ಮರಗಳು

ಕೊಡಗಿನಲ್ಲಿರುವ ಕಾಡುಗಳಲ್ಲಿ ಕೆಲವಕ್ಕೆ ‘ಮಲೆ’ ಎಂತಲೂ ಕೆಲವಕ್ಕೆ ‘ಕಣಿವೆ ಕಾಡು’ ಎಂತಲೂ ಹೆಸರು. ಪಶ್ವಿಮ ಘಟ್ಟಗಳನ್ನು ಮುಚ್ಚಿಕೊಂಡಿರುವ ಕಾಡುಗಳೇ ಮಲೆಗಳು. ದೇಶದ ಪೂರ್ವ ಭಾಗದಲ್ಲಿ ತಗ್ಗು ಪ್ರದೇಶಗಳನ್ನು ಮುಚ್ಚಿಕೊಂಡಿರುವ ಕಾಡುಗಳು ‘ಕಣಿವೆ ಕಾಡುಗಳು’ ಮಲೆಕಾಡುಗಳಲ್ಲಿ ಬೆಳೆದು ತೊಲೆಗಳಿಗೆ ಉಪಯೋಗವಾಗುವ ಮುಖ್ಯ ಜಾತಿಯ ಮರಗಳು ಯಾವುವೆಂದರೆ:

ಕೂವೆಮರ (ಸಿರಿಪೊನ್ನೆ) : ವೃಕ್ಷರಾಜನೆಂದು ಕರೆಯಲ್ಪಡಬಹುದಾದ ಈ ಮರವು ಪೂರ್ತಿಯಾಗಿ ಬೆಳೆದರೆ, ೧೦೦ ಅಡಿಗಳ ಎತ್ತರವಾಗುವುದು, ಈ ಮರ ಬಹಳ ಒಳ್ಳೆಯದು, ಹಡಗುಗಳ ಪಟಸ್ತಂಭಕ್ಕೆ ಇದರಷ್ಟು ಅನುಕೂಲಾದ ಮರವು ಬೇರೆ ಯಾವುದೂ ಇರುವುದಿಲ್ಲ.

ಧೂಪದ ಮರ ಇದು ಬಹು ಸೊಗಸಾದ ದೊಡ್ಡ ಮರ. ಇದರ ಚಿಗುರೆಲೆ ಕೆಂಪಗಿರುವುದರಿಂದ ಈ ಮರವನ್ನು ಬಹು ದೂರದಿಂದಲೇ ಗೊತ್ತು ಮಾಡಬಹುದು. ಈ ಮರದ ಸುತ್ತಲೂ (ಮುಖ್ಯವಾಗಿ ಬೇರಿನ ಸುತ್ತಲೂ) ಒಳ್ಳೆಯ ಗುಗ್ಗುಳ ಸಿಕ್ಕುತ್ತದೆ.

ಬಿಳೆಯ ಧೂಪದ ಮರ : ಇದರಿಂದಲೂ ಒಳ್ಳೆಯ ಗುಗ್ಗುಳ ಸಿಕ್ಕುತ್ತದೆ. ಇದರ ಚಕ್ಕೆಯನ್ನೆತ್ತಿ ಬೆಂಕಿಗೆ ತೋರಿಸಿದರೆ, ಇದರಿಂದ ಗುಗ್ಗುಳ ಹಾಲು ಒಸರುತ್ತದೆ.

ಕಾಂಭೋಜ (ಅರದಳದ ಮರ) : ಇದರಲ್ಲಿ ಭಾರಿ ಬೆಲೆಯುಳ್ಳ ಹಳದಿ ಬಣ್ಣದ ಅರದಳವೆಂಬ ಗೋಂದು ಸಿಕ್ಕುತ್ತದೆ.

ಸಂಪಿಗೆ : ಇದು ಸುವಾಸನೆಯುಳ್ಳ ಸುಂದರವಾದ ಹೂವುಗಳೊಡನೆ ಕೂಡಿರುವುದರಿಂದ ಕೊಡಗು ಕವಿಯ ಕಣ್ಣಿಗೆ ಅತ್ಯಂತ ಮನೋಹರವಾದುದು.

ಕರಿಮರ (ಮಳಲಿಮರ) : ಇದು ಉಪಯೋಗಕರವಾದ ಒಂದು ಬಗೆಯ ಗಟ್ಟಿಯಾದ ಕರಿಯಮರ.

ಮರದೆಣ್ಣೆಯ ಮರ : ಇದರಿಂದ ಮರಗಳಿಗೆ ವಾರ್ನಿಷ್ ಮಾಡುವುದಕ್ಕೆ ಉಪಯುಕ್ತವಾದ ಒಂದು ತರಹ ಎಣ್ಣೆ ಉಂಟಾಗುತ್ತದೆ.

ಹಲಸು : ಇದು ಬಹಳ ಉಪಯೋಗಕರವಾದ ಮರಗಳಲ್ಲಿ ಒಂದು. ಇದರ ಹಣ್ಣುಗಳನ್ನು ತಿನ್ನುತ್ತಾರೆ. ಮರವನ್ನು ಕಟ್ಟಡಗಳಿಗೆ ಉಪಯೋಗಿಸುತ್ತಾರೆ.

ಉರುಪುಮರ (ಶಿಲ್ವೆಮರ) : ಇದರಿಂದ ಬಹು ಗಟ್ಟಿಯಾದ ಮರ ಮುಟ್ಟುಗಳು ದೊರೆಯುತ್ತವೆ.

ಬೆಳ್ಳಂದಿ ಇದು ಕಟ್ಟಡಗಳಿಗೆ ಉಪಯುಕ್ತವಾದ ಒಳ್ಳೆಯ ಮರ.

ನೊಗ : ಇದೂ ಕಟ್ಟಡಗಳಿಗೆ ಉಪಯುಕ್ತವಾದುದು.

ಬೈನೆ : ಇದು ತಾಳೆಮರದ ಜಾತಿಗೆ ಸೇರಿದ ಒಂದು ಸುಂದರವಾದ ಮರ. ಇದರಿಂದ ಒಂದು ಬಗೆಯ ಹಿತಕರವಾದ ಹೆಂಡವನ್ನು ತೆಗೆಯುತ್ತಾರೆ. ಇದರ ಬೆಂಡಿನಿಂದ ಆಹಾರಕ್ಕೆ ಉಪಯೋಗವಾದ ಒಂದು ತರಹ ಹಿಟ್ಟನ್ನು ಮಾಡುತ್ತಾರೆ. ಮುಖ್ಯವಾಗಿ ರೋಗಿಗಳಿಗೆ ಈ ಹಿಟ್ಟಿನಿಂದ ಗಂಜಿಯನ್ನು ಮಾಡಿಕೊಡುತ್ತಾರೆ.

ಫಲವೃಕ್ಷಗಳು : ಇವುಗಳಲ್ಲಿ ಕಿತ್ತಳೆ, ಜಂಬು ನೇರಳೆ, ದಾಳಿಂಬೆ, ಬಾಳೆ ಮುಂತಾದವುಗಳೇ ಮುಖ್ಯವಾದುವು. ಇವುಗಳನ್ನು ಬಹಳವಾಗಿ ಬೆಳೆಸುತ್ತಾರೆ.

ಕಣಿವೆಕಾಡುಗಳಲ್ಲಿಸಿಕ್ಕುವಮರಗಳು

ಬಿದುರು : ಇದು ಈ ದೇಶದಲ್ಲೆಲ್ಲಾ ಬೆಳೆಯುತ್ತದೆ ಮತ್ತು ದಕ್ಷಿಣ ಕೊಡಗಿನಲ್ಲಿ ಎಲ್ಲೆಲ್ಲೂ ಬಿದುರು ವಿಶೇಷವಾಗಿ ಬೆಳೆಯುವುದರಿಂದ ಯುರೋಪಿಯನ್‌ರು ಈ ಪ್ರದೇಶವನ್ನು ‘ಬೆಂಬು’ ಎಂದು ಕರೆಯುತ್ತಾರೆ. ೫೦-೬೦ ವರ್ಷಗಳಿಗೆ ಒಂದಾವರ್ತಿ ಬಿದುರುಕಾಡುಗಳು ಎಟ್ಟೆ ಹಿಡಿದು ಬೀಜ ವು(ಉ)ದರಿ ನಾಶವಾಗುತ್ತವೆ. ಈ ಬೀಜಗಳಿಂದ ಹೊಸ ಬಿದುರುಗಳು ಮೊಳೆಯುತ್ತವೆ. ಈ ವಿಷಯವಾಗಿ ಒಂದು ಗಾದೆಯುಂಟು – ‘ಐವತ್ತು ವರ್ಷಕ್ಕೆ ಒಂದು ಕಟ್ಟೆ, ಎಪ್ಪತ್ತು ವರ್ಷಕ್ಕೆ ಒಂದು ಎಟ್ಟೆ’ ಹೊಸ ಬಿದುರುಗಳು ದೊಡ್ಡ ಮಳೆಗಳಾಗಿ ಬೆಳೆಯುವುದಕ್ಕೆ ಸುಮಾರು ೧೨ ವರ್ಷ ಬೇಕಾಗುತ್ತದೆ. ಹೊಸ ಕಳಲೆ ಆಗಾಗ್ಗೆ ಮೆಳೆಯ ಬುಡದಲ್ಲಿ ಹೊರಡುತ್ತದೆ. ಬಿದುರು ಮನೆಗಳ ಚಾವಣಿಗೂ, ಬೇಲಿಗೂ, ಚಾಪೆ ಗೂಡೆ ಮೊರ ಮೊದಲಾದ ಅನೇಕ ಕೆಲಸಗಳಿಗೂ ಬಹಳ ಉಪಯೋಗವಾದುದು. ಇದನ್ನು ಕಡಿಯುವುದು ಬಹುಕಷ್ಟವಾದ ಕೆಲಸ. ಈ ಕೆಲಸವು ಗಟ್ಟಿಗರಾದ ಎರವರೂ ಕುರುಬರೂ ಮುಂತಾದ ಕಾಡು ಜನರಿಗಲ್ಲದೆ ಇತರರಿಗೆ ಕಷ್ಟ ಸಾಧ್ಯವಾಗಿರುವುದು.

ಬೀಟಿ : ಇದು ೬೦, ೮೦ ಅಡಿಗಳ ಎತ್ತರದವರೆಗೂ ಬೆಳೆಯುವ ಒಂದು ಸುಂದರವಾದ ಮರ. ಇಂಡಿಯದಲ್ಲಿ ತೊಲೆಗಳಿಗೆ ಅತ್ಯಂತ ಉಪಯುಕ್ತವಾದ ಮರಗಳಲ್ಲಿ ಇದು ಒಂದು.

ಮತ್ತಿ : ಇದರಿಂದುಂಟಾಗುವ ಒಳ್ಳೆಯ ತೊಲೆಗಳಿಗೋಸ್ಕರ ಇದು ಪ್ರಖ್ಯಾತಿಗೊಂಡಿದೆ. ಇದರ ಚಕ್ಕೆಯ ಬೂದಿಯಿಂದ ಸುಣ್ಣ ದೊರೆಯುತ್ತದೆ.

ಹೊನ್ನೆ : ಇದರಿಂದಲೂ ಒಳ್ಳೆಯ ತೊಲೆಗಳನ್ನು ಮಾಡುತ್ತಾರೆ. ಇದರಿಂದ ಒಂದು ಬಗೆಯ ಗೋಂದು ಸಿಕ್ಕುತ್ತದೆ.

ತೇಗ : ಇದು ಕಿಗ್ಗಟ್ನಾಡು ನಂಜರಾಯಪಟ್ಟಣ, ಏಳು ಸಾವಿರ ಸೀಮೆಗಳಲ್ಲಿ ಮಾತ್ರ ಸಿಕ್ಕುತ್ತದೆ. ಕೊಡಗಿನಲ್ಲಿರುವ ತೇಗದ ಕಾಡುಗಳು ಬರ್ಮದ ತೇಗದ ಕಾಡುಗಳಷ್ಟು ದಟ್ಟವಾಗಿಯೂ ಉತ್ತಮವಾಗಿಯೂ ಇಲ್ಲ ಮನೆಗಳಿಗೂ ಹಡಗುಗಳಿಗೂ ಈ ಮರದಷ್ಟು ಉತ್ತಮವಾದುದು ಬೇರೊಂದಿಲ್ಲ ಇದು ಮರಗೆಲಸಕ್ಕೆ ಸುಲಭತರವಾಗಿರುವುದು ಮತ್ತು ವಾಯುದೋಷದಿಂದಲೂ ಗೆದ್ದಲು ಮುಂತಾದ ಕ್ರಿಮಿಗಳಿಂದಲೂ ಕೆಡುವುದಿಲ್ಲ.

ಗಂಧ : ಇದು ತೊಲೆಗಳಿಗೆ ಬಾರದ ಚಿಕ್ಕ ಮರವಾದರೂ, ಬಹಳ ಬೆಲೆಯುಳ್ಳದ್ದಾಗಿದೆ. ಇದರಲ್ಲಿ ಮೂರು ವಿಧಗಳಿವೆ. ಯಾವುವೆಂದರೆ: ಹಳದಿ ಬಣ್ಣದ ಶ್ರೀಗಂಧ ಇಲ್ಲವೆ ಚಂದನ, ಬಿಳೆಯ ಪನ್ನೀರು ಗಂಧ, ಸ್ವಲ್ಪ ಕೆಂಪಗಿರುವ ಅಗಿಲುಗಂಧ. ಇವುಗಳಲ್ಲಿ ಶ್ರೀಗಂಧವೇ ಅತ್ಯಂತ ಉತ್ತಮವಾದುದು. ಈ ಮರದಲ್ಲಿರುವ ಎಣ್ಣೆಗೋಸ್ಕರ ಇದಕ್ಕೆ ಬಹು ಬೆಲೆಯಾಗುತ್ತದೆ. ಹಿಂದುಗಳು ಈ ಎಣ್ಣೆಗೆ ಹೆಚ್ಚು ಕ್ರಯ ಕೊಡುತ್ತಾರೆ. ಈ ಮರದಿಂದ ಅನೇಕ ಶೃಂಗಾರವಾದ ಪೆಟ್ಟಿಗೆಗಳು ಬೀಸಣಿಗೆಗಳು ಕೈಯಲ್ಲಿ ಹಿಡಿಯುವ ಕೋಲು ಮುಂತಾದ ಅನೇಕ ವಸ್ತುಗಳು ಸಹ ಆಗುತ್ತವೆ. ಮುಖ್ಯವಾಗಿ ಮೈಸೂರು ದೇಶದ ನಗರ ಸೊರಬ ಪ್ರಾಂತ್ಯಗಳಲ್ಲಿಯೂ ಉತ್ತರ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿಯೂ ಇರುವ ಗುಡಿಗಾರರು ಈ ಗಂಧದ ಸಾಮಾನುಗಳ ಮೇಲೆ ಬಹು ವಿಚಿತ್ರವಾದ ನಕಾಸಿಗಳನ್ನು ಕೆತ್ತುತ್ತಾರೆ. ಗಂಧದ ಮರದ ಹಕ್ಕು ಪೂರ್ತಿಯಾಗಿ ಸರಕಾರಕ್ಕೆ ಸೇರಿದೆ. ಗಂಧವನ್ನು ಹರಾಜು ಮಾಡಿ ಬಹಳವಾಗಿ ಬೊಂಬಾಯಿಗೆ ರಫ್ತು ಮಾಡುತ್ತಾರೆ. ಇದರ ಚಕ್ಕೆಗಳನ್ನು ಸುವಾಸನೆಗೋಸ್ಕರ ಸುಡುವುದೂ ತೇದು ಬೊಟ್ಟು ಇಟ್ಟುಕೊಳ್ಳುವುದೂ ಉಂಟು. ಈ ಮರದ ಬೇರುಗಳಲ್ಲಿ ಸಹ ಎಣ್ಣೆ ಸಿಕ್ಕುವುದರಿಂದ ಅವಕ್ಕೂ ಬಹಳ ಬೆಲೆಯುಂಟು.

ಕಾಡುಮೃಗಗಳು

ಹುಲಿ : ಕೊಡಗಿನಲ್ಲಿ ಹುಲಿಗಳು ಈಗಿರುವುದಕ್ಕಿಂತ ಪೂರ್ವಕಾಲದಲ್ಲಿ ಹೆಚ್ಚಾಗಿದ್ದುವು. ಲಿಂಗರಾಜನು ಒಂದು ವರ್ಷದಲ್ಲಿ ೩೬೦ ಹುಲಿಗಳನ್ನು ಕೊಂದನಂತೆ. ಪೂರ್ವಕಾಲದಲ್ಲಿ ಹುಲಿಯ ಶಿಕಾರಿ ಮಾಡಿದ ಮನುಷ್ಯನು ರಾಜರಂತೆ ಗಲ್ಲ ಮೀಸೆಗಳನ್ನು ಧರಿಸಿಕೊಳ್ಳುವುದಕ್ಕೆ ಯೋಗ್ಯನಾಗುತ್ತಿದ್ದನು. ಒಂದು ಹುಲಿಯನ್ನು ಹೊಡೆದಾಗ ಬಹಳ ವೈಭವದಿಂದ ‘ಹುಲಿ ಮದುವೆ’

[1] ಮಾಡಿ ಶಿಕಾರಿಯವನು ನೆಂಟರಿಷ್ಟರಿಗೆ ಔತಣ ಕೊಡುವ ಪದ್ದತಿ ಈಗಲೂ ಉಂಟು. ಈಗಿನ ಕಾಲದಲ್ಲಿ ಘಟ್ಟಗಳ ಮೇಲಿರುವ ಕಾಡುಗಳಲ್ಲಿ ಮಾತ್ರ ಹುಲಿಗಳು ಇರುತ್ತವೆ.

ಚಿರತೆ ಅಥವಾ ಕಿರುಬಇವು ಸಹ ಕೊಡಗು ದೇಶದಲ್ಲಿ ಇವೆ. ಹುಲಿಬೆಕ್ಕು, ಕಬ್ಬೆಕ್ಕು ಪುಣುಗಿನಬೆಕ್ಕು ಮತ್ತು ಕೆಲವು ಸಮಯದಲ್ಲಿ ಕೆನ್ನಾಯಿ, ಕತ್ತೆ ಕಿರುಬಗಳು ಸಹ ಸಿಕ್ಕುತ್ತವೆ.

ಕಾಡ ಮೃಗಗಳು

ಕಾಡ ಮೃಗಗಳು

ಕೆನ್ನಾಯಿ : ಇದು ಪ್ರಾಯಶಃ ಕಡಮೆ; ಆಕಾರದಲ್ಲಿ ತೋಳನಂತೆ ಇದೆ. ಇದರ ಕುತ್ತಿಗೆಯೂ ದವಡೆಗಳೂ ಬಹಳ ಗಟ್ಟಯಾಗಿರುವುದರಿಂದ, ಇದು ಅಪಾಯಕರವಾದ ಮೃಗವಾಗಿರುತ್ತದೆ. ಇದರ ಬಣ್ಣವು ಬೂದು ಮಿಶ್ರವಾದ ಕೆಂಪು. ಆಕಾರದಲ್ಲಿಯೂ ಬೊಗಳುವುದರಲ್ಲಿಯೂ ಪೋಲಿ ನಾಯಿಯಂತೆ ಇರುತ್ತದೆ. ಇದು ಜೊತೆಯಾಗಿ ಹತ್ತು ಇಪ್ಪತ್ತು ಇರುವುದಲ್ಲದೆ ಒಂಟಿಯಾಗಿ ತಿರುಗುವುದು ಅಪರೂಪ. ಈ ಜಂತುಗಳು ಯಾವ ಕಾಡು ಮೃಗವನ್ನಾದರೂ (ಹುಲಿಯನ್ನೇ ಆದರೂ) ಮುತ್ತಿಗೆ ಹಾಕುತ್ತವೆ ಮತ್ತು ಅತಿ ವೇಗವುಳ್ಳವುಗಳಾದ್ದರಿಂದ ಬೆನ್ನಟ್ಟಿದ ಪ್ರಾಣಿಯನ್ನು ಹಿಡಿಯದೆ ಎಂದಿಗೂ ಹಿಂತಿರುಗುದಿಲ್ಲ. ತಮ್ಮ ಬೇಟೆಗೆ ಒಳಗಾದ ಪ್ರಾಣಿಯ ಸಮೀಪಕ್ಕೆ ಬಂದ ಕೂಡಲೇ ಹಿಂದುಗಡೆಯಿಂದಾಲಿ ಮುಂದುಗಡೆಯಿಂದಾಲಿ ಅದರ ಮೇಲೆ ಬಿದ್ದು, ಅದರ ಕಣ್ಣನ್ನು ಕುಕ್ಕು ಬಿಡುತ್ತವೆ. ಅನಂತರ ಕಚ್ಚಿ ಕಚ್ಚಿ ನೆಲಕ್ಕೆ ಕೆಡವಿ ತಿಂದು ಬಿಡುತ್ತವೆ. ಕಡವೆ, ಸಾರಂಗಗಳೇ ಇವುಗಳಿಗೆ ಮುಖ್ಯವಾದ ಆಹಾರ.

ನೀರನಾಯಿ : ಇದು ಹಟ್ಟಿಹೊಳೆ, ಚೋರನ ಹೊಳೆ ಮೊದಲಾದ ನದಿಗಳ ವನಭರಿತವಾದ ತೀರಗಳಲ್ಲಿ ಸಿಕ್ಕುತ್ತದೆ. ಇದರ ಬಣ್ಣ ನಸುಗೆಂಪು. ನೀರನಾಯಿಗಳು ನದಿಯ ಎರಡು ಕಡೆಗಳಲ್ಲಿಯೂ ಬಿಲಗಳನ್ನು ಮಾಡಿಕೊಂಡು ಅವುಗಳಲ್ಲಿ ವಾಸ ಮಾಡುತ್ತವೆ ಮತ್ತು ಮೀನು ಮುಂತಾದವನ್ನು ತಿಂದು ಜೀವಿಸುತ್ತವೆ. ಎರವರೂ ಹೊಲೆಯರೂ ನೀರನಾಯಿಯ ಮಾಂಸವನ್ನು ತಿನ್ನುವುದುಂಟು.

ಕರಡಿ : ಇದು ತನಗೆ ಅತ್ಯಂತ ಪ್ರಿಯವಾದ ಜೇನು ಸಮೃದ್ಧಿಯಾಗಿರುವ ಪುಷ್ಪಗಿರಿ, ಕೋಟೆಬೆಟ್ಟ, ಕಲ್ಲೂರು ಗುಡ್ಡಗಳಲ್ಲಿ ವಾಸಿಸುತ್ತದೆ.

ಕಡವೆ, ಸಾರಂಗ : ಕಡವೆಯು ದಟ್ಟವಾದ ಅಡವಿಗಳಲ್ಲಿಯೂ, ಸಾರಂಗವು ಮೈದಾನು ಸೀಮೆಗಳಲ್ಲಿಯೂ ವಾಸ ಮಾಡುತ್ತವೆ.

ಕುರಂಗಿಯು ಕೆಲವು ಕಾಡುಗಳಲ್ಲಿಯೂ, ಕಾಡುಹಂದಿ ಎಲ್ಲೆಲ್ಲಿಯೂ ಇವೆ.

ಕಾಟಿ ಬೆಟ್ಟ ಕಾಡುಗಳಲ್ಲಿ ಅಂದರೆ ಮುಖ್ಯವಾಗಿ ಮರೆನಾಡು ಹೊರಮಲೆನಾಡುಗಳಲ್ಲಿ ವಾಸಿಸುತ್ತದೆ; ಕೊಡಗರು ಇದನ್ನು ಬೇಟೆಯಾಡುತ್ತಾರೆ.

ಆನೆ ಹಿಂಡು ಹಿಂಡಾಗಿ ಅನೇಕಾಡಿನಲ್ಲಿಯೂ ಉತ್ತರ ಕೊಡಗಿನ ಘಟ್ಟಗಳ ಮೇಲಿನ ಕಾಡುಗಳಲ್ಲಿಯೂ ವಾಸ ಮಾಡುತ್ತದೆ. ಸಾಧು ಮಾಡಿದಾಗ ಇದು ಬಹು ಉಪಯೋಗವಾದ ಪ್ರಾಣಿ. ಹಿಂಡು ಬಿಟ್ಟು ಒಂಟಿಯಾಗಿ ತಿರುಗುವ ಒಂಟಿಗನೆಂಬ ಆನೆಯು ಜನಗಳಿಗೆ ಅಪಾಯವನ್ನುಂಟು ಮಾಡುವುದರಿಂದ, ಅದನ್ನಲ್ಲದೆ ಇತರ ಆನೆಗಳನ್ನು ಕೊಲ್ಲಕೊಡದೆಂದು ಸರಕಾರದವರು ಅಪ್ಪಣೆ ಮಾಡಿರುತ್ತಾರೆ. ಇಂಥಾ ಒಂಟಿಗನನ್ನು ಕೊಲ್ಲುವುದಕ್ಕೂ ಸರಕಾರದವರ ಅಪ್ಪಣೆ ಪಡಿಯಬೇಕು. ಒಂದು ಆನೆಯು ಒಬ್ಬ ಮನುಷ್ಯನ ಮೇಲೆ ಬಿದ್ದು ಅವನ ಪ್ರಾಣವು ಅಪಾಯದಲ್ಲಿರುವಾಗ ಅವನು ಆತ್ಮಸಂರಕ್ಷಣೆಗಾಗಿ, ಅಪ್ಪಣೆ ಇಲ್ಲದಿದ್ದರೂ, ಅದನ್ನು ಕೊಲ್ಲಬಹುದು. ೧೮೨೨ನೇ ಇಸವಿಯಲ್ಲಿ ಆಗಿನ ರಾಜನು ೪೦ ದಿವಸಗಳಲ್ಲಿ ೨೩೩ ಆನೆಗಳನ್ನು ಸ್ವ-ಹಸ್ತದಿಂದ ಕೊಂದನಂತೆ ಮತ್ತು ಅವನ ಸಿಪಾಯಿಗಳು ೧೮೦ ಆನೆಗಳನ್ನು ಜೀವ ಸಹಿತ ಹಿಡಿದರಂತೆ. ಆ ಕಾಲದಲ್ಲಿ ಆನೆಗಳ ದೊಡ್ಡ ದೊಡ್ಡ ಹಿಂಡುಗಳು ರೈತರಿಗೆ ಬಹಳ ಕೆಡಕನ್ನು ಮಾಡುತ್ತಿದ್ದುದರಿಂದ ಹೀಗೆ ಮಾಡಿರಬಹುದು.

ಜನರು

ಪೂರ್ವಕಾಲದಲ್ಲಿ ಕೊಡಗಿನಲ್ಲಿ ದೇಶಾಧಿಪತಿಗಳಾಗಿ ತಮ್ಮ ಜಮ್ಮದ ಭೂಮಿಗಳನ್ನು ಸಾಗು ಮಾಡಿ ಅನುಭವಿಸಿಕೊಂಡು ಬಂದ ಕೊಡಗರೂ ಇವರ ಚಾಕರರಾದ ಕೀಳು ಜಾತಿಯವರೂ, ಈ ಎರಡು ಬಗೆಯ ಜನರು ಮಾತ್ರ ಇದ್ದರೆಂದು ಹೇಳುತ್ತಾರೆ. ಆ ಕಾಲದಲ್ಲಿ ಈ ಆಳುಗಳಿಗೆ ಯಾವ ಸ್ವತಂತ್ರವೂ ಇರಲಿಲ್ಲ ಆದರೆ ಈಗ ಇಂಗ್ಲೀಷರ ರಾಜ್ಯಭಾರದಲ್ಲಿ ಇತರ ಪ್ರಜೆಗಳ ಹಾಗೆಯೇ ಇವರೂ ಸ್ವತಂತ್ರಿಗಳಾಗಿರುತ್ತಾರೆ. ಇವರಲ್ಲಿ ಹೊಲೆಯರೂ ಎರವರೂ ಎಂಬ ಎರಡು ಭೇದಗಳಿವೆ. ಹೊಲೆಯ ಎಂದರೆ ಹೊಲದಲ್ಲಿ ಕೆಲಸ ಮಾಡುವ ಆಳು ಎಂದು ಕೆಲವರು ತಿಳಿದಿರುತ್ತಾರೆ. ಕೊಡಗರಿಗೆ ಮುಂಚಿತವಾಗಿಯೇ ಇವರ ಕೊಡಗು ದೇಶದ ನಿವಾಸಿಗಳಾಗಿರಬಹುದು. ಈಚೆಗೆ ಕೊಡಗರು ಈ ದೇಶವನ್ನು ಹೊಕ್ಕು, ಇವರನ್ನು ಸೋಲಿಸಿ, ತಮ್ಮ ಆಳುಗಳನ್ನಾಗಿ ಮಾಡಿ, ತಾವು ದೊಡ್ಡವರಾದ ಹಾಗೆ ತೋರುತ್ತದೆ.

೨. ಕೊಡಗಿನಲ್ಲಿ ಎಲ್ಲೆಲ್ಲಿಯೂ ಕಾಡುಗಳೇ ಇದ್ದುದರಿಂದ ಜನರ ಸಂಖ್ಯೆಯು ಹೆಚ್ಚಾಗಿರಲಿಲ್ಲ ಮತ್ತು ಟೀಪು ಕೊಡಗರನ್ನೆಲ್ಲಾ ಬಲವಂತ ಮಾಡಿ ಮೈಸೂರು ದೇಶದ ಅನೇಕ ಊರುಗಳಿಗೆ ಹಿಡು[ಡಿದು] ಕೊಂಡು ಹೋದುದರಿಂದ ಜನರ ಸಂಖ್ಯೆಯು ಕಡ[ಡಿ]ಮೆಯಾಗುವುದಕ್ಕೆ ಕಾರಣವಾಯಿತು. ಕೊಡಗಿನ ಆಗ್ನೇಯ ಭಾಗದಲ್ಲಿ ಪಾಳುಬಿದ್ದ ಅನೇಕ ಗ್ರಾಮಗಳುಂಟು. ಮೈಸೂರಿಗೆ ಹಿಡುಕೊಂಡು ಹೋದವರಲ್ಲಿ ಅನೇಕರು ಹಿಂತಿರುಗಿ ಬಂದರೂ ಕೊಡಗು ರಾಜರ ಆಳ್ವಿಕೆಯು ಕ್ರೂರ ತರದಾದ್ದರಿಂದ ಜನಸಂಖ್ಯೆ ಹೆಚ್ಚಲಿಲ್ಲ.

ನಾಡ ಮೃಗಗಳು

ನಾಡ ಮೃಗಗಳು

೩. ಸನ್ ೧೮೪೦ನೆಯ ಇಸವಿಯಲ್ಲಿ ಕೊಡಗಿನಲ್ಲಿ ೮೦,೦೦೦ ಜನರಿದ್ದರು; ಇವರಲ್ಲಿ ೧೭,೦೦೦ ಕೊಡಗರು. ೧೮೩೪ರಲ್ಲಿ ಇಂಗ್ಲೀಷರು ಕೊಡಗು ದೇಶವನ್ನು ಹಿಡಿದ ಮೇಲೆ ಜನಸಂಖ್ಯೆಯು ಹೆಚ್ಚುತ್ತಾ ಬಂತು. ಸನ್ ೧೮೫೪ನೇ ಖಾನೇಷುಮಾರಿ ಪ್ರಕಾರ ೧,೨೫,೦೦೦ ಜನರಿದ್ದರು; ಇವರಲ್ಲಿ ೨೫,೦೦೦ ಕೊಡಗರು. ಸನ್ ೧೮೭೫ ರಲ್ಲಿ ಜನಸಂಖ್ಯೆಯು ೧,೭೦,೦೦೦; ಇವರಲ್ಲಿ ೨೬,೦೦೦ ಕೊಡಗರು. ಸನ್ ೧೮೯೧ರಲ್ಲಿ ೧,೭೩,೦೫೫ ಜನರಿದ್ದರು. ಕಳೆದ ೧೯೦೧ನೇ ಇಸವಿಯಲ್ಲಿ ತೆಗೆದ ಖಾನೇಷುಮಾರಿ ಪ್ರಕಾರ ೧,೮೦,೬೦೭ ಜನರಿದ್ದರು; ಇವರಲ್ಲಿ

೩೬,೦೯೧ ಮಂದಿ ಕೊಡಗರು
೧,೨೩,೭೨೬ ಮಂದಿ ಇತರ ಹಿಂದುಗಳು
೧೩,೬೫೪ ಮಂದಿ ಮುಸಲ್ಮಾನರು
೩,೬೮೩ ಮಂದಿ ಕ್ರೈಸ್ತರು
೧೦೭ ಮಂದಿ ಜೈನರೂ, ಬುದ್ಧರೂ
೪೧ ಮಂದಿ ಘಾರ್ಸಿಗಳು
೩,೩೦೫ ಮಂದಿ ಇತರರು

ಜುಮಲಾ ೧,೮೦,೬೦೭ ಜನರಲ್ಲಿ ೧,೦೦,೨೫೮ ಗಂಡಸರು, ೮೦,೨೪೯ ಹೆಂಗಸರು, ತಾಲೂಕುವಾರು ವಿಂಗಡಿಸಿದರೆ

ಎಡೆನಾಲ್ಕುನಾಡು ತಾಲೂಕಿನಲ್ಲಿ ೪೩,೪೧೨ ಮಂದಿ
ಕಿಗ್ಗಟ್ನಾಡು ತಾಲೂಕಿನಲ್ಲಿ ೩೭,೨೩೫ ಮಂದಿ
ಪಾಡಿನಾಲ್ಕುನಾಡು ತಾಲೂಕಿನಲ್ಲಿ ೨೮,೬೨೦ ಮಂದಿ
ಮಡಿಕೇರಿ ತಾಲೂಕಿನಲ್ಲಿ ೨೮,೬೨೦ ಮಂದಿ
ನಂಜರಾಯಪಟ್ಟ ತಾಲೂಕಿನಲ್ಲಿ ೪೨,೭೨೦ ಮಂದಿ ಇದ್ದರು.

. ಬ್ರಾಹ್ಮಣರು (,೮೨೦ ಮಂದಿ) : ಇವರು ಪೂರ್ವಕಾಲದಲ್ಲಿ ಇಲ್ಲಿ ಇರಲಿಲ್ಲ ನೂರು ವರ್ಷದ ಈಚೆಗೆ ಬಂದರು. ಇವರಲ್ಲಿ ಸ್ಮಾರ್ತರು ಮಾಧ್ವರು ಎಂಬ ಎರಡು ಭೇದಗಳುಂಟು. ಪಶ್ವಿಮ ಘಟ್ಟಗಳ ಕೆಳಗಿನಿಂದ ಬಂದ ತುಳು ಬ್ರಾಹ್ಮಣರ ಸಂಖ್ಯೆಯು ಅತ್ಯಧಿಕವಾಗಿದೆ. ಇವರಲ್ಲದೆ ಇನ್ನು ಹೈಗ ದೇಶದಿಂದ ಬಂದ ಹವೀಕರೂ ಮೈಸೂರಿಂದ ಬಂದ ಅಯ್ಯಂಗಾರರೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದ ಸಾರಸ್ವತರೂ ಇದ್ದಾರೆ.

೫. ಕೊಡಗು ದೇಶದಲ್ಲಿರುವ ಬೇರೆ ಬೇರೆ ಶೂದ್ರಕುಲಗಳ ಹೆಸರೂ ಅವರವರ ವೃತ್ತಿ ಮುಂತಾದವುಗಳೂ ಯಾವುವೆಂದರೆ:

. ಅಗಸ (,೬೭೦) : ಇದು ಕಸಬು ಬಟ್ಟೆಗಳನ್ನು ಮಡಿ ಮಾಡುವುದು.

. ಬೆಸ್ತ : ಇವರು ಪೂರ್ವದಲ್ಲಿ ಸಮುದ್ರ ತೀರದಿಂದ ಬಂದರು. ಮೀನು ಹಿಡಿಯುವುದು, ಆರಂಬ, ಮಳೆಗಾಲದಲ್ಲಿ ಹೊಳೆ ಕಡವುಗಳಲ್ಲಿ ದೋಣಿ ನಡಿಸುವುದು ಇವರ ಕಸಬು.

. ಬೇಡರು : ಇವರು ಪೂರ್ವದಲ್ಲಿ ಬೇಟೆಯನ್ನಾಡಿ ಜೀವಿಸುತ್ತಿದ್ದರು. ಈಗ ಕಾಡುಮೃಗಗಳು ಕಡಿಮೆಯಾದ್ದರಿಂದ ಹೊಲ-ಗದ್ದೆಗಳಲ್ಲಿ ಕೆಲಸ ಮಾಡುತ್ತಾರೆ.

. ಬಣಜಿಗರು : ಇವರ ಪೂರ್ವ ಕಸಬು ವ್ಯಾಪಾರ. ಈಗ ಕೃಷಿ ಮುಂತಾದ ಕೆಲಸಗಳಲ್ಲಿ ಸಹ ಪ್ರವರ್ತಿಸುತ್ತಾರೆ.

. ದರ್ಜಿಗಳು : ಇವರ ಕೆಲಸವು ಬಟ್ಟೆ ಹೊಲಿಯುವುದು. ಕೊಡಗರು ತಾವೇ ಹೊಲಿಗೆಯಲ್ಲಿ ಜಾಣರಾಗಿದ್ದು, ತಮ್ಮ ಬಟ್ಟೆಗಳನ್ನು ಹೊಲಿದುಕೊಳ್ಳುವುದರಿಂದ ದರ್ಜಿಯವರು ಕೊಡಗಿನಲ್ಲಿ ಬಹಳವಿಲ್ಲ.

. ಗಾಣಿಗರು : ಇವರು ಎಣ್ಣೆ ತೆಗೆಯುತ್ತಾರೆ. ಇವರಲ್ಲಿ ಕೆಲವರು ಮೈಸೂರು ದೇಶದಿಂದಲೂ, ಇನ್ನೂ ಕೆಲವರು ಮಲೆಯಾಳದಿಂದಲೂ ಬಂದರು. ಮಲೆಯಾಳ ಗಾಣಿಗರಿಗೆ ‘ಬಾಣಿಯರು’ ಎಂದೆನ್ನುವುದುಂಟು.

. ಹಜಾಮರು : ಕ್ಷೌರ ಕೆಲಸ, ವಾಲಗ, ಕೃಷಿ ಮುಂತಾದ ಕೆಲಸವನ್ನು ಮಾಡುತ್ತಾರೆ.

. ಈಡಿಗರು : ಅಂದರೆ (ಹೆಂಡ ತೆಗೆಯುವವರು) ಕಳ್ಳುಕಾರರು. ಇವರಲ್ಲಿ ಮೂರು ಬಗೆಯುಂಟು. ೧. ಮಲೆಯಾಳ ದೇಶದಿಂದ ಬಂದ ತೀಯರು, ಇವರು ಮಲೆಯಾಳ ಭಾಷೆಯನ್ನು ಆಡುತ್ತಾರೆ; ಮತ್ತು ಪಾಡಿನಾಲ್ಕುನಾಡು ಎಡೆನಾಲ್ಕುನಾಡು ತಾಲೂಕುಗಳಲ್ಲಿ ಬೆಳೆಯುವ ಬೈನೆಮರಗಳಿಂದ ಹೆಂಡವನ್ನು ಇಳಿಸುತ್ತಾರೆ. ೨. ಬಿಲ್ಲ[ವ]ರು ಅಥವಾ ಹಳೆಯಪಾಯಕರು; ಇವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದ ತುಳುವರು; ಪಾಡಿನಾಲ್ಕುನಾಡು, ಮಡಿಕೇರಿ, ಎಡೆನಾಲ್ಕುನಾಡು ತಾಲೂಕುಗಳಲ್ಲಿ ಶೇಂದಿ ಇಳಿಸುತ್ತಾರೆ. ೩. ಮೈಸೂರು ದೇಶದಿಂದ ಬಂದ ಈಡಿಗರು ಉತ್ತರ ಕೊಡಗಿನಲ್ಲಿ ಇದ್ದಾರೆ.

. ಕುಂಬಾರರು (,೦೦೦) : ಇವರಿಗೆ ಕೊಡಗು ಮಾತಿನಲ್ಲಿ ಕೊಯವರೆಂದು ಹೆಸರು. ಮಡಕೆಗಳನ್ನು ಮಾಡುವುದೂ ಕೃಷಿಯೂ ಇವರ ಕೆಲಸ.

೧೦. ಕುರುಬರು : ಇವರಲ್ಲಿ ಊರುಗಳಲ್ಲಿ ವಾಸ ಮಾಡುವವರು ‘ಊರು’ ಇಲ್ಲವೆ ‘ಹಾಲುಕುರುಬರು’ ಎಂದೂ, ಬೆಟ್ಟಗಳಲ್ಲಿ ವಾಸ ಮಾಡುವವರು ‘ಬೆಟ್ಟ’, ‘ಜೇನು’, ‘ಕಾಡುಕುರುಬರು’ ಎಂದೂ ಬೇರೆ ಬೇರೆ ಭೇದಗಳುಂಟು. ಊರುಕುರುಬರಲ್ಲಿ ಅನೇಕರು ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತಾರೆ. ಕೆಲವರು ಇತರರ ಮನೆಗಳಲ್ಲಿ ಚಿಲ್ಲರೆ ಕೆಲಸ ಮಾಡುತ್ತಾರೆ.

೧೧. ನೇಗೆಯವರು (,೨೦೦) – ಬಟ್ಟೆ ನೇದು ಮಾರುವುದೂ ಹೊಲ-ಗದ್ದೆಗಳಲ್ಲಿ ಕೆಲಸ ಮಾಡುವುದೂ ಇವರ ವೃತ್ತಿಯಾಗಿದೆ.

೧೨. ಉಪ್ಪಾರರು ಪೂರ್ವದಲ್ಲಿ ಉಪ್ಪು ಮಾಡುತ್ತಿದ್ದರು. ಈಗ ಗಾಗೆ ಕೆಲಸ ಬಡಗಿ ಕೆಲಸ ಕೃಷಿ ಮುಂತಾದುವುಗಳಲ್ಲಿ ಪ್ರವರ್ತಿಸಿದ್ದಾರೆ.

೧೩. ಒಡ್ಡರು : ಇವರಲ್ಲಿ ಕಲ್ಲು ಕೆಲಸ ಮಾಡುವ ಕಲ್ಲುವಡ್ಡರೂ, ಬಾವಿ ತೋಡುವುದೂ ಗೋಡೆ ಇಡುವುದೂ ಮೊದಲಾದ ಕೆಲಸಗಳನ್ನು ಮಾಡುವ ಮಣ್ಣು ವಡ್ಡರೂ ಎಂಬ ಎರಡು ಭೇದಗಳುಂಟು.

೧೪. ಒಕ್ಕಲಿಗರು : ಇವರ ಸಂಖ್ಯೆಯು ೩೦,೦೦೦ ಕೈ ಮೇಲ್ಪಟ್ಟು ಇದೆ. ಐಂಬೊಕ್ಕಲು, ಬಂಟರು, ಗೌಡುಗಳು ಮೊದಲಾದ ಭೇದಗಳು ಇವರಲ್ಲಿ ಉಂಟು. ಇವರ ವೃತ್ತಿಯು ಆರಂಭ. ಇವರಲ್ಲಿ ಅನೇಕರು ಕಾಫಿ ತೋಟಗಳಲ್ಲಿ ಕೆಲಸ ಮಾಡಲಿಕ್ಕೆ ಮೈಸೂರು ಕನ್ನಡ ಜಿಲ್ಲೆಗಳಿಮದ ಬಂದವರಾಗಿರುತ್ತಾರೆ.

೧೫. ಲಿಂಗಾಯತರು, ಜಂಗಮರು (,೦೦೦) : ಇವರ ಸಂಖ್ಯೆಯು ಬಹಳ ಹೆಚ್ಚಾಗಿದೆ, ಕೊಡಗಿನ ಜನಸಂಖ್ಯೆಯಲ್ಲಿ ೨೦ರಲ್ಲಿ ಒಂದು ಪಾಲು ಇರಬಹುದು. ಪೂರ್ವದ ಕೊಡಗು ರಾಜರು ಈ ಜಾತಿಯವರಾಗಿದದರು. ಲಿಂಗಾಯತರಲ್ಲಿ ಮುಕ್ಕಾಲುಪಾಲು ಉತ್ತರ ಕೊಡಗಿನಲ್ಲಿಯೂ ಕಾಲು ಪಾಲು ದಕ್ಷಿಣ ಕೊಡಗಿನಲ್ಲಿಯೂ ಇದ್ದಾರೆ. ಪಾಡಿನಾಲ್ಕುನಾಡು ತಾಲೂಕಿನಲ್ಲಿ ಇವರ ಸಂಖ್ಯೆ ಬಹಳ ಕಡಿಮೆ. ಇವರ ಮಾಡು ಕನ್ನಡ; ವೃತ್ತಿ ವ್ಯವಸಾಯವೂ ವ್ಯಾಪಾರವೂ.

೧೬. ಇತರ ಜಾತಿಗಳು ಯಾವುವೆಂದರೆ : ಕಣಿ ಇಲ್ಲವೇ ಪ್ರಶ್ನೆ ಹೇಳು ಕಣಿಯರೂ, ಭೂತಗಳ ವೇಷಗಳನ್ನು ಕಟ್ಟಿಕೊಳ್ಳುವ ಪಣಿಕರೂ, ಮಲಯರೂ, ಬಣ್ಣರೂ ಮುಂತಾದವರು. ಇವರ ಕೆಲಸವು ಜ್ಯೋತಿಷ್ಯ, ಮಂತ್ರವಾದ, ಕೃಷಿ, ಜಾತಿ ವ್ಯವಸ್ಥೆ ಇಲ್ಲದ ಜನರು ೪೫,೦೦೦ಕ್ಕೆ ಮೇಲ್ಪಟ್ಟಿದ್ದಾರೆ. ಇವರಲ್ಲಿ ಹೊಲೆಯರೇ ಮುಖ್ಯ. ಇವರು ಕೊಡಗರ ತೋಟ ಗದ್ದೆಗಳಲ್ಲಿಯೂ ಇತರರ ಕಾಫಿ ತೋಟಗಳಲ್ಲಿಯೂ ಕೆಲಸ ಮಾಡುತ್ತಾರೆ. ಇವರು ಪೂರ್ವದಲ್ಲಿ ಕೊಡಗರ ಜಮ್ಮದಾಳುಗಳಾಗಿದ್ದರು. ಆದರೆ ಇಂಗ್ಲೀಷ ರಾಜ್ಯದಲ್ಲಿ ಎಲ್ಲಿಯೂ ದಾಸತ್ವವು (ಗುಲಾಮತನ) ಇಲ್ಲದೆ ಇರುವುದರಿಂದ ಈಗ ಸ್ವತಂತ್ರಿಗಳಾಗಿದ್ದಾರೆ.

೧೭. ಪರ್ಯಟನ (ತಿರುಗಾಡುವ) ಜಾತಿಯವರು : ಇವರಲ್ಲಿ ಕೊರಚ, ಮೇದ, ಲಂಬಾಣಿ ಮುಂತಾದ ಅನೇಕ ಬಗೆಯವರಿದ್ದಾರೆ. ಕೊರಚರ ಭಾಷೆಯಲ್ಲಿ ಅರ್ಧ ತೆಲುಗೂ ಅರ್ಧ ತಮಿಳೂ ಮಿಶ್ರವಾಗಿದೆ. ಇವರು ಚಾಪೆ ನೇಯುತ್ತಾರೆ. ಕುಕ್ಕೆಗಳನ್ನು ಹೆಣೆಯುತ್ತಾರೆ ಮತ್ತು ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತಾರೆ.

ಮೇದರು : ಕೊಡಗರಿಗೆ ಮೊರ, ಕುಕ್ಕೆ, ಚಾಪೆ, ಕೊಡೆ ಮುಂತಾದವುಗಳನ್ನು ಮಾಡಿಕೊಟ್ಟು ಅವರಿಂದ ಬತ್ತವನ್ನು ಹೊಂದಿಕೊಂಡು ಜೀವನ ಮಾಡುತ್ತಾರೆ. ಇವರು ಕೊಡಗರ ಹಬ್ಬಗಳಲ್ಲಿ ದೋಲು ತಮಟೆ ಮುಂತಾದುವುಗಳನ್ನು ಹೊಡಿಯುತ್ತಾರೆ.

ಲಂಬಾಣಿಗಳು : ಮುಖ್ಯವಾಗಿ ಎಡೆನಾಲ್ಕುನಾಡು ತಾಲೂಕಿನಲ್ಲಿರುತ್ತಾರೆ. ಇವರ ಸಂಖ್ಯೆಯು ಬಹಳ ಕಡಿಮೆ. ರಸ್ತೆಗಳು ಚೆನ್ನಾಗಿಲ್ಲದೆ ಇದ್ದ ಕಾಲದಲ್ಲಿ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಬತ್ತ ಕಾಫಿ ಮುಂತಾದುವನ್ನು ಹೇರಾಟದ ಎತ್ತುಗಳ ಮೇಲೆ ಒಯ್ಯುವುದೇ ಇವರ ಕೆಲಸವಾಗಿತ್ತು.

೧೮. ಕಾಡು ಜನರು ಯಾರೆಂದರೆ : ಎರವರೂ (೧೪,೫೦೦), ಕುರುಬರೂ (೭,೦೦೦), ಎರವರು ಒಂದು ವಿಧವಾದ ಮಲೆಯಾಳ ಭಾಷೆಯನ್ನು ಆಡುತ್ತಾರೆ; ಇವರಿರುವುದು ಕಿಗ್ಗಟ್ನಾಡು ಎಡೆನಾಲ್ಕುನಾಡು ತಾಲೂಕುಗಳಲ್ಲಿ; ಇವರು ನೋಡಲಿಕ್ಕೆ ಆಫ್ರಿಕಾ ದೇಶದ ಜನಗಳ ಹಾಗೆ ಇದ್ದಾರೆ. ಕಾಡುಗಳಲ್ಲಿ ಚಿಕ್ಕ ಚಿಕ್ಕ ಗುಡಿಸಲುಗಳಲ್ಲಿ ವಾಸ ಮಾಡಿಕೊಂಡು, ಕೂಲಿಯಿಂದಲೂ (ಕೂಲಿ ಮಾಡಿಕೊಂಡು) ಗೆಡ್ಡೆ ಗೆಣಸುಗಳನ್ನು ಅಗೆದು ತಿಂದೂ ಜೀವನ ಮಾಡುತ್ತಾರೆ. ಜೇನು ಕುರುಬರಿಗೆ ನೆಲೆಯಾದ ಮನೆಗಳಿಲ್ಲ, ಅಲ್ಲಲ್ಲಿ ಜೇನು ಹುಡುಕಿಕೊಂಡು ತಿರುಗುತ್ತಿರುತ್ತಾರೆ; ಮರ ಹತ್ತುವುದರಲ್ಲಿಯೂ ಬಿಲ್ಲುಗಾರಿಕೆಯಲ್ಲಿಯೂ ಜಾಣರು.

ಕಾಡುಕುರುಬರು ಮುಖ್ಯವಾಗಿ ಬಿದುರುಕಾಡುಗಳಲ್ಲಿ ವಾಸ ಮಾಡಿ ಕೊಂಡಿರುತ್ತಾರೆ. ಇವರುಗಳ ಕಡಿಯುವುದರಲ್ಲಿ ಗಟ್ಟಿಗರು. ಬಿದುರಿನಿಂದಲೂ ಬೆತ್ತದಿಂದಲೂ ಪೆಟ್ಟಿಗೆ ಕುಕ್ಕೆ ಮುಂತಾದುವುದಗಳನ್ನು ಮಾಡಿ ಮಾರುತ್ತಾರೆ.

೧೯. ಮುಸಲ್ಮಾನರು : ಇವರು ಮಡಿಕೇರಿ, ಪಾಡಿನಾಲ್ಕುನಾಡು ತಾಲೂಕುಗಳಲ್ಲಿ ವಿಶೇಷ. ಇವರಲ್ಲಿ ಸುನ್ನಿ, ಶಿಯ್ಯ ಎಂಬ ಎರಡು ಮತ ಭೇದಗಳುಂಟು. ಸಂಖ್ಯೆಯಲ್ಲಿ ಶಿಯ್ಯ ಮತದವರಿಗಿಂತಲೂ ಸುನ್ನಿ ಮತದವರು ಹತ್ತು ಪಾಲು ಹೆಚ್ಚು. ಇವರ ಮುಖ್ಯವಾದ ವೃತ್ತಿ ಕೃಷಿ. ಇವರಲ್ಲಿ ಅನೇಕರು ಮಲೆಯಾಳ ದೇಶದಿಂದ ಬಂದ ಮಾಪಿಳ್ಳೆಗಳು. ಇವರು ಮಲೆಯಾಳ ಭಾಷೆಯನ್ನು ಆಡುತ್ತಾರೆ. ತಮಿಳು ಭಾಷೆಯನ್ನಾಡತಕ್ಕವರು ಮೂಡಸೀಮೆಯಿಂದ ಬಂದ ಲಬ್ಬೆಗಳು; ಇವರ ವೃತ್ತಿ ವ್ಯಾಪಾರ.

೨೦. ಕೊಡಗರು : ಈ ದೇಶದಲ್ಲಿ ಇವರದೇ ಮುಖ್ಯವಾದ ಜನಾಂಗವು; ಅನೇಕ ವರ್ಷಗಳಿಂದ ಇಲ್ಲೇ ಇದ್ದು ಈ ದೇಶದ ಮೂಲನಿವಾಸಿಗಳೆಂದು ಹೇಳಿಸಿಕೊಳ್ಳುತ್ತಾರೆ. ಆಕಾರ ನಡೆನುಡಿಗಳಲ್ಲಿ ಇವರಿಗೂ ಮಲೆಯಾಳ ಕನ್ನಡ ಮೈಸೂರು ಸೀಮೆಗಳ ಜನರಿಗೂ ಹೆಚ್ಚು ಕಡಿಮೆ ಇದೆ. ಇವರ ಭಾಷೆಯಲ್ಲಿ ತಮಿಳು ಕನ್ನಡ ಮಲೆಯಾಳ ಭಾಷೆಗಳು ಮಿಶ್ರವಾಗಿವೆ. ಇವರು ಬೈಲುಸೀಮೆಯ ಜನಗಳಿಗಿಂತ ದೀರ್ಘದೇಹಿಗಳಾಗಿಯೂ ದೃಢಾಂಗರಾಗಿಯೂ ಇರುತ್ತಾರೆ. ಇವರಿಗೆ ಜಮ್ಮದ ಭೂಮಿಗಳುಂಟು. ಹಿಂದುಸ್ಥಾನದ ಇತರ ಕಡೆಗಳಲ್ಲಿ ಸಾಹುಕಾರರು ಜನರಿಗೆ ಬಡ್ಡಿಗೆ ಹಣವನ್ನು ಕೊಟ್ಟು ಕಡೆಗೆ ಅವರ ಭೂಮಿಗಳನ್ನೆಲ್ಲಾ ಕಿತ್ತುಕೊಳ್ಳುತ್ತಾರಾದ್ದರಿಂದ ಇಲ್ಲಿ ಈ ಜಮ್ಮದ ಭೂಮಿಗಳನ್ನು ವಿಕ್ರಯ ಗಿರ್ವಿ ಮೊದಲಾದ ಉಪಾಯಗಳಿಂದ ಪರಾಧೀನ ಮಾಡಕೂಡದೆಂದು ಸರಕಾರದವರು ಇವರ ಹಿತಕ್ಕಾಗಿ ಹುಕುಮ್ ಮಾಡಿರುತ್ತಾರೆ.

 


[1] ಈ ಹುಲಿಮದುವೆಯಲಿ ಕೆಳಗಿನ ಪದವನ್ನು ಹಾಡುವುದುಂಟು:

ಬಾಳೊಕೇಳಿ ಚಂಙೂದಿ
ಪಾಡುವ
ಮೋಳಿ ಕೇಳಿ
ಪೊಮ್ಮಾಲೆ
ಕೊಡವ್ ಲ್
ಕೇಳಿ
ಪೋನ ನಾಡೋನೊ
ನಲ್ಲೊರಾಚೆ
ನಾಳಾಯಿ
ಐಯ್ಯಪ್‌ಶನಿಯಾಚೆ
ಪೊಂಬೊಲೆ
ಪೋಲವಕ್ಕ
ಪೂವೊರಕ್ಕ್
ನೆಟ್ಟಿತೆ
ಮೈಜಾಳಂದಿತೆದ್ದೀತೊ

೧೦ ಚೂರಿಯಾನ ತೊತ್ತಿತೊ
ತಾಂಬಾಡನೆ
ಬಂದಿತೊ
ಕಾಲುಮೂಡು
ಕತ್ತಿತೊ
ಕುಕ್ಕುಮ್ಮೆಕ್ಕ್
ಕೂಳಾಯಿ
ಉಂಡಿತ್
ಕೂಡಿಚಿತ್
ತಾನೂ
ತನಡೂರೋನೊ
ವತ್ತೊರ್‌ಮ್ಮೆ
ಕೊಂಡಿತೊ
ಚೀಲೊನಲ್ಲ
ಬಾಲಂಗ
ನಾಯಾಟ್ಟ್‌ಕ್
ಪೋನೋರೊ
ಬಂಗಾಡ
ಬನತ್ತ್‌ಲ್

೨೦ ಮುಂಗಾಡುಲೆ ನಿಂದಿತ್ತೊ
ನಾಯನ್‌ಡಿ
ಕೂಟನೆ
ಚೀಲೊನಲ್ಲ
ನಾಯಿಯ
ನನ್ನೊಬೈಯ್ಯ
ಪೋಕಣೆ
ಬಾಯಲಂದ
ಪೆನ್ಮರಿ
ಬಾಂಗ್‌ನ
ಮಾರ ತಾಡಿ
ತೂಂಗ್‌ನ
ನೇಡಿಯಾಡಿ
ಬುದ್ದಮಾರ
ಕುಂಬಾಡಿ
ಮಕ್ಕಿಬುದ್ದ್
ವೊರವಕ್ಕ
ಬಾಯಲಂದ
ಪೆನ್ನರಿ

೩೦ ನೆಕ್ಕ ನಚ್ಚಿ ಕಂಡತೊ
ಎನ್ನೆಂದೆಣ್ಣಿ
ತಾರಿವೀರ
ಡೀಸೇರ್
ಮಾನ್‌ಸಂಗ
ನೆಯ್ಯಿತೋಕ್
ಕೈಲಾಯಿ
ಕಾಡ್‌ಬೋಟ್ಟೆ
ಬಂದೀತೊ
ಸುತ್ತ
ಬಿಲ್ಲ್‌ಕಟ್ಟತೊ
ನಾಯಿನ್‌ಡಿ
ಕೊಟತೊ
ನೆಕ್ಕನಚ್ಚಿ
ಕಂಡನೊ
ಮೈ
ಜಾಳಂದಿ ತೆದ್ದಿತೊ
ಎರಡೋಡಿ
ಬಂದೊನೊ

೪೦ ಬಾಕೆ ಪಾರಂದತೊ
ನಾಕೇದರ್
ಬಂದೊನ
ಕಂಡತುಂಡ್
ಮಾಡಿತೊ
ಜಬ್ಬೂಮಿಕ್
ಚಾಡುವಿ
ಎಂದೆಣ್ಣಿ
ಪರಂದಿತೊ
ಬಾಯಿಬಿಟ್ಟಾರಂದೀತೊ
ಪಾರಿಗೊಂಡ್
ಬಪ್ಪಕ್ಕ
ಚೀಲೊನಲ್ಲ
ಅಪ್ಪಣ್ಣ
ಬೈಕಾಡುಂಜಿ
ಲೋಡಿತೊ
ಮುಂಗಾಡುಲ್
ನಿಕ್ಕಣೆ

೫೦ ಪಟ್ಟೆ ಬಲ್ಯ ಪೆಬ್ಬುಲಿ
ಫಾರಿಗೊಂಡ್
ಬಪ್ಪಕ್ಕ
ನೈತೋಕ್ಕ್
ಪೂಡಿಚಿತ್ತೊ
ಕನ್ನಡಿಕವುಕ್ಕೇಕ್

ತಿತ್ತ್
ಬೋಡಿ ಬೆಚ್ಚಿಥೊ
ಅಕ್ಕಣೆಕ್ಕು
ಪೆಬ್ಬುಲಿ
ಬಾಯಿ
ಬುಟ್ಟಾರಂದೀತೊ
ಬಾನ
ಮುಟ್ಟಾ ಪಾರೀತೊ
ಜಬ್ಬೂಮಿಕ್
ಬುದ್ದೀತೊ
ಬೀರಾಜೋಗ
ಬುಟ್ಟ್‌ತೊ

೬೦ ಅಕ್ಕಣೆಕ್ಕು ಬಾಲಂಗ
ಓಡಪಾರ
ಪೋಯಿತೊ
ಬಾಯರಂದ
ಪೆಬ್ಬುಲಿರ
ಬಾವಟ್ಟ್
ಕೊರತ್‌ನ
ಈನಂಗೊಂಡ್
ಪೋರಂದೊ
ಪಟ್ಟ್‌ಪೋಲೆ
ವೂರೊನೊ
ಪೆಬ್ಬೂಲೀರ
ಕುಞ್ಞನ
ಊರ್‌ಡ
ನಡುವ್‌ಲ್
ಪೂವೆಲಂಗೆ
ಮಂದ್‌ಕ್ಕೊ
ಅಲ್ಲಿಕೊಂಡ್
ಬೆಚ್ಚಿತೊ

೭೦ ನೇರೊಯಿಪ್ಪತಾಪ್ಪಕ್ಕ
ಪಟ್ಟತಾನೆ
ಅಪ್ಪಣ್ಣ
ಕಾಳೆಂಪಂದಿ
ಕೆತ್ತಿತೊ
ಇಲ್ಲವನ
ಬೆಂದುಕ್ಕೊ
ಓಲೆ
ಆಳ್ ಬುಟ್ಟೀತೊ
ವಾರಂದೀರಂಡೆಣ್ಣಣೆ
ಎಲ್ಲ
ಬಂದ್ ಕೂಡ್ವಕ್ಕ
ಚೀಲೊನಲ್ಲ
ಅಪ್ಪಣ್ಣ
ಪೊಂಗುಳಿ
ಕೊಳಿಚ್ಚಿತೊ
ಮಾಜುತಿ
ಮಡಿಯಾಯಿ

೮೦ ತಾನು ತನ್ನವೂರೊನು
ಅಡಿಪಾಡಿ
ಪೋಯಿತೊ
ಪೊವೆಲಂಗೆ
ಮಂದ್‌ಲ್
ಪೆಬ್ಬುಲೀರ
ಮಿಞಲ್
ಕೇಕೊಕಿ
ಮೊಗವಾಯಿ
ಮೂರ್‌ತಕ್‌ಳ
ತ್‌ತೊ
ತಾನಾದ್
ಕಾಂಬಾಕ್ಕ
ತನ್ನ
ಪೆತ್ತ ಅವ್ವನು
ಇಲ್ಲವನು
ಬೆಂದುವು
ಮಂಡೇ
ಕಕ್ಕಿಲ್‌ಟ್ಟತೊ

೯೦ ಪೊಂಬಣ ಕೋಡ್‌ತಿತೊ
ವಾರಂದೀರಂಡೆಣ್ಣಣೆ
ಮೂರ್
ತಕಯಿಂಜಿತೊ
ತಾನು
ತನ್ನ ಊರೊನು
ಆಡಿಪಾಡಿ
ಬಂದದೊ
ತಮ್ಮನೇಕ್
ಬಂದಿತೊ
ಕೂಡ್ನೋರ್
ಮಾಲೊರೊ
ಉಂಡಿತು
ಕೂಡಿಚಿತ್ತು
ತಕ್ಕಾರ
ಪೇರಜಾಯಿ
ವೈಯಾನ
ಪೀರಿಂಜಿತೊ

೧೦೦ ಎಂದೆಣ್ಣಿತ್ ಪಾಡುವ
ಪಾಡುವ ಬೆಪ್ಪಿನೊ
ಬೆಪ್ಪಕೊಮ್ಮಡ್‌ಪ್ಪಕ್ಕೊ
.