ಹೆಸರು: ಮಂಜುನಾಥ್
ಊರು: ಮಡಿಕೇರಿ

 

ಪ್ರಶ್ನೆ: ನನ್ನ ಸಮಸ್ಯೆ ಏನೆಂದರೆ ಪದವಿ ತರಗತಿಯಲ್ಲಿ ಓದುತ್ತಿರುವ ನನಗೆ ಹಾಸ್ಟೆಲ್ನಲ್ಲಿ ಸಹವರ್ತಿಗಳೊಂದಿಗೆ ಸಲಿಂಗ ಕಾಮದಲ್ಲಿ ಗೊತ್ತಿಲ್ಲದ ರೀತಿಯಲ್ಲಿ ತೊಡಗುತ್ತಿದ್ದೆ. ಇದಕ್ಕೂ ಮುಂಚೆ ಸಣ್ಣವನಿರುವಾಗ ಅಂದರೆ ೮ನೇ ತರಗತಿಯಲ್ಲಿರುವಾಗ ನನ್ನ ದೊಡ್ಡಮ್ಮನ ಮಗ ಅವರಿಗೆ ೧೧ ವರ್ಷ. ಅವನೊಂದಿಗೆ ಹಲವು ಬಾರಿ ನಗ್ನಾವಸ್ಥೆಯಲ್ಲಿ ವರ್ತಿಸಿದ್ದುಂಟು. ಆದರೆ ಹಾಸ್ಟೆಲ್ನಲ್ಲಿ ಆದ ಸಲಿಂಗಕಾಮ ತೆರನಾದುದಲ್ಲ. ನಾನು ಮುಂದೆ ಉನ್ನತ ಹಂತಕ್ಕೆ ಬೆಳೆಯಬೇಕು ಎಂದಾಗಲ್ಲೆಲ್ಲಾ ನನಗೆ ಅದೇ ಹಳೆಯ DIPRESSION ಕಾಡುತ್ತಿರುತ್ತದೆ. ಮುಂದೆ ನಾನು ಸ್ವಲ್ಪ ದಿನಗಳಲ್ಲಿಯೇ ಸತ್ತು ಹೋಗುತ್ತೇನೆ ಅನ್ನಿಸುತ್ತಿದೆ. ಮೊದಲೆಲ್ಲಾ ಎಲ್ಲರೊಡನೆ ಬೆರೆಯುತ್ತಿದ್ದೆ, ಈಗ ಭಯ, ಆತಂಕ ಆವರಿಸಿದೆ ಇವುಗಳ ಮಧ್ಯೆ ಸುಮ್ಮನೆ ಕೂತಾಗ ಕಾಲುಗಳು ಜೋಮು ಹಿಡಿದಂತೆ ಆಗುತ್ತದೆ ಮತ್ತು ಶೀಶ್ನದ ತುದಿಯಲ್ಲಿ ಕೆರೆತ ಉಂಟಾಗುತ್ತದೆ. ನಿದ್ರೆ ಬಂದರೆ ಮೈಭಾರವೆನಿಸುವುದು. ಶಕ್ತಿಯೇ ಇಲ್ಲದ ಹಾಗೆ ಅನ್ನಿಸುತ್ತದೆ. ನನಗೆ ಏಡ್ಸ್ ಬರುವ ಸಾಧ್ಯತೆಗಳೇನಾದರೂ ಇದೆಯೇ? ತಿಳಿಸಿ.

ಉತ್ತರ: ನಿಮಗೆ ಯಾವುದೇ ಕಾಯಿಲೆ ಇಲ್ಲ. ನಿಮಗಿರುವುದು ಮನೋರೋಗ ಮಾತ್ರ. ಮನೋವಿಕಲತೆಯಿಂದ ದೂರವಾಗಲು ಈ ಕೆಳಕಂಡ ಕೆಲವು ಸಲಹೆಗಳನ್ನು ಪಾಲಿಸಿ.

ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ದಿನನಿತ್ಯ ಯೋಗ-ಧ್ಯಾನ ಮಾಡಿ, ಉತ್ತಮ ಕಥೆ, ಕಾವ್ಯ, ಕಾದಂಬರಿಗಳನ್ನು ಓದಿ, ವಿಹಾರ ಧಾಮಗಳಿಗೆ ಭೇಟಿ ಮಾಡಿ, ಮನಸ್ಸಿಗೆ ನೆಮ್ಮದಿ ಸಿಗುವಂತಹ ಸ್ಥಳಗಳಿಗೆ ಹೋಗಿ, ಪೂಜಾ ಮಂದಿರಗಳಿಗೆ ಹೋಗಿ, ಒಳ್ಳೆಯ ಸ್ನೇಹಿತರೊಂದೆಗೆ ಸೇರಿ, ಒಳ್ಳೆಯ ವಿಚಾರಗಳ ಬಗ್ಗೆ ಚರ್ಚಿಸಿ, ಕುಟುಂಬವರ್ಗದವರೊಂದಿಗೆ ಸ್ನೇಹಿದಿಂದ ಇರಿ. ಅವರೊಡನೆ ಕಲೆತು, ಬೆರೆತು, ನಲಿಯಿರಿ.

ನಿಮ್ಮ ನರಗಳ ದೌರ್ಬಲ್ಯಕ್ಕೆ NEUROBION ಮಾತ್ರೆಯನ್ನು ದಿನಕ್ಕೆ ಎರಡರಂತೆ (ಬೆಳಿಗ್ಗೆ, ರಾತ್ರಿ) ಒಂದು ತಿಂಗಳು ತೆಗೆದುಕೊಳ್ಳಿ. ಸಮಸ್ಯೆ ಪರಿಹಾರವಾಗುತ್ತದೆ. ನಿಮಗೆ ಏಡ್ಸ್ ಕಾಯಿಲೆ ಇರುವ ಸಾಧ್ಯತೆ ಇರುವ ಹಾಗಿಲ್ಲ. ಅನುಮಾನವಿದ್ದರೆ ಒಮ್ಮೆ ಹತ್ತಿರದ ಪೆಥಾಲಜಿ ಪ್ರಯೋಗಾಲಯಕ್ಕೆ ಹೋಗಿ HIV  ಪರೀಕ್ಷೆ ಮಾಡಿಸಿಕೊಳ್ಳಿ. ಯಾವುದೇ ಭಯಬೇಡ. ನಿಮ್ಮ ಜೀವನಕ್ಕೆ “ಆತ್ಮವಿಶ್ವಾಸ” ದಾರಿಯಾಗಲಿ.