ಮಹಾತ್ಮ ಗಾಂಧಿಯವರ ಶತಾಬ್ದಿ ವರ್ಷದ ಕಾಣಿಕೆಯಾಗಿ ಕನ್ನಡಿಗರಿಗೆ ಅರ್ಪಿಸಬೇಕೆಂದು ಯಜಮಾನರು ಈ ಪುಸ್ತಕವನ್ನು ಬರೆದರು. ಇದನ್ನು ಮುದ್ರಣಕ್ಕೆ ಸಿದ್ಧಗೊಳಿಸುವುದರೊಳಗೆ ಅವರು ರೋಗಗ್ರಸ್ತರಾಗಿ ನಿಧನರಾದರು. ಆದರೂ ಅವರ ಉದ್ದೇಶ ಈಡೇರಲೆಂದು ಈ ಪುಸ್ತಕದ ಮುದ್ರಣಕ್ಕೆ ಹಾಗೂ ಪ್ರಕಟಣೆಗೆ ವ್ಯವಸ್ಥೆ ಮಾಡಿದೆ.

ನಮ್ಮೆಲ್ಲರಿಗೂ ಹಿರಿಯರೂ ಪಂಡಿತೋತ್ತಮರೂ ಆದ ಡಾ.ಡಿ.ವಿ. ಗುಂಡಪ್ಪನವರು ಮುನ್ನುಡಿ ಬರೆದುಕೊಟ್ಟು, ಈ ಕಾರ್ಯಕ್ಕೆ ಉತ್ತೇಜನ ಕೊಟ್ಟಿರುವರು. ಅವರಿಗೂ ಮತ್ತು ಇದರ ಪ್ರಕಟನೆಯನ್ನು ಕೈಗೊಂಡ ಶ್ರೀ ಡಿ.ವಿ.ಕೆ. ಮೂರ್ತಿಯವರಿಗೂ, ಇದನ್ನು ಮುದ್ರಿಸಿದ ಮೈಸೂರು ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಹೌಸಿನವರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ಪಿ.ಆರ್.ಜಯಲಕ್ಷಮ್ಮ
ಬೆಂಗಳೂರು
೨-೧೦-೧೯೭೨