ಸೂರ್ಯಾಸ್ತ ಮಾನದ ವೀಕ್ಷಣಾ ಸ್ಥಳ:

ಜಿಲ್ಲೆಯಿಂದ ೬೮ ಕಿ.ಮೀ
ತಾಲ್ಲೂಕಿನಿಂದ ೩ ಕಿ.ಮೀ

ಕೊಪ್ಪ ತಾಲ್ಲೂಕು ಕೇಂದ್ರದಿಂದ ೩ ಕಿ.ಮೀ ದೂರದಲ್ಲಿದೆ. ಕೊಪ್ಪದಿಂದ ಜಯಪುರಕ್ಕೆ ಹೋಗುವ ಮಾರ್ಗದಲ್ಲಿ ನಾರ್ವೆ ಘಾಟಿ ಬಳಿ ಇರುವ ಸೂರ್ಯಾಸ್ತಮಾನ ವೀಕ್ಷಣಾ ಸ್ಥಳ ಹಸಿರ ಒಡಲಿನಿಂದ ತುಂಬಿ ಸುಂದರವಾಗಿದೆ.

 

ಹರಿಹರಪುರ:

ಜಿಲ್ಲೆಯಿಂದ ೬೮ ಕಿ.ಮೀ
ತಾಲ್ಲೂಕಿನಿಂದ ೧೦ ಕಿ.ಮೀ

ಕೊಪ್ಪದಿಂದ ಸುಮಾರು ಹತ್ತು ಕಿ.ಮೀ ದೂರದಲ್ಲಿರುವ ಹರಿಹರಪುರ ಕೊಪ್ಪ ತಾಲ್ಲೂಕಿನ ಪ್ರಸಿದ್ಧ ಕ್ಷೇತ್ರ. ಹರಿಹರಪುರದಲ್ಲಿ ತುಂಗಾ ನದಿಯು ಹರಿಯುತ್ತಿದೆ. ಆದಿ ಶಂಕರಾಚಾರ್ಯರು ಈ ಕ್ಷೇತ್ರದಲ್ಲಿ ಶಾರದಾ ಪೀಠವನ್ನು ಸ್ಥಾಪಿಸಿದ್ದಾರೆ. ಆದಿ ಶಂಕರಾಚಾರ್ಯರು ಈ ಕ್ಷೇತ್ರದಲ್ಲಿ ಶಾರದಾ ಪೀಠವನ್ನು ಸ್ಥಾಪಿಸಿದ್ದಾರೆ. ಶ್ರೀ ಮಠ ಮತ್ತು ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಹರಿಹರಪುರದಲ್ಲಿ ಶ್ರೀ ಶಾರದಾ ದೇವಿ, ಶ್ರೀ ಮಹಾಗಣಪತಿಸತಿ, ಶ್ರೀ ಮಾಧವೇಶ್ವರ ಮತ್ತು ವೆಂಕಟರಮಣ ಲಕ್ಷ್ಮೀನರಸಿಂಹ ದೇವಾಲಯಗಳಿವೆ.

 

ಸೀಗೋಡು:

ಜಿಲ್ಲೆಯಿಂದ ೬೨ ಕಿ.ಮೀ
ತಾಲ್ಲೂಕಿನಿಂದ ೩೨ ಕಿ.ಮೀ

ಕೊಪ್ಪ ತಾಲ್ಲೂಕಿನಿಂದ ೩೨ ಕಿ.ಮೀ ದೂರದಲ್ಲಿ ಕೇಂದ್ರೀಯ ಕಾಫೀ ಸಂಶೋಧನಾ ಸಂಸ್ಥೆಯ ಉಪಕೇಂದ್ರವು ಕಾರ್ಯನಿರ್ವಹಿಸುತ್ತಿದೆ. ಕಾಫೀ ಸಂಶೋಧನಾ ಸಂಸ್ಥೆಯು ಉತ್ತಮ ಇಳುವರಿ ಹಾಗೂ ಎಲೆಗಳಿಗೆ ತಗಲುವ ಬೂಷ್ಟು ಇವುಗಳ ಬಗ್ಗೆ ಸಂಶೋಧನೆ ನಡೆಸುತ್ತಿದೆ.

 

ಕಾಫೀ ಮತ್ತು ಟೀ ತೋಟಗಳು.

ಪ್ರಕೃತಿ ಸೌಂದರ್ಯ ಜೊತೆಗೆ ಕಾಫೀ ಮತ್ತು ಟೀ ತೋಟಗಳು ಕೂಡ ಹೇರಳವಾಗಿದ್ದು, ತುಂಬಾ ಆಕರ್ಷಣೆಯಿಂದ ಕುಡಿದೆ. ಬಪ್ಪುಂಜಿ, ಕೊರಡಿಹಿತ್ಲು, ಅಲಗೇಶ್ವರ, ಬಾಲನೂರಿನಲ್ಲಿ ಟೀ ತೋಟಗಳಿವೆ. ದೇವಾನ್ ಟೀ ಫ್ಯಾಕ್ಟರಿಯು ಕೊಪ್ಪದಿಂದ ೧೨ ಕಿ.ಮೀ ದೂರದಲ್ಲಿದೆ. ತಾಜಾ ಟೀ ಪುಡಿ ತಯಾರಿಕೆಯನ್ನು ವೀಕ್ಷಿಸಬಹುದು.

 

ಪ್ರಬೋಧಿನೀ ಗುರುಕುಲ:

ಜಿಲ್ಲೆಯಿಂದ ೭೦ ಕಿ.ಮೀ
ತಾಲ್ಲೂಕಿನಿಂದ ೧೦ ಕಿ.ಮೀ

ಕೊಪ್ಪದಿಂದ ೧೦ ಕಿ.ಮೀ ದೂರದಲ್ಲಿರುವ ಹರಿಹರಪುರದ ದಟ್ಟ ವನಸಿರಿಯ ನಡುವೆ ತುಂಗಾ ತಟದಲ್ಲಿ ವ್ಯಕ್ತಿತ್ವ ಅರಳಿಸುವ ಪ್ರಕ್ರಿಯೆಯಲ್ಲಿ ’ಪ್ರಬೋಧಿನೀ ಗುರುಕುಲ’ವು ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ಆಧ್ಯಾತ್ಮಿಕ, ಬೌದ್ಧಿಕ, ಸಾಮಾಜಿಕ ಬೆಳವಣಿಗೆಗೆ ಪೂರಕವಾಗಿ ಧೈರ್ಯ, ಸಾಹಸ, ಸಂಸ್ಕೃತಿ, ರಾಷ್ಟ್ರ ಶಕ್ತಿ, ರಾಷ್ಟ್ರ ಧ್ವಜ ಹಾಗೂ ಸಾಮಾಜಿಕ ಕಳಕಳಿಯನ್ನು ಬೆಳೆಸುವಲ್ಲಿ ಶ್ರಮಿಸುತ್ತಿದೆ.

 

ಸಂದೇಶ ಭವನ ಹಿರೇಕೊಡಿಗೆ:

ಕುವೆಂಪುರಾರ ಜನ್ಮ ಸ್ಥಳವಾದ ಹಿರೇಕೊಡಿಗೆಯಲ್ಲಿ ಕುವೆಂಪುರವರ ವಿಶ್ವ ಮಾನವ ಸಂದೇಶಗಳನ್ನು ಸಾರುವ ಸಂದೇಶ ಭವನ ಕೊಪ್ಪ ತಾಲ್ಲೂಕಿನಿಂದ ೧೨ ಕಿ.ಮೀ ದೂರದಲ್ಲಿದೆ. ಪ್ರಾರಂಭದ ಶಿಶುಜೀವನ ಕುವೆಂಪುರವರು ಇಲ್ಲಿ ಕಳೆದರು. ಪ್ರದೇಶದ ಬಗ್ಗೆ ಕುವೆಂಪುರವರಿಗೆ ಅಪಾರವಾದ ಅಭಿಮಾನವಿತ್ತು. ಈ ಸ್ಥಳದ ಬಗ್ಗೆ ಕುವೆಂಪುರವರು ತಮ್ಮ ಸಹಚರರೊಂದಿಗೆ ಮತ್ತು ತಮ್ಮ ಸಾಹಿತ್ಯದಲ್ಲಿ ಉಲ್ಲೇಖಿಸಿದ್ದಾರೆ.