‘ಹೊಸಗನ್ನಡ ಗದ್ಯದ ಆದ್ಯ ಪ್ರವರ್ತಕ, ಎಂದು ವಿಮರ್ಶಕರಿಂದ ಕರೆಸಿಕೊಂಡ ಗಳಗನಾಥರು ೧೮೬೯ ರಲ್ಲಿ ಧಾರವಾಡ ಜಿಲ್ಲೆಯ ಗಳಗನಾಥ ಗ್ರಾಮದಲ್ಲಿ ಜನಿಸಿದರು. ಇವರ ಮೂಲ ಹೆಸರು ವೆಂಕಟೇಶ ತಿರಕೋ ಕುಲಕರ್ಣಿ. ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಕ, ಕ್ಷೇತ್ರಗಳಿಗೆ ಇವರ ಕೊಡುಗೆ ಅಪಾರ. ಕಿರಗುಪ್ಪೆಯ ಶಾಲೆಯೊಂದರಲ್ಲಿ ಮುಖ್ಯೋಪಾಈಧ್ಯಾಯರಾಗಿದ್ದ ಇವರು ಅನೇಕ ಕನ್ನಡ ಪಠ್ಯಪುಸ್ತಕಗಳ ರಚನೆಯಲ್ಲಿ ತೊಡಗಿದರು. ಹಾವೇರಿಯಲ್ಲಿ ಒಂದು ಪಾಠ ಶಾಲೆಯನ್ನು ಸ್ಥಾಪಿಸಿದರು. ೧೯೦೭ ರಲ್ಲಿ ಸದ್ಬೋಧ ಚಂದ್ರಿಕೆ, ಮಾಸಪತ್ರಿಕೆಯನ್ನು ಆರಂಬಿಸಿದರು. ಈ ಮೂಲಕ ಕನ್ನಡಿಗರ ವಾಚನಾಬಿರುಚಿಯನ್ನು ಬೆಳೆಸಿದರು. ಜಾತ್ಯಾತೀತ ಮನೋಭಾವ, ಜನಾಂಗ ಕಲ್ಯಾಣ, ಮಾನಸಿಕ ವಿಕಾಸ, ಬೆಳೆಯಲು ಕಾರಣರಾದರು. ವೆಂಕಟೇಶ ಎಂಬ ಹೆಸರಿನ ಮುದ್ರಣಾಲಯವನ್ನು ಸ್ಥಾಪಿಸಿದರು.ಪ್ರಬುದ್ದ ಪದ್ಮನಯನೆ, ಇವರ ಮೊದಲ ಕಾದಂಬರಿ ಮರಾಠಿಯ ಹರಿನಾರಾಯಣ ಆಪ್ಟೆ ಅವರ ಗಡ ಆಲ ಸಿಂಹಗೆಲಾ,, ಕಾದಂಬರಿಯನ್ನು ಕಮಲಕುಮಾರಿ, ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದರು.

ಶಿವಾಜಿಯ ಬಂಟ ತಾನಾಜಿ ಮೇವಾಡದ ವೀರಸಿಂಹನ ವಿಧವೆ ಕಮಲ ಕುಮಾರಿ ಮತ್ತು ಕೊಂಡಾಣದುರ್ಗವನ್ನು ಔರಂಗಾಜೇಬನಿಂದ ಉಳಿಸಲು ನಡೆಸುವ ಹೋರಾಟವನ್ನು ಇಲ್ಲಿ ಚಿತ್ರಿಸಲಾಗಿದೆ. ಈಶ್ವರಿ ಸೂತ್ರ,, ಕಾದಂಬರಿಯಲ್ಲಿ ಶಿವಾಜಿಯ ಅದ್ಬುತ ಪರಾಕ್ರಮದ ಕಥೆ ಮರಾಠರ ಅಭ್ಯುದಯ, ಕಾದಂಬರಿಯಲ್ಲಿದೆ. ಶಿವಪ್ರಭುವಿನ ಪುಣ್ಯ, ಕಾದಂಬರಿಯಲ್ಲಿ ಶಿವಾಜಿಯ ಪುತ್ರ ಸಾಂಬಾಜಿಯ ಕಾಲದ ಕಥೆಯಿದೆ. ಕುರುಕ್ಷೇತ್ರ, ಕದಂಬರಿಯಲ್ಲಿ ಪಾನಿಪತ್ ಯುದ್ಧದಲ್ಲಿ ಹೋರಾಡುತ್ತಾ ಮಡಿದ ವೀರರ ದುರಂತ ಕಥೆಯಿದೆ. ರಜಪೂತರು ಹೀಗೆ ಮುಸಲ್ಮಾನರ ಅದೀನರಾಗಿ ಬಾಳಿದರು, ಅವರ ದುರಾಕ್ರಮಣಕ್ಕೆ ಒಳಗಾದರು, ಪರಿಸ್ಥಿತಿಯೊಂದಿಗೆ ಹೇಗೆ ಒಪ್ಪಂದ ಮಾಡಿಕೊಂಡರು, ಹೇಗೆ ಸ್ವಾಬಿಮಾನ ಶೂನ್ಯರಾದರು ಎಂಬುದನ್ನು ಕ್ಷಾತ್ರತೇಜ, ತಿಲೋತ್ತಮೆ ಅಥವಾ ಸರಸಪ್ರೇಮ, ರಾಣಾರಾಜಸಿಂಹ, ಧಾರ್ಮಿಕತೇಜ, ಸತ್ವಸಾರ, ಸಂಸಾರಸುಖ, ಮುಂತಾದ ಕಾದಂಬರಿಗಳಲ್ಲಿ ಚಿತ್ರಿಸಿದ್ದಾರೆ. ಜೊತೆಗೆ ಕಾದಂಬರಿಯ ನಾಯಕರ ಮುಖಾಂತರ ಜನತೆಯಲ್ಲಿ ಆತ್ಮಾಬಿಮಾನ ಮೂಡಿಸುವ ಹಿನ್ನೆಲೆಯನ್ನು ಒದಗಿಸಿದ್ದಾರೆ. ಧಾರ್ಮಿಕ ತೇಜ, ಪರಹಿತ-ದಕ್ಷತಾ, ಕಾದಂಬರಿಗಳು ಈ ನಿಟ್ಟಿನಲ್ಲೇ ಸಾಗುತ್ತವೆ. ವಿಜಯ ನಗರ ಸಾಮ್ರಾಜ್ಯದ ನಾಶವನ್ನು ಕನ್ನಡಿಗರ ಕರ್ಮ ಕಥೆ, ಕಾದಂಬರಿ ಹೇಳುತ್ತದೆ. ಬಂಕಿಮ ಚಂದ್ರರ ಮೃಣಾಲಿನಿಯನ್ನು ಕನ್ನಡಕ್ಕೆ ತಂದಿದ್ದಾರೆ. ಧರ್ಮ ರಹಸ್ಯ, ಚಾಣಕ್ಯನ ಕಾರಸ್ಥಾನ, ಕುಮುದಿನಿ, ಮುಂತಾದ ಇನ್ನೂ ಅನೇಕ ಕಾದಂಬರಿಗಳನ್ನು ರಚಿಸಿದ್ದಾರೆ. ಮಾಧವ ಕರುಣಾವಿಲಾಸ, ಇವರ ಬೃಹತ್ ಕಾದಂಬರಿ. ೭೭೦ ಪುಟಗಳನ್ನು ಹೊಂದಿದೆ. ಮಾಧವಾಚಾರ್ಯರ ಪ್ರೇರಣೆಯಿಂದ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯ, ಅವರ ಕರುಣೆ ಧೈರ್ಯಗಳನ್ನು ಜಾತೀಯತೆ, ಅಸ್ಪೃಷ್ಯತೆ, ಮೊದಲಾದ ಸಮಸ್ಯೆಗಳನ್ನು ಚಿತ್ರಿಸಿದ್ದಾರೆ. ದುರ್ಗದ ಬಿಚ್ಚುಗತ್ತಿ ಇವರ ಕೊನೆಯ ಕಾದಂಬರಿ.

ಕಾದಂಬರಿಗಳಲ್ಲದೆ ವೈಚಾರಿಕ ಲೇಖನಗಳಾದ ದಾಂಪತ್ಯ, ಕುಟುಂಬ, ಕನ್ಯಾಶಿಕ್ಷಣ, ರಾಜನಿಷ್ಠೆ, ಸದ್ಗುರು ಪ್ರಭಾವ, ಶ್ರೇಷ್ಠ ಸದುಪದೇಶ, ಗೀತೆಯ ಶ್ರವಣಾದಿಕಾರ, ಕೃತಿಯ ಮೂಲಕ ಹೊರತಂದಿದ್ದಾರೆ. ಮಹಾಭಾರತವನ್ನು ರಚಿಸಿದ್ದಾರೆ. ಇವರ ಶೈಲಿಯಲ್ಲಿ ಸಹಜತೆಯಿದೆ.

ಒಟ್ಟಿನಲ್ಲಿ ಹೊಸಗನ್ನಡ ಸಾಹಿತ್ಯದ ಅರುಣೋದಯ ಕಾಲದಲ್ಲಿ ಸಾಹಿತ್ಯ ಸೃಷ್ಟಿಯ ಮಾರ್ಗ ನಿರ್ಮಾಪಕರಲ್ಲಿ ಒಬ್ಬರಾದ ಗಳಗನಾಥರು ೧೯೪೨ ರಲ್ಲಿ ನಿಧನರಾದruರು.