ಮನವೇನು ಪುಣ್ಯವ ಮಾಡಿ ಗುರುವಿನ
ಪದವೆ ಸೇರಿತೇ ಮಾನಿನ ಮಣಿಯೆ ಇಂದಿಗೆ
ಬಂದಿ ತೊಲಗಿತೇ || ಮನವೇನು ||
ಒಂದರೊಳಗಿದೆಲ್ಲ ಬಳಸುವಂದ ಕೋರಿಕೆ
ಕುಂದದೆನ್ನೊಳಗೆ ಬ್ರಹ್ಮಾನಂದವೇರಿಕೇ ||
ದೇಹದೊಡನೆ ಮೊದಲೊಳಿದ್ದ ಸಂಗ ಪೊಯಿತೇ
ಮೋಹವೇರಿಸುವ ಮಿಗಾ ಭಂಗವಾಯಿತು ||
ಕಲ್ಲಿನೊಳಗೆ ಕಂಡ ದೇವರಲ್ಲಿ ಹೋದಿತೇ ಅಲ್ಲ
ಇಲ್ಲಿರುವದೆನ್ನಲ್ಲೇ ತೊರಿತೇ ||
ವೇಳಲೂರೆನಾ ಸುಖಿಯ ಪರಮ ಸುಖದ
ಮೂಲವಾ ಪಾಲಲೋಚನನೇ ಬ್ಲೂಗುರುವಿರಾಹಳ ||
ತನುವ ಕೂಡಿಕಳೆವ ಬೀಜಗಣಿತ ದೊರದೀತೇ
ಜನಿಸಿ ಸಾಯುವುದಿದೆಲ್ಲ ತನ ವಿಗಾಯಿತೇ ||
ನೂರು ಕೋಟಿ ಜನ್ಮ ಸುಕೃತ ರಾಶಿ ಪರಿಸಿತೇ
ಮೂರು ಮೂರ್ತಿಗಳ ಪದವಿ ತುಚ್ಛವೆನಿಸಿತೆ ||
ಅಂತೆ ಇಲ್ಲಿದೆ ಮರೆವ ಮನದ ಹರುಷವ
ಬುದೋ ಶಂಕರ್ಯಾನಲ್ಲಿ ಸೇರಿ ಪರಮಾನದದೂ
|| ಮನವೇನು ಪುಣ್ಯವ ಮಾಡಿ ||
Leave A Comment