ಗಣಪಸ್ತುತಿ

ಸಿದ್ಧಿ ವಿನಾಯಕ ಬುದ್ಧಿ ಪ್ರದಾಯಕ
ಸ್ತುತಿ ಮಾಡುವೆ ನಾ ನಿನ್ನ ಪಾದಾ
ಭಜಿಸುವೆ ನಿನ್ನ ಏಕೋಭಾವದಿಂದ
ಸಭಾದಾಗ ಕಾಯೊ ಮಾನವನಾ

ಪಾರ್ವತಿದೇವಿಯ ಮುಂದಿರು ಕಂದಾ
ಸರ್ವರಿಗೂ ಮಾಡುವೆ ಆನಂದಾ
ಸುರನ ಕೊರಳಾಗ ಚರಣಾರವಿಂದ
ದಿವಸರಾತ್ರಿ ಹೊಗಳುವೆ ಮುದದಿಂದ

ಚಂದ ಗಂಧದ ಅಕ್ಷತೆಯಿಂದ
ನಿನ ಕೊರಳಿಗೆ ಹಚ್ಚುವೆ ಮುದದಿಂದ
ಚಂದ ಚದದ ಹೂಗಳಿಂದ
ಪೂಜೆಯ ಮಾಡುವೆ ಪ್ರೀತಿಲಿಂದ

ಸಭಾದಾಗ ನಿನ್ನ ಆಧಾರದಿಂದ
ಪದಗಳ ಹಾಡುವೆ ಮುದದಿಂದ
ಪ್ರಸನ್ನಾಗೊ ತರಿದೆ ನೀ ಬಂದ
ಹರುಷ ಆಗುವೆ ನಿನ ಕಂದ

ಹಾಲಿಕಟ್ಟಿ ಕುರಬರ ಓಣಿಯಿಂದ
ಕರೆಪ್ಪ ಮಾಡಿದ ಕವಿ ಚಂದ
ರೇವಣಸಿದ್ಧನ ಪ್ರೇರಣೆಯಿಂದ
ಹರುಷದಿ ಮಾಡುವೆ ನಿಮ್ಮ ಮುಂದ

 

* ಜೀವನ ಜೋಕಾಲಿ ; ಭಾಗ – ೬ ಡೊಳ್ಳಿನ ಹಾಡು ಸಂ|| ಡಾ. ಎಂ.ಎಸ್. ಸುಂಕಾಪುರ ಕನ್ನಡ ಅಧ್ಯಯನ ಪೀಠ, ಧಾರವಾಡ – ೧೯೭೬.

 

ಸ್ತುತಿಪದ

ಸ್ವಾಮಿ ನಮ್ಮಯ ಬಂದಾವು ಬನ್ನಿರೇ ||
ನಿದ್ರೆ ಹೊತ್ತಿನ್ಯಾಗ ನಿಜರೂಪ ತೋರಿಸಿ ಎಬ್ಬಿಸಿ ಪದಗಳ ಹಾಡಂದ
ಯಾರ ಹಾಡಲೋ ಯಾರನು ಬಿಡಲೋ ಯಾರಿಗ್ಹೇಳಿ ಶರಣೆನ್ನಲಿ
ಯಾರಿಗೇಳಿ ಶರಣೆನ್ನಲಿ ಸ್ವಾಮಿ ನಮ್ಮ ಹಾಲುಮತದ ಗುರುವೀಗೆ,
ಮೊದಲು ಗುರುವಿಗೆ ಸ್ಮರಣೆಯ ತಗದು ಸರುವರಿಗೆ ಮಾಡುವೆ ನಮ್ಮ ಶರಣ
ಬಿದ್ರು ಕೈ ತಳಡೊಳ್ಳಿಗೆ ಮೊದಲಿಗೆ ಗುರುಹಿರಿಯರಿಗೆ ಮಾಡುವೆ ಶರಣ
ವೀರಂಕಾರಿ ನಿರಹಂಕಾರಿ ಆದಿಮೂರ್ತಿಗೆ ನಮ್ಮ ಶರಣ
ನೀರ ಲಾಭವ ನುಸಲವೋವಂತ ಬಸವಣ್ಣಗೆ ಮಾಡುವೆ ನಮ್ಮ ಶರಣ
ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಮೂಡಿ ಬರುವ ಸೂರ್ಯಗೆ ನಮ್ಮ ಶರಣ
ರಾತ್ರಿ ಕಾಲದಲ್ಲಿ ಬೆಳಕು ನಡೆಸುವಂತ ಚಂದ್ರಗೆ ಮಾಡುವೆ ನಮ್ಮ ಶರಣ
ಇಂದ್ರ ಚಂದ್ರ ದೇವೇಂದ್ರ ಲೋಕಕೆ ಬಂದ ಸಭಿಕರಿಗೆ ಮಾಡ್ವೆ ನಮ್ಮ ಶರಣ

 

ಸದರಿಗೆ ಸಲಾಮು ಕೊಟ್ಟೇವು

ಸ್ವಾಮಿ ನಮ್ಮಯ ದೇವಾರು ಬಂದಾವ ಬನ್ನಿರೆ
ಬಂದೆವೊ ಬಲಗೊಂದೇವೋ ಬಂದು ನಿನ ಬಾಗಿಲಿಗೊಂದೇವೋ
ಬಂದು ನಿನ ಬಾಗಿಲಿಗೊಂದೇವವ್ವ ಬಂಗಾರದೊಂದು ಕದಗಳು
ಬಂಗಾರದೊಂದು ಕದಗಳು ತಗಿಯವ್ವ ಶೃಂಗಾರನೆಲ್ಲ ನೋಡೇವು
ಶೃಂಗಾರನೆಲ್ಲ ನೋಡೇವು ತಾಯಿ ಎಂಥೆಂಥ ಮಂಚ ನೋಡೇವು
ಎಂಥೆಂಥ ಮಂಚ ನೋಡೇವು ತಾಯಿ ಬೆಳ್ಳಿಯ ಸೆಳಿಮಂಚವೆ
ಬೆಳ್ಳಿಯ ಸೆಳಿಮಂಚದ ಮೇಲೆ ಎಂಥಪ್ಪ ಶರಣರೈದಾರೆ
ಎಂಥಪ್ಪ ಶರಣರೈದಾರಲ್ಲ ಬೆಳ್ಳಿಬೆತ್ತದ ದೊರಿಮಗಳೆ
ಬೆಳ್ಳಿ ಬೆತ್ತದ ದೊರಿಮಗಳ ಕುಂತ್ಹಾಡು ಕೇಳೆನಂದಾಳ
ಹಾಡು ಕೇಳೆನಂದಾಳ ಸೊಲ್ಲವ್ವ ಹಾದಿಗೆ ಅಡ್ಡ ಬಂದಾಳ

˜™

ಪಲ್ಲವಿ

ಶಿವ ಶಂಕರೇಶ ಓಂ ನಮಃ ಶಿವಾಯ
ಮರಿಯಲಾರೆ ನಿಮ್ಮ ಧ್ಯಾನ ಓಂ ನಮಃ ಶಿವಾಯ     ||೧||

ಹಗಲಿ ಇರುಳು ನಿಮ್ಮ ಧ್ಯಾನ ಓಂ ನಮಃ ಶಿವಾಯ
ಮನದ ಮುತ್ತು ಸುರಿಸುವಾಯ್ತು ಓಂ ನಮಃ ಶಿವಾಯ ||೨||

ನೀರ ಒಳಗೆ ಬೇರು ಬಿಟ್ಟು ಓಂ ನಮಃ ಶಿವಾಯ
ಬೇರಿನೊಳಗೆ ಸಸಿಯನಾಟಿ ಓಂ ನಮಃ ಶಿವಾಯ      ||೩||

ನೂರಾಒಂದು ಟೊಂಗಿ ಚಿಗಿತು ಓಂ ನಮಃ ಶಿವಾಯ
ಹೂವು ಕಾಯಿ ಸುರಿಸುವಾಯಿತು ಓಂ ನಮಃ ಶಿವಾಯ          ||೪||

ಕಂತು ಹರನ ತಂತ್ರ ತಿಳಿಯದು ಓಂ ನಮಃ ಶಿವಾಯ
ಚಿಂತಿಸುವದು ದೇಹದೊಳು ಓಂ ನಮಃ ಶಿವಾಯ      ||೫||

ಪ್ರಾಂತ ಹುಬ್ಬಳ್ಳಿಯೊಳಗ ಇರುವ ಓಂ ನಮಃ ಶಿವಾಯ
ಶಾಂತ ಆರೂಢಸ್ವಾಮಿಗೆ ಓಂ ನಮಃ ಶಿವಾಯ                  ||೬||

ಓಂ ನಮಃ ಶಿವಯ ಎಂಬು ಅಕ್ಷರ ಬರಿ ಬರಿದು
ವಹಿತುಂಬಿ ಓಂ ನಮಃ ಶಿವಾಯ              ||೭||

 

ದೇವತಾ ಸ್ತುತಿ

ಮಂದಮತಿಯು ನಿಮ್ಮ ಕಂದನು ನಾನು
ವಂದಿಸಿ ಸಭಾದೊಳು ನಿಂತಿಹೆ ನಾ |

ಕಂದುಗೊರಳಿನ ಇಂದುಶೇಖರಗ
ಚಂದದಿ ವಂದನೆ ಮಾಡುವೆ ನಾ
ಚಂದದಿ ವಂದನೆ ಮಾಡುವೆ ನಾನಾ
ಏನು ತಿಳಿಯದಾ ಬಾಲಕನಾ

ಏಕದಂತನನು ಆತಂಕವಿಲ್ಲದೆ
ಏಕಾಂತದಲಿ ಬಂದು ನೆನೆಯುವೆನು
ಏಕಾಂತದಲಿ ಬಂದು ನೆನೆಯುವೆ ನಾನಾ
ಆತಂಕ ದೂರಮಾಡೊ ನೀನಾ

ಸಾನುರಾಗದಿ ಸರಸೋತಿ ತಾಯಿಗೆ
ಶಿರಬಾಗಿ ವಂದನೆ ಮಾಡುವೆ ನಾ
ಶಿರಬಾಗಿ ವಂದನೆ ಮಾಡುವೆ ನಾನಾ
ಸಭಾದಾಗ ಕಾಯೊ ಮಾನವನಾ

ಭಾಸುರಾಂಗ ಬೀರಲಿಂಗ ನಿನ್ನನು
ಅಂಗಾಂಗದಲಿ ಬಂದು ನೆನೆಯುವೆನು
ಅಂಗಾಂಗದಲಿ ಬಂದು ನೆನೆಯುವೆ ನಾನು
ಇಂಗದ ಮತಿಯ ಕೊಡೊ ನೀನಾ

ರೇವಣಸಿದ್ಧನೆಂಬ ಸಿದ್ಧಿ ಪಡೆದಂತಾ
ಮರುಳಸಿದ್ಧನೆಂಬ ಗುರುವರನೊ
ಮರುಳಸಿದ್ಧನೆಂಬ ಗುರುವರನೊ
ಹಾಲುಮತಕೆಲ್ಲ ಹಿರಿಯವನೊ

ಗುರುವೆ ನಿನ್ನಯ ಚರಣಕೆ ನಾನು
ಶಿರಬಾಗಿ ವಂದನೆ ಮಾಡುವೆನು
ಶಿರಬಾಗಿ ವಂದನೆ ಮಾಡುವೆ ನಾನು
ಕರುಣದಿ ಹರಕೆಯ ಬೇಡುವೆನು

ಕಲ್ಪನೆ ಇಲ್ಲದ ಅಲ್ಪಮತಿಯೆಂದು
ಸ್ವಲ್ಪ ಸೇವೆಯ ಮಾಡುವೆ ನಾನು
ಸ್ವಲ್ಪ ಸೇವೆಯ ಮಾಡುವೆ ನಾನು
ಅಪ್ಪಿಕೊಳ್ಳಿರಿ ನಿಮ್ಮ ಕಂದನನು

ಹೂಲಿಕಟ್ಟಿ ಊರಾ ಮೋಜಿನ ಶಾರಾ
ಸುತ್ತು ಕಡೆ ಇರುವದು ಜಾಹಿರಾ
ಸುತ್ತು ಕಡೆ ಇರುವದು ಜಾಹಿರಾ
ಅದರಾಗ ಕುರುಬರೋಣಿಯ ಹೆಸರಾ

ಒಳ್ಳೆರೀತಿಯಿಂದ ಕಸರು ಇಲ್ಲದೆ
ಎಲ್ಲ ಪದಗಳ ಮಾಡುವರಾ
ಎಲ್ಲ ಪದಗಳ ಮಾಡುವರವರಿಗೆ
ರೇವಣಸಿದ್ಧನ ದಯಾ ಪೂರಾ™

 

ಗುರುಹಿರಿಯರ ಸ್ತುತಿ

ಮೊದಲಿಗೆ ಗುರುವಿನ ಸ್ಮರಣೆಯ ಮಾಡಿ ಸರ್ವರಿಗೆ ಮಾಡುವೆ ಶರಣಾ
ತಾಳ ಕೈಪಿಡಿ ಡೊಳ್ಳು ಮೊದಲುಮಾಡಿ ಗುರು ಹಿರಿಯರಿಗೆ ನಮ್ಮ ಶರಣಾ
ಅಂದ ಚಂದ ದೇವೇಂದ್ರ ಲೋಕಕ ಬಂದ ಸಭೆಗೆ ಮಾಡುವೆ ಶರಣಾ
ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಮೂಡಿ ಬರುವ ಸೂರ್ಯಗ ಶರಣಾ
ರಾತ್ರಿಕಾಲದೊಳು ಬೆಳಕ ನಡಿಸುವಂಥ ಚಂದ್ರಮಗ ಮಾಡುವೆ ಶರಣಾ
ಅರ್ಧಾಂಗಿ ಪಾರ್ವತೀಪಾದವ ನಂಬೇನಿ ನೀಲಕಂಠ ಭೂಮಿಗೆ ಶರಣಾ
ಹರುಷದಿಂದ ಹನುಮಂತ ದೇವರಿಗೆ ಮುಜರಿಕೊಟ್ಟು ಮಾಡುವೆ ಶರಣಾ
ಸಣ್ಣವನಾಗಿ ನಾ ಬಂದಷ್ಟ ಹೇಳತೇನಿ ತಂದಿತಾಯಿಗೆ ಮಾಡುವೆ ಶರಣಾ
ಗದ್ದಲಮಾಡದೆ ಕೇಳಬೇಕಂತ ಸರ್ವರಿಗೆ ಮಾಡುವೆ ಶರಣಾ
ಬಗ್ಗಿ ಬಾಗಿಲ ಹೊಂದೇನಿ ಬೀರಪ್ಪ ನಿಮಗ ಶರಣವ ಮಾಡುವೆನೋ
ಇಲ್ಲಿಗೆ ಒಂದು ಸಂದೇಶ ಗುರುವೆ ಹಾಡಿದವರ ಪದ ಮುಂದ್ಕೇಳೋ

 

ಬಲ್ಲವರ ಸ್ತುತಿ

ಗುರುಹಿರಿಯರಿಗೆ ಶರಣು ಮಾಡುವೆನು ಕರುಣದಿಂದ ಕೇಳರಿ ಕುಂತಾ
ಮರಣರಹಿತ ಮಹಾದೇವನ ಭಜಿಸುತ ಹೇಳುವೆ ಮುಂದಿನ ವೃತ್ತಾಂತ
ಚರಣ ಪ್ರಾಸ ಗಣ ವರ್ಣ ಕೂಡಿದರ ಕವಿತೆ ಆಗುವದು ರಸಭರಿತ
ಕವಿತೆ ಆಗುವದು ರಸಭರಿತಾ ವಿದ್ವಾನರಾಗುವರು ಸನಮಂತಾ
ಕುರುಬರ‍್ಡಾಡಂತ ಅಲ್ಲಗಳೆಯದೆ ಪ್ರೇಮದಿಂದ ಇರಬೇಕ ಚಿತ್ತ
ಯಾತರ ಹಾಡಂತ ಏಳ ಬ್ಯಾಡರಿ ಸೆರಗ ಒಡ್ಡಿ ಬೇಡುವೆ ನಿಂತಾ
ಹಾಳರಗಳಿ ಹಾಡುವುದಿಲ್ಲ ಪುರಾಣದೊಳಗಿನ ಸವಿಮಾತಾ
ಸವಿಮಾತಾ ಸರಸಾಗಿ ಹೇಳತೀನಿ ಹರುಷದಿಂದ ಕೇಳರಿ ಕುಂತ
ಸತ್ಯ ಸದಾಚಾರ ಭಕ್ತಿ ಸದ್ಗುಣ ಪೂರ್ತಿಯಾದ ನಮ್ಮ ಹಾಲಮತಾ
ಅನಾಚಾರದಿಂದ ಅಡವಿಯ ಕೂಡಿದರ ಹಿಡಿಯಲಿಲ್ಲ ಧರ್ಮದ ಗುರುತಾ
ಹೆಂಡ ಕುಡಿದರೋ ಕಂಡ ತಿಂದರೋ ಭಂಡರಾದಾರೋ ಬರಬರತಾ
ಮದ್ಯಪಾನ ಮಾಡಿ ಮೆರದಾಡಿ ಉರದಾಡಿ ನರಜಲ್ಮ ಕಳದೇವೊ ವ್ಯರ್ಥ
ಮೊದಲಿನ ಕುರುಬರು ಕಂಬಳಿ ಬೀಸಲು ಮಳೆ ಬರುವದು ಖಂಡಿತಾ
ನೂರು ವರುಷ ಅತ್ತ ಕಡೆಗೆ ಹಾಂಗ ಇತ್ತು ಹಿಂದೆ ಆಗಿ ಹೋದ ಹಳೆ ಮಾತಾ
ನಿಷ್ಠೆಯಿಂದ ಈ ದುಷ್ಟಗುಣಗಳನ್ನು ಬಿಟ್ಟು ನಡದವನೇ ಗುಣವಂತ
ಬಿಟ್ಟು ನಡೆದವನೇ ಗುಣವಂತ ವರಶ್ರೇಷ್ಠ ಮುಕ್ತಿ ಹೊಂದುವನಂತಾ
ಮರಣರಹಿತ ಮಹಾದೇವನ ಭಜಿಸುತ ಹೇಳುವೆ ಮುಂದಿನ ವೃತ್ತಾಂತ
ಸದಾಚಾರವ ಹಿಡಿಯಲೆಂದು ಬೋಧ ಮಾಡತಾನ ಗುರುನಾಥಾ
ಗುರುವಿನ ಮಾತು ಮೀರಿ ನಡೆದವರು ಮುಕ್ತಿ ಮಾರ್ಗಕಾದಾನು ಹೊರತಾ
ಗೀತರೂಪದಿಂದ ನೀತಿ ಹೇಳಿದರ ಪ್ರೀತಿಯಾಗತಾರ ಪಂಡಿತರಾ
ಕಂಬಳಿ ಕುಂಚಿಗೀ ಹುಂಬ ಜನರಿಗೆ ಸರಿ ಬರುದಿಲ್ಲರಿ ಈ ಮಾತಾ
ಅಕಲ ಹಾಕಿ ನಾವು ನಕಲಿ ಪದಗಳ ಹಾಡಿದರಾಗತಾರಾ ಸನಮಂತಾ
ಅಕ್ಕರತಿಲೆ ಭಪ್ಪರೆ ಮಗನೆಂದು ಕ್ಯಾಕಿ ಹೊಡೆಯತಾರಾ ನಕ್ಕೊಂತಾ
ಬಲ್ಲ ಪಂಡಿತರು ಸಾರಿ ಹೇಳತಾರ ಕುಲ್ಲ ಪದಗಳನ್ನು ಬ್ಯಾಡಂತಾ
ಬುದ್ಧಿಬರುವ ಪದಾ ತಿದ್ದಿ ಹಾಡಿದರ ನಿದ್ದಿ ಮಾಡತಾರ ನಗನಗತ
ತಿಳಿಯದಕ ತಿಕ್ಕಾಡಿ ಹೇಳತಾರ ಬಾಯಿ ತೆಗೆದು ಆಕಳಿಸುತ್ತಾ
ಹ್ಯಾಂಗ ಮಾಡಿ ನಾವು ಮಜಲ ಗೆದಿಯಬೇಕು ನೀವು ಮಾಡಿಹೇಳರಿ ಗಣಿತಾ
ಬೈದರು ಚಿಂತಿಲ್ಲ ಕ್ರೋಧ ಬರುವದಿಲ್ಲ ಹಾಡಿ ಹಿಡಿಯುವೆ ನಿರ್ಧಾರಾ
ನಮ್ಮ ಜಾತಿಧರ್ಮದ ಕಥೆಯನು ನಿರ್ಮಲದಿಂದ ಹೇಳುವೆ ನಿಂತಾ
ಕೇಳಬೇಕಂತ ಕೂಡಿರಿ ಎಲ್ಲರು ನೋಡಿ ನಮಗ ಆದಿತೋ ಶಾಂತಾ
ಹಮ್ಮುಬಿಮ್ಮು ಬೇಡ ವರ್ಮಜಿದ್ದು ಬೇಡಾ ಪ್ರೇಮದಿಂದ ಹಾಡುವೆ ನಿಂತ
ಬಂದದ್ದು ಹಾಡೂನು ಬಾರದ್ದು ಕೇಳೂನು ನಮಗೆ ನಿಮಗ ತಿಳಿಯದ ಮಾತಾ
ಅರ್ಥ ತಿಳಿಯದೆ ವ್ಯರ್ಥ ಹಾಡಿದರ ಕತ್ತೆಗಿಂತ ಕಡೆ ಆದ ಮಾತಾ
ಕತ್ತೆ ಮೇಲೆ ಮುತ್ತುರತ್ನ ಹೇರಿದರೆ ರತ್ನದ ಬೆಲೆ ಅದಕೇನು ಗೊತ್ತ
ಅರ್ಥ ತಿಳಿದವನು ಕೀರ್ತಿ ಹೊಂದುವನು ಪೃಥ್ವಿಯೊಳಗ ಪಂಡಿತನಂತ
ಸಂಶಯ ಬಂದದ್ದು ಸಾರಿ ಹೇಳುವೆನು ಸೆರಗ ಒಡ್ಡಿ ಕರಜೋಡಿಸುತ
ಮರಣರಹಿತ ಮಹಾದೇವರನ ಭಜಿಸುತ ಹೇಳುವೆ ಮುಂದಿನ ವೃತ್ತಾಂತ
ಚಿಕ್ಕುಂಬಿ ಊರೊಳು ಬಂದು ಕೂಡಿದ್ದರೋ ನೂರಾರು ಮಂದಿ ಹಾಡವರಾ
ಸಿದ್ಧನಾಳ ಬುದ್ಧನಾಳ ಸುದ್ನಿ ಲೋಕಾಪೂರ ಖಜ್ಜಿ ಡೋಣಿ ಕಾಲೋಡದವರಾ
ನಿವಳ ಹಾಡುವರೋ ನಿಂಗಾಪೂರದವರೋ ಶೃಂಗಾರದಿಂದ ಸಂಗಮದವರಾ
ಹುಲಕುಂದದವರು ಬಲೆ ಹುರುಪಿಲೆ ಹಾಡಿದರೋ ಜಲಲಪುರ ಜಾವೂರವರೋ
ಶಿರಗುಪ್ಪಿ ಶಿದಮಗ್ಗಿ ಸಿರಸಿ ಸಿದ್ಧಾಪೂರ ಸರಸಗ್ರಾಮ ಸಿರಸಂಗಿಯವರಾ
ಇಷ್ಟು ಊರವರು ಓಟ್ಟು ಕೂಡಿದ್ದರೋ ಪೆಟ್ಟುತಾಳ ಗತಿ ಬಲ್ಲವರಾ
ಎಲ್ಲರಾದ ಮೇಲೆ ನಮ್ಮ ಸರತಿ ಬಂತು ಏಳಂತ ಎಬ್ಬಿಸ್ಯಾರೋ ಕುಂತವರಾ
ಒಂದೊಂದು ಪದಾ ಚಂದಾಗಿ ಹಾಡಲು ಮುಂದ ಇದ್ರೊ ಅರಕೇರಿಯವರಾ
ಅರಿಕೇರಿಯವರು ಬಂದು ತರಬಿ ಕೇಳಿದರ ಮಾಹಿತ್ಯಾಗಲಿಲ್ಲ ಮಜಕೂರಾ
ದೇವಾದಿದೇವ ರೇವಣಸಿದ್ಧ ಹಾಲಮತದ ಉದ್ಧಾರಕರಾ
ಮಂಗಲಮಯವಾದ ರೇವಣಸಿದ್ಧ ಹ್ಯಾಂಗ ತಾಳಿದಾನು ಅವತಾರಾ
ಅವತಾರ ತಾಳಿದ ಹುಟ್ಟಿದ ಕಥೆಯನು ಬಿಟ್ಟು ಬಿಡದೆ ಹೇಳರಿ ಪೂರಾ
ಹೇಳಿ ಮುಂದ ನೀವು ತಾಳ ಬಡೀರಂತ ತಾಕಿತಕೊಟ್ಟರೋ ಬೆರಕಿಯವರಾ
ನಮಗ ತಿಳಿಯದಕ ಮಾರಿ ಸಣ್ಣ ಮಾಡಿ ಹೊರಳಿ ಬಂದೇವಪ್ಪ ನಾವೆಲ್ಲರಾ
ಬಂದರ ಹೇಳಿರಪ್ಪ ಬಲ್ಲವರು ಬಾರದಿದ್ದರೆ ಮಾಡುದಿಲ್ಲೋ ಜೋರ್ದಾರಾ
ಚಂದಗ್ರಾಮ ಹುಲಕುಂದ ಠಿಕಾಣ ಕಂದ ಶಿವಲಿಂಗನ ಕವಿ ಕುಶಲಾ

 

ಹರುಷದಿಂದ ಹಾಡೂನ

ಚಿಕ್ಕಮಕ್ಕಳ ತೊದಲ ನುಡಿಯನು ಅಕ್ಕರತಿಲೆ ಕೇಳಿರಿ ಕುಂತಾ
ನಾಡಮ್ಯಾಲ ಹಾಡುವವರು ಬಹಳ ಮಂದಿ ಹೇಳಾಕ ಬರಬೇಕ ಅವರೆಲ್ಲ
ಕಲ್ಪನೆ ಮಾತು ಅಲ್ಲ ಪುರಾಣೋಕ್ತ ಇದು ಅಲ್ಪರಿಗೆ ಆಗುವದಿಲ್ಲ ಗೊತ್ತ
ಅಲ್ಪರಿಗೆ ಆಗುದಿಲ್ಲ ಗೊತ್ತ ನೀ ಆಗಬೇಕ ಗುರುವಿನ ತೊತ್ತಾ
ನಮಗೆ ನಾವು ಬಲಾ ಅಂದರ ಜನರು ಹ್ಯಾಂಗ ಆಗತಾರ ಸನಮಂತಾ
ಕುಂತ ನಿಂತವರು ಶಭಾಸ್ ಅಂದರ ಹಾಡುವವರಿಗೆ ಮನಸ್ಸಿಗೆ ಶಾಂತಾ
ನಾಲ್ಕು ದುಡ್ಡಿಗೊಬ್ಬ ಬೇಕ ಅನ್ನುವರ ತರುವಿರೆಪ್ಪ ಮಾಡಿಕೊಂಡು ರ್ಬೇ
ಕೇಳವರ‍್ಯಾರಿಲ್ಲ ಹಾಳಹರಟೆ ಹೊಡದು ವ್ಯಾಳೆಗಳೆದು ಹೋಗತೀರಿ ವ್ಯಥತ
ಆಗಾವ ನಮಗೊಂದು ಲಗಾಮ ಹಾಕುವೆ ಜಬಾಬ ಕೊಡಬೇಕ ನಕ್ಕೊಂತ
ಅದನ ಇದನ ಹಾಡಿ ಕದನ ಎಬ್ಬಿಸಿ ಅಗ್ಗ ಮಾಡಿ ಇಟ್ಟಾರ ಕವಿತಾ
ರೇವಣಸಿದ್ಧರ ಕಥಿ ಕೇಳೆದೆವು ಬಿಡದೆ ಹೇಳಿರಿ ವೃತ್ತಾಂತ
ಆನಂದ ಆಗಿ ನಿಮ್ಮ ಪದಗಳಿಗೆ ಎಲ್ಲ ಜನರು ಕೊಟ್ಟಾರೋ ಮತಾ
ಸತ್ಯವಂತರಿಗೆ ಸಾವಿಲ್ಲ ತಮ್ಮಾ ಭಕ್ತಿಗೆ ಮೆಚ್ಚುವನು ಭಗವಂತಾ
ಮತ್ತೊಂದು ಮಾತ ಹೇಳಬೇಕ ನೀವು ಕೇಳತೀವಿ ಮುಂದಿಂದಾ
ಬಲ್ಲ ಪಂಡಿತಗ ಬಹಳ ಬಿರಿ ಇಲ್ಲ ಅರಿಯದವರು ಮಾಡತಾರ ಭೇದ
ಉಣ್ಣು ಅಂದರ ಹೊನ್ನಿನ ರೂಪ ಎಲ್ಲರಿಗೆ ಬೇಕಾಗುವದಾ
ಗುರುವಿನ ಗದ್ದುಗೆ ಹಾಸಗಂಬಳಿ ಉಣ್ಣಿಯಿಂದ ಆಗುದು ಚಂದಾ
ಕುರಿಯ ಉಣ್ಣಿಗೆ ಮಡಿಯ ಮೈಲಿಗಿಲ್ಲ ಹುಟ್ಟೀತಿ ಸಾಂಬನ ವರದಿಂದ
ರಾಡಿಪದಗಳ ಹಾಡಿ ಏನು ಫಲಾ ನೋಡಿರೆಪ್ಪ ಮನಸ್ಸಿಗೆ ತಂದ
ಡೊಳ್ಳಿನೊಳಗ ಕೈಪೆಟ್ಟ ಹಾಕಿ ನೀವು ಸ್ವರಾ ತಗದು ಹಾಡತೀರಿ ಕುಣದಾ
ಕಡ್ಡಿಯಂತೆ ಕುಣಕುಣದು ಹಾಡಿದರ ದಡ್ಡ ಅಂತ ಜನಾ ಅನ್ನುವದಾ
ಹಿಂದಿನ ಮಾತ ಮರಿಯದೆ ಹೇಳಿರಿ ಕುರಿಯು ಟಗರು ಹುಟ್ಟಿದ ಗುರತಾ
ತೋಡಿಗೆ ತೋಡಿ ಹಾಡುತ್ತ ಹೋದರ ನೋಡುವವರಿಗೆ ಉಲ್ಲಾಸ
ಚಲೋ ಹಾಡುವವರಂತ ನಮ್ಮ ನಿಮ್ಮನ್ನ ಕರಸತಾರ ಮುಂದಿನ ವರುಷ
ಮಾತಿನ ಉತ್ತರ ಹೇಳದಿದ್ದರ ನಿಮ್ಮ ಕಡೆ ಉಳಿಯುವದು ದೋಷ
ಬಾರದ ಮಾತಿಗೆ ಬಡದಾಡ ಬ್ಯಾಡರಿ ಸರಸವಾಗಿ ಹಾಡುದು ಲೇಸಾ
ಹರುಷದಿಂದ ಹಾರ‍್ಯಾಡಿ ಹಾಡೂನು ಹಾಡಿದರ ಸಭಾ ಆಗಬೇಕ ಸಂತೋಷ
ಬೆಂಡುಬೆತ್ತಾಸ ತಂದು ಹಾರಿಸಿ ಕುಂತ ಮಂದಿ ಅಂತಾರೋ ಪಾಸಾ
ಶಿವನ ಭಕ್ತಿ ಶಿವಲಿಂಗ ಸದ್ಗುರು ಭುವನದೊಳಗೆ ಹುಲಕುಂದ ಪಾಸಾ
ವರಕವಿ ಎಂದು ಬಿರುದು ಧರಿಸಿದಾ ಸಾರಜಾಕ್ಷ ಕವಿಕುಲ ಅರಸ
ಕುಳಗೇರಿ ಊರಾ ಇರುವದು ನಾವಾ ಭೂಮಿಯೊಳಗೆ ಇದು ಕೈಲಾಸ
ಶ್ರೀ ಗುರುಸಿದ್ಧ ಗ್ರಾಮದೇವರಾ ನಿತ್ಯದಲ್ಲಿ ಆತನ ಧ್ಯಾಸಾ
ನಮ್ಮ ನಾಮದ ನೆನಪು ಹಚ್ಚಿಕೊಳ್ಳಿರಿ ಪುರಮಾಸಾ˜™

 

ಡೊಳ್ಳಿನ ಮೇಲೆ ಕೈಯಿರಲಿ

ಹೋತೆನ್ನ ಹುಲಿಯೋ ಪಾತಾಳಕೆ ಇಳಿಯೋ
ಬಗ್ಗಿಸಿ ಕಡಿಯೋ ಬಿಡ ನನ ಕುರಿಯ
ಕುರುಬರಪ್ಪನವು ಕುರುಬಾರೊ
ಏನನ ಅರಿಯದ ಕುರುಬಾರೋ

ಬಿಳೆ ವಸ್ತರ ಪಳಾರ ಹಾಕಿಕೊಂಡು
ಟರ್ ಅಂತ ಕುರಿಗಳು ಕಾಯುವರು
ವಟ ವಟ ಕೋಲು ಹಿಡಿಯುವರಪ್ಪ
ಒಡಕಲು ಸಂಗಟಿ ಉಣ್ಣುವರು

ಹೋತೆನ್ನ ಹುಲಿಯೋ ಪಾತಾಳವ ಹಿಡಿಯೋ
ಮಾತಾಡೋ ನನ್ನ ಕಿರಿಡೊಳ್ಳೊ
ಕುರಿಯ ಮೇಲೆ ಒಂದು ಕಣ್ಣಿರಲೆಪ್ಪ
ಡೊಳ್ಳಿನ ಮೇಲೆ ಒಂದು ಕೈಯಿರಲಿ

ಇಲ್ಲಿಗೆ ಒಂದು ಸಂದೇಳು ಗುರುವೆ
ಹಾಡಿದಾರ ಪದ ಮುಂದ್ಕೇಳು

˜™

ಯಾವುದು ಮೇಲು ?

ಸ್ವಾಮಿ ನಮ್ಮಯ್ಯ ದೇವರ ಬಂದಾವ ಬನ್ನಿರೆ
ಗುರುವೆ ನಮ್ಮಯ್ಯ ದೇವರ ಬಂದಾವ ಬನ್ನಿರೆ          ||ಪ||

ಭಕ್ತಿಯೊಳಗ ಬಸವಣ್ಣ ಮೇಲು, ಯುಕ್ತಿಯೊಳಗ ನಾರದ ಮೇಲು
ಶಕ್ತಿಯೊಳಗ ಹನುಮಂತ ಮೇಲು | ಸ್ವಾಮಿ…..

ಊಟದೊಳಗ ಉಪ್ಪುಮೇಲು, ತ್ವಾಟದೊಳಗ ರಾಟಳ ಮೇಲು
ಆಟದೊಳಗ ಕುಣಿತ ಮೇಲು | ಸ್ವಾಮಿ…..

ಕತ್ತರಿಸಿದ ಕಮಾನ ಚಂದ, ಮೇಲಾಡುವ ವಿಮಾನ ಚಂದ
ನಾಚ ಮಾಡುವ ನಾರಿ ಚಂದ | ಸ್ವಾಮಿ….

ಹಕ್ಕಿಯೊಳಗ ಗಿಳಿ ಮೇಲು, ಚಿಕ್ಕಿಯೊಳಗ ಚಂದಿರ ಮೇಲು
ದೇಶಕ್ಕೆಲ್ಲ ಸೂರ್ಯಮೇಲು | ಸ್ವಾಮಿ…..

ಮಕ್ಕಳಿದ್ದ ಮನಿಚಂದ, ರೊಕ್ಕವಿದ್ದ ವ್ಯಾಪಾರ ಚಂದ
ಒಕ್ಕಲಿಗಗ ಬಸವಣ್ಣ ಚಂದ | ಸ್ವಾಮಿ……

ಒಕ್ಕಲುತನಕ ಮಂಡಿ ಮೇಲು, ಮುತ್ತೈತನಕ ದಂಡಿ ಮೇಲು
ಕರಿದರೊಳಗ ಕಂಬಳಿ ಮೇಲು | ಸ್ವಾಮಿ….

ವಾದ್ಯದೊಳಗ ವಾಲಗ ಮೇಲು, ಕಾಳಗದಾಗ ಬಾಣ ಮೇಲು
ಸ್ವಾಮಾನದೊಳಗ ತಾಳಿಮೇಲು | ಸ್ವಾಮಿ….

ಸ್ವಾಮಿ ನಮ್ಮಯ್ಯ ದೇವರ ಬಂದಾವ ಬನ್ನಿರೆ
ಗುರುವೆ ನಮ್ಮಯ್ಯ ದೇವರ ಬಂದಾವ ಬನ್ನಿರೆ.

˜™

ಡೊಳ್ಳಿನ ಮೇಲೆ ಕೈಯಿರಲಿ

ಹೋತೆನ್ನ ಹುಲಿಯೋ ಪಾತಾಳಕೆ ಇಳಿಯೋ
ಬಗ್ಗಿಸಿ ಕಡಿಯೋ ಬಿಡ ನನ ಕುರಿಯ
ಕುರುಬರಪ್ಪನವು ಕುರುಬರೊ
ಏನನ ಅರಿಯದ ಕುರುಬಾರೋ

ಬಿಳೆ ವಸ್ತರ ಪಳಾರ ಹಾಕಿಕೊಂಡು
ಟರ್ ಅಂತ ಕುರಿಗಳು ಕಾಯುವರು
ವಟ ವಟ ಕೋಲು ಹಿಡಿಯುವರಪ್ಪ
ಒಡಕಲು ಸಂಗಟಿ ಉಣ್ಣುವರು

ಹೋತೆನ್ನ ಹುಲಿಯೋ ಪಾತಾಳವ ಹಿಡಿಯೋ
ಮಾತಾಡೋ ನನ್ನ ಕಿರಿಡೊಳ್ಳೊ
ಕುರಿಯ ಮೇಲೆ ಒಂದು ಕಣ್ಣಿರಲೆಪ್ಪ
ಡೊಳ್ಳಿನ ಮೇಲೆ ಒಂದು ಕೈಯಿರಲಿ

ಇಲ್ಲಿಗೆ ಒಂದು ಸಂದೇಳು ಗುರುವೆ
ಹಾಡಿದಾರ ಪದ ಮುಂದ್ಕೇಳು

˜™

ಡೊಳ್ಳಿನ ಗ್ಯಾನೊಂದಿರಬೇಕು

ತಾಳ ನಿಮ್ಮ ಕೈಯಲ್ಲಿದ್ದರ ತಮ್ಮಾ
ತಾಳದ ಗ್ಯಾನೊಂದಿರಬೇಕೋ
ಸಂಗ ನಿಮ್ಮೊಳಗಿದ್ದರೆ ತಮ್ಮ ಸಂಗಿನ
ಗ್ಯಾನೊಂದಿರಬೇಕೋ

ಪುಸ್ತಕ ನಿಮ್ಮಲ್ಲಿದ್ದರೆ ತಮ್ಮಾ
ಅಕ್ಷರ ಗ್ಯಾನೊಂದಿರಬೇಕೋ
ದನಿಯು ನಿಮ್ಮಲ್ಲಿದ್ದರೆ ತಮ್ಮಾ
ಹಾಡಿನ ಗ್ಯಾನೊಂದಿರಬೇಕೋ

ಮನಸು ನಿಮ್ಮಲಿ ಇದ್ದರೆ ತಮ್ಮಾ
ಬುದ್ಧಿಯು ಗ್ಯಾನೊಂದಿರಬೇಕೋ
ವಿದ್ಯೆ ನಿಮ್ಮಲ್ಲಿದ್ದರೆ ತಮ್ಮಾ
ಗುರುವಿನ ಗ್ಯಾನೊಂದಿರಬೇಕೋ

ಜಗಲಿ ನಿಮ್ಮನಿಯಲಿದ್ದರೆ ತಮ್ಮಾ
ದೇವರ ಗ್ಯಾನೊಂದಿರಬೇಕೋ
ದೇವರ ನಂಬಿಕೆ ಇದ್ದರೆ ತಮ್ಮಾ
ಭಕ್ತಿಯ ಗ್ಯಾನೊಂದಿರಬೇಕೋ

ದಿಮ್ಮು ನಿಮ್ಮಲಿಯಿದ್ದರೆ ತಮ್ಮಾ
ದಿಮ್ಮಿನ ಗ್ಯಾನೊಮದಿರಬೇಕೋ
ಡೊಳ್ಳು ನಿಮ್ಮಲಿಯಿದ್ದರೆ ತಮ್ಮಾ
ನಾದದ ಗ್ಯಾನೊಂದಿರಬೇಕೋ