ಚೋರರು ಹೃದಯದೊಳಡಗಿಹರು,
ಮನವೇ, ಬಲು ಜೋಕೆ!

ನಿನ್ನೈಶ್ವರ್ಯವನಪಹರಿಸೆ
ಹೊಂಚುತಲಡಗಿಹರು.
ತಿಮಿರವು ಹೃದಯವನಾವರಿಸೆ
ಕನ್ನವ ಹಾಕುವರು.

ಬೆಳಕಲಿ ತಾವನು ಬೇಡುವರು,
ನಿಶೆಯಲಿ ಸುಲಿಗೆಯ ಮಾಡುವರು.
ಚೋರರು ಹೃದಯದೊಳಡಗಿಹರು
ಮನವೇ, ಬಲು ಜೋಕೆ!

೧೯-೧೧-೧೯೨೬