ವಂದೂರಲ್ಲಿ ಅರಸು ಇದ್ದ. ಅರಸೂಗೆ ಸಂತತಿಯಿಲ್ಲ.ಸಾವಿರ ಗಟ್ಲೆ ರೂಪಾಯಿ ಖರ್ಚು ಮಾಡಿದ. ಅದ್ರೂ ಸಂತತಿಯಿಲ್ಲ. ಒಂದಿವ್ಸ ಮೂರು ಜನ ಬೇಡುವವರು ಬಂದರು. ” ನಾವಿಟ್ಟೆಲ್ಲಾ ದೇಶ ತಿರ್ಗದ್ದೇ ತಿರ್ಗದ್ದು. ಬೇಕಾದ ಜಾತಿ ಗಿಡ ಇವರ ಮನಿದಲ್ಲಿ. ಜಗಲಿಗೆ ಬರಬೇಕಾದರೆ ಮತ್ತೊಂದ್ ಶಬ್ದೆಲ್ಲೂ ಕೇಳುದಿಲ್ಲ”. ಹೇಳ್ದ. ” ಸಂತತಿಯಿಲ್ಲ ಸಾವಿರಾರು ರೂಪೈ ಖಚು ಮಾಡಿದೆ.”

“ನಾವೋ ಬೇಡುವವರು ಹೇಳ್ತೇನೆ ವಂದೆ ಕೇಲ್ಸ ಮಾಡಿ” ಮೂರ್ ಜನರು ಜನ ಒಂದಂದೆ ಈಬೂತಿ ಉಂಡಿ ಕೊಟ್ರು.

“ನಿಮ್ಮ ಹೆಂಡ್ರು ಮಿಂದ್ಕಂಡಿ ಬೆಳಿಗ್ಗೆ ದಿನಕೊಂದಮದೆ ತಿನ್ಬೇಕು”…

ಮೂರೆ ಆದ ಮೇಲೆ ಗರ್ಭ ಆಯ್ತು. (ತಿಂಗಳು ತುಂಬಿ) ಗಂಡು ಶಿಶು ಹುಟ್ದಿ. ಮತ್ತೆ ಬೇಡ್ಕಂತೆ ಬಂದ್ರು. ಉಪಚಾರ ಮಾಡಿದ.

“ಹುಡ್ಗ ಹುಟ್ಟಿದ ಖರೆ. ಅದ್ರೆ ಒಂದೆ ಕೆಲ್ಸಾಗದ್ಯಲ್ಲ ? ಹನ್ನೆರಡು ವರ್ಸಾಗುದರೊಳಗೆ ತಂದೆ ಮಗ ಒಂದೆ ಗೊಟೆ ಇರೂಕಾಗ. ತಂದೆಗೆ ಮೋಸ, ಯಲ್ಲ ಮಗಗೆ ಮೋಸ. ನೆಲ ಮಾಳಿಗೆಮಾಡಿ ಮಗನ ಇಡಿ ಅಂದ. ನೆಲಮಾಳಿಗೆ ಕಡಿಸಿ ಹುಡುಗ, ತಾಯಿ,ಕೆಲಸಕೆ ಹೆಂಗಸು, ಮಾಸ್ತರು ಉಳಿದರು.

ಹುಡುಗ ದೊಡ್ಡಾದ. ಪರಾಯಕೆ ಬಂದ. ಮಾಸ್ತರು ಬಾ ಹೇಳಿದರೆ ಜೋರ ಅವಾರಿ ಮಾಡುವದು. ತಾಯಿದಿರಗೆ ಹೊಡೂದು, ಲೂಟಿಹೆಚ್ಚಾಯ್ತು. ” ನಮ್ಮ ಮನೆ ಯಾವದು? ತಂದೆ

ಯಾರು?” ಕೇಳ್ದ. ನೆಲಮಾಳಿಗೆ ಕಾಲಗೆ ಒದ್ದ. ಬಡ್ಡು ಬಿಡೆ ಹೋಯ್ತು. ಹನ್ನೆರಡು ವರ್ಸಾಗ್ಲಿಲ್ಲ.ಮನಿಗೆ ಕರಕಂಡ ಬಂತು.ಸುಳದಲ್ಲುಳಿದರು.

“ಮುಪ್ಪಿನ ಕಾಲಕೆ ಹುಡ್ಗ ಹುಟ್ದ. ಲಗ್ನ ಮಾಡಬೇಕು.” ಅಂದ. “ಪರದಾನಿ, ನನಗೆ ಮುಪ್ಪು. ಹುಡ್ಗನ ಲಗ್ನ ಮಾಡಬೇಕು. ಹೆಣ್ಣ ಕೇಳ್ಕ ಬಾ” ಅಂದ. ಪರದಾನಿ ಹೆಣ್ಣ ಕೇಳ್ಕ ಬರುಕೆ ಬೇರೆ ಊರಿಗೆ ಹೋದ.

ಹುಡ್ಗ ಮಾಳ್ಗಿ ಮೇಲಿದ್ದ. “ಯಲ್ಲೋ?” ಕೇಳ್ದ.ನಿಮಗೆ ಲಗ್ನ ಮಾಡೊಕೆ ಹೆಣ್ ಕೇಳ್ಕ ಬರ್ತೆ ಅಂದ. ಅವ, “ಹೆಣ್ಣು ನಗೆಯಾಡಿರೆ ಮಲ್ಲಿ ಹೂ ಸುರಿಬೇಕು. ತೀಡಿದರೆ ಮುತ್ತು ಸುರಿಬೇಕು.ಅಂತಾ ಹೆಣ್ಣು ಆಗಬೇಕು” ಅಂದ. ಪರದಾನಿ ವಮದ್ ತಿಂಗಳ ತಿರುಗಾಟ ಮಾಡಿದ ಅಗಲಿಲ್ಲ. ಹಿಂದೆ ಬಂದು ಹೇಳಿದ. ಅಂತಾ ಹೆಣ್ ತರೂಕ ಆಗಲಿಲ್ಲ.

ಊಟ ಮಾಡಿ ಹುಡುಗ ಹೊಂಟೆ ಹೋದ. ಬೇರೆ ಊರಿಗೆ ಹೋದ. ಸನೀಪ ಬರೂ ಸಾಲದೆ ಹುಡಗ್ರು ಓತ್ತ ಅವ್ರೆ. ಕುಂತ ಕಿಟಕಿ ಮುಂದೆ ಕೂತ.ಮಾಸ್ತರು ಹೇಳ್ಕೋಡೂದು ಕಾಣ್ತದೆ.”ಮಾಸ್ತರೆ” ಹೇಳ್ತ ಬಂದ. ಪೆಟ್ಟು ಹೊಡೆದ ಮಾಸ್ತರ ಹುಡುಗಿಗೆ. ಹುಟ್ಗಿ ಗಿಸ್ಕನೆ ನೆಗ್ಯಾಕ ಮಲ್ಗಿ ಹೂಗು ಉದರತು. ಮತ್ತೆ ಹೊಡೆದ ಕಣ್ಣೀರ ಸಂಗಡ ಮುತ್ತು ಸುರೀತು.

ಸಾಲೆ ಬಿಟ್ಟರು. ಮಾಸ್ತರ ಕೇಳಿದ ಆ ಹುಡುಗಿಗೆ “ಎಲ್ಲಿ ನಿನ್ನ ಮನೆ ?” ” ಆ ಅರಸತನದ ಮನೆ ಹೌದು.” ಇವ ಅರಸು ಮನೆಹೋದ. ಅದು ಮೆತ್ತಿನ ಮನೆ ಹೋಯ್ತು. ಸಾಲಿಂದ ಬಂದ ಮೇನೆ.

ಅರಸು ಹುಡ್ಗನ ಹತ್ರ “ಎಲ್ಲಿ ಆಯ್ತು ?” ಕೇಳಿದ. “ಏನು ಬಂದೆ?” ಕೇಳಿದ.ನಿಮ್ಮಲ್ಲಿ ಹೆಣ್ಣಿದೆ ಅಂದ್ ಗೊತ್ತಾಯ್ತು. ಲಗ್ನಾಗಬೇಕು. ಅಂದ ಬಂದೆ.”

“ಹಾ.. ” ಹೇಳಿ ಕರಕಂಡೆ ಹೋದ. ” ಕೋಣೆ ಬಾಗ್ಲಲ್ಲಿ ಕಂಚಿನ ಭವನ ಅದೆ. ಬೋಗುಣಿ ದುಡ್ಡು ತಂದು ತುಂಬಿದರೆ ಅಡ್ಡಿಲ್ಲ.” ” ಇದರ ತುಂಬೂಕೋ” ಹೇಳಿ ಅಲ್ಲೇ ಉಂಡು ಮನೆಗೆ ಬಂದ.

ನಾಕ್ ಜನರ ಕೈಲಿ ಚೀಲ ತುಂಬಿಸಿ ದುಟ್ಟು ತಕಂಡೆ ಬಂದ. ಕಂಚಿನ ವನಕ್ಕೆ (ಇಲ್ಲಿ ಕಣಜ) ಸೊರಗಿದ. ತುಂಬಲೆಲ್ಲ. “ಇನ್ ದುಡ್ಡೆಲ್ಲ.” ಆಲೋಚನೆ ಮಾಡಿದ ತೋಡೆ ತಂದ ಹಾಕ್ರಾಗ.ಎಲ್ಲಾ ಮಾಲು ದಾಗಿನಿ ಮಾರಿ, ಗಾಡಿ ಗಟ್ಲೆ ತುಂಬ್ಕ ಬಂದ. ತಂದಲ್ಲಿ ತುಂಬಿದ. ಸೊರಗುದೊಂದು ಕಾಣ್ತದೆ. ಎಲ್ಲ ಹೋಯ್ತು. ಅಲ್ಲೇ ಉಂಡ್ಕ ಕುಳಿತ. ಕತ್ತಿ ತಕಂಡ ದೆನ್ಕಿನ ದೆಸ್ಕೆ ಬೆಟ್ಟಕೆ ಹೋಗಿ, ಕಟ್ಗಿ ತರೂದು. ಹನ್ನೆರಡ ಆಣೆ,ರೂಪಾಯಿ ತಂದು ಬವನಕೆ ಹೊತಾಕೂದು. ಉಂಬ್ಕೆ ಹೋಗದು.

ದಾರಿಲಿ ಒಂದೆ ಮನೆ. ಅಲ್ಲಿ ವಂದ್ ಹೆಂಗ್ಸದೆ. ಇವ ಕಟ್ಗಿ ಮಾಡಿ ದುಡ್ ಹಿಡ್ಕಬತ್ತ.” ತಮ್ಮಾ, ಇಲ್ ಬಂದೆ ಹೋಗೋ” ಹೇಳ್ತು.ಆಗ ಹೋದ. ಬುದ್ದಿ ಹೇಳ್ತು. ” ಗಾಡಿಗಟ್ಲೆ ದುಡ್ತಮದ್ ಸೊರಗಿದೆ. ಆಗಲಿಲ್ಲ. ಕಟ್ಟೆ ಹೊತ್ತು ದುಡ್ ತಂದ ತುಂಗುಕಾಗುದೋ? ಆ ಬವನ ರಾಕ್ಷಸ್ತಿ. ಊಟ ಮಾಡು.ರಾತ್ರಿಗೆ ಯಾರಿಗೂ ಸುದ್ದಿ ಮಾಡೂಕಾಗ, ಅವರು ಮರೆಯಾದಾಗ ಇವ ಮನಿಕಂಡೆ ಉಳಿಬೇಕು. ಐದ್ ಅರೆ ತಾಸ್ ರಾತ್ರಿಗೆ ದಿವಸಕ್ಕೊಮ್ಮೆ ಏಳ್ತದೆ ರಾಕ್ಷಸಿ. ಆಗ ಕಟ್ಕನೆ ರುಂಡ ಹಾರಸಬೇಕು. ಅಂದ್ರೆ ಮದಿಯಾಗುವೆ ಹೆಣ್ಣು. ಯೆಲ್ಲದಿರೆ ಆಗು ಹಾಂಗಿಲ್ಲ” ಅಂದ.

ಪಟ ತಯಾರ್ ಮಾಡ್ಕಂಡ. ರಾತ್ರಿಗೆ ಊಟ ಆಯ್ತು. ರಾತ್ರಿ ಮನಿಕಂಡ ಕೋಣಿ ಮರೆ ಸೇರಿ ಉಳಿದ. ರಾತ್ರಿ ಮೇನೆ ರಾಕ್ಷಸ್ತಿ ಎತ್ತು.ಕಚಕಣೆ ರುಂಡ ಹಾರಸಿ ಬಿಟ್ಟ.ರಾಕ್ಷಸ್ತಿ ಗುಡ್ಡದಾಗೆಬಿತ್ತು. ರಕ್ತ ಬೋಳ ಹರೀತು. ಕಂಚಿನ ಬವನ ದುಡ್ಡು ತುಂಬಿ ಹೋಯ್ತು.

ರಾಜ ಬೆಳಗ್ಗೆ ಹೊಂಟ. ರಕ್ತದ ಮೇನೆ ಕಾಲು ಬಿತ್ತು‌‌‌‌‌‌‌ ಹುಡ್ಗಿ ಅವಗೆ ಮೆಚ್ಚಿ ಹೀಗೆ ಮಾಡಿತು ಹೇಳಿ ಹುಡ್ಗಿ ಮೇನೆ ಮನಸು ಹೋಯ್ತು.ಏನೋ ಜುಟಾಯ್ಸೋಕೆ ಕಂಚಿನ ಪಿಟ್ಗಿನ ಮೇನೆ ಸರಾ ಅದೆ.ಹುಟ್ಗಿ ಮೇನೆ ದ್ವೇಸಾಯ್ತು ಅವಗೆ.

ಹೆದ್ದಾರಿವರಿಗೆ ಕಡೆ ಹುಗಿದು ಬಾಳಿರಂಬೆ ಹಯಣಿ (ಕೊಳಿವೆ) ಹಾಕಿದ. ಹುಡುಗಿಗೆ ನಾರವಸ್ತ್ರ ಕೊಟ್ಟು, ಹುಡಗಿಗೆ ಹರಣಿಲಿ ನೀರ ಹಾಕಿಕೊಟ್ಟ ನಗ್ನ ಮಾಡ್ದ. “ನನ್ನಿಂದೇನು ಪಾಪಿಲ್ಲ,” ಹೇಳ ಗಂಡನ ತಕಂಡಿ ಬಂದೆ ಬಿಟ್ತು.

ದೂರ ಹೋಗಿ, ಅಜ್ಜಿ ಮುದ್ಕಿ ಮನಿಲಿ ಸಂಜಿಗೆ ವಾಸ್ತವ್ಯಾದ್ರು. ” ಅಜ್ಜವ್ವಾ ನಾವಿಲ್ಲೇ ಉಳಿತ್ರು” ಅಂದ್ರು. “ಅಡ್ಡಿಲ್ಲ ಜಾಗ್ಯೇನ್ ಹೊತ್ಕ ಹೋತ್ರ? ಉಂಬೂಕಿಲ್ಲ” ಅಂತು. ದುಡ್ಡು ಕೊಟ್ಟು, “ಅಕ್ಕಿ ಕಾಯಿ, ಬೆಂಕಿಪೆಟ್ಗೆ, ಚಿಮಣಿ ಬುರಡಿ, ಯೆಲ್ಲಾ ತಕಬನಿ” ಹೇಳಿ ಗಂಡಮಗೆ ಕೊಟ್ತು.ತಂದ.

ಊಟ ಮಾಡಿ, ಮುದ್ಕಿಗೂ ಅನ್ನ ಹಾಕಿದರು. ಮಲಗಿದರು. ಇದು ಅಲೋಚ್ನಿ ಮಾಡ್ತು.” ನನ್ನಪ್ಪ ದೂರ ನಿಲ್ಸಿ ಲಗ್ನ ಮಾಡಿ ಕೊಟ್ನಲ್ಲ ? ” ಕಣ್ಣೀರ ಬಿಟ್ತು. ಮುತ್ತು ಉದುರತು. ಮುತ್ತಿನಶೇರಿ ಮಾಡ್ತು. ಅರ ಗಳಿಗೆ ಮಾಡಿ, ಬೆಂಕಿಪೆಟ್ಗಿಲೆ ಹಾಕ್ತು. ಈ ಶೇರಿ ತಕಂಡ್ ಹೋಕಂಡಿ, ಕಟ್ಟಿ ಮೇನೆ ಕೂತ್ಕಣೀ, ಶೇರಿ ಕೊಟ್ಟು ದುಡ್ ತನಿ, ಅರಸು ತನಗೆ ಕೊಟ್ಟು” ಅಂತು.

ಅರಸು ಪರದಾನಿ ತಿರುಗಾಟಕೆ ಹೋಗಾರೆ. ಅರಸು ಹೆಂಡ್ತಿ ಪರದಾನಿ ಹೆಂಡ್ತಿ ಕಟ್ಟೆ ವರದಕ್ಷಿಣಿಗೆ ಬಂದ್ರು.

ಅರಸು ಹೆಂಡ್ತಿ ಪರದಾನಿ ಹೆಂಡ್ತಿ ತಿರಗಿದರು. ಶಿರೆ ಅದೆ ತೆಕಂತ್ರೋ ಕೇಳ್ದ. ಶೇರಿ ಎಲ್ಲಿ ಕೇಳ್ರು.

ಬೆಂಕಿ ಪೆಟ್ಗೆ ತಗೆದ. ” ವಂದೆ ಸಾವ್ರ ರೂಪಾಯಿ” ಹೇಳೀದ. ದುಡ್ ಕೊಟ್ಟು ಅರಸು ಹೆಂಡ್ತಿ ತಕಂಡ್ತು. ದುಡ್ ತಂದ ಅವ. ಮಾರನೆ ಸಂಜಿಗೆ ಕಣ ಮಾಡ್ತು. ಕಣ್ಣೀರ ಮುತ್ತಿನ್ದ. ಕಣ ಬೆಂಕಿ ಪೆಟ್ಗೆಲಿ ಹಾಕ್ತು. ಅಲ್ಲೇ ತಕ ಹೋದ. ಆಗ, ” ಅಮ್ಮಾ, ನಾ ಇಂದು ಕಣ ತಂದನೆ. ತಕ್ಕಂತ್ರ?” ಕೇಳ್ದ. ಪರದಾನಿ ಹೆಂಡ್ತಿ, ನಾ ತಕತೆ ಅಂತು. ” ಶೀರಿಗೆ ಕಣ ಜತೆ” ಹೇಳೀ ಅರಸು ಹೆಂಡ್ತಿ ಐವತ್ ರೂಪಾಯಿ ಕೊಟ್ಟು ಕಣ ತಕಂಡ್ತು.

ಆ ಊರಿನ ಅರಸು ಪರದಾನಿ ಮನಿಗೆ ಬಂದ್ರು. ಅರಸು ಹೆಂಡ್ತಿ ಮಲ್ಲೇ ಆ ಶೀರೆ ಉಟ್ಟದೆ,ಕೇಳ್ದ.

ಕಟ್ಟಿ ಮೇನೆ ಶೇರಿ ಕಣ ತಂದಿದ್ದ ವಬ್ಬವ ಅಂತು.ದಿನಾ ಬತ್ತನೋ ಕೇಳ್ದ. ಏನೋ ಬೆಳಿಗ್ಗೆ ನೋಡಬೇಕು ಅಂತು. ಆ ಇದವಸ ರಾತ್ರಿ ಮುತ್ತಿನ್ದೇ ಎಲ್ಲ ವಸ್ತ್ರ ಮಾಡಿ, ಬೆಂಕಿಪೆಟ್ಗೆಲೆ ಹಾಕ್ತು. ಅದೇ ಕಟ್ಟಿಗೆ ತಕ ಹೋದ. ಅರಸು, ಪರದಾನಿ ಬಂದ್ರು.

ಯಲವಸ್ತ್ರ ತಕಳ್ತರಾ ಕೇಳ್ದ. ಎಲ್ಲಿದೆ? ತೆಗೆದ. ಯಾರು ಮಾಡಿದ್ದು. ನನ್ ಹೆಂಡ್ತಿ ಮಾಡಿದ್ದು ಎಲ್ಲಿ ? ಅಜ್ಜಿ ಮನಿಲಿ ಮನೀಲಿಟ್ಕಂಡ. ಅಜ್ಜಿ ಮನೇಲಿ ಹುಡ್ಗೈದೆ. ಅರಸು ಬಾ ಹೇಳ್ತ ಹೇಳಿ ಕರಕ್ಕ ಬನಿ ಹೇಳಿ ಕಳೀಸಿದ ಅರಸು. ಬಂದ್ರು. ಅದರ ಹತ್ತರ ಹೇಳಿದರು. ” ಅರಸಗೊಳು ಬರುಕೆ ಹೇಳರೆ.”

“ನಾ ಬರೂದಿಲ್ಲ”. ಹೋಗಿ ಹೇಳಿದರು. ಮತ್ತೆ ಕಳಗಿದ. ಕೈಕಾಲ್ ಕಟ್ಟಿ ಹೊತ್ಕಬನಿ ಹೇಳ್ದ. ಹೊತ್ಕ ಹೋದ್ರು. ಅರಸು ಮನಿ ಮಾಳ್ಗಿ ಮೆತ್ತಿನ ಮೆನಿಟ್ರು.

ಆ ದಿವಸ ಸಂಜಿಗೆ ಅವರ ಮಗ್ಗಲಿಗೆ ಹೋಗೂಕೆ ತಯಾರಾದ ಅರಸು.”ನನ್ ಮುಟ್ಟಿದ್ರೆ ಜೀವ ತೆಕಳ್ತೆ.ಪಂತ ತೀರಬೇಕು ಅಂದರೆ ಅಡ್ಡಿಲ್ಲ.ಬಾಗಿಲ ಮುಂದೆ ಬಾಳಿ ಹೆಚ್ಚಿ ಕೊನೆ ಬಂದು,ಹಣ್ಣಾದ ಮೇನೆ ಮುಟ್ಟೂಕಡ್ಡಿಲ್ಲ” ಹೇಳ್ತು.

“ನನ್ ಕಯ್ಯಲ್ ಸಿಕ್ಕದೆ”. ಮಾತ್ರಕೊನಿ ಬರುಬಾಳಿನ್ ನೆಟ್ಟ.

ಗಂಡ ಅದನು ಕಾಯೂಕೆ ಬಿದ್ದ. ಮೇನೆ ನೋಡ್ತನೆ ಹೆಂಡ್ತಿಯ. ಕಣ್ಣೀರ ಬಿಡತಾನೆ.ಒಂದಿನ ಪತ್ರ ಬರೀತು ಗಂಡನೆ. ಈ ಹೊತ್ತೆ ನೀವು ಚಲೋ ಕುದ್ರಿ ತಂದ್ಕಂಡಿ ಜನರ ಸಪ್ಪಳಅಡಗೂತ್ನೆ ಕಿಡಕಿ ಗಂಡಿಲ್ ನಿತ್ಕಳಿ. ನಾ ಬಂದಿ ನುಗಲ ಬಿಡತೇನೆ. ನಾ ಇಳೀತೇನೆ. ಕುದ್ರಿ ಮೇನೆ ಕೂರ್ತೆ” ಕಣ್ಣೀರ ಬಿಟ್ಟಾಗ.

ಪತ್ರ ಒಗೆತು. ಪತ್ರ ಓದಿದ. ಚಲೋ ಕೊದ್ರಿ ಅರಸಕಮಡ ಮಲಗಿದರು. ದೀಪ ತುಂಬತ್ನೆ ಯೆದ್ದ. ಹೋದ ಕುದ್ರಿ ಬಿಡ್ಸಕಂಡೆ ಕಿಟಕ್ಯಲ್ಲೇ ಕುಂತ್ಕಂಡ. ಅದು ನುಗ್ಗ ಬಿಡುತ್ನ ಜಡಿತ್ನೂ ಬತ್ತೆ ಹೇಳಿ ಕುದ್ರಿ ಮೇನೆ ಮನಿಕಂಡ. ನೆದ್ರಿ ಬಿದ್ ಹೋಗದೆ. ಆ ಊರಗೆ ಮುದಿ ಕಳ್ಳ. ” ಕುದ್ರಿ ನಿತ್ತದೇ” ಹೇಳ ಹೋದ. ಹಗೂರಕೆ ನೆಡ್ಗೆ ಕೇಳಗೆ ಮನಿಸಿದ. ಕುದ್ರಿಹತ್ತದ.

ನುಗ್ಲ ಬಟ್ಟ ಹತ್ತಿದಾಗ ಬಿಡಿಸಿತು.ಇಳಿದಳು. ಹಾರಸ ಕಂಡೆ ಬಂದ. ಬೆಳಗಾಗ ಗಂಡನಲ್ಲ; ಮುದಿಯ; ಅವಳ ಮನೆಹೆ ಕರಕ ಹೋದ. ಮನಿ ಕಟ್ಕಂಡನೆ. ಪಾತ್ರ ಪಗಡಿ ರಾಶಿ ಅವೆ.ಅಡಿಗಿ ಮಾಡಿ ಹಾಕ್ತು. ರಾತ್ರಿಗೆ ಅವ ಅದರ ಮಗ್ಗಲಿಗೆ ಹೋದ. ” ನನ್ ಬುಡಕೆ ಬರಬೇಡಿ. ನೀರ್ ಮೀಯದೆ ನಾತ ನಿಮ್ಗೆ. ನಾಳೆ ಚಲೋ ಕಾಸಿ ನೀರ ಮೀಸ್ತೆ.ನಾಳೆ ಬನಿ” ಅಂತು.

ಪೇಟಿಗೋಯ್ತು. ಶೇರ ಬಂಗಿ ತಂತು. ಕೊಪ್ಪರಕಿಲಿ ನೀರ್ ತಂದು, ನೀರ್ ಕಾಸಿ,ಬಂಗಿ ಪಾನಕ ಮಾಡಿತು. ಊಟದ ಹೊತ್ತಿಗೆ ಬಿಸಿ ಬಿಸಿ ನೀರ್ ಹೊಯ್ದು ಕಾಯಿಸಪ್ಪಿನಗೆ ತಿಕ್ಕಿ, ಸಂಗಟ

ಹುಟ್ಟಿತು. ಮೀಸಿತು. ದಣಿ ಬಿದ್ಕಬಿಟ್ಟ. ಎದೆ, ಬಾಯಿ ಒಣಗಿ ಬಂತೋ ಲೆಕ್ಕ ಕೇಳ್ತು. ಹೂಂ ಅಂದ.

ಬಂಗಿ ಪಾನ್ಕ ತಂದ್ ಕೊಟ್ತು. ಕುಡಿದ ಅಡ್ಡ ಬಿದ್ದ. ಹಗುರಕೆ ಹೊರಬಿತ್ತು. ಮಾರ್ಗಕೆ ಓಡಿ ಬಂತು. ಅರ್ ತಾಸು ಹೊತ್ತಾಗುದು.ಮೂರು ಮುಸಲ್ರ ಮಕ್ಕಳು ” ಹುಡುಗಿ ನಂದು, ತಂದು” ಗೊಡಾಡ್ಕ ಬತ್ತರೆ. ಯಾಕೆ ದೂಡಾಎಕ ಬತ್ತಿರಿ ? ಮೂರೆ ಜನ ಇದ್ರಿ ಒಬ್ಬಗೆ ಲಗ್ನಾಗ್ತೆ. ಅಂಬ ಸಾರಿಸತೆ. ಹೆಕ್ಕ ಬಂದವರ ನಗ್ನಾಗ್ತೆ ಅಂತು.

ಅವರ ದುಸ್ತ ಕಳಬಿಟ್ಟರು. ಅಂಬೂ ಬಿಟ್ತು. ಓಡಿದರು. ದುಸ್ತ ತಕಂಡೆ ಗಂಡರೂಪ ತಾಳಿತು. ದಾರಿಲಿ ಬಂತು. ಅವರ್ ಅತ್ತ ಹೋಯ್ಕಣ್ಣಿ. ಬೆರೆ ದಿಡ್ಡ ಅರಸತನ. ಮೆನೆ ಕೆರೆ. ಸ್ವತ್ತಕಟ್ಟಿ. ದಿನಕ್ಕೆ ಹದ್ನೈದು ಖಂಡ್ಗಕ್ಕಿ ಅನ್ನ ಬಯಲಲ್ಲಿ ನಿಲ್ಸ ಬೇಕು. ಬಂಡಿ ಬಕ್ಕಾಸುರ ಊಟ ಮಾಡ್ಕ ಹೋತವೆ. ಹುಡಗಿ (ಹುಡ್ಗ) ಕಟ್ಟೆ ಮೇನೆ ಕುಂತನೆ. ಬಂಡಿ ತಂದ್ರು.

ಅವನು ಗಾಡಿ ಮೆಲೆ. ಅವರು ಗಾಡಿ ತಂದೊರು “ಹುಡಗಾ, ಬಕ್ಕಾಸುರ ಬತ್ತನೆ.ನಸತದಲ್ಲಿ ಹೋಗು, ತಿಂತನೆ” ಅಂದ್ರು. ಅದು ಗಾಡಿ ನಿಲ್ಸಿ ನಿಂತನೆ ಹೋತೆ. ಎತ್ತ ಬಿಟ್ ಹಾಕಿ ಹೋಗಿ” ಅಂತು. ಕೊಳ್ಳಹರಿದರು, ಹೋದ್ರು. ಕೊಟ್ಗಿಗೆ ಹೋಯ್ತು ಎತ್ತು. ಅರಸು ಮೆಲೆ ಗೋಳಿ ಬಿತ್ತು. ಏನಾಯ್ತು?

ಬಕಾಸುರ ದೈತ ಬಂದನೆ. ಲಬಾಡಿಸತಾನೆ ” ಊರ ತಿಂದೆ ತೆಗ್ಡೆ ಬಿಡ್ತೆ” ಹೇಳಿ. ಆವಾಗ, ಹುಡುಗ ಹೇಳ್ತ, ” ಇಂದ್ ತಿಂಬೂಕೆ ಕೊಡ್ವ ಹಾಗಿಲ್ಲ. ಕಾಡಾಕಾಡಿ ಯುದ್ಧ ಮಾಡಿ ಗೆದ್ ಹೋಗು” ಅಂತು.” ನನ್ನ ಕಡಬಾಯನ ಹಲ್ಗಿ ಸಾಕಾಗ” ಅಂದ. ” ನಾ ಬತ್ತನೆ,ನನ್ನ ಹಿಡ್ಕ ತಿನಬೇಕು”.

ಅವ ನಿತ್ತನೆ ಮುರ್ಕ ತಿಂತೆ ಹೇಳಿ. ಆಜೆ ಈಹೆ ಹಾರಿ ದೈತನ ಕಂಕಳಲ್ಲಿ ಹಾರಿ ನೆಡೆತು.ಹೀಗೆ ಅಡಸಿ ಬಿಡತಿದ್ದೆನಲ್ಲ. ನರ್ಕ ಅನಿಸಿತು. ಯೆರಡ ಸಾರೆ ಅಜೀಜಿ ಹಾರಿತು. ಗಾಡಿಲಿ ನುಸಿದ ಕಾಲಡ್ಗೆ ನರ್ಸ ಅನಿಸತಿದ್ದೆ. ಅದ. ನುಸುಡ ಬಂದಿತು. ಯೆರಡ ಸಾರೆ ಹೋಯ್ತು.

“ಬಾ ಯೇಗೆ” ಅಂದ. ಅಜೀಜಿ ಹಾರಿ, ನೆತ್ತಿ ಮೆನೆ ಹಾರಿ, ಕಾಲಲ್ ವದ್ದು, ಹಾರಿಬಿಟ್ಟ.ಅಜೆ ಗುದ್ದಿತು.

” ನಾನು ಗೆದ್ದಿನೋ ಯೆಲ್ವೋ?” ಕೇಳ್ದ. ಗದ್ದೆ.

ನೀ ಬಂದು ನನ್ನ ಹಿಡ್ಕ ತಿನ್ಬೇಕು ಎಂದ ಹುಡ್ಗ. ನಾ ಇಲ್ಲೇ ನಿಲ್ತೆ ಅಜಕೂದಿಲ್ಲ. ಅಂತು. ನಿತ್ತ. ಹಾರಾಡತ ಬಂದ ರಾಕ್ಷಸ ಬಂದಾಗ ಕಚಕ್ಕನೆ ಅರಿದ. ರಸು ಮನಿವರೆಗೆ ಹೋಯ್ತು. ಕಳ್ಳ ರಕ್ತ ಅರಸೂ ಮನಿವರೆಗೆ ನೊಣ. ಅರಸು ಯೇನಾಯ್ತು ನೋಡ್ವ ಹೇಳಿ ಬಂದ.

“ನಮ್ಮೂರೆ ನಿಂದಾಯ್ತು. ಈಗೇ” ಅಂದ. ತಕ ಹೋಗಿ ಮಾಳಗಿ ವಳಗಿಟ್ರು. ಹುಡಗ, ಹುಡಗ ಹೆಳಿ ಕರಿತರೆ, ಪರದಾನಿ “ಹುಡ್ಗ ಹುಡ್ಗ ಹೇಳ್ತರಿ. ಹುಡಗಿ ಕಾಣೆ ಕಾಣ್ತದೆ.”

“ಅಗಳ ಕಡಿಸಿ ಈಚೆ ದಿಡಕೆ ನಿಂತು ಅಚೆ ಉಚ್ಚಿ ಹೊಯ್ಬೆಕು” ಅಂದ ಪರದಾನಿ.ಹುಡುಗ ಮಾಡಿ ಅಂದ.

ಪರದಾನಿ ಉಚ್ಚಿ ಹೋಯ್ದ. ಹುಡಗಿ ಉಚ್ಚಿ ಹೋಯ್ತದೆ. ಅಚಿಗಳಿಸತದೆ; ಹೆಗಲಿಗೆ ಯವಸ್ತಿ ಮಾಡ್ಕಂಡ ಹೋಯ್ತದೆ ಗಂಡಾಗಿ.

ಅಂಡಿ ಕೊಡ್ತದೆ ಮುಂದೆ, ದೇವಲೋಕದ ಹುಡಗಿ ಅದು.

ಅಜಿದಿಡದ್ದು ಬಿದ್ದದ್ದು ಗಂಡೋ? ಕೇಳಿತು. ಪರದಾನಿ ಮತ್ತೊಂದ್ ದಿನ ಹೇಳ್ತೆ ಇರವಾಗ ” ಹೆಣ್ಣೇ, ಗಂಡಲ್ಲ”… ” ಹುಚ್ಚು ನಿನಗೆ” ಅಂದ ಅರಸು.

“ಯೆರಡ ಮೊಟ್ಟೆ ನೆಲ್ಲಿ ಕಾಯಿ ಹರಡಬೇಕು. ಜೋಡ ಹಾಕಂಡಿ ತಿರಗಬೇಕು”. ನೆಲ್ಲಿಕಾಯಿ ಸೊರಗಿದರು. ಪರದಾನಿ ಜೋಡ ಹಾಯ್ಕಂಡಿ ಯೆರಡ ಹೆಜ್ಜೆ ನೆಡೆದ ಬಿದ್ದ.

ಹುಡಗ ಓಡಿದ. ಕಯಹಿಡಿದು ತಂದು ನಿಲ್ಲಿಸಿದರು. ಅವ ಬೀಳಲಿಲ್ಲ.

ಪರದಾನಿಗೆ ಬೊಬ್ಬೆ ಹಾಕಿ, ಕೈತಟ್ಟಿ ಕರ್ಕ ಹೋದ್ರು ಹುಡ್ಗನ. ಸಭೆ ಕೂಡ್ಸಿ ಹುಡ್ಗ ಹೆಳ್ದ.” ನಾನು ಹುಡಗಿಯೆ, ಪರದಾನಿ ತಪ್ಪಲ್ಲ. ಪರದಾನಿ ಬುದವಂತ. ಆದ್ರೆ, ಅಂತರಂಗದಲ್ಲಿ ಹೇಳಬಹುದಿತ್ತು” ಅಂದಳು.

ಅರಸು ಕೈಲಿ ಹೇಳ್ತು. ಎದೇ ಕೆರೆಯಲ್ಲಿ ಊಟ ಮಾಡಿಸಬೇಕು. ತಯಾರ ಮಾಡಿಸಿದರು. ಬಂಡಿ ಬಯಲಲ್ಲಿ ಹಳ್ಳಿಹಳ್ಳಿಗ್ಯಲ್ಲ ಪತ್ರ ಕೊಟ್ಟರು. ಬರುಕೆ ಹೇಳಿದರು.ದಡ್ಡ ಊಟ.

ಗುಡಗಾರನ ತಂದ್ ಕೊಡಿ. ಬಂದ. ” ನನ್ನ ರೂಪ ಆಕಾರ ಒಂದೇ ರೀತಿ ಬೊಂಬೆ ಮಾಡಿಸು” ಮಾಡಿಸಿದ. ಹೆಣ್ಣ ಬೊಂಬೆ.

ಕೆರೆ ದೆಡೆದ ಮೇನೆ ಬೊಂಬಿ ನಿಲ್ಲಿಸಿದರು. ಅರಸು ಕೈಲಿ ಹೆಳ್ತು. ಯೆಂಟ್ ಹತ್ ಜನ ಕೆಲಸಕ್ಕೆ ಹೇಳಿದ ಹಾಗೆ ಖೆಳವ ಆಳುಗಳು ಬೇಕು.

ಗಂಡ ಬಂದ. ಬೊಂಬೆ ನೋಡ್ಕಂಡ ಜುಳಕ್ನೆ ಕಣ್ಣೀರ ಬಿಟ್ಟ. ” ಕೋಣಿಲ್ ಹಾಕಿ” ಅಂತು.

ಹುಡಗಿಯ ತಾಯಿ ತಂದೆ ಬಂದ್ರು, ಬರುವಾಗ ಹೇಳತಾರೆ, ಗಂಡನ್ನ ಎಲ್ಲಿ ಬಿಟ್ಟಿತೋ,ಇಲ್ಲಿ ಬಂದೆ ನಿತ್ತದೆ, ಕೋಣಿಲ್ ಹಾಕಿ. ಹಾಕ್ದರು.

ಕೈಕಾಲ್ ಕಟ್ಟಿ ಹೊತ್ತತರಿಸಿದ ಅರಸು. ಪಂತ ಹೇಳಿತ್ತು. ಬಾಳಿಕೊನೆ ಹಣ್ಣಾಗಬೇಕು.ಅವ ಹೇಳಿದ. ಕೋಣೇಲೆ ಹಾಕಿದರು.

ಮುದಿಗಳ್ಳ ” ಬಂಗಿ ಪಾನ್ಕ ಕೊಟ್ರು, ನಂಬಿಸಿ ಬಂದಿದ್ದೋ?” ಕೇಳಿದ. ಮೂರೂ ಮುಸಲ್ರನೂ ಕೋಣಿಲ್ ಹಾಕಿದ್ರು. ಮಾವ. ಅತ್ತೆ ಬಂದ್ರು, ಗಂಡನ ಮೊಕ ಹೋಲ್ಗಿಮೇನೆ ಕೋಣಿಲಿ ಹಾಕಿಸಿತು. ಊಟಾಯ್ತು.

ಸಭೆ – ವಿಚಾರಣೆ ಅರಸಗೋಳೆ, ನಿಮ್ಮ ರಾಜ್ಯದಲ್ಲಿ ಹೇಗದೆ ರಿವಾಜು? ಹುಟ್ಟಿದ ಹೆಣ್ ಮಕ್ಕಳಿಗೆ ಯಾವ ರೀತಿ ಲಗ್ನ ಎರಕೊಡತ್ರು?” ತಾಯಿ ತಂದೆ ಕೇಳತು. : ನೀವ್ ಹಾಕಿದ ಆಭರಣ ಸೀರೆ ತಕಂಡ ಹೋಗಿ” ಹೇಳೀಕೊಟ್ತು. ನಾಚಿ, ತೀಡಿ ಹೋದ್ರು.

ಬಾಗ್ಲ ಮುಂದೆ ಬಾಳಿನೆಟ್ಟ ಅರಸ. ನೋಡು ಇಲ್ಲಿ ನಂತ್ರ ನನ್ನ ಪರವೇಶ ಮಾಡಬೇಕು.ಹೆಳಿತ್ತು ಅಂದ. ಅರಸು ಪರರ ಹೇಣ್ಮಕ್ಕಳಿದ್ದರೆ ಕೈಕಾಲ್ ಕಟ್ಟಿ ಹೋತೆ? ಆಳುಗಳ ಕೈಲಿ ಲತ್ತೆ ಹೊಡೆಸಿ ಬಿಟ್ಹಾಕ್ರು. ಮುದಿಗಳ್ಳನ ಹಾಗೇ ಹೇಳಿ ಬಿಟ್ತು. ಮುಸಲ್ರು ದಾರಿ ಮೇಲೆ ಅದು ನಂದು, ನಂದು, ಹೇಳ್ತರೆ ಅಂತು. ನಾಲ್ಕು ನಾಲ್ಕು ತಿವಿದು ಹೆರಹಾಕಿದರು.

ಗಂಡನ ತೆಗೆಸಿತು. ಅಪ್ಪ್ ಅವಿ ಹೌದೋ? ಹವದು. ಚೌರಗಿವ್ರ ಮಾಡ್ಸಿ ಅಲ್ಲಏ ಇಟ್ ಕಂಡ್ರೂ ನಾ ಬಂದಿ ಬಹಳ ದಿವಸವಾಯ್ತು.ಮನಿ ನೋಡ್ಲಿಲ್ಲ.ಎಲ್ಲ ನನ್ನ ಕೈಲಿ ಸಿಕ್ರು. ಗಂಡನ ಮನಿಗೆ ಹೋಗಬೇಕು. ಅಂತು.

ಗಾಡಿಗಟ್ಲೆ ಸಾಮಾನು ಸೇರಿಸಿ ಕೊಟ್ರು. ಮತ್ತೆ ಗಂಡ ಹೆಂಡ್ತಿ ಅತ್ತೆ ಮಾವ ಹೋದ್ರು ; ಅರಸು ಮನೆಲಿ ಯೆರಡ ದಿನ ಉಳಿದು.

ಹೇಳಿದವರು

ದಿ.ಗುರ್ಗು ತಿಮ್ಮಣ್ಣ  ಪಟಗಾರ,
ಹೋಸಕೇರಿ, ನುಕ್ಕೇರಿ, ತಾ. ಕುಮಟಾ.