ತಂದೆ- ತಾಯಿರಾಶಿ ಬಡವರಾಗಿರತ್ರು. ಅವರಿಗೆ ಬರೀ ಯೋಳ ಜನ ಗಮಡು ಮಕ್ಕಳು ಹುಟ್ತಾರೆ. ತಾಯಿ ಗರ್ಭಿಣಿ ಇರ‍್ತದೆ. ” ನಾವಿಲ್ಲೇ ಇದ್ರೆ ತಂಗಿ ಹುಟ್ಟೂದೆಲ್ಲ. ತಂಗಿ ಹುಟ್ರೆ ಮರದಮೇನೆ ಮಶಿಲಿ ಬರಿರಿ, ತಮ್ಮ ಹುಟ್ಟರೆ ಶೇಡಿಲ್ ಬರಿರಿ” ಅಂದೆ ಹೇಳಿ ಊರ್ ಮೇನ್ ಹೋತ್ರು.ರಾಗಿ ಕುಂಬ್ರಿ ಬೆಳೆಸತ ಬೆಟ್ಟದ ಮೇನ್ ಉಳೀತ್ರು.

“ತಂಗಿ ಹುಟ್ಟಿದೆ, ಮಶಿ ಬರದೆ ಬನಿ” ಅಂದಿ ಕಲಾಸಿಗೊಳ ಮಮದಿ ಹತ್ರೆ ಹೇಳಿರತಾರೆ. ಶೇಡಿನೇ ಬರದೆ ಬರತಾರೆ. ಮರದ ಮೇಲೆ ಆಏಡಿ ಬರದಿದೆ ನೊಡಿ, ” ತಮ್ಮ ಹುಟ್ದ” ಹೇಳಿ ಮನಿಗೆ ಹೋಗಬಾರದು, ತಮ್ಮಗೇ ಆಸ್ತಿ ಇರಲಿ ಅಂದಿ ಅಲ್ಲೇ ಇರತಾಕೆ ಸಣ್ಣ ಆಸ್ತಿ ಹೇಳಿ.

ತಂಗಿ ಯೆನ್ ಮಾಡ್ತದೆ? ” ಆಡೂಕೆ ಯೇನಾರೂ ಇದ್ರೆ ಕೊಡಿ” ಅಂದಿ ತೀಡ್ತದೆ. ಆವಾಗೆ ಅವಳ ಕೈಲಿ ಪುತ್ಲಿಸರ ಕೊಡ್ತದೆ. ತಾಯಿ ಅದು ಮಣ್ಣೊಳಗೆ ಹುಗ್ದಿಡ್ತದೆ. ಆಡ್ಕ ಬಂದ್ ನೋಡ್ತದೆ. ಕಾಕಿ, ಅದು ಮಣ್ಣೊಳಗೆ ಹುಗ್ಯೂದೆ ನೋಡಿ, ತಿಂಡಿ ಪೊಟ್ಲೆ ಹೇಳಿ, ಪೊಟ್ಲ ಕಚ್ಕಂಡಿ ಹಾರಿ ಕಾಕಿ ಅಣ್ಣೊರಿದ ಮನಿ ತುದಿ ಮೇನ್ ಹತ್ಕಂಡಿ ಬಿಚ್ತು. ತಿಂಡಿ ಅಲ್ಲ ಹೇಳಿ, ಅಲ್ಲೇ ಬಿಟ್ತು. ಕಾಗಿ ಹಾರ ಹೋಗಿ ಬಿಟ್ತು. ತಂಗಿ ತೀಡ್ತಾ ಹೋಗಿ, ಅಣಿದಿರು ಇರು ಮನಿಯ ಹಿಂದ್ಗಡೆ ಹೋಗಿ ತೀಡ್ತದೆ. ಆವಾಗ ರಾಗಿ ಕುಂಬ್ರಿ ಬೆಳಸವವರು ಅಣ್ಣದಿರು ರಾಗಿ ಬೆಳಕಂಡಿ ಅದೇ ತಿನ್ನುಕೆ ಮನಿಗೆ ಹೋದೊರು ರಾಗಿ ಮಾಡ್ಕಂಡಿ, ಬೀಸ್ಕಂಡಿ ಗಂಜಿ ಮಾಡ್ಕಂಡಿ ಊಟ ಮಾಡ್ತಾರೆ.

“ಇದ್ಯಾರು ತೀಡ್ವೋಳು” ಹೇಳೀ ಹೋಗಿ ಹಿಂದಾಗಡೆ ಹೋಗಿ ನೋಡ್ತಾರೆ. ” ಯೆಂತಕೆ ತೀಡ್ತೆ ತಂಗಿ ?” ಹೇಳಿ ಕೇಳ್ತಾರೆ. ನನ್ನ ತಾಯಿ ಪುತ್ಲಿಸರ ಕೊಟ್ಟಿತ್ತು. ಕಾಗಿ ಹೊತ್ಕೊಂಡ್ ಬಂದಿ ನಿಮ್ಮನಿ ಮೇನ್ ಹೊತಾಕಿಟ್ಟದೆ. ಅದ್ ವಂದ್ ತೆಕ್ಕೊಡಿ” ಅಂತು ಒಬ್ಬ ಮನಿ ಮೇನ್ ಹತ್ತಿ ಪೊಟ್ಲೆ ತಕಂಡಿ ಇಳ್ದೆ ಇಟ್ಟ. ನೋಡಿದ್ರು ಪುತ್ಲಿಸರ ” ಓಹೋ ! ತಾಯಿಗೆ ಹುಟ್ದವಳು ತಂಗಿನೇ ಇರಬೇಕು. ತಮ್ಮ ಅಂದಿ ಶೇಡಿ ಬರದೆ ಹೋಗಿರು; ನಾವು ಮನೆಗೆ ಬರಬಾರದು ಅಂದಿ ಮಶಿ ಬರದ್ದೆ ಶೇಡಿ ಬರದೆ ಹೋದ್ರು. ನಾವು ಬತ್ರು ಪಾಲ್ಗೆ ಹೇಳಿ ಮಶಿ ಬರಿಲಿಲ್ಲ. ಶೇಡಿ ಬರೆದ್ರು. ಊರ್ ಮೆನ್ ನಾವೇ ಆಳೂಕಾಯ್ತು ಹೇಳೀ ಮಶಿ ಬರದಿರು. ತಂಗಿ ಇಟ್ಕಂಡಿ ಇಲ್ಲೇ ಉಳಿವ” ಹೇಳೀ ಅಲ್ಲೇ ಉಳಿದ್ರು.

ತಂಗಿ ಬಂದ ಮೇನೆ ಹುಡಗ್ರು ಮದ್ಯಾಗು ಮೊದ್ಲೇಯ ಅವರ ಮನ್ಗೆ ವಂದ್ ರಾಜ ಬತ್ತ. ಅಣದಿರು ಕುಮರಿ ಕೆಲ್ಸಕೆ ಹೋಗಿದ್ರು. ಇದ್ ವಬ್ಳೇ ಮನಿಲಿ ಇದ್ದಿತು. ರಾಜ ಬಂದ ಹೇಳಿ ಇದು ಹೊರಗೇ ಬರದೆ ” ನಾ ವಬ್ಳೇ ಇದ್ದೊಳು” ಹೇಳಿ ಹೊರಗೇ ಬರುದೆಲ್ಲ.ಆ ಕಟ್ದಿ ಕುದ್ರಿ ಹಗ್ಗ ಹರಕಂಡ ಹೋಗಿ ಯೇನ್ ಮಾಡ್ತದೆ? ಆಲ್ ಹೋವೆನ ಗಿಡ ತಿಂತು. ಬಂದಿ ತಂಗಿ ಆಚೆ ಕೆನ್ನಿಗೆ ಈಚೆ ಕೆನ್ನಿಗೆ ಹೊಡೀತದೆ. ಕೈನ್ ಐದೂ ಬೆಳ್ಳು ಯೆರಡೂ ಬದಿಗೂ ಯೆದ್ ಬಂತು.

ರಾಜ ಮನೆಗೆ ಹೋಗಿ ಮಲಗಿದ. ಯೇಳು ಅಂದ್ರೆ ಯೇಳಲೆಲ್ಲ. ಅವ ಯಾಕೆಯೇಳುದೆಲ್ಲ ಕೇಳ್ರಿ. ಅಲ್ಲೊಂದೆ ಹುಡ್ಗಿಯದೆ, ನಾ ಅದೇ ಮದಿಯಾಗ್ ಬೇಕು. ಅಂದಿ ಹೇಳಿ ಕಳ್ಸತ. ಅರಸು ಯೆರಡ್ ಮಂದಿ ಆಳ ಕಳ್ಸಿ ಆವ್ರ ಮನಿದಲ್ ಹುಡ್ಗಿ ಅದ್ಯೋ ಯೇನು ಹೇಳಿ ನೋಡ್ಕಂಡ್ ಬನಿ ಹೇಳಿ ಕಳ್ಸತ.ಆಳ್ ಬಮದೊರು ಕೇಳದ್ರು. ” ಇಲ್ಲಿ ಯಾವ ಹುಡ್ಗಿರೆಲ್ಲ. ನಾವೇ ಅಣ್ನ ತಮ್ಮದಿರು ಯೇಳ್ ಜನ ಇದ್ದವ್ರು. ಹೇಳಿ ಹೆಳ್ತಾರೆ. ಅಣಿದಿಕ್ಳು ಹೇಳಿ ಕಳ್ಸರು. ಯೇಳ

ಜನ ಮಾತ್ರ ಅಣ್ನ ತಮ್ಮದಿರು ಯಾವ ಹುಡ್ಗಿರೆಲ್ಲ ಅಂದಿ ರಾಜ್ನ ತಂದೆ ಅರಸು ಕೈಲಿ ಹೇಳತ್ತಾರೆ. ಇವ ಮಗ ರಾಜು” ಅದೇ! ನನ್ನ ಕುದ್ರಿ ಮೊಕ ನೋಡಿ,ಯೆರಡು ಬದಿಗೆ ಹೊಡ್ದದೆ. ಯೆರಡೂ ಬದಿಗೂ ಹುಡುಗು ಬೆಳ್ ಯೆದ್  ಬಂದದೆ ನೋಡಿ, ಅಂತ ಅಂದ. ಆವ್ರೆ ಹೋಗಿ ನೋಡ್ರು.” ಹೌದು: ಯೆರಡು ಬದಿಗೂ ಅದ್ರ ಬೆಳ್ಳೆ ಯೆದ್ ಬಂದದೆ” ಅಂದ್ರು.

ಹುಡ್ಗಿ ಕೇಳೋಕೆ ಬಂದ್ರು. ” ನಮ್ಮ ನಿಲಿ ಇಲ್ಲ ಹುಡ್ಗಿ” ಹೇಳಿರತು. ಅವ್ರ ಮನಿಲೆ ಹುಡ್ಗಿ ಯೆಲ್ಲ ಅಂದ್ರಲ ಅಲ್ಲಿ ಹುಡ್ಗಿಯದೆ ಅಂದ ಹೇಳದ್ರೆ ಮಲ್ಗಿ ಮೊಕಿ ದಮಡಿ ನಾಡದೆ ಅಳ್ಳ ಮೊಕ ದಂಡಕಟಿ ಕೊಟ್ರು ” ಅದ ಬೆಳಗಾಗುವರೆಗೆ ಅರಿತು ಅಂದ್ರೆ ನಿಮ್ಮ ನಿಲ್ಲೆ ಹುಡ್ಗಿಯದೆ, ಇಲ್ಲಾಂದ್ರೆ ಹುಡ್ಗಿಯೆಲ್ಲ ಅಂದಿ ಆಯ್ತು”. ಅಣ್ನೋರು ನಾಳಿಗೆ ಯಾವ್ದು ಸುದ್ದಿ ಹೇಳತ್ರು. ” ಮನಿಗೆ ಬಂದು ಸುದ್ದಿ ಮುಟ್ಸಿದ್ರು. ಬಂದಿ ಅನ್ನೋಕೆ ಹೇಳಿತ್ರು. ಅಣ್ನೋರ ಮನಿಗೆ ಬಂತ್ರು. ಬಂದ್ಕಂಡಿ ತಂಗಿಹತ್ರ ಹೇಳತ್ರು. ಮಲ್ಗಿ ಮೊಕ್ಕಿದಂಡಿ ಕೊಟ್ತಾರೆ ಅರಸ್ರು. ಅದ್ ಮೆಳಗಾಗುವರಿಗೆ ಅಲಿದ್ರು ಹುಡ್ಗೆಯಲ್ಲ ಅಂದಾಯ್ತು” ಅಂತ್ರು. “ಮಲ್ಗಿ ಹೂ ದಂಡಿ ಕೊಟ್ರು. ಆಗೆ ಯೇನ್ ಮಾಡ್ಬೇಕು.?”

ಅಂದಿ ಅನದಿಕ್ಳ ಹತ್ರ ಕೇಳ್ತು. ಕಟ್ ಕೊಡಿ ಅಂದೆ. ಹೇಳಿ ಅಂದಿ ಅನದಿಕ್ಳ ಹತ್ರ ತಂಗಿ ಹೇಳ್ತು.

ಆವಾಗ ಮರು ದಿವಸ ರಾಜ್ನ ಮನಿಗೆ ಯೇಳೂ ಜನ ಹೋತರೆ, ಮಲ್ಗಿದಂಡಿ ಕಟ್ ಕೊಡ್ತ. ತಕ ಬಂದಿ ತಂಗಿ ಕೈಲಿ ಕೊಡ್ತಾರೆ, ರತ್ರಡೀ ಬಾಯೊಳ್ಗೆ ಹಾಕಂಡಿ ಮಲಿ ಕಳ್ತು. ಮಲ್ಲೂವರಿಗೆ ಬೆಳ್ಗಾಗೂವರಿಗೆ ಅಲಿಲೇ ಇಲ್ಲ. ಆಳ್ಳದೆ ಉಳಿತದೆ, ಇವ್ರ್ ” ಮನಿಲಿ ಹುಡ್ಗಿ ಯೆಲ್ಲಾ, ಇದ್ದದ್  ಮಳ್ಳೇ ಸುಳ್ಳು” ಅಂದ್ಕಂಡಿ ಸುಮ್ನೇ ಉಳೀತ್ರು ಅವ್ರು.

ಆವಾಗ ಮಲ್ಗಿ ಹೂ ರಸ ನುಂಗಿ ಬೆಳಗಾಗುವರೆಗೆ ಗರ್ಭಿಣ್ಯಾಗೆ ಬಿಟ್ತದೆ ಮರದಿವ್ಸ್  ವಂಬತ್ ದಿವಸಕೆ ಅನ್ನೊರೆ ಕೆಲಸಕೆ ಹೊಗಿ ಬರುರೂಳ್ಗೆ ಬಾಳಂತ್ಯಾಯ್ತು. ಹುಡ್ಗಿ ಹುಟ್ದದೆ. ಶಿಶು ತೀಡವಾಗ ಕಣ್ಣೀರು ಮುತ್ತಾಗ ಬಿಡ್ತದೆ. ಮುತ್ತ ತೆಗ್ದು ಪೆಟ್ಗಿಲೆ ಹಾಕ್ತು. ಮುತ್ತಾರು ಸುರಿ ಕುತ್ಗಿಗೆ ಹಾಕ್ತ ಅಂದೆ ಸುರೀತತ ಇರಬೇಕಾದರೆ ಅಣ್ನೋರೆ ಬಂದ ಬಿಡ್ತಾರೆ. ಪೆಟ್ಗೆಲೆ ಹಾಕ ಬೇಕಾದರೆಜೂಜಿ ಅದರ ಶಿಶು ತಲಿಗೆ ಹೆಡ್ತದೆ. ಹೆಟ್ದಿ ಕೂಡ್ಲೇ ಕದ ಹಾಕಿ ಬೀಗ ಹಾಕ್ ಬಂದ ಬಿಟ್ತು.

ಅಣ್ನೋರ್ ಊಟ ಮಾಡ್ಕ ಮತ್ ಕೆಲ್ಸಕೆ ಹೋತ್ರು. ಅಣ್ಣೋರ್ ಕೆಲ್ಸಕೆ ಹೋದ ಮೇನೆ ಪೆಟ್ಗಿ ಬೀಗ ತೆಗೀತು. ಹುಡ್ಗಿ ಸತ್ತೇ ಹೋಗದೆ. ಕಡಿಗೆ ಯೇನ್ ಮಾಡುದು ಅಂದ ಹೇಳಿ ಕಿರಿ ಅಣ್ಣ ರೂಮ್ನಗೆ ವಂದ್ ಮೋಲಿಲಿ ಹೊಂಡ ತೆರದಿ ಪೆಟ್ಗಿ ಗೂಡೆ ಹುಗದಿ ವರದಿಮಾಡ್ತು ನಲವ.ಕಡಿಗೆ ಯೇಳೂ ಜನ್ರದೂ ಮದಿಯಾಯ್ತು.

ಅಣ್ನೋರ್ ಕೈಲಿ ಹೇಳ್ತು ಅದು. ಅಣ್ನೋರು ಯೆಲ್ಲೆ ನಿಮ್ಮ ಹೆಂಡ್ರ ಹತ್ರ ನಿಮ್ ರೂಮ್ ಕೀಲಿ ಕೊಟ್ಟಿ ನಿನ್ ರೂಮ್ ಅಣ್ಣಾ, ಕಿರಿ ಅಣ್ಣಾ ಕೀಲಿಯ ನಿನ್ ಹೆಂಡ್ತಿ ಹತ್ರ ಕೊಡಬೇಡ ಮತ ಬಾಕಿಯೋರ ಹತ್ರೆ ” ನಿಮ್ಮ ಹೆಂಡ್ರ ಹತ್ರೆ ಕೀಲಿ ಕೊಡೊಕಡ್ಡೆಲ್ಲಾ” ಹೇಳ್ತು. ತಂಗಿ ಹತ್ರ ಕೇಳತ್ರು. ಯೆಂತಕ್ಕೆ ಕೀಲಿ, ಯೆಂತಕೆ ಹೇಳಿ ನಿನ್ ಗಂಡ್ ಕೊಡುದೆಲ್ಲ? ನೀರ್ ತಕಂಡ ಹೋಗ್ ಕೊಡಬೇಡ. ಕೀಲಿ ಯೆಂತಕ ಕೊಡುದೆಲ್ಲ?

ವಂದಿವ್ಸ ತಂಗ್ ಸತ್ ಹೋಯ್ತು. ಹಿಂಗ್ ಹೇಳದೆ ಹೇಳಿ ಅಕ್ಕದಿರು ತಂಗಿ ಹತ್ರೆ ” ನೀನು ನೀರ್ ತಕಂಡ್ ಹೊಗ ಕೊಡಬೇಡ ಕೀಲಿ ಕೊಡುದೇಯ ಹೇಳಿ ಹೇಳು” ಅಕ್ಕದಿರ ಹೇಳ್ತಾರೆ. ನೀರ್ ಕೊಡದೆ ಕೀಲಿಕೊಡೂದೇಯ ಹೇಳಿ ಹಟ ಮಾಡಿ ಕೂತ್ಕಂಡ್ತು. ಕಿರಿ ಅಣ್ಣ ಅದ ಯೇನ್ ಹಟ ಮಾಡ್ತೆ ನೀನು, ಕೀಲಿ ತಕ ನಿನ್‌ದಿರಿಸಾಗೆ ಹಾಕ” ಹೇಳಿ ರೂಮ್‌ನ ಕೀಲಿ ಕೊಟ್ಟ ಕೊಟ್ಟ ಕೆಲ್ಸಕೆ ಹೋದ.

“ಕೀಲಿ ನಿನ್ ಯದಿಗೆ ಹಾಕ್ಕೋ” ಹೇಳಿ ರೂಮ್‌ನ ಕೀಲಿ ಕೊಟ್ಟ ಗಂಡ ಕೆಲ್ಸಕೆ ಹೋದ ಮೇನೆ ಅಕ್ಕ ತಂಗ್ದಿರು ಕೂಡಿ ಯೆಲ್ಲಾ ರೂಮ್‌ನಾಗೆ ನೆಲ ಜಪ್ಪುಕೆ ಹತರು. ಜಪ್ಪಿ ನೋಡ್ತರೆ. ವಂದ್ ಬದಿಗೆ ಡುಬಿ ಡುಬಿ ಆಗ್ತದೆ. ಆಗಿದಿ ನೋಡ್‌ದ್ರು, ವಂದ್‌ ಪೆಟ್ಗಿ ಶಿಕ್ತದೆ. ಆ ಪೆಟ್ಗಿ ಕೀಲಿ ಕಲ್‌ ಕಲ್ಲಿಂದ ಜಪ್ಪಿ ಕೀಲಿಮುರಿತಾರೆ, ಪೆಟ್ಗಿಲಿ ಸತ್ ಹುಟ್ಗಿ ಅದ್ಯಲ? ನಿನ್ ಗಂಡ ನಿಂಗ್ ಹೇಳ್ಲಿಲ್ಲ. ನಿನ್ ಗಂಡ ವಂದ್ ಮದಿಯಾಗಿದ; ನಿಂಗೆ ಹೇಳ್ಳಿಲ್ಲ. ನಿಂಗ್ ಗುತ್ತಾಗುಕ್ಕಿಲ್ಲ ಹೇಳಿ ರೂಮ್ನ ಕೀಲಿ ಕೊಡ್ಲೆಲ್ಲ. ಹೇಳಿ ಹೇಳ್ತರೆ, ಶಿಶುನ ತಲಿಲಿ ಜೂಜಿ ಹೊಡ್ದ ಕಂಡ್ತು ಅವ್ರಗೆ. ಸೂಜಿ ತೆಗ್ದ ಕೂಡ್ಲೆ ಜೀವ ಬರ‍್ತದೆ. ಹುಡ್ಗಿ ತೀಡ್ತದೆ. ಪೆಟ್ಗಿಲಿ ಇದೆ ಹುಡ್ಗಿ. ಇದ್ದಲ್ಲೇ ದಿಡ್ಡಾಗ ಬಿಟ್ಟದೆ. ಯೇನ ಮಾಡ್ತಾರೆ ಅವರು? ಹುಡ್ಗಿ ಪ್ರೀತಿ ಮಾಡಿರು. ತಂಗಿಗೆ ಹುಡ್ಗಿ ಇರಬೇಕು. ಚೆಂದದೆ. ಮುಂದೆ ನಡಿತದೆ ಮಾತಾಡ್ತದೆ. ಮಶಿ ತೆಯ್ದು ಯೆಲ್ಲಾ ಇಡೀ ಮೈಗೆ ಬಡ್ಡಿಡ್ತರು. ಅಣ್ನದಿರ್ ಹೆಂಡ್ರು ಅವ್ರ ಬರುವರಿಗೆ ಕೋಲ್ ಕೊಟ್ಟ ಬಿತ್ತಕಾಯಿ ಹೇಳಿ ಬತ್ತ ಕಾವುಕೆ ಕುಳ್ಸಾರೆ. ಗಂಡದಿರು ಬಂದೊರು ಬಂದ್ಕಂಡಿ, ಕರೀಗುಂಬರಿ ಯಾರ್ ಹುಡ್ಗಿ ಇದು?ಅಂದಿ ಹೇಳ್ತರೆ. ” ವಂದ ಹುಡ್ಗಿ ಬಂದಿತು ಇಲ್ಲಿ. ತಮ್ಮಲ್ಲೇ ಬಂದ ಉಳಿತೆ ಅಂದ್ ಹೇಳ್ತು. ಬತ್ತ ಕಾವುಕೆ ಅಂದಿ ನಾವ್ ಇಟ್ಕಂಡ್ರು” ಅಂದಿ ಹೇಳ್ತಾರೆ. ಆಗ್ಲಿ ಅಂದೆ ಹೇಳತಾರೆ.

ವಂದ್ ಮಾದೊಡ್ ಜಾತ್ರೆಯಾಗ್ತದೆ. ” ಜಾತ್ರಿಗೆ ಹೋಗ್ವ” ಅಂದಿ ಹೆಂಡ್ರ ಕೇಳಿತ್ರು; ” ನಾವ್ ಬರೂದೆಲ್ಲ” ಹೇಳ್ತಾರೆ. ಹಿಂಡ್ರು ಅಂದ್ ಕೂಡ್ಲೆ ” ನೀವ್ ಬರದಿದ್ರೆ ನಿಮ್ಗ್ ಯೇನ್ ತರ‍್ಬೇಕು ?” ಅಂತ ಹೆಂಡ್ರ ಕೈಲಿ ಕೇಳ್ತಾರೆ. ನಮ್ಗ್ ಬಳಿ, ಕುಪ್ಸದ ವಸ್ತ್ರ ಬಟ್ಟೆ ತಕಬನಿ ಅಂದ ಹೆಳತ್ರು ಹಿಂಡ್ರು. ಹಡ್ಗನ್ ಮೇನ್ ಗಂಡದಿರು ಯೇಳೂ ಜನ ಹೋದ್ರು, ಹಡ್ಗ ಹತ್ದ ಮೇನೆ ಹಂಬ್ಲಾತದೆ ಕರೀ ಹುಡ್ಗಿ ಹತ್ರ ಎನ್‌ಬೆಕು ನಿನ್ಗೆ ಅಂದ ಕೇಳೂ ಬಗ್ಗೆ ಅಂದು ನಿನ್ಗೆ ಯೆನ್ ತರಬೇಕು ಕೇಳ್ತ ಕಿರಿ ಮಾವ. ನನ್ಗ್ ಯೇನೂ ಬೇಡ. ಕಟ್ಟಿ ಮೇನ್ ಬಾವಾಜಿರತ. ಅವ್ನ ಹತ್ರ ಹೊಗಿ ಅವ್ನ ಕಲಿ ವಂದೆ ಚಕಮಕಿ ಕಲ್ ಕೊಡಿ ಅಂದ್ರೆ ಕೊಡತಾನೆ ಅವ. ಕಿರಿಯವ ಬರತ “ಆಗುದು ಅಂದಿ ಬರತಾರೆ. ಅವರು ಆವಾಗ್ ಸಾಮಾನ್ ತಕಂಡ್ ಹಡ್ಗ ಹತ್ರು. ಹುಡ್ಗಿ ಚಕಮಕದ ತಕಲ್ ತಕಂಡ್ ಬಾ ಹೇಳದೆ” ಅಂದ್ ಹಂಬ್ಲಾದೆ ಅವರಿಗೆ.

ಕಟ್ಟಿ ಮೇನ್ ಬಾವಾಜಿ ಕೂತನೆ. “ಚಿಕಮಕದ ಕಲ್ ಕೊಡು” ಅಂದ್ ಹೇಳ್ತಾರೆ. ಕಿರಿ ಮಾವ ಕೇಳ್ತಾನೆ. ಬಾವಾಜಿ ಕೂಡೆ ಅವ ಹೇಳ್ತ. ಚಕಮೊಕದ ಕಲ್ಲು ನಾಗದೇವತೆ ಕಲ್ಲು ಚಕಮೊಕದ ಕಲ್ ಕೊಟ್ರೆ ನೀವ್ ತಂದೊರೆ ಹೋದೋರು ಎಚ್ಚರಾಗೆ ಉಳಿಬೇಕಾಗ್ತದೆ. ಅದ್ ಮಾತಾಡ್ತದೆ.ಅಂದ ಬಾವಾಜಿ. ಬೆಕು ಅಂದ. ಕೊಟ್ಟ ತಕಬಂದ್ರು. ಹುಡ್ಗಿ ಹತ್ರ ಕೊಟ್ರು. ನಾಗದೇವತೆಯಾದವಳೇ ಕಲ್ ಮಾತಾಡ್ಸಬೇಕು. ಮತ್ಯಾರ ಕಲು ಚಕಮೊಕದ ಕಲ್ಲ ಮಾತಾಡ್ಸೂಕಾಗುದಿಲ್ಲ. ಚಕಮೊಕದ ಕಲ್ ಕೊಟ್ರು. ಅದ್ರ ಹತ್ರ ಕಲ್ ಮಾತಾಡ್ತದೆ ಕೇಳಿ ಅಂತು ಹುಡ್ಗಿ. ” ಕಲ್ ಮಾತಾಡ್ತದ್ಯೆ” ನೆಗ್ಯಾಡ್ತಾರೆ ಅವರು.

ರಾತ್ರಿಗೆ ಹಡ್ಗೆನ ಮೆನೆ ಹುಡ್ಗಿ ಹೆರಗೆ ಮನ್ಗತದೆ ಅವ ಕಿರಿಮಾವ ಯಚರಾರತಾನೆ.ಅವ ಪಟ ಮಸ್ದ ಕೂತ್ಕಟ್ತಾ ಯೆಚರಾಕಂಡೇವ ಕೇಳೇ ಕೇಳೇ ಚಕಮೊಕದ ಕಲ್ಲೇ ಹುಡ್ಗಿ ಕಲ್ ಹತ್ರ ಹೇಳ್ತದೆ. ಕಲ್ ಹೂ ಹಾಕಂತೆ ಹೊತದೆ. ಹಿಂದಿಂದೆಲ್ಲಾ ಹೇಳು ಅಂದಿ ಕಲ್ಲು ಹೇಳತದೆ. ಹುಡ್ಗಿ ಹೇಳೂದ ಹೇಳ್ತಾ ಕೇಳ್ತಾ ಇರತದೆ. ಹಿಂದೆ ಯೇನೇನಾಗದ್ಯೂ ಅಟ್ಟೂ ಹೇಳ್ತದೆ. ಪ್ರತಿ ವಂದೂ ಹಿಂದಿಂದ್ಯೆಲ್ಲಾ ಹೇಳ್ತದೆ. ” ನನ್ಗೆ ಅದಾರ್ ಯಾವದೂ ಯೆಲ್ಲ ನಾನೂ ನಿನ್ ಹಾಗೇ ದೇವತ್ಯಲ್ಲ ? ನನ್ ವಂದ ಬಡು ಹೆಳ್ತು, ನಾಗದೇವತಿ ರೂಪ ಬಮದು ಅದು ತಿಂಬುಕೆ ಹಣಕತು. ಹಣಕತಾ ಅದ್ರ ತಿಂಬೇಕಂದಿ ನಾಗದೇವತೆ ಹೆಡಿಯೆತತಾ ಮೇನ್ ಹೋಗ್ತದೆ.ಹೊಂಕಾರಸತದೆ ನಾನೂ ನಾಗದೇವತ್ಯಲ್ಲ? ನನ್ ತಿನ್ನೂ ಅಂದ್ ಹೇಳ್ತದೆ ಅತ್ಯೊರು ಬಾಳ್ಯ ತ್ರಾಸ್ ಕೊಡ್ತಾರೆ. ಕಿರಿ ಅತ್ತೆ ವಂದೇಯ ನನ್ಗೆ ತ್ರಾಸ್ ಕೊಡದಿದ್ದೋಳು ನನ್ನ ತಿನ್ನು” ಅಂತದೆ. ಕಿರಿ ಮಾವ ಪಟದಲ್ಲಿ ನಾಗದೇವತೆ ಕೊಚ್ ಹಾಕ್ತ. ಕೊಚ್ ಹಾಕ್ ಬಿಟ್ಟು ಅಣ್ನೋರ ಯೇಳ್ಣಿದ ತಂಗಿ ಮಗಳು. ಮಲ್ಗಿ ಮೊಕಿರಸದಿಂದ ಹುಟ್ದವಳು. ಹೇಳಿ ಅಣ್ಣೋರ ಕಲೀ ಹೇಳ್ತಾ ಕಿರಿ ಮಾವ ಅದ್ರ ಮೀಸ್ಕಂಡ್ ಬಂದಿ ಪ್ರೀತಿಂದ ನೋಡ್‌ತ್ರು. ನೀನ್ ಮದಿಯಾಗಬೇಕು. ಚಲೋ ಗಂಡ್ತ ಹುಡುಕಿ ಮದಿ ಮಾಡ್‌ತ್ರು ಅಂದ್ರು. ಅದು ಮದಿಯಾಗುದೆಲ್ಲ. ನಾನು ನಾಗದೇವತಿ ಹಾಗೇ ಉಳಿವವಳು ಅಮದಿ ಹೇಳತದೆ. ಇವ್ರು ತಮ್ಮ ತಮ್ಮ ರೂಮ್‌ನಲ್ಲಿ ಉಳಿತಾರೆ.

ಹೇಳಿದವರು

ಸೌ. ಮಹಾದೇವಿ ಜಟ್ಟಪ್ಪ ಪಟಗಾರ ಮೊಸಳೆಸಾಲು
ಬರೆದುಕೊಂಡ ದಿನಾಂಕ ೧.೪.೨೦೦೧