ಪಾರ್ವತಿ, ಲಕ್ಷ್ಮೀ, ಸರಸ್ವತಿ, ಸೀತೆ, ದ್ರೌಪದಿ ಎಲ್ಲಾ ಸಬಿ ಮಾಡಿದ್ರು. ಪಾರ್ವತಿ ನನ್ನ ಮುಂದೆ ಯಾರು ಪತುರತೆ ಇಲ್ಲ ಹೇಳ್ತದೆ ಲಕ್ಷ್ಮಿ ನಾ ಹೊಕ್ಕ ಮನಿಗೆ ದರಿದ್ರೆಯಿಲ್ಲ.ಸರಸ್ವತಿ ನನ್ನ ಮುಂದೆ ಯಾರಿಲ್ಲ ಅಂತದೆ.

ದ್ರೌಪತಿ ನಾನು ಕೌರವನ ಗಂಧರ್ವರಿ ಕಟ್ಟಿ ಹಾಕಿದಾಗ ಎಡಗಾಲ ಉಂಗುಟದಲ್ಲಿ ಬಿಡ್ಸನೆ. ನನ್ನ ಮುಂದೆ ಪತಿರತಿ ಇಲ್ಲ,ಹೇಳ್ತದೆ ಸೀತೆ ಲಂಕಾ ಪಟ್ಟಣದಿಂದ ಬೆಂಕಿಲ್ಲಿ ಹಾರಿ ಬಂದೆ. ನನ್ನ ಮುಂದೆ ಪತುರತೆ ತನ ಯಾರಿಗಿಲ್ಲ ಹೇಳ್ತದೆ.

ಮುದ್ಕ ಬಂದ, (ಸೀತೆಗೆ) ನೀನು ಹೋಗ ಬೇಕಾದರೆ ಹೋಗುದು ಬೇಡ ಹೇಳದ್ರು ಗಂಡನ ಮಾತ ಮೀರಿದೆಯಲ್ವೆ? ಅಂದ.

ದ್ರೌಪದಿ ಅಣ್ಣನ ಮಾತಿನ ಮೇಲೆ ಗಂಡನ (ಅರ್ಜುನನ) ಮಗ್ಗಲಿನಿಂದ ಬಂದು  ಗಂಡ ಹಡ್ಕಂಡನೆ ಕಡ್ಗ ಕೃಷ್ಣ ಅಣ್ಣ ಕರೆದ ದ್ರೌಪದಿಯ, ಮಗನ ಮದುವಿ ಮಾಡೂಕೆ, ಯೆಂತ ಪತಿರತೆ? ಕೇಳ್ದ.

“ಪಾರ್ವತೀ, ಅಪ್ಪನ ಮನಿ ಯಜ್ಞಕೆ ಹೋಗುದು ಬೇಡ ಹೇಳಿದರೂ ಹೋದೆ, ಯೆಂತ ಪತುರತೆ?” ಕೇಳ್ದ.

“ಸರಸ್ವತಿ ಒಬ್ಬರಿಗೊಂದು ಒಬ್ಬರಿಗೊಂದು ಎಲ್ಲರಿಗೂ (ವಿದ್ಯೆ) ಬರೂದಿಲ್ಲ,ಯೆಂತ ಪತಿರತೆ?” ಕೇಳ್ದ.

“ಲಕ್ಷ್ಮೀ, ನೀ ಇದ್ದ ಮಲ್ಲಿ (ಮನೆಯಲ್ಲಿ) ಪರಿಪೂರ್ಣ. ಇಲ್ಲದಿದ್ದ ಮನೆಯಲ್ಲಿ ಯಲ್ಲ, ಯೆಂತ ಪತಿರತೆ?” ಕೇಳ್ದ.

“ಪತುರತೆ ಗೊಡಿಕೊಪ್ಪದಲ್ಲಿ ಹುಲಿ ಮಾರು ಪಾಂಡು, ಅವನ ಹೆಂಡತಿ ಗೌರಮ್ಮ ಅರ (ಅದರ) ಕೈಲಿ ಕೇಳಿದ್ರೆ ಹೇಳ್ತದೆ” ಆಗ ಅಟ್ಟು ಮಂದಿ ಅಲ್ಲಿಗೆ ಹೋದ್ರು.

ಪಾರ್ವತಿ ಹೋಯ್ತು ಹುಲಿಮನೆ ಹುಲಿ ಮಾರು ಪಾಂಡು ಹೋತ್ತರ ಮುನ್ನೆ ಹುಲ್ಲ ಹೋತ್ಕ ಹೋತನೆ.

“ಯಾರು?” “ನಾ ಪಾರ್ವತಿ!” “ಪಾರ್ವತಮ್ಮ? ಪತಿ ಬೆಳಿಗ್ಗೆ ಹೋತರೆ, ಯಜಮಾನ್ರು ಬತ್ತನೂವ (ಬಂದೊಡನೆ) ಪಾರ್ವತಮ್ಮ ಬಂದಿತ್ತು. ಅದರ ತಕಂಡ್ರೆ ಆಗೋದು? ಹೇಳಿ ಕೇಳ್ತೆ, ನಾಳೆ ಬಾ” ಅಂತು, ಹಿಂದೆ ಬಂತು ಪಾರ್ವತಿ. ಷಣ್ಮುಖ ಅವಿ ಬೆನ್ ಹತ್ತಿ ಹೋಗನೆ.

“ಗೌರಮ್ಮ ಅಂತದೆ ಯಾರು? ಪಾರ್ವತಮ್ಮ? ಆಗೂದು ಅಂದ. ನನ್ನ ಗಂಡ ಯೇಗೆ ಯೆಬ್ಬರು (ಇಬ್ಬರು) ಬಂದೀರಿ, ನಾ ತಕಳುದಿಲ್ಲ. ಅವರು ಬರೂಕೆ ಅವರು ಸಂಜಿ ಬರೂಕೇ (ಬಂದಾಗ) ಕೇಳ್ತೆ” ಮಾರನೆ ದಿನೆ ಒಬ್ಬಳೆ ಹೋಯ್ತು ಗೌರಮ್ಮನ ಕುರಿತು,” ಗೌರಮ್ಮ , ಪಾರ್ವತಮ್ಮಾ ಬನ್ನಿ, ಕೇಳ್ಕಂಡಿದೆ ಯಜಮಾನ್ರ.ಚಂಬು ನೀರು ಯಾಕೆ?

ಬಂದ ಕೂಡ್ಲೆ ಪಾದ ತೋಳೆದು ಶೇರಿಲಿ (ಸೀರೆಯಿಂದ) ಉದ್ದಿ ಒಳಗೆ ತಕಂತೆ. ಮಣಿಮೇಲೆ ಕೂರತಾರೆ ಅಂತು, ಹಾಲು, ಸಪ್ಪು (ಚಹ ಸೊಪ್ಪು) ಸಕ್ಕರೆಯಲ್ಲ ಮೂರು ಬಾಟ್ಲಿ ಅಟ್ಟನೆ ಕೇಳಿಕಂಡಿ ಚಾ ಮಾಡಿ ಕೊಡೂದು. ತಿಂಬ್ಕೆ ಸಾ (ಸಹಾ) ಹಾಗೆ ಅಂತು.

ಒಲಿಲಿ ಮಾತ್ರ ಬೆಂಕದೆ (ಬೆಂಕಿ ಅದೆ) ಅಮ್ಮ, ನೀರೆ ಕಾಸಿ, ಬಸಿನು ಆಗಕಾಗ, ತಣ್ಣಿನೂ ಆಗಕಾಗ, ಮೀಸುದು.

ನುಗ್ಲ ದಪ್ಪದ ಹಲಗೆ ಇದ್ಯೆಂತಕ್ಕೆ? ಮಿಂದ್ಕ ಬತ್ನೆ ಈ ಹಲಗಿ ಮೇಲೆ ಮಲಗತಾರೆ ಅಂತು.

ಬಳ್ಳಿ ಶಪುರ (ಸೀರೆ) ಕೋಲಲ್ ತೂಗ್ ಹಾಕಾರೆ,ಇದ್ಯೆಂತಕೇ? ಹೊತ್ತಾರೆ ಮುನ್ನೆ ದಣಿದು ಬತ್ತಾರೆ. ಸಿಟ್ ಬಂದ್ರೆ ಕೈ ಬಿದ್ದು ನನ್ನ ಹೊಡ್ಯೂಕೆ ತಯ್ಯಾರ ಮಾಡಿಟ್ಟನೆ ಅಂತು.

ಪಾರ್ವತಮ್ಮ ನೋಡ್ಕಂಡೇ ಬಂತು. ಅಂತಾ ಪತಿರತಿತನ ಈ ಭೂಮಿ ಮೇನೆ ಇಲ್ಲಾಗಿದ್ರ ಈ ಭೂಮಿ ಇರವಾಂಗಿಲ್ಲ. ( ನಿರೂಪಕರ ಹೇಳಿಕೆ).

ಹೇಳಿದವರು :
ದಿ. ಗುರ್ಗು ತಿಮ್ಮಣ್ಣ  ಪಟಗಾರ,
ಹೋಸಕೇರಿ, ಗುಡ್ಡೆಕೊಪ್ಪ, ಕುಮಟಾ ತಾಲೂಕಿನ ಹಲಗನ ಗದ್ದೆ ಊರಿನ ಒಂದು ಕೊಪ್ಪ,
ಅಲ್ಲಿರುವವರು ಹೆಚ್ಚಾಗಾಮೊಕ್ಕಲು