‘ಉತ್ತರ ಕರ್ನಾಟಕ ವೃತ್ತಿರಂಗಭೂಮಿ’ ಕುರಿತು ಸಂಶೋಧನೆ ಮಾಡುವ ಸಂದರ್ಭದಲ್ಲಿ ಕೊಣ್ಣೂರ ನಾಟಕ ಬಗೆಗೆ ಕುರಿತು ಹಿರಿಯರು ಹೇಳುತ್ತಿದ್ದ ಸಂಗತಿಗಳನ್ನು ಕೇಳಿ ರೋಮಾಂಚನಗೊಳ್ಳುತ್ತಿದ್ದೆ. ಆಧಾರಗಳ ಕೊರತೆಯಿಂದ ವಿವರವಾಗಿ ಬರೆಯುವುದು ಆಗಿರಲಿಲ್ಲ. ಈ ವರ್ಷ (೧೯೯೯) ಕಂಪನಿಯ ಶತಮಾನೋತ್ಸವ ವರ್ಷವಾದ್ದರಿಂದ ಹೆಚ್ಚು ವಿವರಗಳನ್ನು ಕಲೆಹಾಕಬೇಕೆಂದು ನಿರ್ಧರಿಸಿದೆ. ಕಾರ್ಯಕ್ರಮವೊಂದರಲ್ಲಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರೆದುರು ಈ ಬಗ್ಗೆ ಪ್ರಸ್ತಾಪಿಸಿದೆ. ಅವರಿಂದ ಪ್ರೋತ್ಸಾಹ ಸಿಕ್ಕಿತು. ಡಾ. ಹೇಮಾ ಪಟ್ಟಣಶೆಟ್ಟಿಯವರ ಮೂಲಕ ಈ ಕಂಪನಿಯ ಸಂಸ್ಥಾಪಕರಾದ ಶ್ರೀ ಶಿವಮೂರ್ತಿಸ್ವಾಮಿಗಳ ಮನೆತನದವರನ್ನು ಕಾಣಲು ಸಾಧ್ಯವಾಯಿತು. ಶಿವಮೂರ್ತಿಸ್ವಾಮಿಗಳ ಮೊಮ್ಮಕ್ಕಳು – ಶಾಂತಾ ಹಿರೇಮಠ ಮತ್ತು ಶಿವಮೂರ್ತಯ್ಯ ಕಣಬರಗಿಮಠ ಡೈರಿಗಳನ್ನು, ಫೋಟೋಗಳನ್ನು ಕೊಟ್ಟು ಸಹಕರಿಸಿದ್ದಾರೆ –

ನನ್ನ ಗುರುಗಳೂ, ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳೂ ಆದ ಡಾ. ಎಂ.ಎಂ. ಕಲಬುರ್ಗಿ ಅವರು; ಪ್ರಸಾರಾಂಗದ ನಿರ್ದೇಶಕರಾದ ಡಾ. ಎ.ವಿ. ನಾವಡ ಅವರು ಪ್ರಕಟನೆಗೆ ಅಸ್ತುಹೇಳಿದ್ದಾರೆ – ಇವರಿಗೆ ವಂದನೆಗಳು.

ಡೈರಿಗಳನ್ನು ಓದಿ ಹೇಳುವಲ್ಲಿ ನೆರವಾದ ಬಾಬುರಾವ ದೇಸಾಯಿ, ರಾ.ಕ. ನಾಯಕ, ಎಸ್‌. ವಾಯ್‌, ಕಟ್ಟೀಮನಿ, ಬಿ.ಎ. ಕಮತಗಿ, ಪಿ.ಜಿ. ಕೆಂಪಣ್ಣವರ ಮತ್ತು ಪತ್ನಿ ಸೌ. ಮೀರಾ – ಇವರಿಗೆ ಕೃತಜ್ಞತೆಗಳು.

ಡಾ. ರಾಮಕೃಷ್ಣ ಮರಾಠೆ