೇಕ ರಾಜ್ಯದಂತಹ ದಮನಕಾರಿ ಹೋರಾಟವನ್ನು ಬೆಂಬಲಿಸುವುದಿಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿದವು.” (ಸಮರಸ 2003, ಪು. 103)

ದೇವಿಪ್ರಸಾದರು ಯಾವತ್ತೂ ಂುೋಚಿಸದೆ ಯಾವುದಕ್ಕೂ ಕೈ ಹಾಕುವವರಲ್ಲ. ಅವರ ಅಧ್ಯಯನಗಳ ಪ್ರಕಾರ ಕೊಡಗು ರಾಜ್ಯ ಮುಕ್ತಿ ಮೋರ್ಚಾದ ಪ್ರತ್ಯೇಕತಾವಾದಿಗಳು ಕೊಡವ ಭಾಷೆಯನ್ನಾಡುವ 18 ಸಮುದಾಯಗಳ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲ್ತುದಿ ಯಲ್ಲಿದ್ದ ಭೂಮಾಲಿಕ ವರ್ಗಕ್ಕೆ ಸೇರಿದ್ದ ಕೊಡವ ಜಾತಿಯವರಲ್ಲಿ ಕೆಲವರಾಗಿದ್ದರು. ಅವರು ಹಿಂದೆ ಕೊಡಗನ್ನು ಆಳುತ್ತಿದ್ದ ಹಾಲೇರಿ ರಾಜರುಗಳಿಂದ ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆದವರು. 1834ರ ಬಳಿಕ ಕೊಡಗನ್ನು ಬ್ರಿಟಿಷರು ಆಳಿದರು. ಆಗಲೂ ಅತ್ಯಂತ ಹೆಚ್ಚು ಪ್ರಯೋಜನ ಪಡಕೊಂಡವರು ಅವರೇ. ಅವರಲ್ಲಿ ಕೆಲವೇ ಮಂದಿ ಹಿರಿಯರ ಮಾತಿಗೆ ಸೊಪ್ಪು ಹಾಕದೆ ಕೊಡಗನ್ನು ಕರ್ನಾಟಕದಿಂದ ಪ್ರತ್ಯೇಕಿಸಲು ಹೊರಟಿದ್ದರು. ಕೊಡಗು ಪ್ರತ್ಯೇಕ ರಾಜ್ಯವಾದರೆ ಅದರ ಸಂಪೂರ್ಣ ಪ್ರಯೋಜನ ಇದೊಂದೇ ಸಮುದಾಯಕ್ಕೆ ದಕ್ಕಿ ಬಿಡುವ ಅಪಾಯವಿತ್ತು. ಕೊಡವ ಆಡಳಿತ ಭಾಷೆಯಾದರೆ ಕನ್ನಡ, ಅರೆಭಾಷೆ, ತುಳು, ಮಲೆಯಾಳ ಮತ್ತು ಬುಡಕಟ್ಟು ಭಾಷಾ ವೈವಿಧ್ಯ ನಶಿಸಿ ಹೋಗುವ ಬೀತಿಯಿತ್ತು. ಊಳಿಗಮಾನ್ಯ ವ್ಯವಸ್ಥೆ ಜಾರಿಗೆ ಬಂದು ಪ್ರಜಾಸತ್ತಾತ್ಮಕ ಮೌಲ್ಯಗಳಾದ ಸಮಾನತೆ, ಸಹಿಷ್ಣುತೆ ಮತ್ತು ಜಾತ್ಯತೀತತೆ ನಿರ್ನಾಮವಾಗುವ ಭಯಾನಕ ವಾಸ್ತವತೆಗೆ ಕೊಡವೇತರರು ಮೂಕ ಸಾಕ್ಷಿಯಾಗಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕಕ್ಕೆ ಕಾವೇರಿಯ ಮೇಲಿನ ಹಕ್ಕೇ ಹೋಗಿ ಬಿಡುತ್ತಿತ್ತು.

ದೇವಿ ಪ್ರಸಾದರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿತ್ತು. ಅವರಿಗೆ “ಹುಟ್ಟುವಾಗ ನಮ್ಮ ಜಾತಿಯನ್ನು ಆರಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಬ್ರಾಹ್ಮಿನ್ ಬೈ ಮಿಸ್ಟೇಕ್” ಎಂದು ಬೀಚಿಯವರು ಹೇಳುತ್ತಿದ್ದುದು ನೆನಪಾಗುತ್ತಿತ್ತು. ದೇವಿಪ್ರಸಾದರು ಕೊಡವ ಜಾತಿಗೆ ಸೇರಿದವರಲ್ಲ. ಅವರು ಹುಟ್ಟಿದ ಸಂಪಾಜೆಯಲ್ಲಿ ದ.ಕ.ದ ಸಂಸ್ಕೃತಿಯಿದ್ದರೂ ಅದು ಕೊಡಗಿನ ಭಾಗವಾಗಿ ಹೋಗಿತ್ತು. ಪ್ರತ್ಯೇಕತಾವಾದಿಗಳ ಪ್ರಕಾರ ದೇವಿಪ್ರಸಾದರು ಹೊರಗಿನವರು. ಕೊಡಗು ಪ್ರತ್ಯೇಕ ರಾಜ್ಯವಾದರೆ ವಲಸೆಗಾರ ದೇವಿಪ್ರಸಾದರು ಬೇರೆಲ್ಲಿಗಾದರೂ ತನ್ನ ಸಂಸಾರ ಸಮೇತ ವಲಸೆ ಹೋಗಬೇಕಾಗುತ್ತದೆ!

ಪ್ರಜಾವೇದಿಕೆಯ ಉದಯ

ಪ್ರತ್ಯೇಕತಾವಾದಿಗಳ ವಿರುದ್ಧ ಮೊದಲ ಪ್ರಬಲ ಪ್ರತಿಭಟನೆ ಆರಂಭವಾದದ್ದು ದೇವಿಪ್ರಸಾದರ ಸಂಪಾಜೆಯ ಕೊಡಗು ಕನ್ನಡಿಗರು ಸಂಘಟನೆಯ ನೇತೃತ್ವದಲ್ಲಿ. ಕೊಡಗು ಮೂಲನಿವಾಸಿಗಳ ಸಂಘಟನೆ, ಕೊಕ್ಕರ ಸುಬ್ಬಯ್ಯ, ಕಾಮೆಯಂಡ ಮುತ್ತಣ್ಣ, ಎನ್.ಬಿ. ಕೃಷ್ಣ, ಕೆ.ಟಿ. ಸುಬ್ಬಯ್ಯ, ಅ.ಸು. ಬೋಪಣ್ಣ ಮುಂತಾದ ಮುಖಂಡರು ತಮ್ಮ ಸಮುದಾಯಗಳನ್ನು ಜತೆಗೂಡಿಸಿ ಪ್ರತ್ಯೇಕತಾವಾದಿಗಳ ವಿರುದ್ಧ ಪ್ರಬಲವಾದ ಜನಾಬಿಪ್ರಾಯವನ್ನು ರೂಪಿಸುವಲ್ಲಿ ಸಫಲರಾದರು. ಅದರ ಪರಿಣಾಮವಾಗಿ ಕೊಡಗು ಪ್ರಜಾವೇದಿಕೆ ರೂಪುಗೊಂಡಿತು. ಅದರ ಮುಂಚೂಣಿಯಲ್ಲಿ ದೇವಿಪ್ರಸಾದ್, ವಿಜಯೇಂದ್ರ ವಿದ್ಯಾಧರ, ತಂಬಂಡ ವಿಜಯ, ಈಶ್ವರ ಚಂದ್ರ, ಕೆ.ಟಿ. ಪೂವಯ್ಯ, ಎ.ಆರ್. ಫಾಲಾಕ್ಷ, ಬಾಲಕೃಷ್ಣ ಕಾಜೂರು, ಡಿ.ಸಿ. ಜಯರಾಮ, ಗೋಪಾಲ ಚೌಡ್ಲು, ವಿ.ಪಿ. ಶಶಿಧರ್, ವಿ.ಎಸ್. ರಾಮಕೃಷ್ಣ, ಬಿ.ಇ. ಶೇಷಾದ್ರಿ, ಜಿ.ಎಚ್. ಹನೀಫ್ ಮುಂತಾದವರಿದ್ದರು.

ಕೊಡಗು ಪ್ರಜಾವೇದಿಕೆಯು ಎಲ್ಲಾ ಜಾತಿಧರ್ಮಗಳ ಜನರ ಪ್ರಾತಿನಿದಿಕ ಸಂಘಟನೆಯಾದರೂ ಪ್ರತ್ಯೇಕತಾವಾದಿಗಳು ಅದನ್ನು ಗೌಡರ ಸಂಘಟನೆಯೆಂಂದು ಅಪಪ್ರಚಾರ ಮಾಡಿದರು. 1837ರ ಅಮರ ಸುಳ್ಯದ ಸ್ವಾತಂತ್ರ ್ಯ ಸಮರವನ್ನು ಕೂಡಾ ಬ್ರಿಟಿಷರು ಗೌಡರ ಮೇಲ್ಬೀಳುವಿಕೆ ಎಂದು ಕರೆದಿದ್ದರು! ಪ್ರತ್ಯೇಕತಾವಾದಿಗಳ ಒಡೆದು ಆಳುವ ಸಾಮೋಪಾಯಕ್ಕೆ ಉತ್ತರವಾಗಿ ಬ್ರಿಟಿಷರು ಕೊಡಗು ಬಿಟ್ಟು ಹೋಗುವಾಗ ಕಣ್ಣೀರು ಸುರಿಸಿದ ಜನರು ಈಗ ಪ್ರತ್ಯೇಕ ರಾಜ್ಯ ಕೇಳುತ್ತಿದ್ದಾರೆ ಎಂದು 1999ರ ಮಡಿಕೇರಿ ರ್ಯಾಲಿಯಲ್ಲಿ ಹೇಳಿದರು. ಅವರು ಸಂಪಾಜೆಯಲ್ಲಿ ಪ್ರತ್ಯೇಕತಾವಾದಿಗಳ ವಿರುದ್ಧ ಹೋರಾಟ ಸಂಘಟಿಸಿದಾಗ ಪ್ರತ್ಯೇಕತಾ ಪರ ಶಕ್ತಿಗಳು ಅವರ ವಿರುದ್ಧ ಅನಗತ್ಯ ಕೇಸು ದಾಖಲಿಸಿ ಅವರಿಗೆ ಮಾನಸಿಕ ಹಿಂಸೆ ನೀಡಿದ್ದರು. ಆ ದಿನಗಳಲ್ಲಿ ದೇವಿಪ್ರಸಾದರ ಜೀವಕ್ಕೆ ಅಪಾಯವಿತ್ತು. ಅಂತಹ ದಿನಗಳಲ್ಲಿ ಕನ್ನಡಪರ ಶಕ್ತಿಗಳಾದ ಎಂ. ಚಿದಾನಂದ ಮೂರ್ತಿ, ಎಲ್.ಎಸ್. ಶೇಷಗಿರಿ ರಾವ್, ಗೊ.ರು. ಚೆನ್ನಬಸಪ್ಪ – ಮುಂತಾದವರು ಕೊಡಗು ಪ್ರಜಾವೇದಿಕೆಯ ಪರ ನಿಂತರು. ಅಖಂಡ ಕರ್ನಾಟಕವನ್ನು ತಮ್ಮ ವೈಯಕ್ತಿಕ ಹಿತಕ್ಕಾಗಿ ಒಡೆಯ ಹೊರಟ ಪ್ರತ್ಯೇಕತಾವಾದಿಗಳನ್ನು ಎಲ್ಲಾ ವೇದಿಕೆಗಳಿಂದ ವಿರೋದಿಸಿದರು.

ದೇವಿಪ್ರಸಾದರು ವಿರೋಧಕ್ಕಾಗಿ ವಿರೋಧ ಮಾಡುವ ಸ್ವಭಾವದವರಲ್ಲ. ಅವರು ಪ್ರತ್ಯೇಕತಾವಾದಿಗಳ ಎಲ್ಲಾ ಆಪಾದನೆಗಳನ್ನು ಸಾಕ್ಷ್ಯ್ಯಧಾರ ಸಹಿತ ತಳ್ಳಿ ಹಾಕಿದರು. ಕೊಡಗು ಎಲ್ಲರಿಗೂ ಸೇರಿದ್ದು ಎಂಬ ವಾದಕ್ಕೆ ಸಮರ್ಥನೆಯಾಗಿ ಅವರು ರಿಕ್ತರನ ಗಜೆಟಿಯರಿನಲ್ಲಿದ್ದ ಉಲ್ಲೇಖಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಗೊಳಿಸಿದರು. ಅದರ ಕೆಲವು ಸಾಲುಗಳು ಹೀಗಿವೆ : “ಕೊಡಗಿನ ರಾಜರು ಲಿಂಗಾಯಿತರಾಗಿದ್ದುದರಿಂದ ಅವರು ದೇಶದ ಸಂಬಂಧ ವನ್ನು ಹೊಂದಿದವರಾಗಿದ್ದರು. ಕೊಡಗರು ಅವರದ್ದೇ ಆದ ವರಟು ಸ್ವರೂಪದ ದೈವಗಳನ್ನೂ, ಪೂರ್ವಜರನ್ನೂ ಪೂಜಿಸುತ್ತಿದ್ದು ಅವರು ಶಿವಾಚಾರಿಗಳೊಂದಿಗೆ ಬೆರೆಯುತ್ತಿರಲಿಲ್ಲ. ಕೊಡಗಿನ ಈಶಾನ್ಯ ಭಾಗದಲ್ಲಿರುವ ಜನರು ಮೈಸೂರಿನವರೊಡನೆ ಹೋಲಿಕೆಯಲ್ಲಿ ಒಂದಾಗಿ ಕಾಣುತ್ತಾರೆ ಮತ್ತು ರಾಜನ ಪ್ರಭಾವ ಸಹಜವಾಗಿ ಅವರಲ್ಲಿ ಅತ್ಯದಿಕವಾಗಿದೆ. ಅಲ್ಲದೆ ಪಾಡಿನಾಲ್ಕು ನಾಡಿನಲ್ಲಿ ಮಲೆಯಾಳಿ ಮೂಲವು ವಿಶೇಷವಾಗಿ ಕಾಣಿಸುತ್ತದೆ. ಹಾಗೆ ತಾವು ನಾಡು, ಬೇಂಗು ನಾಡು ಹಾಗೂ ಸೂರ್ಲಬಿ ಮುತ್ತು ನಾಡುಗಳಲ್ಲಿ ತುಳುಗೌಡರ ಮತ್ತು ಬಂಟರ ಪ್ರಭಾವ ಅನುಭವಕ್ಕೆ ಬರುತ್ತದೆ. ಕೊಡಗರು ಮಿಶ್ರ ಜನಾಂಗ ಎನ್ನುವುದಕ್ಕೆ ಇನ್ನೂ ಹೆಚ್ಚಿನ ಆಧಾರ ಬೇಕೆನ್ನುವುದಾದರೆ, ಅವರ ಮುಖ ಲಕ್ಷಣದ ವ್ಯತ್ಯಾಸ ಕಾಕೇಸಿಯನ್ ಮತ್ತು ಮಂಗೋಲಿಯನರ ನಡುವೆ ಇರುವಷ್ಟು ಹಾಗೂ ಮೈಬಣ್ಣದ ವ್ಯತ್ಯಾಸ ಬೆಳ್ಳಗೆ ಅಥವಾ ಕಪ್ಪಗೆ. ಕೊಡಗರ ಮನೆತನದ ಹೆಸರುಗಳು ಮೈಸೂರು ತಮಿಳು, ಮಲೆಯಾಳಿ ಅಥವಾ ತುಳು ಮೂಲಗಳನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ಕೊಡಗು ಜನಾಂಗಕ್ಕೆ ಅಪರಿಚಿತರನ್ನು ಆಹ್ವಾನಿಸಿ ಸೇರಿಸಿಕೊಳ್ಳುವುದನ್ನು ಈಗಿನ ತಲೆಮಾರಿನ ಜನರು ನೆನಪಿಸಿಕೊಳ್ಳುತ್ತಾರೆ.” (ಕೊಡಗಿನಲ್ಲಿ ಭಾಷಾ ಸಾಂಸ್ಕೃತಿಕ ಸಾಮರಸ್ಯ 2003, ಪುಟ 21.)

ಕೊಡಗಿನಲ್ಲಿ ಕೊಡವರು ಎಂದಿಗೂ ಬಹುಸಂಖ್ಯಾತರಾಗಿರಲಿಲ್ಲವೆನ್ನುವುದನ್ನು ಅಂಕಿಅಂಶಗಳ ಮೂಲಕ ದೇವಿಪ್ರಸಾದ್ ತೋರಿಸಿಕೊಟ್ಟರು. ಡಬ್ಲುಡಬ್ಲು. ಹಂಟರ್ನ ಇಂಪಿರಿಯಲ್ ಗಜೆಟಿಯರ್ ಓಫ್ ಇಂಡಿಯಾದ ಪ್ರಕಾರ 1881ರ ಜನಗಣತಿಯಲ್ಲಿ ಕೊಡಗಿನ ಒಟ್ಟು ಜನಸಂಖ್ಯೆಯಲ್ಲಿ ಕೊಡವರ ಪ್ರಮಾಣ ಶೇ. 15.2 ಮಾತ್ರ. 1981ರ ಜನಗಣಿಯಲ್ಲಿ ಕೊಡವರ ಪ್ರಮಾಣ ಶೇ. 7.7. ಮಲೆಯಾಳಿಗಳ ಪ್ರಮಾಣ, ಶೇ. 22.6 ಮತ್ತು ಕನ್ನಡಿಗರ ಪ್ರಮಾಣ ಶೇ. 35.8. ಉಳಿದವರು ತುಳು, ತಮಿಳು, ಉರ್ದು, ತೆಲುಗು, ಕೊಂಕಣಿ ಮಾತಾಡುವವರು. 1991ರ ಜನಗಣತಿಯ ಪ್ರಕಾರ ಕನ್ನಡಿಗರ ಪ್ರಮಾಣ ಶೇ. 37.8, ಮಲೆಯಾಳಿಗಳಿದ್ದು ಶೇ. 23.3 ಮತ್ತು ಕೊಡವರದು ಶೇ. 16.3. ಕನ್ನಡದೊಂದಿಗೆ ಅರೆಭಾಷೆ, ಹವ್ಯಕ ಮತ್ತು ಕುರುಬ ಕನ್ನಡದ ಸೇರ್ಪಡೆಯಾಗಿದೆ. ಕೊಡವ ಭಾಷೆ ಆಡುವವರಲ್ಲಿ ಭೂ ಮಾಲಿಕ ಕೊಡವರಲ್ಲದೆ ಇತರ 17 ಸಮುದಾಯಗಳಿಗೆ ಸೇರಿದವರಿದ್ದಾರೆ. ಈ ಅಂಕಿ-ಅಂಶಗಳನ್ನು 1995ರಲ್ಲಿ ಪ್ರಕಟವಾದ ‘ಕೊಡಗಿನಲ್ಲಿ ಜಾತೀಯತೆ’ ಕೃತಿಯಲ್ಲಿ ಪ್ರಕಟಿಸಿ ಕೊಡಗು ಕೊಡವರದ್ದು ಎಂಬ ಭ್ರಮೆಯನ್ನು ಕಳಚುವಲ್ಲಿ ದೇವಿಪ್ರಸಾದರು ಸಫಲರಾದರು (ನೋಡಿ : ಅನುಬಂಧ 1 ಮತ್ತು 2).

ಕೊಡಗಿನಲ್ಲಿ ಕೊಡವರ ಪ್ರಮಾಣ ಕೇವಲ ಶೇ. 16 ರಷ್ಟಿದ್ದು ಉಳಿದ ಶೇ. 84ರಷ್ಟು ಜನರು ಅನ್ಯ ಭಾಷಿಕರು. ಇದಕ್ಕೆ ದೇವಿಪ್ರಸಾದರು ಕಾರಣ ಕೊಡುತ್ತಾರೆ. “ಕೊಡಗರು ದಟ್ಟವಾಗಿರುವ ದಕ್ಷಿಣ ಕೊಡಗಿನಲ್ಲಿ ನಾಗರಿಕತೆಯ ಪ್ರವೇಶವಾದದ್ದು ಹೆಚ್ಚೆಂದರೆ 250 ವರ್ಷಗಳ ಹಿಂದೆ. ಇಂದಿನ ಕೊಡವ ಭಾಷೆ ಹುಟ್ಟಿಕೊಂಡದ್ದು ಮಲೆಯಾಳದ ಪ್ರಭಾವದಿಂದ. ಕೊಡವರ ಬಹುತೇಕ ದೈವಗಳು ವೈನಾಡು ಪ್ರದೇಶದಿಂದ ಬಂದವು. ಆಗಿನ್ನೂ ಕೊಡಗು ಒಂದೇ ಆಡಳಿತ ಘಟಕವಾಗಿ ರೂಪುಗೊಂಡಿರಲಿಲ್ಲ. ಗಡಿಗಳೇ ಇರದಿದ್ದ ಕಾಲದಲ್ಲಿ ನಡೆದ ಸಹಜ ವಲಸೆ ಪ್ರಕ್ರಿಯೆಯಲ್ಲಿ ಕೊಡಗಿನಲ್ಲಿ ಬಂದು ನೆಲಸಿದವರು ಹೊರಗಿನವರು ಆಗುವುದು ಹೇಗೆ? ಇಂದಿನ ಭಾಗಮಂಡಲ ಪ್ರದೇಶ ಕೂಡಾ ಮಲೆಯಾಳಿ ಅರಸರ ಕೈಯಲ್ಲಿತ್ತು. ಅಲ್ಲಿ ಸುಮಾರು ಹದಿಮೂರನೆ ಶತಮಾನದಲ್ಲೇ ಗೌಡರು ಬಂದು ನೆಲೆಸಿದ್ದರು. ಅವರನ್ನು ವಲಸಿಗರೆನ್ನುವುದು ಸರಿಯೇ? ಇನ್ನು ಸೋಮವಾರ ಪೇಟೆ – ಶನಿವಾರ ಸಂತೆಗಳಲ್ಲಿ ಕ್ರಿ.ಪೂ. ಯುಗದ ಪಳೆಯುಳಿಕೆಗಳಿವೆ. ಅಲ್ಲಿರುವ ಲಿಂಗಾಯತ – ಗೌಡ ಸಮುದಾಯ ದವರು ಹೇಗೆ ಹೊರಗಿನವರಾಗುತ್ತಾರೆ? ಹಿಂದೆ ಟಿಪ್ಪುವಿನ ಕಾಲದಲ್ಲಿ ಮುಸ್ಲಿಮರಾದ ಕೊಡವರು 1892ರಲ್ಲಿ ಶ್ರೀ ರಂಗ ಪಟ್ಟಣದಿಂದ ವಾಪಾಸು ಬಂದಾಗ ಅವರನ್ನು ಕೊಡವ ಜಾತಿಗೆ ಸೇರಿಸುವ ಮಾನವೀಯತೆಯನ್ನು ತೋರುತ್ತಿದ್ದರೆ ಕೊಡಗಿನಲ್ಲಿ ಹಿಂದೂ-ಮುಸ್ಲಿಂ ಕೋಮು ಗಲಭೆಗಳು ಸಂಭವಿಸುತ್ತಿರಲಿಲ್ಲ. ಹೀಗಿದ್ದೂ ಕೊಡವ ಭಾಷೆಯನ್ನಾಡದ ಕೊಡಗಿನವರನ್ನು ವಲಸೆಗಾರರು ಎಂದು ಕರೆಯುವುದಾದರೆ ತಮ್ಮ ಆಸ್ತಿ ಪಾಸ್ತಿಗಳನ್ನು ಮಾರಾಟ ಮಾಡಿ ಮೈಸೂರು, ಬೆಂಗಳೂರುಗಳಲ್ಲಿ ನೆಲೆಸಿದ ಕೊಡವರನ್ನು ಏನೆಂದು ಕರೆಯಬೇಕು?” ಕೊಡಗು ಪ್ರಜಾವೇದಿಕೆಯ ಈ ಪ್ರಶ್ನೆಗಳಿಗೆ ಪ್ರತ್ಯೇಕತಾವಾದಿಗಳಲ್ಲಿ ಉತ್ತರವೇ ಇರಲಿಲ್ಲ.

ಕೊಡಗು ಹಿಂದೆ ಜಾತ್ಯತೀತವಾಗಿತ್ತು. ಮುಂದೆಯೂ ಹಾಗಿರಬೇಕು ಎನ್ನುವುದನ್ನು ದೇವಿಪ್ರಸಾದರ ಈ ಮಾತುಗಳು ಬಿಂಬಿಸುತ್ತವೆ : “1773ರ ಹಿಂದಿನ ಕೊಡಗು ಮಲೆನಾಡಿಗೆ ಹೊಂದಿಕೊಂಡಿದ್ದು ಕನ್ನಡ ಪ್ರದೇಶಕ್ಕೆ ಸೇರಿದ್ದಾಗಿತ್ತು. ಅನಂತರ ಕೋಟೆಯಂಗಡಿ ಅರಸನಿಂದ ಪಡೆದದ್ದು ಮಲೆಯಾಳಿ ಪ್ರದೇಶ. ಉತ್ತರದ ಕಡೆಯಿಂದ ಕನ್ನಡ ಸಂಸ್ಕೃತಿ, ದಕ್ಷಿಣದ ಕಡೆಯಿಂದ ಮಲೆಯಾಳ ಸಂಸ್ಕೃತಿ, ಪೂರ್ವದಿಂದ ಬಯಲು ಸೀಮೆ, ಪಶ್ಚಿಮದಿಂದ ಕರಾವಳಿ. ಮೂರು ಮೂಲ ಬಣ್ಣಗಳು ಸರಿಸಮ ಸೇರಿ ಕಿತ್ತಳೆ, ಹಸಿರು, ನೇರಳೆ, ಗುಲಾಬಿಗಳಂತಹ ಆಕರ್ಷಕ ಮಿಶ್ರ ಬಣ್ಣಗಳು ಹೇಗೆ ಹುಟ್ಟಿಕೊಳ್ಳುತ್ತವೆಂುೋ ಹಾಗೆ ಕೊಡಗಿನಲ್ಲಿ ಹಲವು ಸಂಸ್ಕೃತಿಗಳು ಸಮ್ಮಿಲನವಾಗಿವೆ. ಮೂಲನಿವಾಸಿ ದ್ರಾವಿಡರ ಕಪ್ಪು, ಆರ್ಯರ ಬಿಳಿ, ಬ್ರಿಟಿಷರ ಕೆಂಪು-ಹೀಗೆ ಎಲ್ಲಾ ರೀತಿಯಿಂದ ಕೊಡಗು ವರ್ಣರಂಜಿತ ವಾಗಿದೆ.” (ಕೊಡಗಿನಲ್ಲಿ ಭಾಷಾ ಸಾಮರಸ್ಯ 2003, ಪು. 4)

ಪ್ರತ್ಯೇಕತಾವಾದಿಗಳಿಗೆ ಸರಕಾರದ ಆಯಕಟ್ಟಿನಲ್ಲಿರುವ ಕೆಲವು ರಾಜಕಾರಣಿಗಳು ಮತ್ತು ಅದಿಕಾರಿಗಳು ಗುಪ್ತವಾಗಿ ಸಹಾಯ ಮಾಡದಿರುತ್ತಿದ್ದರೆ ಅವರು ಕೊಡಗಿನ ಶಾಂತಿ ಕದಡಲು ಸಾಧ್ಯವಿರಲಿಲ್ಲ. ಕೊಡಗಿನಲ್ಲಿ ಕೊಡವ ಭಾಷೆಯನ್ನಾಡುವ 18 ಸಮುದಾಯ ಗಳಿವೆ. ಕೊಡಗಿನ ಬಹುತೇಕ ಅರೆಭಾಷಿಕರು, ತುಳುವರು ಮತ್ತು ಮಲೆಯಾಳಿಗಳು ಕೊಡವ ಭಾಷೆಯನ್ನು ಚೆನ್ನಾಗಿ ಆಡಬಲ್ಲವರು. ಆದರೆ ಸರಕಾರ ದೂರದರ್ಶಿತ್ವದ ಕೊರತೆಯಿಂದ ಕೇವಲ ಭೂಮಾಲಿಕ ಕೊಡವ ಜಾತಿಯವರನ್ನು ಮಾತ್ರ ಕೊಡಗು ಸಾಹಿತ್ಯ ಅಕಾಡೆಮಿಯ ಸದಸ್ಯರನ್ನಾಗಿ ನೇಮಿಸಿತು. ಎರಡನೆ ಬಾರಿಗೂ ಅದೇ ತಪ್ಪನ್ನು ಸರಕಾರ ಕಾಣದ ಕೈಗಳ ಹಿತ ಕಾಪಾಡಲು ಮಾಡಿಬಿಟ್ಟಿತ್ತು. ಸಮಸ್ತ ಕೊಡಗರ ಸಾಂಸ್ಕೃತಿಕ ಪ್ರತಿನಿಧಿಯಾಗಬೇಕಿದ್ದ ಸಂಘಟನೆಯೊಂದು ಒಂದೇ ಜಾತಿಯ ಜನರ ಸೊತ್ತಾಯಿತು. ಕೆಲವು ಹೆಗ್ಗಣಗಳು ಬಿಲ ತೋಡಿದವು. ಸರಕಾರದ ಅನುದಾನದಲ್ಲಿ ಕಲೆ ಸಂಸ್ಕೃತಿ ಉಳಿಸುವ ಸಾಹಿತ್ಯ ಬೆಳೆಸುವ ಕೆಲಸಗಳಾಗಲಿಲ್ಲ. ಕೊಡಗು ಪ್ರಜಾವೇದಿಕೆ ಈ ವಿಷಯವನ್ನು ಸರಕಾರದ ಗಮನಕ್ಕೆ ತಂದ ಮೇಲೆ ಪರಿಸ್ಥಿತಿ ಬದಲಾಯಿತು. ಕೊಡವ ಜಾತಿಗೆ ಸೇರದ ಕೊಡಗರೂ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಲು ಸಾಧ್ಯವಾಯಿತು.

ಕೊಡಗು ಇಂದು ಕರ್ನಾಟಕದ ಭಾಗವಾಗಿ ಉಳಿದಿದ್ದರೆ ಅದಕ್ಕೆ ಪ್ರಜಾವೇದಿಕೆ ಕಾರಣವಾಗಿದೆ. ತಂಬಂಡ ವಿಜಯ ಇದನ್ನು ಸಮರ್ಥಿಸಿಕೊಳ್ಳುವುದು ಹೀಗೆ : “ಕೊಡಗು ಪ್ರಜಾವೇದಿಕೆಗೆ ದೇವಿಪ್ರಸಾದ್ ಅವರಂಥ ನಾಯಕರು 1997ರ ಸಂಕ್ರಮಣ ಕಾಲದಲ್ಲಿ ದೊರಕದಿರುತ್ತಿದ್ದರೆ ವೇದಿಕೆ ಕೂಡಾ ಕೊಡಗು ರಾಜ್ಯ ಮುಕ್ತಿ ಮೋರ್ಚಾದ ಇನ್ನೊಂದು ಮುಖವಾಗುತ್ತಿತ್ತು. ಜೀವನದ ಅನುಭವ, ದೂರದರ್ಶಿತ್ವ, ಜಾತ್ಯತೀತ ಮನೋಭಾವ ಮತ್ತು ಅವೆಲ್ಲವುಗಳಿಗಿಂತ ಹೆಚ್ಚಾಗಿ ಸಂಘಟನೆಯಲ್ಲಿ ಪ್ರಜಾಸತ್ತಾತ್ಮಕ ಅಂಶಗಳನ್ನು ಅಳವಡಿಸಿಕೊಂಡ ಗುಣಗಳು ಪ್ರಜಾವೇದಿಕೆಯನ್ನು ಉಳಿಸಿದವು. ಹಾಗಲ್ಲದಿದ್ದರೆ ಕೊಡಗು ರಾಜ್ಯ ಮುಕ್ತಿ ಮೋರ್ಚಾದ ರೀತಿಯಲ್ಲಿ ಏಕವ್ಯಕ್ತಿ ಕೇಂದ್ರಿತವಾಗಿ ಕುಸಿದು ಬೀಳುತ್ತಿತ್ತು.” (ಸಮರಸ 2003, ಪು. 108)

ಪ್ರಜಾವೇದಿಕೆಯ ಅಧ್ಯಕ್ಷರಾಗಿ ಕೊಡಗಿನ ಉಳಿವಿಗಾಗಿ ದೇವಿಪ್ರಸಾದರು ಹೋರಾಟ ನಡೆಸುವಾಗ ಅವರಿಗೆ ಜೀವ ಬೆದರಿಕೆ ಒಡ್ಡಿದ್ದಲ್ಲದೆ ಅವರ ವಿರುದ್ಧ ಕಾರಣಗಳೇ ಇಲ್ಲದೆ ಪೊಲೀಸು ಕೇಸು ದಾಖಲಿಸಲಾಯಿತು. ಜಾತ್ಯತೀತವಾಗಿದ್ದ ಪ್ರಜಾವೇದಿಕೆಯನ್ನು ಗೌಡರುಗಳ ಸಂಘಟನೆ ಎಂದು ಅಪಪ್ರಚಾರ ಮಾಡಲಾಯಿತು. 1837ರ ರೈತ ಕ್ರಾಂತಿಯನ್ನು ರಿಕ್ತರ್ ಗೌಡರ ಮೇಲ್ಬೀಳುವಿಕೆ ಎಂದು ಕರೆದಿದ್ದ! ಕೊನೆಯ ಪ್ರಯತ್ನವಾಗಿ ಪ್ರತ್ಯೇಕತಾವಾದಿಗಳು ದೇವಿಪ್ರಸಾದರನ್ನು ಭೇಟಿಯಾಗಿ – ಕೊಡಗಿನ ಬಹುಸಂಖ್ಯಾತರು ಗೌಡರು. ಕೊಡಗು ರಾಜ್ಯವಾದರೆ ನಿಮ್ಮನ್ನೇ ಮೊದಲ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದರು. ಯಾವ ಆಮಿಷಕ್ಕೂ ದೇವಿಪ್ರಸಾದರು ಜಗ್ಗಲಿಲ್ಲ.

ದೇವಿಪ್ರಸಾದರ ಬಗ್ಗೆ ತಂಬಂಡ ವಿಜಯರ ಅಬಿಪ್ರಾಯ ಹೀಗಿದೆ : “ಸಾಹಿತಿಯಾಗಿ, ಕಲಾವಿದರಾಗಿ, ನಾಟಕಕಾರರಾಗಿ ಹಾಗೂ ಜನಪರ ಸಂಘಟನೆಗಳಲ್ಲಿ ತೊಡಗಿಕೊಂಡ ಕಾರ್ಯಕರ್ತರಾಗಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡ ದೇವಿಪ್ರಸಾದ್ ಅವರನ್ನು ಸೀಮಿತ ದೃಷ್ಟಿಯಲ್ಲಿ, ಸೀಮಿತ ಅವದಿಯಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಒಂದು ವಿಚಾರವಂತೂ ಸ್ಪಷ್ಟ. ಶತಮಾನಗಳಿಂದ ಕೊಡಗಿನಲ್ಲಿ ಕಂಡುಬಂದ ಬಲಾಢ್ಯ ಜಾತಿಗಳ ಅಟ್ಟಹಾಸಕ್ಕೆ, ದೌರ್ಜನ್ಯಕ್ಕೆ ಒಂದು ವಿರಾಮವೇನಾದರೂ ಈಗ ಬಂದಿದ್ದರೆ ಅದಕ್ಕೆ ದೇವಿಪ್ರಸಾದರಂತಹ ಮಾನವೀಯ ಕಾಳಜಿಯ ವ್ಯಕ್ತಿಗಳ ಪ್ರತಿಭಟನೆ ಮುಖ್ಯ ಕಾರಣ ಎಂದು ಹೇಳಲು ನನಗೆ ಸಂಕೋಚವಿಲ್ಲ. ಅವರು ಮನಸ್ಸು ಮಾಡಿದ್ದರೆ, ಅಂತಹ ಶಕ್ತಿಗಳ ಜೊತೆಗೆ ರಾಜಿ ಮಾಡಿಕೊಂಡು ರಾಜಕೀಯವಾಗಿ ಬಹಳ ಪ್ರಭಾವಿಯಾದ ಸ್ಥಾನಗಳನ್ನು ಪಡೆಯಬಹುದಿತ್ತು. ಅಂತಹ ರಾಜಿ ರಹಿತವಾದ ಸಾರ್ವಜನಿಕ ಜೀವನವನ್ನು ಮಾಡಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅದಕ್ಕೆ ಕೆಚ್ಚೆದೆ ಬೇಕು; ಹಟ ಬೇಕು. ತಾತ್ಕಾಲಿಕ ಆಸೆ ಆಮಿಷಗಳಿಗೆ ಬಲಿಯಾಗದೆ ತಾನು ಹೇಳಿದ ರೀತಿ ಬದುಕುವಂತಿರಬೇಕು. ಈ ಕಾರಣಕ್ಕಾಗಿಯೇ ದೇವಿಪ್ರಸಾದ್ ಅವರು ನನಗೆ ಇಷ್ಟವಾದ ಹಿರಿಯ ಗೆಳೆಯರಾಗಿರುವುದು, ಸಂಶೋಧಕ ಮಿತ್ರರಾಗಿರುವುದು ಹಾಗೆಂುೆುೀ ಸಂಘಟನೆಯ ವಿಚಾರದಲ್ಲಿ ಸಮಾನ ಮನಸ್ಕರಾಗಿರುವುದು”. (ಸಮರಸ 2003, ಪುಟ 109).

ಕರ್ನಾಟಕ ಅಖಂಡತೆಗೆ ಹೋರಾಟ

l 1974ರ ನವೆಂಬರ್ ರಾಜ್ಯೋತ್ಸವಕ್ಕೆ ಬೀಚಿ ಬಂದಿದ್ದಾಗ ಕೊಡವರಿಗೆ ಇದು ಬ್ಲಾಕ್ ಡೇ. ಜನರಲ್ ಕಾರ್ಯಪ್ಪ ಇದರ ಪ್ರಮುಖ ರೂವಾರಿ ಎಂದು ಗೊತ್ತಾಯಿತು.

l 1991ರಲ್ಲಿ ಮಾತಾಂಡ ಮೊಣ್ಣಪ್ಪ ಕೊಡಗು ಏಕೀಕರಣ ರಂಗ ಸ್ಥಾಪಿಸಿ ಸಂಪಾಜೆಗೆ ಬಂದು ನನ್ನ ಸಹಕಾರ ಕೇಳಿದಾಗ ಪ್ರತ್ಯೇಕ ರಾಜ್ಯದ ಬೇಡಿಕೆ ಪ್ರಥಮ ಕೇಳಿ ಬಂತು. ಏಕೀಕರಣದ ಹೆಸರಿನ ಸಂಸ್ಥೆ ಕರ್ನಾಟಕದ ವಿಕೇಂದ್ರಿಕರಣಕ್ಕೆ ಹೊರಟದ್ದು ಸರಿಯಲ್ಲವೆಂದು ಹೇಳಿದೆ.

l 1993ರಲ್ಲಿ Liberation warriers of Kodagu ಲಿವಾಕ್ ಎಂಬ ಹೆಸರಲ್ಲಿ ಎಲ್.ಟಿ.ಟಿ.ಇ. ಮಾದರಿಯ ಬದಲಾವಣೆ ಮಾಡಿಕೊಂಡಿತು.

l 1994ರಲ್ಲಿ ಕೊಡಗು ರಾಜ್ಯ ಮುಕ್ತಿ ಮೋರ್ಚಾ ಎಂಬುದಾಗಿ ಮತ್ತೆ ಹೆಸರು ಬದಲಿಸಿಕೊಂಡು K.R.M.M. ಪ್ರಸಿದ್ಧಿ ಪಡೆಯಲು ಆಗ ಮಂತ್ರಿಯಾಗಿದ್ದ ಎಂ.ಸಿ. ನಾಣಯ್ಯ ಪ್ರೋತ್ಸಾಹ ಕಾರಣ.

l 1995ರಲ್ಲಿ ಕೊಡಗು ಕನ್ನಡಿಗ ಎಂಬ ಸಂಘಟನೆ ಮೂಲಕ ವಿರೋಧ ಪ್ರಕಟ ಮಾಡಿದೆ. ಸಮಾನ ಮನಸ್ಕರ ಬೆಂಬಲ ಸಿಕ್ಕಿತು.

l 1977ರ ನವೆಂಬರ 22ರಂದು ಕೊಡಗಿನಲ್ಲಿ ಇದುವರೆಗೆ ಎಂದೂ ಕಾಣದ ಜನಸಮೂಹದೆದುರು ನನ್ನನ್ನು ಬೆಂಗಳೂರಲ್ಲಿ ಪತ್ರಿಕಾಗೋಷ್ಠಿ ಕರೆದ ಹೇಡಿ ಎಂದು ಬಯ್ಯಲಾಯಿತು. ಬೆಂಗಳೂರು Press Clubನಲ್ಲೂ ಪತ್ರಕರ್ತರು ನಮ್ಮನ್ನು ಜನಬೆಂಬಲ ಇಲ್ಲದವರೆಂದು ಹೀಯಾಳಿಸಿದ್ದರು.

l 1998ರ ನವೆಂಬರ 23ರಂದು ಸೋಮವಾರ ಪೇಟೆ ಸಮಾವೇಶದಲ್ಲಿ ನಮ್ಮ ಬಲ ಪ್ರದರ್ಶನ ಅಚ್ಚರಿ ತಂದಿತು. ಮಡಿಕೇರಿ ಸಮಾವೇಶದ ಬಳಿಕ ಪ್ರಜಾವೇದಿಕೆ ಮುನ್ನಡೆ ಸಾದಿಸಿತು.

l 2000ದ ನವೆಂಬರಲ್ಲಿ ಸಾವಿರಾರು ಜನರು ಬಾಡಿಗೆ ರೈಲು ಮೂಲಕ ದೆಹಲಿ ಚಲೋ ಮಾಡಿದಾಗ ದಾರಿಯಲ್ಲಿ ತೊಂದರೆಯಾಗದಿರಲು ನನ್ನಲ್ಲಿ ಸಂಧಾನಕ್ಕೆ ನಾಚಪ್ಪ ಗೆಳೆಯರೊಂದಿಗೆ ಸಂಪಾಜೆಗೆ ಬರಬೇಕಾಯಿತು.

l 28.12.2000ದಂದು ಜಸ್ಟೀಸ್ ಎಂ. ವೆಂಕಟಾಚಲಯ್ಯರ ಕಮಿಶನ್ಗೆ ಹೋಗಿ ಮನವಿಯೊಂದಿಗೆ ಸಮರ್ಪಕ ಆಧಾರಗಳನ್ನು ಕೊಟ್ಟು ಮನವರಿಕೆ ಮಾಡಿದರ ಪ್ರತಿಫಲವಾಗಿ 2002ರಲ್ಲಿ ನಮ್ಮ ಪರವಾದ ತೀರ್ಪು ಸಿಕ್ಕಿತು. ಇದು ಪ್ರಚಾರವಾಗದಂತೆ ಗೌಪ್ಯವಾಗಿರಿಸುವಲ್ಲಿ ಕೂರ್ಗ್ ನ್ಯಾಶನಲ್ ಕೌನ್ಸಿಲ್ ಯಶಸ್ವಿಯಾಗಿದೆ.

– ಎನ್.ಎಸ್. ದೇವಿಪ್ರಸಾದ್ ಸಂಪಾಜೆ

ಸಾಮರಸ್ಯದ ಕನಸು

ಕೊಡಗಿನಲ್ಲಿ ಕೊಡವರು ಮತ್ತು ಗೌಡರು ಎಂಬ ಸ್ಪಷ್ಟ ವಿಭಜನೆ ಬ್ರಿಟಿಷರ ಕಾಲದಿಂದ ಬಂದದ್ದು ಈಗಲೂ ಉಳಕೊಂಡಿದೆ. ಅದನ್ನು ದೇವಿಪ್ರಸಾದರು ಇಷ್ಟಪಡುವುದಿಲ್ಲ. ಅವರದು ಸಮನ್ವಯ ದೃಷ್ಟಿಕೋನ. 2001ರ ಸೆಪ್ಟೆಂಬರ 15ರಂದು ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಅಮರಕ್ರಾಂತಿ ಉತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಸಂಪಾಜೆಯಲ್ಲಿ ಕೊಡಗಿನಲ್ಲಿ ಭಾಷಾ ಸಾಂಸ್ಕೃತಿಕ ಸಾಮರಸ್ಯವೆಂಬ ವಿಚಾರಗೋಷ್ಠಿ ನಡೆಯಿತು. ಕನ್ನಡ, ತುಳು, ಮಲೆಯಾಳ, ಹವೀಕ, ಅರೆ ಭಾಷೆಗಳಿಂದ ಕೊಡವ ಭಾಷೆ ಪಡಕೊಂಡದ್ದೇನು ಎಂಬ ಬಗ್ಗೆ ಕೋಡೀರ ಲೋಕೇಶ, ಪ್ರಭಾಕರ ಶಿಶಿಲ, ಪೂವಪ್ಪ ಕಣಿಯೂರು, ವಿದ್ಯಾಧರ ಬಡ್ಡಡ್ಕ, ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಶ್ರೀಧರ ಆರಾಧ್ಯ, ದೇವಿಪ್ರಸಾದ್, ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಸಂಶೋಧನಾತ್ಮಕ ಪ್ರಬಂಧ ಮಂಡಿಸಿದರು.

ತಮ್ಮ ಪ್ರಬಂಧದಲ್ಲಿ ಬಾಚರಣಿಯಂಡ ಅಪ್ಪಣ್ಣನವರು ಕೊಡಗಿನಲ್ಲಿ ಸಾಮರಸ್ಯದ ಅನಿವಾರ್ಯತೆಯನ್ನು ವಿವರಿಸಿದ್ದು ಹೀಗೆ : “ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದಗಳು ಹೊರಗಿನ ಸಂಪರ್ಕ ಮತ್ತು ಪ್ರಭಾವಕ್ಕೆ ಒಳಗಾಗದೆ ಪರಿಪಕ್ವತೆ ಪಡೆಯಲು ಸಾಧ್ಯವಿಲ್ಲ. ಕೊಡವ ಭಾಷೆ ದ್ರಾವಿಡ ಭಾಷಾ ಗುಂಪಿಗೆ ಸೇರಿದ ಸ್ವತಂತ್ರ ಭಾಷೆಯಾದರೂ ಇದರಲ್ಲಿ ಶೇಕಡಾ ಎಪ್ಪತ್ತರಷ್ಟು ಕನ್ನಡ, ಮಲಯಾಳ, ತುಳು, ತಮಿಳು ಪದಗಳಿವೆ. ಭಾಷೆಗೆ ಅಷ್ಟೊಂದು ಪದಗಳು ಸೇರಿರುವಾಗ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜಾನಪದಗಳಲ್ಲೂ ಒಂದೊಂದು ಸಂಬಂಧ ಇರಲೇಬೇಕು. ಕೊಡಗಿನ ಮೂರು ತಾಲೂಕುಗಳ ಪೈಕಿ ಮಡಿಕೇರಿ ತಾಲೂಕಿಗೂ ದಕ್ಷಿಣ ಕನ್ನಡದ ಸುಳ್ಯ ತಾಲೂಕಿಗೂ ಪುರಾಣ ಕಾಲದಿಂದಲೂ ನೆಂಟಸ್ತಿಕೆ ಇದೆ. ಆಡಳಿತದ ಸೌಕರ್ಯಕ್ಕಾಗಿ ಭೌಗೋಳಿಕ ಎಲ್ಲೆ ನಿರ್ಮಿಸಿಕೊಂಡ ಮಾತ್ರಕ್ಕೇ ಸಾಂಸ್ಕೃತಿಕವಾಗಿ ಮತ್ತು ಭಾವನಾತ್ಮಕವಾಗಿ ಬೇರೆಯಾಗಲು ಸಾಧ್ಯವೇ ಇಲ್ಲ. ಅದು ಹಾಲಿನಲ್ಲಿ ನೀರು ಬೆರೆತಂತೆ ಬೆರೆತು ಹೋಗಿದೆ.” (ಕೊಡಗಿನಲ್ಲಿ ಭಾಷಾ ಸಾಂಸ್ಕೃತಿಕ ಸಾಮರಸ್ಯ 2003, ಪುಟ 57)

ತಮ್ಮ ಸಮನ್ವಯ ದೃಷ್ಟಿಯನ್ನು ಈ ಮಾತುಗಳಲ್ಲಿ ದೇವಿಪ್ರಸಾದರು ಅಬಿವ್ಯಕ್ತಿಸಿದ್ದಾರೆ : “ಕೊಡವ ಭಾಷೆಯನ್ನು ಹದಿನೆಂಟು ಜಾತಿಯವರು ಮಾತಾಡುತ್ತಾರೆ. ಈ ಜಾತಿಗಳು ಕುಲ ಕಸುಬನ್ನು ಅವಲಂಬಿಸಿರುವ ಕಾರಣ ಇವರೊಳಗೆ ಮೇಲು ಕೀಳು ಭಾವನೆ ಅತಿಯಾಗಿ ಕಂಡುಬರುತ್ತದೆ. ಇವರೊಳಗೆ ಅಂತರ್ಜಾತಿ ವಿವಾಹದ ಸಾಧ್ಯತೆಗಳೇ ಇಲ್ಲ. ಬ್ರಿಟಿಷರ ಆಳ್ವಿಕೆಯ ದಿನಗಳಲ್ಲಿ ಕೊಡವರು ಅನೇಕ ವಕ್ಕಲಿಗರ ಕುಟುಂಬಗಳನ್ನು ಸೇರಿಸಿ ಕೊಂಡಿರುವುದು ತಿಳಿದು ಬರುತ್ತದೆ. ಕೊಡವ ಸಂಸ್ಕೃತಿಯನ್ನು ವಿಸ್ತರಿಸಲು ಇಂದಿನ ಕಾಲದಲ್ಲಿ ಈ ವಿಧಾನ ಅಸಂಭವವೆನ್ನಿಸುತ್ತದೆ. ಕೊಡಗಿನ ಚಾವು ಪಾಟಿನಲ್ಲಿ ಹಿರಿಯರು ಕಿರಿಯರಿಗೆ ಹೇಳುವ ಬುದ್ಧಿ ಮಾತಿನ ಕನ್ನಡಾನುವಾದ ಹೀಗಿದೆ :

“ಚೆನ್ನಾಗಿ ಬದುಕಿರಿ ಮಕ್ಕಳೆ | ಅನ್ಯಾಯ ಮಾಡಬೇಡಿ ಮಕ್ಕಳೆ

ಆಗದ್ದು ಮಾಡಬೇಡಿ ಮಕ್ಕಳೆ | ಬೇಡದ್ದು ಮಾಡಬೇಡಿ ಮಕ್ಕಳೆ

ನಿಮ್ಮೆದುರಾಳಿನ ಮಕ್ಕಳೆ | ಹಗ್ಗ ವಿಲ್ದೆ ಕಟ್ಟಿರಿ ಮಕ್ಕಳೆ

ಕೋಲಿಲ್ದೆ ಹೊಡೆಯುತ ಮಕ್ಕಳೆ | ನಯವಾಗಿ ತಡೆಯಿರಿ ಮಕ್ಕಳೆ”

 

ಇದನ್ನು ಪಾಲಿಸುವ ಮೂಲಕ ಪ್ರೀತಿಯಿಂದ ತಮ್ಮ ಸುತ್ತಮುತ್ತಲಿನವರನ್ನು ಕೊಡಗಿನಾದ್ಯಂತ ಕೊಡವ ಸಂಸ್ಕೃತಿಗೆ ಆಕರ್ಷಿಸಲು ಸಾಧ್ಯವಿಲ್ಲವೆ?” (ಕೊಡಗಿನಲ್ಲಿ ಭಾಷಾ ಸಾಂಸ್ಕೃತಿಕ ಸಾಮರಸ್ಯ 2003, ಪುಟ 11)

ದೇವಿಪ್ರಸಾದರು ಕೊಡಗನ್ನು ಕರ್ನಾಟಕದಲ್ಲಿ ಉಳಿಸಿದ ದೀರ. ಅದಕ್ಕಾಗಿ ಅವರು ತಮ್ಮ ಪ್ರಾಣವನ್ನೇ ಪಣವಾಗಿಟ್ಟಿದ್ದರು. 2003ರಲ್ಲಿ ದೇವಿಪ್ರಸಾದರಿಗೆ 60 ತುಂಬಿದ ಪ್ರಯುಕ್ತ ಅಬಿಮಾನಿಗಳು ಷಷ್ವಬ್ದ ಸಮಾರಂಭ ಏರ್ಪಡಿಸಿದರು. ಅಂದು ಆದಿ ಚುಂಚನಗಿರಿಯ ಶ್ರೀಗಳು “ಅಖಂಡ ಕರ್ನಾಟಕಕ್ಕಾಗಿ ಈಗಲೂ ಹೋರಾಡುವವರಿದ್ದಾರೆ ಎನ್ನುವುದೇ ಆಶ್ಚರ್ಯದ ಸಂಗತಿ. ದೇವಿಪ್ರಸಾದರಿಗೆ ರಾಜ್ಯಪ್ರಶಸ್ತಿ ಸಿಗಲೇಬೇಕು” ಎಂದರು.

ಅದು ನಿಜ. ಆದರೆ ದೇವಿಪ್ರಸಾದರಿಗೆ ರಾಜ್ಯಪ್ರಶಸ್ತಿ ಮಾತ್ರ ಇನ್ನೂ ಸಿಕ್ಕಿಲ್ಲ!

ಅನುಬಂಧ 1

ಕೊಡಗು ಪ್ರಜಾವೇದಿಕೆ, ಮಡಿಕೇರಿ

ಕೊಡಗಿನ ಬಹುಸಂಖ್ಯಾತರ ಹಿತಾಸಕ್ತಿಗೆ ವ್ಯತಿರಿಕ್ತವಾದ ಪರ್ಯಾಯ ಆಡಳಿತ ಯಂತ್ರವೊಂದು ಈ ದಿನಗಳಲ್ಲಿ ಕೊಡಗಿನಾದ್ಯಂತ ಕಾರ್ಯ ನಿರ್ವಹಿಸತೊಡಗಿದೆ. ಮೇಲ್ತೋರಿಕೆಗೆ ಪ್ರತ್ಯೇಕ ರಾಜ್ಯವನ್ನು ಸ್ಥಾಪಿಸುವ ಉದ್ದೇಶದಿಂದ ಕೈ ಜೋಡಿಸಿರುವಂತೆ ಕಾಣಿಸುವ ಕೆಲವು ಹತಾಶ ನಿರುದ್ಯೋಗಿಗಳು ಹುಟ್ಟುಹಾಕಿದ ನ್ಯಾಯ ಸಮ್ಮತವಲ್ಲದ ಸಂಘಟನೆಗಳು ಇಂದು ಇದೇ ಜಿಲ್ಲೆಯ ನಾಗರಿಕರನ್ನು ಸುಲಿಗೆ ಮಾಡುವ ಕೆಲಸವನ್ನು ತಮ್ಮ ಹಕ್ಕು ಎಂಬಂತೆ ಚಲಾಯಿಸುತ್ತಿವೆ. ಜಿಲ್ಲೆಯ ಬೆಳೆಗಾರರನ್ನು, ಸರ್ಕಾರಿ ನೌಕರರನ್ನು, ಆಟೋ ಚಾಲಕರನ್ನು, ವಾಹನ ಮಾಲೀಕರನ್ನು ಹೀಗೆ ಅಸಂಖ್ಯ ಜನರನ್ನು ಬಲಾತ್ಕಾರ ಹಾಗೂ ಬ್ಲಾಕ್ಮೈಲ್ ತಂತ್ರಗಳ ಮೂಲಕ ಬಲಿಪಶುಗಳನ್ನಾಗಿಸಿ ತಮ್ಮ ಸುಲಿಗೆಗೆ ಸುಗಮ ದಾರಿ ಮಾಡಿಕೊಂಡಿವೆ. ಈ ತಂತ್ರಗಳ ಮುಖಾಂತರ ಹಲವಾರು ಬೈಕ್ಗಳು ಮತ್ತು ಜೀಪುಗಳು ಸೇರಿದಂತೆ ಅಂದಾಜು ಎರಡು ಕೋಟಿ ರೂಪಾಯಿಗಳನ್ನು ಸಮಾವೇಶಗಳ ಹೆಸರಿನಲ್ಲಿ ಜಮಾಯಿಸಲಾಗಿದೆ. ಸರ್ಕಾರಿ ಬಸ್ಸು ಮತ್ತು ಕಛೇರಿಗಳ ಗೋಡೆಗೆ ಬಣ್ಣದಲ್ಲಿ ಬರೆದಿರುವ ಘೋಷಣೆಗೆ ಖರ್ಚಾಗಿರುವ ಹಣ ಬಿಟ್ಟರೆ, ಉಳಿದೆಲ್ಲವೂ ಈ ತಂಡಗಳ ನೇತಾರರ ಮನೆ ಸೇರಿರುವುದು ಈಗ ಒಂದು ಇತಿಹಾಸ.

ಕೊಲೆ ಮೊಕದ್ದಮೆ ಹಾಗೂ ಕ್ರಿಮಿನಲ್ ಚಟುವಟಿಕೆಗಳಿಗಾಗಿ ನ್ಯಾಯಾಂಗ ವಿಚಾರಣೆಗಳನ್ನು ಎದುರಿಸುತ್ತಿರುವ ಕೆ.ಆರ್.ಎಂ.ಎಂ. ಎಂಬ ಇಂತಹದೊಂದು ಸಂಸ್ಥೆಯ ಸಂಚಾಲಕರೆನಿಸಿಕೊಂಡ ವ್ಯಕ್ತಿಯ ವಿಷಯದಲ್ಲಿ ಕರ್ನಾಟಕದ ಇಂದಿನ ಸರಕಾರ ತೋರುವ ಮೆದು ಧೋರಣೆ ಆತಂಕಕಾರಿ ಹಾಗೂ ಅಚ್ಚರಿಗೆ ಕಾರಣವಾಗುವ ವಿಷಯವಾಗಿದೆ. ಸರಕಾರಿ ಅದಿಕಾರಿಗಳು ಈ ವ್ಯಕ್ತಿಗೆ ಸಹಕರಿಸುತ್ತಿರುವುದು ಈತ ಆಡಳಿತಶಾಹಿಂುೊಳಕ್ಕೆ ಹೇಗೆ ಸಮರ್ಥವಾಗಿ ನುಗ್ಗಬಲ್ಲನೆಂಬುದಕ್ಕೆ ನಿದರ್ಶನ. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂರಾರು ಬಸ್ಗಳಲ್ಲಿ ಎನಾಮೆಲ್ ಪೈಂಟ್ ಬಳಸಿ ಈತ ಬರೆಸಿದ ಉದ್ದುದ್ದವಾದ ರಾಜ್ಯವಿರೋದಿ ಮತ್ತು ಅಖಂಡತಾ – ಐಕ್ಯತಾ ವಿರೋದಿ ಘೋಷಣೆಗಳನ್ನು ಈ ಅದಿಕಾರಿಗಳು, ರಾಜಕಾರಣಿಗಳು ಕಣ್ಣುಮುಚ್ಚಿ ಸಹಿಸಿಕೊಂಡಿದ್ದಾರೆ ಅಥವಾ ಪ್ರೋತ್ಸಾಹಿಸಿದ್ದಾರೆ. ಅಲ್ಲದೆ ಪತ್ರ ಚಳುವಳಿಯ ಹೆಸರಿನಲ್ಲಿ ಅಂಚೆ ಇಲಾಖೆಗೆ ಲಕ್ಷಾಂತರ ರೂಪಾಯಿ ವಂಚಿಸಿರುವುದನ್ನು ಸರ್ಕಾರಕ್ಕೆ ಸಂಬಂದಿಸಿದ ಯಾರೂ ಗಮನಿಸಿದಂತಿಲ್ಲ.

ಕೊಡಗನ್ನು ಪ್ರತ್ಯೇಕ ರಾಜ್ಯವನ್ನಾಗಿಸಬೇಕೆನ್ನುವ ಕೆ.ಆರ್.ಎಂ.ಎಂ. ಎಂಬ ಸಂಘಟನೆ ಏಕವ್ಯಕ್ತಿ ಕೇಂದ್ರಿತವಾಗಿದ್ದು ಅಸಾಂವಿಧಾನಿಕವಾಗಿ ರಚನೆಗೊಂಡಿದೆ. ಇದು ಕರ್ನಾಟಕ ರಾಜ್ಯ ವಿರೋದಿ ಘೋಷಣೆಗಳನ್ನು ಕೂಗುತ್ತಾ ದೇಶ ದ್ರೋಹಿ ಹಾಗೂ ಸಮಾಜ ದ್ರೋಹಿ ಚಟುವಟಿಕೆಗಳಲ್ಲಿ ತೊಡಗಿದೆ. ಇಲ್ಲಿಯ ತನಕ ಈ ಸಂಸ್ಥೆ (?) ಯಾವುದೇ ಲೆಕ್ಕಪತ್ರಗಳನ್ನು ತೋರಿಸದೆ, ಆದಾಯ ತೆರಿಗೆ ಸಲ್ಲಿಸದೆ ಇಡೀ ನಾಡಿಗೇ ಮೋಸ ಮಾಡುತ್ತಿದೆ.

ತನ್ನ ಅವಿಭಾಜ್ಯ ಅಂಗವಾದ ಕೊಡಗನ್ನು ಈ ಶೋಷಕರ ಕೈಯಿಂದ ಮುಕ್ತಿಗೊಳಿಸಲು, ಎಲ್ಲಾ ಅಕ್ರಮ ಹಾಗೂ ಹಗರಣಗಳ ಬಗ್ಗೆ ಕರ್ನಾಟಕ ಸರಕಾರ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹ ಪಡಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಸರ್ಕಾರ ಈ ದೇಶದ್ರೋಹಿ ಶಕ್ತಿಗಳನ್ನು ನಿಗ್ರಹಿಸಲು ವಿಫಲವಾದಲ್ಲಿ ಬಹುಸಂಖ್ಯಾತ ಕೊಡಗಿನ ಜನರ ಬೆಂಬಲದಿಂದ ಪ್ರತ್ಯೇಕತಾ ಪರ ಸಂಘಟನೆಗಳ ವಿರುದ್ಧ ಜನಾಂದೋಲನವನ್ನು ರೂಪಿಸಲಿದ್ದೇವೆ. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಬಿವೃದ್ಧಿ ಪ್ರಾದಿಕಾರ, ವಿವಿಧ ಕನ್ನಡ ಮತ್ತು ಸಾಂಸ್ಕೃತಿಕ ಸಂಘಟನೆಗಳು, ರಾಜಕೀಯ ಪಕ್ಷಗಳು, ನಾಡಿನ ಬುದ್ಧಿಜೀವಿಗಳು, ಪ್ರಗತಿಪರ ಚಿಂತಕರು, ಪತ್ರಕರ್ತರು ಮತ್ತು ಸಮಸ್ತ ಕನ್ನಡಿಗರ ಸಹಕಾರ ಹಾಗೂ ಬೆಂಬಲವನ್ನು ಈ ಮೂಲಕ ಅತ್ಯಂತ ಪ್ರೀತಿಯಿಂದ ನಿರೀಕ್ಷಿಸುತ್ತೇವೆ.

ದೇವಿಪ್ರಸಾದ್,

ವಿದ್ಯಾಧರ,

ಅ.ಸು. ಬೋಪಣ್ಣ

ಸಂಚಾಲಕರು

ಬೆಂಗಳೂರು

20-11-1997

 

ಅನುಬಂಧ 2

KODAGU PRAJAVEDIKE

Camp : New Delhi

Date : 28-12-2000

 

To,

Justice M. Venkatachalaiah

The Chairman

National Commission to review the working of Constitution

Vijnan Bhawan, Moulanazad Marg,

New Delhi – 11

 

Sir,

 

A handful of people are trying to create an opinion about Coorg which is contrary to facts. Prajavedike of Coorg wishes to provide the following clarification.

When the separatists tried to observe Coorg Bundh it was a total failure in Somwarpet Taluk. There was a mixed reaction in Madikeri Taluk. The Taluk panchayat members of Madikeri Taluk took a unanimous resolution in their meeting that Coorg should remain a part of Karnataka and that it shouldn’t go separate. All the representatives of the people also declared their willingness to follow this lead.

The reality of Virajpet Taluk, the so-called stronghold of the separatists, is very different. Even though the bundh appeared to be a success, it was merely because of money-power rather than peoples involvement. This point becomes clear if we examine the details of caste statistics of this Taluk. The schedule caste and tribal people, 27101 in number, aren’t asking for a separate state. Vokkaligas, Lingayats, Christians and Muslims, who are 32029 strong, have opposed separatism. Could the separatists expect the support of Malayalis and Tamilians, 24178 strong, whom they consider outsiders? Of the 33910 who speak the Kodava language, two thirds from the communities like Heggade, Iri and Amma Kodavas are with Prajavedike. 7335 people – Brahmins, Bunts, Billavas aren’t demanding a separate state. Among the Kodavas, the families that supported the Late C M Poonacha or even his admirers are not with the separatists.

Moreover, Coorg is still not a separate cultural unit as present was carved out merely for the conveniences of the British rule during 1834. Under the leadership of Doddaveeraraja a group that supported the British got together. Virajpet was built in the forests which were a grant and a result of the 1792 Mysore pact. The Nalkunadu palace was built in 1795. What is very remarkable is that there are no traces or remains of any palaces supposedly belonging to the so called earlier rulers of Coorg. Amara Sullia and Elu Savira Seeme which were under Tipu’s rule were added to Coorg after Tipu’s death. That these aren’t at all emotionally part of Coorg was only too evident from their responses to the separatists bundh.

The people of Shanivar santhe border areas have expressed their desire to go with the Hassan District while on the other side the people of Sampaje and Peraje border areas have expressed their desire to go with the Dakshina Kannada District. The co-existence of a variety of cultures being the uniqueness of Coorg, the Coorg identity will be lost without a trace if the people of Bayaluseeme and Karavali go their separate ways. Therefore Prajavedike is hoping to retain Coorg as a district that respects the co-existence of these various cultures.

Some people appear to evince a transitory interest in the idea of a separate Coorg state with the expectation that it might then get adequate recognition and preferential treatment since Coorg does not get in return the recognition it deserves in answer to the revenue it offers to the Government. But when the Coorgis living outside Coorg seem to lose their stature as a reaction to this the separatists demand, there was a complete transformation even in these people as evidenced by the total failure of the movement for non payment of Taxes, as also by the defeat continuosly suffered by the politicians who maintain links with the separatists.

In the recent assembly election held in September 1999 the separatists could not field a candidate. Surprisingly, when the candidates of three constituencies of Coorg were interviewed by the press, none of them were in support of a separate state for Coorg except on independent candidate who lost his deposit. We are herewith enclosing photo copies of reports from Kannada newspapers in support of the above.

Both on behalf of Prajavedike as also on behalf of the large majority of Coorg, we wish to urge that Coorg should be retained as a district of Karnataka, i.e. as it is at present, and that the windy arguments of the separatists who represent none but themselves should be overlooked.

 

Yours Sincerely

N.S. Deviprasad

Hon.President

Kodagu Praja Vedike

 

28-12-2000

 

Enclosures :

 

1.    ಕರ್ನಾಟಕದ ಅಖಂಡತೆಗೆ ಕೊಡಗಿನಲ್ಲಿ ಸಜ್ಜು

(Janagere Patrike 2-12-1998)

2.  ಪ್ರಜಾವೇದಿಕೆ ಭಾರಿ ಸಮಾವೇಶ (Andolana 24-11-98)

3.  ಕೊಡಗು ಕರ್ನಾಟಕದ ಅವಿಭಾಜ್ಯ ಅಂಗ (Shakti 24-11-98)

4.  ಕೊಡಗಿನಲ್ಲಿ ಕೆ.ಆರ್.ಎಂ.ಎಂ. ಪ್ರಜಾವೇದಿಕೆ ನೇರ ಸಂಘರ್ಷ

(Janagere Patrike 25-11-98)

5.  ಪ್ರತ್ಯೇಕತಾ ಧೋರಣೆ ಮರೆತು ಕರ್ನಾಟಕದೊಂದಿಗೇ ಕೊಡಗಿನ ಸಮಗ್ರತೆಗೆ
ಹೋರಾಟ (Shakti 22-05-1999)

6.  ಮತದಾರ ವೇದಿಕೆ ಮುಖಾಮುಖಿ (Shakti 30-08-1999)

7.  ಪ್ರತ್ಯೇಕತೆ : ಪ್ರಬಲ ವಿರೋಧ ವ್ಯಕ್ತಪಡಿಸಿದ ಅಭ್ಯರ್ಥಿಗಳು (Shakti 31-8-99)

8.  ಪ್ರತಿಧ್ವನಿಗೊಂಡ ಪ್ರತ್ಯೇಕತೆಯ ಚರ್ಚೆ (Shakti 01-09-99)

Justice M. Venkatachalaiah 21, Willington, Present Rd. Near 3 Murhti Bhawan ND, Phone 3022006(0) 3018818 (R)

5A, Sir M.N. Krishna Rao Road, Basavanagudi, Bangalore – 4.

Phone : 080 6612626

 

 

ಅನುಬಂಧ 3

“Kodagu Gowda” Gogle searchನಲ್ಲಿ ಸಿಕ್ಕುವ ವಿವರ.

15th Meeting held on 5th to 8th January 2002 Coorg Organisations (S.No XI to XII)

30. The commission considered memoranda submitted by Shri N.U. Nachappa on behalf of Coorg National Council and Shri N.S. Deviprasad on behalf of Kodagu Prajavedike and the commission did not favour the demand for a separate state or to the  tranting of Union Territory States for the area.

 

ಅನುಬಂಧ 4

ಅಮರಕ್ರಾಂತಿಯ ಹರಿಕಾರ

ರೈತ ಸಂಗ್ರಾಮದ ನೆನಪಿಗೆ

ಸುಳ್ಯವನ್ನು ಪ್ರತಿಭಟನೆಯ ನೆಲವೆಂದು ಕರೆಯುವುದುಂಟು. ಹದಿನೇಳನೆಯ ಶತಮಾನದಲ್ಲಿ ಕೋಟಿ-ಚೆನ್ನಯ್ಯರೆಂಬ ಯಮಳ ವೀರರು ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ಬಂಡೆದದ್ದು ಮತ್ತು 1837ರಲ್ಲಿ ಅಮರಸುಳ್ಯ ಸೀಮೆ ರೈತರು ಕಲ್ಯಾಣ ಸ್ವಾಮಿಯನ್ನು ಮುಂದಿಟ್ಟುಕೊಂಡು ಕೆದಂಬಾಡಿ ರಾಮಗೌಡನ ನೇತೃತ್ವದಲ್ಲಿ ಮತ್ತು ಹುಲಿ ಕಡಿದ ನಂಜಯ್ಯನ ನಿರ್ದೇಶನದಲ್ಲಿ ಬ್ರಿಟಿಷರನ್ನು ಮಂಗಳೂರಿನಿಂದ ಓಡಿಸಿ ಎರಡು ವಾರ ಪರ್ಯಂತ ದಕ್ಷಿಣ ಕನ್ನಡ ಜಿಲ್ಲೆಯನ್ನು ಆಳಿದ್ದು ಇದಕ್ಕೆ ಕಾರಣ. 1857ರ ಸ್ವಾತಂತ್ರ ಸಂಗ್ರಾಮಕ್ಕಿಂತ ಇಪ್ಪತ್ತು ವರ್ಷಗಳಿಗೆ ಮೊದಲೇ ನಡೆದ ಈ ರೈತ ಸಂಗ್ರಾಮ ಕೊಡಗು, ದ.ಕ. ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ವ್ಯಾಪಿಸಿ ಅನೇಕ ದೂರಗಾಮಿ ಪರಿಣಾಮಗಳನ್ನು ಉಂಟು ಮಾಡಿತ್ತು.

ರೈತರ ಸಂಗ್ರಾಮವನ್ನು ಕೊಡಗಿನಲ್ಲಿ ಬೋಪು ದಿವಾನ ಮತ್ತು ಪೊನ್ನಪ್ಪ ದಿವಾನ ಹತ್ತಿಕ್ಕಿ ಬ್ರಿಟಿಷರ ಕೃಪಾಶ್ರಯ ಗಳಿಸಿಕೊಂಡರು. ದಾಖಲೆಗಳ ಪ್ರಕಾರ ಬಹುತೇಕ ಕೊಡಗರು ಬ್ರಿಟಿಷರ ಪರವಿದ್ದುದರಿಂದ ರೈತ ಸಂಗ್ರಾಮ ಹತ್ತಿಕ್ಕಲ್ಪಟ್ಟಿತು. ರೈತ ಸಂಗ್ರಾಮದ ನೇತೃತ್ವ ವಹಿಸಿದ ಕಲ್ಯಾಣಸ್ವಾಮಿ, ಲಕ್ಷ ್ಮಪ್ಪ ಬಂಗರಸ ಮತ್ತು ಗುಡ್ಡೆಮನೆ ಅಪ್ಪಯ್ಯರನ್ನು ಸಾರ್ವಜನಿಕವಾಗಿ ತೂಗುಹಾಕಿ ಕೊಂದರು. ಕೆದಂಬಾಡಿ ರಾಮಗೌಡ ಮತ್ತು ಹುಲಿಕಡಿದ ನಂಜಯ್ಯರಿಗೆ ಜೀವಾವದಿ ಶಿಕ್ಷೆಯಾಯಿತು. ಆದರೆ ದಂಗೆಯನ್ನು ಅಡಗಿಸಲು ನೆರವಾದ ಕೊಡಗ ಕುಟುಂಬಗಳಿಗೆ ಹಣ, ಚಿನ್ನದ ಬಳೆ, ಯಥೇಚ್ಛ ಭೂಮಿ ದೊರೆಯಿತು. ಸ್ವಾತಂತ್ರಕ್ಕಾಗಿ ಬಲಿದಾನ ಗೈದವರು ಅಪರಾದಿಗಳಾಗಿ ಬಿಟ್ಟರು!

ಸಂಗ್ರಾಮದ ಪ್ರಮುಖ ನಾಯಕರಾದ ಗುಡ್ಡೆಮನೆ ಅಪ್ಪಯ್ಯ ಮತ್ತು ಕೆದಂಬಾಡಿ ರಾಮಗೌಡ ಒಕ್ಕಲಿಗ ಸಮುದಾಯದವರು. ಸಂಗ್ರಾಮವನ್ನು ಹತ್ತಿಕ್ಕಲು ನೆರವಾದ ಅಪ್ಪಾರಂಡ ಬೋಪು ಮತ್ತು ಚೆಪ್ಪುಡೀರ ಪೊನ್ನಪ್ಪ ಕೊಡವ ಸಮುದಾಯಕ್ಕೆ ಸೇರಿದವರು. ಎರಡೂ ಸಮುದಾಯ ಅಂದೇ ಕೈ ಜೋಡಿಸುತ್ತಿದ್ದರೆ ಇಂಗ್ಲಿಷರು ಕೊಡಗಿಗೆ ಕಾಲಿಡಲು ಸಾಧ್ಯವಿರಲಿಲ್ಲ. ಬ್ರಿಟಿಷರ ಸಾಮೋಪಾಯಕ್ಕೆ ಬಲಿಯಾದ ಕೊಡವರು ಒಂದು ಐತಿಹಾಸಿಕ ಅವಕಾಶವನ್ನು ಕಳಕೊಂಡು ಬ್ರಿಟಿಷರ ದಾಸ್ಯವನ್ನು ಒಪ್ಪಿಕೊಳ್ಳುವಂತಾಯಿತು. ಸ್ವಾತಂತ್ರ ್ಯ ಸಿಕ್ಕಿದ ಬಳಿಕವೂ ಗೌಡ-ಕೊಡವ ಸಮುದಾಯಗಳು ಒಂದಾಗಬಹುದಿತ್ತು. ದುರಂತಕ್ಕೆ ಅವು ಒಂದಾಗಲಿಲ್ಲ. ಜನರಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯರಿಗೆ ಸಿಕ್ಕಷ್ಟಾದರೂ ಗೌರವ ಗುಡ್ಡೆಮನೆ ಅಪ್ಪಯ್ಯ ಮತ್ತು ಕೆದಂಬಾಡಿ ರಾಮಗೌಡರಿಗೆ ಸಿಗಬೇಕಿತ್ತು. ಆದರೆ ಸಿಗಲಿಲ್ಲ. ಮಡಿಕೇರಿ ಪುರಸಭೆ ಒಂದು ಬೀದಿಗೆ ಗುಡ್ಡೆಮನೆ ಅಪ್ಪಯ್ಯನ ಹೆಸರಿರಿಸಿತು. ಕೆದಂಬಾಡಿ ರಾಮಗೌಡನಿಗೆ, ಕಲ್ಯಾಣಸ್ವಾಮಿಗೆ, ಲಕ್ಷ ್ಮಪ್ಪ ಬಂಗರಸನಿಗೆ ಆ ಭಾಗ್ಯವೂ ಇರಲಿಲ್ಲ. ಇವರ ವಂಶೀಯರೂ ತಮ್ಮ ಹಿರಿಯರ ಬಲಿ ದಾನದ ನೆನಪಿಗೆ ಸ್ಮಾರಕ ನಿರ್ಮಿಸಲು ಸರಕಾರವನ್ನು ಕೇಳಿಕೊಳ್ಳಲಿಲ್ಲ. ಕರ್ನಾಟಕದ ಇತಿಹಾಸದ ಒಂದು ಉಜ್ವಲ ಅಧ್ಯಾಯ ಸತ್ಯದ ಬೆಳಕಿಗೆ ತೆರೆದುಕೊಳ್ಳಲಿಲ್ಲ. ಬಂಟವಾಳ ಕಡೆಯ ವರ್ತಕರು ಮತ್ತು ಭೂಮಾಲಿಕರು ಪ್ರಚಾರ ಪಡಿಸುತ್ತಿದ್ದ ದರೋಡೆಯ ಕಟ್ಟುಕತೆಯನ್ನು ಇತಿಹಾಸವೆಂದು ನಂಬಿ ಇತಿಹಾಸಕಾರರೂ ಸತ್ಯಶೋಧನೆಗೆ ಹೊರಡಲಿಲ್ಲ.

ಕೊಡಗನ್ನು ಕರ್ನಾಟಕದಲ್ಲಿ ಉಳಿಸಬೇಕೆಂಬ ಹೋರಾಟದ ನೇತೃತ್ವ ವಹಿಸಿದ್ದ ದೇವಿಪ್ರಸಾದರು ಕೊಡಗಿನ ಇತಿಹಾಸದ ಆಳ ಅಧ್ಯಯನ ನಡೆಸಿದರು. 1837ರ ರೈತ ಸಂಗ್ರಾಮದ ದಾಖಲೆಗಳನ್ನು ಮದರಾಸು ಪತ್ರಗಾರದಿಂದ ತರಿಸಿಕೊಂಡರು. ನಡಿಕೇರಿಯಂಡ ಚಿಣ್ಣಪ್ಪನವರ ಪಟ್ಟೋಳೆ ಪಳಮೆ ಕೃತಿಯಲ್ಲಿ ಬ್ರಿಟಿಷರ ಪರ ನಿಂತು ರೈತ ಸಂಗ್ರಾಮವನ್ನು ಬಗ್ಗುಬಡಿದು ಬ್ರಿಟಿಷರಿಂದ ಪ್ರಶಸ್ತಿ ಪುರಸ್ಕಾರ ಪಡೆದವರ ವಿವರಗಳಿದ್ದವು. ರೈತ ಸಂಗ್ರಾಮದ ನಾಯಕರನ್ನು ದರೋಡೆಕೋರರೆಂದು ಕಳಂಕಿತರನ್ನಾಗಿ ಮಾಡಿದ ಬ್ರಿಟಿಷ್ ವಸಾಹತುಶಾಹಿಯ ಹುನ್ನಾರ ಸ್ಪಷ್ಟವಾಗಿ ಅರ್ಥವಾಗಲು ಮದರಾಸು ಪತ್ರಗಾರದ ದಾಖಲೆಗಳು ನೆರವಾದವು.

1998 ಭಾರತದ ಸುವರ್ಣ ಸ್ವಾತಂತ್ರೊತ್ಸವ ವರ್ಷ. ಇದು 1837ರ ಬಲಿದಾನಿಗಳ ಬಗ್ಗೆ ಜಾಗೃತಿ ಮೂಡಿಸಲು ಸಕಾಲವೆಂದು ಮನಗಂಡ ದೇವಿಪ್ರಸಾದರ ಪ್ರಯತ್ನದ ಫಲವಾಗಿ ಅಮರಕ್ರಾಂತಿ ಉತ್ಸವ ಸಮಿತಿಯ ಜನನವಾಯಿತು. ದೇವಿಪ್ರಸಾದ್, ಕುಕ್ಕೇಟಿ ಮಾಧವ, ಪ್ರಭಾಕರ ಶಿಶಿಲ, ಎಂ.ಬಿ. ಸದಾಶಿವ, ಜನಾರ್ದನ ಕಣಕ್ಕೂರು, ಜೀವನರಾಂ, ಜವರೇಗೌಡ, ಶಿವಣ್ಣ ನೆಲಮನೆ, ಶೈಲಿ ಪ್ರಭಾಕರ್, ಹರಿಣಿ ಸದಾಶಿವ – ಮುಂತಾದವರು ವಿವಿಧ ಉಪಸಮಿತಿಗಳಲ್ಲಿ ದುಡಿದು ಕಾರ್ಯ ಯೋಜನೆಯೊಂದನ್ನು ರೂಪಿಸಿದರು. ಕೋಡಿ ಕುಶಾಲಪ್ಪ ಗೌಡ, ಟಿ.ಜಿ. ಮುಡೂರು, ತುದಿಯಡ್ಕ ವಿಷ್ಣವಯ್ಯ ಮೊದಲಾದವರು ಹಿರಿಯ ಸಲಹಾಗಾರರಾಗಿದ್ದರು. ಆದರೆ ಕೇವಲ ಗೋಷ್ಠಿ ಮತ್ತು ವಿಚಾರ ಸಂಕಿರಣಗಳಿಂದ 1837ರ ಸಂಗ್ರಾಮದ ನೈಜತೆ  ಜನರನ್ನು ಮುಟ್ಟಲು ಸಾಧ್ಯವಿರಲಿಲ್ಲ. ಅದಕ್ಕಾಗಿ ಪಾದಯಾತ್ರೆ, ಬೀದಿನಾಟಕ ಹಮ್ಮಿಕೊಳ್ಳಬೇಕಿತ್ತು. 1837ರ ರೈತ ಸಂಗ್ರಾಮದ ಧುರೀಣರು ಮಾರ್ಚ್ 30ರಂದು ಬೆಳ್ಳಾರೆಯನ್ನು ವಶಪಡಿಸಿ, ಪುತ್ತೂರು, ನಂದಾವರ, ಅರ್ಕುಳಕ್ಕಾಗಿ ಎಪ್ರಿಲ್ 5ರಂದು ಮಂಗಳೂರಿಗೆ ತಲುಪಿ ಬಾವುಟ ಗುಡ್ಡೆಯಲ್ಲಿ ಕೊಡಗಿನ ಅರಸರ ಧ್ವಜ ಹಾರಿಸಿದ್ದರು. ನಾವೂ ಹಾಗೆ ಮಾಡಬೇಕಿತ್ತು. ಪ್ರದರ್ಶನಕ್ಕಾಗಿ ಅಮರಕ್ರಾಂತಿ ವೀರರು ಎಂಬ ಬೀದಿ ನಾಟಕವನ್ನು ಮತ್ತು ಒಂದು ಲಾವಣಿಯನ್ನು ರಚಿಸಬೇಕಾಯಿತು. ಜೀವನರಾಂ ಅದನ್ನು ಒಂದು ಕಲಾಕೃತಿಯಾಗಿ ಪ್ರದರ್ಶನಕ್ಕೆ ಒಂದೇ ದಿನದಲ್ಲಿ ಸಿದ್ಧಗೊಳಿಸಿ ಬಿಟ್ಟರು. ಅದರೊಂದಿಗೆ ಜೀವನರಾಂ, ಗೀತಾ ಮುಳ್ಯ, ಪದ್ಮಾ ಕೊಡಗು, ಕಣಕ್ಕೂರು, ಅಜಯ, ಆರತಿ, ಸಂಜೀವ ಕುದ್ಪಾಜೆ ಮುಂತಾದವರು ದೊಡ್ಡ ಬೀದಿ ಕಲಾವಿದರಾಗಿ ಬಿಟ್ಟರು.

ಆದರೆ ಸುಳ್ಯದಿಂದ ಮಂಗಳೂರಿಗೆ ನಡಕೊಂಡು ಹೋಗಲು ತಂಡವೊಂದನ್ನು ಸಿದ್ಧಪಡಿಸುವುದು ಸುಲಭದ ಮಾತಾಗಿರಲಿಲ್ಲ. ಅದರ ಬಗ್ಗೆ ದೇವಿಪ್ರಸಾದ್ ಹೀಗೆ ಬರೆದಿದ್ದರು : “ಸುಳ್ಯದಿಂದ ಮಂಗಳೂರಿಗೆ ಕಾಲ್ನಡಿಗೆ ಜಾಥಾ ಅಂದ ತಕ್ಷಣ ಬಹಳಷ್ಟು ಜನ ನಮ್ಮಿಂದ ದೂರ ಹೋದರು. ಡಾ. ಶಿಶಿಲರ ಈ ಸಲಹೆಯನ್ನು ಕಾರ್ಯಗತಗೊಳಿಸುವುದು ಅಷ್ಟು ಸುಲಭ ಇರಲಿಲ್ಲ. ಎಪ್ರಿಲ್ ತಿಂಗಳಲ್ಲಿ ಸುಡುಬಿಸಿಲು. ಶಾಲಾ ಮಕ್ಕಳಿಗೆ ರಜೆ. ಅಧ್ಯಾಪಕರಿಗೆ ಮೌಲ್ಯಮಾಪನ. ಏನೇನೋ ತೊಡಕು ತೊಂದರೆಗಳು. ಒಟ್ಟಿನಲ್ಲಿ ಮುಂದಿನ ಭವಿಷ್ಯ ಕರಾಳವಾಗಿ ನಮ್ಮ ಮುಂದೆ ನಿಂತಿತ್ತು…. ಕಾಲ್ನಡಿಗೆ ಜಾಥಾ ಸೋತು ನೆಲಕಚ್ಚುವ ಸ್ಥಿತಿಯಲ್ಲಿದ್ದಾಗ ಶಿಶಿಲರು ಅದನ್ನೊಂದು ಪಂಥಾಹ್ವಾನವನ್ನಾಗಿ ಸ್ವೀಕರಿಸಿದರು. ಕೊನೆ ಹಂತದಲ್ಲಿ ದೊರೆತ ಅವರ ಅರ್ಧಾಂಗಿ ಶ್ರೀಮತಿ ಶೈಲಿ ಪ್ರಭಾಕರರ ನೆರವು ಮರೆಯುವಂತದ್ದಲ್ಲ. ಅವರು ರೋಟರಿ ಅಧ್ಯಾಪಕಿಯಾಗಿದ್ದು ಜಾಥದಲ್ಲಿ ನಮ್ಮೊಂದಿಗೆ ಸ್ಕೌಟು ಮತ್ತು ಗೈಡ್ಸ್ ಸದಸ್ಯರು ನಡೆಯಲು ಪ್ರೇರಣೆ ನೀಡಿದರು. ಶಿಶಿಲರ ಇಡೀ ಸಂಸಾರ ಅಂದರೆ ಶಿಶಿಲರು, ಅವರ ಪತ್ನಿ ಶೈಲಿ, ಮಗ ಪೃಥ್ವಿಸಾಗರ್ ಮತ್ತು ಮಗಳು ಪ್ರತೀಕ್ಷಾ ಏಳು ದಿನ ಕಾಲ್ನಡಿಗೆ ಜಾಥಾದಲ್ಲಿ ಸುಳ್ಯದಿಂದ ಮಂಗಳೂರುವರೆಗೂ ನಡೆದರು.” (ಹೆಜ್ಜೆ 2003, ಪುಟ 68)

ಕಾಲ್ನಡಿಗೆ ಜಾಥಾ ಒಂದು ಅಭೂತಪೂರ್ವ ಐತಿಹಾಸಿಕ ಘಟನೆಯಾಯಿತು. ಬೆಳ್ಳಾರೆಯಲ್ಲಿ ಜಯಸೂರ್ಯ ರೈ, ರಾಜೀವಿ ರೈ, ವಸಂತ ಕುಮಾರ್ ಮತ್ತು ಜೇಸೀ ಬಳಗ, ಪುರಂದರ ರೈ ನೇತೃತ್ವದ ಕುಂಬ್ರ ಜೇಸೀ ಬಳಗ, ಪುತ್ತೂರಲ್ಲಿ ಬೋಳಂತಕೋಡಿ ಈಶ್ವರ ಭಟ್ ಮತ್ತು ಜೇಸಿ ಬಳಗ, ಮಾಣಿಯಲ್ಲಿ ಲೋಕೇಶ ಪೆರ್ಗಡೆಯವರ ನೇತೃತ್ವದ ಜೇಸಿ ಬಳಗ, ನಂದಾವರದಲ್ಲಿ ಎ.ಸಿ. ಪೂಂಜ, ಬಿ.ಸಿ. ರೋಡಲ್ಲಿ ಪದ್ಮರಾಜ ಕರ್ಕೇರ, ಫರಂಗಿ ಪೇಟೆಯಲ್ಲಿ ಕೃಷ್ಣಕುಮಾರ್ ಪೂಂಜ ಮತ್ತು ಮಂಜು, ಮಂಗಳೂರಲ್ಲಿ ಒಕ್ಕಲಿಗರ ಸಂಘದ ಪದಾದಿಕಾರಿಗಳು, ಪ್ರಾಚಾರ್ಯ ಪ್ರಶಾಂತ್ ಮಾಡ್ತಾ, ನಾದಾ ಶೆಟ್ಟಿ – ಮುಂತಾದವರು ನೀಡಿದ ಸಹಕಾರದಿಂದ ಜಾಥಾ ಯಶಸ್ವಿಯಾಯಿತು. ಎಪ್ರಿಲ್ 5ರಂದು ಸಂತ ಎಲೋಶಿಯಸ್ ಕಾಲೇಜು ಆವರಣದಲ್ಲಿ ದೇವಿಪ್ರಸಾದರು ಕೊಡಗು ರಾಜನ ಧ್ವಜಾರೋಹಣ ಮಾಡಿದರು. ಅಂದಿನ ಸಮಾರಂಭದಲ್ಲಿ ವೀರಪ್ಪ ಮೊಯ್ಲಿ, ಬ್ಲೇಸಿಯಸ್ ಡಿಸೋಜಾ, ಬಿ.ಎ. ಮೊಯ್ದಿನ್, ಅಮ್ಮೆಂಬಳ ಬಾಳಪ್ಪ, ಸಂಜೀವನಾಥ ಐಕಳ, ಅಭಯಚಂದ್ರ, ಕುಂಬಳೆ ಸುಂದರರಾವ್, ಯೋಗೀಶ ಭಟ್ – ಮುಂತಾದವರು ಪಾಲ್ಗೊಂಡಿದ್ದರು. 1837ರ ಹೋರಾಟಗಾರರಿಗೆ ಸ್ಮಾರಕ ನಿರ್ಮಾಣ, ಒಂದು ಅಧ್ಯಯನ ಪೀಠ ರಚನೆ ಮತ್ತು ಪ್ರತಿವರ್ಷ ಅಬ್ಬಕ್ಕ ರಾಣಿ ಉತ್ಸವದ ಮಾದರಿಯಲ್ಲಿ ಅಮರಕ್ರಾಂತಿ ಉತ್ಸವ ನಡೆಸುವ ಭರವಸೆಗಳು ಧಾರಾಳವಾಗಿ ದೊರೆತವು. ಆದರೇನು ಮಾಡುವುದು? ನಮ್ಮನ್ನು ಆಳುವವರು ವರ್ತಮಾನದ ಬಗ್ಗೆ ಮಾತ್ರ ಯೋಚಿಸುವವರು. ನಮ್ಮ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿ ಹೋದವು.

ಒಂದು ಹನಿ ಮಸಿ ಕೋಟಿ ಜನಕ್ಕೆ ಬಿಸಿ

ಕಾಲ್ನಡಿಗೆ ಜಾಥಾ ಪುತ್ತೂರು ತಲುಪಿದಂದು ಕನ್ನಡ ಸಂಘದ ಅಧ್ಯಕ್ಷ ಬೋಳಂತ ಕೋಡಿ ಈಶ್ವರ ಭಟ್ಟರು “1837ರ ಹೋರಾಟದ ವಿವರಗಳನ್ನು ಗ್ರಂಥ ರೂಪದಲ್ಲಿ ಪ್ರಕಟಿಸಬೇಕು. ಆಗ ಮಾತ್ರ ಸತ್ಯ ಜನರಿಗೆ ತಿಳಿಯಲು ಸಾಧ್ಯ” ಎಂದಿದ್ದರು. ಈಗಾಗಲೇ ಮದರಾಸು ಪತ್ರಾಗಾರದಿಂದ ತರಿಸಿದ್ದ ಮಾಹಿತಿಗಳನ್ನು ಮತ್ತು ವರದಿಗಳನ್ನು ಹಾಗೂ ತಾವು ಕಲೆಹಾಕಿದ್ದ ಮಾಹಿತಿಗಳನ್ನು ಸೇರಿಸಿ ದೇವಿಪ್ರಸಾದರು ಅಮರ ಸುಳ್ಯದ ಸ್ವಾತಂತ್ರ ಸಮರ ಎಂಬ ಕೃತಿಂಯೊಂದನ್ನು ರಚಿಸಿದರು. ಅದನ್ನು ಬೋಳಂತಕೋಡಿಯವರ ನೇತೃತ್ವದ ಪುತ್ತೂರು ಕರ್ನಾಟಕ ಸಂಘ ಪ್ರಕಟಿಸಿತು. 1999ರ ಜೂನ್ 15ರಂದು ಪುತ್ತೂರಲ್ಲಿ ಜರಗಿದ ನಿರಂಜನರ ಎಪ್ಪತ್ತೈದನೇ ವರ್ಷದ ಜಯಂತಿ ಕಾರ್ಯಕ್ರಮದಲ್ಲಿ ಈ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಸ್ವಾಮಿ ಅಪರಂಪರ ಮತ್ತು ಕಲ್ಯಾಣ ಸ್ವಾಮಿ ಕಾದಂಬರಿಗಳ ಮೂಲಕ 1834ರಿಂದ 1837ರ ವರೆಗಿನ ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಪ್ರತಿಭಟನೆಗಳನ್ನು ಸಾಹಿತ್ಯಿಕವಾಗಿ ಚಿತ್ರಿಸಿದ ನಿರಂಜನರಿಗೆ ಅದು ಯುಕ್ತವಾದ ಶ್ರದ್ಧಾಂಜಲಿಯಾಗಿತ್ತು. ಆ ಕೃತಿಯಲ್ಲಿ ‘ಅಮರಕ್ರಾಂತಿ ವೀರರು’ ಬೀದಿ ನಾಟಕದೊಡನೆ ಲಾವಣಿಯನ್ನೂ ಸೇರಿಸಲಾಗಿತ್ತು. ನಾಟಕ ಮತ್ತು ಲಾವಣಿ ಕೆಲವು ಸ್ಪರ್ಧೆಗಳಲ್ಲಿ ಬಳಕೆಯಾಗಿ ವಿದ್ಯಾರ್ಥಿ ವಲಯಗಳಲ್ಲಿ ಜನಪ್ರಿಯವಾಗಿ ಬಿಟ್ಟಿತು.

ದೇವಿಪ್ರಸಾದರ ಅಮರಸುಳ್ಯದ ಸ್ವಾತಂತ್ರ ್ಯ ಸಮರ ಕೃತಿಗೆ ತುಂಬಾ ಮೆಚ್ಚುಗೆ ವ್ಯಕ್ತವಾಯಿತು. “ಈ ಐತಿಹಾಸಿಕ ಮಹತ್ವವುಳ್ಳ ಸ್ವಾತಂತ್ರ ್ಯ ಸಮರೇತಿಹಾಸ, ವಿವಿಧ ಸಂಶೋಧನಾ ಲೇಖನಗಳಿಂದ, ಹಿಂದಿನ ದಾಖಲೆಗಳಿಂದ ಸಾರಾಂಶ ರೂಪದಲ್ಲಿ ಹೀಗೆ ಪ್ರಕಟವಾಗುತ್ತಿರುವುದು ಇದೇ ಪ್ರಥಮ. ಇಂತಹ ಸಾಹಸ ಕಾರ್ಯಕ್ಕೆ ಆಸಕ್ತಿ ವಹಿಸಿದ ಶ್ರೀ ದೇವಿಪ್ರಸಾದರೇ ಮೊದಲಾದ ದೇಶಾಬಿಮಾನಿಗಳ ಈ ಸತ್ಕಾರ್ಯ ಪ್ರಶಂಸನೀಯ” ಎಂದು ಸ್ವಾತಂತ್ರಯೋಧ ಕವಿ ಕಿಂಞಣ್ಣ ರೈ ಯವರು ಪ್ರತಿಕ್ರಿಯಿಸಿದರು.

“ಸಂಪಾಜೆಯ ಗಣ್ಯ ಜನಪ್ರಿಯ ನಾಯಕರೂ, ಸ್ವತಃ ಕಲಾವಿದರೂ, ದೂರ ದೃಷ್ಟಿಕೋನದ ವಿಚಾರಶೀಲರೂ ಆದ ದೇವಿಪ್ರಸಾದರು ಬ್ರಿಟಿಷ್ ಚರಿತ್ರಕಾರರು ಭಾರತದ ಚರಿತ್ರೆಯನ್ನು ಹೇಗೆ ತಮಗೆ ಅನುಕೂಲವಾಗುವಂತೆ ಬರೆದು ಭಾರತೀಯರಿಗೆ ಅನ್ಯಾಯವುಂಟು ಮಾಡಿದರು ಎಂಬಂಶವನ್ನು ಚಿತ್ತ ಬಿತ್ತಿಯಲ್ಲಿ ಬಿಂಬಿಸುವಂತೆ ಕೆತ್ತಿದ್ದಾರೆ. ರೋಮಾಂಚಕ ಸ್ವಾತಂತ್ಯ್ರ ಹೋರಾಟದ ಇತಿಹಾಸವನ್ನು ತಮ್ಮ ಪುಸ್ತಕದಲ್ಲಿ ದೇವಿಪ್ರಸಾದರು ದಾಖಲೆಗಳು, ಬ್ರಿಟಿಷ್ ಅದಿಕಾರಿಗಳ ವರದಿಗಳು, ದಂಗೆಯ ಹಿನ್ನೆಲೆಯ ದೃಡೀಕೃತ ಅಂಕಿ ಅಂಶಗಳು, ವಿವಿಧ ಪರಿಶಿಷ್ಟಗಳು ಮುಂತಾದ ವಾಸ್ತವ ವೈಶಿಷ್ಟ ್ಯಗಳೊಂದಿಗೆ ವಿವರಿಸಿರುವುದು ನಿಜಕ್ಕೂ ಆಕರ್ಷಣೀಯವಾಗಿದೆ” ಎಂದು ಪ್ರೊ. ವಿ.ಎಸ್. ರಾಮಕೃಷ್ಣರು ಕೊಡಗು ಸಮಾಚಾರದಲ್ಲಿ ವಿಮರ್ಶಿಸಿದರು.

ಕೃತಿಯ ಉದ್ದೇಶವನ್ನು ಪೂಜಾರಿ ಮೊಣ್ಣಪ್ಪನವರು ಹೀಗೆ ಪ್ರಸ್ತುತ ಪಡಿಸಿದ್ದಾರೆ : “ದೇವಿಪ್ರಸಾದರು ಈ ಕೃತಿ ರಚನೆಗೆ ಹೊರಟದ್ದೇಕೆ? ಈ ಪ್ರಶ್ನೆಗೆ ಅವರ ಕೃತಿಯಲ್ಲೇ ಸಮಾಧಾನವಿದೆ. ಬ್ರಿಟಿಷರು ಅಮರಸುಳ್ಯದ ಸ್ವಾತಂತ್ಯ್ರ ಹೋರಾಟಗಾರರನ್ನು ದರೋಡೆ ಕೋರರೆಂಬಂತೆ ಚಿತ್ರಿಸಿ ಹುತಾತ್ಮರನ್ನು ಅವಹೇಳನ ಮಾಡಿದ್ದು ಅವರಿಗೆ ಸಹಿಸಲಸಾಧ್ಯವಾದ ನೋವಾಗಿತ್ತು. ಈಗಿನ ಕೆಲವು ಅರೆಬರೆ ಶಿಕ್ಷಿತರೂ ಕೂಡಾ ಕಲ್ಯಾಣಪ್ಪ ಮತ್ತವನ ಕಡೆಯವರನ್ನು ದರೋಡೆಕೋರರೆಂದೇ ಚಿತ್ರಿಸುತ್ತಿರುವ ಐತಿಹಾಸಿಕ ಅಪಚಾರವನ್ನು ಸರಿಪಡಿಸಲೆಂದೇ ಇತಿಹಾಸದಲ್ಲಿ ಎಲ್ಲೋ ಕಳೆದುಹೋಗಿದ್ದ ಸುಳ್ಯ ದಂಗೆಯ ಬಗ್ಗೆ ಬ್ರಿಟಿಷರಿಂದಲೇ ರಚಿತವಾದ ಕಡತ ಮತ್ತು ವರದಿಗಳನ್ನು ಹೊರಗೆಳೆದು, ಅಮರಸುಳ್ಯ ದಂಗೆಯ ಹುತಾತ್ಮರಿಗೆ ಅಷ್ಟರ ಮಟ್ಟಿನ ನ್ಯಾಯ ಒದಗಿಸಿದರು. ಇನ್ನದನ್ನು ಮುಂದುವರಿಸಿ ಮಡಿಕೇರಿ, ಬೆಳ್ಳಾರೆ, ಮಂಗಳೂರುಗಳಲ್ಲಿ ಸ್ಮಾರಕ ನಿರ್ಮಿಸುವುದು ನಾಡಿನ ಎಲ್ಲಾ ಜನರ ಕರ್ತವ್ಯವಾಗಿದೆ.’’

ಆದರೆ ಕೊಡಗಿನಲ್ಲಿ ಆ ಕೃತಿ ತೀವ್ರ ಸಂಚಲನವನ್ನುಂಟು ಮಾಡಿತು. ಪಟ್ಟೋಳೆ ಪಳಮೆಯಲ್ಲಿದ್ದ, ಬ್ರಿಟಿಷ್ ಪರ ನಿಂತು ರೈತ ಬಂಡಾಯವನ್ನು ಬಗ್ಗುಬಡಿದ ಕೊಡವರ ಹೆಸರುಗಳನ್ನು ಯಥಾವತ್ತಾಗಿ ದೇವಿಪ್ರಸಾದರು ತಮ್ಮ ಕೃತಿಯಲ್ಲಿ ಪ್ರಕಟಿಸಿದ್ದರು! ಅದು ಉಂಟುಮಾಡಿದ ಸಂಚಲನದ ಬಗ್ಗೆ ಟಿ.ಕೆ. ತ್ಯಾಗರಾಜ್ ಲಂಕೇಶ್ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟಿಸಿದರು : “ಮೂರು ದಾರಿಗಳು ಚಿತ್ರದ ನಿರ್ಮಾಪಕರಾದ ದೇವಿಪ್ರಸಾದ್ ಸದಬಿರುಚಿಯ ವ್ಯಕ್ತಿ. ರಂಗಭೂಮಿ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡವರು. ಕೊಡಗಿನ ಸಂಪಾಜೆಯಲ್ಲಿ ನೆಲೆಸಿರುವ ಅವರು ರಚಿಸಿರುವ ಅಮರಸುಳ್ಯದ ಸ್ವಾತಂತ್ಯ್ರ  ಸಮರ ಎಂಬ ಕೃತಿಯು ಕೊಡವರ ಕೋಪವನ್ನು ಎದುರಿಸುತ್ತಿದೆ. ಸ್ವಾತಂತ್ಯ್ರ ಸಂಗ್ರಾಮದಲ್ಲಿ ಭಾಗವಹಿಸಿದ್ದ ಅಪ್ಪಯ್ಯ ಗೌಡರನ್ನು 1837ರಲ್ಲಿ ಗಲ್ಲಿಗೆ ಏರಿಸಿದ್ದರೂ ಈವರೆಗೆ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಿಲ್ಲ ಎಂದು ದೇವಿಪ್ರಸಾದ್ ಬರೆದಿರುವುದು, ದಾಖಲೆಯೊಂದನ್ನು ಆಧರಿಸಿ ಬ್ರಿಟಿಷರಿಗೆ ಸಹಾಯ ಮಾಡಿದ ಮೂವತ್ತನಾಲ್ಕು ಮಂದಿಯ ಹೆಸರನ್ನು (ಮೂವತ್ತೆರಡು ಮಂದಿ ಕೊಡವರೇ) ಉಲ್ಲೇಖಿಸಿರುವುದು ಕೆಲವರ ಒದ್ದಾಟಕ್ಕೆ ಕಾರಣವಾಗಿದೆ. ಮೂವತ್ತೆರಡು ಮಂದಿ ಕೊಡವರ ಮನೆ ಹೆಸರನ್ನೂ ಕೊಟ್ಟಿರುವುದು ಕೊಡವರ ಕೋಪಕ್ಕೆ ಮುಖ್ಯ ಕಾರಣ. ಬ್ರಿಟಿಷರಿಗೆ ಸಹಾಯ ಮಾಡಿದವರ ಹೆಸರನ್ನು ದಾಖಲೆ ಸಹಿತ ಬರೆದಾಗ ಕೋಪಿಸಿಕೊಳ್ಳುವ ಅಗತ್ಯವಾದರೂ ಏನು?’’ ಕೊಡವರ ಬೈಬಲ್ಲು ಎಂದು ಪರಿಗಣಿತವಾಗಿದ್ದ ಪಟ್ಟೋಳೆ ಪಳಮೆಯಲ್ಲೇ ಈ ಹೆಸರಿರುವುದನ್ನು ನೋಡಿದ ಬಳಿಕ ದೇವಿಪ್ರಸಾದರ ಕೃತಿಯನ್ನು ಬಹಿಷ್ಕರಿಸಬೇಕು ಎಂಬ ಕೂಗು ಅಡಗಿತು. ಏಕೆಂದರೆ ಪ್ರತಿಭಟನಾಕಾರರು ಅದಕ್ಕೂ ಮುನ್ನ ಪಟ್ಟೋಳೆ ಪಳಮೆಯನ್ನು ಬಹಿಷ್ಕರಿಸಬೇಕಾಗುತ್ತಿತ್ತು! ಬ್ರಿಟಿಷರ ಪರವಾಗಿ ನಿಂತದ್ದು ತಾವಲ್ಲ; ತಮ್ಮ ಹಿರಿಯರು. ಅದಕ್ಕೆ ಆಗಿನ ಸಮಯ ಸಂದರ್ಭಗಳು ಕಾರಣವಾಗಿರಬಹುದು ಎಂಬ ಸರಳ ಸತ್ಯದ ಅರಿವಾಗಿ ಆ ಕುಟುಂಬ ಗಳು ಪ್ರತಿಭಟನೆ ನಿಲ್ಲಿಸಿದವು. ದೇವಿಪ್ರಸಾದರ ಕೃತಿ ದ್ವಿತೀಯ ಮುದ್ರಣವನ್ನು ಕಂಡಿತು!

ಬೆಳ್ಳಾರೆಯಲ್ಲೊಂದು ಸ್ಮಾರಕಕ್ಕಾಗಿ

1837ರ ರೈತ ಹೋರಾಟಗಾರರನ್ನು ಸರಕಾರ ಗೌರವಿಸುವುದಿಲ್ಲ ಎನ್ನುವುದು ಸ್ಪಷ್ಟವಾದ ಮೇಲೆ ಅಮರಕ್ರಾಂತಿ ಉತ್ಸವ ಸಮಿತಿ 2004ರಲ್ಲಿ ಬೆಳ್ಳಾರೆಯಲ್ಲೊಂದು ಕಾರ್ಯಕ್ರಮ ನಡೆಸಿತು. ಬೆಳ್ಳಾರೆಯು 1834ರ ವರೆಗೆ ಅಮರ, ಸುಳ್ಯ, ಬೆಳ್ಳಾರೆ, ಪಂಜ ಮಾಗಣೆಗಳ ರಾಜಧಾನಿಯಾಗಿತ್ತು. ಬ್ರಿಟಿಷರು ಅಲ್ಲೊಂದು ತಾಲೂಕು ಕಛೇರಿಯನ್ನು ಸ್ಥಾಪಿಸಿದ್ದರು. 1608ರಲ್ಲಿ ಇಕ್ಕೇರಿ ವೆಂಕಟಪ್ಪ ನಾಯಕ ಬೆಳ್ಳಾರೆ ಗುಡೆಯಲ್ಲಿ ಕಟ್ಟಿಸಿದ ಮಣ್ಣಿನ ಕೋಟೆಯ ಅವಶೇಷಗಳು ಈಗಲೂ ಇವೆ. 1837ರ ರೈತ ಕ್ರಾಂತಿ ಆರಂಭವಾದದ್ದು ಬೆಳ್ಳಾರೆ ಕಛೇರಿಯನ್ನು ವಶಪಡಿಸಿಕೊಳ್ಳುವುದರ ಮೂಲಕ. ಸುಳ್ಯದ ರಾಜಧಾನಿಯಾಗಿದ್ದ ಬೆಳ್ಳಾರೆಯಲ್ಲಿ ಐತಿಹಾಸಿಕ ಸ್ಮಾರಕವೊಂದು ರಚನೆಯಾಗಬೇಕೆಂಬ ಉದ್ದೇಶದಿಂದ ಕೋಟೆ ವಸಂತಕುಮಾರ್, ರಾಜೀವಿ ರೈ, ದಯಾಕರ ಆಳ್ವ, ಸುನಿಲ್ ರೈ, ಶ್ರೀರಾಮ ಪಾಟಾಜೆ, ಪನ್ನೆ ಪ್ರದೀಪ್, ಮಾಧವ ಗೌಡ, ಆರ್.ಕೆ. ಬೆಳ್ಳಾರೆ, ವಿಶ್ವನಾಥ ರೈ, ಗಂಗಾಧರ ರೈ, ಚಂದ್ರಹಾಸ ರೈ – ಮುಂತಾದವರನ್ನು ಒಳಗೊಳಿಸಿ ಬೆಳ್ಳಾರೆ ಕೋಟೆ ಸ್ಮಾರಕ ಸಮಿತಿಯನ್ನು ರೂಪಿಸಲಾಯಿತು. ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮಾನಾಥ ರೈಯವರನ್ನು ಕರೆಸಿ ಸುಳ್ಯಕ್ಕೆ ಕೇಂದ್ರವಾಗಿದ್ದ ಬೆಳ್ಳಾರೆಯ ಇತಿಹಾಸವನ್ನು ತಿಳಿಸಿ ಅಲ್ಲೊಂದು ಸ್ಮಾರಕ ನಿರ್ಮಿಸಿ 1837ರ ಹುತಾತ್ಮರಿಗೆ ಗೌರವ ಸಲ್ಲಿಸಲು ಸರಕಾರ ನೆರವಾಗಬೇಕೆಂದು ವಿನಂತಿಸಲಾಯಿತು.

ಈ ನಡುವೆ ಅಮರಕ್ರಾಂತಿ ಮತ್ತು ಕೊಡಗಿನ ಪ್ರತ್ಯೇಕತಾವಾದದ ನಡುವಣ ಸಂಬಂಧವನ್ನು ಸರಕಾರಕ್ಕೆ ತಿಳಿಸಲು ಕೊಡಗು ಪ್ರಜಾವೇದಿಕೆ ನಿರ್ಣಯಿಸಿತು. ದೇವಿಪ್ರಸಾದರು ಕೊಡಗಿನ ಮುಖಂಡರುಗಳೊಡನೆ ನನ್ನನ್ನೂ ಸೇರಿಸಿ ಮುಖ್ಯಮಂತ್ರಿ ಜೆ.ಎಚ್. ಪಟೇಲರಲ್ಲಿಗೆ ಕರೆದೊಯ್ದರು. ಕನ್ನಡ ಶಕ್ತಿ ಕೇಂದ್ರದ ಡಾ. ಎಂ. ಚಿದಾನಂದ ಮೂರ್ತಿಯವರು ಮುಖ್ಯಮಂತ್ರಿಯವರನ್ನು ಕಂಡು ನಮ್ಮ ಭೇಟಿಯ ಸಮಯವನ್ನು ನಿಗದಿ ಮಾಡಿದ್ದರು. ಪಟೇಲರು ನಮಗಿತ್ತ ಅವದಿ ಹತ್ತು ನಿಮಿಷ ಮಾತ್ರ. ನಮ್ಮ ಅಹವಾಲನ್ನು ಮನ್ನಿಸಿದ ಬಳಿಕ ಅವರು 19ನೆ ಶತಮಾನದ ಆದಿಯಲ್ಲಿ ಕರ್ನಾಟಕದಲ್ಲಿ ನಡೆದ ವಿವಿಧ ಬಂಡಾಯಗಳ ಬಗ್ಗೆ ನಮಗೆ ವಿವರಿಸತೊಡಗಿದರು. ಅರ್ಧಗಂಟೆ ಉರುಳಿತು! ಕೊನೆಯಲ್ಲಿ ಅವರು – “ಕೊಡಗು ಕರ್ನಾಟಕದ ಅವಿಭಾಜ್ಯ ಅಂಗ. ಅದನ್ನು ಎಂದಿಗೂ ಪ್ರತ್ಯೇಕವಾಗಲು ಬಿಡುವುದಿಲ್ಲ. ಬೆಳ್ಳಾರೆ ಮತ್ತು ಮಡಿಕೇರಿಗಳಲ್ಲಿ ಬಂಡಾಯಗಾರರ ಸ್ಮಾರಕ ನಿರ್ಮಿಸ ಬೇಕಾದದ್ದು ಸರಿ. ಅದನ್ನು ಬೇಗನೆ ಮಾಡೋಣ. ಮಂಗಳೂರು ವಿ.ವಿ.ಯಲ್ಲಿ ಪೀಠ ಸ್ಥಾಪನೆಗೆ ಯಾರಾದರೂ ದಾನಿಗಳು ಸಿಕ್ಕರೆ ನೋಡಿ. ಅದು ವಿ.ವಿ.ಯ ಸಿಂಡಿಕೇಟ್, ಸೆನೆಟ್ಟಿಗೆ ಸಂಬಂದಿಸಿದ ವಿಷಯ” ಎಂದರು.

ಅದು ಯಾವುದೂ ಕಾರ್ಯರೂಪ ತಾಳಲಿಲ್ಲ. ಆದರೆ ಕಾಲ ಎಲ್ಲಿ ನಿಲ್ಲುತ್ತದೆ? ದೇವಿಪ್ರಸಾದರಿಗೆ ಅರುವತ್ತು ತುಂಬಿತು. ಬಿ.ಎ. ಗಣಪತಿ, ತಿರುಮಲ, ಡಿ.ಎಸ್. ಬಾಲಕೃಷ್ಣ, ಮಹಮ್ಮದ್ ಕುಂಞಿ, ಮೋಹನ್, ಕೇಶವ ಚೌಟಾಜೆ, ಉಮೇಶ ಎಂ.ಪಿ., ಕೆ.ಆರ್. ಗಂಗಾಧರ್, ಗೂನಡ್ಕ ಮಹಮ್ಮದ್ ಕುಂಞಿ, ಮೊದಿನ್ ಕುಂಞಿ, ಜಬ್ಬಾರ ಸಮೋ, ಗೀತಾ ಮೋಹನ್ ಮುಂತಾದವರ ನೇತೃತ್ವದಲ್ಲಿ ದೇವಿಪ್ರಸಾದ ಅಬಿನಂದನ ಸಮಿತಿಂುೊಂದು ರೂಪುಗೊಂಡಿತು. ದೇವಿಪ್ರಸಾದರ ಜೀವನ ಮತ್ತು ಸಾಧನೆಗಳ ಬಗ್ಗೆ ಸಮರಸವೆಂಬ ಅಬಿನಂದನಾ ಕೃತಿಂುೊಂದು ಹೊರಗೆ ಬಂತು. ಅಂದು ದೇವಿಪ್ರಸಾದರನ್ನು ಅಬಿನಂದಿಸಿ ದವರೆಲ್ಲ ಕರ್ನಾಟಕದ ಅಖಂಡತೆಯ ಹರಿಕಾರ ಎಂದು ಶ್ಲಾಘಿಸಿದರು.

ಆ ಬಳಿಕ ಅಬಿನಂದನ ಸಮಿತಿ ಮತ್ತು ಸಂಪಾಜೆ ಗ್ರಾಮ ಪಂಚಾಯತ್ ಪ್ರತಿವರ್ಷ ದೇವಿಪ್ರಸಾದರ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸ್ಸು ಮಾಡುತ್ತಿವೆ. ಇನ್ನೂ ನ್ಯಾಯ ಸಂದಿಲ್ಲ! “ನಾನು ಪ್ರಶಸ್ತಿಗಾಗಿ ಕೆಲಸ ಮಾಡಿದ್ದಲ್ಲ. ಆದರೆ ರಾಜ್ಯದ ಅಖಂಡತೆಗಾಗಿ ದುಡಿಯುವವರನ್ನು ರಾಜ್ಯೋತ್ಸವದಂದೂ ಗೌರವಿಸದಿದ್ದರೆ ವಿಚ್ಛಿದ್ರಕಾರಿ ಶಕ್ತಿಗಳಿಗೆ ಬೆಳೆತು ಬೇರು ಬಿಡಲು ಅವಕಾಶವಾಗುತ್ತದೆ” ಎಂದು ದೇವಿಪ್ರಸಾದ್ ಹೇಳುವಾಗ ಅದರಲ್ಲಿ ತಪ್ಪಿಲ್ಲ ಎನಿಸುತ್ತದೆ.

ಆದರೆ ದೇವಿಪ್ರಸಾದರಲ್ಲೊಂದು ನೋವಿದೆ. ಸುಳ್ಯದ ಜನರು 1837ರ ಅಮರಕ್ರಾಂತಿಯ ನೆನಪನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಸ್ವಾತಂತ್ಯ್ರ  ಸ್ಮಾರಕಗಳನ್ನು ನಿರ್ಮಿಸುತ್ತಾರೆ; ಅಮರಕ್ರಾಂತಿ ಉತ್ಸವವನ್ನು ಪ್ರತಿವರ್ಷ ಒಂದೊಂದು ಊರ ಜನರು ಅರ್ಥಪೂರ್ಣವಾಗಿ ಆಚರಿಸುತ್ತಾರೆ ಮತ್ತು ಅಮರಕ್ರಾಂತಿಯು ಸ್ಥಳೀಯ ಇತಿಹಾಸದ ರೂಪದಲ್ಲಿ ಮಂಗಳೂರು ವಿ.ವಿ.ಯ ಬಿ.ಎ. ತರಗತಿಯ ವಿದ್ಯಾರ್ಥಿಗಳ ಸಿಲೆಬಸ್ಸಲ್ಲಿ ಸೇರ್ಪಡೆಯಾಗುತ್ತದೆಂದು ಅವರು ಭಾವಿಸಿದ್ದರು. ಅಮರಕ್ರಾಂತಿ ಉತ್ಸವ ಸಮಿತಿ ದೇವಿಪ್ರಸಾದರದ್ದು ಮಾತ್ರ ಎಂದು ಜನರು ಅಂದುಕೊಂಡಿದ್ದಾರೆ. ದೇವರು, ಜಾತಿ, ಆರ್ಕೆಸ್ಟ್ರಾ, ಧರ್ಮ, ಮದುವೆಗಳಿಗೆ ಮುಗಿ ಬೀಳುವ ಜನರು ನಮ್ಮ ಇತಿಹಾಸದ ಬಗ್ಗೆ ಯಾಕಿಷ್ಟು ಅಸಡ್ಡೆ ತೋರುತ್ತಾರೆಂದು ನನಗೆ ತಿಳಿಯುತ್ತಿಲ್ಲ ಎಂದು ಸ್ಥಾಯಿಯಾದ ವಿಷಾದ ಭಾವದಲ್ಲಿ ಅವರು ಹೇಳುತ್ತಿರುತ್ತಾರೆ. ಅಮರ ಸುಳ್ಯದ 1837ರ ಸಂಗ್ರಾಮದಲ್ಲಿ ಪಾಲ್ಗೊಂಡ ಕುಟುಂಬಗಳ ಈಗಿನ ಕಿರಿಯರು ತಮ್ಮ ಹಿರಿಯರ ನೆನಪನ್ನು ಉಳಿಸಲು ಏನನ್ನೂ ಮಾಡದಿರುವುದು ಅವರನ್ನು ದಿಗ್ಭ್ರಾಂತಿಗೊಳಿಸಿದೆ.

ಅಮರಕ್ರಾಂತಿ ಜಂಗಲ್ ಪಾರ್ಕ್

70ರ ಗಡಿಗೆ ಹತ್ತಿರವಾಗುತ್ತಿದ್ದರೂ ದೇವಿಪ್ರಸಾದರ ಆವಿಷ್ಕಾರಿಕ ಮನಸ್ಸು ಸುಮ್ಮನಿರುವುದಿಲ್ಲ. ಅವರ ಮನೆಗೆ ಹೋಗುವ ಹಾದಿಯ ಇಕ್ಕೆಲಗಳಲ್ಲಿ ಸಮೃದ್ಧ ಅಡಿಕೆ ಬೆಳೆಯುವ ವಿಶಾಲ ತೋಟವಿತ್ತು. ಹಳದಿ ರೋಗ ಬಂದು ತೋಟ ಸಂಪೂರ್ಣವಾಗಿ ನಿರ್ನಾಮವಾಗಿದೆ. ಆದರೂ ಅಮರಕ್ರಾಂತಿಯನ್ನು ಇಂದಿನ ಪೀಳಿಗೆಗೆ ನೆನಪಿಸುವ ಉದ್ದೇಶದಿಂದ ಅವರು ಅಮರಕ್ರಾಂತಿ ಜಂಗಲ್ಪಾರ್ಕ್ ಅನ್ನು ನಿರ್ಮಿಸಿದ್ದಾರೆ. ಇದಕ್ಕೆ ಮಾರ್ಗದರ್ಶನ ಸುಳ್ಯದ ಪ್ರವಾಸೋದ್ಯಮಿ ಆರ್.ಕೆ. ಭಟ್ಟರದ್ದು. ಅಲ್ಲೊಂದು ಈಜು ಕೊಳವಿದೆ. ನಂಜಯ್ಯರ ಮನೆಯೆಂಬ ಮ್ಯೂಸಿಯಂ ತಲೆ ಎತ್ತಿದೆ. ನೆಟ್ವಾಕ್, ರಿವರ್ ಕ್ರಾಸಿಂಗ್, ಟಾರ್ಜನ್ ಸ್ವಿಂಗ್, ಬರ್ಮಾ ಬ್ರಿಜ್, ಜಂಗಲ್ ವಾಕ್ನಂತಹ ಸಾಹಸ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ಮನರಂಜನೆಗಾಗಿ ವಿಶೇಷ ವ್ಯವಸ್ಥೆಗಳಿವೆ. ಮಕ್ಕಳಿಗೆ ಮನರಂಜನೆ, ಯುವಕ-ಯುವತಿಯರಿಗೆ ಸಾಹಸ ಕ್ರೀಡೆಗಳು, ವಯಸ್ಕರಿಗೆ ಆರೋಗ್ಯ ಸುಧಾರಣೆಯ ತಂತ್ರಗಳು ಮತ್ತು ಜಿಜ್ಞಾಸುಗಳಿಗೆ ಸಮೃದ್ಧ ಗ್ರಂಥಾಲಯ – ಜಂಗಲ್ ಪಾರ್ಕಿನ ಪ್ರಮುಖ ಆಕರ್ಷಣೆಗಳು. 1837ರ ಅಮರಕ್ರಾಂತಿಯನ್ನು ನೆನಪಿಸಲೆಂದು ಇಲ್ಲಿನ ಎಲ್ಲಾ ರಸ್ತೆಗಳಿಗೆ ಹೋರಾಟಗಾರರ ಹೆಸರು ಇರಿಸಲಾಗಿದೆ. ಕಲ್ಯಾಣಸ್ವಾಮಿಯ ಹೆಸರಲ್ಲಿ ಒಂದು ಜಲಪಾತವನ್ನು ಸೃಷ್ಟಿಸಲಾಗಿದೆ. ಅಮರಕ್ರಾಂತಿ ಗ್ರಂಥಾಲಯದಲ್ಲಿನ ಕೊಡಗು – ದ.ಕ. ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂದಿಸಿದ ಕೃತಿಗಳು, 1837ರ ಹೋರಾಟಕ್ಕೆ ಸಂಬಂದಿಸಿದ ಸಂಶೋಧನಾ ಕೃತಿಗಳು, ನಾಟಕ, ಕತೆ, ಕಾದಂಬರಿಗಳು, ದ.ಕ. ಮತ್ತು ಕೊಡಗಿನ ಲೇಖಕರ ಉತ್ಕೃಷ್ಟ ಕೃತಿಗಳು, ಮಕ್ಕಳ ಸಾಹಿತ್ಯ ಮೂಲಿಕೆಗಳು, ವಿಶ್ವಕೋಶ ಮತ್ತು ಜ್ಞಾನಕೋಶಗಳು – ಜಿಜ್ಞಾಸುಗಳ ಜ್ಞಾನದಾಹವನ್ನು ಹಿಂಗಿಸುವ ಪ್ರಯತ್ನ ಮಾಡುತ್ತಿವೆ.

ದೇವಿಪ್ರಸಾದರದು ಸಂತೃಪ್ತ ಎನ್ನಲಾಗದಿದ್ದರೂ ಸಾರ್ಥಕ ಬದುಕು. ಅವರ ಸಹಧರ್ಮಿಣಿ ಇಂದಿರಾ ಪತಿಯ ಮಹತ್ವಾಕಾಂಕ್ಷೆಗೆ ಅಡ್ಡ ಬಂದವರಲ್ಲ. ಮಗ ದೇವಿಚರಣ್ ಮತ್ತು ಸೊಸೆ ಟೀನಾ ದೇವಿಪ್ರಸಾದರ ಎರಡು ಹಸ್ತಗಳಾಗಿ ಅವರ ಉದ್ದೇಶಗಳನ್ನು ಈಡೇರಿಸುವಲ್ಲಿ ಸಹಕಾರಿಗಳಾಗಿದ್ದಾರೆ. ತುಂಬು ಚಟುವಟಿಕೆಯ ಮೊಮ್ಮಗ ಮೌರ್ಯ ಅಮರಕ್ರಾಂತಿ ಜಂಗಲ್ ಪಾರ್ಕಿನಲ್ಲಿರುವ ಮಕ್ಕಳ ಮನರಂಜನಾ ಸೌಲಭ್ಯಗಳಿಗೆ ತನ್ನಿಂದಾದ ನ್ಯಾಯ ಒದಗಿಸುತ್ತಿದ್ದಾನೆ.

ದೇವಿಪ್ರಸಾದರ ಹಾಗೆ ಕಲೆ, ಇತಿಹಾಸ ಮತ್ತು ಸಂಸ್ಕೃತಿ ಉಳಿಸಲು ಪ್ರಾಮಾಣಿಕ ಪ್ರಯತ್ನ ಪಡುವ ಮಂದಿಗಳು ಪ್ರತಿ ಊರಲ್ಲೂ ಇದ್ದರೆ ಭಾರತ ನಿಜಕ್ಕೂ ವಿಶ್ವದ ‘ಸೂಪರ್ ಪವರ್’ ಆಗಲಿದೆ.

ಎನ್.ಎಸ್.ಡಿ. – ಸಂಕ್ಷಿಪ್ತ ಪರಿಚಯ

ಪೂರ್ಣ ವಿಳಾಸ

ಎನ್.ಎಸ್. ದೇವಿಪ್ರಸಾದ್ ಸಂಪಾಜೆ

ಅಮರಕ್ರಾಂತಿ ಎಸ್ಟೇಟ್,  ಎನ್.ಎಸ್.ಡಿ. ವಿಲೇಜ್, ಅಂಚೆ :ಸಂಪಾಜೆ

ಉತ್ತರ ಕೊಡಗು, ಕೊಡಗು ಜಿಲ್ಲೆ – 574 244

ದೂರವಾಣಿ : 08257 239855 266244, 94 48472244

ಈಮೈಲ್ – nsdeviprasad@gmail.com

ಜನನ ದಿನಾಂಕ : 27-04-1942

ತಂದೆ : ದಿ. ಎನ್. ಸಣ್ಣಯ್ಯ ಪಟೇಲ್. ತಾಯಿ : ಪೂವಮ್ಮ

ಶೈಕ್ಷಣಿಕ ಅರ್ಹತೆ

ಬಿ.ಎ. ಮೈಸೂರು ವಿ.ವಿ.

ಜರ್ನಸಲಿಸಂ ಡಿಪ್ಲೋಮಾ ಮುಂಬೈ ವಿ.ವಿ.

 

ಶೈಕ್ಷಣಿಕ ಸಾಧನೆಗಳು

ಅಧ್ಯಕ್ಷ ಸಂಪಾಜೆ ವಿದ್ಯಾಸಂಘ (ರಿ)

ಅಧ್ಯಕ್ಷ ಸಂಪಾಜೆ ಪ್ರೌಢಶಾಲೆ ಸ್ಥಾಪಕ ಸದಸ್ಯ ಮಂಡಳಿ

ಸದಸ್ಯ ಆದಿಚುಂಚನಗಿರಿ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ

ಸದಸ್ಯ ಮಂಗಳೂರು ವಿ.ವಿ. ಎಪಿಲಿಯೇಶನ್ ಕಮಿಶನ್

 

ಸಹಕಾರಿ ಕ್ಷೇತ್ರದ ಸಾಧನೆಗಳು

ಅಧ್ಯಕ್ಷ ಮಲ್ಲೇಶ್ವರ ಸಹಕಾರಿ ಬ್ಯಾಂಕ್ ಸಂಪಾಜೆ 1974

ಅಧ್ಯಕ್ಷ ಜೈಹಿಂದ್ ಸಹಕಾರಿ ಮಾರಾಟ ಸಂಘ ಪೆರಾಜೆ 1974

ಅಧ್ಯಕ್ಷ ಮಡಿಕೇರಿ ತಾಲೂಕು ಭೂ ಅಬಿವೃದ್ಧಿ ಬ್ಯಾಂಕ್ 1975

ಅಧ್ಯಕ್ಷ ಕೊಡಗು ಜಿಲ್ಲಾ ಅಡಿಕೆ ಬೆಳೆಗಾರರ ಸಂಘ 1975

ಆಡಳಿತ ಮಂಡಳಿ ಸದಸ್ಯ/ಖಜಾಂಚಿ ಕರ್ನಾಟಕ ರಾಜ್ಯ ಸಹಕಾರಿ ಭೂ ಬ್ಯಾಂಕ್ 1986

 

ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದ ಸಾಧನೆಗಳು

 • · ಸಂಪಾಜೆ ಪಂಚಲಿಂಗೇಶ್ವರ ದೇವಾಲಯದ ಮೊಕ್ತೇಸರ 1960ರಿಂದ
 • · ಸಂಪಾಜೆ ಶಿರಾಡಿ ಭೂತ ದೈವಸ್ಥಾನದ ಮೊಕ್ತೇಸರ 1960ರಿಂದ
 • · ಸದಸ್ಯ ತಾಲೂಕು ಅಬಿವೃದ್ಧಿ ಮಂಡಲಿ 1968
 • · ಅಧ್ಯಕ್ಷ ಸಮಾಜ ಕಲ್ಯಾಣ ಸಮಿತಿ ಮಡಿಕೇರಿ 1968
 • · ಉಪಾಧ್ಯಕ್ಷ ದ.ಕ. ಗೌಡ ವಿದ್ಯಾಸಂಘ 1972.
 • · ಗೌರವಾಧ್ಯಕ್ಷ ಕೊಡಗು – ದ.ಕ. ಗೌಡ ಅಬಿವೃದ್ಧಿ ಸಂಘ (ರಿ)
 • · ಅಧ್ಯಕ್ಷ ಮಡಿಕೇರಿ ಲಯನ್ಸ್ ಕ್ಲಬ್ 1978
 • · ಟೋಕಿಯೋ ಲಯನ್ಸ್ ಸಮ್ಮೇಳನ ಪ್ರತಿನಿದಿ 1979
 • · ವಿಭಾಗ ಅಧ್ಯಕ್ಷ ಲಯನ್ಸ್ ಜಿಲ್ಲೆ 1980
 • · ಅಮೇರಿಕಾ ಲಯನ್ಸ್ ಸಮ್ಮೇಳನ ಪ್ರತಿನಿದಿ 1986
 • · ಲಯನ್ಸ್ ಜಿಲ್ಲೆ ಪ್ರಾಂತೀಯ ಅಧ್ಯಕ್ಷ 1988
 • · ಅಧ್ಯಕ್ಷ ಕೊಡಗು ಪ್ರಜಾ ವೇದಿಕೆ 1996
 • · ಅಧ್ಯಕ್ಷ ಅಮರಕ್ರಾಂತಿ ಉತ್ಸವ ಸಮಿತಿ 1998

 

ಪ್ರಕಟಿತ ಕೃತಿಗಳು

 • · ಉದ್ಘಾಟನೆ – ಸಂಪಾದಿತ ಕೃತಿ – 1978
 • · ಅಪಹರಣ – ಟೆಲಿಚಿತ್ರ – 1988
 • · ಶಿರಾಡಿ ಭೂತ – ಜಾನಪದ ನಾಟಕ – 1995
 • · ಕೊಡಗಿನಲ್ಲಿ ಜಾತೀಯತೆ – ಲೇಖನಗಳು – 1995
 • · ನವನೀತ – ಸಂಪಾದಿತ ಕೃತಿ – 1997
 • · ಹೆಂಗಿತ್ತ್ ಹೇಂಗಾತ್ – ಅರೆಭಾಷೆ ನಾಟಕ – 1999
 • · ಅಮರಸುಳ್ಯದ ಸ್ವಾತಂತ್ಯ್ರ  ಸಮರ – ಸಂಶೋಧನಾ ಲೇಖನಗಳು – 1999
 • · ಕೊಡಗಿನಲ್ಲಿ ಭಾಷಾ ಸಾಂಸ್ಕೃತಿಕ ಸಾಮರಸ್ಯ – (ಸಂ) – 2003.

 

ಪ್ರಶಸ್ತಿ ಮತ್ತು ಪುರಸ್ಕಾರಗಳು

 • · ಮೂರು ದಾರಿಗಳು ಚಿತ್ರನಿರ್ಮಾಣಕ್ಕೆ ರಾಷ್ಟ್ರ ಪ್ರಶಸ್ತಿ
 • · ಮೂರು ದಾರಿಗಳು ಚಿತ್ರಕ್ಕೆ ಐದು ರಾಜ್ಯ ಪ್ರಶಸ್ತಿ
 • · ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನ ಸನ್ಮಾನ 1987
 • · ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ 2004
 • · ದೆಹಲಿ ಸಂಘದ ಸುವರ್ಣ ಕರ್ನಾಟಕ ಗೌರವ ಪುರಸ್ಕಾರ 2007

 

ಅಪೂರ್ವ ಸಾಧನೆಗಳು

1. ಪ್ರತ್ಯೇಕತಾವಾದಿಗಳಿಂದ ಕೊಡಗನ್ನು ರಕ್ಷಿಸಿ ಕರ್ನಾಟಕದ ಅಖಂಡತೆಯನ್ನು ಕಾಪಾಡಿದ ಕೊಡಗು ಪ್ರಜಾವೇದಿಕೆಯ ರೂವಾರಿ ಮತ್ತು ಗೌರವಾಧ್ಯಕ್ಷ.

2. 1837ರ ಕೊಡಗು-ಕೆನರಾ ಬಂಡಾಯದ ಹುತಾತ್ಮರ ನೆನಪು ಚಿರಸ್ಥಾಯಿಯಾಗಲು ಸ್ಥಾಪನೆಯಾದ ಅಮರಕ್ರಾಂತಿ ಉತ್ಸವ ಸಮಿತಿಯ ಅಧ್ಯಕ್ಷ.

 

ಕುಟುಂಬ ವಿವರ

 • · ಪತ್ನಿ – ಶ್ರೀಮತಿ ಇಂದಿರಾ ಎನ್.ಎಸ್.ಡಿ.
 • · ಹಿರಿ ಮಗಳು – ಸಹನಾ ಮುರಳೀಧರ್ ಅಮೇರಿಕಾ
 • · ಕಿರಿ ಮಗಳು – ಪ್ರಜ್ಞಾ ಅರುಣ್ ಆಸ್ಟ್ರೇಲಿಯಾ
 • · ಮಗ – ದೇವಿಚರಣ್   ಸೊಸೆ : ಟೀನಾ    ಮೊಮ್ಮಗ : ಮೌರ್ಯ

 

ಗ್ರಂಥಋಣ

1. Rev. B. Richter – Gazetteer of Coorg 1870

2. ಕೃಷ್ಣಯ್ಯ ಡಿ.ಎನ್. – ಕೊಡಗಿನ ಇತಿಹಾಸ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ 1974.

3. ದೇವಿಪ್ರಸಾದ್ ಸಂಪಾಜೆ – ಅಮರಸುಳ್ಯದ ಸ್ವಾತಂತ್ಯ್ರ ಸಮರ, ಕನ್ನಡ ಪ್ರಪಂಚ ಪ್ರಕಾಶನ ಪುತ್ತೂರು 1999.

4. ಪ್ರಭಾಕರ ಶಿಶಿಲ (ಸಂ) – ಸಮರಸ, ದೇವಿಪ್ರಸಾದ್ ಸಂಪಾಜೆ ಷಷ್ವ ್ಯಬ್ದಅಬಿನಂದನಾ ಕೃತಿ, ದೇವಿಪ್ರಸಾದ್ ಅಬಿನಂದನ ಸಮಿತಿ ಸಂಪಾಜೆ 2003.

5. ದೇವಿಪ್ರಸಾದ್ ಸಂಪಾಜೆ (ಸಂ) – ಕೊಡಗಿನಲ್ಲಿ ಭಾಷಾ ಸಾಂಸ್ಕೃತಿಕ ಸಾಮರಸ್ಯ, ಅಮರಕ್ರಾಂತಿ ಉತ್ಸವ ಸಮಿತಿ ಸುಳ್ಯ 2003.

6. ಪ್ರೊ. ಸೀತಾರಾಮ ಕೇವಳ ಮತ್ತು ಡಾ. ಸುಂದರ ಕೇನಾಜೆ (ಸಂ) – ಹೆಜ್ಜೆ, ಶಿಶಿಲ ಅಬಿನಂದನಾ ಸಂಪುಟ, ಡಾ. ಶಿಶಿಲ ಅಬಿನಂದನಾ ಸಮಿತಿ ಕಾಂತಮಂಗಲ ಸುಳ್ಯ 2003.

7. ಮಹಾಬಲ ಕುಳ(ಸಂ) – ಬೆಳ್ಳಾರೆ ಬೆಳಗು, ಸ್ಮರಣ ಸಂಚಿಕೆ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ. ಅಧ್ಯಕ್ಷ ಜಾಕೆ ಮಾಧವ ಗೌಡ 2008.

8. ಪ್ರಭಾಕರ ಶಿಶಿಲ – ನದಿ ಎರಡರ ನಡುವೆ – 2010 ವಸಂತ ಪ್ರಕಾಶನ, 360. ಮುಖ್ಯರಸ್ತೆ 10ಬಿ, ಮೂರನೇ ಬ್ಲಾಕ್, ಜಯನಗರ, ಬೆಂಗಳೂರು – 560 004. ದೂ : 22443996.