ವಿಭಾಗಗಳು

ಕೊಡಗು ಐದು ತಾಲೂಕುಗಳಾಗಿ ವಿಭಾಗಿಸಲ್ಪಟ್ಟಿದೆ. ಉತ್ತರದಲ್ಲಿ ನಂಜರಾಯನಪಟ್ಟ ತಾಲೂಕು ಇದೆ. ಅಲ್ಲಿಂದ ದಕ್ಷಿಣಕ್ಕೆ ಬರುತ್ತಾ ಮೊದಲು ಮಡಿಕೇರಿ ತಾಲೂಕು, ಆ ಮೇಲೆ ಎಡೆನಾಲ್ಕುನಾಡು ತಾಲೂಕು, ಕಡೆಗೆ ಕಿಗ್ಗಟ್ನಾಡು ತಾಲೂಕು ಸಿಕ್ಕುತ್ತವೆ. ಮಡಿಕೇರಿ ಎಡೆನಾಲ್ಕುನಾಡು ತಾಲೂಕುಗಳ ಪಶ್ವಿಮದಲ್ಲಿ ಪಾಡಿನಾಲ್ಕು ನಾಡು ತಾಲೂಕು ಇದೆ.

ಈ ತಾಲೂಕುಗಳ ಒಳಭಾಗಗಳಿಗೆ ಕೆಲವು ಕಡೆ ನಾಡುಗಳೆಂತಲೂ, ಕೆಲವು ಕಡೆ ಹೋಬಳೆಗಳೆಂತಲೂ ಹೆಸರುಂಟು. ನಾಡು ಹೋಬಳಿಗಳ ಒಳಭಾಗಗಳಿಗೆ ಗ್ರಾಮ ಇಲ್ಲವೆ ಹಳ್ಳಿ ಎಂಬ ಹೆಸರು.

ತಾಲೂಕು, ನಾಡು, ಹೋಬಳಿಇವುಗಳಪಟ್ಟಿ

. ನಂಜರಾಯಪಟ್ಟಣ ತಾಲೂಕು
ತಾಲೂಕು ಕಚೇರಿ ಸೋಮವಾರಪೇಟೆಯಲ್ಲಿದೆ
ಕ್ಷೇತ್ರಫಲ, ೩೫೪.೭೧ ಚದರ ಮೈಲಿಗಳು.

ಎಡವನಾಡು

ಪಾರುಪತ್ಯಗಾರ್ ಕಚೇರಿ

ಸೋಮವಾರ ಪೇಟೆಯಲ್ಲಿದೆ.
ಗಡಿನಾಡು

ಮಾದಾಪುರದಲ್ಲಿದೆ
ನಂಜರಾಯಪಟ್ಟಣ ರಾಮಸ್ವಾಮಿ ಕಣವೆ ಹೋಬಳಿ

ಫ್ರೇಜರ್ ಪೇಟೆಯಲ್ಲಿದೆ
ಕೊಡ್ಲಿ ಹೋಬಳಿ

ಕೊಡ್ಲಿ ಪೇಟೆಯಲ್ಲಿದೆ
ಬಿಳಹದ ಹೋಬಳಿ

ಶನಿವಾರ ಸಂತೆಯಲ್ಲಿದೆ
ನಿಡತದ ಹೋಬಳಿ

ಗೌಡಹಳ್ಳಿಯಲ್ಲಿದೆ

 

. ಮಡಿಕೇರಿ ತಾಲೂಕು
ತಾಲೂಕು ಕಚೇರಿ ಮಡಿಕೇರಿಯಲ್ಲಿದೆ
ಕ್ಷೇತ್ರಫಲ ೨೧೬. ೩೦ ಚದರ ಮೈಲಿಗಳು

ಮಡಿಕೇರಿ ಕಗ್ಗೋಡ್ಲುನಾಡು

ಪಾರುಪತ್ಯಗಾರ್ ಕಚೇರಿ

ಮಡಿಕೇರಿಯಲ್ಲಿದೆ
ಉಲುಗುಲಿ ಮೂಡಗೇರಿ ನಾಡು

ಸುಂಟಿಕೊಪ್ಪಲಲ್ಲಿದೆ
ಹುದಿಕೇರಿ ಕಾಂತ ಮೂರ್ನಾಡು

ಮೂರ್ನಾಡಿನಲ್ಲಿದೆ

 

೩. ಎಡೆನಾಲ್ಕುನಾಡು ತಾಲೂಕು
ತಾಲೂಕು ಕಚೇರಿ ವೀರರಾಜೇಂದ್ರಪೇಟೆಯಲ್ಲಿದೆ
ಕ್ಷೇತ್ರಫಲ ೨೦೧.೪೫ ಚದರ ಮೈಲಿಗಳು

ಎಡೆನಾಲ್ಕುನಾಡು ಬೆಪ್ಪುನಾಡು

ಪಾರುಪತ್ಯಗಾರ್ ಕಚೇರಿ

ವೀರರಾಜೇಂದ್ರ ಪೇಟೆಯಲ್ಲಿದೆ.
ಅಮ್ಮತ್ತಿನಾಡು

ಅಮ್ಮತ್ತಿಯಲ್ಲಿದೆ

 

. ಕಿಗ್ಗಟ್ನಾಡು ತಾಲೂಕು
ತಾಲೂಕು ಕಚೇರಿ ಪೊನ್ನಂಪೇಟೆಯಲ್ಲಿದೆ
ಕ್ಷೇತ್ರಫಲ ೪೧೦.೪೫ ಚದರ ಮೈಲಿಗಳು

ಅಂಜಿಗೇರಿನಾಡು

ಪಾರುಪತ್ಯಗಾರ್ ಕಚೇರಿ

ಹುದಿಕೇರಿಯಲ್ಲಿದೆ
ಹತ್ತುಗಟ್ಟುನಾಡು

ಪೊನ್ನಂಪೇಟೆಯಲ್ಲಿದೆ
ತಾವಳಗೇರಿ ಮೂರ್ನಾಡು ಶ್ರೀಮಂಗಲದಲ್ಲಿದೆ
ಬೆಟ್ಟತ್ತುನಾಡು ಪಾರುಪತ್ಯಗಾರ್ ಕಚೇರಿ     ಗೋಣಿಕೊಪ್ಪಲಲ್ಲಿದೆ

 

. ಪಾಡಿನಾಲ್ಕುನಾಡು ತಾಲೂಕು
ತಾಲೂಕು ಕಚೇರಿ ನಾಪೊಕ್ಲು ಎಂಬಲ್ಲಿದೆ
ಕ್ಷೇತ್ರಫಲ ೩೯೯.೯೦ ಚದರ ಮೈಲಿಗಳು

ಪಾಡಿನಾಲ್ಕುನಾಡು

ಪಾರುಪತ್ಯಗಾರ್ ಕಚೇರಿ

ನಾಪೊಕ್ಲದಲ್ಲಿದೆ
ಕಡಿಯತ್ತುನಾಡು

ಪಾರಾಣೆಯಲ್ಲಿದೆ
ಬೇಂಗುನಾಡು

ಕಡಿಯತ್ತೂರಲ್ಲಿದೆ
ತಾವುನಾಡು

ಭಾಗಮಂಡಲದಲ್ಲಿದೆ

 

(ಸರಕಾರ) – ರಾಜ್ಯಭಾರಕ್ರಮವು

ದಕ್ಷಿಣ ಹಿಂದುಸ್ಥಾನದಲ್ಲಿರುವ ಈ ಚಿಕ್ಕ ಸೀಮೆಯ ಏಳನೆಯ ಎಡ್ವರ್ಡ್ ಚಕ್ರವರ್ತಿಯವರ ಸಾಮ್ರಾಜ್ಯಕ್ಕೆ ವಳಿತವಾದ ಇಂಡ್ಯಾ ಗವರ್ನಮೆಂಟ್ ಎಂಬ ಸರಕಾರಕ್ಕೆ ಒಳಪಟ್ಟದ್ದಾಗಿ ಮೈಸೂರು ದೇಶಕ್ಕೆ ರೆಸಿಡೆಂಟ್‌ರಾಗಿಯೂ ಕೊಡಗಿಗೆ ಚೀಫ್ ಕಮೀಷನರ್ ಆಗಿಯೂ ಇರುವವರ ಆಡಳಿತದಲ್ಲಿದೆ. ಚೀಫ್ ಕಮೀಷನರ್ ಸಾಹೇಬರು ಬೆಂಗಳೂರಲ್ಲಿದ್ದುಕೊಂಡು ಅಲ್ಲಿಂದಲೇ ರಾಜ್ಯಕಾರ್ಯವನ್ನೆಲ್ಲಾ ನಡಿಸುತ್ತಾರೆ. ಅವರು ವರ್ಷಕ್ಕೊಂದು ಸಲ ಕೊಡಗಿಗೆ ಬರುವುದುಂಟು. ಅವರ ಕೈಕೆಳಗೆ ಕೊಡಗಿನಲ್ಲಿರುವ ಅಧಿಕಾರಿಗಳಲ್ಲೆಲ್ಲಾ ಕಮೀಷನರ್ ಸಾಹೇಬರು ಮುಖ್ಯರು. ಕಮೀಷನರ್ ಸಾಹೇಬರ ಕೈಕೆಳಗೆ ರೆವಿನ್ಯುಬಾಬಿನಲ್ಲಿ ಇಬ್ಬರು ಅಸಿಸ್ಟಂಟ್ ಕಮೀಷನರೂ, ಒಬ್ಬರು ಲ್ಯಾಂಡ್ ರಿಕಾರ್ಡ್, ಅಸಿಸ್ಟಂಟ್ ಸುಪರಿಂಟೆಂಡೆಂಟರೂ, ಐದು ಮಂದಿ ಸುಬೇದಾರರೂ, ಸಿವಿಲ್ ಕ್ರಿಮಿನಲ್ ಬಾಬುಗಳಲ್ಲಿ ಒಬ್ಬ ಸಬ್ ಜಡ್ಜರೂ, ಇಬ್ಬರೂ ಮುನಿಷಿಫರೂ, ಮ್ಯಾಜಿಸ್ಟ್ರೇಟರೂ ಇದ್ದಾರೆ. ಒಂದೊಂದು ತಾಲೂಕು ಒಬ್ಬೊಬ್ಬ ಸುಬೇದಾರರ ಆಡಳಿತದಲ್ಲಿಯೂ, ನಾಡು ಹೋಬಳಿಗಳು ಪಾರುಪತ್ಯಗಾರರ ಕೈಕೆಳಗೂ ಇವೆ. ಕಂದಾಯವನ್ನು ವಸೂಲು ಮಾಡುವುದು ಈ ಒಳ ಉದ್ಯೋಗಸ್ಥರ ಮುಖ್ಯ ಕೆಲಸವಾದರೂ, ಸುಬೇದಾರರು ಕ್ರಿಮಿನಲ್ ಬಾಬುಗಳಲ್ಲಿ ಕ್ಲುಪ್ತವಾದ ಅಧಿಕಾರವನ್ನು ನಡಿಸುತ್ತಾರೆ.

ಮಾರ್ಗಗಳು

ಈಗ ಸದ್ಯಕ್ಕೆ ಕೊಡಗಿನಲ್ಲಿ ರೈಲ್ ರಸ್ತೆ ಇಲ್ಲ, ಆದರೆ ಇಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲಿಕ್ಕೂ ಈ ದೇಶದಿಂದ ಮೈಸೂರು ಮಂಗಳೂರು ತಲಚೇರಿಗೆ ಪ್ರಯಾಣ ಮಾಡುವುದಕ್ಕೂ ಒಳ್ಳೆಯ ಮಾರ್ಗಗಳಿವೆ. ಮೈಸೂರು ಶ್ರೀರಂಗಪಟ್ಟಣದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮಂಗಳೂರಿಗೂ ಮಲೆಯಾಳದಲ್ಲಿರುವ ಕಣ್ಣನೂರಿಗೂ ಹೋಗುವ ರಸ್ತೆಗಳು ಈ ದೇಶದೊಳಗೆ ಹೋಗಿವೆ.

೧. ಈ ರಸ್ತೆಗಳಲ್ಲಿ ಒಂದು ಮೈಸೂರು ಕಡೆಯಿಂದ ಕುಶಲ್ ನಗರದ ಫ್ರೇಜರ್ ಪೇಟೆಯಲ್ಲಿ ಕೊಡಗಿನೊಳಗೆ ಪ್ರವೇಶಿಸಿ, ಸುಂಟಿಕೊಪ್ಪಲು ತಲಚೇರಿಗಳ ಮೇಲೆ ಮಡಿಕೇರಿಗೆ ಬಂದು, ಅಲ್ಲಿಂದ ಮುಂದಕ್ಕೆ ಮದೇನಾಡು ಎಂಬ ಊರುಗಳನ್ನು ದಾಟಿ, ಕನ್ನಡ ಜಿಲ್ಲೆಯಲ್ಲಿರುವ ಸುಳ್ಯ, ಪುತ್ತೂರು ಪಾಣೆಮಂಗಳೂರು ಎಂಬ ಊರುಗಳ ಮೇಲೆ ಹಾದು, ಮಂಗಳೂರಿಗೆ ಮುಟ್ಟುತ್ತದೆ. ಈ ರಸ್ತೆಯ ಕೊಡಗಿನಲ್ಲಿರುವ ಭಾಗವೂ ೪೦ ಮೈಲಿಗಳ ಉದ್ದ.

೨. ಮೈಸೂರು ಕಡೆಯಿಂದ ಬರುವ ಇನ್ನೊಂದು ರಸ್ತೆಯು ಮಡಿಕೇರಿಗೆ ಆಗ್ನೇಯ ದಿಕ್ಕಿನಲ್ಲಿ ೨೮ ಮೈಲಿಗಳ ದೂರದಲ್ಲಿರುವ ಸಿದ್ಧೇಶ್ವರನ ಗದ್ದಿಗೆ ಎಂಬಲ್ಲಿ ಕೊಡಗಿನೊಳಗೆ ಹೊಕ್ಕು, ಅಲ್ಲಿಂದ ಸಿದ್ಧಾಪುರ, ಅಮ್ಮತ್ತಿ ಎಂಬ ಊರುಗಳನ್ನು ದಾಟಿ, ವೀರರಾಜ ಪೇಟೆಗೆ ಮುಟ್ಟಿ, ಪೆರಂಬಾಡಿ ಕಣಿವೆಗಾಗಿ ಮಲೆಯಾಳಕ್ಕೆ ಇಳಿದು ಕಣ್ಣನೂರಿಗೆ ಹೋಗುತ್ತದೆ.

೩. ಮತ್ತೊಂದು ರಸ್ತೆಯು ವೀರರಾಜಪೇಟೆಗೆ ಹೆಚ್ಚು ಕಡಿಮೆ ೨೦ ೧/೨ ಮೈಲಿ ಪೂರ್ವ ದಿಕ್ಕಿನಲ್ಲಿರುವ ಆನೆ ಚೌಕೂರು ಎಂಬಲ್ಲಿ ಕೊಡಗಿನೊಳಗೆ ಪ್ರವೇಶಿಸಿ, ತಿತ್ಮತ್ತಿ ಗೋಣಿ ಕೊಪ್ಪಲು, ಹಾತೂರು, ಬಿಟ್ಟಂಗಾಲ ಇವುಗಳ ಮೇಲೆ ಹಾದು, ಪೆರಂಬಾಡಿಯಲ್ಲಿ ಮೇಲಿನ ರಸ್ತೆಗೆ ಕೂಡುತ್ತದೆ. ಈ ರಸ್ತೆಗಳೆಲ್ಲಾ ಮೈಸೂರು ದೇಶದಿಂದ ಪಶ್ಚಿಮ ಕಡೆಗೆ ಹೋಗುತ್ತವೆ.

ಕೊಡಗಿನೊಳಗೆಇರುವರಸ್ತೆಗಳುಯಾವುವೆಂದರೆ

. ಮಡಿಕೇರಿ ವೀರರಾಜಪೇಟೆ ರಸ್ತೆಇದು ಮಡಿಕೇರಿಯಿಂದ ದಕ್ಷಿಣಕ್ಕೆ ೧೦ ಮೈಲಿಗಳ ದೂರದಲ್ಲಿರುವ ಮಾರ್ನಾಡಿಗಾಗಿ ಆಚೆ ೧೦ ಮೈಲಿಗಳ ದೂರದಲ್ಲಿರುವ ವೀರರಾಜಪೇಟೆಗೆ ಹೋಗಿ, ಮೈಸೂರು ಕಣ್ಣನೂರು ರಸ್ತೆಗೆ ಕೂಡುತ್ತದೆ. ಇದರ ಇದ್ದ ೨೦ ಮೈಲಿ.

. ಮಡಿಕೇರಿ ಕೊಡ್ಲಿಪೇಟೆ ರಸ್ತೆಇದು ಮಡಿಕೇರಿಯಿಂದ ಉತ್ತರಕ್ಕೆ ಹೋಗುತ್ತಾ ಮೊದಲು ೧೨ ಮೈಲಿ ದೂರದಲ್ಲಿರುವ ಮಾದಾಪುರಕ್ಕೆ ಮುಟ್ಟಿ, ಅಲ್ಲಿಂದ ಮುಂದಕ್ಕೆ ೧೩ ಮೈಲಿ ದೂರದಲ್ಲಿರುವ ಸೋಮವಾರಪೇಟೆ ಮೇಲೆ ಹಾಗು, ಆಚೆಗೆ ೧೯ ಮೈಲಿ ಹೋಗಿ, ಕೊಡ್ಲಿಪೇಟೆಯಲ್ಲಿ ಕೊಡ್ಲಿಪೇಟೇ ಮೇಲೆ ಹಾದುಹೋಗುವ ಆರ್ಕಲಗೂಡು ಸಕಲೇಶಪುರದ ರಸ್ತೆಗೆ ಕೂಡುತ್ತದೆ. ಇದರ ಉದ್ದ ೪೪ ಮೈಲಿ (ಅರ್ಕಲಗೂಡು ಸಕಲೇಶಪುರ ಎಂಬ ಊರುಗಳು ಮೈಸೂರು ಸೀಮೆಯಲ್ಲಿವೆ. ಇವುಗಳಲ್ಲಿ ಒಂದೂರಿಂದ ಇನ್ನೊಂದೂರಿಗೆ ಹೋಗುವ ರಸ್ತೆಯು ಕೊಡಗಿನೊಳಗೆ ೭ ಮೈಲಿ ಹೋಗಿದೆ.

. ಮಡಿಕೇರಿ ಸಿದ್ದಾಪುರ ರಸ್ತೆ ಇದರ ಉದ್ದ ೧೭ ಮೈಲಿ. ಕೊಡಗಿನಲ್ಲಿರುವ ರಸ್ತೆಗಳಲ್ಲೆಲ್ಲಾ ಸಮತಟ್ಟಾಗಿಯೂ ಒಳ್ಳೆಯದಾಗಿಯೂ ಇರುವುದು ಇದೊಂದೇ.

. ಮಡಿಕೇರಿ ನಾಲ್ಕುನಾಡು ರಸ್ತೆ ಈ ಎರಡು ರಸ್ತೆಗಳು ಮಡಿಕೇರಿ.

೫. ಮಡಿಕೇರಿ ಭಾಗ ಮಂಡಲ ರಸ್ತೆ – ಯಿಂದ ೧೦ ಮೈಲಿ ದೂರದಲ್ಲಿರುವ ಬೆಟ್ಟಕೇರಿವರೆಗೆ ಒಂದಾಗಿ ಹೋಗಿ, ಅಲ್ಲಿ ಕವಲೊಡೆದು, ಒಂದು ದಕ್ಷಿಣಕ್ಕೆ ತಿರುಗಿ, ನಾಪೊಕ್ಲು ಮೇಲೆ ನಾಲ್ಕುನಾಡು ಅರಮನೆಗೆ ಹೋಗುತ್ತದೆ; ಇನ್ನೊಂದು ಪಶ್ಚಿಮಕ್ಕೆ ತಿರುಗಿ ಚೇರಂಬಾಣೆಯ ಮೇಲೆ ಭಾಗಮಂಡಲಕ್ಕೆ ಹೋಗುತ್ತದೆ.

೬. ಫ್ರೇಜರ್ ಪೇಟೆಯಿಂದ ಒಂದು ರಸ್ತೆ – ದಕ್ಷಿಣದಲ್ಲಿರುವ ಸಿದ್ದಾಪುರಕ್ಕೂ.

೭. ಒಂದು ರಸ್ತೆ – ಉತ್ತರದಲ್ಲಿರುವ ಶೀರಂಗಾಲಕ್ಕೂ ಹೋಗುತ್ತದೆ.

೮. ಇನ್ನೊಂದು ರಸ್ತೆ – ಸೋಮವಾರಪೇಟೆಗೂ ಹೋಗುತ್ತದೆ.

೯. ಶನಿವಾರ ಸಂತೆಯಿಂದ ಶೀರಂಗಾಲಕ್ಕೆ ಒಂದು ರಸ್ತೆ ಹೋಗಿದೆ – ಈ ಎರಡು ಸ್ಥಳಗಳಲ್ಲಿ ನೇಗೆ ಕೆಲಸವು ಬಹಳವಾಗಿ ನಡಿಯುತ್ತದೆ.

೧೦. ಮೂರ್ನಾಡಿನಿಂದ ಎರಡು ರಸ್ತೆಗಳು – ಹೊರಟು, ಒಂದು ೬ ಮೈಲಿಗಳ ದೂರದಲ್ಲಿರುವ ನಾಪೊಕ್ಲಿಗೂ, ಇನ್ನೊಂದು ೧೦ ಮೈಲಿಗಳ ದೂರದಲ್ಲಿರುವ ಅಮ್ಮತ್ತಿಗೂ ಹೋಗಿವೆ.

೧೧. ವೀರರಾಜಪೇಟೆ – ಯಿಂದ ನಾಲ್ಕುನಾಡು ಅರಮನೆಗೆ ಹೋಗುವುದಕ್ಕೆ ಹೊಸದಾಗಿ ಒಂದು ರಸ್ತೆ ಆಗಿದೆ.

೧೨. ಗೋಣಿಕೊಪ್ಪಲಕ್ಕೂ – ಪೊನ್ನಂಪೇಟೆಗೂ ನಡುವೆ ೩ ಮೈಲಿಗಳ ಒಂದು ರಸ್ತೆ ಇದೆ. ಈ ರಸ್ತೆಗಳೆಲ್ಲಾ ಮರಹಮ್ಮತ್ ಇಲಾಖೆಯವರ ಕೈಕೆಳಗೆ ಇರುವುದರಿಂದ ಯಾವಾಗಲೂ ದುರಸ್ತಿಯಲ್ಲಿರುತ್ತವೆ. ಇವುಗಳಲ್ಲದೆ ಅಮ್ಮತ್ತಿಯಿಂದ ಗೋಣಿಕೊಪ್ಪಲಕ್ಕೂ, ಪೊನ್ನಂಪೇಟೆಯಿಂದ ಹುದಿಕೇರಿ ಸೆಟ್ಟಿಗೇರಿಗಳ ಮೇಲೆ ವೈನಾಡಿನಲ್ಲಿರುವ ತಿರುನೆಲ್ಲಿ ದೇವಸ್ಥಾನಕ್ಕೂ ಹೋಗಲಿಕ್ಕೆ ಬಂಡಿ ರಸ್ತೆಗಳು ಹೊಸದಾಗಿ ತಯಾರಾಗಿವೆ.

ಪೋಸ್ಟಾಫೀಸುಗಳೂ ತಂತೀ ಆಫೀಸುಗಳೂ ಕೊಡಗಿನಲ್ಲಿ ತಾಲೂಕು ನಾಡು ಕಚೇರಿಗಳಿರುವಲ್ಲೆಲ್ಲಾ ಪೋಸ್ಟಾಫೀಸುಗಳಿವೆ. ವೀರರಾಜಪೇಟೆ, ಮಡಿಕೇರಿ, ಸುಂಟಿಕೊಪ್ಪು, ಫ್ರೇಜರ್‌ಪೇಟೆ, ಸೋಮವಾರಪೇಟೆ, ಪೊಳ್ಳಬೆಟ್ಟ, ಸಿದ್ದಾಪುರ ಎಂಬ ಸ್ಥಳಗಳಲ್ಲಿ ತಂತೀ ಆಫೀಸುಗಳಿವೆ. ಇವುಗಳಿಂದ ಜನಗಳಿಗೆಲ್ಲಾ ತುಂಬಾ ಅನುಕೂಲವಾಗಿದೆ.

ಪಟ್ಟಣಗಳೂಊರುಗಳು

ಮಡಿಕೇರಿ – ಇದು ಕೊಡಗಿನ ಮುಖ್ಯ ಪಟ್ಟ. ಸಮುದ್ರಮಟ್ಟಕ್ಕೆ ೩,೮೦೦ ಅಡಿಗಳ ಎತ್ತರದಲ್ಲಿದೆ. ಇದರಲ್ಲಿಕೋಟೆ ಪೇಟೆಗಳೆಂಬ ಎರಡು ಭಾಗಗಳುಂಟು. ಸನ್ ೧೬೮೧ರಲ್ಲಿ ಹಾಲೇರಿ ಮುದ್ದುರಾಜನು ಮಡಿಕೇರಿಯನ್ನು ಕೊಡಗಿನ ರಾಜಧಾನಿಯಾಗಿ ಮಾಡಿದನು. ಕೋಟೆಯನ್ನು ಕಟ್ಟಿ ಪೂರೈಸಿದವನು ದೊಡ್ಡವೀರರಾಜನೆಂದು ಹೇಳುತ್ತಾರೆ. ಕೋಟೆಯೊಳಗೆ ಕೋರ್ಟು ಕಚೇರಿಗಳೂ, ಖಜಾನೆಯೂ, ಜೈಲೂ, ಆಫೀಸುಗಳೂ ಇವೆ. ಕೋಟೆಯ ಮುಂದುಗಡೆ ತಗ್ಗಿನಲ್ಲಿ ಓಂಕಾರೇಶ್ವರನ ದೇವಸ್ಥಾನವಿದೆ. ಪೇಟೆಯು ಕೋಟೆಗೆ ಉತ್ತರ ದಿಕ್ಕಿನಲ್ಲಿದೆ. ಇದಕ್ಕೆ ದೊಡ್ಡವೀರರಾಜನ ರಾಣಿ ಮಹಾದೇವಮ್ಮಾಜಿಯ ಜ್ಞಾಪಕಾರ್ಥವಾಗಿ ಮಹಾದೇವ ಪೇಟೆ ಎಂದು ಹೆಸರಾಯಿತು. ಪೇಟೆಯ ತುದಿಯಲ್ಲಿ ಕೊಡಗು ರಾಜರ ವಿಚಿತ್ರವಾದ ಸಮಾಧಿಗಳುಂಟು. ಈ ಸಮಾಧಿಗಳಿಗೆ ಗದ್ದಿಗೆ ಎನ್ನುತ್ತಾರೆ. ಯೂರೋಪಿಯನ್ ಉದ್ಯೋಗಸ್ಥರೆಲ್ಲಾ ಮಡಿಕೇರಿಯಲ್ಲಿ ವಾಸಮಾಡುತ್ತಾರೆ. ಮಡಿಕೇರಿಯ ಜನ ಸಂಖ್ಯೆ ೬,೨೭೦.

ವೀರರಾಜೇಂದ್ರಪೆಟೆ (ವೀರರಾಜಪೇಟೆ) – ಇದು ಮಡಿಕೇರಿಗೆ ಎರಡನೆಯದು. ಸನ್ ೧೭೯೦ನೇಯ ಇಸವಿಯಲ್ಲಿ ವೀರರಾಜೇಂದ್ರ ಒಡೆಯರಿಗೂ ಜನರಲ್ ಅಬರ್ ಕ್ರಾಂಬಿಗೂ ಈ ಸ್ಥಳದಲ್ಲಿ ಭೇಟಿಯಾದ್ದರಿಂದ ಇದಕ್ಕೆ ವೀರರಾಜಪೇಟೆ ಎಂಬ ಹೆಸರು ಬಂತು. ಜನಸಂಖ್ಯ ೩, ೭೧೨. ವೀರರಾಜಪೇಟೆಗೂ ಮಲೆಯಾಳದಲ್ಲಿರುವ ತಲಚೇರಿ ಕಣ್ಣೂರು ಎಂಬ ಬಂದರಗಳಿಗೂ ಭಾರೀ ವ್ಯಾಪಾರ ನಡೆಯುತ್ತದೆ. ಎಡೆನಾಲ್ಕುನಾಡು ತಾಲೂಕು ಕಚೇರಿ ಇಲ್ಲಿದೆ. ಇಲ್ಲಿ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್ ಸಾಹೇಬರು ತಿಂಗಳಿಗೊಮ್ಮೆ ಒಂದು ವಾರ ಕಚೇರಿ ಮಾಡುತ್ತಾರೆ.

ಸೋಮವಾರಪೇಟೆ – ಇದು ಮಡಿಕೇರಿಗೆ ೨೫ ಮೈಲಿ ಉತ್ತರದಲ್ಲಿದೆ. ಇಲ್ಲಿ ಸೋಮವಾರ ದಿನ ಭಾರೀ ಸಂತೆ ಕೂಡುವುದರಿಂದ ಸೋಮವಾರಪೇಟೆ ಎಂಬಹೆಸರು ಬಂತು. ಜನಸಂಖ್ಯೆ ೨,೨೦೨.

ಫ್ರೇಜರ್ ಪೇಟೆ ಇದು ಮಡಿಕೇರಿಗೆ ೨೦ ಮೈಲಿ ಪೂರ್ವ ದಿಕ್ಕಿಗೆ ಕಾವೇರಿ ತೀರದಲ್ಲಿದೆ. ಟೀಪು ಹುಟ್ಟಿದ ಸಂತೋಷಕರವಾದ ವರ್ತಮಾನವು ಹೈದರನಿಗೆ ಇಲ್ಲಿ ಮುಟ್ಟಿದುದರಿಂದ ಇಲ್ಲಿ ಹೈದರನು ಕೋಟೆ ಕಟ್ಟಿಸಿ, ಊರಿಗೆ ಕುಶಾಲ್‌ನಗರ (ಸಂತೋಷದ ಊರು) ಎಂಬ ಹೆಸರಿಟ್ಟನು. ಇಂಗ್ಲೀಷರು ಕೊಡಗು ಹಿಡಿದ ಮೇಲೆ ಈ ಕೋಟೆಯನ್ನು ಕಿತ್ತು ಅದರಕಲ್ಲುಗಳಿಂದ ಕಾವೇರಿ ನದಿಗೆ ಒಳ್ಳೆಯ ಸೇತುವೆ ಕಟ್ಟಿಸಿದರು. ಮತ್ತು ಕೊಡಗು ನಿವಾಸಿಗಳು ಫ್ರೇಜರ್ ಸಾಹೇಬರ ಜ್ಞಾಪಕಾರ್ಥವಾಗಿ ಈ ಪಟ್ಟಣಕ್ಕೆ ಫ್ರೇಜರ್ ಪೇಟೆ ಎಂಬು ಹೆಸರಿಟ್ಟರು. ಜನಸಂSಖಾಯೆ ೧,೧೮೧.

ಶನಿವಾರಸಂತೆ ಇದುಸೋಮವಾರಪೇಟೆಗೆ ೧೩ ಮೈಲಿ ಉತ್ತರದಲ್ಲಿದೆ. ಇಲ್ಲಿ ಬಹಳ ಮಂದಿ ಬಿಳಿ ಮಗ್ಗದವರು ಬಟ್ಟೆ ನೇಯುತ್ತಾರೆ.

ಕೊಡ್ಲಿಪೇಟೆ ಇದು ಶನಿವಾರ ಸಂತೆಗೆ ೬ ಮೈಲಿ ಉತ್ತರದಲ್ಲಿದೆ. ಇಲ್ಲಿ ಐಶ್ವರ್ಯವಂತರಾದ ಲಿಂಗಾಯತಮತದ ಸಾಹುಕಾರರಿರುತ್ತಾರೆ. ಜನಸಂಖ್ಯೆ ೭೯೪.

ಪೊನ್ನಂಪೇಟೆ ಇದನ್ನು ಚೆಪ್ಪುಡೀರ ಪೊನ್ನಪ್ಪ ದಿವಾನರು ಕಟ್ಟಿಸಿದರು. ಇಲ್ಲಿ ಕಿಗ್ಗಟ್ನಾಡು ತಾಲೂಕು ಕಚೇರಿ ಇದೆ. ಪೊನ್ನಂಪೇಟೆಗೆ ೧೫ ಮೈಲಿ ದಕ್ಷಿಣದಲ್ಲಿರುವ ಇರ್ಪು ಎಂಬ ಸ್ಥಳದಲ್ಲಿ ವರ್ಷಕ್ಕೊಮ್ಮೆ ಶಿವರಾತ್ರಿ ದಿನ ಜಾತ್ರೆಯಾಗುತ್ತದೆ.

ಭಾಗಮಂಡಲ, ತಲೆಕಾವೇರಿ ಪಾಡಿನಾಲ್ಕುನಾಡು ತಾಲೂಕಿನಲ್ಲಿರುವ ಇವೆರಡು ದಕ್ಷಿಣ ಹಿಂದುಸ್ಥಾನದಲ್ಲಿ ಪ್ರಸಿದ್ಧಿಗೆ ಬಂದ ಪುಣ್ಯಕ್ಷೇತ್ರಗಳು. ಇವು ಮಡಿಕೇರಿಗೆ ಪಶ್ಚಿಮದಲ್ಲಿ ೨೨-೨೫ ಮೈಲಿಗಳ ದೂರದಲ್ಲಿವೆ.

ಮಡಿಕೇರಿ ತಾಲೂಕಿನಲ್ಲಿರುವ ಸುಂಟಿಕೊಪ್ಪಲು, ಎಡೆನಾಲ್ಕುನಾಡು ತಾಲೂಕಿನಲ್ಲಿರುವ ಅಮ್ಮತಿ ಸಿದ್ಧಾಪುರ, ಕಿಗ್ಗಟ್ನಾಡು ತಾಲೂಕಿನಲ್ಲಿರುವ ಗೋಣಿಕೊಪ್ಪಲು ಎಂಬ ಸ್ಥಳಗಳಲ್ಲಿ ವಾರಕ್ಕೊಮ್ಮೆ ಭಾರಿಸಂತೆ ಕೂಡುತ್ತದೆ. ಮತ್ತು ಇವುಗಳಸುತ್ತುಮುತ್ತಲೂ ವಿಸ್ತಾರವಾದ ಕಾಪಿ ತೋಟಗಳಿವೆ.

ಕೊಡಗಿನಲ್ಲಿ ಸಂತೆಯಾಗುವ ಸ್ಥಳಗಳು ಯಾವುವೆಂದರೆ
೧. ಸೋಮವಾರ – ಸೋಮವಾರಪೇಟೆ ಮತ್ತು ಪೊನ್ನಂಪೇಟೆ
೨. ಮಂಗಳವಾರ – ಫ್ರೇಜರ್‌ಪೇಟೆ, ಅಮ್ಮತ್ತಿ
೩. ಬುಧವಾರ – ರಾಮಸ್ವಾ ಕಣವೆ, ವೀರರಾಜೇಂದ್ರಪೇಟೆ
೪. ಗುರುವಾರ – ಮಾದಾಪುರ, ಮೂರ್ನಾಡು
೫. ಶುಕ್ರವಾರ – ಮಡಿಕೇರೆ
೬. ಶನಿವಾರ – ಶನಿವಾರಸಂತೆ ನಾಪೊಕ್ಲು
೭. ಆದಿತ್ಯವಾರ- ಕೊಡ್ಲಿಪೇಟೆ, ಸುಂಟಿಕೊಪ್ಪಲು, ಗೋಣಿಕೊಪ್ಪಲು, ಸಿದ್ಧಾಪುರ.

 

* ಷರಾ

೧)  ಫ್ರೇಜರ್ಪೇಟೆಯಿಂದ ಸುಂಟಿಕೊಪ್ಪಲಕ್ಕೆ ೧೦ ಮೈಲಿ
ಸುಂಟಿಕೊಪ್ಪ್ಲದಿಂದ ಬೋಯಿಕೇರಿಗೆ ಮೈಲಿ
ಬೋಯಿಕೇರಿಯಿಂದ ಮಡಿಕೇರಿಗೆ ಮೈಲಿ
ಮಡಿಕೇರಿಯಿಂದ ಮದೇನಾಡಿಗೆ ಮೈಲಿ
ಮದೇನಾಡಿನಿಂದ ಸಂಪಾಜೆಗೆ ೧೫ ಮೈಲಿ
ಜುಮಲ ೪೦ ಮೈಲಿ

 

೨) ಸಿದ್ಧೇಶ್ವರನ ಗದ್ದಿಗೆಯಿಂದ ಸಿದ್ದಾಪುರಕ್ಕೆ ೧೧ ಮೈಲಿ
ಸಿದ್ಧಾಪುರದಿಂದ ಅಮ್ಮತ್ತಿಗೆ ಮೈಲಿ
ಅಮ್ಮತ್ತಿಯಿಂದ ವೀರರಾಜಪೇಟೆಗೆ ಮೈಲಿ
ವೀರರಾಜಪೇಟೆಯಿಂದ ಪೆರಂಬಾಡಿಗೆ ಮೈಲಿ
ಜುಮಲ ೨೫ ಮೈಲಿ

ಆನೆಚೌಕೂರಿಂದ ತಿತ್ಮತ್ತಿಗೆ . ಮೈಲಿ
ತಿತ್ಮತ್ತಿಯಿಂದ ಗೋಣಿಕೊಪ್ಪಲಕ್ಕೆ . ಮೈಲಿ
ಗೋಣಿಕೊಪ್ಪಲದಿಂದ ಹಾತೂರಿಗೆ ಮೈಲಿ
ಹಾತೂರಿಂದ ಬೆಟ್ಟಂಗಾಲಕ್ಕೆ ಮೈಲಿ
ಬಿಟ್ಟಂಗಾಲದಿಂದ ಪೆರಂಬಾಡಿಯಲ್ಲಿ ರಸ್ತೆಗೆ ಸೇರುವಲ್ಲಿಗೆ ಮೈಲಿ
ಜುಮಲ ೨೨ ಮೈಲಿ

09_22_KV-KUH