ಚರಿತ್ರೆ
ಕಾವೇರಿಯ ಉತ್ಪತ್ತಿಯೂ, ಅದು ಪ್ರವಹಿಸುವ ವಿವರವೂ, ಅದರ ತೀರಗಳಲ್ಲಿಯ ಪುಣ್ಯ ಕ್ಷೇತ್ರಗಳೂ, ಅದು ಸಮುದ್ರ ಸಂಗಮವಾಗುವ ಸ್ಥಳವೂ ಈ ಮೊದಲಾದುದು ಕಾವೇರಿ ಪುರಾಣದಲ್ಲಿ ವಿವರಿಸೋಣಾಗಿದೆ. ಬ್ರಹ್ಮಗಿರಿ ಪರ್ವತದಲ್ಲಿ ಕವೇರನೆಂಬ ಒಬ್ಬ ಋಷಿಯು ವಾಸವಾಗಿದ್ದನು. ಅವನಿಗೆ ಮಕ್ಕಳಿರಲಿಲ್ಲ. ಆತನು ಮಕ್ಕಳನ್ನು ಕೊಡಬೇಕೆಂದು ಬ್ರಹ್ಮನನ್ನು ಕುರಿರು ತಪಸ್ಸು ಮಾಡಿದನು. ಬ್ರಹ್ಮನು ಅವನಿಗೆ ಲೋಪಾಮುದ್ರೆ ಎಂಬ ಮಗಳನ್ನು ಕೊಟ್ಟನು. ಕವೇರಮುನಿಯ ಮಗಳಾದ ಇವಳಿಗೆ ಕಾವೇರಿ ಎಂಬ ಹೆಸರು ಬಂತು. ಇವಳು ತನ್ನ ತಂದೆಗೆ ಶ್ರೇಯಸ್ಸುಂಟಾಗಬೇಕೆಂದು ನದಿಯಾಗಿ, ಜನರಿಗೆ ಒಳ್ಳೆಯದನ್ನು ಮಾಡಿದಳು. ಈ ಪುರಾಣದಲ್ಲಿ ಈ ದೇಶಕ್ಕೆ ಕ್ರೋಡ ದೇಶವೆಂದು ಹೆಸರು ಹೇಳಿದೆ. ‘ಕ್ರೋಡ’ ದೇಶದ ನಿವಾಸಿಗಳಿಗೆ ಕೊಡಗರು ಎಂಬ ಹೆಸರುಂಟಾಯಿತೆಂದು ಹೇಳುತ್ತಾರೆ. ಕೊಡಗರು ಚಂದ್ರವರ್ಮನೆಂಬ ಕ್ಷತ್ರಿಯ ರಾಜನಿಗೆ ಶೂದ್ರ ಸ್ತ್ರೀಯಲ್ಲಿ ಹುಟ್ಟಿದರೆಂತಲೂ ಕ್ಷತ್ರಿಯರೆಂತಲೂ ಎನ್ನುತ್ತಾರೆ. ಇವರಿಗೆ ಉಗ್ರರು ಎಂಬ ಹೆಸರುಂಟು. ಕೊಡಗರ ಪೂರ್ವಜರು ಮೈಸೂರಿಗೆ ವಾಯವ್ಯ ದಿಕ್ಕಿನಲ್ಲಿದ್ದ ಕದಂಬರಾಜ್ಯದಿಂದ ಬಂದಿರಬಹುದೆಂದು ಆಧುನಿಕ ಚರಿತ್ರಕರ್ತರು ಹೇಳುತ್ತಾರೆ.
ಸನ್ ೧೩೩೬ನೆಯ ವರ್ಷದಲ್ಲಿ ವಿಜಯನಗರದ ಸಂಸ್ಥಾನವು ಸ್ಥಾಪಿಸಲ್ಪಟ್ಟಿತು ಮತ್ತು ವಿಜಯನಗರದ ರಾಜರು ಸನ್ ೧೫೬೫ನೆಯ ವರ್ಷದ ವರೆಗೆ ದಕ್ಷಿಣ ಹಿಂದುಸ್ಥಾನವನ್ನೆಲ್ಲಾ ಆಳುತ್ತಾ ಬಂದರು. ಆ ಕಾಲದಲ್ಲಿ ಕೊಡಗು ಹನ್ನೆರಡು
ಸನ್ ೧೬೩೩ ರಿಂದ ೧೮೦೭ ನೆಯ ವರ್ಷದವರೆಗೆ, ಎಂದರೆ ೧೭೫ ವರ್ಷಗಳಲ್ಲಿ ಯಾರಾರೂ ದೊರೆತನ ಮಾಡಿದರು ಮುಂತಾದ ಸಂಗತಿಗಳನ್ನು ದೊಡ್ಡ ವೀರರಾಜನು ಕನ್ನಡದಲ್ಲಿ ಬರೆಸಿದ್ದಾನೆ. ಕೊಡಗು ರಾಜರ ಅಳಿಕೆಯು ಎರಡು ಶತಮಾನಗಳವರೆಗೆ ನಡೆದಿದೆ. ೧೬೩೩ ರಿಂದ ೧೮೩೪ರವರೆಗೆ ಯಾವ ಯಾವ ಅರಸುಗಳು ಎಷ್ಟೆಷ್ಟು ವರ್ಷ ಆಳಿದರು, ಯಾವಾಗ ಸತ್ತರು ಎಂಬುದನ್ನು ಇಲ್ಲಿ ವಿವರಿಸೋಣಾಗಿದೆ:-
೧. | ವೀರರಾಜ | ||
೨. | ಅಪ್ಪಾಜಿರಾಜ | ||
೩. | ಮುದ್ದುರಾಜ | ೧೬೩೩ – ೧೬೮೭ರ ವರೆಗೆ | ೫೪ ವರ್ಷ |
೪. | ದೊಡ್ಡ ವೀರಪ್ಪ | ೧೬೮೭ – ೧೭೩೬ರ ವರೆಗೆ | ೪೯ ವರ್ಷ |
೫. | ಚಿಕ್ಕವೀರಪ್ಪ | ೧೭೩೬ – ೧೭೬೬ರ ವರೆಗೆ | ೩೦ ವರ್ಷ |
೬. | ಮುದ್ದುರಾಜ | ೧೭೬೬ – ೧೭೭೦ರ ವರೆಗೆ | ೪ ವರ್ಷ |
೭. | ಮುದ್ದಯ್ಯ | ||
೮. | ದೇವಪ್ಪರಾಜ | ೧೭೭೦ – ೧೭೭೪ರ ವರೆಗೆ | ೪ ವರ್ಷ |
೯. | ಲಿಂಗರಾಜ | ೧೭೭೫ – ೧೭೮೦ರ ವರೆಗೆ | ೫ ವರ್ಷ |
೧೦. | ದೊಡ್ಡ ವೀರರಾಜ | ೧೭೮೦- ೧೮೦೯ರ ವರೆಗೆ | ೨೯ ವರ್ಷ |
೧೧. | ಲಿಂಗರಾಜ | ೧೮೦೯ – ೧೮೨೦ರ ವರೆಗೆ | ೧೧ ವರ್ಷ |
೧೨. | ವೀರರಾಜ | ೧೮೨೦ – ೧೮೩೪ರ ವರೆಗೆ | ೧೪ ವರ್ಷ |
ಜುಮಲ ೨೦೦ ವರ್ಷಗಳು |
ಕೊಡಗು ರಾಜರ ಅಳಿಕೆಯು ಸಾಧಾರಣವಾಗಿ ಕಠಿಣ ತರದ್ದಾಗಿತ್ತು ಅರಸರಿಗೆ ತೋಚಿದ್ದೇ ನ್ಯಾಯ ವಿನಹ ಬೇರೆ ನ್ಯಾಯ ನಿಬಂಧನೆಗಳಿರಲಿಲ್ಲ. ಅರಸರು ಇಷ್ಟ ಬಂದಂತೆ ಮಾಡುತ್ತಿದ್ದರು. ಅವರೇ ದೇವರೆಂದು ಜನರು ತಿಳಿದುಕೊಂಡು ಬಹಳ ಭಯಪಡುತ್ತಿದ್ದರು. ಯಾರೂ ಇವರ ಎದುರಿನ ಕೋಟೆಯೊಳಗೆ ಎಲ್ಲಿಯಾದರೂ ಕೂತುಕೊಳ್ಳಲಿಕ್ಕೆ ಧೈರ್ಯ ಪಡುತ್ತಿರಲಿಲ್ಲ. ಈ ದೊರೆಗಳು ದೇಶವೆಲ್ಲಾ ತಮ್ಮ ಸ್ವಂತ ಆಸ್ತಿಯೆಂತಲೂ ಜನರೆಲ್ಲಾ ಗುಲಾಮರೆಂತಲೂ ತಿಳಿದುಕೊಳ್ಳುತ್ತಿದ್ದರು. ತಮಗೆ ಇಷ್ಟ ಬಂದಷ್ಟು ಹೆಂಗುಸರನ್ನು ಮದುವೆ ಮಾಡಿಕೊಳ್ಳುತ್ತಿದ್ದರಉ. ಪ್ರಜೆಗಳ ಪ್ರಾಣಗಳನ್ನು ಹಿಂಸಿಸಲಿಕ್ಕೆ ಹೇಸುತ್ತಿರಲಿಲ್ಲ. ಆನರು ದೇಶದ ಒಳಗೆ ಬರಬೇಕಾದರೂ, ದೇಶದಿಂದ ಹೊರಗೆ ಹೋಗಬೇಕಾದರೂ ದೊರೆಯ ಅಪ್ಪಣೆ ಅವಶ್ಯವಿತ್ತು. ಇದರಿಂದ ಕೊಡಗಿಗೂ ನೆರೆಹೊರೆಯ ರಾಜ್ಯಗಳಿಗೂ ೨೦೦ ವರ್ಷಗಳವರೆಗೆ ಯಾವ ವ್ಯಾಪಾರವೂ ನಡಿ(ಡೆ)ಯಲಿಲ್ಲ. ಕೊಡಗಿನ ಮೊದಲನೆಯ ದೊರೆಯಾದ ವೀರರಾಜ ಇವನ ಮಗ ಅಪ್ಪಾಜಿ ಇವರ ಆಳಿಕೆಯ ವಿಷಯದಲ್ಲಿ ಯಾವ ಸಂಗತಿಯೂ ಸ್ಪಷ್ಟವಾಗಿ ತಿಳಿಯಬರುವುದಿಲ್ಲ.
ಮುದ್ದುರಾಜ (೧೬೩೩ – ೧೬೮೭ರವರೆಗೆ) – ಈತನು ಅಪ್ಪಾಜಿರಾಜನ ಮಗನು. ಹಾಲೇರಿಯಲ್ಲಿ ಕೆಲವು ವರ್ಷ ರಾಜ್ಯಭಾರ ಮಾಡಿ ಸನ್ ೧೬೮೧ನೆಯ ವರ್ಷದಲ್ಲಿ ಮಡಿಕೇರಿಯನ್ನು ರಾಜಧಾನಿಯಾಗಿ ಮಾಡಿಕೊಂಡನು. ಇವನಿಗೆ ದೊಡ್ಡವೀರಪ್ಪ, ಅಪ್ಪಾಜಿರಾಜ, ನಂದರಾಜ ಎಂಬ ಮೂರು ಜನ ಮಕ್ಕಳು. ಇವನು ಬಹು ದೀರ್ಘಕಾಲ ರಾಜ್ಯವಾಳಿದನು. ಕೊಡಗಿನ ದೊರೆಗಳಲ್ಲಿ ಒಬ್ಬರೊಬ್ಬರಿಗಿರುವ ಸಂಬಂಧವನ್ನು ೩೯ನೆಯ ಪುಟದಲ್ಲಿ ಕೊಟ್ಟಿರುವ ಪಟ್ಟಿಯಲ್ಲಿ ತೋರಿಸಿದೆ.
ಮುದ್ದುರಾಜನ ಮೂವರು ಮಕ್ಕಳಲ್ಲಿ ದೊಡ್ಡ ವೀರಪ್ಪನು ಮಡಿಕೇರಿಯಲ್ಲಿಯೂ, ಅಪ್ಪಾಜಿರಾಜನು ಹಾಲೇರಿಯಲ್ಲಿಯೂ, ನಂದರಾಜನು ಹೊರಮಲೆಯಲ್ಲಿಯೂ ಬೇರೆ ಬೇರೆಯಾಗಿ ಆಳಿಕೊಂಡಿದ್ದರು.
ದೊಡ್ಡವೀರಪ್ಪ (೧೬೮೭ – ೧೭೩೬ರ ವರೆಗೆ) – ಈತನ ಆಳಿಕೆಯ ಆರಂಭದಲ್ಲಿ ಇವರ ಕುಟುಂಬಿಕನೊಬ್ಬನಾದ ನಂಜುಂಡರಾಜನು ಪೆರಿಯಪಟ್ಟಣದಲ್ಲಿ ದೊರೆಯಾಗಿದ್ದನು. ನಂಜುಂಡರಾಜನನ್ನು ಮೈಸೂರು ದೊರೆಯಾದ ಚಿಕ್ಕದೇವ ಒಡೆಯರು ಸೋಲಿಸಿ ಕೊಂದು ಹಾಕಿಸಿದರು. ಅನಂತರ ಚಿಕ್ಕದೇವ ಒಡೆಯರು ಕೊಡಗಿನೊಳಗೆ ಪ್ರವೇಶಿಸಲು, ದೊಡ್ಡ ವೀರಪ್ಪನು ರಾತ್ರಿ ವೇಳೆ ಅವರ ಮೇಲೆ ಬಿದ್ದು ಅವರ ೧೫,೦೦೦ ಸಿಪಾಯಿಯರನ್ನು ಕೊಂದು ಅವರನ್ನು ಮೈಸೂರಿಗೆ ಹಿಂದಕ್ಕೆ ಓಡಿಸಿದನು.
ಇದೇ ಸಮಯದಲ್ಲಿ ಕೋಟಗಿರಿರಾಜನು ಪಶ್ಚಿಮ ಘಟ್ಟಗಳ ಕೆಳಗಿನಿಂದ ೫,೦೦೦ ನಾಯರ ಸೈನ್ಯದೊಡನೆ ಕೊಡಗನ್ನು ಪ್ರವೇಶಿಸಲು, ದೊಡ್ಡ ವೀರಪ್ಪನು ತೋಮರ ಎಂಬಲ್ಲಿ ಅವನನ್ನು ಪೂರ್ಣವಾಗಿ ಸೋಲಿಸಿದನು. ಅನಂತರ ೭,೦೦೦ ಸೀಮೆಗೆ ಹೋಗಿ ಅದನ್ನು ಜಯಿಸಿದನು. ಆ ಕಾಲದಲ್ಲಿ ನಗರ ಸೀಮೆಯ ಸೋಮಶೇಖರನಾಯಕನೆಂಬ ಇಕ್ಕೇರಿರಾಜನೊಬ್ಬನು ಮಲೆಯಾಳ ಸೀಮೆಯ ಚರಕಲ ರಾಜನ ಮೇಲೆ ದಂಡೆತ್ತಿ ಹೋದಾಗ ಚರಕಲರಾಜನು ದೊಡ್ಡ ವೀರಪ್ಪನ ಸಹಾಯವನ್ನು ಕೇಳಿಕೊಳ್ಳಲು, ದೊಡ್ಡವೀರಪ್ಪನು ಇವರೊಳಗೆ ಸಂಧಿಯನ್ನು ಮಾಡಿಸಿ, ಚರಕಲರಾಜನು ನಗರದ ರಾಜನಿಗೆ ೧೮,೦೦,೦೦೦ ರೂಪಾಯಿ ಕೊಡುವಂತೆ ತಹಾ ಮಾಡಿ, ಹಣಕ್ಕೆ ತಾನೇ ಜಾಮೀನಾಗಿ ನಗರದ ರಾಜನನ್ನು ಒಡಂಬಡಿಸಿ ಹಿಂದಕ್ಕೆ ಕಳುಹಿಸಿದನು. ಚರಕಲರಾಜನು ಆರ್ಧ ಹಣ ಕೊಟ್ಟು ಬಾಕಿ ಅರ್ಧ ಹಣ ಕೊಡಲಿಕ್ಕೆ ನಿರಾಕರಿಸಲು, ದೊಡ್ಡ ವೀರಪ್ಪನು ತನ್ನ ಸೇನಾಧಿಪತಿಯಾದ ಜೋಸಿ ಮುತ್ತಣ್ಣನನ್ನು ೫,೦೦೦ ಕೊಡಗರೊಡನೆ ಕಣ್ಣಾನೂರಿಗೆ ಕಳುಹಿಸಿ, ಚರಕಲರಾಜನನ್ನು ಯುದ್ಧದಲ್ಲಿ ಸೋಲಿಸಿದನು. ಆದರೆ ಬಾಕಿಯಾದ ಹಣ ಸಿಕ್ಕದೆ ಇದ್ದುದರಿಂದ ಕೊಡಗು ದಂಡು ಹಿಂದಕ್ಕೆ ಬರಬೇಕಾಯಿತು. ಈ ಸಾಹಸಕ್ಕೆ ಇಕ್ಕೇರಿರಾಜನು ಮೆಚ್ಚಿ ಅಮರಸುಳ್ಳ ಊರುಗಳನ್ನು ಈತನಿಗೆ ಇನಾಮಾಗಿ ಕೊಟ್ಟನು. ದೊಡ್ಡ ವೀರಪ್ಪನು ಬಹು ಪರಾಕ್ರಮಶಾಲಿಯಾಗಿದ್ದನು. ಅವನು ತನ್ನ ರಾಜ್ಯವನ್ನು ೪೯ ವರ್ಷಗಳವರೆಗೆ ಸುಖವಾಗಿ ಆಳಿದನು ಅವನಿಗೆ ಸಾಯುವಾಗ ೭೮ ವರ್ಷ ಪ್ರಾಯ.
ಚಿಕ್ಕವೀರಪ್ಪ (೧೭೩೬–೧೭೬೬ರವರೆಗೆ) – ದೊಡ್ಡವೀರಪ್ಪನು ತನ್ನ ಮಗ ಅಪ್ಪಾಜಿಯನ್ನೂ, ಮೊಮ್ಮಗ ಚಿಕ್ಕವೀರಪ್ಪನನ್ನೂ ಬಂದೀಖಾನೆಯಲ್ಲಿಟ್ಟಿದ್ದನು. ಅಪ್ಪಾಜಿಯು ಸೆರೆಮನೆಯಲ್ಲಿ ಸತ್ತು ಹೋದುದರಿಂದ ದೊಡ್ಡ ವೀರಪ್ಪನು ಸತ್ತ ಕೂಡಲೇ ಚಿಕ್ಕವೀರಪ್ಪನು ಪಟ್ಟಕ್ಕೆ ಬಂದನು. ಅನೇಕ ವರ್ಷಗಳವರೆಗೆ ಕೈದು ಅನುಭವಿಸಿದ್ದುದರಿಂದ ಈತನು ರೋಗಿಷ್ಟನಾಗಿಯೂ ಧೈರ್ಯವಿಲ್ಲದನಾಗಿಯೂ ಇದ್ದನು. ಈ ಕಾಲದಲ್ಲಿ ಹೈದರನು ಮೈಸೂರು ದೇಶದ ಸುಲ್ತಾನನಾಗಿದ್ದನು. ಹೈದರನು ನಗರ ಸಂಸ್ಥಾನವನ್ನು ಜಯಿಸಿಕೊಂಡು ಕೊಡಗು ದೇಶವನ್ನು ಒಳನುಗ್ಗಲಿಕ್ಕೆ ಪ್ರಯತ್ನಿಸಿ, ಏಳು ಸಾವಿರ ಸೀಮೆಯನ್ನು ತನಗೆ ಬಿಟ್ಟು ಕೊಡಬೇಕೆಂತ ಕೇಳಲು, ಚಿಕ್ಕವೀರಪ್ಪನು ಹೆದರಿಕೊಂಡು ಬಿಟ್ಟುಕೊಟ್ಟನು. ಅನಂತರ ಹೈದರನು ಕೊಡಗನ್ನು ಹಿಡಿಯಲಿಕ್ಕೆ ಪ್ರಯತ್ನ ಮಾಡಿದನು. ಆದರೆ ಯುದ್ಧದಲ್ಲಿ ಸೋತು ಹಿಂತಿರುಗಿ ಹೋಗಬೇಕಾಯಿತು. ಕೆಲವು ದಿವಸಗಳಲ್ಲಿ ಚಿಕ್ಕವೀರಪ್ಪನು ತೀರಿಹೋದನು.
ಮುದ್ದುರಾಜ ಮತ್ತು ಮುದ್ದಯ್ಯರಾಜ (೧೭೬೬–೧೭೭೦ರವರೆಗೆ) – ಇವರು ಕೊಡಗಿನ ಮೂರನೆಯ ದೊರೆಯಾದ ಮುದ್ದುರಾಜನ ಮೊಮ್ಮಕ್ಕಳು. ಮುದ್ದಯ್ಯ ರಾಜನು ಹೊರಮಲೆಯಲ್ಲಿ ಆಳುತ್ತಿದ್ದ ನಂದರಾಜನ ಮಗನು. ೨ನೆಯ ಮುದ್ದು ರಾಜನು ಹಾಲೇರಿಯಲ್ಲಿದ್ದ ಅಪ್ಪಾಜಿರಾಜನ ಮಗನು. ಚಿಕ್ಕವೀರಪ್ಪನಿಗೆ ಮಕ್ಕಳಿಲ್ಲದೆ ಹೋದುದರಿಂದ ಇವರಿಬ್ಬರು ಏಕಕಾಲದಲ್ಲಿ ಪಟ್ಟಕ್ಕೆ ಬಂದು, ಸ್ನೇಹದಿಂದಲೂ ವಿವೇಕದಿಂದಲೂ ರಾಜ್ಯವನ್ನಾಳಿದರು. ಈ ಕಾಲದಲ್ಲಿ ಹೈದರನು ಕೊಡಗನ್ನು ಹಿಡಿಯಲಿಕ್ಕೆ ತನ್ನ ದಳವಾಯಿಯಾದ ಘಜಲ್ ಖಾನನನ್ನು ಕಳುಹಿಸಲು, ಕೊಡಗರು ಅವನ ಮೇಲೆ ಬಿದ್ದು ಅವನನ್ನು ಸೋಲಿಸಿ, ಸಾಮಾನು ಸರಂಜಾಮುಗಳನ್ನೆಲ್ಲಾ ಕಿತ್ತುಕೊಂಡು ಕಳುಹಿಸಿಬಿಟ್ಟರು. ಆಮೇಲೆ ೧೭೬೮ನೆಯ ವರ್ಷದಲ್ಲಿ ಕೊಡಗುರಾಜರಿಗೂ ಹೈದರನಿಗೂ ಸಂಧಿಯಾಯಿತು. ಅನಂತರ ೨ ವರ್ಷದಲ್ಲಿ, ಎಂದರೆ ೧೭೭೦ರಲ್ಲಿ, ಮುದ್ದಯ್ಯರಾಜನೂ ಮುದ್ದುರಾಜನೂ ಸ್ವಲ್ಪ ದಿವಸಕ್ಕೆ ಹಿಂದುಮುಂದಾಗಿ ಸತ್ತು ಹೋದರು.
ದೇವಪ್ಪರಾಜ (೧೭೭೦–೧೭೭೪ರವರೆಗೆ) – ಇವರಿಬ್ಬರು ಸತ್ತ ಮೇಲೆ ಹಾಲೇರಿಯವರಿಗೂ ಹೊರಮಲೆಯವರಿಗೂ ಮಡಿಕೇರಿ ಪಟ್ಟಕ್ಕಾಗಿ ಜಗಳವಾಯಿತು. ಕಡೆಗೆ ಹೊರಮಲೆಯ ಮುದ್ದಯ್ಯರಾಜನ ಮೊಮ್ಮಗನಾದ ದೇವಪ್ಪರಾಜನು ಪಟ್ಟಕ್ಕೆ ಬಂದನು. ಆ ಕೂಡಲೇ ಹಾಲೇರಿಯ ಮುದ್ದುರಾಜನ ತಮ್ಮನಾದ ಲಿಂಗರಾಜನು ತನ್ನ ಮಕ್ಕಳೊಡನೆ ಮೈಸೂರಿಗೆ ಓಡಿಹೋಗಿ, ಹೈದರನ ಮ(ಮೊ)ರೆ ಬೀಳಲು ಹೈದರನು ೧೭೭೩ರಲ್ಲಿ ಕೊಡಗಿನೊಳಗೆ ಪ್ರವೇಶಿಸಿದನು. ಲಿಂಗರಾಜನ ಕಡೆಯವರು ಹೈದರನಿಗೆ ಬಹಳ ಸಹಾಯ ಮಾಡಿದರು. ದೇವಪ್ಪರಾಜನು ಹೆದರಿಕೊಂಡು ಕೋಟೆರಾಜನಲ್ಲಿಗೆ ಓಡಿಹೋದನು. ಆದರೆ ಕೋಟೆರಾಜನು ಇವನಿಗೆ ಸಹಾಯ ಮಾಡುವುದಕ್ಕೆ ಬದಲಾಗಿ ‘ನಿಮ್ಮ ಪೂರ್ವಜನರಲ್ಲಿ ಒಬ್ಬರು ನಮ್ಮ ಪೂರ್ವಜರಾದ ವೀರವರ್ಮನನ್ನು ತೋಮರದಲ್ಲಿ ಕೊಂದುಹಾಕಿದ್ದರಿಂದ, ನಿನ್ನನ್ನು ನಾನು ಕೊಲ್ಲಬೇಕಾಗಿದೆ. ನಿನ್ನ ಹತ್ತರಯಿದ್ದ ಆಸ್ತಿಯನ್ನೆಲ್ಲಾ ಕೊಟ್ಟರೆ, ನಿನ್ನನ್ನು ಬಿಟ್ಟುಬಿಡುತ್ತೇನೆ’ ಎಂದು ಹೇಳಿ ಬಲವಂತ ಮಾಡಿದ್ದರಿಂದ, ದೇವಪ್ಪರಾಜನು ತಪ್ಪಿಸಿಕೊಳ್ಳಲಿಕ್ಕೆ ಬೇರೆ ಯತ್ನವಿಲ್ಲದೇ ತನ್ನ ಹತ್ತರಯಿದ್ದ ೧,೬೦೦ರೂಗಳನ್ನು ಅವನಿಗೆ ಕೊಟ್ಟು, ವೇಷವನ್ನು ಬದಲಾಯಿಸಿಕೊಂಡು ನಗರಸೀಮೆಗೆ ಓಡಿ ಹೋಗುವಾಗ ದಾರಿಯಲ್ಲಿ ಹಿರಿಕೆರೆ ಎಂಬಲ್ಲಿ ಹೈದರನ ಕಡೆಯವರು ಇವನನ್ನು ಹಿಡಿದು ಶ್ರೀರಂಗಪಟ್ಟಣಕ್ಕೆ ಒಯಿದರು. ಅಲ್ಲಿ ಹೈದರನು ಅವನನ್ನೂ ಅವನ ಹೆಂಡರು ಮಕ್ಕಳನ್ನೂ ಕೊಲ್ಲಿಸಿಬಿಟ್ಟನು. ಇದರಿಂದ ಹೊರಮಲೇ ರಾಜವಂಶವು ನಾಶವಾಯಿತು.
ಲಿಂಗರಾಜ (೧೭೭೫–೧೭೮೦ರವರೆಗೆ) – ಹೈದರನು ತನ್ನ ಮರೆಹೊಕ್ಕ ಲಿಂಗರಾಜನನ್ನು ಕೊಡಗಿನ ಅರಸನಾಗಿ ಮಾಡಿ, ವೈನಾಡನ್ನು ಅವನಿಗೆ ಬಿಟ್ಟು ಕೊಟ್ಟನು. ಇದಕ್ಕೆ ಬದಲಾಗಿ ಅಮರಸುಳ್ಳವೂ ಏಳುಸಾವಿರ ಸೀಮೆಯೂ ಹೈದರನಿಗೆ ಸಿಕ್ಕಿದ್ದಲ್ಲದೇ ಲಿಂಗರಾಜನು ಇವನಿಗೆ ವರ್ಷಾವಧಿ ೨೪,೦೦೦ರೂ. ಪೊಗದಿ ಕೊಡಬೇಕಾಯಿತು. ವೈನಾಡು ಎರಡು ವರ್ಷಗಳಲ್ಲಿ ಲಿಂಗರಾಜನ ಕೈಯಿಂದ ತಪ್ಪಿಹೋಯಿತು. ಆ ಮೇಲೆ ಎರಡು ವರ್ಷಗಳಲ್ಲಿ ಲಿಂಗರಾಜನು ಸತ್ತುಹೋದನು. ಇವನು ಅಳಿದ್ದು ೫ ವರ್ಷ ಮಾತ್ರ.
ನಾಡ್ಕ್ಟ್ಟ್ಪಾಟು
ಬಾಳೊಕ್ಳಿ ಚಂಙೂದಿ
ಜಬ್ಬೂ ವಿರ ವಿದಲ್
ಪೊಮ್ಮಾಲೆ ಕೊಡವ್ಂದ್
ಯೆನ್ನನೆ ಪೇದಂಬೋನ
ಅಲ್ಲತೆನ್ನನಲ್ಲಲಾ
ಪೊಮ್ಮಾಲೆ ಕೊಡವ್ಲ್
ಯಾಲಕ್ಕಿ ಬೋಳಂದಿತ್ತೊ
ಪೊಂಬಾಣ ಪೇರ್ತಾಲ್ಲ
ಯಾಲಮಾಲೆ ಪೊಮ್ಮಾಲೆ
ಎಂದಣ್ಣಿ ಪೆದಂಬೋನ
ಪೊಮ್ಮಾಲೆ ಕೊಡವ್ಲ್
೧೨ ಯಚ್ಚಕುಳ್ಳಕೊಂಬಾಪ
ಯನ್ನ ತಾಂಡ ಕೊಂಬಾಪ
ಕೈ ಬಾಯಿರಿ ಕೊಂಬಲ್ಲ
ಬೊವ್ವಾರಿ ಕೊಂಬಲ್ಲ
ಪೆನ್ನಾಟ್ಟೀರ ಕೊಂಬಲ್ಲ
ಕೆಂಗಡಮ್ಮ ಕೊಂಬಲ್ಲ
ಅಂದ್ ಬಾವ ರಾಯಂಡ
ಪಲ್ಲಕೀರ ಕೊಂಬಲ್ಲ
ಪಾಲೇರಿವೋಡೆಪೋಂಡ
ಕಚ್ಚಿಕೊಂಬ್ ನಲ್ಲಲ್
ಪೊಮ್ಮಾಲೆ ಕೊರ್ ತೋರೆ
ಜಾಮ ಕೆಟ್ಟ ಕುಂದಾಣೆ
೨೪ ಪೊಂಮ್ಮಾಲೆ ಕೋಡವಲ್
ಪನ್ನರಂಡ್ ಕೊಂಬಾನ
ಪನ್ನರಂಡ ಕೊಂಬ್ಲ್
ನುಪ್ಪತಂಜಿ ನಾಡಾಂದ್
ಎನ್ನನೆ ಪೇದಂಬೋನ
ಅಲ್ಲ ತೆನ್ನ ನಲ್ಲಾಲಾ
ಮೂಲೋಕನ್ನಿ ಕಾವೇರಿ
ಕಾವೇರೆಮ್ಮತಾರ
ನೀಲ ಕೋಡ್ ತ್ರ್ತ್ತಾ
ಮಮ್ಮಾಯತ್ತೆ ಪುಟ್ಟಿತೊ
ಕೇಕಿಯ ಕಾಡಲೊಳ
ಸಾಯಬುದ್ಧಿ ತೊಕ್ಕಿತೊ
೩೬ ನಾಡ್ನ ಪಾವುತಾತ್ತೊ
ಚೋರಂಗೆ ಮೂರಿಚಿತೊ
ಕೇತ್ರಂಡ ಬೆಚ್ಚೊಲೆ
ಬೊಳ್ಲತೆಂಗೆ ಕೊಚ್ಚಿತೊ
ಬಾಗೆರಂಡ್ ಬೆಚ್ಚೊಲೆ
ನಾಡ್ನ ಪಾವುತತೊ
ಕಾವೇರಿ ಕೊಂಡಿಕಾರೆ
ಪಾಬೊಳಿಯ ಮೇಂದಾಲೆ
ಮೇಂದಾಲೆ ಪದಿನಾಲ್
ಕಾವೇರಿ ಕೊಂಡಾಕಾರೆ
ಕೆಂಗಳಮ್ಮೆ ಕ್ಕ್ಕಟ್ಟ್
ಕ್ಕ್ಕಟ್ಟ್ ಪದಿನಾಲ್
೪೮ ನುಪ್ಪತ್ತಂಜಿ ನಾಡ್ಕ್
ನಾಡ್ ಪೋರಂದೆಣ್ಣಿತೊ
ಪಟ್ಟಿಪೊಳೆ ಕಾವೋರ
ಏಳನಾಡ್ ಸೂರಾಬಿ
ಮೂಂದ್ನಾಡ್ ಕೂಡಾಣೆ
ನುಪ್ಪತಂಜಿ ನಾಡಾನ
ನುಪತಂಜಿ ನಾಡ್ಲ್
ಎಚ್ಚಕುಳ್ಳತಕ್ಕಂಗಾ
ಅಲ್ಲತೆಚ್ಚಕಲ್ಲಲಾ
ನೇರೋ ಬಂದು ದಿಪ್ಪಲ್ಲಿ
ಕೆಂಗಳಮ್ಮೆಕ್ಕ್ಕಟ್ಟ್
೬೦ ಕ್ಕ್ಕಟ್ಟ್ ಕೋಡವ್ಲ್
ಜೋರೆರಂಡ್ ತಕ್ಕಂಗ
ಕಾಜುಮಾಲೆ ಕಳ್ಳೆಯು
ಬೀರ ಕಟ್ಟೆ ಬೊಳ್ಳೆಯು
ನೇರೊ ಬಜ್ಜಣಾಪಲ್ಲಿ
ನೆ ಬೆಪ್ಪ್ನಾಡ್ಲ್
ಮಾತಾನು ಬುಡುವನು
ಜೋಡರಂಡ್ ತಕ್ಕಂಗ
ನೇರೊಯಿಪ್ಪ ತಾಪಲ್ಲಿ
ನಾಲಾಯಿರ ನಾಡ್ಲ್
ಪಾಂಡಿಯು ಪರದನು
ಜೋಡೆರಂಡ್ ತಕ್ಕಂಗ
೭೨ ನೇರೊ ಪೋಯಿತಾಪಲ್ಲಿ
ತಾವುನಾಡ್ರುಳ್ಳ್ಲ್
ಪೊರೆಯುವ ಏರುವನು
ಜೋಡೆರಂಡೆ ತಕ್ಕಂಗ
ಸೀಮೆ ತಕ್ಕಂಗೆಟ್ಟಾಪ
ತಕ್ಕಪೋಯಳಪ್ಪಕ್ಕೊ
ಎಚ್ಚಕುಳ್ಳ ಅಂಬ್ಲಾ
ನಾಡ್ಕೋ ಅಂಬ್ಲ್
ಚಿಕ್ಕಿ ಬಂದ ಚೋಮಂಗ್
ನೀ ಕೂಡಿ ಕೂಡಿ ಪಕ್ಕೊ
ನುಪ್ಪತ್ತಂಜಿ ನೀಕಾರೆ
ದೆಬುವ ಕೂಳಿ ಪಕ್ಕೊ
೮೪ ನುಪ್ಪತ್ತಂಜಿ ಪಾಕಾರೆ
ಪೊಮ್ಮಾಲೆ ಕೋಡವ್ಲ್
ಯಚ್ಚಕುಳ್ಳಪೊವ್ವಾದಿ
ಯಚ್ಚಕುಳ್ಳ ಅಯ್ಯುಪ್ಪ
ಅಲ್ಲತೆಚ್ಚ ಕಲ್ಲಲಾ
ಊರಕ್ಕೋರ್ ಪೊವ್ವಾದಿ
ಕೇರಿಕ್ಕೋರ್ ಅಯ್ಯಪ್ಪ
ಓಣಿಕೋರ್ ನಾತನೂ
ವಕ್ಕಕ್ಕೋರು ಪೂತನು
ಎಂದೆಣ್ಣಿತ ಪಾಡುವ
ಕಂಡ್ ಕೇಟ್ಟ ತಿಲ್ಲೆಂಗಿ
ಕೇಳಿ ಕೆಟ್ಟರೀವ್ನ
೯೬ ನಾನಾರಿಂಜ ಪಾಡ್ನ.
Leave A Comment