ಕುಂಟ ಭಟ್ಟಿ. ಬಟ್ಟನ ಹೆಂಡ್ತಿ ಪತುರತಿ. ಕೆಲಸ ಕೂತಲ್ಲಿಯೇ ಬಯಲ ಕಡೆಗೆ ಮಾಡಿಸುವದು, (ಊಟ ಮಾಡಿದ ಮೇಲೆ) ಬಾಯಿ ತೊಳೆಸೂದು, ಒಟ್ಟು ಕೆಲಸ (ಹೆಂಡ್ತಿದು).

ಒಂದಿನ ಚಲೋ ಹುಡುಗಿ ಹಿತ್ತಲ ಹೂ ಕೊಯ್ಯೂಕೆ ಬಂತು. ಬಟ್ಟಗೆ ಅದರ ಮೇನೆ ಮನಸೆ ಎಳೆದು ಹೋಯ್ತು.ಜರಗಿ ಜರಗಿ ಜೀರಾಗೆ ಹೋದ. ಹಿಂಡ್ತಿ ತಪಾಸೆ ಮಾಡ್ತು. “ಜರ ಬತ್ತಿತೋ ಏನೋ?” ಕೇಳ್ತು. “ತಾಪತ್ರಿಲ್ಲ ಮರ್ಯಾದಿ”. ಹೇಳ್ಳೇ ಬೇಕು ಅಂತು. “ಹೇಳದಿರೆಆಗೂದಿಲ್ಲ, ಹೇಳಿರೆ ಮರ್ಯಾದಿ. ಹೆಂಗಸು ಹೂಗ್ ಕೊಯ್ಯೂಕೆ ಬಂದಿತ್ತಲ್ಲ. ಮನಸಾಗದೆಅಂದ. ಅಕಲ ಹುಡುಕಿತು. ಕೇಳ್ದ್ ಹೇಳೀರೆ ಅದು ನೀ ಹೆಂಗ್ಸಲ್ವೊ? ಕೇಳೊದು. ( ಅದು ಸೂಳಿ ಕೆಂಗ್ಸು.)

ಕಪ್ಗೇ ಬಾಗಿನ ಮೆಟ್ಟ ಸಾರ‍್ಸಿ ಅದು ಬರುತನ್ನ ಬಂದು ಬಿಡತದೆ. ಯಾರು ಕೆಲ್ಸ ಮಾಡಿ ಹೋಗೊದು   ಹೇಳಿ ತಪಾಸೆ ಮಾಡಿ ನನ್ನಿಂದೇನೆ ಕೆಲ್ಸ ಮಾಡಬೇಕು? ಎಂದು ಒಂದಿನ ಕೈಹಿಡೀತು.ಯನಮಾರ್ತಿ ಕೀಳ ಮನಿಕೆಲಸ ಮಾಡುದಲ್ಲ. ಅಂತು. ಕೇಳುಕೇ ಸುಮಾರಿ. ನಮ್ಮನಿ ಹಿತ್ಲದಲ್ಲಿ ನೂ ಕೊಯ್ಯುಕೆ ಹೋಗಿದ್ದಿ. ಗಂಡಸರಿಗೆ ಮನಸಾಗದೆ ಅಂತು. ಮೀಸ್ಕ ಕರಕಬನಿ ಅಂತು.

ಸಂಜಿಗೆ ಚೂಳೀಲಿ ಹೊತ್ಕ ಹೋಯ್ತು. ಸೂಳಿ ಗಂಡ್ನ ಒಳಗೆ ಮನಿಸಿತು. ಬೆಳಗಾಗಿದ್ದಿ ಯಡನ್ನ ತಕಂಡೆ ಬರಬೇಕು. ಹೋಗುವಾಗ ಒಂಸಾರಿ ಬರತಾರೆ ಅಂತು. ಬರವಾಗ ಮುನಿಗಳು ರಿಸೂಲ (ತ್ರಿಶೂಲ) ಅಡ್ಡ ಇಟ್ಕಂಡಿ ಜಪಕ್ಕೆ ಕೂತಾರೆ. ಅಗೆ ಸೋಲ ಬೇಕಂದಿ ಮುಟ್ಟಲಿಲ್ಲ.ಗೆ ಹೋಯ್ತು. ಮುನಿ ಶಾಪ ಹೋಡೆದ ಬಿಟ್ಟ. ಬೆಳಗತನ ಗಂಡ ಸಾಯಬೇಕು. ಅದು ” ನಾ ನಿನ್ನ ಹಾಳೆ ಮಾಡಬೇಕಂದಿ ಸೂಲ ಮುಟ್ ಲಿಲ್ಲ. ಹೊತ್ ಮೂಡಿದ ಮೇನೆ ಗಂಡ ಸಾವದಾರಊಡುದೇ ಬೇಡ” ಅಂತು.ಹೊತ್ ಮೂಡೂದೆಲ್ಲ. ಪರಮಾತ್ಮ ಚವಕಸೆ ಮಾಡ್ಡ. ತಾರಿಂದಾಯ್ತು ತಿಳಿತು. ಬಂದ ಪರಮಾತ್ಮ.

“ಇದೇನೂ ಹೊತ್ ಮೂಡುದಿಲ್ಲ ಇಂದಿ? ನಿನ್ನಿಂದೇಯ” ನನ್ನ ಗಂಡನ ಹೊತ್ಕ ಹೀಗಿದ್ದೆ. ಬೇರೆಗುಟ್ಟಿ ಬರುವಾಗ ಒಂದೆ ದಾರೀಲಿ ಬಂದೆ. ಇಂತಾ ದಾರೀಲಿ ಜಪ ಮಾಡ್ತವ್ನೆ. ಗುತ್ತೆಲದಲ ಪರಾಮೋಸಿಂದ ಸೋಲ ಮುಟ್ ಹೋಯ್ತು.ಅವ ಸಾ ಹೊಡೆದ ಬಿಟ್ಟ. “ಹೊತ್ ಮಾಡಿದ ಮೇನೆ ನನ್ನ ಗಂಡ ಸಾಯಲಿ.” ಅಂದಿ ಸಾಪ ಹೊಡದನೆ. ನಾನು ಹೊತ್ ಮೂಡುದೇ ಅಂದಿದೆ.” ಅಂತು. ಪರಮಾತ್ಮ ಅವನ್ನ ಕರಸಿ ರಾಜಿ ಮಾಡಿ ಹಿರಿಸಾಪ ಮಾಡಿ,ಅವಗೆ ಬರದ ಹಾಗಾಯ್ತು.

ಹೇಳಿದವರು

ದಿ.ಗುರ್ಗು ತಿಮ್ಮಣ್ಣ  ಪಟಗಾರ,
ಹೋಸಕೇರಿ, ನುಕ್ಕೇರಿ, ತಾ. ಕುಮಟಾ, ಉ.ಕ.
ಕತೆ ಬರೆದುಕೊಂಡಿದ್ದು ಅಕ್ಟೋಬರ 68