ಪಲ್ಲವಿ : ಕೊಳಲನೂದಬೇಡ ಕೃಷ್ಣ ಮನಸನಳಿಸಬೇಡ ಕೃಷ್ಣ
ಕೊಳಲ ಶಬ್ದ ಕೇಳಿದೆ ಕೃಷ್ಣ ನಿನ್ನ ನೋಡಲಿಲ್ಲ ಕೃಷ್ಣ
ಚರಣ : ಗೆಜ್ಜೆ ಶಬ್ದ ಕೇಳಿದೆ ಕೃಷ್ಣ ಕಾಲ ಗುರುತು ಕಾಣೆ ಕೃಷ್ಣ
ನವಿಲ ಗರಿಯ ಕಂಡೆ ನಿನ್ನ ಮುಖವು ಕಾಣಲಿಲ್ಲ ಕೃಷ್ಣ
ಗಡಿಗೆ ಒಡೆದು ಹೋದೆ ಅದರಲಿ ಬೆಣ್ಣೆ ಕಾಣಲಿಲ್ಲ ಕೃಷ್ಣ
ಪೂತನಿ ಕೊಂದೆಯಂತೆ ಕೃಷ್ಣ ಮೋಕ್ಷ ಕೊಟ್ಟೆಯಂತೆ
ಏನು ಮಾಯೆ ಎಂದು ಕೃಷ್ಣ ಹೇಳಲಾರೆ ನಾನು
ನಿನ್ನ ನಾಮ ಭಜನೆ ಕೃಷ್ಣ ಜಯವು ಜನರಿಗೆಲ್ಲಾ
Leave A Comment