ಅಪಜಯದ ಸುಖವನನುಭವಿಪುದನು ನಾನು
ವಿಪರೀತವಾಗರಿತೆ ನಿನ್ನೊಡನೆ ಆಡಿ.

ಸುಮವು ತರುರಾಜಿಗಳನಣಕಿಪುದ ಕಂಡಿಹೆನು,
ಹಿಮಮಣಿಯು ನವರತ್ನ ಭೂಷಣಗಳ;
ಹಿಮಕರನ ಮಿಂಚುಹುಳುವಲ್ಲಗಳೆವುದ ಕಂಡು
“ಅಮಮ ಅಪಜಯದ ಸುಖವಿರಲಿ!” ಎಂದೆ.

ಹನಿಯ ಮಹಿಮೆಯು ಸಾಗರವ ನುಂಗುವುದ ಕಂಡೆ,
ದಿನದ ಸಿರಿ ಯುಗಯುಗವ ಮೀರುವುದನು;
ಅನುದಿನವು ನಿನಗಾಗುವಪಜಯವ ಕಂಡು ನಾನ್
ಎನಗಾಗುವಪಜಯವ ಚುಂಬಿಸುವೆನು!