ಹೆಸರು: ಸುಖ್ರೂ
ಊರು: ಮೈಸೂರು.

ಪ್ರಶ್ನೆ: ನಾನು ಇದುವರೆಗೂ ಯಾವ ಪುರಷನೊಂದಿಗೂ ಲೈಂಗಿಕ ಸಂಪರ್ಕ ಮಾಡಿಲ್ಲ. ಆದರೆ , ವರ್ಷದಿಂದ ತಲೆ ದಿಂಬನ್ನು ಬಳಸಿಕೊಂಡು ಲೈಂಗಿಕ ತೃಪ್ತಿಪಡೆಯುತ್ತಿದ್ದೆ. ನಿಮಿಷಗಳಲ್ಲಿಯೇ ಹೀಗೆ ಮಾಡಬಾರದೆಂದು ತಪ್ಪಿನ ಅರಿವಾಗುತ್ತಿತ್ತು. ಈಗ ಸಂಪೂರ್ಣವಾಗಿ ನಿಲ್ಲಿಸಿದ್ದೇನಾದರೂ ಕೆಲವು ಸಮಸ್ಯೆಗಳು ತಲೆ ದೋರಿವೆ. ಇದನ್ನು ಯಾವ ವೈದ್ಯರಲ್ಲಿಯೂ ತೋರಿಸಿಲ್ಲ.

ಗರ್ಭಕೋಶದ ಕ್ಯಾನ್ಸರ್ ಹರಡಿರಬಹುದೇ ಎಂಬ ಭಯ. ಮದುವೆ ಆಗುವ ಮನಸ್ಸಿದೆ. ಆದರೆ ನನ್ನಿಂದ ಏನಾದರೂ ಮದುವೆ ಆಗುವ ಹುಡುಗನಿಗೆ ತೊಂದರೆ ಆಗಬಹುದು ಎಂಬ ಭಯ. ದಯಮಾಡಿ ಇದಕ್ಕೆ ಪರಿಹಾರ ತಿಳಿಸಿ.

ನನ್ನ ಇನ್ನೊಂದು ಸಮಸ್ಯೆ ಏನೆಂದರೆ: ನನಗೆ ತಿಂಗಳು ಮುಟ್ಟು ಸರಿಯಾಗಿದೆ. ಒಂದು ವರ್ಷದಿಂದ ಬಿಳಿ ಸೆರಗಿನ ಸಮಸ್ಯೆಯಿದೆ. ಅದಕ್ಕಾಗಿ ಆಯುರ್ವೇದ ಔಷಧಿ ತೆಗೆದುಕೊಂಡೆನಾದರೂ ಫಲಕಾರಿಯಾಗಿಲ್ಲ. ವೈದ್ಯರು ಬಿಳಿ ಸೆರಗು ಕೆಲವರಿಗೆ ಸಹಜ ಎಂದು ಹೇಳಿದರು ಅದಕ್ಕೆ ಸಮ್ಮನಾಗಿದೆ, ಈಗಲೂ ಮೊಸರಿನಂತೆ ಸ್ವಲ್ಪ ಇದೆ. ಕೆಲವೊಮ್ಮೆ ಹಳದಿ ಬಣ್ಣದಿಂದ ಕೂಡಿದ್ದು, ವಾಸನೆಯಿಂದ ಕೂಡಿರುತ್ತದೆ. ಮುಟ್ಟು ನಿಂತ , ದವಸದಲ್ಲಿ ದ್ರವರೂಪದಲ್ಲಿ ಬಿಳಿ ಬಟ್ಟೆ ಸ್ವಲ್ಪ ಒದ್ದೆಯಾಗುತ್ತದೆ. ಮೂತ್ರ ಕೋಶದಿಂದ ಮೂತ್ರ ಬರುವಾಗ ತುಂಬಾ ಉರಿಯುತ್ತೆ. ಮೂತ್ರ ವಿಸರ್ಜನೆ ೧೦ ನಿಮಿಷಕ್ಕೆ ಹೋಗುತ್ತಿರಬೇಕು. ನಡೆದಾಡುವಾಗ ಯೋನಿಯ ಒಳಗಡೆ ನೋವು, ಒದ್ದೆಯಾದರೆ ಉರಿಯುತ್ತದೆ. ಮತ್ತು ಮಲವಿಸರ್ಜಿಸುವಾಗ ತುಂಬಾ ಕಷ್ಟ.

ನನಗೆ ಯಾವಾಗಲೂ ಸೊಂಟ, ಕೈ, ಕಾಲು, ಬೆನ್ನು ನೋವು ಬರುತ್ತದೆ. ಕೈ ಕಾಲುಗಳ ಚರ್ಮ ಸುಕ್ಕುಗಳಿವೆ. ನನ್ನ ತೂಕ ೪೦ ಕೆ.ಜಿ. ಕ್ಯಾಲ್ಸಿಯಂ ಕೊರತೆ ಏನಾದರೂ ಇದೆಯೇ? ನನ್ನ ಕಣ್ಣಿನ ಕೆಳಹೆ ಹೆರೆಗಳು ಮೂಡಿವೆ. ದಯವಿಟ್ಟು ಇವೆಲ್ಲಕ್ಕೂ ಪರಿಹಾರ ತಿಳಿಸಿ.

ಉತ್ತರ: ನಿಮಗೆ ಯೋನಿಯಲ್ಲಿ ಸೋಂಕು ಆಗಿರುವಂತಿದೆ. ಅದಕ್ಕೆ ನೀವು Candid-V ಎಂಬ ಮಾತ್ರೆಯನ್ನು ಪ್ರತಿ ರಾತ್ರಿ ಒಂದರಂತೆ ಯೋನಿಯೊಳಗೆ ಹಾಕಿಕೊಳ್ಳಿ. ಹೀಗೆ ಆರು ದಿವಸ ಹಾಕಿಕೊಳ್ಳಬೇಕು, ಸೋಂಕು ನಿವಾರಣೆಯಾಗುತ್ತದೆ. ಇದರ ಜೊತೆಗೆ ಮೂತ್ರದ ಸೋಂಕು ಕೂಡ ಆಗಿದೆ. ನೀವು Nor Metrogyl ಎಂಬ ಮಾತ್ರೆಯನ್ನು ದಿನಕ್ಕೆ ೨ ರಂತೆ ೭ ದಿವಸ ತೆಗೆದುಕೊಳ್ಳಿ.

ನಿಮಗೆ ಕ್ಯಾಲ್ಸಿಯಂ ಅಂಶವು ಕಡಿಮೆ ಇರುವಂತಿದೆ. ನೀವು Milical-500mg ಎಂಬ ಮಾತ್ರೆಯನ್ನು ದಿನಕ್ಕೆ ಎರಡರಂತೆ ಒಂದು ತಿಂಗಳು ತಪ್ಪದೆ ತೆಗೆದುಕೊಳ್ಳಿ, ಜೊತೆಗೆ ಪೌಷ್ಠಿಕ ಆಹಾರವನ್ನು ಸೇವಿಸಿ, ಹೆಚ್ಚಾಗಿ ಹಣ್ಣು, ತರಕಾರಿ, ಸೊಪ್ಪು, ಹಾಲು, ಮೊಟ್ಟೆಗಳನ್ನು ಸೇವಿಸಿ. ನಿಮ್ಮ ಸವಸ್ಯೆ ಪರಿಹಾರವಾಗುತ್ತದೆ.