ಸಮಯವಿಹುದಿನ್ನೂ, ಅವಸರವು ಬೇಡ,
ತುದಿಯ ಕಾಣದ ಕಾಲ ಮುಂದಿರುವುದು.
ಗುರಿಯು ಇರೆ ದೂರ, ಕಠಿನವಿರೆ ದಾರಿ,
ಯುಗ ಯುಗಗಳುಳಿದಿಹವು ಭೀತಿಯೇಕೆ?

ಬಾಗಿಲುಗಳಿಲ್ಲ, ಪಾಗಾರವಿಲ್ಲ,
ನಮ್ಮೊಡೆಯನರಮನೆಗೆ ಪಹರೆಯಿಲ್ಲ!
ಎಂದಾದರೇನು? ಎಲ್ಲಾದರೇನು?
ಯಾರಾದರರಮನೆಗೆ ನುಗ್ಗಬಹುದು!

೨೯-೬-೧೯೨೭