ಪಲ್ಲವಿ : ಗತಿ ನೀನೆ ನನ್ನ ಮತಿ ನೀನೆ
ರಮಾಪತಿ ನೀನೇ ಹರೇ ಶ್ರೀಕೃಷ್ಣಾ !

ಚರಣ :  ಮಂತ್ರ ನೀನೇ ನನ್ನ ಯಂತ್ರ ನೀನೇ
ನಿನ್ನ ಛತ್ರದಡಿಯಲ್ಲಿ ನಿಂತೆ ನಾನು 

ನಿದ್ದೆಯಲ್ಲೀ… ಕನಸಿನಲ್ಲೀ….
ಎಚ್ಚರಾದಾಗಲೆಲ್ಲ ನಿನ್ನ ನಾಮಹೇಳುವೆ

ಅನ್ನವನ್ನು ತಿನ್ನುವಾಗ ಮೈಮರೆತು ಮಲಗಿದಾಗ
ಎಲ್ಲ ಕಾಲದಲ್ಲಿ ನಾ ಕೃಷ್ಣ ಕೃಷ್ಣ ಅನ್ನುವೇ

ಕಂಡು ಕಾಣದ ತಪ್ಪುಗಳ ಮನ್ನಿಸಿನ್ನು ಉದ್ಧರಿಸು
ಉದ್ಧವನ ರಕ್ಷಿಸಿದ ಶ್ರೀಕೃಷ್ಣಾ !

ಜಯಕಾರ ಮಾಡುವಗೆ ಜಯವನ್ನು ಹೇಳುವೆ
ಜಯಲಕ್ಷ್ಮೀ ತರುವನೇ ಶ್ರೀಕೃಷ್ಣಾ !