ಗುರುವಿನ ಭಜನೆಯ ಮಾಡೋಣ
ಸುಜನರೆಲ್ಲರೂ ಕೂಡೋಣ
ಗಡಿಬಿಡಿ ಸಂಸಾರ ದೂಡೋಣ
ನಾವು ನಿಜವಾದ ಮುಕ್ತಿಯ ಪಡೆಯೋಣ      || ಗುರುವಿನ ||

ಸದ್ಗುರು ಇರಬೇಕಾದಂತಹ ನಮ್ಮ
ಸಿದ್ಧರೂಢಿರಂತವ ವೇದಾಂತ ಸಿದ್ಧಾಂತ ಹೇಳುವವ
ನಮ್ಮ ಮನಸ್ಸಿನ ಭ್ರಾಂತಿ ಬಿಡಿಸುವ || ಗುರುವಿನ ||

ಮುನಭಿಮಾನವ ಬಿಡಬೇಕು
ನಾವು ಗುರುವೆ ಗತಿಯೆಂದು
ಎನಬೇಕು ಜ್ಞಾನದ
ನಮ್ಮ ನಾವು ತಿಳಿಬೇಕು
ಗುರುಸ್ವಾನುಭವದ ಸುಖ ಅರಿಯಬೇಕು      || ಗುರುವಿನ ||

ಆರು ಮಂದಿ ನಮಗೆ ಗೆಳೆಯರು
ಮತ್ತೆ ಮೂರು ಮಂದಿ
ನಮಗೆ ಹಿರಿಯರು
ಪಾರು ಮಾಡಿ ಗೋಡುವಲ್ಲ ಸಂಸಾರ
ದೂರ ಮಾಡಿ ಇಟ್ಟೆವಪ್ಪ ಶಿವಪುರ   || ಗುರುವಿನ ||

ಬಂಡಿ ಊರು ನಮ್ಮದು ಶಿವಪುರ
ಇದು ದೊಡ್ಡೊರು ಮಾಡಿದ ವ್ಯಾಪಾರ
ವ್ಯಾಪಾರಕ್ಕೆ ಬಂದೆವಣ್ಣ ಇಟ್ಟು
ಮೂರ ಕೆಳ ಕೊಂಡೆರಸಿ ಸುಖವಲ್ಲ
ಶಿವಪುರ || ಗುರುವಿನ ||

ಗುರುನಾಥರೊಡರ ಕರೆಸೋಣ
ತೊಟ್ಟಿಲ ಒಳಗೆ ಹಾಕಿ ತೊಗೋಣ
ಗುರು ಸಿದ್ಧರೊಡರನ್ನು ಕರೆಸೋಣ
ಜೈ ಜೈ ಎನ್ನುವ ಪದ ಹಾಡೋಣ   || ಗುರುವಿನ ||