ಗರ್ಭಿಣಿಕುಟುಂಬ ನಿಯಂತ್ರಣ ಸೆಕ್ಸ್

ಇಂದು ಭಾರತದಲ್ಲಿ ಕುಟುಂಬ ಯೋಜನೆಯ ಬಗ್ಗೆ ಪ್ರಚಾರ ಬಿರುಸಾಗಿ  ಸಾಗಿರುವುದರಿಂದ, ಪ್ರತಿಯೊಂದು ಕುಟುಂಬದ, ದಂಪತಿಗಳು ಆಧುನಿಕ ಗರ್ಭ ನಿರೋಧಕಗಳ ಬಗ್ಗೆ ತಿಳಿದುಕೊಳ್ಳಲು ಕಾತರರಾಗಿರುತ್ತಾರೆ. ಆಧುನಿಕ ಗರ್ಭ ನಿರೋಧಕಗಳು ಬಂದಿರುವುದರಿಂದ ಶರೀರಕ್ಕೆ ಯಾವ ರೀತಿಯ ಅಪಾಯವು ಉಂಟಾಗುವುದಿಲ್ಲ. ಅಲ್ಲದೆ, ದಂಪತಿಗಳು ಬಸಿರಿನ ಭಯವಿಲ್ಲದೆ ಮುಕ್ತವಾದ ಲೈಂಗಿಕ ಕ್ರಿಯೆಯನ್ನು ನಡೆಸಲೂಬಹುದು. ಅಷ್ಟೇ ಅಲ್ಲದೆ, ‘ಸೆಕ್ಸ್’ನಿಂದ ಉಂಟಾಗುವ ರಿಸ್ಕ್‌ನ್ನು ಇಂದು ವೈದ್ಯಕೀಯ ಗರ್ಭಪಾತ ನಿವಾರಿಸುತ್ತದೆ. ಇಂದು, ದಂಪತಿಗಳು ಸಂತಾನಕ್ಕಾಗಿಯೇ ಸೆಕ್ಸ್‌ನ್ನು ಬಯಸದೆ, ದಾಂಪತ್ಯ ಮನೋರಂಜನೆಗಾಗಿ ಬಳಸುತ್ತಿರುತ್ತಾರೆ. ಕುಟುಂಬವನ್ನು ಒಂದು, ಎರಡು ಅಥವಾ ಮೂರು ಮಕ್ಕಳಿಗೆ ಮಿತಿಗೊಳಿಸಿಕೊಂಡು ‘ಸೆಕ್ಸ್’ನ್ನು ತಮ್ಮ ದಾಂಪತ್ಯ ಬದುಕಿನಲ್ಲಿ ರಂಜನೀಯವಾಗಿ ಅನುಭವಿಸಲು ಆಸಕ್ತರಾಗಿರುತ್ತಾರೆ. ಇಂದಿನ ಕುಟುಂಬ ಯೋಜನಾ ಯುಗದಲ್ಲಿ ಮಗುವು ಗಂಡ-ಹೆಂಡತಿಯ ಮಧ್ಯದ ಪ್ರಾಮಾಭಿ ವ್ಯಕ್ತಿಯಾಗಿರುತ್ತದೆ.

ಬೇಕಾಗಿರುವ ಬಸಿರು ಕೂಡ ದಂಪತಿಗಳ ನಡುವೆ ಕಂದಕವನ್ನು ಏರ್ಪಡಿಸಬಲ್ಲದು. ಪುರುಷ, ತನ್ನ ಹೆಂಡತಿ ಬಸಿಇರ ಆಗಿದ್ದಾಗ ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿದರೆ ಪಿಂಡಗೂಸಿಗೆ ಎಲ್ಲಿ ಹಾನಿ ಉಂಟಾಗುತ್ತದೇ ಎಂಬ ಭಯ ಹೊಂದಿರುತ್ತಾನೆ. ಪತ್ನಿ, ಗರ್ಭಿಣಿ ಆಗಿದ್ದಾಗ ಎಷ್ಟೋ ಗಂಡಂದಿರು ನಾಚಿಕೆ ಪಟ್ಟುಕೊಂಡು ಹೆಂಡತಿಯಿಂದ ದೂರವೇ ಇರುತ್ತಾರೆ. ಆದರೆ, ಹೆಣ್ಣು ಬಸಿರಾಗಿರುವಾಗ ಎಂದಿಗಿಂತಲೂ ಹೆಚ್ಚು ಸಂವೇದನೆಯನ್ನು ಮತ್ತು ಲೈಂಗಿಕ ಪ್ರತಿಕ್ರಿಯೆಯನ್ನು ತೋರುವಂತವಳಾಗಿರುತ್ತಾಳೆ.

ಬಸಿರಿ ಹೆಂಡತಿಯ ದೊಡ್ಡ ಗಾತ್ರದ ಹೊಟ್ಟೆಯನ್ನು ನೋಡಿ ಕೆಲವು ಗಂಡಂದಿರು ಪತ್ನಿಯ ಜೊತೆ ತಿರುಗಾಡಲು ಕೂಡ ನಾಚಿಕೊಳ್ಳುವುದುಂಟು. ಹೆಣ್ಣು, ಮೊದಲ ಸಲ ಗರ್ಭಿಣಿ ಆದಾಗ, ಕೆಲವೊಮ್ಮೆ ಆಕೆಗೆ ಗಂಡನ ಲೈಂಗಿಕ ಅಗತ್ಯತೆ ಏನು ಎಂಬುದರ ಅರಿವು ಉಂಟಾಗದೆ ಇರುವುದರಿಂದ, ಪುರುಷನಿಗೆ, ನನ್ನ ಪತ್ನಿ ನನ್ನನ್ನು ತಿರಸ್ಕರಿಸುತ್ತಿದ್ದಾಳೆ ಎಂಬ ಭಾವನೆ ಮೂಡಬಹುದು. ಕೂಸಿನ ಬಗ್ಗೆ ಅಸೂಯೆಯನ್ನು ಹೊಂದಿರಬಹುದು. ಹೊರಗಡೆ ಲೈಂಗಿಕ ಸಂಬಂಧಕ್ಕೆ ಪ್ರಯತ್ನವನ್ನು ಮಾಡಲು ಬಹುದು!

ಆದರೆ, ಹೆಣ್ಣು ಗರ್ಭಿಣಿ ಆಗಿದ್ದಾಗ ಕೆಲವು ಮುನ್ನೆಚ್ಚರಿಕೆಗಳನ್ನು ಪರಿಪಾಲಲಿಸಿ ಲೈಂಗಿಕ ಚಟುವಟಿಕೆಯನ್ನು ನಡೆಸುವುದರಿಂದ ‘ಪಿಂಡಗೂಸಿ’ಗೆ ಯಾವ ರೀತಿಯ ಹಾನಿಯೂ ಉಂಟಾಗುವುದಿಲ್ಲವೆಂದು ಸ್ತ್ರೀ ರೋಗ ತಜ್ಞ  ‘ಪಿಂಡಗೂಸಿ’ಗೆ ಯಾವ ರೀತಿಯ ಹಾನಿಯೂ ಉಂಟಾಗುವುದಿಲ್ಲವೆಂದು ಸ್ತ್ರೀ ರೋಗ ತಜ್ಞ ವೈದ್ಯರು ಅಭಿಪ್ರಾಯಪಟ್ಟಿರುತ್ತಾರೆ. ಅಲ್ಲದೆ, ಗರ್ಭಿಣಿ ಸ್ತ್ರೀಯ ಯೋನಿಯಲ್ಲಿ ಪುರುಷ ತನ್ನ ಶಿಶ್ನ (ಪೆನಿಸ್) ವನ್ನು ಒಳತೂರಿಸಿ, ಲೈಂಗಿಕ ಕ್ರಿಯೆಯನ್ನು ನಡೆಸುವಾಗಲೂ ಮಗುವಿಗೆ ಏನು ತೊಂದರೆ ಆಗುವುದಿಲ್ಲ ಅಥವಾ ಮಗುವಿನ ತಲೆಗೆ ಹಾನಿಯುಂಟಾಗಿ ಅದರ ಮಿದುಳು ಕೂಡಾ ಹಾಳಾಗುವುದಿಲ್ಲ.

ಮಗುವಿಗೆ, ತಾಯಿಯ ಎದೆ ಹಾಲೇ ಸರ್ವಶ್ರೇಷ್ಠ ಆಹಾರ

ಕೆಲವೊಮ್ಮೆ ಯೋನಿಯ ಮೂಲಕ ರಕ್ತಸ್ರಾವ ಅಥವಾ ವಜೈನಲ್ ಬ್ಲಿಡಿಂಗ್ ಉಂಟಾದರೆ ದಂಪತಿಗಳು, ಲೈಂಗಿಕ ಕ್ರಿಯೆಯನ್ನು ಮಿತಗೊಳಿಸಿಕೊಳ್ಳಬೇಕು. ವೈದ್ಯರು, ತಾತ್ಕಾಲಿಕವಾಗಿ ನಿಲ್ಲಿಸಿ ಎಂದರೆ ನಿಲ್ಲಿಸಿ ಬಿಡಬೇಕು ಅದಕ್ಕೆ ಬದಲಾಗಿ ಮುಖರತಿ (ಓರೆಲ್ ಸೆಕ್) ಮತ್ತು ಹಸ್ತ ಮೈಥುನ ತಂತ್ರಗಳನ್ನು ಅನುಸರಿಸಬಹುದು. ಆಗಿಂದಾಗ್ಗೆ ಗರ್ಭಪಾತ ಹೊಂದುವ ಹೆಂಗಸರು, ಒಂದು ಅಥವಾ ಹೆಚ್ಚು ಮಕ್ಕಳನ್ನು ಗರ್ಭಪಾತ (ಅಬಾರ್ಶನ್) ದಿಂದ ಕಳೆದುಕೊಂಡಿದ್ದರೆ ಅಂತಹವರು ಹಸ್ತ ಮೈಥುನ ಮತ್ತು ಲೈಂಗಿಕ ಸಂಭೋಗವನ್ನು ತಡೆಗಟ್ಟಿಕೊಳ್ಳಬೇಕು. ಅಲ್ಲದೆ, ತಜ್ಞ ವೈದ್ಯರು ಪತ್ನಿ ಗರ್ಭಿಣಿ ಆಗಿದ್ದಾಗ ಗುದ ಲೈಂಗಿಕ ಸಂಭೋಗಕ್ಕೆ ಶಿಫಾರಸ್ಸನ್ನು ಮಾಡಿರುವುದಿಲ್ಲ. ಆದುದರಿಂದ, ಮೊದಲು ಅನುಸರಿಸುತ್ತಿದ್ದ ವೈವಿಧ್ಯ ಹಾಗೂ ಸಾಹಸ ಲೈಂಗಿಕ ಚಟುವಟಿಕೆಗಳನ್ನು ಹೆಂಡತಿ ಬಸಿರಿ ಆಗಿದ್ದಾಗ, ತಡೆಗಟ್ಟಿಕೊಳ್ಳಬೇಕು ಶರೀರಕ್ಕೆ ಹಾನಿ ಉಂಟು ಮಾಡದ ಪ್ರೇಮ ಚಟುವಟಿಕೆ ಗಳಿಂದ ತೃಪ್ತಿಯನ್ನು ಕಾಣಬೇಕು.

ಆರೋಗ್ಯವಂತ ಪತ್ನಿ ಗರ್ಭಿಣಿ ಆಗಿದ್ದಾಗ ಅನುಸರಿಸಬಹುದಾದ ಸಂಭೋಗಾಸನಗಳು

ಕೆಲವೊಮ್ಮೆ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿಗಳಿಗೆ ಲೈಂಗಿಕ ಸಂಭೋಗವನ್ನು ಮಾಡಬಾರದೆಂದು ತಿಳಿಸಿದಾಗ ‘ಯಾತಕ್ಕೆ?’ ಮಾಡಬಾರದೆಂಬುದನ್ನು ವೈದ್ಯರು ವಿವರಿಸಿ ಹೇಳಬೇಕಾದ್ದು ಅಗತ್ಯ. ಬಸಿರಾಗಿದ್ದಾಗ ದಂಪತಿಗಳು ತಾತ್ಕಾಲಿಕವಾಗಿ ‘ಲೈಂಗಿಕ ಸಂಭೋಗ’ವನ್ನು ಯಾವ ಕಾರಣಕ್ಕಾಗಿ ನಡೆಸಬಾರದು ಎಂಬುದನ್ನು ವೈದ್ಯರು ತಿಳಿಸದಿದ್ದರೆ ದಂಪತಿಗಳಿಬ್ಬರಲ್ಲಿ ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಂತ್ತಾಗುತ್ತದೆ. ವೈದ್ಯರು ಬಸಿರಿ ಹೆಂಗಸು ಮತ್ತು ಆಕೆಯ ಗಂಡನು ಪ್ರಶ್ನೆಯನ್ನು ಕೇಳಿದರೆ ಸೂಕ್ತ ಉತ್ತರವನ್ನು ನೀಡುವುದು ಅಗತ್ಯ.

ದಂಪತಿಗಳು, ಬಸಿರಿನ ಬಗ್ಗೆ ಪ್ರಶ್ನೆಗಳನ್ನು ಸಮಕಾಲೀನ ಹಾಗೂ ವೈಜ್ಞಾನಿಕ ವಿಚಾರಗಳನ್ನು ತಿಳಿದಿರುವ ತಜ್ಞ ವೈದ್ಯರನ್ನು ಭೇಟಿಯಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು.

ಬಸಿರು ತನವನ್ನು ಮೂರು, ಮೂರು ತಿಂಗಳು ಅವಧಿಯನ್ನಾಗಿ ವಿಭಾಗಿಸಿರುತ್ತಾರೆ. ಪ್ರತಿ ಅವಧಿಯಲ್ಲಿ ಹೆಣ್ಣು ಶಾರೀರಿಕ ಮತ್ತು ಭಾವನಾತ್ಮಕವಾಗಿ ಅನೇಕ ಬದಲಾವಣೆಗಳನ್ನು ಹೊಂದುತ್ತಾಳೆ ಮತ್ತು ಆಕೆಯ ಲೈಂಗಿಕ ಅಗತ್ಯತೆ, ಪ್ರತಿಕ್ರಿಯೆಯೂ ವ್ಯತ್ಯಾಸ ಗೊಂಡಿರುತ್ತದೆ.

ಕೆಲವು ಗರ್ಭಿಣಿ ಸ್ತ್ರೀಯರಿಗೆ ತನ್ನ ಗಂಡ ಲೈಂಗಿಕ ಕ್ರಿಯೆಯನ್ನು ನಡೆಸುತ್ತಿರುವಾಗ ಗರ್ಭಕೋಶದ ಸೆಡೆತ (Utrine Contractions) ವನ್ನುಹೊಂದಿರಬಹುದು. ಅಥವಾ ತಲೆ ನೋವು ಅಥವಾ ಕೆಳಹೊಟ್ಟೆಯ ನೋವನ್ನು ಲೈಂಗಿಕ ಸಂಭೋಗದ ನಂತರ ಅನುಭವಿಸಬಹುದು. ಈ ಚಿನ್ನೆಗಳು ಅಪಾಯಕಾರಿಯೇನಲ್ಲವಾದುದರಿಂದ ಬಸಿರಿ ಹೆಂಗಸು ಹೆದರಬೇಕಾಗಿಲ್ಲ. ಗರ್ಭಿಣಿ ಹೆಂಗಸು, ಲೈಂಗಿಕ ಕ್ರಿಯೆಯ ನಂತರ ಅನುಭವಿಸಬಹುದು. ಈ ಚಿನ್ನೆಗಳು ಅಪಾಯಕಾರಿಯೇನಲ್ಲವಾದುದರಿಂದ ಬಸಿರಿ ಹೆಂಗಸು ಹೆದರಬೇಕಾಗಿಲ್ಲ. ಗರ್ಭಿಣಿ ಹೆಂಗಸು, ಲೈಂಗಿಕ ಕ್ರಿಯೆಯ ನಂತರ ಸ್ವಲ ಹೊತ್ತು ವಿಶ್ರಾಂತಿ ಪಡೆದು, ಸಮಾಧಾನಕರವಾಗಿದ್ದರೆ ತೊಡಕು ತಾನಾಗಿಯೇ ನಿವಾರಣೆಯಾಗುತ್ತದೆ. ಕೆಳ ಹೊಟ್ಟೆಯನೋವು ಸೆಕ್ಸ್ ನಂತರ ಉಂಟಾದರೆ ಬಿಸಿ ನೀರಿನ ಕಾಪುಟವನ್ನು ಕೊಡಬಹುದು.

ಡಾ|| ಮಾಸ್ಟರ್ಸ್ ಅಂಡ್ ಜಾನ್ಸನ್ ಅವರುಗಳ ಅಭಿಪ್ರಾಯ:

“ದ್ವಿತೀಯ ಹಂತದ ಬಸಿರುತನ (Second Trimester) ದಲ್ಲಿ ಬಹಳಷ್ಟು ಹೆಂಗಸರು ಅಧಿಕವಾದ ಲೈಂಗಿಕ ಆಸೆಯನ್ನು ಹೊಂದಿರುತ್ತಾರೆ. ಈ ೪,೫ ಮತ್ತು ೬ನೆಯ ತಿಂಗಳುಗಳಲ್ಲಿ ಬಸಿರಿ, ಸಂಭೋಗವನ್ನು ಚೆನ್ನಾಗಿ ಅನುಭವಿಸುತ್ತಾಳೆ. ಆನಂದಿಸುತ್ತಾಳೆ. ಅಲ್ಲದೆ, ಉತ್ತಮ ರೀತಿಯಲ್ಲಿ ಆಕೆ ವರ್ತಿಸಬಲ್ಲಳು” ಎಂದು ತಿಳಿಸಿದ್ದಾರೆ.

ದ್ವಿತೀಯ ಹಂತದ ಬಸಿರಿ ಸ್ತ್ರೀಯರಲ್ಲಿ ಯೋನಿಯ ಅಂಗಾಂಶಗಳು (ಟಿಶ್ಯೂಸ್) ದೊಡ್ಡದಾಗಿರುತ್ತವೆ. ಯೋನಿಯು ಶಿಶ್ವವನ್ನು ಬಿಗಿ ಹಿಡಿದಲ್ಲಿಟ್ಟುಕೊಳ್ಳುತ್ತದೆ. ಇದರಿಂದ ನವಿರಾದ ಘರ್ಷಣೆ ಮೂಡಿ ದಂಪತಿಗಳಿಬ್ಬರಿಗೂ ಸಂತೋಷ ಲಭಿಸುತ್ತದೆ.

ಮಗು ಹುಟ್ಟಿದ ಎಷ್ಟು ದಿನಗಳ ನಂತರ ಪುನಃ ದಂಪತಿಗಳು ಲೈಂಗಿಕ ಚಟುವಟಿಕೆಯಲ್ಲಿ ತೊಡಗಬೇಕು?

ಹೆಣ್ಣು, ಶಿಶುವಿಗೆ ಜನನ ನೀಡಿದ ನಂತರ ಸಾಮಾನ್ಯವಾದ ಲೈಂಗಿಕ ಚಟುವಟಿಕೆಯಲ್ಲಿ ತೊಡಗಬೇಕಾದರೆ ಮೂರು ಸಂಗತಿಗಳನ್ನು ಅವಲಂಬಿಸಿರುತ್ತದೆ.

೧. ಮಗುವು, ಯೋನಿಯ ಮೂಲಕ ಸರಾಗವಾಗಿ ಹೊರಬರಲು ಮಾಡಿರುವ ಗೊಲ್ಲಿ ಕೊಯ್ಸೀಳಿಕೆ (Episiotomy) ಗುಣವಾಗಲು ಎಷ್ಟು ದಿನ ತೆಗೆದುಕೊಳ್ಳುತ್ತದೆ.

೨. ಹೆರಿಗೆಯಾದ ಎಷ್ಟು ದಿನಗಳ ನಂತರ ಆಕೆ ಕಾಮನೆಯ ಭಾವನೆಯನ್ನು ತೋರಿಸುತ್ತಾಳೆ.

೩. ಆಕೆ, ಯೋನಿ ಅಥವಾ ಗರ್ಭಕೋಶದ ರಕ್ತ ಸ್ರಾವವನ್ನು ಹೊಂದಿದ್ದಾಳೆಯೇ ಎಂಬ ಮೂರು ಸಂಗತಿಗಳನ್ನು ಅವಲಂಬಿಸಿರುತ್ತದೆ.

ಎಲ್ಲ ತಜ್ಞ ವೈದ್ಯರುಗಳು ಚೊಚ್ಚಲು ತಾಯಂದರಿಗೆ ಈ ರೀತಿಯ ಸಲಹೆಯನ್ನು ನೀಡುತ್ತಾರೆ.

“ನೀವು, ನಿಮ್ಮ ಪತಿಯೊಡನೆ ಲೈಂಗಿಕ ಚಟುವಟಿಕೆಯನ್ನು ನಡೆಸಲು ಮೂರು ತಿಂಗಳು ಕಾಯ್ದಿರಿ” ಇದರಿಂದ ಇಬ್ಬರಿಗೂ ಕ್ಷೇಮ ಎಂದು ತಿಳಿಸಿರುತ್ತಾರೆ.

ನಾರ್ಮಲ್ ಡೆಲಿವರಿ ಆಗಿದ್ದರೆ, ಮಗುವು, ಬಾಣಂತಿ ಆರೋಗ್ಯವಾಗಿದ್ದರೆ ಹೆರಿಗೆಯಾದ ಒಂದುವರೆ ಅಥವಾ ಎರಡು ತಿಂಗಳ ನಂತರ ಮೊದಲಿನಂತೆ ತಮ್ಮ ಗಂಡನ ಜೊತೆ ‘ಸೆಕ್ಸ್‌ಕ್ರಿಯೆ’ಯಲ್ಲಿ ತೊಡಗಬಹುದು.

ಮೊಲೆ ಹಾಲನ್ನು ಕುಡಿಸುತ್ತಿರುವ ತಾಯಂದಿರು, ಹೆರಿಗೆಯಾದ ನಂತರ ಹಾಲನ್ನು (ಬಾಟ್ಲಿ ಹಾಲನ್ನು ಕುಡಿಸುವುದು ಸೂಕ್ತವಲ್ಲ) ಕುಡಿಸುತ್ತಿರುವ ತಾಯಂದಿರಿಗಿಂತಲೂ ಬೇಗನೆ ‘ಕಾಮನೆಯ ಭಾವನೆ’ಯನ್ನು ಅಭಿವ್ಯಕ್ತಿಸುತ್ತಾರೆ. ಮೊಲೆ ಹಾಲನ್ನು ಕುಡಿಸುತ್ತಿರುವ ತಾಯಂದಿರ ಯೋನಿ ಮತ್ತು ಗರ್ಭಕೋಶ ಮೊದಲಿನ ಸಾಮಾನ್ಯ ಸ್ಥಿತಿಗೆ ಬೇಗನೆ ಬರುತ್ತದೆಂದು ತಜ್ಞರು ತಿಳಿಸಿರುತ್ತಾರೆ.

ಹೆಣ್ಣು ಬಸಿರಾಗಿರುವಾಗ ಪಾಲಿಸಬೇಕಾದ ವೈಯಕ್ತಿಕ ಆರೋಗ್ಯ ನಿಯಮಗಳು

೧. ಸಾಕಷ್ಟು ತಾಜಾ ಗಾಳಿ ಮತ್ತು ಸೂರ್ಯನ ಬೆಳಕು: ಗರ್ಭಿಣಿ ಸ್ತ್ರೀ, ಬೆಳಗ್ಗೆ ಮತ್ತು ಸಂಜೆಯ ವೇಳೆ ಸ್ವಲ್ಪ ಹೊತ್ತು ಗಿಡಮರಗಳಿರುವ ಕಡೆ ಅಥವಾ ಉದ್ಯಾನವನದಲ್ಲಿ (ಮನೆಯ ಹೊರಗಡೆ) ಸುತ್ತಾಡಿ ಬರಬೇಕು. ನೇರವಾದ ಸೂರ್ಯನ ಬೆಳಕು ಶರೀರದ ಮೇಲೆ ಸ್ವಲ್ಪ ಹೊತ್ತು ಬೀಳುವುದು ಒಳ್ಳೆಯದು. ಇದರಿಂದ ವಿಟಮಿನ್ ‘ಡಿ’ ಶರೀರಕ್ಕೆ ದೊರಕುತ್ತದೆ. ತಾಜಾ ಆಮ್ಲಜನಕವು ಶರೀರಕ್ಕೆ ಪೂರೈಕೆಯಾಗಿ ಲವಲವಿಕೆಯನ್ನು ಮೂಡಿಸುತ್ತದೆ.

೨. ಅಲ್ಲದೆ, ಸ್ವಲ್ಪ ದೂರ ಪ್ರಶಾಂತವಾದ ಸ್ಥಳದಲ್ಲಿ ವಾಕಿಂಗ್ ಹೋಗಿ ಬರುವುದು ಉತ್ತಮ ವ್ಯಾಯಾಮವಾಗಿರುತ್ತದೆ.

೩. ದಿನಗಳು ಕಳೆಯುತ್ತಿದ್ದಂತೆ ಬಸಿರುತನ ಮುಂದುವರೆಯುತ್ತದೆ. ತಾಯಿ ಹೆಚ್ಚೆಚ್ಚು ಭಾರವನ್ನು ಹೊರಬೇಕಾಗುತ್ತದೆ. ಆದುದರಿಂದ, ಹಗಲು ವೇಳೆ ಆಗಾಗ್ಗೆ ಅಲ್ಪ ಪ್ರಮಾಣದ ವಿಶ್ರಾಂತಿಯನ್ನು, ಪಾದಗಳನ್ನು ಎತ್ತರಿಸಿ ಪಡೆಯಬೇಕು. ಆಕೆ ಭಾರವಾದ ವಸ್ತುಗಳನ್ನು ಎತ್ತಬಾರದು ೮ರಿಂದ ೯ ಗಂಟೆಗಳ ಕಾಲವಾದರು ‘ನಿದ್ರೆ’ ಮಾಡಬೇಕು.

೪. ಪ್ರತಿನಿತ್ಯ ಶುದ್ಧವಾದ ಉಗುರು ಬೆಚ್ಚಗಿರುವ ನೀರಿನಿಂದ ಸ್ನಾನವನ್ನುಮಾಡಬೇಕು ಮತ್ತು ಸ್ನಾನ ಮಾಡುವಾಗ ಸೊಪ್ಪಿನ ನೀರಿನಿಂದ ಉಜ್ಜಿಕೊಳ್ಳುವುದರಿಂದ ಶರೀರದಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಅಲ್ಲದೆ, ಯೋನಿಯ ಭಾಗವನ್ನು ಸಹ ಶುದ್ಧವಾದ ನೀರಿನಿಂದ ನವಿರಾಗಿ ತೊಳೆದುಕೊಳ್ಳಬೇಕು.

೫. ಕೆಲವು ಗರ್ಭಿಣಿ ಸ್ತ್ರೀಯರಲ್ಲಿ ಮಲಬದ್ಧತೆ (Constipation) ಉಂಟಾಗಬಹುದು. ಮಲಬದ್ಧತೆಯನ್ನು ತಡೆಗಟ್ಟಿಕೊಳ್ಳಬೇಕಾದರೆ ಸಾಕಷ್ಟು ಪ್ರಮಾಣದಲ್ಲಿ ಶುದ್ಧವಾದ ನೀರನ್ನು ಅಥವಾ ಬಿಸಿ ನೀರನ್ನು ಕುಡಿಯಬೇಕು. ಹೆಚ್ಚಾಗಿ ದ್ರವ ಆಹಾರವನ್ನು ಸೇವಿಸಬೇಕು (ಉದಾ: ಬಾದಾಮಿ ಹಾಲು, ಹೆಸರುಬೇಳೆ ಪಾಯಸ, ರವೆ ಗಂಜಿ ಇತ್ಯಾದಿ) ಪ್ರತಿನಿತ್ಯ ತಾಜಾ ಹಣ್ಣು-ಹಂಪಲು, ತರಕಾರಿಗಳನ್ನು ತಿನ್ನಬೇಕು.

೬. ಪ್ರತಿನಿತ್ಯ ಸ್ತನಗಳನ್ನು (ಮೊಲೆಗಳನ್ನು) ಉಗುರು ಬೆಚ್ಚಗಿರುವ ನೀರಿನಿಂದ ತೊಳೆದುಕೊಳ್ಳಬೇಕು. ಒಳ್ಳೆಯ ಸಪೋರ್ಟ್ ಕೊಡುವ ತೀರ ಬಿಗಿಯಾಗಿಲ್ಲದ ಬ್ರೇಸಿಯರ್ಸ್ (ಬಾಡಿ)ನ್ನು ತೊಡಬೇಕು.

೭. ಹಲ್ಲು, ನಾಲಿಗೆಯನ್ನು ಪ್ರತಿನಿತ್ಯ ಶುಚಿಗೊಳಿಸಿಕೊಳ್ಳಬೇಕು. ಹುಳುಕು ಹಲ್ಲಿದ್ದರೆ ದಂತವೈದ್ಯ (ಡೆಂಟಲ್ ಸರ್ಜನ್) ರಲ್ಲಿ ಸಂಕೋಚ ಪಟ್ಟುಕೊಳ್ಳದೆ ತೋರಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು.

೮. ಬಿಗಿಯಾಗಿರುವ ಉಡುಪನ್ನು ಧರಿಸಬಾರದು. ಸಡಿಲವಾದ ಉಡುಪನ್ನು ಧರಿಸಬೇಕು. ಹೈ ಹೀಲ್ಸ್ ಶೂಗಳನ್ನು ಅಥವಾ ಪಾದರಕ್ಷೆ (ಚಪ್ಪಲಿಗಳನ್ನು)ಗಳನ್ನು ಧರಿಸಬಾರದು.

೯. ಚಿಂತೆಯಿಂದ ಮುಕ್ತರಾಗಿರಬೇಕು. ಧೂಮಪಾನ ಅಥವಾ ಮದ್ಯಪಾನವನ್ನು ಮಾಡಬಾರದು.ಸಮಾಧಾನಕರ ಮನಸ್ಸನ್ನು ಹೊಂದಿರಬೇಕು. ತಜ್ಞ ವೈದ್ಯರ ಸಲಹೆ ಪಡೆಯದೆ ಔಷಧಿಗಳನ್ನು ಖಂಡಿತಾ ಸೇವಿಸಬಾರದು. ಪತಿರಾಯರು ಆಕೆಗೆ ಬೇಸರವಾಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಆರೈಕೆ ಮಾಡಬೇಕು ಮತ್ತು ಆಕೆಯ ಅಗತ್ಯಗಳನ್ನು ಪೂರೈಸಬೇಕು.

೧೦. ಈ ಹಿಂದೆ ಗರ್ಭಪಾತ (ಅಬಾರ್ಶನ್) ಗಳಾಗಿದ್ದರೆ ಲೈಂಗಿಕ ಸಂಭೋಗ (ಇಂಟರ್ ಕೋಲ್ಸ್) ವನ್ನು ಎರಡನೇ ತಿಂಗಳು ಮತ್ತು ಮೂರನೆಯ ತಿಂಗಳು ತಡೆಗಟ್ಟಬೇಕು. ಮತ್ತು ಯೋನಿಯ ಮೂಲಕ ರಕ್ತಸ್ರಾವ (ಬ್ಲೀಡಿಂಗ್) ಉಂಟಾದರೆ ಹೆರಿಗೆ, (ಆಕೆ ಮೊದಲಿನಂತೆ ಆರೋಗ್ಯವಂತಳಾಗುವ ತನಕ ಅಂದರೆ ಆರು ವಾರಗಳ ತನಕ) ಆಗುವ ತನಕ ಲೈಂಗಿಕ ಸಂಭೋಗವನ್ನು ನಡೆಸಬಾರದು. ಆದರೆ, ಗರ್ಭಿಣಿ ಆಗಿರುವಾಗ ೩೬ನೇ ವಾರದ (೯ನೇ ತಿಂಗಳಲ್ಲಿ) ಮಧ್ಯದಲ್ಲಿ ಮತ್ತು ಹೆರಿಗೆಯ ನಂತರ (ಡೆಲಿವರಿಯ ನಂತರ) ಆರು ವಾರಗಳ ತನಕ ಅಂದರೆ ಒಂದುವರೆ ತಿಂಗಳವರೆವಿಗೆ ಲೈಂಗಿಕ ಸಂಭೋಗವನ್ನು ತಡೆಗಟ್ಟಿಕೊಳ್ಳಬೇಕು.

ಹೆಣ್ಣಿನ ತವರು ಮನೆ ಮತ್ತು ಹೆರಿಗೆ

ತವರು ಮನೆಗೆ ಮೊದಲ ಹೆರಿಗೆಗಾಗಿ ಹೆಣ್ಣು ಆರರಿಂದ ಎಂಟು ತಿಂಗಳ ಕಾಲ ಹೋಗುವುದರಿಂದ, ದೀರ್ಘಕಾಲದ ಲೈಂಗಿಕ ಸಂಯಮವನ್ನು (Prolonged period of abstinence imposed on the husband) ಗಂಡನ ಮೇಲೆ ಹೇರಿದಂತಾಗುತ್ತದೆ. ಇದರಿಂದ, ಪುರುಷ ವಿವಾಹದ ಹೊರಗಡೆ ಲೈಂಗಿಕ  ಸಂಬಂಧ (extra marital contacts) ವನ್ನು ಹೊಂದಲು ಪ್ರಯತ್ನಿಸಬಹುದು. ಅಥವಾ ವೇಶ್ಯೆಯ ಸಂಗವನ್ನು ಮಾಡಬಹುದು. ವೇಶ್ಯೆಯ ಸಂಗ ಮಾಡಿದ್ದರ ಫಲವಾಗಿ ಆತ ಲೈಂಗಿಕ ರೋಗಕ್ಕೆ ತುತ್ತಾಗಲೂ ಬಹುದು. ಆದುದರಿಂದ, ಹೆಣ್ಣು ಮೊದಲ ಹೆರಿಗೆಗಾಗಲಿ, ಎರಡನೆಯ ಹೆರಿಗಾಗಲಿ ಯಾವುದೇ ಹೆರಿಗೆಗೆ ಆಗಲಿ, ತವರು ಮನೆಗೆ ಅಥವಾ ಪೋಷಕರ ಮನೆಗೆ ಹೋದಾಗ ಹೆರಿಗೆಯಾದ ನಂತರ ಒಂದುವರೆ ತಿಂಗಳಿಂದ ಎರಡು ತಿಂಗಳ ಒಳಗಡೆ ಮಗುವಿನ ಜೊತೆ ಗಂಡನ ಮನೆಗೆ ಹಿಂತಿರುಗುವುದು ಸೂಕ್ತ. ಅಲ್ಲದೆ, ಪೋಷಕರು ಕೂಡ ನಾರ್ಮಲ್ ಡೆಲಿವರಿ ಆಗಿದ್ದರೆ ಮಗು, ಬಾಣಂತಿ ಆರೋಗ್ಯವಾಗಿದ್ದರೆ ಹೆರಿಗೆಯಾದ ನಂತರ ಹೆಚ್ಚುಕಾಲ ಅಂದರೆ ಒಂದುವರೆ ತಿಂಗಳಿಗೂ ಹೆಚ್ಚುಕಾಲ ತಮ್ಮ ಮಗಳನ್ನು ಮನೆಯಲ್ಲಿ ಇರಲು ಒತ್ತಾಯ ಮಾಡುವುದಾಗಲೀ, ಇಟ್ಟುಕೊಳ್ಳುವುದಾಗಲಿ ಪ್ರಸ್ತುತ, ಆಧುನಿಕ ಯುಗದಲ್ಲಿ ಅಷ್ಟು ಸೂಕ್ತವಲ್ಲ!

ಒಂದುವರೆ ತಿಂಗಳಿಗೂ ಹೆಚ್ಚುಕಾಲ, ನಾರ್ಮಲ್ ಡೆಲಿವರಿ ಆಗಿದ್ದು ಮಗು-ಬಾಣಂತಿ ಆರೋಗ್ಯವಾಗಿದ್ದರೂ ಕೂಡ ತಮ್ಮ ಮಗಳ ಮೇಲಿನ ಅಭಿಮಾನ ಹಾಗೂ ಪ್ರೀತಿಯಿಂದ ತಮ್ಮ ಮನೆಯಲ್ಲೇ ಮಗಳನ್ನು ಇಟ್ಟುಕೊಂಡರೆ ಅಳಿಯಂದಿರು ಮಾನಸಿಕ ಉದ್ವೇಗಕ್ಕೆ ತುತ್ತಾಗಬಹುದು. ವೈವಾಹಿಕ ಜೀವನದ ಹೊರಗಡೆ ಲೈಂಗಿಕ ಸಂಬಂಧವನ್ನು ಬೆಳೆಸಲು ಪ್ರಯತ್ನಿಸಬಹುದು.

ಪತ್ನಿ, ಹೆರಿಗೆಗಾಗಿ ತವರು ಮನೆಗೆ ಹೋದಾಗ ಶಾಂತಿ ಹಾಗೂ ಸಂಯಮದಿಂದ ಗಂಡ ವರ್ತಿಸಬೇಕು. ನಿಮ್ಮನ್ನು ನೋಡಲು ನಿಮ್ಮ ಪತಿರಾಯರು ಬಂದಾಗ ಅವರನ್ನು ನಗುಮುಖದಿಂದ ಸ್ವಾಗತಿಸಿ, ನಿಮ್ಮಕೈಲಾದ ಉಪಚಾರವನ್ನು ಮಾಡಬೇಕು. ಅಲ್ಲದೆ, ನಿಮ್ಮ ಗಂಡನ ಜೊತೆ ಅವರಿರುವ ತನಕ ಜೊತೆಯಲ್ಲೇ ಆತ ಇಚ್ಚಿಸಿದರೆ ಮಲಗಲೂಬಹುದು. ಇಷ್ಟಪಟ್ಟರೆ, ಆತನ ಕಾಮೋದ್ರೇಕವನ್ನು ಲೈಂಗಿಕ ಸಂಭೋಗದಿಂದ ಅಥವಾ ಹಸ್ತಮೈಥುನವೇ ಮೊದಲಾದ ಲೈಂಗಿಕ ಚಟುವಟಿಕೆಯ ಮೂಲಕ ನೆರವೇರಿಸುವುದರಿಂದ, ಆತನಲ್ಲಿ ಲೈಂಗಿಕ ಉದ್ವೇಗ ನಿವಾರಣೆಯಾಗಿ ಸಮಾಧಾನಕರವಾಗಿ ಆತ ವರ್ತಿಸಲು ಸಹಾಯಕವಾಗುತ್ತದೆ.

ವಿ.ಸೂ:- ಗರ್ಭಿಣಿ ಪತ್ನಿಯನ್ನು ನೋಡಲು ಅಳಿಯಂದಿರು ಬಂದಾಗ ಅವರನ್ನು ಗೌರವದಿಂದ ಕಂಡು, ದಂಪತಿಗಳಿಬ್ಬರು ಒಟ್ಟಾಗಿರಲು ಸೂಕ್ತ ಏರ್ಪಾಟನ್ನು ಮಾಡಿಕೊಡಬೇಕು. ಅದು ಬಿಟ್ಟು ಕಟ್ಟು ನಿಟ್ಟಾಗಿ ದಂಪತಿಗಳಿಬ್ಬರನ್ನು ಒಟ್ಟಿಗೆ ಮಲಗಲು ಬಿಡದೆ ಕಂದ ಏರ್ಪಡಿಸುವುದು ಈಗಿನ ಕಾಲದಲ್ಲಿ ಸಮಂಜಸವಲ್ಲ.

ಗರ್ಭಿಣಿ ಪತ್ನಿಯನ್ನು ನೋಡಲು ಮಾವನ ಮನೆಗೆ ಹೋದಾಗ ಅಳಿಯಂದಿರ ಕರ್ತವ್ಯ:

೧. ಗರ್ಭಿಣಿ ಸ್ತ್ರೀಯನ್ನು ನೋಡಲು ಮಾವನ ಅಥವಾ ಅತ್ತೆಯ ಮನೆಗೆ ಹೋಗುವಾಗ ಬರಿಗೈಯಲ್ಲಿ ಹೋಗಬಾರದು. ಆಕೆಯ ಬಯಕೆಯನ್ನು ತಿಳಿದು ಬಸಿರಿ ಇಚ್ಛಿಸುವ ಹಣ್ಣು ಹಂಪಲು, ಆಹಾರ ಪದಾರ್ಥ ಇತ್ಯಾದಿಗಳನ್ನು ಜೊತೆಯಲ್ಲಿಯೇ ಕೊಂಡೊಯ್ಯಬೇಕು.

೨. ಬಸಿರಿ ಹೆಂಡತಿಯ ಸಂಗಡ ಗಡಸಾಗಿ ವರ್ತಿಸದೆ ಸಂಯಮ ಹಾಗೂ ಶಾಂತಿಯಿಂದ ವರ್ತಿಸಬೇಕು. ತಾಳ್ಮೆಯನ್ನು ಕಳೆದುಕೊಳ್ಳಬಾರದು.

೩. ಆಕೆ ಇಷ್ಟ ಪಟ್ಟರೆ ಹೊರಗಡೆ ಸುತ್ತಾಡಲು ಸೂಕ್ತವಾದ ಸ್ಥಳಗಳಿಗೆ (ಉದಾ: ದೇವಾಲಯ, ಉತ್ತಮ ಚಲನಚಿತ್ರ ನೋಡಲು ಕರೆದೊಯ್ಯಬೇಕು). ಕರೆದುಕೊಂಡು ಹೋಗಬೇಕು.

೪. ಗರ್ಭಿಣಿ ಪತ್ನಿಯನ್ನು ತೀರ ಎತ್ತರವಾದ ಜಾಗಗಳಿಗೆ ಅಂದರೆ ಬಿಟ್ಟು, ಗುಡ್ಡ ಇತ್ಯಾದಿ ಸ್ಥಳಗಳಿಗೆ ಕರೆದೊಯ್ಯಬಾರದು.

೫. ಏಕಾಂತದಲ್ಲಿದ್ದಾಗ ಪರಸ್ಪರ ದಂಪತಿಗಳು ಸ್ಪರ್ಶ ಸುಖವನ್ನು ಅನುಭವಿಸಬೇಕು. ಹೆಂಡತಿಯ ಹೊಟ್ಟೆಯ ಭಾಗವನ್ನು ನವಿರಾಗಿ ಸವರಬೇಕು. ಕಿವಿ ಇಟ್ಟು ಉದರದಲ್ಲಿ ಉಂಟಾಗುವ ಶಬ್ದವನ್ನು ಆಲಿಸಬೇಕು.

೬. ಗರ್ಭಿಣಿ ಪತ್ನಿಯ ಅನುಭವಗಳನ್ನು ಪ್ರೀತಿಯಿಂದ ಕೇಳಿ ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆಯನ್ನು ಅಭಿವ್ಯಕ್ತಿಸಬೇಕು.

೭. ವೈದ್ಯರು ಅಥವಾ ಪರಿಣತರು ಬರೆದಿರುವ ಶಿಶು ಸಂರಕ್ಷಣೆ ಹಾಗೂ ಹೆರಿಗೆಗೆ ಸಂಬಂಧಿಸಿದ ಕನ್ನಡ ಪುಸ್ತಕಗಳನ್ನು ಕೊಂಡು ನೀವು ಓದಿದ ನಂತರ ಪತ್ನಿಗೆ ಓದಲು ಕೊಡಬೇಕು.

೮. ವೈದ್ಯರ ಬಳಿಗೆ ನಿಮ್ಮ ಪತ್ನಿ ಹೋಗುವಾಗ ನೀವು ಕೂಡ ಆಕೆಯ ಸಂಗಡ ಹೋಗಿ ವೈದ್ಯರನ್ನು ಪರಿಚಯಿಸಿಕೊಂಡು ಗರ್ಭಿಣಿ ಪತ್ನಿಯ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿ, ವೈದ್ಯರು ಸಲಹೆಗಳೇನಾದರೂ ನೀಡಿದರೆ ಅದನ್ನು ಅನುಸರಿಸಬೇಕು.

೯. ಹಗಲು ವೇಳೆ ಮಾತ್ರ ಬಸಿರಿ ಹೆಂಡತಿಯನ್ನು ಮನೆಯ ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗುವುದು ಸೂಕ್ತವೇ ಹೊರತು, ಸಂಜೆ ಆರು ಗಂಟೆಯ ನಂತರ ದೂರದ ಸ್ಥಳಗಳಿಗೆ ಕರೆದೊಯ್ಯಬಾರದು.

೧೦. ಹೆಚ್ಚು, ಜನಸಂದಣಿ, ಗದ್ದಲ ಗಲಾಟೆ, ಮುಷ್ಕರ ನಡೆಯುತ್ತಿರುವ ಜಾಗಗಳಿಗೆ ಪತ್ನಿಯನ್ನು ಕರೆದೊಯ್ಯಬಾರದು.

೧೧. ಗರ್ಭಿಣಿ ಪತ್ನಿಯನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಹೋಗುವಾಗ ಮಾವನವರಿಗಾಗಲೀ ಅಥವಾ ಅತ್ತೆಯವರಿಗಾಗಲಿ ಎಲ್ಲಿಗೆ ಕರೆದುಕೊಂಡು ಹೋಗುವಿರಿ, ಎಷ್ಟೊತ್ತಿಗೆ ಮನೆಗೆ ಹಿಂತಿರುಗುವಿರಿ ಮೊದಲಾದ ವಿಷಯಗಳನ್ನು ಮುಂಗಡವಾಗಿಯೇ ತಿಳಿಸುವುದು ಒಳ್ಳೆಯದು.

೧೨. ತುಂಬು ಬಸಿರಿ ಹೆಂಗಸನ್ನು ಬಸ್‌ನಲ್ಲಿ ಕರೆದೊಯ್ಯುವುದಕ್ಕಿಂತಲೂ ರೈಲಿನಲ್ಲಿ ಕರೆದೊಯ್ಯುವುದು ಸೂಕ್ತ.

೧೩. ಗರ್ಭಿಣಿಯಾದ ಮೊದಲ ಮೂರು ತಿಂಗಳು ಹಾಗೂ ಕಡೆಯ ಮೂರು ತಿಂಗಳು ಲೈಂಗಿಕ ಕ್ರಿಯೆಯಿಂದ ದೂರವಿರಬೇಕು.

೧೪. ಯಾರಿಗೆ ಗರ್ಭಾವಸ್ಥೆಯ ಆರಂಭದ ದಿನಗಳಲ್ಲಿ ರಕ್ತಸ್ರಾವವಾಗುವುದೋ, ಗರ್ಭಗೊರಳು ಸಣ್ಣದಿರುವುದೋ, ಪದೇ ಪದೇ ಗರ್ಭ ಪಾತವಾಗಿದ್ದರೆ, ಲೈಂಗಿಕ ಸಂಭೋಗದಲ್ಲಿ ತೊಡಗಬಾರದು.

೧೫. ಪ್ರೀತಿ, ವಿಶ್ವಾಸದಿಂದ ದಂಪತಿಗಳು ಮಾತನಾಡಬೇಕು. ಸೆಕ್ಸ್ ಬಗ್ಗೆ ಅನಗತ್ಯವಾಗಿ ಪ್ರಸ್ತಾಪವನ್ನು ಬಾರದು.

ಗರ್ಭಿಣಿ ಸ್ತ್ರೀಯ ಆಹಾರ

ಸ್ತ್ರೀ ಗರ್ಭಿಣಿ ಆದಳೆಂದರೆ, ಮನೆ ಮಂದಿಗೆಲ್ಲಾ ಸಂತೋಷ, ನೆಂಟರಿಷ್ಟರೆಲ್ಲಾ ಆಕೆಗೆ ಇಷ್ಟವಾದ ಆಹಾರ ಪದಾರ್ಥಗಳನ್ನು ತಂದುಕೊಡುವುದು. ತಮ್ಮ ಮನೆಗಳಿಗೆ ಆಹ್ವಾನಿಸಿ ವಿಶೇಷ ಆಹಾರ ತಯಾರಿಸಿ ಉಣಬಡಿಸುವುದು ಇವೆಲ್ಲಾ ನಡೆಯುವುದು ಸರಿಯಷ್ಟೇ. ಆದರೆ, ಗರ್ಭಿಣಿ ಸ್ತ್ರೀ ಇದಕ್ಕೆ ಹೊರತಾದ ಕೆಲವು ಪದಾರ್ಥಗಳನ್ನು ಬಯಸಿ, ಗುಟ್ಟಾಗಿ ತಿನ್ನುವುದುಂಟು. ವೈದ್ಯರು ಅದನ್ನು ಗುರ್ತಿಸಿದ್ದಾರೆ. ಅವುಗಳೆಂದರೆ “ಗರ್ಭಿಣಿ” ಅಥವಾ ಮೂರನೇ ತಿಂಗಳಲ್ಲಿ ಹೇಸಿಕೆಯಾದ ಮತ್ತು ತೊಡಕನ್ನುಂಟು ಮಾಡುವ ಸೀಮೆಸುಣ್ಣ, ಬಳಪ, ಇದ್ದಲು, ಕಂಬಳಿದಾರ, ಬಣ್ಣ, ಎತ್ತಿನಗಾಡಿಗೆ ಹಾಕುವ ಗ್ರೀಸ್, ಬೇಯಿಸದ ಮಾಂಸ, ಮೀನು, ಉಪ್ಪು, ಕೂಸಿಗೆ ಅಪಾಯ ಉಂಟು ಮಾಡುವುದರಿಂದ ಇಂತಹ ಹೇಸಿಗೆ ಪದಾರ್ಥಗಳನ್ನು ತಿನ್ನದಂತೆ ಗರ್ಭಿಣಿ ಸ್ತ್ರೀಗೆ ತಿಳಿಸಬೇಕು. ಅವುಗಳು ಆಕೆಯ ಕೈಗೆ ಸಿಕ್ಕದಂತೆ ಮನೆ ಮಂದಿ ಎಚ್ಚರ ವಹಿಸಬೇಕು.

ಸ್ತ್ರೀ, ಗರ್ಭಿಣಿ ಆಗಿದ್ದಾಗ ಆಕೆಗೆ ಒಳ್ಳೆಯ ಪೌಷ್ಠಿಕ ಆಹಾರವನ್ನು ಒದಗಿಸಬೇಕು. ಇಲ್ಲವಾದರೆ ಹುಟ್ಟುವ ಕೂಸು ಬಲಹೀನವಾಗಿ ಹುಟ್ಟಬಹುದು. ಅಥವಾ ದಿನ ತುಂಬುವ ಮೊದಲೇ ಜನಿಸುವುದು ಅಥವಾ ಸತ್ತು ಹುಟ್ಟಬಹುದು. ಗರ್ಭಿಣಿ ಆಗಿದ್ದಾಗ ಸ್ತ್ರೀ ಉತ್ತಮ ಪೌಷ್ಠಿಕ ಆಹಾರವನ್ನು ಸೇವಿಸಿದರೆ ಹುಟ್ಟುವ ಕೂಸು ಆರೋಗ್ಯಶಾಲಿಯಾಗಿ ಬಲಿಷ್ಠವಾಗಿ ಗರ್ಭದಲ್ಲಿ ಬೆಳವಣಿಗೆ ಪಡೆದು, ಉತ್ತಮ ರೀತಿಯಲ್ಲಿ ಜನಿಸುತ್ತದೆ.

ಆದುದರಿಂದ, ಗರ್ಭಿಣಿ ಸ್ತ್ರೀಯರ ಆಹಾರದಲ್ಲಿ ಸಾಕಷ್ಟು ಪ್ರೋಟೀನ್, ಖನಿಜಗಳು ಮತ್ತು ವಿಟಮಿನ್ನುಗಳಿರಬೇಕು. ಗರ್ಭಿಣಿ ಸೇವಿಸುವ ಆಹಾರವನ್ನು ಅನುಕೂಲಕ್ಕಾಗಿ ಹೀಗೆ ವಿಂಗಡಿಸಬಹುದು :

೧. ಹೆಚ್ಚು ಸೇವಿಸಬೇಕಾದವು.

೨. ಅತಿಯಾಗಿ ಸೇವಿಸದಂತಹವು.

೩. ಇಷ್ಟಬಂದಷ್ಟು ಸೇವಿಸುವಂತಹವು.

೪. ಸೇವಿಸದಿದ್ದರೆ ಉತ್ತಮ.

. ಹೆಚ್ಚು ಸೇವಿಸಬೇಕಾದವು

ಒಂದು ದೊಡ್ಡ ಲೋಟದಷ್ಟು ಉತ್ತಮ ಹಾಲಿನ ಸೇವನೆ. ದಿನ ಒಂದಕ್ಕೆ ಎರಡು ಮೊಟ್ಟೆ, ಬೇಯಿಸಿದ ಮಾಂಸ.

ಸಸ್ಯಾಹಾರಿಗಳಾಗಿದ್ದರೆ, ಪ್ರೋಟೀನ್ ಭರತಿ ಆಹಾರವನ್ನು ಸೇವಿಸಬೇಕು (ಉದಾ: ಪಾಲಿಶ್ ಮಾಡದ ಅಕ್ಕಿಯಿಂದ ತಯಾರಿಸಿದ ಅನ್ನ, ಗೋಧಿ, ರಾಗಿಮುದ್ದೆ, ಬೇಳೆ, ಚಪಾತಿ, ಕಾಳುಗಳು)

. ಅತಿಯಾಗಿ ಸೇವಿಸದಂತಹವು

ದಿನ ಒಂದಕ್ಕೆ ಅರ್ಧ ಪೌಂಡ್ ಉತ್ತಮ ಬ್ರೆಡ್ಡು, ಎರಡು ಬೇಯಿಸಿದ ಆಲೂಗಡ್ಡೆ, ಬೀನ್ಸ್, ಕ್ಯಾರೆಟ್ ಅಥವಾ ಯಾವುದಾದರೂ ತಾಜಾ ಕಾಯಿಪಲ್ಲೆ ಅಥವಾ ಹಸಿರು ತರಕಾರಿಗಳ ಸೇವನೆ (ಇದು ಪಲ್ಯದ ರೂಪದಲ್ಲಿರಬಹುದು ಅಥವಾ ಹೆಚ್ಚು ತರಕಾರಿಗಳನ್ನು ಹಾಕಿ ಮಾಡಿದ ಸಾಂಬಾರು ಅಥವಾ ಹುಳಿ ಆಗಿರಬಹುದು.)

***

ಆಧಾರ ಲೇಖನ:
Sex During pregnancy, Here’s How 

ಗ್ರಂಥ ಋಣ:

DICK LEITSH with Dr. Lemon Clark (Together Magazine. Sept. 1977)

1. Pregnancy and Diet By: Rachael Holme.

2. Hand Book for the Delivery of care to mother and Children.

Edited  by : Dr.  F.J.W. Millen, W.H.O