. ಶಿವನ ಹುಲಿ ಹಜರತಲಿ

ಸರಜರಸ ಮೌಲಾ ಇವರ ಸರಿಯೊಳು ಸಮರ‍್ಯಾರಿಲ್ಲಾ

ಭೂಮಿ ಮೆಟ್ಟಿ ಸೀಳಿದಾರೋ ಪಾತಾಳನೆಲ್ಲಾ ಸೋಸಿದಾರೋ
ಅಲ್ಮ ಪ್ರಭುವಿನ ಕಲ್ಮ ಸಾರುವ ಜನರಿಗೆಲ್ಲಾ ತಿಳಿಸಿದಾರ
ಶ್ರೇಷ್ಟರೆನಿಸಿದ್ರೊ ಮೌಲಾ ಅಲಿ ಹೈದರ ಹಜರತ ಮೌಲಾ
ಇವರ ಸರಿಯೊಳು ಸಮರ‍್ಯಾರಿಲ್ಲಾ
ಏಳು ಅಂತಸದಲ್ಲಿ ತಿರುಗಿ ಗಗನದಲ್ಲಿ ಗಮಸಿದರೋ ಹೋಗಿ
ಗುಡಗ ಹೊಡೆದಂಗಾಯ್ತೊ ಮಂಡಲದೊಳಗ ಹತ್ತಿತೋ ಬ್ಯಾಗಿ
ಶೌರ‍್ಯೇ ಸಾರ‍್ಯಾರೋ ಮೌಲಾ ಅಲಿ ಹೈದರ ಹಜರತ ಮೌಲಾ
ಇವರ ಸರಿಯೊಳು ಸಮರ‍್ಯಾರಿಲ್ಲಾ
ಹರನು ಒಲಿದಾರಿವರ ಮ್ಯಾಲಾ ಶಿವನ ಹುಲಿ ಅನಿಸಿದಾರೊ ಮೌಲಾ
ಪೂರ್ವ ಪಶ್ಚಿಮ ಉತ್ತರ ದಕ್ಷಿಣ ನಾಲ್ಕು ದಿಕ್ಕಿಗಿವರು ಮೇಲಾ
ಶೌರ‍್ಯೇ ಸಾರ‍್ಯಾರೋ ಮೌಲಾ ಅಲಿ ಹೈದರ ಹಜರತ ಮೌಲಾ ||
ಇವರ ಸರಿಯೊಳು ಸಮರ‍್ಯಾರಿಲ್ಲಾ
* * *
ಮೌಲಾಲಿ ಶರಣಾ ಮಹ್ಮದ ಪೈಗಂಬರಾ
ಅಪ್ಪಣಿ ತಗೊಂಡು ಹತ್ಯಾರೋ ಕುದರಿಯನಾ
ಹೊಂಟಾರೋ ಶರಣಾ ಕಂಡಾರೋ ಪಕ್ಷಿಯನಾ
ಪಕ್ಷಿಮ್ಯಾಲ ಬರದೈತೋ ಕುರಾನಾ ||

. ಬೀಬಿ ಫಾತಿಮಾ

ಬೀಬಿ ಫಾತಿಮಾನ ಕಥನ ಹೇಳುವೆ ನಾನಾ
ಮಕ್ಕಾ ಶಾರದೊಳು ಬೇಬಿ ಫಾತಿಮಾ
ಓದುವಳೋ ನಿತ್ಯ ಕುರಾನಾ ||

. ಜೈತುನೆಂಬಾಕಿ ಜಟ್ಟಿ

ಸೈ ಸಬಾಸಿ ಮರತೇಕ ಬಂದಾಳೋ ಹುಟ್ಟಿ
ಜೈತುನೆಂಬಾಕಿ ಜಟ್ಟಿ
ಪೊಡವಿಯೊಳು ಪಾಶಾನ ಹೊಟ್ಟೀಲಿ ಹುಟ್ಟಿ
ಗಂಡಸೂರ ಡ್ರೇಸ ಹಾಕ್ಯಾಳೋ ಗಟ್ಟಿ
ಕುದುರಿಯ ನೇರಿ ಬಿಟ್ಟಾಳೋ ನೀಟಕಟ್ಟಿ
ಮಹ್ಮದ ಹನೀಫ ಆಗ್ಯಾನೋ ಭೆಟ್ಟಿ
* * *