ನನ್ನ ಕೃತಿ ಕಲೆಯಲ್ಲ;
ನಾನು ಕವಿಯಲ್ಲ.
ಕಲೆಗಾಗಿ ಕಲೆಯೆಂಬ
ಹೊಳ್ಳು ನೆಲೆಯಿಲ್ಲ.

ಮೆಚ್ಚುಗೆಯ ನನಗೆ ಕೊಲೆ;
ಬದುಕುವುದೆ ನನಗೆ ಬೆಲೆ.
ಸಾಧನೆಯ ಛಾಯೆ ಕಲೆ;
ವಿಶ್ವಾತ್ಮವದಕೆ ನೆಲೆ.
ನಿನಗದು ಚಮತ್ಕಾರ;
ನನಗೊ ಸಾಕ್ಷಾತ್ಕಾರ!
ಮೌನದಿಂದನುಭವಿಸು:
ಕೋ ನಮಸ್ಕಾರ!
ಕಲೆಯೆಂದು ಹೊಗಳುವೊಡೆ:
ಕೋಟಿ ಧಿಕ್ಕಾರ!

೪-೩-೧೯೪೦