ಕ್ಷುದ್ರಗ್ರಹಗಳು ಗುರು ಮತ್ತು ಮಂಗಳ ಗ್ರಹಗಳ ನಡುವೆ ಸೂರ್ಯನ ಸುತ್ತ ಸುತ್ತುತ್ತಿರುವ ಸಾವಿರಾರು ಚಿಕ್ಕ ಬಂಡೆಗಳು. ಈ  ಬಂಡೆಗಳ ಮೇಲೆ ಕುಳಿಗಳು ಕಂಡುಬರುತ್ತವೆ. ರಾಸಾಯನಿಕ ಅಧ್ಯಯನದಿಂದ ಲೋಹಗಳಿರುವುದೂ ತಿಳಿದುಬಂದಿದೆ. ವಾಯುಮಂಡಲ ಇದ್ದಂತಿಲ್ಲ. ಕೆಲವು ಕ್ಷುದ್ರಗ್ರಹಗಳು ಸೂರ್ಯನನ್ನು ಬಹಳ ಹತ್ತಿರದಲ್ಲೇ ಸಮೀಪಿಸುತ್ತವೆ.

ಬೃಹತ್ ಗಾತ್ರದ ದೂರದರ್ಶಕದಲ್ಲೂ ಇವು ಸಣ್ಣ ಮತ್ತು ಕ್ಷೀಣ ಬೆಳಕಿನ ಚುಕ್ಕೆಯಂತೆಯೇ ಗೋಚರಿಸುತ್ತವೆ. ಧೂಮಕೇತುಗಳಂತೆ ಇವುಗಳ ಒಳಗೆ ಹಿಮದಂತಹ ಘನೀಕೃತ ವಸ್ತುಗಳು ಇಲ್ಲ ಹಾಗೂ ಅವು ಶಾಖದಿಂದ ಕರಗಲು, ಸೂರ್ಯನಿಗೆ ಹತ್ತಿರವಾಗಿ ಹೋಗುವುದಿಲ್ಲ.

ಕ್ಷುದ್ರಗ್ರಹಗಳು ಒಂದು ಸಣ್ಣ ಗೋಲಿಯಾಕಾರದಿಂದ ಹಿಡಿದು 930 ಕಿ.ಮೀ. ವ್ಯಾಸದಷ್ಟು ದೊಡ್ಡದಾಗಿರುತ್ತವೆ. ಇಟಲಿಯ ಪಿಯಾಜಿ಼ (Piazzi) ಎಂಬುವನು 1801ರ ಜನವರಿ 1ರಂದು ಕಂಡುಹಿಡಿದ ಕ್ಷುದ್ರಗ್ರಹಕ್ಕೆ “ಸಿರಿಸ್” (Ceres ) ಎಂದು ಹೆಸರು. ಇದು ದೊಡ್ಡ ಗಾತ್ರದ್ದು. ಇದಕ್ಕಿಂತ ಸಣ್ಣದಾದ ಕ್ಷುದ್ರಗ್ರಹಗಳು ದೊಡ್ಡ ಪಟ್ಟಿಯಂತೆ ಹರಡಿಕೊಂಡಿವೆ. ಈ ವಲಯದಲ್ಲಿ 2.4 ಕಿ.ಮೀ. ವ್ಯಾಸದ ಸುಮಾರು 40,000 ಕ್ಷುದ್ರಗ್ರಹಗಳಿವೆ. ಇವುಗಳಲ್ಲಿ  ಸುಮಾರು 10,000 ಕ್ಷುದ್ರಗ್ರಹಗಳಿಗೆ ಹೆಸರುಗಳಿವೆ. ಉಳಿದವುಗಳಿಗೆ ನಮೂದಿನ ಸಂಖ್ಯೆ ಮಾತ್ರ ಇದೆ. ಸುಮಾರು   1 ಕಿ.ಮೀ.ವ್ಯಾಸದ ಒಂದು ಮಿಲಿಯನ್ ಕ್ಷುದ್ರಗ್ರಹಗಳಿವೆ ಎಂಬುದು ಒಂದು ಅಂದಾಜು. 

Astroid Gaspra

ಕ್ಷುದ್ರಗ್ರಹಗಳ ದೃಶ್ಯಮುದ್ರಣ

ಕ್ಷುದ್ರಗ್ರಹಗಳನ್ನು ವಿವರಿಸಲು ಅಂತರಜಾಲದಲ್ಲಿ ಲಭ್ಯವಿರುವ ಸ್ಕಾಟ್ ಮ್ಯಾನ್ಲೆ (Scott Manley) ಸಿದ್ಧಪಡಿಸಿದ ದೃಶ್ಯಮುದ್ರಣ http://www.youtube.com/watch?v=S_d-gs0WoUw ವನ್ನು ಬಳಸಿದೆ. ಇದರಲ್ಲಿ ಕ್ರಿ.ಶ. 1980 ರಿಂದೀಚೆಗಿನ  ಕ್ಷುದ್ರಗ್ರಹಗಳ ಸ್ಥಾನವನ್ನು ಸೌರವ್ಯೂಹದಲ್ಲಿ ಕಾಣಬಹುದು ಮತ್ತು ಹೊಸ ಕ್ಷುದ್ರಗ್ರಹಗಳ ಆವಿಷ್ಕಾರ ನಡೆದಂತೆಲ್ಲ ಅವು ಈಗಾಗಲೇ ತಯಾರಾಗಿರುವ ಕ್ಷುದ್ರಗ್ರಹಗಳ ಪಟ್ಟಿಗೆ ಸೇರ್ಪಡೆಯಾಗುತ್ತಾ ಹೋಗುತ್ತವೆ. ಅವುಗಳನ್ನು ಈ ದೃಶ್ಯಮುದ್ರಣದಲ್ಲಿ ಬಿಳಿಬಣ್ಣದಿಂದ ಹೊಸದೆಂದು ಎದ್ದುಕಾಣುವಂತೆ ಮಾಡಲಾಗಿದೆ. ಈ ಚಿತ್ರದಲ್ಲಿ   ಕ್ಷುದ್ರಗ್ರಹಗಳು ಸೌರವ್ಯೂಹದ ಒಳವಲಯಕ್ಕೆ  ಎಷ್ಟರಮಟ್ಟಿಗೆ ಹತ್ತಿರದಿಂದ  ಹಾದು ಹೋಗಿವೆ ಎಂಬುದನ್ನು ಅವುಗಳ  ಬಣ್ಣ ಸೂಚಿಸುತ್ತದೆ.

ಭೂಮಿಯ ಕಕ್ಷೆಯನ್ನು  ದಾಟುವುವು ಕೆಂಪು
ಭೂಮಿಯ  ಕಕ್ಷೆಗೆ ಹತ್ತಿರವಾದವು ಹಳದಿ
ಮಿಕ್ಕೆಲ್ಲವೂ ಹಸಿರು ಬಣ್ಣ.

ಭೂಮಿಯ ಕಕ್ಷೆಯ ಸಮೀಪದಲ್ಲಿ ಹಾದು ಹೋಗುವ ಸಣ್ಣ  ಕ್ಷುದ್ರಗ್ರಹಗಳ ಸಂಖ್ಯೆ ಹೆಚ್ಚು ಎಂಬುದನ್ನು ಚಿತ್ರ ತೋರಿಸುತ್ತದೆ.   ಅಲ್ಲದೆ ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಅವು ಹಾದು ಹೋಗುವಾಗ  ಪತ್ತೆ ಮಾಡಲಾಗಿದೆ ಎಂಬುದೂ ಗಮನಿಸಬೇಕಾದ ಅಂಶ. ಹಾಗೆಯೇ ಭೂಮಿ ಮತ್ತು ಗುರುಗ್ರಹಗಳ ನೇರಕ್ಕೆ ಹೆಚ್ಚು ಕ್ಷುದ್ರಗ್ರಹಗಳಿವೆ ಎಂಬುದೂ ತೋರಿಕೆಯಷ್ಟೆ.  ಗುರುಗ್ರಹದ ಹೊಸ ಉಪಗ್ರಹಗಳನ್ನು ಹುಡುಕುವ  ಸಂದರ್ಭಗಳೇ ಈ ಹೆಚ್ಚಳಕ್ಕೆ ಕಾರಣ.  ಇಂತಹದೇ ಕಾರಣಗಳು ಈ ಚಿತ್ರದಲ್ಲಿ ಇತರ ಗ್ರಹಗಳ  ಸಮೀಪ ಕ್ಷುದ್ರಗ್ರಹಗಳು  ಹೆಚ್ಚು ಎಂಬ ತಪ್ಪು ಕಲ್ಪನೆಯನ್ನು ಮೂಡಿಸುವುವು.

ಕ್ರಿ.ಶ. 1990ರ ದಶಕದ ಮಧ್ಯದಲ್ಲಿ ಕ್ಷುದ್ರಗ್ರಹಗಳ ಆವಿಷ್ಕಾರದಲ್ಲಿ  ಗಮನಾರ್ಹವಾದ ಹೆಚ್ಚಳವನ್ನು ಕಾಣಬಹುದು. ಸ್ವಯಂಚಾಲಿತ ಆಕಾಶ ಸಮೀಕ್ಷೆಗಳೇ ಈ ಹೆಚ್ಚಳಕ್ಕೆ ಕಾರಣ.  ಸೂರ್ಯನಿಗೆ ವಿರುದ್ಧವಾದ ದಿಕ್ಕಿನಲ್ಲಿ ಆಕಾಶದ ಚಿತ್ರಗಳನ್ನು ತೆಗೆದು ಈ ಬಗೆಯ ಸಮೀಕ್ಷೆ  ನಡೆಸಿರುವುದರ ಪರಿಣಾಮವನ್ನು ಚಿತ್ರದಲ್ಲಿ ಕಾಣಬಹುದು.

ಕ್ರಿ.ಶ.2010ರ ಆದಿಯಲ್ಲಿ  ಸೂರ್ಯ- ಭೂಮಿ ರೇಖೆಗೆ ಲಂಬವಾಗಿ ಆಕಾಶ ಸಮೀಕ್ಷೆಗಳು ನಡೆಸಿರುವುದರ ಫಲಿತಾಂಶಗಳು ಸ್ಪಷ್ಟವಾಗಿ ಕಾಣುತ್ತವೆ. ಈ ಹೊಸ ಫಲಿತಾಂಶಗಳು ಸಂಪೂರ್ಣ ಆಕಾಶವನ್ನು ಅತಿಕೆಂಪು ವಿಕಿರಣದಲ್ಲಿ ಬಿಂಬಿಸುವ ಉದ್ದೇಶದ  ವೈಸ್ (WISE-Widefield Infrared Survey Explorer) ಬಾಹ್ಯಾಕಾಶ ನೌಕೆಯಿಂದ ಒದಗಿವೆ. ಈ ದೃಶ್ಯಮುದ್ರಣದ ಅಳತೆಪಟ್ಟಿಯ ಪ್ರಕಾರ ಒಂದು ಪಿಕ್ಸೆಲ್(pixel)ನ ವ್ಯಾಪ್ತಿ  ಸುಮಾರು ಒಂದು ಮಿಲಿಯನ್ ಕಿಲೋಮೀಟರ್ ಮತ್ತು ದೃಶ್ಯಮುದ್ರಣದ ಒಂದೊಂದು ಸೆಕೆಂಡ್ 60 ದಿನಕ್ಕೆ ಸಮ.

ಇತ್ತೀಚಿನವರೆಗೆ ಅರ್ಧ ಮಿಲಿಯನ್ನಿಗೂ ಅಧಿಕ ಕ್ಷುದ್ರಗ್ರಹಗಳನ್ನು ವೀಕ್ಷಿಸಲಾಗಿದೆ. ಆವಿಷ್ಕಾರ ಪಟ್ಟಿ  ಸಂಪೂರ್ಣವಾಗಿದೆ ಅಂದರೆ ನಾವು ಕಂಡುಹಿಡಿಯದೇ ಇರುವ ಕ್ಷುದ್ರಗ್ರಹಗಳು ಇಲ್ಲವೆಂದರೂ, ವಿಜ್ಞಾನಿಗಳ ಅಂದಾಜಿನ ಪ್ರಕಾರ  ಸುಮಾರು 100ಮೀಟರಿನಷ್ಟು (ಸುಮಾರು ಒಂದು ಫುಟ್ ಬಾಲ್ ಮೈದಾನದಷ್ಟು) ದೊಡ್ಡದಾಗಿರುವ ಒಂದು ಬಿಲಿಯನ್ ಕ್ಷುದ್ರಗ್ರಹಗಳಿವೆ.

ಕ್ಷುದ್ರಗ್ರಹಗಳ ಕಕ್ಷೆಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳು   ಟೆಡ್ ಬೋವೆಲ್ (Ted Bowell)  ಮತ್ತು ಅವರ ಸಹೋದ್ಯೋಗಿಗಳು ಸಿದ್ಧಪಡಿಸಿರುವ ‘astorb.dat’ನಲ್ಲಿ ಲಭ್ಯವಿದೆ. ಇದು ಲಭ್ಯವಿರುವ ವೆಬ್ ತಾಣ ftp://ftp.lowell.edu/pub/elgb/astorb.html

ಕ್ಷುದ್ರಗ್ರಹಗಳ ಇತ್ತೀಚಿನ ನಕ್ಷೆಗಾಗಿ ಸಿದ್ಧಪಡಿಸಿರುವ ವೆಬ್  ತಾಣ

http://szyzyg.arm.ac.uk/~spm/neo_map.html#_blank.

ಕ್ಷುದ್ರಗ್ರಹಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ವೆಬ್ ತಾಣಗಳನ್ನು ನೋಡಬಹುದು.

http://www.youtube.com/watch?v=y8qWeSTZWHw

www.discoverynews.com

http://www.space.com/12321-nasa-spacecraft-orbits-asteroid-vesta-space-success.html?utm_source=feedburner&utm_medium=feed&utm_campaign=Feed%3A+spaceheadlines+%28SPACE.com+Headline+Feed%29&utm_content=Google+International

ಸ್ವಯಂಚಾಲಿತ NASAದ ನೌಕೆ ಡಾನ್ ಒಂದು ಚರಿತ್ರೆಯನ್ನೇ ಸೃಷ್ಟಿಸಿತು. ಸೌರವ್ಯೂಹದ ಕ್ಷುದ್ರಗ್ರಹಗಳ ವಲಯದಲ್ಲಿ ಇದು ಮೊದಲಬಾರಿಗೆ ವೆಸ್ಚ(Vesta) ಎಂಬ ಅತಿ ದೊಡ್ಡ ಕ್ಷುದ್ರಗ್ರಹದ ಮೇಲಿಳಿದ ಬಾಹ್ಯಾಕಾಶ ನೌಕೆ. ಕ್ಷುದ್ರಗ್ರಹಗಳಲ್ಲಿ   ವೆಸ್ಟ (Vesta)  ಅತಿ ದೊಡ್ಡದು ಮತ್ತು ಹೆಚ್ಚು ಪ್ರಕಾಶಮಾನವಾದದ್ದು.  ಮಂಗಳ (Mars) ಮತ್ತು ಗುರು ( Jupiter) ಗ್ರಹಗಳ ಕಕ್ಷೆಯ ನಡುವೆ ಸೂರ್ಯನ ಸುತ್ತಲೂ ಇರುವ ಕಲ್ಲಿನ ಬಂಡೆಗಳ ಸಮೂಹದಲ್ಲಿರುವ ಕ್ಷುದ್ರಗ್ರಹಗಳ ವಲಯದಲ್ಲಿದೆ.

ಹೆಚ್ಚಿನ ಚಿತ್ರಗಳಿಗೆ Photos: Asteroid Vesta and NASA’s Dawn Probe ವೆಬ್    ತಾಣವನ್ನು ಸಂದರ್ಶಿಸಬಹುದು.

ಸುಮಾರು ನಾಲ್ಕು ವರ್ಷ ಬೆನ್ನಟ್ಟಿದ ನಂತರ ಡಾನ್ (Dawn spacecraft) ಎಂಬ ಬಾಹ್ಯಾಕಾಶ ನೌಕೆ ವೆಸ್ಟದ ಕಕ್ಷೆಯನ್ನು ಪ್ರವೇಶಿಸಿತು ಮತ್ತು ಇಲ್ಲೇ ಒಂದು ವರ್ಷ ಸಮಗ್ರ ಪರಿಶೀಲನೆಯ ನಂತರ ಕ್ಷುದ್ರಗ್ರಹ ಸೆರಿಸ್ (Ceres)ಗೆ ಮುಂದಿನ ಪ್ರಯಾಣ ಬೆಳಸುತ್ತದೆ.

ಲೆಗ್ರಾಂಜ್ ಬಿಂದುಗಳು

1775ರಲ್ಲಿ ಜೋಸೆಫ್ ಲೂಯಿಸ್ ಲೆಗ್ರಾಂಜ್ ಎಂಬ ಗಣಿತಜ್ಞ ಎರಡು ದ್ರವ್ಯರಾಶಿಗಳಿದ್ದರೆ ಸುತ್ತಲಿನ ಗುರುತ್ವಕ್ಷೇತ್ರ ಹೇಗಿರುತ್ತದೆ ಎಂದು ಲೆಕ್ಕ ಮಾಡಿದ. ಅವುಗಳ ಪರಿಸರದಲ್ಲಿ 5 ಬಿಂದುಗಳನ್ನು ಗುರುತಿಸಿ  ಈ ಬಿಂದುಗಳಲ್ಲಿ ಗುರುತ್ವಶಕ್ತಿ ಸೊನ್ನೆ ಇರುತ್ತದೆ ಎಂದು ತೋರಿಸಿಕೊಟ್ಟ. ಈ ಬಿಂದುಗಳಿಗೆ ಲೆಗ್ರಾಂಜ್ ಬಿಂದುಗಳೆಂದು ಹೆಸರು. ಎರಡು ದ್ರವ್ಯರಾಶಿಗಳನ್ನು ಸೇರಿಸುವ ಆಧಾರರೇಖೆಯ ಮೇಲೆ ಸಮಬಾಹು ತ್ರಿಕೋಣಗಳನ್ನು ರಚಿಸಿದರೆ ಆಯಾ ಶೃಂಗಗಳೇ  ಈ ಕೆಳಕಂಡ ಚಿತ್ರ-3 ರಲ್ಲಿರುವ L4 ಮತ್ತು  L5. ಗುರು ಮತ್ತು ಸೂರ್ಯ ಇವುಗಳಿಗೆ ಈ ಬಗೆಯ ಲೆಕ್ಕವನ್ನು ಅನ್ವಯಿಸಿದಾಗ L4 ಮತ್ತು  L5 ಬಿಂದುಗಳಲ್ಲಿ ಅನೇಕ ಕ್ಷುದ್ರಗ್ರಹಗಳಿರುವುದು ತಿಳಿದುಬರುತ್ತದೆ. ಗುರುಗ್ರಹದ ಕಕ್ಷೆಯಲ್ಲಿ ಅದಕ್ಕೆ 60 ಡಿಗ್ರಿ ಹಿಂದೆ ಮತ್ತು ಮುಂದೆ ಕೆಲವು ಕ್ಷುದ್ರಗ್ರಹಗಳಿವೆ. ಇವುಗಳಿಗೆ ಟ್ರೋಜನ್ ಗಳೆಂದು ಹೆಸರು.

ಹೆಚ್ಚಿನ ಮಾಹಿತಿಗೆ   http://en.wiki-videos.com/video/Jupiter+Trojan   ತಾಣವನ್ನು ವೀಕ್ಷಿಸಬಹುದು.

http://www.youtube.com/watch?v=dL_Cc6WzPJo  ವೆಬ್ ತಾಣದಲ್ಲಿ 2010 TK7 (ಹಸಿರು ಚುಕ್ಕೆಗಳು) ಕಕ್ಷೆಯ ಚಿತ್ರಣವನ್ನು ಕಾಣಬಹುದು. ಇದು ನಿಯೋವೈಸ್(NEOWISE) ಕಂಡುಹಿಡಿದ ಮೊದಲ ಭೂಮಿಯ ಟ್ರೋಜನ್.   ಕ್ಷುದ್ರಗ್ರಹದ ವ್ಯಾಸವು ಅಂದಾಜು  300 ಮೀಟರ್  ಹಾಗೂ ಭೂಮಿಯಿಂದ  80 ಮಿಲಿಯನ್ ಕಿಲೋಮೀಟರ್ ಗಳ ದೂರದಲ್ಲಿದೆ. ಈ  ಕ್ಷುದ್ರಗ್ರಹವು ಸ್ಥಿರವಾದ ಕಕ್ಷೆಯು ಇರುವುದರಿಂದ  ಮುಂದಿನ  ಸುಮಾರು ನೂರು ವರ್ಷಗಳ ಕಾಲ 24  ಮಿಲಿಯನ್ ಕಿಲೋಮೀಟರ್ ಗಳಿಗಿಂತ ಸಮೀಪಕ್ಕೆ ಬರಲು ಸಾಧ್ಯವಿಲ್ಲ.
Reference Article:
http://www.nasa.gov/mission_pages/WISE/news/wise20110727.html.
http://users.zoominternet.net/~matto/M.C.A.S/Asteroids_description.htm
1.ಬಿ.ಎಸ್. ಶೈಲಜ.2009. ಆಗಸದ ಅಲೆಮಾರಿಗಳು. ಬೆಂಗಳೂರು: ನವಕರ್ಣಾಟಕ ಪಬ್ಲಿಕೇಷನ್ಸ್