ಹೆಸರು: ಮಂಜುನಾಥ
ಊರು: ಹೆಚ್.ಡಿ.ಕೋಟೆ.

ಪ್ರಶ್ನೆ: Chronic Servire Cervicitis ಕಾಯಿಲೆ ಇರುವ ೩೦ ವರ್ಷ ವಯಸ್ಸಿನ ಹೆಂಗಸಿಗೆ ಗರ್ಭಕೋಶ ತೆಗೆಯುವುದರಿಂದ ಸಮಸ್ಯೆ ಪರಿಹಾ ಆಗುತ್ತದೆಯೇ? ಗರ್ಭಕೋಶ ತೆಗೆಯುವುದಾದರೆ ಮಹಿಳೆಗೆ ಎಷ್ಟು ವಯಸ್ಸಾಗಿರಬೇಕು? ದಯವಿಟ್ಟು ಸಮಸ್ಯೆಗೆ ಪರಿಹಾರ ತಿಳಿಸಿರೆಂದು ಬೇಡುತ್ತಿದ್ದೇನೆ.

ಉತ್ತರ: ಗರ್ಭಕೋಶವನ್ನು ತೆಗೆಯುವುದರಿಂದ ಆಗುವ ಸಮಸ್ಯೆಗಳು.

ಶೇ. ೧೦ ರಿಂದ ೧೫ ಮಹಿಳೆಯರು ಒಂದಲ್ಲಾ ಒಂದು  ರೀತಿಯ ತೊಂದರೆಗೆ ತು‌ತ್ತಾಗುತ್ತಾರೆ. ಗರ್ಭಕೋಶವನ್ನು ಮೂರು ರೀತಿಯಲ್ಲಿ ತೆಗೆಯಬಹುದು.

. ತೆರೆದ ಉದರ ಶಸ್ತ್ರ ಚಿಕಿತ್ಸೆಯ ಮುಖಾಂತರ.

. ಲ್ಯಾಪ್ರೊಸ್ಕೋಪಿ (ಉದರದರ್ಶಕ) ಮುಖಾಂತರ.

. ಯೋನಿಯ ಮುಖಾಂತರ ಗರ್ಭಕೋಶವನ್ನು ತೆಗೆಯಬಹುದು.

ಸಮಸ್ಯೆಗಳು:

.ಸೋಂಕು ಉಂಟಾಗುತ್ತದೆ: ಜನನೇಂದ್ರಿಯಗಳಲ್ಲಿ ಸೋಂಕು ಉಂಟಾಗುತ್ತದೆ.

. ಸಂಭೋಗ ಕ್ರಿಯೆ ಕಷ್ಟವಾಗತ್ತದೆ: ಯೋನಿಯು ಸಂಕುಚಿತಗೊಂಡು ಅದರ ಆಳ (Depth) ಕಡಿಮೆಯಾಗಿ ಆಕೆಯ ಗಂಡನಿಗೆ ಸಂಭೋಗ ಸುಖ ಮತ್ತು ತೃಪ್ತಿ ಸಿಗುವುದಿಲ್ಲ. ಮಹಿಳೆಗೆ ಅತೀವ ಯಾತನೆ ಉಂಟಾಗುತ್ತದೆ.

. ಮುತ್ರಕೋಶದ ತೊಂದರೆಗಳು: ಈ ಸಮಸ್ಯೆಯಿಂದ ಮೂತ್ರ ವಿಸರ್ಜನೆ ಕಷ್ಟವಾಗುತ್ತದೆ ಮತ್ತು ಅನಿಯಂತ್ರಿತ ಮುತ್ರ ವಿಸರ್ಜನೆಯಾಗುತ್ತದೆ.

೪. ರಕ್ತ ಹೆಪ್ಪುಗಟ್ಟುತ್ತದೆ.

೫. ಶಸ್ತ್ರಚಿಕಿತ್ಸೆ ಸಮಯದಲ್ಲಿ ಅಕ್ಕಪಕ್ಕದ ಅಂಗಾಂಗಗಳಿಗೆ (ಮುತ್ರಕೋಶ, ಮುತ್ರನಾಳ, ಕರುಳು) ಪೆಟ್ಟು ತಗಲುವ ಸಾಧ್ಯತೆಯಿರುತ್ತದೆ.

. ಮಾನಸಿಕ ಖಿನ್ನತೆ: ತನ್ನಲ್ಲಿ ಏನೋ ಕಳೆದುಕೊಂಡ ಅನುಭವವಾಗಿ ಅದೇ ಮನಸ್ಸಿನಲ್ಲಿ ಬೇರೂರಿಬಿಟ್ಟಿರುತ್ತದೆ. ಇದರಿಂದ ಮಾನಸಿಕ ಅಸಮತೋಲನಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.

೭. ಯೋನಿರಸದ ಉತ್ಪಾದನೆ ಕುಗ್ಗುತ್ತದೆ.

. ಋತುಬಂಧನ ಚಿಹ್ನೆಗಳು: ಗರ್ಭಕೋಶನ್ನು ತೆಗೆಯುವುದರಿಂದ ಶೀಘ್ರ ಋತುಬಂಧಕ್ಕೆ ಗುರಿಯಾಗಬಹುದು.

೯. ಕೆಲವು ಸಾರಿ ಗರ್ಭಕೋಶದ ಜೊತೆ ಅಂಡಾಶಯಗಳನ್ನು ತೆಗೆಯುತ್ತಾರೆ. ಆಗ ಹಾರ್ಮೋನ್‌ಗಳ ಕೊರತೆ ಉಂಟಾಗಿ ಶೀಘ್ರ ಮುಪ್ಪಾಗುತ್ತಾರೆ.

ಈ ಎಲ್ಲಾ ಸಮಸ್ಯೆಗಳನ್ನು ನೋಡಿದರೆ ಗರ್ಭಕೋಶವನ್ನು ತೆಗೆಯುವ ಬದಲು ಇತರೆ ಪರಿಹಾರಗಳಿವೆಯೇ ಎಂದು ತಿಳಿದುಕೊಂಡು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಒಂದು ವೇಳೆ ಬೇರೆ ಯಾವುದೇ ಪರಿಹಾರವೇ ಇಲ್ಲವೆಂದಾಗ ಮಾತ್ರ ಗರ್ಭಕೋಶವನ್ನು ತೆಗೆಸಬಹುದು. ಗರ್ಭಕೋಶ ತೆಗೆಸುವ ಮುನ್ನ ಯೋಚಿಸಬೇಕು ಮತ್ತು ಆಪ್ತ ವೈದ್ಯರೊಡನೆ, ಕುಟುಂಬ ವೈದ್ಯರೊಡನೆ ಸಮಾಲೋಚಿಸಬೇಕು. ಇನ್ನೊಬ್ಬ ತಜ್ಞವೈದ್ಯರ ಎರಡನೇ ಸಲಹೆ ಪಡೆಯಲು ಹಿಂದೆ ಬೀಳಬಾರದು.

ನಿಮಗಿರುವ ಮುಟ್ಟಿನ ತೊಂದರೆಗೂ ಗರ್ಭಕೋಶ ತೆಗೆಯುವುದಕ್ಕೂ ಯಾವುದೇ ಸಂಬಂಧವಿಲ್ಲ. ಮುಟ್ಟಿನ ತೊಂದರೆಯಾಗಿರುವುದು ಹಾರ್ಮೋನ್‌ಗಳ ವ್ಯತ್ಯಾಸದಿಂದ. ಹಾರ್ಮೋನ್‌ಗಳ ವ್ಯತ್ಯಾಸವನ್ನು ಸರಿದೂಗಿಸಲು ಮತ್ತು ಮುಟ್ಟಿನ ದೋಷವನ್ನು ಸರಿಪಡಿಸಲು ಮಾಲಾಡಿ ಮಾತ್ರೆಯನ್ನು ೩ ರಿಂದ ೬ ತಿಂಗಳು ತೆಗೆದುಕೊಳ್ಳುವುದರಿಂದ ಸವಸ್ಯೆಯನ್ನು ಸರಿಪಡಿಸಬಹುದು. ಹೊಟ್ಟೆನೋವಿಗೆ ನೋವು ನಿವಾರಕ ಔಷಧಿಯನ್ನು ತೆಗೆದುಕೊಳ್ಳಬಹುದು. ಉದಾಹರಣೆಗೆ: Meftal Spas. ಯಾವುದಕ್ಕೂ ನೀವು ಒಮ್ಮೆ ಸ್ತ್ರೀರೋಗ ತಜ್ಞವೈದೈರನ್ನು ಕಾಣುವುದು ಒಳ್ಳೆಯದು.

ಸ್ಕ್ಯಾನಿಂಗ್ ಮುಟ್ಟಾದ ೫ನೇ ದಿನದಿಂದ ಪ್ರತಿ ದಿನ ಒಂದರಂತೆ Ovral-G ಮಾತ್ರೆಯನ್ನು ೨೧ ದಿನ ತೆಗೆದುಕೊಳ್ಳಿ. ಇದರ ಜೊತೆಗೆ Trapic ಮಾತ್ರೆಯನ್ನು ದಿನಕ್ಕೆ ಒಂದರಂತೆ ತೆಗೆದುಕೊಳ್ಳಿ. ಒಂದು ವೇಳೆ ಚಾಕಲೇಟ್ ಬಣ್ಣದ ರಕ್ತಸ್ರಾವ ಹೆಚ್ಚಿಗೆ ಕಂಡುಬಂದರೆ ಈ ಮಾತ್ರೆಯನ್ನು ದಿನಕ್ಕೆ ೨ ರಂತೆ ತೆಗೆದುಕೊಳ್ಳಿ.