ಕೈಗಾರಿಕೆ

ಕೈಗಾರಿಕೆಗಳು ಅಷ್ಟೇನೂ ವಿಶೇಷವಾದುವಲ್ಲ ಕೊಡಗರು ಧರಿಸಿಕೊಳ್ಳುವ ‘ಪೀಚಕತ್ತಿ’, ‘ಒಡಕತ್ತಿ’ ಎಂಬ ಎರಡು ಬಗೆಯ ಕತ್ತಿಗಳು ಬಹಳ ನಾಜೂಕಾಗಿ ತಯಾರಾಗುತ್ತವೆ. ನೇಗೆ ಕೆಲಸವು ಕೊಡಗಿನ ಉತ್ತರ ಭಾಗದಲ್ಲಿಯೂ ಈಶಾನ್ಯ ಭಾಗದಲ್ಲಿಯೂ ತಕ್ಕಮಟ್ಟಿಗೆ ನಡಿಯುತ್ತದೆ. ಹೆಂಗಸರು ಉಟ್ಟುಕೊಳ್ಳುವ ಸೀರೆಗಳೂ, ಅಂಗಿಗಳನ್ನು ಮಾಡಲಿಕ್ಕೆ ಉಪಯುಕ್ತವಾದ ‘ಗಿಂಟಗಳೂ’, ಹಚ್ಚಡಗಳೂ, ಕೊಡಗರು ನಡುವಿಗೆ ಸುತ್ತಿಕೊಳ್ಳುವ ನೂಲುದಟ್ಟಿಗಳೂ ಈ ಮೊದಲಾದ ದಪ್ಪ ತರದ ಬಟ್ಟೆಗಳು ತಯಾರಾಗುತ್ತವೆ.

ವ್ಯಾಪಾರ

ಆಮದು ಆಗುವ ಎಂದರೆ ಬೇರೆ ದೇಶಗಳಿಂದ ಇಲ್ಲಿಗೆ ಬರುವ ಸರಕುಗಳು ಉಪ್ಪು, ಮೀನು, ತೆಂಗಿನಕಾಯಿ, ತೆಂಗಿನ ಎಣ್ಣೆ, ಅಡಿಕೆ, ಕರಿಮೆಣಸು, ಕೆರೋಸಿನ್ ಎಂಬ ಸೀಮೆಯೆಣ್ಣೆ ಕತ್ತಿ ಗುದ್ದಲಿ, ಪಿಕಾಸು, ಗುಳ, ಕೊಡಲಿ, ಹಂಚು, ಕೋವಿಮದ್ದು, ಬೆಲ್ಲ, ಪುಸ್ತಕ ಮೊದಲಾದವುಗಳು ದಕ್ಷಿಣ ಕನ್ನಡ ಮಲೆಯಾಳ ಜಿಲ್ಲೆಗಳ ಕಡೆಯಿಂದ ಬರುತ್ತವೆ.

ರಾಗಿ, ಅಕ್ಕಿ, ಹುರುಳಿ, ತೊಗರಿ, ಅವರೆ ಮುಂತಾದ ಧಾನ್ಯಗಳು, ಸಂಬಾರ, ತುಪ್ಪ, ಎಳ್ಳೆಣ್ಣೆ, ದೀಪದೆಣ್ಣೆ, ಸುಣ್ಣ ಕಬ್ಬಿಣದ ಸಾಮಾನು, ಬೆಲ್ಲ ಇತ್ಯಾದಿಗಳು ಮೈಸೂರು ಕಡೆಯಿಂದ ಬರುತ್ತವೆ.

ರಫ್ತು ಆಗುವ ಎಂದರೆ ಇಲ್ಲಿಂದ ಬೇರೆ ದೇಶಗಳಿಗೆ ಹೋಗುವ ಪದಾರ್ಥಗಳು – ಬತ್ತ ಮೈಸೂರು ಮಲೆಯಾಳ ದೇಶಗಳಿಗೂ, ಕಾಪಿ, ಯಾಲ ಮಲೆಯಾಳ ಕನ್ನಡ ಜಿಲ್ಲೆಗಳ ಕಡೆಗೂ, ಕಿತ್ತಳೇ ಹಣ್ಣು ಮೈಸೂರಿಗೂ ಮಲೆಯಾಳ, ದಕ್ಷಿಣ ಕನ್ನಡ ಜಿಲ್ಲೆಗಳಿಗೂ, ಗಂಧ ಮೈಸೂರು ದೇಶಕ್ಕೂ ಕನ್ನಡ ಜಿಲ್ಲೆಗೂ, ಬಾಳೆಕಾಯಿ, ಮರ, ಬಿದುರು ಮೈಸೂರು ದೇಶಕ್ಕೂ ಹೋಗುತ್ತವೆ.

ಹಬ್ಬಗಳು

ಕೊಡಗರಿಗೆ ಬಹಳ ಹಬ್ಬಗಳಿಲ್ಲ. ತುಲಾಮಾಸದಲ್ಲಿ (ಅಕ್ಟೋಬರ್ ತಿಂಗಳಲ್ಲಿ) ಆಗುವ ಕಾವೇರಿಜಾತ್ರೆಯು, ನವಂಬರ್ ಅಥವಾ ಡಿಸೆಂಬರ್ ಮಾಸದಲ್ಲಿ ಬರುವ ಪುತ್ತರಿ ಇಲ್ಲವೆ ಹುತ್ತರಿ ಹಬ್ಬವು. ಇವೇ ಮುಖ್ಯವಾದುವು. ಮೇ ತಿಂಗಳಲ್ಲಿ ಭಗವತಿ ಹಬ್ಬವು ಎಲ್ಲೆಲ್ಲಿಯೂ ನಡಿಯುತ್ತದೆ. ಆಗೊಸ್ತು ತಿಂಗಳಲ್ಲಿ ನಾಟಿ ಕೆಲಸವು ತೀರಿ ಮಳೆಯು ಸ್ವಲ್ಪ ನಿಂತ ಕೂಡಲೇ ಕೈಲ್ ಪೊಳುದು ಎಂಬ ಹಬ್ಬವು ಆಗುತ್ತದೆ.

ಆಮದು (ಪರದೇಶದಿಂದ ಈ ದೇಶಕ್ಕೆ ಬರುವ ಸಾಮಾನುಗಳು)

ಆಮದು (ಪರದೇಶದಿಂದ ಈ ದೇಶಕ್ಕೆ ಬರುವ ಸಾಮಾನುಗಳು)

ರಫ್ತು (ಈ ದೇಶದಿಂದ ಬೇರೆ ದೇಶಗಳಿಗೆ ಕಳುಹಿಸುವ ಸರಕುಗಳು)

ರಫ್ತು (ಈ ದೇಶದಿಂದ ಬೇರೆ ದೇಶಗಳಿಗೆ ಕಳುಹಿಸುವ ಸರಕುಗಳು)

ಕಾವೇರಿ ಜಾತ್ರೆ : ಅಕ್ಟೋಬರ್ ಮಾಸದ ಮಧ್ಯಭಾಗದಲ್ಲಿ ಆಗುವ ಕಾವೇರಿ ಹಬ್ಬಕ್ಕೆ ಎಲ್ಲಾ ಕೊಡಗರು ಹವಣಿಸಿಕೊಳ್ಳುತ್ತಾರೆ. ಈ ಕಾಲದಲ್ಲಿ ಮಳೆ ಮೋಡಗಳೆಲ್ಲಾ ಹರಿದು ಸೂರ್ಯನು ಪ್ರಕಾಶಿಸಲಿಕ್ಕೆ ತೊಡಗುತ್ತಾನೆ. ಗದ್ದೆಗಳಲ್ಲೆಲ್ಲಾ ಹಸುರಾದ ಬತ್ತದ ಪೈರು ಮನೋಹರವಾಗಿ ಕಾಣಿಸುತತದೆ. ಕಾಡುಗುಡ್ಡಗಳೆಲ್ಲಾ ಹಸುರಾಗಿ ಕಾಣುತ್ತವೆ. ಕೊಡಗರ ಪ್ರತಿಯೊಂದು ಮನೆಯಿಂದಲೂ ಒಬ್ಬಿಬ್ಬರಾದರೂ ಕಾವೇರಿಗೆ ಹೋಗುತ್ತಾರೆ. ಮಲೆಯಾಳ, ತುಳುವ, ಮೈಸೂರು ರಾಜ್ಯಗಳಿಂದ ಸಾವಿರಾರು ಜನರು ತಲೆಕಾವೇರಿಗೆ ಯಾತ್ರೆಗೆ ಹೋಗುತ್ತಾರೆ. ತಲೆಕಾವೇರಿಯ ಸಮೀಪ ನಿಂತು ನೋಡಿದರೆ, ಭಾಗಮಂಡಲ ದೇವಸ್ಥಾನದ ಶಿಖರವು ಕಾಣುತ್ತದೆ. ತಲೆಕಾವೇರಿಗೆ ಬಂದ ಜನಗಳಿಗೆಲ್ಲಾ ಉಳುಕೊಳ್ಳುವುದಕ್ಕೆ ಮನೆಗಳಿಲ್ಲದೆ ಇರುವುದರಿಂದ ಓಟೆಗಳಿಂದಲೂ ಹುಲ್ಲಿನಿಂದಲೂ ಬಿಡಾರಗಳನ್ನು ಮಾಡಿಕೊಂಡು ಜನರು ರಾತ್ರೆಯನ್ನು ಕಳೆಯುತ್ತಾರೆ. ಈಚೆಗೆ ಅಲ್ಲಿ ಒಂದು ಛತ್ರ ಕಟ್ಟಸಿಯಿದೆ. ಕಾವೇರೀ ಹೊಳೆಯು ಕಲ್ಲು ಕಟ್ಟಿದ ಚಿಕ್ಕದೊಂದು ಕುಂಟೆಯಿಂದ ಹುಟ್ಟಿ ಬರುತ್ತದೆ. ಈ ಕುಂಟೆಯಿಂದ ಬರು ನೀರು ಸುಮಾರು ೩೦ ಅಡಿಗಳ ಅಡ್ಡಗಲವುಳ್ಳ ಕೊಳಕ್ಕೆ ಬೀಳುತ್ತದೆ. ಇದರಲ್ಲಿ ೨ ಳಿ ಅಡಿಗಳ ಎತ್ತರಕ್ಕೆ ಮೇಲ್ಪಟ್ಟು ನೀರು ನಿಲ್ಲಗೊಡಿಸುವುದಿಲ್ಲ ಸೂರ್ಯನು ತುಲಾರಾಶಿಯಲ್ಲಿ ಪ್ರವೇಶಿಸುವ ಕಾಲವೇ ಮುಹೂರ್ತಕಾಲವೆಂದು ನೆನಸಿ ಮುಹೂರ್ತ ಬಂದೊದಗಿತೆಂದು ಜ್ಯೋತಿಷ್ಯನು ಹೇಳಿದ ಕೂಡಲೇ ಗಂಡು(ಡ)ಸರೂ ಹೆಂಗು(ಗ)ಸರೂ ಮಕ್ಕಳೂ ಈ ಕೊಳದಲ್ಲಿ ಇಳಿದು ಮೂರು ಸಲ ಮುಳುಗಿ ಎದ್ದು ತೀರ್ಥವನ್ನು ತೆಗೆದುಕೊಂಡು ಮೇಲೆ ಬರಬೇಕಾದರೆ, ಅಲ್ಲಿ ಕೂತಿದ್ದ ಪೂಜಾರಿಗೆ ದಕ್ಷಿಣೆಯನ್ನು ಕೊಟ್ಟು ಬರುತ್ತಾರೆ. ಯಾತ್ರಿಕರಲ್ಲಿ ಅನೇಕರು ಓಟೆ ಕೊಳವೆಗಳಲ್ಲಿ ತೀರ್ಥವನ್ನು ತುಂಬಿಸಿ ತಮ್ಮ ನೆಂಟರಿಷ್ಟರಿಗೆ ಕೊಡಲಿಕ್ಕೆ ತಮ್ಮ ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗುವುದುಂಟು. ತಲೆಕಾವೇರಿಗೆ ಹೋಗದೆ ಇರುವ ಕೊಡಗರು ತಮ್ಮ ತಮ್ಮ ಮನೆಗಳಲ್ಲಿ ಆ ದಿನ ಆಡಂಬರವಾಗಿ ಹಬ್ಬವನ್ನು ಮಾಡುತ್ತಾರೆ.

ಹುತ್ತರಿ ಹಬ್ಬವು

[1] ಇದು ಪ್ರತಿವರ್ಷವೂ ನಡಿಯುವ ಸುಗ್ಗಿ ಹಬ್ಬವು ‘ಪುದಿ’ ಅಂದರೆ ಹೊಸ, ‘ಅರಿ’ ಅಕ್ಕಿ ‘ಪುತ್ತರಿ’ ಅಂದರೆ ಹೊಸ ಅಕ್ಕಿಯನ್ನು ಊಟ ಮಾಡುವ ಹಬ್ಬವು. ಮಲೆಯಾಳದಲ್ಲಿ ಎರಡು ತಿಂಗಳ ಮೊದಲೇ ಬೆಳೆಯಾಗುವುದರಿಂದ, ಅಲ್ಲಿ ಈ ಹಬ್ಬವು ಎರಡು ತಿಂಗಳಿಗೆ ಮೊದಲೇ ಆಗುವುದು. ಕೊಡಗಿನಲ್ಲಿ ನಡಿಯುವ ಎಲ್ಲಾ ಹಬ್ಬಗಳಲ್ಲಿ ಇದೇ ವಿಶೇಷವಾದುದು. ಈ ಕಾಲದಲ್ಲಿ ಕೊಡಗರೆಲ್ಲಾ ಬಹಳ ಸಂತೋಷಯುಕ್ತರಾಗಿರುತ್ತಾರೆ. ಈ ಹಬ್ಬವು ಏಳು ದಿವಸ ನಡಿ(ಡೆ)ಯುವುದು. ಆದರೆ ಕೊಡಗರೂ ಇವರ ಆಳುಗಳಾದ ಹೊಲೆಯ ಮುಂತಾದವರೂ ಈ ಹಬ್ಬವನ್ನು ಇನ್ನೂ ಮೂರು ನಾಲ್ಕು ದಿನ ಹೆಚ್ಚಾಗಿ ಮಾಡುತ್ತಾರೆ. ಈ ಕಾಲದಲ್ಲಿ ಕೊಡಗರು ತಮ್ಮ ಜಾತಿ ಪದ್ಧತಿಯನ್ನು ಅನುಸರಿಸಿ, ತಮ್ಮ ಊರುಮಂದುಗಳೆಂಬ ಮೈದಾನುಗಳಲ್ಲಿ ಹಗಲೆಲ್ಲಾ ಹಾಡುವುದೂ ಕುಣಿಯುವುದೂ ಇತರ ಆಟಗಳನ್ನು ಆಡುವುದೂ ತಮಾಷೆ ಮಾಡುವುದೂ ಮುಂತಾದ್ದರಲ್ಲಿಯೇ ಕಾಲವನ್ನು ಕಳಿ[ಳಿ]ಯುತ್ತಾರೆ. ಈ ಹಬ್ಬದ ದಿನಗಳಲ್ಲಿ [ಮುಖ್ಯವಾಗಿ ಏಳನೆಯ ದಿನದಲ್ಲಿ] ಕೊಡಗರು ಪೂರ್ವಾಚಾರಕ್ಕನು ಗುಣವಾಗಿ ಕದರು ತರುತ್ತಾರೆ. ಎಂಟನೆಯ ದಿನ ಊರುಕೋಲು, ಒಂಬತ್ತನೆಯ ದಿನ ನಾಡುಕೋಲು, ಹತ್ತನೆಯ ದಿನ ದೇವರಕೋಲು ಎಂದು ಕೋಲು ಹೊಡಿಯುವುದುಂಟು.

ಭಗವತಿ ಹಬ್ಬ : ಈ ಹಬ್ಬವು ಮಳೆಗಾಲಕ್ಕೆ ಎರಡು ತಿಂಗಳು ಮುಂಚಿತವಾಗಿ ಬೇರೆ ಬೇರೆ ನಾಡುಗಳಲ್ಲಿ ಅನುಕೂಲವಿದ್ದಂತೆ ಬೇರೆ ಬೇರೆ ಕಾಲದಲ್ಲಿ ನಡಿಯುತ್ತದೆ. ಈ ಹಬ್ಬದ ಆಚರಣೆಯು ತುಳು ಬ್ರಾಹ್ಮಣರ ಮೂಲಕವಾಗಿ ಬಂದಂತೆ ತೋರುತ್ತದೆ. ಇದು ಭಗವತೀ ದೇವಸ್ಥಾನಗಳಲ್ಲಿ ೯ ದಿವಸಗಳವರೆಗೆ ನಡಿಯುವುದು.

ಕೈಲ್ ಮುಹೂರ್ತ ಹಬ್ಬವು (ಕೈಲ್ ಪೊಳದು) – ಹುತ್ತರಿಯಂತೆ ಇದೂ ಕೊಡಗರ ಹಬ್ಬವಾಗಿದೆ. ಅಗೊಸ್ತು ತಿಂಗಳಲ್ಲಿ ನಾಟಿಕೆಲಸ ಪೂರೈಸಿದ ನಂತರ ಮಳೆ ಸ್ವಲ್ಪ ನಿದಾ[ಧಾ]ನವಾದಾಗ ಈ ಹಬ್ಬವು ನಡಿಯುತ್ತದೆ. ಆಗ ಮನೆಯಲ್ಲಿದ್ದ ಕೋವಿ, ಕತ್ತಿ, ಈಟಿ ಮುಂತಾದುವುಗಳನ್ನೆಲ್ಲಾ ಚೆನ್ನಾಗಿ ಉಜ್ಜಿ ತೊಳೆದು, ಅವುಗಳಿಗೆ ಪೂಜೆ ಮಾಡಿ, ಭೋಜನಾನಂತರ ಗಂಡುಸರು ತಮ್ಮ ಆಯುಧಗಳೊಡನೆ ಊರುಮಂದುಗಳಿಗೆ ಹೋಗಿ ಗುರಿ ಹೊಡಿಯುವುದೇ ಮೊದಲಾದ ಆಯುಧ ವಿದ್ಯಾ ಕೌಶಲವನ್ನು ಮೆರೆಸುತ್ತಾರೆ. ಮಾರಣೆಯ ದಿನ ಊರವರು ಕೂಡಿ ಊರುಬೇಟೆ ಆಡುವುದುಂಟು. ಅನಂತರ ನಾಡವರೆಲ್ಲರೂ ಸೇರಿ ನಾಡುಬೇಟೆ ಆಡುತ್ತಾರೆ. ಈ ಹಬ್ಬವು ಕೊಡಗು ಹಬ್ಬಗಳಲ್ಲಿ ವಿಶೇಷವಾದುದೆಂದು ಯೌವನಸ್ಥರು ತಿಳಿದುಕೊಂಡಿದ್ದಾರೆ.[1] ಹುತ್ತರಿ ಹಾಡು ಪ್ರಾಯಶಃ ಹೀಗಿರುತ್ತದೆ:

ಬಾಳೊ ಕೇಳಿಚಂಙೂದಿ
ಪಾಡುವ ಕಾವಿ ಕೇಳಿ
ಪೊಮ್ಮೊಲೆ ಕೋಡವ್‌ಲ್
ನಟ್ಟಿಬೊಳೆ ಕೊಯ್ವಕ್ಕೊ
ಯನ್ನ ತಾಂಡ ಮುಂದಾಪ
ಅಲ್ಲಿ ತೊಂದು ಅಲ್ಲಲಾ
ಮಾಣಿಕ ಮಲನಾಟ್ಟ್
ನಾಯಮ್ಮಕು ನಂಬ್ಯಾಕು
ಚಿಂಙಿಯಾರ್ ತಿಂಗತ್ತೊ

೧೦ ಓಣತ್‌ಡಮುಂಬಾಪ
ಮಾಣಿಕ ಮಲನಾಟ್
ನಾಯಮ್ಮಾರು ನಂಬ್ಯಾರು
ಓಣತ್‌ಡ ಚೊಲ್ಲಾಲೆ
ಎಟ್ಟ್‌ನಾಕ್ ಮಿಞ್ಞಲ್
ಎಲ್ಲ ಪಂಜೆ ತೇಡಿತ್ತೊ
ಎಲ್ಲಕೋರುತ್ ಕಾಣೆ
ವನ್ನಾಂದೇಕ ಮಿಞ್ಞಲ್
ಚಾಲಿಯಂಡ ಮಕ್ಕಳೊ
ಕುಂಞಂಡ್ ಕಯಿಲ್ಲಾಯಿ

೨೦ ವಕ್ಕಳಮ್ಣಪೋಯಿತ್ತೋ
ಆಳಾಣ್ಣಕೊಡ್ ತಾತ್ತೊ
ವಾರಂದೀರಂಡೆಣ್ಣಣೆ
ಪಿತ್ತೀಯ ಪೊಲವಕ್ಕ
ನಾಯಮ್ಮಾರು ನಂಬ್ಯಾರು
ಓಣತ್‌ಡ ಚೊಲ್ಲಾಲೆ
ನೇರೊಯಿಪ್ಪತಾಪಕ್ಕಾ
ಪೊಂಗುಲಿಕುಳಿಚಿತೊ
ಮಾಜುತ್ತಿ ಮಡಿಯಾನ
ಪಟ್ಟ ಮುಂಡುಡ್‌ತ್ತೀತೊ

೩೦ ಕೋಡಿ ಮುಂಡ್ ಸುತ್ತಿತೊ
ಕುಂಞುಂಡ್ ಕಯಿಲ್ಲಾಯಿ
ಬಾಚುಮೆಲ್ಲೆಬಂದಿತೊ
ಕುಕ್ಕುಮ್ಮೆಕ್ ಕುಳಾಯಿ
ಒಣತ್ ಪರಂಬ್‌ಕೊ
ನಾಯಮ್ಮಾರು ನಂಬ್ಯಾರು
ಕಾಡ್‌ಪೋಲೆ ಕೂಡಾಣಎ
ತಂಗೆನ್ನ ಪಣಿಕೆಜ್ಜ
ಓಣತ ಪರಂಬ್‌ಲ್

೪೦ ಬಾಳೆಲೆ ಕೋಡಿಯೊಲ್
ಪಾಲುವಕ್ಕಿ ಬೆಚ್ಚಿತೊ
ಈನಂಗೊಂಡ್ ಪೋರಾಂದೊ
ಬೊಳ್ಳತೆಂಗೆ ಪೂಂಬ್‌ನಾ
ಕೆಟ್ಟೆ ನೆತ್ತಿಕೊಂಡಿತೊ
ನಾಯಮ್ಮಾರು ನಂಬ್ಯಾರು
ಅಂಬುಬಿಲ್ಲ್‌ಕೈಲಾಯಿ
ಓಣಪಾಡೆ ಪೊತ್ತಿತೊ
ವಾರಂದೀರಂಡೆಣ್ಣಣೆ
ನೇರೊಯಿಪ್ಪತಾಪಕ್ಕ

೫೦ ಓಣತ್ ಪರಂಬ್ಂಜಿ
ನಾಯಮ್ಮಾರು ನಂಬ್ಯಾರು
ವೈಯನಪಿರಿಂಜಿತೊ
ವೈಯಾನ ಪಿರಿಯಾಣೆ
ಓಣತಮ್ಮೆ ಮಾತಾಯಿ
ತಾನೆನ್ನ ನೆನತಾತೊ
ಈನಗೊಂಡ್ ಪೋರಾಲಾ
ಪೊಮ್ಮಾಲೆ ಕೋಡವ್‌ಲ್
ಅಮ್ಮಂಗು ಕೋಡವಂಗು
ನಟ್ಟ ಬೊಳೆ ಕೊಯ್ವಕೊ

೬೦ ಪುತ್ತರೀರ ಮುಂಬಾಂಡು
ಎಂದಣ್ಣಿಪರಂದಿತೊ
ಕೇಳಕಿಟ್ಠಪಾಙ
ವೋಣತಮ್ಮ ಮಾತಾಯಿ
ತಾಡಿಂಗೊಂಡ್ ಅರೆಕೆಟ್ಟ
ಮಿಸಾಂಗೊಂಡ್ ತಂಡುರೂ
ತಾಚುಮೆಲ್ಲೆ ಬಂದುದೊ
ಪಾಡಿತೋರ ಕಂಡಿಲೆ
ಪಾಡಿಂಗೊಂಡ್ ಬಂದಿತೊ
ವೋಣತಮ್ಮೆ ಮಾತಾಯಿ
ತಂಡೂರಿ ಮಾರಿಂಜಿತೊ

೭೦ ಪೊನ್ನರಜ ಪಾಡಿಲೊ
ಅಲ್ಲಿಂಜುಪೇರವುಳ್ಳ
ಅಮ್ಮಂಗೇರಿವೂರ್‌ಲ್
ಪಾಡಿ ಕುತ್ತಿಯಮ್ಮೆಯೊ
ಅಲ್ಲಿ ಬಂದ್ ನಿಕ್ಕಣೆ
ಪೊಮ್ಮಾಲೆ ಕೂಡೊವಾಲ್
ಕೈಮೂರುವು ಬಾಲಂಗ
ದೇಬುವ ಬೀರಿ ಚೇತ್
ತ್ಂಙತಾರ ನಾಳಾಯಿ
ನಾಲಾಯಿರ ನಾಡೊನೊ

೮೦ ಪಾಲು ಬೈವಡಾಯಿತೊ
ವಕ್ಕಳನ್ಣಪೊಯಿತೊ
ಮುತ್ತಿನ ತೀರಿಕೇಲ್
ಕಾಡ ಪೋಲೆ ಕೂಡಾಣೆ
ಓಲೆ ತಕ್ಕ ಪಟ್ಟನೊ
ಪೊಂಗುಳಿ ಕುಳಿಚಿತೊ
ದೇವಪೂಜೆ ನೇರಕೊ
ಮುತ್ತಿನ ತೀರಿಕೇಲ್
ಬೊಳ್ಳಿಪಾಡಿ ನೀಕಿತೊ
ದೇವಪೂಜೆ ಕೈಯಾಣೆ

೯೦ ನಾಲಾಯಿರ ನಾಡೊಂಡ್
ವಂದನೆ ತಲೆತಕ್ಕ
ಪೊಮ್ಮಾಲೆ ಪರದಂಡ
ಕೈಮೂರುವ ಬಾಲನೊ
ತಾಚುಮೆಲ್ಲೆ ಬಂದಿತೊ
ಮುತ್ತಿನ ತೀರಿಕೇಲ್
ಕೇಕಿಯ ನಾಡೆಯತೊ
ವಪ್ಪಾರ ನಿಂದಿತೊ
ಅಚ್ಚುತ ಕಣಿಯಾಂಗೊ
ಓಲೆ ಆಳ ಬುಟ್ಟಿತೊ

೧೦೦ ತಾನಾದ್ ಕಾಂಬಾಕ್ಕ
ಅಚ್ಚುತ ಕಣಿಯಾನೊ
ನೀರ್ ಬೈಯ ಮೀಂಬೆಲ್ಲೆ
ಆಳ್ ಕೂಡ ಬಕ್ಕಣೆ
ದೇವಪೂಜೆ ಕೈಯಂಜ
ಆದ್‌ಕಂಡ ಅಚ್ಚುತ
ದೇವರ ನೇನತೀತೊ
ವಪ್ಪಾರ ನಿಕ್ಕಣೆ
ವಾಲೆತಕ್ಕ ಪಟ್ಟನೊ
ಮಾಪೂಜೆನತ್‌ತೀತೊ

೧೧೦ ಚಾಂದು ಪೂವು ಕೈಲಾಯಿ
ಕೂಡಿನಿಂದ ಮಾಲೋಕ್ಕೊ
ವೈಯಾನ ಕೊಡತಾತೊ
ವುಯ್ಯನ್ನ ನೆಡಿಪ್ಪಕ್ಕ
ಅಚ್ಚುತ ಕಣಿಯನೊ
ಕೇಕಿಯ ನಾಡೆಯತೊ
ಅಂಬ್‌ಲಾ ಪೊರೆಯಿಲ್
ಕೇಕೊಕಿ ಮೊಗವಾಯಿ
ವಪ್ಪಾರ ತೇಳತೀತೊ
ಕವಡಿಪಾಕ್ ಕೈಕೊಂಡ್

೧೨೦ ಕಾಯಾಲು ತೋರ್ಂಜಿತೊ
ಕಾಯಾಲು ನನೀಕಿತೊ
ಮೂಮಬತ್ತಿ ಬೆಚ್ಚಿತೊ
ಚಂಬೋಲೆ ಕಯಿಲ್ಲಾಯಿ
ಚೆಂಬೋಲೆ ಕೇಳ್‌ದ್‌ನಾ
ತಾನೊಯ್ಯಾನಲೆದ್ದಿತೊ
ಕೂಡಿನಿಂದ ಮಾಲೋಕೊ
ಮೂವ ವೋದಿತೆಣ್ಣಿತೊ
ಈನಂಗೊಂಡ್ ಪೋರಾಂದೊ
ಮುತ್ತಿನ ತೀರಿಕೇಲ್

೧೩೦ ಕೇಕಿಯ ನಾಡೆಯತೊ
ಅಲ್ಲಿ ಪೋಂಯಿ ನಿಂದಿತೊ
ಮೂಮ ಓದಿತೆಣ್ಣಿತೊ
ಅಲ್ಲಿಂಜು ಪೊರಟ್ಟತೊ
ಮಕ್ಕಿಲೈಯ್ಯ ದೇವಂಡ
ಮುತ್ತಿನ ತೀರಿಕೇಲ್
ಅಲ್ಲಿ ಪೋಯಿ ನಿಂದಿತೊ
ಮೂಮ ಓದಿತೆಣ್ಣಿತೊ
ಈನಂಗೊಂಡ್ ಪೋರಾಂದೊ
ಬೋಳ್ಂದಮ್ಮ ತಕ್ಕಂಡ

೧೪೦ ಆವೊಕ್ಕ ಮನೆಯಿಲ್
ಮೂಮ ಓದಿತೆಣ್ಣಿತೊ
ಪೊಮ್ಮಾಲೆ ಪರದಂಡ
ಆವೊಕ್ಕ ಮನೆಯಿಲ್
ಮೂಮ ಓದಿತೆಣ್ಣಿತೊ
ಈನಂಗೊಂಡ್ ಪೋರಾಂದ೧
ವಕ್ಕಳಣ್ಣಪೋಯಿತೊ
ಅಚ್ಚುತ ಕಣಿಯನೊ
ಚೆಂಬೋಲೆ ಕಯಿಲಾಯಿ
ಮೂಮ ಓದಿತೆಣ್ಣಾನಾ

೧೫೦ ವಾರಂದೀರಂದೆಣ್ಣ ಣೆ
ಪುತ್ತರಿ ವೊಳಪಾಂಜ
ವನ್ನಾಂದೇಕಮಿಞ್ಞಲಾ
ಚೀಲೊನಲ್ಲ ಬಾಲಂಗ
ಪುತ್ತರೀಚೊಲ್ಲಾಲೆ
ಅಂಜಿ ಪಂಜಿ ತೇಡ್ ನಾ
ಯಲ್ಲ ಕೋರುತ್‌ತಿತೊ
ಪಿತ್ತಿಯ ಪೊಲವಕ್ಕ
ಬೊಳ್ಳಿಕೂಡೆ ಬೊಳ್ಯಾಚಿ
ಪೊಂಬೋಲೆ ಪೊಲವಕ್ಕ

೧೬೦ ವಕ್ಕಡ ಪೇರಿಯೊನೊ
ವುಂಡಿತು ಕುಡಿಚಿತು
ತಾಚು ಮೆಲ್ಲೆ ಪೋಯಿತೊ
ತಚ್ಚಾಯಿರಿ ಕೊಟ್ಟ್‌ಲ್
ಕತ್ತಿಕುತ್ತಿ ಮುರಿಚಿತೊ
ತಾಂಬಾಡನೆ ಬಂದಿತೊ
ಈನಂಗೊಂಡ್ ಪೋರಾಂದೊ
ಚೀಯೊದೀರ ಮೋಂದಿಕೊ
ವಕ್ಕಡ ಪೇರಿಯೊನೊ
ಕೆತ್ತ್ಂಗಲ್ಲ್ ಗುಡ್ಡತೊ

೧೭೦ ಪೊಂಗುಳಿ ಕುಳಿಚಿತೊ
ತಾಚುಮೆಲ್ಲೆಂ ಬಿಂದಿತೊ
ಕೆಟ್ಟಸುತ್ತಿ ತಾಳಾನ
ಅಕ್ಕಣೆಕ್ಕು ಮಾಲೊನೊ
ಇಲ್ಲವನು ಬೆಂದುವೊ
ಯಲ್ಲ ತೋರುತ್‌ತಿತೊ
ಪೊನೆರೆ ನ ಕೆಟ್ಟಿತೊ
ಕೊಟ್ಟು ಪಾಟ್ಟು ತಾನಾಯಿ
ಆಣು ಪೆಣ್ಣು ಯೆಡೆಮೇಂಗಿ
ಬೊಮ್ಮಂಗೋಡಿ ಬೇಲ್‌ಕೊ

೧೮೦ ಆಡಿಪಾಡಿ ಪೋಯಿತೊ
ಏಳ್‌ಮೂಲೆ ಆಕಡ
ಕ್‌ಕ್ಕ್‌ರೀಲ್ ನಿದಿತೊ
ಕೇಕೊಕಿ ಮೊಗವಾಯಿ
ದೇವರ ನೇನತೀತೊ
ಆತರಪ್ಪಲ್‌ಟ್ಟತೊ
ತಿತ್ತ್‌ಬೋಡಿ ಬೆಚ್ಚಿತೊ
ಕಾಳಿ ಕಾಳಿ ನಟ್ಟ್‌ನ
ಪೊಲಿ ಪೊಲಿ ಕೊಜ್ಜತೊ
ಬೊಳೋಡ್‌ಡ ಕುತ್ತಿತೊ

೧೯೦ ತಾಂಗೊಯಾನಲ್‌ಟ್ಟತೊ
ಆಡಿ ಪಾಡಿ ಬಂದಿತೊ
ಮಚ್ಚಿ ಪೋರೆ ಕೇರಿತೊ
ಉಂಬೊಳ ಮನೆಯಿಲ್
ಬೆಲ್ಲತಿ ಬಾಡು
ಕತ್ತಿ ಕುತ್ತಿ ಬೆಚ್ಚಿತೊ
ಈನಂಗೊಡ್ ಪೊರಾಂದೊ
ವಾರಂದೀರಂಡೆಣ್ಣಣೆ
ಕೂಳುಂಬಕ್ಕ ನೇರಾನ
ಇಲ್ಲವನು ಬೆಂದುವೊ
ಉಂಡಿತು ಕುಡಿಚಿತೊ

೨೦೦ ಯ್ಯನ್ನ ನೆಡಿಪಕ್ಕ
ಪೊಂಬೋಲೆ ಪೊಲಂದತೊ
ವಾರಂದೀರಂಡೆಣ್ಣಣೆ
ನೇರೊಮಜ್ಜಣಾಪಕ್ಕ
ಪಟ್ಟಪೊಲೆವೂರೊನೊ
ಊರಡ್ ನಡುವ್‌ವ್
ಪೂವೆಲಂಗೆ ಮಂದಲ್
ಎಲ್ಲ ಪೋಯಿ ಕೂಡಿತೊ
ಇಗ್ಗು ತಪ್ಪದೇವಂಡ
ಅಂಜಿನೆ ಪರಿಕಾರ

೨೧೦ ಪೊಂಗೋಲಟ್ಟಿ ಕಳಿಚಿತೊ
ಆಂಜನೆ ನಡತ್‌ನ
ಈನಂಗೊಂಡ್ ಪೋರಾಂದೊ
ಪುತ್ತರೀರ ಚೂಲ್ಲಾಲೆ
ವಕ್ಕಳಣ್ಣ ಪೋಯಿತೊ
ವಕ್ಕಳಣ್ಣ ಪಾಡಿತೊ
ಆಳಣ್ಣ ಪಣಂಬೆಪ್ಪ
ಎನ್ನ ಪೋಲೆ ವೂರೊನೊ
ವಕ್ಕಳಣ್ಣ ಪೋಯಿತೊ
ಆಳಣ್ಣ ಕೂದಿಚಿತೊ

೨೨೦ ಮೈಯಣ್ಣ ಪಣಬೆಚ್ಚ
ನಂಗೊಂಡ್ ಪೋರಾಂದೊ
ಪಟ್ಟಿ ಪೋಲೆ ವೂರೊನೊ
ಪುತ್ತರೀರ ಚೊಲ್ಲಾಲೆ
ಊರಾಡಂಗ ಕೂಡಿತೊ
ವತ್ತೊರ್‌ಮೆಮ ಕೊವ್ವಂಡು
ಎಂದಣ್ಣಿ ಪರಂದಿತೊ
ಪೂವೆಲ್ಲಂಗೆ ಮಂದ್‌ಲ್
ಊರಡಂಗ ಕೂಡಿತೊ
ಕಾಟ್ ಬೋಟೆ ಪೋಯಿತೊ

೨೩೦ ಕೆಜ್ಜಿಕಾಲ ಪಂದಿಯೊ
ಪಾರಿಂಗೊಂಡ್ ಬಪ್ಪಕ್ಕ
ತಿತ್ತ್ ಬೋಡಿ ಬೆಚ್ಚಿತೊ
ಅಕ್ಕಣ್ಣೆಕ್ಕ ಪಂದಿಯೊ
ಜಬ್ಬೂಮಿಲ್ ಬುದ್ದತೊ
ಅದ್ ಕಂಡ ಊರೊನೊ
ತಂಗೆಡ್‌ತ ಬಂದೀತೊ
ಊರ್‌ಡ ನಡುವ್‌ಲ್
ಪೂವೆಲಂಗೆ ಮಂದ್‌ಲ್
ಊರ್‌ನುಪ್ಪದೊಕ್ಕಳು

೨೪೦ ಚಂದೊಳ ಪೇರ್‌ಜಾಯಿ
ವತ್ತೊರ್‌ಮ್ಮೆಕೊಂಡಿತೊ
ತಕ್ಕಾರಪೆರ್‌ಜಾಯಿ
ವೈಯಾನ ಪೀರಿಜತೊ
ಎಂದಣ್ಣಿತ್ ಪಾಡುವ
ಕಂಡ್ ಕೇಟ್ಟತಿಲ್ಲೆಂಗಿ
ಕೇಳಿ ಕೇಟ್ಟ್‌ತಿಕ್ಕೂಲಾ
ಈ ಪಾಡುವ ಬೆಪ್ಪಿನೊ