ಕವಿಯ ಹೃದಯವೊಂದು ವೀಣೆ;
ಲೋಕವದನು ಮಿಡಿವುದು.
ವ್ಯಕ್ತಿತನವೆ ಕವಿಗೆ ಇಲ್ಲ;
ಅವನು ಇಲ್ಲ, ಅಥವ ಎಲ್ಲ:
ಎಂತೊ ನಾಡಿನೊಡಲ ನಾಡಿ
ಎಂತುಟಾಸೆಯಿಹುದೊ ನೋಡಿ,
ಎಂತೊ ಜನದ ಮೂಕವಾಣಿ,
ಅಂತೆ ತಂತಿ ನುಡಿವುದು!

೧೮-೯-೧೯೩೫