ಬಡವರು. ಅವರಿಗೆ ಐದ್ ಜನ ಹುಡ್ಗರು. ತಂದೆ- ತಾಯಿ ತೀರ ಹೊಗಿಬಿಟ್ರು ಅವರು ಇನ್ನೊಬ್ಬರ ಮನಿ ಕೆಲ್ಸ ಮಾಡ್ಕಂಡ ಉಳಿತ್ರು. ಬೇಡವಳತಿ ಬೆಡೊಕೆ ಬರತದೆ. ಅವಳಿಗೂ ಯದ್ ಹೆಣ್ ಮಕ್ಳ. ರಾಶಿ ತೀಡ್ತದೆ. ಹೆರಿ ಹುಡ್ಗಿ. ಅದು ತ್ರಾಸ ಕೊಡಬೇಕಿದ್ರೆ ಯಾರಾರೂ ಕೇಳಿದ್ರೆ ಈ ಹುಡ್ಗಿ ಒಟ್ ಹೋಗೆ ಬಿಡ್ತೆ ಅಂತು. ಇವ್ರು ನಾನ್ ದುಡ್ ಕೊಡ್ತರು ಹೇಳ್ತರು. ” ನೀವು ದುಡ್ ಬೇಡ ಹೇಳಿ ಹುಡ್ಗಿ ಕೊಳಬದೆತ್ತು. ನೆರದೆ ಮಿಂದಿರೂದೆಲ್ಲ. ಅಡಿ ಯೆಲ್ಲ ಮಾಡ್ತದೆ. ಹೀಗೆ ಮಾಡ್ತಿರಬೇಕಾದರೆ ಇದು ಅವ್ನೋರು ಕೆಲ್ಸ ಮಾಡ್ವರಲ್ಲ. ನಾನೂ ಮನಿಗೆ ನೆಟ್ಟಗೆ ಹೋಗ್ತೆ” ಹೆಳ್ ಹೋಯ್ತು.

“ದುಡಬೇಡ, ಪಗಾರ ಬೆಡ. ಐದ್ ಶಶಿಕಟ್ ವಂದೇ ಕೊಟ್ರೆ ಸಾಕು” ಅಕ್ಕಿನೂ ಬೇಡ ಶಶಿಕಟ್ ವಂದೇ ಕೊಟ್ರೆ ಸಾಕು” ಅಂದ ಹೇಳ್ತದೆ. ತಕಬಂದಿ, ಕಿರಿಹುಡ ಮೈದ್ನನ ಕಟ್ಕಂಡ ಹೋಗಿ “ಗೆದ್ದಿ ನೆಟ್ಟಿ ಹಾಕ್ವ” ಅಂದ ಹೇಳ್ತದೆ. ಸರಿ ಮಾಡ್ ವಬ್‌ಳೇ ಗೆದ್ದಿಲೆ ಶಶಿ ನೆಡತು. ವಂದ್ ಗೆದ್ದಿ ತುಂಬ ಹೊಗಿ ಬಿಟ್ತು. ಕಡಿಗೆ ಮತ್ತೊಂದ್ ಬಟ್ರಮನಿಗೆ ಹೋಯ್ತು. ಯದ್ ಮನಿ ಕೇಲ್ಸ ಮಾಡಿ ಯದ್ ಶಿಶಿಕಟ್ನ ಅದೇ ರೀತಿ ಮಾಡಿ ಐದ್ ಗದ್ದಿ ಮಾಡುದ್ದು. ಬೆಟ್ಟದಲ್ಲಿ ಉಳ್ಕಂಡು.

ಶಶಿದೊಡ್ಡಾಗಿ ಕದ್ರೆ ಬಂದಿ ಗದ್ದಿ ಕೊಯ್‌ದ್ರು. ಗದ್ದಿಗೆ ವನಂದೆ ಕಂತ್ರಿ ಹಾಕಿ ಐದ್ ಕಣಜ ಕಟ್ರು. ಕಟ್ಟಿ ಐದ್ ಕನಜನ ಬತ್ತ ಅಕ್ಕಿ ಆಯ್ತು. ಯಾರ ಮನಿ ಕೆಲ್ಸಕೂ ಹೋಲೆಲ್ಲ. ಅವರು ನಾವು ಅವಳಿಂದೇ ಸಾವಕಾರಾದ್ದು. ಮೈನೆರದದೆ. ಅದ್ರ ಬೇರೆ ಕಡೆ ಮದಿ ಮಾಡಕೊಡುದ್ ಬೇಡ. ಅದು ಲಕ್ಷ್ಮಿ ಆದ ಹಾಗಾಯ್ತು. ಅಣ್ಣಾ, ನೀನೇ ಮದಿವ್ಯಾಗು ಹೇಳಿ, ಆಗುದು ಹೇಳಿ, ಅಣ್ಣಗೇ ಮದಿ ಮಾಡ್‌ತ್ರು. ಅಣ್ಣ ಮದಿಯಾದ ನಂತ್ರ ಯೆರಡು ವರ್ಸ ನಂತ್ರ ನಾಲ್ಕೂ ಮಂದಿ ಗಂಡುಮಕ್ಳ ಮದಿ ಮಾಡ್ತದೆ. ಅದ್ಕೆ ವಂದ್ ಹುಡ್ಗ ಹುಟ್ಟಿರತ. ದನಕರು ಯೆಲ್ಲಾ ಆಗ ಬಿಡ್ತದೆ ಕೊಟ್ಗೆಲಿ. ಆವಾಗೆ ಅತ್ತಿಗೆ, ನನ್ನ ಮದಿ ಸೀರಿ ಅಂದ ಹೇಳಿ ನಾಲ್ಕುಜನ್ರ ಮದಿಸೀರೀನೂ ಹೊಗಲಗೆ ಹಾಕ್ತಾರೆ. ಅಣ್ಣಗೆ ದೋತ್ರ ನಾಲ್ಕು ಹಾಕ್ರು. ನನ್ನ ಅತ್ಗಿ ಲಕ್ಷ್ಮಿ ಅತ್ಗಿಗೆ ಮಾತ್ರ ನೀವ್ ಯೇನೂ ಹೇಳೂಕೆಲ್ಲ ಹೇಳ್ತಾರೆ. ಹೆಂಗಸರು ಆಗೂದು ಅಂದಿ ಹೇಳ್ತಾರೆ. ಇದು ಹುಡ್ಗನ್ನ ನೋಡ್ಕಂಡ ಉಳೀತದೆ. ಅಡ್ಗಿ ಸೊಪ್ ಹೊರುದು, ಸಗಣಿ ತೆಗೂದು, ಸಾರಸೊದು ಬಾಕಿ ಹೆಂಗಸರದು, ಅಡ್ಗಿ ಮಾಡ್ವರು ಹೇಳ್ತಾರೆ. ಇದೂ ನಮ್ಮ ಹಾಗೇ ಬಂದಳಲ್ಲ ನಮ್ಮ ಹಾಗೇ ಕೆಲ್ಸ ಮಾಡೀರ ಯೆನಾಗ್ತದೆ ಅಂದಿ ಕೇಳ್ತಾರೆ. ಇದು ದಿನಾ ಕೇಳ್ತದೆ ಮಾತು. ನಾವು ಮನಿಲಿದೇ ಹೊರಟ ಹೋಗೂದು ಚಲೋ ಅಲ್ವ ಗಂಡದಿಕ್ಳು ಹೆಂಡ್ರಗೆ ಹೊಡೀತಾರೆ ನಾವು ಮೊದಲೇ ಹೋಗುದ ಚಲೋ ಅಲ್ವಾ? ಹೇಳ್ತದೆ.

ರಾತ್ರಿ ಮೇಲೆ ಹೊಂಟ್ ಹೋಗಬಿಡತ್ರು. ಆರಾಣ ಅಡವಿಲ್ ಹೋಗಿ ದುಕ್ಕ ಮಾಡ್ತದೆ ನಮಗೇನ ಗತಿ ಹೇಳಿ. ಅದ್ಕೆ ಕೂತಲ್ಲೇ ಮನಿಯಲ್ಲಾ ಬೆಕಾದ ಆಗ್ ಬಿಡ್ತದೆ. ಅಲ್ಲೆ ರಾಸಿ ರಾಸಿ ಜನ ಆಗ ಬಿಡ್ತಾರೆ. ಇಲ್ಲಿ ಇವ್ರ್ ಹೋದ ನಂತ್ರ ಯೇನೂ ಇರೂದಿಲ್ಲ.

ಅಕ್ಕಿ ಇಲ್ಲ. ದನ ಇಲ್ಲ ಕರಿಲ್ಲ, ತೋಟಿ ಇಲ್ಲ, ಮೊದ್ಲಿನ ಪರಿಸ್ತಿತಿನ್ ಬಂತಲ್ಲಾ ಹೇಳಿ ಕಟ್ಗಿಗೆ ಹೋಗತಾರೆ ನಾಲ್ಕೂ ಜನ. ಕಟ್ಗಿ ಬೇಕೋ ಅಂದಿ ತಿರಗವಾಗ ವಂದ್ ರೂಪಾಯಿ ಯೆಂಟಾಣಿ ಹೆಗೆ ಕೊಡ್ತಾರೆ. ವಸ್ತ್ರ ಬಟ್ಟೆ ತಕಳೂದಿಲ್ಲ. ತಲಿಚೌರ ಮಾಡೂಕು ದುಡ್ಡಿಲ್ಲ. ಹಿಂಡ್ರಗೂ ಶೀರಿಗೀರಿ ಯೇನೂ ತಂದ ಕೊಡುದಿಲ್ಲ. ಯಾರೂ ಕಟ್ಗೆ ತಕಳೂದೆಲ್ಲ. ಯೆಲ್ಲರೂ ತಕಂಡ ಬಿಟ್ರು.

ಅವ ಹೇಳ್ತಾನೆ ವಬ್ಬ (ಆರಾಣದಲ್ಲಿ ಉಳ್ಕಂಡರೆ ಸಿರಿಮಂತ್ರು) ಅವರ ಮನಿಗೆ ದೇವಕಾರ್ಯ ಆಗ್ತದೆ ದೊಡ್ಡದು ಅಂದಿ ಹೇಳ್ತಾನೆ. ಆಯ್ತು ಅಂದಿ ನಾಲ್ಕೂ ಜನ ಹೋಗ್ತಾರೆ. ಅವ್ರ ಮನೀಅದ್‌ಕಂಡೆ ಹೆಂಗ್ಸರ ಕೈಲಿ ಹೇಳ್ತದೆ.ಅವರು ಕಟ್ಗೆ ಹೊರಿ ತಕಂಡ ಒಂದೂರ ಕರಕಂಬಂದ್ರು, ಅದ್ಕೆ ಗುತ್ತಾತದೆ ತನ್ ಮೈದುದಿಕ್ಳೇ ಅಂದಿ. ಹೆಚ್ ದುಡ್ ಕೊಡ್ತದೆ ಕಟ್ಗಿ ತರಬೇಡಿ, ನಾಳಿಕೆ ನಮ್ಮ ಮನಿಲಿ ದೇವಕಾರೈದೆ. ಹೆಂಡ್ರನೂ ಕರಕಂಡಿ ಊಟಕೆ ಬನಿ ನಾಳಿಕೆ ಹೇಳ್ತದೆ. ಆವ್ರ್ ಆಯ್ತು ಹೇಳಿ ಅವರು ಹೋತಾರೆ. ದುಡ್ ಹೆಚ್ ಕೊಟ್ರಲ, ಯೆನ್ ವಳ್ಳೀ ಮಂದಿ ಹೇಳ್ ಹೇಳ್ತಾರೆ. (ಕಾಣ್ಸಿಕೊಳ್ಳುದಿಲ್ಲ). ಹೆಂಡ್ರಿ ಕೈಲಿ ಹೇಳ್ತಾರೆ “ನಿಮ್‌ನೂ ಕರಕಬಾ ನಾಳೀಕೆ” ಹೇಳ್ ಹೇಳ್ತಾರೆ. ಅಂದ್ರು ಕರಕಂಡ ಹೋತಾರೆ ಅವ್ರ ಮನಿಗೆ.ಕೆಲ್ಸಿ ಕಲಿ ವಬಬ್ರಂತೆ ತಲೆ ಚೌರ ಮಾಡಿ ಗಡ್ಡ ತೆಗಿ ಹೆಳ್ತದೆ. ಕೆಲ್ಸಿ ವಬಬ್ರಂತೆ ತಲಿಚೌರ, ವಬಬ್ರಂತೆ ಗಡ್ಡ ಮಾಡ್ತ. ಮಿಂದ್ಕಂಡಿ ಬನಿ ಅಂದ ಹೇಳ್ತದೆ. ಹೆಂಗ್ಸರೂ ಮಿಂದ್ಕಂಡ ಬರ‍್ತಾರೆ. ಹೆಂಗ್ಸರೆಗೆ ಸೀರೆ ಲಂಗ ಕೊಡ್ತದೆ. ಇವ್ರಿಗೆ ಪಂಜಿ, ಅಂಗಿ ಕೊಡ್ತದೆ. ಗಂಡ್ಸರಿಗೆ ಕಡಿಗೆ ಊಟಕೆ ವಳಗೆ ಅವ್ರಗೆ ಬಾಳಿ ಹಾಕಿ ತಾನೇ ಬಟ್ಸವವಳು, ನೀವ್ ವಳ್ಗ ಬರಬೇಡಿ ಹೇಳ್ತದೆ. ಇದು ವಂದ್ ಕಿರಿ ಮೈದ್ನಿ ಸೀರೆ ಉಟ್ಕಂಡ್ ಬಟ್ಸತಾಳೆ ಅಂದ. ಮತ್ತೊಂದ ಸಲ ಬರವಳು ಮತ್ತೊಂದು ಮೈದ್ನಿಸೀರಿನೂ ಉಟ್ಕಂಡಿ ಬಟ್ಸತಾಲೆ. ಹಾಗೇ ಮಾಡಿ ನಾಲ್ಕೂ ಮದಿಲಿ ಕೊಟ್ಟ ಸೀರಿನೂ ಉಟ್ಕಂಡ್ ಬಡ್ಸತಾಳೇ, ಎಲ್ಲ ಊಟದ ಕೂಡ್ಲೆ ಕೂರಸಕಂಡಿ ಜನ ಮುಂದೆ ಹೇಳ್ತದೆ. ನನ್ನ ಮೈದ್ನ ಮೈದ್ನಿದಿಕ್ಕಳು, ನಂಗೆ ನೀವೇನಾದ್ರೂ ಹಿಂದೆ ಹೇಳದ್ರೂ ಈಗ ನನ್ಗೆಯೇನೂ ಹೇಳ್ತದೆ. ಅಡ್ಗಿ ಕಾಲ್ಗೆ ಬಿದ್ದಿ ನೀನೇ ದೇವ್ರು ಅಂದೆ ಹೇಳಿ ಉಳಿತಾರೆ ಅಂದ್ರು.

ಹೇಳಿದವರು :
ಸೌ. ಮಹಾದೇವಿ ಜಟ್ಟಪ್ಪ ಪಟಗಾರ ಮೊಸಳೆ ಸಾಲು,
ತಾಲೂಕು ಕುಮಟಾ ಅವರ ಮನೆಯಲ್ಲಿ ಹೇಳಿಸಿ ಬರೆದುಕೊಂಡದ್ದು,
ದಿ. ೨. ೪. ೨೦೦೧