ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಮಾತು. ಯೂರೊಪಿಯನ್ ಒಬ್ಬ ಪ್ರವಾಸಿ ಭಾರತಕ್ಕೆ ಬಂದಿದ್ದ. ಅವನನ್ನು ಯಾರೋ ಪ್ರಶ್ನಿಸಿದರು. “ನೀವು ಭಾರತದಲ್ಲಿ ಏನನ್ನು ನೋಡಲು ಬಂದೀರಿ?” ಅವನ ಉತ್ತರ ಹೀಗಿತ್ತು “ಹಿಮಾಲಯ, ತಾಜಮಹಲ್, ಮತ್ತು ಗಾಂಧೀ”.

“ಗಾಂಧೀಜಿ ಪ್ರಸಿದ್ಧರಾದುದು ಐಶ್ವರ್ಯ, ಅಧಿಕಾರ ಇವುಗಳಿಂದಲ್ಲ. ಆಡಿದ ಮಾತಿನಂತೆ ನಡೆಯುವುದು, ಯಾರಿಗಾದರೂ ಕೆಡಕನ್ನು ಮಾಡುವುದು ಹಾಗಿರಲಿ, ಕೆಡುಕು ಮಾಡಿದವರನ್ನು ಕೆಟ್ಟವರೆಂದು ಭಾವಿಸದಿರುವುದು, ಅಂಥವರಿಗೆ, ಎಲ್ಲರಿಗೂ, ಎಲ್ಲಕ್ಕೂ ಯಾವಾಗಲೂ ಒಳ್ಳೆಯದನ್ನೆ ಬಯಸುವುದು, ಪ್ರೀತಿಯಿಂದ ಕಾಣುವುದು, ಪ್ರೀತಿಯನ್ನು ಬೆಳೆಸುವುದು ಇತ್ಯಾದಿ ಗುಣಗಳಿಂದ ಅವರು ಲೋಕಪ್ರಸಿದ್ಧರಾದರು: ಭಾರತದಲ್ಲಿ ಆಂತಹ  ವ್ಯಕ್ತಿಯನ್ನು “ಮಹಾತ್ಮ” ಎಂದು ಕರೆಯುವುದು ಸಾವಿರಾರು ವರ್ಷಗಳಿಂದ ಬಂದ ವಾಡಿಕೆ.

ಸತ್ಯಸಂಧ, ಧರ್ಮನಿಷ್ಠ ತಂದೆತಾಯಿಯರು:

“ಗಾಂಧೀ” ಎಂಬುವುದು ಮನೆತನದ ಹೆಸರು. ಆ ಮನೆತನದವರು ಬಹಳ ಕಾಲದಿಂದಲೂ ವ್ಯಾಪಾರದಲ್ಲಿ ತೊಡಗಿದ್ದರು. ಅವರು ಗುಜರಾತ್ ರಾಜ್ಯಕ್ಕೆ  ಸೇರಿರುವ ಪೋರ್ ಬಂದರ್ ಎಂಬ ಪಟ್ಟಣದಲ್ಲಿ ವಾಸಿಸುತ್ತಿದ್ದರು. ಪಟ್ಟಣದ ಬಂದ್ ಎಂಬ ಪಟ್ಟಣದಲ್ಲಿ ವಾಸಿಸುತ್ತಿದ್ದರು.  ಪಟ್ಟಣದ ಸುತ್ತಲೂ ಕಟ್ಟಿಸಿದ ಕಲ್ಲಿನ ಗೋಡೆಗಳು ಸೂರ್ಯನ ಪ್ರಕಾಶದಲ್ಲಿ ಬೆಳ್ಳಗೆ ಹೊಳೆಯುತ್ತಿದ್ದುದರಿಂದ ಅದಕ್ಕೆ “ಶ್ವೇತಪುರಿ” ಎಂದು ಹೆಸರು ಬಂದಿತು.

ಗಾಂಧೀಜಿಯ ತಾತ ಉತ್ತಮ ಚಂದ್ ಗಾಂಧಿ. ಪೋರ್ ಬಂದರಿನ ರಾಣಾರಿಗೆ ದಿವಾನರು, ಎಂದರೆ ಮುಖ್ಯಮಂತ್ರಿ ಆಗಿದ್ದರು. ಅವರ ಮಗ ಕರಮ ಚಂದ್ ಗಾಂಧೀ, ಗಾಂಧೀಜಿಯ ತಂದೆ. ಗಾಂಧೀಜಿಯ ಪೂರ್ಣ ಹೆಸರು ಮೋಹನದಾಸ ಕರಮಚಂದ್ ಗಾಂಧೀ. ಅವರು ೧೮೬೯ರ ಅಕ್ಟೋಬರ್ ೨ ರಂದು ಜನಿಸಿದರು.

ಕರಮಚಂದ್ ಗಾಂಧೀ ಕೆಲವು ಕಾಲ ಪೋರ ಬಂದರ ಸಂಸ್ಥಾನದಲ್ಲಿದ, ಅನಂತರ ರಾಜಕೋಟೆ ಎಂಬ ಸಂಸ್ಥಾನದಲ್ಲಿ ದಿವಾನರಾಗಿದ್ದರು. ಅವರು ತಮ್ಮ ತಂದೆಯೆಂತೆಯೇ ಪ್ರಮಾಣಿಕರಾಗಿಯೂ ಧೈರ್ಯವಂತರಾಗಿಯೂ ಇದ್ದರು. ಅವನ ಹೆಂಡತಿ ಪುತಲಿಬಾಯಿ, ಆಕೆಗೆ ಜನಿಸಿದ ಮಕ್ಕಳಲ್ಲಿ ಮೋಹದಾಸ ಕರಮ ಚಂದ್ ಗಾಂಧಿಯೇ ಅತ್ಯಂತ ಕಿರಿಯವನು.

ಕರಮಚಂದ್ ಗಾಂಧೀ ಪೂರ್ಣ ವ್ಯವಹಾರ ಜ್ಞಾನವುಳ್ಳವರಾಗಿದ್ದರು. “ನಮ್ಮ ತಂದೆ ಕುಲಾಭಿಮಾನಿ, ಸತ್ಯಸಂಧ, ಧೀರ ಮತ್ತು ವಿಶಾಲಹೃದಯಿ” ಎಂದು ಗಾಂಧೀಜಿ ತಮ್ಮ ಆತ್ಮಕಥೆಯಲ್ಲಿ ಉಲ್ಲೇಖಿಸಿದ್ದಾನೆ. ಅವರ ಮನೆಯಲ್ಲಿ ರಾಮಾಯಣ, ಮಹಾಭಾರತ ವಾಚನ ನಡೆಯುತ್ತಿತ್ತು. ಜೈನ, ಪಾರಸೀ, ಮತ್ತು ಮುಸ್ಲಿಂ ಪಂಡಿತರೊಂದಿಗೆ ಆಗಾಗ ಚರ್ಚೆ  ನಡೆಯುತ್ತಿತ್ತು. ಇದನ್ನೆಲ್ಲ ಬಾಲಕ ಗಾಂಧೀ ಕೇಳುತ್ತಿದ್ದನು.

ಪುತಲೀಬಾಯಿ ನಿತ್ಯವೂ ತಪ್ಪದೆ ದೇವಾಲಯಗಳಿಗೆ ಹೋಗುತ್ತಿದ್ದರು. ತಮ್ಮ ಮಗ ಮೋಹನದಾಸನನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಅವರು ಕಠೀಣವಾದ ವ್ರತ- ಉಪವಾಸ ಇತ್ಯಾದಿಗಳನ್ನು ಮಾಡುತ್ತಿದ್ದರು. ಧರ್ಮಾಚರಣೆ ಆಕೆಯ ಜೀವನದ ಉಸಿರಾಗಿತ್ತು. ಮಗನ ಮೇಲೆ ಆಕೆಯ ಪ್ರಭಾವ ಬಹಳವಾಗಿ ಆಯಿತು. ಎಷ್ಟೋ ವರ್ಷಗಳ ತರುವಾಯ ಇದನ್ನು ನೆನಪು ಮಾಡಿಕೊಂಡ ಗಾಂಧೀಜಿ, “ನನ್ನಲ್ಲೇನಾದರೂ ಶುದ್ಧಭಾವ ಕಂಡುಬಂದರೆ, ಅದೆಲ್ಲ ನನ್ನ ತಾಯಿಯಿಂದಲೇ ಬಂದುದು” ಎಂದಿದ್ದಾರೆ. ಆಕೆಯಲ್ಲಿದ್ದ ಸೇವಾ ಭಾವ ತ್ಯಾಗಬುದ್ಧಿ, ಪ್ರೇಮಮಯ ನಡತೆ ಮಗನಿಗೂ ಬಂದುವು.

ವಿದ್ಯಾರ್ಥಿ ಗಾಂಧೀ:

ಪೋರ್ಬಂದರಿನ ಪ್ರಾಥಮಿಕ ಶಾಲೆಯಲ್ಲಿ ೭ನೆಯ ವಯಸ್ಸಿನವರೆಗೂ ಗಾಂಧೀಜಿ ಓದು-ಬರಹ ಸಾಗಿತು. ಅಲ್ಲಿಂದ ಮುಂಚೆ ಅದು ರಾಜಕೋಟೆಯಲ್ಲಿ ಸಾಗಿತ್ತು. ಗಾಂಧೀ ಬಹಳ ನಾಚಿಕೆಯ ಸ್ವಭಾವದ ಹುಡುಗ. ಯಾವ ಕಾರಣಕ್ಕೂ ಹಿರಿಯರ ತಪ್ಪನ್ನು ಎಣಿಸುತ್ತಿರಲಿಲ್ಲ: ತುಂಬ ವಿಧೇಯನಾಗಿದ್ದ.

ಒಂದು ಸಲ ಶಾಲಾ ಇನ್ಸಫೆಕ್ಟರ್ ಪರೀಕ್ಷೆಗೆ ಬಂದರು. ಉಪಾಧ್ಯಾಯರು ಕೆಲವು ಇಂಗ್ಲೀಷ್ ಪದಗಳನ್ನು ಹೇಳೀ ಬರೆಯಿಸಿದರು. ಗಾಂಧೀ “ಕೆಟಲ್” ಎಂಬ ಪದವನ್ನು ತಪ್ಪು ಬರೆದಿದ್ದ. ಅದನ್ನು ಗಮನಿಸಿದ ಉಪಾಧ್ಯಾಯರು ಪಕ್ಕದ ಹುಡುಗ ಬರೆದಿರುವುದನ್ನು ನೋಡಿಕೊಂಡು ತಿದ್ದಿಕೊಳ್ಳಲು ಸನ್ನೆ ಮಾಡಿದರು. ಗಾಂಧೀ ಆ ರೀತಿ ಮಾಡಲಿಲ್ಲ. “ಕಾಪಿ” ಮಾಡುವುದು ಸರಿಯಲ್ಲವೆಂದು  ಹೇಳಿದ ಉಪಾಧ್ಯಾಯರೆ ಹೀಗೆ ಸನ್ನೆ ಮಾಡಿ ತಪ್ಪು ದಾರಿಗೆ ಎಳೆಯಲು ಯತ್ನಿಸಿದುದೂ ಅವನಿಗೆ ಸರಿ ಎನಿಸಲಿಲ್ಲ. ಆದರೂ ಅವರ ಬಗೆಗೆ ಗಾಂಧೀ ಹೊಂದಿದ್ದ ಗೌರವ ಕಡಿಮೆಯಾಗಲಿಲ್ಲ.

ಅದೇ ಕಾಲದಲ್ಲಿ ಎರಡು ನಾಟಕಗಳನ್ನು ಗಾಂಧೀ ನೋಡಿದ. “ಶ್ರವಣ ಪಿತೃಭಕ್ತಿ” ಮತ್ತು “ಹರಿಶ್ಚಂದ್ರ” ಎಂಬ ನಾಟಕಗಳು ಅವು: ಅವನ ಮನಸ್ಸಿನ ಮೇಲೆ ಅಗಾಧ ಪ್ರಭಾವ ಬೀರಿದವು. ಶ್ರವಣ ಮತ್ತು ವೃದ್ಧ ತಂದೆ ತಾಯಿಗಳಿಗೆ ಮಾಡುತ್ತಿದ್ದ ಸೇವೆ ಅತಿಶಯವಾದುದು. ಹರಿಶ್ಚಂದ್ರ ಸತ್ಯಕ್ಕಾಗಿ ಕಷ್ಟ ಅಷ್ಟಿಷ್ಟಲ್ಲ. ಗಾಂಧೀ ತಾನೂ ಇವರಂತೆ ಏಕೆ ಆಗಬಾರದು” ಎಂದು ಅಲೋಚಿಸಿದ.

ಎಳೆಯ ಮನಸ್ಸಿನ ಸರಳ ಭಾವನೆಯ ಮಕ್ಕಳಿಗೆ ಅನುಕರಣೆ ಮತ್ತು ಸಹವಾಸ ದೋಡ್ಡ ಶಕ್ತಿಗಳು. ಹದಿಮೂರನೆಯ  ವಯಸ್ಸಿನಲ್ಲಿ ಪ್ರೌಢ ಶಾಲೆ ಸೇರಿ ಓದುತ್ತಿದ್ದ ಗಾಂಧೀ ಸಹವಾಸದ ಕೆಟ್ಟ ಪ್ರಭಾವಕ್ಕೆ ಬಲಿಯಾದ. ಆದರೆ ಬೇಗ ಎಚ್ಚರಗೊಂಡು ಒಳ್ಳೆಯ ಮಾರ್ಗಕ್ಕೆ ತಿರುಗಿದುದು ಒಂದು ವಿಶೇಷ.

ಷೇಕ್ ಮೆತಾಬ್ ಎಂಬ ಶಾಲೆಯ ಗೆಳೆಯ ಬಲಿಷ್ಠನಾಗಿದ್ದ. ಆಟ-ಓಟಗಳಲ್ಲಿ ಅವನು ಸದಾ ಮೇಲುಗೈ. ಇಂಗ್ಲೀಷರನ್ನು ನಮ್ಮ ದೇಶದಿಂದ ಓಡಿಸಬೇಕಾದರೆ, ಷೇಕನಂತೆ ಮಾಂಸ ತಿಂದು ಗಟ್ಟಿಯಾಗಬೇಕು ಎಂಬ ತಪ್ಪು ಭಾವನೆ ಮನಸ್ಸಿನಲ್ಲಿ ಬೇರೂರಿತು. ಗಾಂಧೀ ಕಳ್ಳತನದಲ್ಲಿ ಮಾಂಸ ತಿನ್ನಲು ಪ್ರಯತ್ನಿಸಿದ. ಅದು ಒಗ್ಗಲಿಲ್ಲ. ಹಾಗೆಯೇ ಸಿಗರೇಟು ಸೇರಿದ. ಅಣ್ಣನ ಸಾಲ ತೀರಿಸುವುದಕ್ಕಾಗಿ ಒಂದು ಚೂರು ಚಿನ್ನ ಕದ್ದ. ತನ್ನ ಮನಸ್ಸಿಗೆ ಬಂದಂತೆ ವರ್ತಿಸಲು ಸ್ವಾಂತತ್ರ್ಯ ವಿಲ್ಲವಲ್ಲಾ ಎಂಬ ದುಃಖ ಬಂದಿತು. ದತ್ತೂರಿ ಎಂಬ ವಿಷದ ಬೀಜ ತಿಂದು ಪ್ರಾಣ ಕಳೆದುಕೊಳ್ಳಲು ಯತ್ನಿಸಿದ.  ಅದಕ್ಕೆ ಧೈರ್ಯ ಬರಲಿಲ್ಲ. ಎಲ್ಲವನ್ನು ಬರೆದು, ನಡುಗುವ ಕೈಯಿಂದ ತನ್ನ ತಂದೆಗೆ ಕೊಟ್ಟ. ತಂದೆ ಏನನ್ನೂ ಅನ್ನದೆ ಕಣ್ಣೀರಿಟ್ಟರು. ಗಾಂಧೀಯ ಹೃದಯ ಕರಗಿಹೋಯಿತು” ತಂದೆಗೆ ದುಃಖದಿಂದ ಉಕ್ಕಿಬಂದ ಮುತ್ತಿನಂಥ ಕಣ್ಣೀರು ನನ್ನ ಹೃದಯವನ್ನು ಶುದ್ಧ ಮಾಡಿತು. ನನ್ನ ಪಾಪವನ್ನು ತೊಳೆಯಿತು” ಎಂದು ಗಾಂಧೀ ತಮ್ಮ ಆತ್ಮಕಥೆಯಲ್ಲಿ ಹೇಳೀಕೊಂಡಿದ್ದಾರೆ.

ಪ್ರಾಥಮಿಕ ಶಾಲೆಯಲ್ಲಿಯಾಗಲೀ ಪ್ರೌಢಶಾಲೆಯಲ್ಲಿಯಾಗಲೀ ಗಾಂಧೀ ಸಾಮಾನ್ಯ ದರ್ಜೆಯ ಹುಡುಗನಾಗಿದ್ದ. ಅವನಲ್ಲಿ ಯಾವ ಬಗೆಯ ವಿಶೇಷ ಅಂಶಗಳು ಕಂಡುಬರುತ್ತಿರಲಿಲ್ಲ. ಅವನು ಯಾವ ಬಗೆಯ ಅಟಗಳಲ್ಲಿಯೂ ಭಾಗವಹಿಸುತ್ತಿರಲಿಲ್ಲ. ಜೊತೆಯ ಹುಡುಗರೊಂದಿಗೂ ಬೆರೆಯುತ್ತಿರಲಿಲ್ಲ.  ಯಾರಾದರೂ ತನ್ನನ್ನು ಗೇಲಿ ಮಾಡಿಯಾರು ಎಂಬ ಭೀತಿ ಅವನಲ್ಲಿ ತುಂಬಿದ್ದಿತು.

ಮುತ್ತಿನಂಥ ದುಃಖಾಶ್ರು ನನ್ನ ಹೃದಯವನ್ನು ಶುದ್ಧಮಾಡಿತು

ಧರ್ಮದ ದಿವ್ಯ ಮಂತ್ರ:

ಹದಿಮೂರನೆಯ ವಯಸ್ಸಿನಲ್ಲಿಯೇ ಗಾಂಧೀಜಿಗೆ ವಿವಾಹವೂ ಆಗಿ ಹೋಯಿತು. ಹುಡುಗಿ ಕಸ್ತೂರಿಬಾಗೂ ಅಷ್ಟೆ ವಯಸ್ಸಾಗಿತ್ತು. ಅದೊಂದು ಬಾಲ್ಯವಿವಾಹ. ಅದು ಅಂದು ರೂಢಿಯಲ್ಲಿತ್ತು. ಗಂಡ-ಹೆಂಡಿರು ಎಂದರೇನೆಂಬುವುದನ್ನು ಸ್ವಲ್ಪವೂ ತಿಳೀಯದ ಇಬ್ಬರ ಮದುವೆ ಅದು. ಇದರಿಂದ ಒಂದು ವರ್ಷ ಓದು ಕೆಟ್ಟಿತು. ಪ್ರೌಢಶಾಲೆಯ ವಿದ್ಯಾಭ್ಯಾಸ ಮುಗಿಯುವ ವೇಳೆಗೆ ಒಂದು ಮಗು ಹುಟ್ಟಿ, ಕಾಲವಾಗಿ ಇನ್ನೊಂದು ಹುಟ್ಟಿದ್ದಿತು. ೧೫-೧೬ ವಯಸ್ಸಿನ ಬಾಲಕ ಆಗಲೇ ತಂದೆಯಾಗಿಬಿಟ್ಟಿದ್ದ. ಆ ವೇಳೆಗೆ ಅವನ ತಂದೆಯೂ ಕಾಲವಾಗಿದ್ದರು.

ಬಾಲ್ಯದ ದೆಸೆಯಲ್ಲಿ ಗಾಂಧೀ ಓದಿದ ಒಂದು ಗುಜರಾತೀ ಪದ್ಯ ಮನಸ್ಸಿನಲ್ಲಿ ಅಚ್ಚೊತ್ತಿದ್ದಂತೆ ನಿಂತಿ‌ತು. ಆ ಪದ್ಯದ ಕವಿ ಶಾಮಲಾಲ ಭಟ್ಟ ಎಂಬಾತ. ಅ ಪದ್ಯದ ಸಾರಾಂಶವಿದು:

ಒಂದು ಲೋಟ ನೀರು ಕೊಟ್ಟವರಿಗೆ ಊಟ ಹಾಕು ಒಳ್ಳೆಯ ಮಾತನಾಡಿದವರಿಗೆ ಶಿರಬಾಗಿ ನಮಿಸು ಒಂದು ಕಾಸು ಕೊಟ್ಟವರಿಗೆ ಚಿನ್ನದ ಮೊಹರು ಕೊಡು ನಿನ್ನ ಪ್ರಾಣ ಉಳಿಸಿದವರಿಗೆ ನಿನ್ನಜೀವವನ್ನೇ ಕೊಡು ಉಪಕಾರಕ್ಕೆ ಹತ್ತುಪಟ್ಟು ಪ್ರತಿ ಉಪಕಾರ ಮಾಡು ಜ್ಞಾನಿಗಳು ಎಲ್ಲರನ್ನೂ ಒಂದೇ ಸಮನಾಗಿ ಕಾಣುತ್ತಾರೆ. ಅಪಕಾರ ಮಾಡಿದವರಿಗೂ ಸಂತೋಷದಿಂದ ಉಪಕಾರ ಮಾಡುತ್ತಾರೆ.

ಇದು ಗಾಂಧೀಜಿಗೆ ಜೀವನದ ಆದರ್ಶವಾಯಿತು. “ಸೇಡಿಗೆ ಸೇಡು” ನಿಜ ಧರ್ಮವಲ್ಲ ಎಂಬುವುದನ್ನು  ತೋರಿಸಿತು. ಮಾನವ ಧರ್ಮ ಯಾವುದೆಂಬುವದು ಅವರಿಗೆ ಅರಿವಾಯಿತು. ಧರ್ಮದ ದಿವ್ಯ ಮಂತ್ರ ತಿಳಿಯಿತು.

ಇಂಗ್ಲೆಂಡಿನಲ್ಲಿ:

ಪ್ರೌಢಶಾಲೆಯ ವ್ಯಾಸಂಗವನ್ನು ಮುಗಿಸಿದ ಗಾಂಧೀ ಭಾವನಗರದ ಕಾಲೇಜನ್ನು ಸೇರಿ, ಕೆಲವು ಕಾಲ ಮುಂದುವರೆಸಿದ.

ಒಂದು ದಿನ ಅವರ ಮನೆಗೆ ಬಂದ ಒಬ್ಬ ಸ್ವಾಮಿ, “ಈ ಬಾಲಕನನ್ನು ಇಂಗ್ಲೆಂಡಿಗೆ ವ್ಯಾಸಂಗಕ್ಕೆ ಕಳಿಸಬಾರದೇ?”  ಇದರಿಂದ ನಿಮ್ಮ ಕುಟುಂಬಕ್ಕೆ ಹಿಂದಿನ ಗೌರವ ಬರುತ್ತದೆ” ಎಂದರು. ಈ ಸೂಚನೆ ಗಾಂಧೀಗೆ ಬಹಳ ಹಿಡಿಸಿತು.  ವೈದ್ಯಶಾಸ್ತ್ರ ಓದಬೇಕೆಂದು ಅವನಿಗೆ ಆಸೆ. ಅದು ಅಣ್ಣನಿಗೆ ಇಷ್ಟವಿರಲಿಲ್ಲ. ಆ ಕಾಲದಲ್ಲಿ, ಸಮುದ್ರ ಪ್ರಯಾಣ ಮಾಡಿ ವಿದೆಶಕ್ಕೆ ಹೋಗುವುದು ಧರ್ಮ ವಿರುದ್ಧ ಎಂಬ ಭಾವನೆ. ತಾಯಿಗೂ ಹಿಡಿಸಿರಲಿಲ್ಲ. ತಮ್ಮ ಮಗ ಎಲ್ಲಿ ಮಧ್ಯ ಕುಡಿದು, ಮಾಂಸ ತಿಂದು ಕೆಟ್ಟು ಹೋಗುವನೋ ಎಂಬ ಶಂಕೆ ತಾಯಿಗೆ. ಕೊನೆಗೆ ಗಾಂಧಿತಾನು ಯಾವ ಅನೀತಿ ಮಾರ್ಗಕ್ಕೂ ಹೋಗುವುದಿಲ್ಲವೆಂದು ಭಾಷೆ ಕೊಟ್ಟು ಅವರನ್ನು ಒಪ್ಪಿಸಿದ. ಹಣಕಾಸಿನ ಸ್ಥಿತಿ ಚೆನ್ನಾಗಿಲ್ಲದಿದ್ದರೂ ಅಣ್ಣ ಹೊಣೆಗಾರಿಕೆ ಹೊತ್ತ. ಗಾಂಧೀ ಇಂಗ್ಲೇಂಡಿಗೆ ಹೋಗಿ ನ್ಯಾಯಶಾಸ್ತ್ರ ಓದಿ ಬ್ಯಾರಿಷ್ಟರ ಆಗಿ ಬರುವುದೆಂದು ತೀರ್ಮಾನವಾಯಿತು.

ಆಗ ಗಾಂಧೀಗೆ ಇನ್ನೂ ೧೯ ವರ್ಷವಾಗಿತ್ತು. ೧೯೮೮ರ ಸೆಪ್ಟೆಂಬರ ೪ ರಂದು ಗಾಂಧೀ ಇಂಗ್ಲೇಂಡಿಗೆ ಹೊರಡಬೇಕೆಂದು ನಿಶ್ಚಯವಾಯಿತು. ಈ ವಿಚಾರ ಕುಲದ ಮುಖ್ಯಸ್ಥರಿಗೆ ಗೊತ್ತಾಯಿತು.  ಅವರು ನಿಷೇದಿಸಿದರು. ಗಾಂಧೀ ನಿಷೇಧವನ್ನು ಉಲ್ಲಂಘಿಸಿ, ಪ್ರಯಾಣ ಮಾಡಿದರು. ಕುಲದ ಮುಖ್ಯಸ್ಥರು ಅವನನ್ನು ಜಾತಿಯಿಂದ ಹೊರಕ್ಕೆ ಹಾಕಿರುವುದಾಗಿ ಘೊಷಿಸಿದರು.

ಲಂಡನ್ನಿನಲ್ಲಿ ಜೀವನ ಮಾಡುವ ರೀತಿಯನ್ನೂ, ಇಂಗ್ಲಿಷ್ ಜನರ ಮತ್ತು ಅವರ ಸಮಾಜದ ನಡವಳೀಕೆಯನ್ನೂ ಗಾಂಧೀ ಕೆಲವರು ಹಿರಿಯರಿಂದ ಕೇಳಿ ತಿಳಿದುಕೊಂಡ ಚಳಿ ದೇಶದಲ್ಲಿಯೂ ಮಧ್ಯಪಾನ ಮಾಡದೆ, ಮಾಂಸಹಾರ  ಮಾಡದೆ ಬದುಕುವುದೇ ಕಷ್ಟವೆಂದು ಸ್ನೇಹಿತರು ಹೇಳಿದರು. ಆದರೂ ತನ್ನ ತಾಯಿಗೆ ಕೊಟ್ಟ ಮಾತಿನಂತೆ ನಡೆಯಲು ಗಾಂಧೀ ಸಾಹಸ ಮಾಡಿದ.  ಸಸ್ಯಾಹಾರ ದೊರಕುವ ಹೋಟೆಲನ್ನು ಹುಡುಕಿ ಅಲ್ಲಿ ದೊರಕುವ ಆಹಾರವನ್ನೇ ತೆಗದುಕೊಳ್ಳಲು ಆರಂಭ ಮಾಡಿದ. ದಿನವೂ ಅದಕ್ಕಾಗಿ ಬಹಳ ದೂರ ನಡೆದುಕೊಂಡು ಹೋಗಬೇಕಾಗಿತ್ತು. ಆದರೂ ಅದು ಅವನಿಗೆ ಕಷ್ಟವೆನಿಸಲಿಲ್ಲ. ಕಡೆಗೆ ತಾನೇ ಅಡಿಗೆ ಮಾಡಿಕೊಳ್ಳಲೂ ಆರಂಭಿಸಿದ.

ಮೊದಲು  ಮೊದಲು ಗಾಂಧೀ ಇಂಗ್ಲೀಷರ ಜೀವನ ರೀತಿ ನೀತಿಗಳನ್ನು ಅನುಸರಿಸಿದ. ನೃತ್ಯ ಕಲಿಯುವುದು, ಫ್ರೆಂಚ್ ಭಾಷೆಯ ಅಭ್ಯಾಸ, ಭಾಷಣ ಕಲೆ, ಕಲಿಯುವುದು ಇತ್ಯಾದಿಗಳಲ್ಲಿ ಮಗ್ನನಾದ. ಇವುಗಳಿಂದ ವೆಚ್ಚ ಹೆಚ್ಚಾಗುತ್ತಿತ್ತು.  ಆದರೆ ಯಾವುದುನೂ ಕಲಿಯಲು ಅವನಿಗೆ ಸಾಧ್ಯವಾಗಲಿಲ್ಲ. ತನ್ನ ವ್ಯಾಸಂಗದ ವೆಚ್ಚಕ್ಕೆ ಅಣ್ಣ ಹೊಟ್ಟೆ-ಬಟ್ಟೆ ಕಟ್ಟಿ ಹಣ ಒದಗಿಸುತ್ತಿದ್ದ ಅರಿವು ಬಂದಾಗ ದುಂದುವೆಚ್ಚವನ್ನೆಲ್ಲ ತ್ಯಜಿಸಿದ. ಸರಳ ಜೀವನ ಆರಂಭ ಮಾಡಿದ. ವ್ಯಾಸಂಗವೊಂದೇ ಅವನ ಗುರಿಯಾಯಿತು.

ಒಂದು ಇಂಗ್ಲೀಷ್ ಕುಟುಂಬದೊಂದಿಗೆ ಗಾಂಧೀ ತುಂಬಾ ಪರಿಚಯ ಮಾಡಿಕೊಂಡಿದ್ದ. ತಾನು ವಿವಾಹವಾದವನಲ್ಲವೆಂಬಂತೆ ವರ್ತಿಸಿದ್ದ. ಆ ಕುಟುಂಬಕ್ಕೆ ಸೇರಿದ್ದ ಇಬ್ಬರು ಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕೋಡನೆ ಸರಸವಾಗಿ ನಡೆದುಕೊಳ್ಳುತ್ತಿದ್ದ ಎಲ್ಲೆ ಮೀರಿ ಹೋಗುವ ಸಂದರ್ಭ ಬಂದಿತು. ಆ ಪರೀಕ್ಷೆಯ ಸಮಯದಲ್ಲಿ ತಾಯಿಗೆ ಕಟೊಟಿದ್ದ ಮಾತು ನೆನಪಿಗೆ ಬಂದಿತು: ಅವನನ್ನು ಆನೀತಿಯಿಂದ ಕಾಪಾಡಿತು.  ಕುಟುಂಬದ ಯಜಮಾನನಿಗೆ ಪತ್ರ ಬರೆದು ತನಗೆ ವಿವಾಹವಾಗಿದೆಯೆಂದೂ, ತಾನು ಒಂದು ಮಗುವಿನ ತಂದೆಯೆಂದೂ ತಿಳಿಸಿ, ತನ್ನ ತಪ್ಪನ್ನು ಕ್ಷಮಿಸಬೇಕೆಂದು ಬೇಡಿಕೊಂಡ.

ಗಾಂಧೀ ಇಂಗ್ಲೇಂಡಿನಲ್ಲಿ ಎರಡು ವರ್ಷ ಎಂಟು ತಿಂಗಳು ಕಾಲ ಕಳೆದ. ಅವನು ನ್ಯಾಯಶಾಸ್ತ್ರದಲ್ಲಿ ಎರಡು ವರ್ಷ ಎಂಟು ತಿಂಗಳು ಕಾಲಕಳೆದ. ಅವನು ನ್ಯಾಯ ಶಾಸ್ತ್ರದಲ್ಲಿ ಬ್ಯಾರಿಸ್ಟರ್ ಪದವಿ ಪಡೆದುಕೊಂಡು, ಒಂದು ದಿನವೂ ಹೆಚ್ಚಿಗೆ ನಿಲ್ಲದೆ, ೧೮೯೧ರ ಜೂನ್ ೧೨ ರಂದು ಭಾರತಕ್ಕೆ ಮರಳಿದ.

ಇಂಗ್ಲಂಡಿನಲ್ಲಿದ್ದ ಅವಧಿಯಲ್ಲಿ ಗಾಂಧೀ ಸಸ್ಯಾಹಾರಕ್ಕೆ ಸಂಬಂಧಿಸಿದಂತೆ ಕೆಲವುಪ್ರಯೋಗ ನಡೆಸಿದ್ದ. ಯಾವ ಕಾರಣಕ್ಕೂ ಮಾಂಸ ಹಾರ ಮನುಷ್ಯರಿಗೆ ತಕ್ಕುದಲ್ಲವೆಂಬುವುದನ್ನು ಅರಿತುಕೊಂಡ. ದಾದಾಬಾಯಿ ನವರೋಝಿ, ಡಾ.ಬೆಸೆಂಟ್ ಮತ್ತು ಹಲವರು ಗಣ್ಯವ್ಯಕ್ತಿಗಳ ಪರಿಚಯ ಆಯಿತು. ಆದರೂ ಯಾವ ವಿಧದಲ್ಲಿಯೂ ಅವನು ಪ್ರಸಿದ್ಧ ಪುರುಷನಾಗಬಲ್ಲನೆಂಬ ಲಕ್ಷಣವೂ ಕಂಡುಬರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಗಾಂಧೀ ಭಗವದ್ಗೀತೆಯನ್ನು ಮೊಟ್ಟ ಮೊಟಲ ಬಾರಿಗೆ ಇಬ್ಬರು ಆಂಗ್ಲ ಥಿಯಾಸಫಿಸ್ಟ್ ಸ್ನೇಹಿತರೊಂದಿಗೆ ಆಂಗ್ಲ ಭಾಷಾಂತರದಲ್ಲಿ ಓದಿದ. ಸರ್ ಎಡ್ವಿನ್ ಆರ್ನಲ್ಡ್ ಬರೆದ “ದಿವ್ಯಗೀತೆ” (ದಿ. ಸಾಂಗ ಸೆಲಿಸ್ಟಿಯಲ್) ಎಂಬ ಗ್ರಂಥ ಅದು. ಇದರಿಂದ ಹಿಂದೂಗಳ ಧಾರ್ಮಿಕ ಗ್ರಂಥಗಳನ್ನು ಓದಲು ಆಸಕ್ತಿ ಹೆಚ್ಚಿತು. ಅದು ಬೆಳೆಯುತ್ತಾ ಹೋಯಿತು. ಭಗವದ್ಗೀತೆಯ ಬೋಧೆ, ಭಗವದ್ಗೀತೆಯ ಧರ್ಮ ಅವನ ಬದುಕಿಗೆ ಸತ್ವ ನೀಡುವ ಶಕ್ತಿಯಾಯಿತು.

ಮುಂದೇನು :

ಭಾರತವನ್ನು ತಲುಪಿದ ಕೂಡಲೇ ಗಾಂಧೀಗೆ ಒಂದು ದುಃಖ ಕಾದಿತ್ತು. ಅವರ ತಾಯಿ ಕಾಲವಾಗಿದ್ದಳೂ. ಇಂಗ್ಲೆಂಡಿನಲ್ಲಿದ್ದಾಗ ಅವರ ಅಣ್ಣ ಈ ವಿಷಯ ತಿಳಸಿಯೇ ಇರಲಿಲ್ಲ. ಸುದ್ಧಿ  ಕೇಳೀ ಗಾಂಧೀಗೆ ಆದ ದುಃಖ ಅಪಾರ. ಅಮ್ಮನಿಗೆ ಕೊಟ್ಟ ಮಾತಿನಂತೆ ನಡೆದುಕೊಂಡು, ವಿದೇಶದಿಂದ ಹಿಂದಿರುಗಿ ಬಂದು ಮಗ ಅದನ್ನೆಲ್ಲ ಹೇಳಿಕೊಳ್ಳಬೇಕೆಂದು ಯೋಚಿಸಿದ್ದ. ಅದನ್ನು ಕೇಳಿ ಆಕೆಗೆ ಎಷ್ಟು ಆನಂದವಾಗುತ್ತಿತೋ?  ಆ ಭಾಗ್ಯ ಇಲ್ಲವಾಯಿತು.

ಆಗ ಗಾಂಧೀ ಇಪ್ಪತ್ತೆರಡು ವಯಸ್ಸಿನ ಯುವಕರು. ಅವರ ಮಗ ಹರಿಲಾಲನಿಗೆ ನಾಲ್ಕು ವರ್ಷ ವಯಸ್ಸಾಗಿತ್ತು. ಅವರು ತುಂಬಾ ಉತ್ಸಾಹದಿಂದ ಮುಂಬಯಿಯಲ್ಲಿ ವಕೀಲ ವೃತ್ತಿ ಆರಂಭಿಸಿದರು. ಆದರೆ ನ್ಯಾಯಸ್ಥಾನದಲ್ಲಿ  ನಿಂತು ವಾದ ಮಾಡುವ ಶಕ್ತಿಯೆ ಬರಲಿಲ್ಲ. ಮೊದಲು ಮೊಕದ್ದಮ್ಮೆ ಯನ್ನು ನಡಸಲು ಆಗಲಿಲ್ಲ. ವೃತತ್ತಿ  ನಿರಾಶದಾಯಕವಾಯಿತು. ಯಾವ ಸರಿಯದ ಕೆಲಸವೂ ಸಿಕ್ಕಲಿಲ್ಲ.ರಾಜಕೋಟೆಗೆ ಹಿಂದಿರುಗಬೇಕಾಯಿತು. ಅವರಿಗೂ ಅವ ಅಣ್ಣನಿಗೂ ತುಂಬಾ ನಿರಾಸೆಯಾಯಿತು.

ಹೀಗಿರುವಾಗ ಗಾಂಧೀಜಿಯ ಅಣ್ಣ ಲಕ್ಷ್ಮೀದಾಸ ಗಾಂಧೀ ಪೋರಬಂದರ ಸಂಸ್ಥಾನದಲ್ಲಿ ದಿವಾನರಾಗುವ ಸಂದರ್ಭ ಒದಗಿತು. ಆದರೆ ಆತ ಬ್ರಿಟಿಷ ರಾಜಕೀಯ ಪ್ರತಿನಿಧಿಯಕೋಫಕ್ಕೆ ಪಾತ್ರರಾಗಿದ್ದರು. ಆ ಪ್ರತಿನಿಧಿ ಗಾಂಧೀಜಿ ಲಂಡನಿನ್ನಲ್ಲಿದ್ದಾಗ ಪರಿಚಿತನಾಗಿದ್ದವನು. ಆದುದರಿಂದ ತಮ್ಮ ಹುದ್ದೆಯ ಬಗೆಗೆ ಗಾಂಧೀ ಸಹಾಯವಾಗುವಂತೆ  ಹೇಳಬೇಕೆಂದು ಲಕ್ಷ್ಮೀದಾಸ ಸಹಜವಾಗಿಯೇ ಅಪೇಕ್ಷಿಸಿದರು. ಇದು ಗಾಂಧೀಗೆ ಸ್ವಲ್ಪವೂ ಇಷ್ಟವಿರದಿದರೂ ಅಣ್ಣನಿಗಾಗಿ ಪ್ರತಿನಿಧಿಯನುನ ಕಂಡು ನಿವೇಸಿದಿರು. ಆತ ಇಂಥ ಮಾತು ಹೇಳುವುದು ತಪ್ಪೆಂದು ತಿಳಿಸಿದರೂ, ಗಾಂಧೀ ವಾದ ಮಾಡುತ್ತಲೇ ಇದುದರಿಂದ ಸಿಟ್ಟಿಗೆದ್ದು, ಅವನರನ್ನು ಕುತ್ತಿಗೆ ಹಿಡಿದುಹೊರಕ್ಕೆ ನೂಕಲು ಸೇವಕನಿಗೆ ಆಜ್ಞಾಪಿಸಿದರು. ಇದರಿಂದ ಗಾಂಧೀಜಿಗೆ ತುಂಬಾ ಅಪಮಾನವಾದಂತಾಯಿತು. ಅವರ ಏನು ಮಾಡುವಂತಿರಲಿಲ್ಲ. ತಮ್ಮ ಸ್ಥಿತಿಗೆ ತಾವೇ ಮರುಗಿಕೊಂಡು  ಖಿನ್ನರಾದರು.  ಆ ಅಹಿತ ಪ್ರಸಂಗ ಅವರ ಬದುಕಿನ ಮಾರ್ಗವನ್ನೇ ಬದಲಾಯಿಸಲು ಕಾರಣವಾಯಿತು.

ದಕ್ಷಿಣ ಆಫ್ರಿಕದ ಕರೆ:

ದಕ್ಷಿಣ ಆಫ್ರಿಕದಲ್ಲಿ ವ್ಯಾಪಾರ ನಡೆಸುತ್ತಿದ್ದ ಕೆಲವರು ಗುಜರಾತೀ ಮುಸ್ಲಿಮರಿದದರು. ಅವರಲ್ಲಿ ಒಬ್ಬಾತ , ದಾದಾ ಅಬ್ದುಲ್ಲಾಸೇಟ್ ಎನ್ನುವವರ ಸಂಬಮಧಿ ಗಾಂಧೀ ಅಣ್ಣನಿಗೆ ಪರಿಚಯವಿತ್ತು. ಆತ ಬ್ಯಾರಿಸ್ಟರ್ ಆಗಿರುವ ಗಾಂಧೀ ತಮ್ಮ ಬಂಧುವಿನ ಮೊಕದ್ದಮೆಯಲ್ಲಿ ಇಂಗ್ಲೀಷ್ ನ್ಯಾಯವಾದಿಗೆ ನೆರವು ನೀಡುವ ಸಲುವಾಗಿ ದಕ್ಷಿಣ ಆಫ್ರಿಕಕ್ಕೆ ಬರಲು ಸಾಧ್ಯವೇ ಎಂದು ಪ್ರಶ್ನಿಸಿದರು.   ಆ ಕೆಲಸ ಒಂದು ವರ್ಷ ಅವಧಿಯದ್ದಾಗಿತ್ತು. ಎಲ್ಲ ವೆಚ್ಚ ವ್ಯಾಪಾರಿಯದೇ. ಮೇಲೆ ೧೦೫ ಪೌಂಡು ಸಂಭಾವನೆ. ವೃತ್ತಿಯಲ್ಲಿ ನಿರಾಶರಾಗಿ ಇಂಗ್ಲೀಷ್ ರಾಜಕೀಯ ಪ್ರತಿನಿಧಿಯಿಂದ ವಮಾನಿತರಾಗಿದ್ದ ಗಾಂಧೀಜಿಗೆ ಇದೊಂದು ಒಳ್ಳೆಯ ಅವಕಾಶವೆನಿಸಿತು. ಅವರು ಅಣ್ಣನ ಅಪ್ಪಣೆ ಪಡೆದು ೧೮೯೩ರ ಏಪ್ರೀಲ್ ತಿಂಗಳಲ್ಲಿ ದಕ್ಷಿಣ ಆಫ್ರಿಕಕ್ಕೆ ಪ್ರಯಾಣ ಬೆಳೆಸಿದರು. ಆಗ ಅವರಿಗೆ ೨ರ ವರ್ಷ ವಯಸ್ಸು.

ಆತ್ಮಗೌರವ ಉಂಟೆ ?

ಗಾಂಧೀ ನೇಟಾಲಿನ ರೇವು ಪಟ್ಟಣದ ಡರ್ಬಾನ್ಗೆ ಬಂದು ಎರಡು ಮೂರು ದಿನಗಳು ಕಳೆದಿದ್ದವು. ನ್ಯಾಯಸ್ಥಾನಕ್ಕೆ ಹೋದಾಗ ಗಾಂಧೀ ತಲೆಗೆ ರುಮಾಲನ್ನು ಸುತ್ತಿದ್ದ, ಇದನ್ನು ಗಮನಿಸಿದ ನ್ಯಾಯಾಧೀಶ ಅದನ್ನು ತೆಗೆಯಲು ಸೂಚಿಸಿದರು. ರುಮಾಲು ಧರಿಸುವ ಮುಸಲ್ಮಾನರನ್ನು ಬಿಟ್ಟು ಉಳಿದ ಭಾರತೀಯರೆಲ್ಲ ಅದನ್ನು ತೆಗೆದು ನ್ಯಾಯಸ್ಥಾನಕ್ಕೆ ಗೌರವ ಸೂಚಿಸಬೆಕಾಗಿತ್ತು. ಗಾಂಧೀ ಅದನ್ನು ತಿರಸ್ಕರಿಸಿ, ನ್ಯಾಯ ಸ್ಥಾನದಿಂದಲೇ ಹೊರಕ್ಕೆ ಬಂದರು. ಅವರಿಗೆ ಇದು ದಕ್ಷಿಣ ಆಫ್ರಿಕಾದಲ್ಲಿ ಸಂಭವಿಸಿದ ಪ್ರಥಮ ಅಪಮಾನದ ಅನುಭವ.

ಡರ್ಬಾನ್‌ಗೆ ಬಂದ ವಾರದ ಮೇಲೆ ಗಾಂಧೀ ರೈಲಿನಲ್ಲಿ ಪ್ರಯಾಣ ಹೊರಟರು. ಅವರು ಮೊದಲನೆಯ ದರ್ಜೆಯ ಟಿಕೆಟ  ಕೊಂಡು ಪ್ರಯಾಣ ಬೆಳೆಸಿದರು. ರೈಲು ಮರಿಟ್ಸ ಬರ್ಗ ರೈಲು ನಿಲ್ದಾಣ ಸೇರಿತು. ರಾತ್ರಿಯ ಸಮಯ. ಕೊರೆಯುವ ಚಳೀ. ಒಬ್ಬ ಬಿಳಿಯನಿಗೆ ಜಗ ಬಿಟ್ಟುಕೊಡಬೇಕೆಂದು  ರೈಲಿನ ವ್ಯಾನಿನ ಭಾಗಕ್ಕೆ ಹೋಗಬೇಕೆಂದು ರೈಲ್ವೆ ಅಧಿಕಾರಿ ಬಂದು ಹೇಳಿದ. ಗಾಂಧೀ ಸಮ್ಮತಿಸಲಿಲ್ಲ. ರೈಲ್ವೆ ನೌಕರರು ಪೋಲಿಸರ ಸಹಾಯದಿಂದ ಅವರ ಸಾಮಾನನ್ನು ಹೊರಕ್ಕೆ   ಹಾಕಿಸಿದರು.ಅವರನ್ನೂ ಸಹ ಬಲವಂತವಾಗಿ ಕೆಳಗೆ ಇಳಿಸಿದರು. ರೈಲು ಮುಂದಕ್ಕೆ ಹೊರಟೇ ಹೋಯಿತು. ದೀಪವೂ ಇಲ್ಲದಿದ್ದ ಆ ರೈಲು ನಿಲ್ದಾಣದಲ್ಲಿ ಒಬ್ಬರೇ ಕುಳಿತು ತಮಗೆ ಆದ ಅವಮಾನದ ಬಗೆಗೆ ಗಾಂಧೀ ಚಿಂತಿಸತೊಡಗಿದರು. ಭಾರತದಲ್ಲಿ ಒಬ್ಬ ಬಿಳಿಯ ಅಧಿಕಾರಿ ಅಪಮಾನ ಮಾಡಿದನೆಂದರೆ, ಇಲ್ಲಿಯೂ  ಹೀಗೆಯೇ ಆಗಬೇಕೆ? ಅವರಿಗೆ ಪರಮ ದುಃಖವಾಯಿತು. ಮರುದಿನ ಪ್ರಯಾಣ ಮುಂದುವರೆಸಿದರು. ಮುಂದೆ ಸ್ವಲ್ಪ ದೂರ ರೈಲಿನಿಂದ ಇಳಿದು ಕುದುರೆ ಗಾಡಿಯಲ್ಲಿ ಪ್ರಯಾಣ ಮಾಡಬೇಕಾಗಿತ್ತು. ಗಾಡಿಯೊಳಗೆ ಐರೋಪ್ಯರು ಮಾತ್ರ ಕುಳಿತುಕೊಳ್ಳಬಹುದು. ಗಾಂಧೀ ಅವರೊಂದಿಗೆ ಕುಳಿತುಕೊಳ್ಳಲು ಅವಕಾಶವಿಲ್ಲ! ಗಾಡಿ ಹೊಡೆಯುವವನ ಜೊತೆಯಲ್ಲಿ ಕುಳಿತುಕೊಂಡರು. ಸ್ವಲ್ಪ ವೇಳೆ ಕಳೆದ ಮೇಲೆ “ಪೂಟ್ ಬೋರ್ಡಿನ ಮೇಲೆ “ಕುಳಿತುಕೊಳ್ಳಬೇಕೆಂಬ ಆಜ್ಞೆ ಬಂದಿತು. ಗಾಂಧೀ ಈ ಸೂಚನೆಯನ್ನು ತಿರಸ್ಕರಿಸಿದರು. ಗಾಡಿಯ ಮೇಲ್ವಿಚಾರಕ ಐರೋಪ್ಯ ಗಾಂಧೀ ಮೇಲೆ ಬಿದ್ದು ಹೊಡೆಯಲಾರಂಭಿಸಿದನು. ಗಾಂಧೀ ಆ ಹೊಡೆತಗಳನ್ನು ತಡೆದುಕೊಂಡರೆ ಹೊರತು ಸ್ಥಳ ಬಿಟ್ಟು  ಕದಲಿಲ್ಲ. ಕಡೆಗೆ ಪ್ರಯಾಣೀಕರ ಮಧ್ಯ  ಪ್ರವೇಶ ಮಾಡಿ ಬಿಡಿಸಿದರು.  ಹೀಗೆ ಗಾಂಧೀಗೆ ಅದ ಅಪಮಾನ ಅಷ್ಟಿಷ್ಟಲ್ಲ. ಆದರೆ ಇಂಥ ಅಪಮಾನ ಭಾರತೀಯ ನೆಲಸುಗಾರರಿಗೆ ಸಾಮಾನ್ಯವೆಂದು ಅವರಿಗೆ ಆರಿವಾದಾಗ, ಅವರು ಹೊಸ ರೀತಿಯ ಗಾಂಧೀಯೇ ಆದರು.

 

ಸ್ವಾತಂತ್ರನ್ವೇಷಕ, ಆದರ್ಶ ಸತ್ಯಾಗ್ರಹಿ, ೬೨ ವರ್ಷದ ಯುವಕ ದಂಡಿಗೆ ಹೊರಟರು

ಭಾರತೀಯರು ೧೮೬೦ರಿಂದಲೇ ದಕ್ಷಿಣ ಆಫ್ರಿಕದಲ್ಲಿ ನೆಲಸಲಾರಂಭಿಸಿದ್ದರು. ಅವರಲ್ಲಿ ಬಹು ಮಂದಿ ಬ್ರಿಟಿಷರಿಗೆ ಸೇರಿದ ಕಬ್ಬು, ಟೀ ಮತ್ತು ಕಾಫೀ ತೋಟಗಳಲ್ಲಿ ಕೆಲಸ . ಬಿಳಿಯ ಐರೋಪ್ಯರ ದೃಷ್ಟಿಯಲ್ಲಿ ಎಲ್ಲ “ಭಾರತೀಯರು “ಕೂಲಿಗಳೇ” ವರ್ತಕರು “ಕೂಲಿ” , ವರ್ತಕರು”  ಬ್ಯಾರಿಸ್ಟರ್ ಗಾಂಧೀ “ಕೂಲಿ ಬ್ಯಾರಿಸ್ಟರ್” ಎಲ್ಲರನ್ನೂ ಗಿರಿಮಿಟಿಯಾ”ಗಳೆಂದು “ಸಾಮಿ” ಸ್ವಾಮಿ” ಪದದ ವಿಕಾರ ರೂಪ) ನೇಟಾಲಿನಲ್ಲಿ ಯಾವ ಭಾರತೀಯನೂ ರಾತ್ರಿ ಒಂಬತ್ತು ಕಳೆದ ಮೇಲೆ ಹೊರಗೆ ಸಂಚಾರ ಮಾಡುವಂತಿರಲಿಲ್ಲ. ಆರೆಂಜ್ ಫ್ರೀ ಸ್ಟೆಟ್ನಲ್ಲಿ ಭಾರತೀಐರು ಆಸ್ತಿ ಹೊಂದಿ, ವ್ಯಾಪಾರ – ವ್ಯವಸಾಯ ಯಾವುದನ್ನೂ ಮಾಡುವಂತಿರಲಿಲ್ಲ. ಅವರು ಟ್ರಾನ್ಸ್ ವಾಲ್ನಲ್ಲಿ ಭೂಮಿಯನ್ನು ಹೊಂದಿರುವ ಹಕ್ಕು ಇರಲಿಲ್ಲ. ಜೊತೆಗೆ ೩ ಪೌಂಡು ನೆಲಸು-ತೆರಿಗೆ ಕೊಡಬೇಕಾಗಿತ್ತು. ಎಲ್ಲರು ಕೊಳಕು ಪ್ರದೆಶಗಳಲ್ಲಿಯೇ ವಾಸ ಮಾಡಬೇಕಾಗಿತ್ತು. ಗಾಂಧಿಯೇ ಒಮ್ಮೆ ರಾತ್ರಿ ೯ರ ಮೇಲೆ ಹೊರ ಸಂಚಾರ ಹೋದ ಅಪರಾಧಕ್ಕೆ ಒದೆತ ತಿನ್ನಬೇಕಾಯಿತು. ಒಟ್ಟಿನಲ್ಲಿ ಭಾರತೀಯರು ಮನುಷ್ಯರೆಂದೇ ಪರಿಗಣಿತರಾಗಲಿಲ್ಲ.  ಹೀಗೆ ದಕ್ಷಿಣ ಆಫ್ರಿಕಾದ ಭಾರತೀಯರ  ಪ್ರರ್ಶನೆ ಒಂದು ಲಕ್ಷ ಮಂದಿಯ ಸಾವು-ಬದುಕಿನ ಪ್ರಶ್ನೆಯಾಗಿತ್ತು. ಆತ್ಮಗೌರವದ ಪ್ರಶ್ನೆಯಾಗಿತ್ತು. ಎಲ್ಲರೂ ಎಲ್ಲ ಅಪಮಾನಗಳನ್ನು ಮೂಕರಂತೆಯೇ ಅನುಭವಿಸುತ್ತಿದ್ದರು.

ಬ್ಯಾರಿಸ್ಟರ್ ಗಾಂಧೀ ಆತ್ಮಗೌರವದ ಹೋರಾಟದ ನಾಯಕ:

ಅಬ್ದುಲ್ ಸೇಟರ ಮೊಕದ್ದಮ್ಮೆಯನ್ನು ಗಾಂಧೀ ರಾಜಿ ಮಾಡಿಸಿದರು.ಅವರ ಕೆಲಸ ಮುಗಿದಿತ್ತು. ಇನ್ನೇನು ಭಾರತಕ್ಕೆ ಹಿಂದಿರುಗುವ ಸಮಯ. ಅವರಿಗೆ ಬಿಳ್ಕೊಡುಗೆ ಸಮಾರಂಭವೊಂದು  ಏರ್ಪಟ್ಟಿತ್ತು. ಸಭೆಯಲ್ಲಿದ್ದವರೆಲ್ಲ ಅಂದು ಪತ್ರಿಕೆಯಲ್ಲಿ ಪ್ರಕಟವಾಗಿದ್ದ “ಭಾರತೀಯರ ನಾಗರಿಕಮತದಾರ” ಎಂಬ ಸುದ್ಧಿಯನ್ನು ಚರ್ಚಿಸಿದರು. ಕೊನೆಗೆ ತಮ್ಮ ಹಿತಸಾಧನೆಗಾಗಿ, ಕೆಲವು ಕಾಲ ದಕ್ಷಿಣ ಆಫ್ರಿಕಾದಲ್ಲಿಯೇ ಇರಬೇಕೆಂದು ಗಾಂಧೀಯನ್ನು ಕೇಳಿಕೊಂಡರು. ಗಾಂಧೀ ಒಪ್ಪಿದರು.ಸತ್ಕಾರ ಸಮಾರಂಭ ನಾಗರಿಕ ಹಕ್ಕುಗಳ ಹೋರಾಟದ ಕ್ರೀಯಾ ಸಮಿತಿಯಾಯಿತು. ಇದರಿಂದ ಗಾಂಧೀ  ದಕ್ಷಿಣ ಆಫ್ರಿಕದಲ್ಲಿ ನೆಲೆಸಲು ಅಸ್ಥಿಭಾರ ಹಾಕಿದಂತಾಯಿತು. ಭಾರತೀಯ ಸೋದರರ ಆತ್ಮಗೌರವಕ್ಕಾಗಿ ಹೋರಾಟದ ಬಿತ್ತಿದಂತಾಯಿತು

ಗಾಂಧೀಜಿ ‘ನೇಟಾಲ್ ಇಂಡಿಯನ್ ಕಾಂಗ್ರೆಸ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಅದರ ಮೂಲಕ ಭಾರತೀಯರ ಹೋರಾಟವನ್ನು ಮುಂದುವರೆಸಿದರು. “ಇಂಡಿಯನ್ ಒಪಿನಿಯನ್” ಎಂಬ ಪತ್ರಿಕೆಯನ್ನು ಸ್ಥಾಪಿಸಿ, ಹೋರಾಟದ ಪರಿಚಯ ಮಾಡಿಕೊಟ್ಟು, ಭಾರತೀಯರ ನೆಲಸುಗಾರರಲ್ಲಿ ಒಗ್ಗಟ್ಟು ಮತ್ತು ಸ್ವಾಭಿಮಾನಗಳು ಉತ್ಪನ್ನವಾಗುವಂತೆ ಮಾಡಿದರು. ಒಮ್ಮೆ ಭಾರತಕ್ಕೂ ಬೇರೆ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಭಾರತಿಯರಿಗೆ ಇದ್ದ ಹಲವಾರು ಅನರ್ಹತೆಗಳ ಬಗೆಗೆ ಸಂಕಷ್ಟಗಳ ಬಗೆಗೂ ಸಹಾನುಭೂತಿಯ ನಿರ್ಣಯ ಮಾಡಿಸಿದರು.

ಭಾರತದಲ್ಲಿದ್ದಾಗ ಅವರು ಮಾಡಿದ ಭಾಷಣಗಳು ಪತ್ರಿಕೆಗಳಲ್ಲಿ ತಪ್ಪು ವರದಿಯಾದುವು. ಇದನ್ನು ಓದಿದ ದಕ್ಷಿಣ ಆಫ್ರಿಕದ ಬಿಳೀಯರ ಜನಾಂಗ ರೊಚ್ಚಿಗೆದ್ದಿತು. ಹಡಗಿನಿಂದ ಇಳಿದ ಗಾಂಧಿಯನ್ನು ಸುತ್ತುಗಟ್ಟಿದ ಫಲವಾಗಿ ಅವರ ಪ್ರಾಣಕ್ಕೆ ಅಪಾಯ ಬರುವಂತ ಸಂದರ್ಭ ಒದಗಿತು. ಎಲ್ಲ ಗುಂಪು ಸೇರಿ, “ಗಾಂಧೀಯನ್ನು ನೇಣೂ ಹಾಕಿ” ಎಂದು ಕೂಗುತ್ತಾ ಇಟ್ಟಿಗೆ ಚೂರು ಕಲ್ಲು, ಕೊಳೆತಮೊಟ್ಟೆ ಇವುಗಳನ್ನು ಎಸೆಯತೊಡಗಿದರು. ಆ ಸಮಯದಲ್ಲಿ ಪೋಲಿಸ ಅಧಿಕಾರಿಯ ಪತ್ನಿ- ಒಬ್ಬ ಐರೋಪ್ಯ ಮಹಿಳೆ- ಧೈರ್ಯದಿಂದ ಮಧ್ಯೆ ಪ್ರವೇಶಿಸಿ, ಗಾಂಧೀಯನ್ನು ಸುರಕ್ಷಿತ ಜಾಗಕ್ಕೆ ಒಯ್ದು ರಕ್ಷಿಸಿದಳು.

ಗಾಂಧೀ ಜಗ್ಗದೆ, ಭಾರತೀಯ ನೆಲಸುಗಾರರನ್ನು ಒಗ್ಗಟ್ಟಿಗೆ ತಂದ ಹೋರಾಟವನ್ನೂ ಮುಂದುವರೆಸಿದ್ದರು. ಆ ಸಮಯದಲ್ಲಿ ದಕ್ಷಿಣ ಆಫ್ರಿಕದ ಮೂಲನಿವಾಸಿಗಳಾದ ಜೂಲು ಜನರು ಬ್ರಿಟಿಷ ಸರಕಾರದ ವಿರುದ್ಧ ದಂಗೆ ಎದ್ದರು. ಗಾಂಧೀ ತಮ್ಮ ಹೋರಾಟಕ್ಕೆ ವಿರಾಮ ಕೊಟ್ಟು, ಯುದ್ಧದಲ್ಲಿ ಗಾಯಗೊಂಡ ಸೈಣಿಕರ , ರೆಡ್ ಕ್ರಾಸ ಸೇವಾ ಪಥಕದ ಮೂಲಕ ಅಮೋಘ ಸೇವೆ ಸಲ್ಲಿಸಿದರು.ಸರಕಾರ ಅವರಿಗೆ ಕೈಸರ-ಇ-ಹಿಂದ್ ಎಂಬ ಗೌರವ ನೀಡಿ ಪ್ರಶಂಶಿಸಿತು.

ಸತ್ಯಾಗ್ರಹಅವತರಿಸಿತು.:

೧೯೦೭ರ ವೇಳೆಗೆ ದಕ್ಷಿಣ ಆಫ್ರಿಕದ ಜನತಾ ಸರಕಾರ ಏಷ್ಯಾದ ಜನಾಂಗದವರ ಬಗೆಗೆ ತನ್ನ ವಿರೋಧವನ್ನುಉಗ್ರವಾಗಿ ಮುಂದುವರೆಸಿತು. ಅದು “ಏಷ್ಯಾಟಿಕ ಶಾಸನ:” ಎಂಬುವುದನ್ನು  ಮಾಡಿತು. ಅದರ ಪ್ರಕಾರ ಎಂಟು ವರ್ಷಗಳಿಗೆ ಮೇಲ್ಪಟ್ಟ ಗಂಡು-ಹೆಣ್ಣು ಆದಿಯಾಗಿ ಎಲ್ಲರೂ ದಾಖಳಾತಿ ಮಾಡಿಸಿಕೊಳ್ಳಬೇಕಾಗಿತ್ತು. ಜೊತೆಗೆ , ಸರಕಾರ ಕ್ರೈಸ್ತರ ವಿವಾಹ ಪದ್ಧತಿಗೆ ಮಾತ್ರ ಗೌರವ ಕೊಡಲು ತೀರ್ಮಾನಿಸಿತು ಎಂದರೆ ತಮ್ಮ ಧರ್ಮಗಳಿಗೆ ಅನುಸಾರವಾಗಿ ಮದುವೆಯಾದ ಹಿಂದುಗಳೂ, ಮುಸ್ಲಿಮರು, ಎಲ್ಲ ಗಂಡ ಹೆಂಡತಿಯರೇ ಅಲ್ಲ ಎಂದಾಯಿತು. ಅಲ್ಲದೆ ಒಂದು ಪ್ರಾಂತದಿಂದ ಇನ್ನೊಂದಕ್ಕೆ ಹೋಗಲು ಪ್ರತಿಬಂಧಕವಿದ್ದಿತು. ಈ ಬಗೆಯ ದಾಖಲಾತಿಗೆ ಒಪ್ಪಬಾರದೆಂದೂ, ಅಜ್ಞೆಯನ್ನು ಉಲ್ಲಂಘಿಸಬೇಕೆಂದೂ ಗಾಂಧೀ ಸೂಚಿಸಿದರು. ಇದರಿಂದ ಪ್ರಚಂಡ ಹೋರಾಟವೇ ಕೈಗಟ್ಟಿತು. ಗಾಂಧೀ ಇದನ್ನು “ಸತ್ಯಾಗ್ರಹ” ಎಂದು ಕರೆದರು: ದುಷ್ಟ ದಬ್ಬಾಳಿಕೆಯ ವಿರುದ್ಧ “ಆತ್ಮಶಕ್ತಿ” ಅಥವಾ “ಪ್ರೇಮ ಶಕ್ತಿ ಪ್ರಯೋಗ ಎಂದು ಕರೆದರು. ಈವಿಧಾನದಲ್ಲಿ ದಕ್ಷಿಣ ಆಫ್ರಿಕದ ಸ್ತ್ರೀಯರು, ಪುರುಷರು ಮತ್ತು ಮಕ್ಕಳನ್ನು ಸತ್ಯಾಗ್ರಹಕ್ಕೆ ಅಣಿ ಮಾಡಿದರು. ಇದನ್ನು “ಶಾಂತಿ ಸೈನ್ಯ” ಎಂದು ಕರೆದರು. ಈ ಸೈನ್ಯ ನೇಟಾಲಿನಿಂದ ಹೊರಟು ಟ್ರಾನ್ಸ್ ವಾಲನ್ನು ಪ್ರವೇಶಿಸಬೇಕಾಗಿತ್ತು. ಇದೇ ಅವರು ನಿಯೋಜಿಸಿದ ಶಾಸನ ಉಲ್ಲಂಘನೆ. ಇದು ಸುಮಾರು ಆರುತಿಂಗಳು ಕಾಲ ನಡೆಯಿತು. ಗಾಂಧೀಜಿಯು ಮೊದಲುಗೊಂಡು ಎಲ್ಲ ಸತ್ಯಾಗ್ರಹಿಗಳೂ ಸೆರೆಮನೆ ಶಿಕ್ಷೆ ಅನುಭವಿಸಬೇಕಾಯಿತು. ಕಡೆಗೆ ಗಾಂಧೀಜಿಗೂ ಮತ್ತು ದಕ್ಷಿಣ ಆಫ್ರಿಕ ಸರ್ಕಾರಕ್ಕೂ ಗೌರವಯುತ ಒಪ್ಪಂದವಾಯಿತು. ಭಾರತೀಯರ ನಾಗರೀಕ ಹಕ್ಕುಗಳನ್ನು ಸರ್ಕಾರ ಅಂಗೀಕರಿಸಿತು. ಭಾರತೀಯರ ಆತ್ಮಗೌರವಕ್ಕೆ ಗಾಂಧಿ ರಕ್ಷೆಯಾದರು.

ದಕ್ಷಿಣ ಆಫ್ರಿಕದ ಈ ಸತ್ಯಾಗ್ರಹ ಹೋರಾಟ ಜಗತ್ತಿನ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ತಂತ್ರವನ್ನು ಸೃಷ್ಟಿಸಿತು. ಸಾಮಾನ್ಯವಾಗಿ ರಾಜಕೀಯವೆಂದರೆ, ಮೋಸ, ಕೊಲೆ, ಹಿಂಸೆ ಎಂಬ ಭಾವನೆಯೇ ಇದೆ. ಮಾರ್ಗ ಹೇಗಿದ್ದರೇನು? ಗುರಿ ಮುಟ್ಟಿದರಾಯಿತು ಎಂಬುದೇ ನೀತಿ. ಆಧರೆ ಗಾಂಧೀಜಿ ಗುರಿ ಎಷ್ಟು ಪರಿಶುದ್ಧವಾಗಿರಬೇಕೋ ಮಾರ್ಗವೂ ಅಷ್ಟೇ ಪರಿಶುದ್ಧವಾಗಿರಬೇಕೆಂಬ ತತ್ವನ್ನು ಆಚರಣೆಗೆ ತಂದರು. ಇದು ಸಾಧ್ಯವಾಗಬೇಕಾದರೆ, ಪ್ರೇಮ ಅಥವಾ ಅಹಿಂಸೆಯೊಂದೇ ಸಾಧನವೆಂದು ದೃಷ್ಠಾಂತ ಪೂರ್ವಕವಾಗಿ ತೋರಿಸಿದರು.

ಮಹಾತ್ಮ ಗಾಂಧೀ“:

ದಕ್ಷಿಣ ಆಫ್ರಿಕ ಗಾಂಧೀಜಿಯನ್ನು ಲೋಕಪ್ರಸಿದ್ಧ ವ್ಯಕ್ತಿಯನ್ನಾಗಿ ಮಾಡಿತು. ಸತ್ಯಾಗ್ರಹರೂಪದಲ್ಲಿ ಅಹಿಂಸಾ ಹೋರಾಟ ನಡೆಸಿದ ಅವರನ್ನು ಅನೇಕ ಪ್ರಸಿದ್ಧ ಪಾಶ್ಚಾತ್ಯರು ಏಸುಕ್ರಿಸ್ತನ ಅವತಾರವೆಂದೇ ಪರಿಗಣಿಸಿದರು; ದಕ್ಷಿಣ ಆಫ್ರಿಕಾದಲ್ಲಿ ೨೨ ವರ್ಷಗಳ ಕಾಲ ಇದ್ ಕಡೆಗೆ ಭಾರತಕ್ಕೆ ಹಿಂದಿರುಗಿದ ಅವರನ್ನು ಪ್ರೇಮಾದಾರಗಳಿಂದ ಸ್ವಾಗತಿಸಿದ ಜನಕೋಟಿ “ಮಹಾತ್ಮ” ಎಂದು ಕರೆದು ಗೌರವಿಸಿತು.

ಸರ್ವೊದಯ:

ಭಾರತಕ್ಕೆ ಬಂದ ಮೇಲೆ ಗಾಂಧೀಜಿ ಅಹಮದಾಬಾದಿನ ಬಳಿ “ಸತ್ಯಾಗ್ರಹ ಆಶ್ರಮ” ಎಂಬುವುದನ್ನು ಕಟ್ಟಿದರು. ಈ ಆಶ್ರಮ ಜೀವನದ ವಿಧಾನವನ್ನು ಅವರು “ಸರ್ವೊದಯ” ಎಂದು ಕರೆದರು. ಅದು ಅವರು ದಕ್ಷಿಣ ಆಫ್ರಿಕದಲ್ಲಿ ನಡೆಸಿದ ಜೀವನ ವಿಧಾನವೇ ಆಗಿತ್ತು.  ಅವರು ಅಲ್ಲಿ “ಫಿನಿಕ್ಸ ಆಶ್ರಮ”, “ಟಾಲ್‌ಸ್ಟಾಯ್ ಆಶ್ರಮ” ಎಂಬ ಸಂಸ್ಥೆಗಳನ್ನು ಕಟ್ಟಿದರು. “ಸರಳವಾದ ಜೀವನ-ಉದಾತ ಚಿಂತನೆ” ಇವು ಆ ಆಶ್ರಮಗಳ ಧ್ಯೇಯವಾಗಿತ್ತು. ಇಂಥ ಜೀವನ ವಿಧಾನದಿಂದ ಸಕಲ ಮಾನವರ ಒಳಿತು ಆಗುವುದೆಂದು ಅವರು ನಂಬಿದ್ದರು.  “ಸೇಡಿಗೆ ಸೇಡು” -ಮುಯ್ಯಿಗೆ ಮುಯ್ಯಿ” ನಿಜವಾದ ಧರ್ಮವಲ್ಲ, ವ್ಯಕ್ತಿ ಸತ್ಯನಿಷ್ಠನಾಗಿ, ಧರ್ಮಪರಾಯಣನಾಗಿ ಪ್ರೇಮಭರಿತವಾಗಿ ಬದುಕಬೇಕೆಂದೂ, ಇವೇ ಸತ್ಯ-ಧರ್ಮ-ಪ್ರೇಮ, ಈ ಗುಣಗಳು ಮಾನವರ ಸಮಾಜದಲ್ಲಿಯೇ ರೂಪುಗೊಳ್ಳುವಂತೆ ಮಾಡಬೇಕೆಂಬುವುದೂ ಅವರ ಅಶಯವಾಗಿದಿತು. ಇದರಿಂದ ಜನಿಸುವ ಸಾತ್ವಿಕ ಶಕ್ತಿ ಎಂಥ ದುರುಳ ಶಕ್ತಿಯನ್ನಾದರೂ ಪರಿವರ್ತಿಸಬಲ್ಲುದೆಂಬ ನಂಬಿಕೆ ಅವರಲ್ಲಿ ನೆಲೆಗೊಂಡಿದ್ದಿತು.

ಭಾರತದ ನಾಯಕ ಗಾಂಧೀಜಿ :

ಭಾರತದಲ್ಲಿ ಬ್ರೀಟೀಷ ಸಾಮ್ರಾಜ್ಯದ ಪ್ರಭುತ್ವದಿಂದ ಮುಕ್ತವಾಗಲು  ಭಾರತೀಯರ ಪ್ರಯತ್ನ ಸಾಗಿತ್ತು. ಭಾರತ ರಾಷ್ಟ್ರೀಯ ಕಾಂಗ್ರಸ್ ಅದಕ್ಕಾಗಿ ಶ್ರಮಿಸುತ್ತಿತ್ತು. ೧೯೧೯ರಲ್ಲಿ ಪಂಜಾಬಿನ ಜಲಿಯನ್ ವಾಲಿಬಾಗ ಎಂಬಲ್ಲಿ ಬ್ರಿಟಿಷ ಸೈನಿಕರು ನಡೆಸಿದ ಅತ್ಯಾಚಾರ ಭಾರತೀಯರನ್ನು ರೊಚ್ಚಗೆಬ್ಬಿಸಿತು. ಅಲ್ಲಿ ಜನ ಒಂದು ಸಭೆಗಾಗಿ ಸೇರಿದ್ದರು. ಸುತ್ತ ಗೋಡೆ, ಹೊರಕ್ಕೆಹೋಗಲು ಒಂದೇ ಮಾರ್ಗ. ಮಾರ್ಗವನ್ನು ಅಡ್ಡಕಟ್ಟಿ,  ಬ್ರಿಟಿಷ್ ಸೈನಿಕರು ಗುಂಡು ಹೊಡೆದು ನಿರಾಪರಾಧಿ ಭಾರತೀಯರನ್ನು ಕೊಂದು ಹಾಕಿದರು.

ಆ ವೇಳೆಗೆ ರಾಷ್ಟ್ರೀಯ ನಾಯಕರಾಗಿದ್ದ ಲೋಕಮಾನ್ಯ ಬಾಲಗಂಗಾದರ ತಿಲಕರುಕಾಲವಾಗಿದ್ದರು.  ಇಡೀ ರಾಷ್ಟ್ರ ಒಬ್ಬ ಸಮರ್ಥ ನಾಯಕನಿಗಾಗಿ ಕಾಯುತ್ತಿತ್ತು.  ದಕ್ಷಿಣ ಆಫ್ರಿಕಾದ ವೀರ ಸತ್ಯಾಗ್ರಹಿ ಮಹಾತ್ಮ ಎಲ್ಲರ ಗಮನವನ್ನು ಆಕರ್ಷಿಸಿದರು. ಆ ನಾಯಕತ್ವ ಅವರಿಗೆ ಸಹಜವಾಗಿಯೇ ಬಂದಿತು. ಅವರ ಮಾತಿನಲ್ಲಿ ಮಂತ್ರಶಕ್ತಿ ಇತ್ತು: ಅವರ ನಡತೆ ಶುದ್ಧ ಸ್ಪಟಿಕದಂತಿತ್ತು. ಅವರು ರಾಷ್ಟ್ರಕ್ಕೆ ಹೊಸ ಚೈತನ್ಯ ತುಂಬಿದರು. ಅತ್ಯಂತ ನಿರ್ಬಲನೂ ಅವರ ನಾಯಕತ್ವದಲ್ಲಿ ಅಹಿಂಸಾ ಹೋರಾಟಕ್ಕೆ ಅಣಿಯಾದರು. ಸ್ತ್ರೀಯರೂ, ಬಾಲಕರೂ, ರೈತರು ಜೀವನದ ಹಂಗು ತೊರೆದು, ತಮ್ಮ ಆತ್ಮಬಲ ತೋರಿಸಲು ಸಿದ್ಧರಾದರು. ತ್ಯಾಗ-ಸೇವೆ ರಾಷ್ಟ್ರಧರ್ಮಗಳಾದುವು.

ಭಾರತ ರಾಷ್ಟ್ರೀಯ ಕಾಂಗ್ರೆಸ್ ಗಾಂಧೀಜಿಯ ನಾಯಕತ್ವದಲ್ಲಿ ಮೂರು ದಶಕಗಳ ಕಾಲ ಐದು ಪ್ರಧಾನ ಹೋರಾಟಗಳನ್ನು ನಡೆಸಿತು. ೧೯೨೦-೨೨ರ ವರೆಗೆ ಅಸಹಕಾರ ಅಂದೋಲನ ಎಂಬುವುದು ನಡೆಯಿತು.  ಶಾಲಾ-ಕಾಲೇಜುಗಳ ಬಹಿಷ್ಕಾರ ಇವು ನಡೆದುವು. ಗಾಂಧೀಜಿ ರಾಜದ್ರೋಹದ ಅಪಾದನೆಗೆ ಗುರಿಯಾಗಿ, ಆರು ವರ್ಷಗಳ ಕಾರಾಗೃಹವಾಸದ ಶಿಕ್ಷೆಯಾಯಿತು. ಆರು ವರ್ಷಗಳ ಕಾರಾಗೃಹವಾಸದ ಶಿಕ್ಷೆಯಾಯಿತು. ಈ ಸಂಬಂಧದಲ್ಲಿ ನ್ಯಾಯಸ್ಥಾನದಲ್ಲಿ ನಡೆದ ಅವರ ವಿಚಾರಣೆ ಇಡಿಯ ನಾಗರಿಕ ಜಗತ್ತಿನ ಗಮನವನ್ನೇ ಸೆಳೆಯಿತು.

೧೯೨೨ರಲ್ಲಿ ಮುಂಬೈಯಲ್ಲಿ ಹಿಂದೂ-ಮುಸ್ಲಿಂ ಘರ್ಷಣೆಯಾಯಿತು. ಹುಚ್ಚು ದ್ವೇಷದಿಂದ ರಕ್ತ ಹರಿಯಿತು. ಗಾಂಧೀಜಿಯ ಮನಸ್ಸು ತಲ್ಲಣಗೊಂಡಿತು. ತಮ್ಮ ಮಗ ದೇವದಾಸ ಗಾಂಧೀಯಲ್ಲಿ ಕರೆಸಿಕೊಂಡರು. ಆತನಿಗೆ ಅಲ್ಲಿ ಹೋಗು, ಈ ದ್ವೇಷ ಬೇಡ ಎಂದು ತಡೆ, ಬುದ್ಧಿ ಹೇಳೂ. ಅವು ನಿನ್ನನ್ನು ಕೊಂದರೂ ಚಿಂತೆಯಿಲ್ಲ, ಇಂತಹ ದೊಡ್ಡ ಕೆಲಸಕ್ಕಾಗಿ ನನ್ನ ಮಗನು ಬಲಿಯದರೂ ಸಂತೋಷವೇ”. ಹೀಗೆ ಹೇಳಿ ಅವನನ್ನು ಕಳುಹಿಸಿದರು.

೧೮೩೧ರಲ್ಲಿ ಉಪ್ಪಿನ ಶಾಸನದ ಉಲ್ಲಂಘನೆಗಾಗಿ ನಡೆದ ದಂಡಿ ಸತ್ಯಾಗ್ರಹ ಜಗತ್ತಿನಲ್ಲೆಲ್ಲ ಪ್ರಸಿದ್ಧವಾಯಿತು. ಉಪ್ಪಿನ ತಯಾರಿಕೆ ಬ್ರಿಟಿಷ್ ಸರಕಾರದ ಸರ್ವ ಸಾಮಾನ್ಯವಾಗಿತ್ತು. ಗಾಂಧೀಜಿ ಇದನ್ನು ಉಲ್ಲಂಘಿಸಿ ತಾವು ಸ್ವತಂತ್ರ್ಯರು ಎಂದು ಸಿದ್ಧಪಡಿಸಲು ನಿರ್ಧಾರ ಮಾಡಿದರು. ಸಾಬರಮತಿ ಆಶ್ರಮದಿಂದ ಮಾರ್ಚ ೧೨ರ ಬೆಳಿಗ್ಗೆ ತಮ್ಮ ೭೯ ಮಂದಿ ಶಿಷ್ಯರೊಡಗೂಡಿ ೨೪೧ ಮೈಲಿ ದೂರದಲ್ಲಿದ್ದ ಸಮುದ್ರತೀರದ ದಂಡಿಗೆ ಯಾತ್ರೆ ಹೊರಟರು. ದಿನಕ್ಕೆ ೧೦-೧೨ ಮೈಲಿ ನಡಿಗೆ. ಊರುಗೋಲನ್ನು ಹಿಡಿದು ಸ್ವಾತಂತ್ರ್ಯದ ಅನ್ವೇಷಕನಂತೆ ದೃಢಚಿತ್ತನಾಗಿ ಹೊರಟು ೬೨ ವರ್ಷದ ಯುವಕ ಗಾಂಧೀ ಬ್ರಿಟಿಷ್ ಸಾಮ್ರಾಜ್ಯದ ಮೂಲವನ್ನೇ ಅಲ್ಲಾಢಿಸಿದರು. ಅವರು ಭಾರತದ ಕೊಟಿ ಕೋಟಿ ಜನತೆಯ ಹೃದಯದಲ್ಲಿ ತುಂಬಿದ ಧೈರ್ಯ-ಸ್ಥೈರ್ಯ, ಆತ್ಮತ್ಯಾಗದ ನಿರ್ಧಾರ, ಅದ್ಭುತವಾಗಿದ್ದುವು. ಇಡೀಯ ಭಾರತದಲ್ಲಿ ಸಹಸ್ರಾರು ನಗರಗಳೂ, ಪಟ್ಟಣಗಳೂ, ಮತ್ತು ಹಳ್ಳಿಗಳಲ್ಲಿ ಒಂದಲ್ಲ  ಒಂದು ಬಗೆಯ ಶಾಸನಭಂಗ ಕಾರ್ಯ  ನಡೆಯಿತು. ರಾಷ್ಟ್ರದಲ್ಲಿ ಸಾತ್ವಿಕ ವೀರ ತೇಜಸ್ಸು ದುಂದುಮಿಸಿತು. ಆತ್ಮತ್ಯಾಗದ ಮಹಾಪೂರ ತುಂಬಿ ಹರಿಯಿತು. ಬ್ರಿಟಿಷ ಸರಕಾರ ಗಾಂಧೀಜಿಯನ್ನು ಮತ್ತೇ ಸೆರಮನೆಗೆ ಹಾಕಿತು.

೧೯೩೨ರಲ್ಲಿ ಗಾಂಧೀಜಿ ಸೆರಮನೆಯಲ್ಲಿ  ಇದ್ದಾಗಲೇ ಇನ್ನೊಂದು ಅಸಾಧಾರಣ ಘಟನೆಯು ನಡೆಯಿತು.  ಬ್ರಿಟಿಷ್ ಸರಕಾರ, ರಾಜಕೀಯ ಸುಧಾರಣೆಯ ನೆಪದಲ್ಲಿ ಆಸ್ಪ್ರಶ್ಯರೆನ್ನಲಾದ ಭಾರತದ ಕೋಟ್ಯಾಂತರ ಪ್ರಜೆಗಳನ್ನು ಹಿಂದೂ ಸಮಾಜದಿಂದ ಎಂದೆಂದಿಗೂ ಪ್ರತ್ಯೇಕ ಮಾಡಿಬಿಡುವ ಹಂಚಿಕೆ ಹೂಡಿತು. “ವಿಭಜಿಸಿ ಆಳುವುದೇ” ಅವರ ತತ್ವವಾಗಿತ್ತು. ೧೯೨೪ ರಲ್ಲಿ ಹಿಂದೂ ಮುಸಲ್ಮಾನರ ಐಕ್ಯಮತ್ಯಕ್ಕಾಗಿ ಗಾಂಧೀಜಿ ೨೧ ದಿನಗಳ ಉಪವಾಸ ಮಾಡಿದ್ದರು. “ಅಸ್ಪ್ರಶ್ಯತೆ” ಹಿಂದೂ ಸಮಾಜಕ್ಕೆ ಒಂದು ಮಹಾ ಅಪಮಾನ ಎಂದೂ ಅದನ್ನು ತೊಡದದು ಹಾಕಿ ಹಿಂದೂ ಧರ್ಮವನ್ನು ಶುದ್ಧಗೊಳಿಸಬೇಕೆಂದೂ ಅವರು ಬೋಧಿಸುತ್ತದ್ದರು. ಈಗ ಸರಕಾಋವೇ ಕೈಗೊಂಡ ಕಾರ್ಯ ಅವರಲ್ಲಿ ಆತ್ಮಬೇಗೆಯನ್ನು ಹುಟ್ಟಿಸಿತು. ಆದುದರಿಂದ ಅವರು ಉವಪಾಸ ಆರಂಭಿಸಿದರು. ಇದರಿಂದ ಭಾರತದಲ್ಲೆಲ್ಲ ಕಳವಳ ಉತ್ಪನ್ನವಾಯಿತು. ಬ್ರಿಟಿಷ ಸರಕಾರಕ್ಕೂ ಗಾಬರಿ ಹುಟ್ಟಿ ಅದು ತನ್ನ ಯೋಜನೆಯನ್ನು ಕೈಬಿಟ್ಟಿತು.  ಭಾರತದಲ್ಲಿ ಸಾರ್ವಜನಿಕರ ಮಾನವೀಯ ಪ್ರಜ್ಞೆ ಎಚ್ಚರವಾಯಿತು. ದೇವಾಲಯಗಳು, ಬಾವಿಗಳೂ, ಸಾರ್ವಜನಿಕ ಸ್ಥಳಗಳು ಇವುಗಳಲೆಲ್ಲ “ಅಸ್ಪ್ರಶ್ಯ”ರಿಗೆ ಪ್ರವೇಶಾಧಿಕಾರ ದೊರಕಿಸಿಕೊಡುವ ಪ್ರಯತ್ನ ನಡೆಯಿತು. ಗಾಂಧೀಜಿ “ಅಸ್ಪ್ರಶ್ಯರನ್ನು” “ಹರಿಜನ”ರು-ಭಗವಂತನಿಗೆ ಪ್ರೀಯವಾದ ಜನ” ಎಂದು ಸಂಭೋದಿಸಿದರು. ಅವರ ಸೇವೆಗಾಗಿ “ಹರಿಜನ ಬಂಧು, “ಹರಿಜನ ಸೇವಕ”, “ಹರಿಜನ” ಎಂಬ ಪತ್ರಿಕೆಗಳನ್ನು ಹೊರಡಿಸಿದರು. ಭಾರತದಲ್ಲಿ ಅಸ್ಪ್ರಶ್ಯತೆ ಪೂರ್ಣವಾಗಿ ನಿರ್ನಾಮವಾಗುವರೆಗೂ ತಮ್ಮ ಸಾಬರಮತಿ ಆಶ್ರಮಕ್ಕೆ  ಕಾಲಿಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದರು. ವರ್ಧಾ ಬಳಿ “ಸೇವಾಗ್ರಾಮ” ಎಂಬ ಪ್ರತ್ಯೇಕ ಆಶ್ರಮವನ್ನು ಸ್ಥಾಪಿಸಿದರು.

೧೯೪೧ರಲ್ಲಿ ಯುದ್ಧಕ್ಕೆ ವಿರೋಧವಾಗಿ ವೈಯಕ್ತಿಕ ಸತ್ಯಾಗ್ರಹ ಎಂಬುವುದು ನಡೆಯಿತು. ಇದಕ್ಕೆ ಹಿಂದೆ ನಡೆದ ಸತ್ಯಾಗ್ರಹಗಳೆಲ್ಲ ಸಾಮೂಹಿಕ ಸ್ವರೂಪದವು. ಈ ಸತ್ಯಾಗ್ರಹ ಗಾಂಧೀಜಿ ಆರಿಸಿ ಒಪ್ಪಿಗೆ ಕೊಟ್ಟ ವ್ಯಕ್ತಿಗಳಿಂದ ಮಾತ್ರ ನಡೆಯಿತು. ಇದಕ್ಕೆ “ಸಾಂಕೇತಿಕ ಸತ್ಯಾಗ್ರಹ” ಎಂದು ಹೆಸರು. ಹಿಂದಿನ ಸತ್ಯಾಗ್ರಹಗಳು ಪೂರ್ಣವಾಗಿ ಅಹಿಂಸೆಯಿಂದ ಕೂಡಿರಲಿಲ್ಲ. ಇದು ಗಾಂಧೀಜಿಗೂ ಅರಿವಿದ್ದಿತು. ಆದುರಿಂದ ಸತ್ಯಾರಾಧಕರಾದ ಅವರು ಈ ಬಗೆಯ ಪ್ರಯೋಗ ನಡಸಿದರು.

ಕಡೆಯದಾಗಿ, ೧೯೪೨ರಲ್ಲಿ “ಬ್ರಿಟಿಷರೇ”, ಭಾರತ ಬಿಟ್ಟು ಹೊರಡಿ” ಎಂಬ ಹೋರಾಟ ನಡೆಯಿತು. ಇದು ಬ್ರಿಟಿಷರ ಆಡಳೀತವನ್ನು ಕಡೆಗಾಣಿಸಿ ಭಾರತಕ್ಕೆ ಸ್ವಾತಂತ್ರ್ಯ ತರುವ ಅಂತಿಮ ಹೋರಾಟವಾಗಿತ್ತು. ಗಾಂಧೀಜಿ ಇದಕ್ಕೆ ನೀಡಿದ್ದ ಪ್ರೇರಕ ಮಂತ್ರ “ಮಾಡುವೆ-ಇಲ್ಲವೆ ಮಡಿವೆ”. ಇದೂ ಪೂರ್ಣವಾಗಿ ಅಹಿಂಸೆಯಿಂದ ಕೂಡಿರಬೇಕೆಂದು ಗಾಂಧೀಜಿ ನಿರೀಕ್ಷಿಸಿದ್ದರು. ಆದರೆ ಹಾಗಾಗಲಿಲ್ಲ. ಅದರೂ ರಾಷ್ಟ್ರದ ವೀರಚೇತನ ಪ್ರಚಂಡವಾಗಿ ಜಾಗೃತವಾಗಿ, ಸ್ವಾತಂತ್ರ್ಯ ಪ್ರಾಪ್ತಿಗೆ ಕಾರಣವಾಯಿತು. ಸಹಸ್ರಾರು ಮಂದಿ ಸೆರಮನೆಯ ವಾಸ ಅನುಭವಿಸಿದರು; ಲಾಠೀ ಏಟಿಗೆ ಗುರಿಯಾದರು: ಗುಂಡಿನೇಟಿಗೆ ಗುರಿಯಾಗಿ ಅಸುನೀಗಿದರು. ಒಂದು ಜನಾಂಗ ಎದುರಾಳಿಯ ಮೇಲೆ ಕೈ ಎತ್ತದೇ, ಅವನಿಗೆ ಕೆಡುಕನ್ನು ಬಯಸದೇ, ಕ್ಲೇಶವನ್ನೆಲ್ಲ ತಾವೇ ಉಂಡು ಸ್ವಾತಂತ್ರ್ಯ ಗಳಿಸಿಕೊಂಡ ಪರಿ, ಜಗತ್ತಿನ ಇತಿಹಾಸದಲ್ಲಿ ಇದೊಂದೇ, ಅಂತೆಯೇ ನಾಯಕ ಗಾಂಧೀಜಿಗೆ ಅಪೂರ್ವ ಬಗೆಯ ಹಿರಿಮೆ ಸಂದಿದೆ.

 

ಕ್ರೌರ್ಯ ಪರಮಾವಧಿ ಮುಟ್ಟಿದ ತಾಣದಲ್ಲಿ ಶಾಂತಿದೂತ:

ಸತ್ವ ಪರೀಕ್ಷೆ :

೧೯೪೭ರ ಅಗಸ್ಟ್ ಹದಿನೈದರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಿತು. ಆದರ ರಾಷ್ಟ್ರ ಎರಡು ಹೋಳಾಯಿತು. ಇದನ್ನು ಗಾಂಧೀಜಿ ಪೂರ್ಣವಾಗಿ ವಿರೋಧಿಸಿದ್ದರು. ಹಿಂದೂ – ಮುಸ್ಲಿಂ ಗಲಭೆಗಳು ಒಂದರ ಹಿಂದೆ ಒಂದು ನಡೆದುವು. ರಕ್ತದ ಕಾಲುವೆ ಹರಿಯಿತು. ಲಕ್ಷಾಂತರ ಜನ ವಸತಿ ಹೀನರಾದರು; ಬಂಧುಭಗಿನಿಯರನ್ನು ಕಳೆದುಕೊಂಡು ಅನಾಥರಾದರು. ಪೂರ್ವಬಂಗಾಳದ ನವಖಾಲಿ ಮತ್ತುತಿಪ್ಪೆರಾಗಳಲ್ಲಿ ನಡೆದ ನರಹತ್ಯೆಯ, ಹೆಂಗಸರ ಅಪಮಾನದ ಕೃತ್ಯಗಳು ಮಾನವೀಯತೆಗೆ ಕಲಂಕ ತಂದುವು. ಮಾನವ ದಾನವನಾದನೋ ಎನ್ನುವಂತೆ ಭಾಸವಾಗುತ್ತಿತ್ತು. ಗಾಂಧೀಜಿ ತಮ್ಮ ಬಾಳಿನಲ್ಲಿ ಅರ್ಧ ಶತಮಾನಕ್ಕೆ ಮೇಲ್ಪಟ್ಟ ಕಾಲ ವೈಯುಕ್ತಿಕವಾಗಿಯೂ ಸಾಮಾಜಿಕವಾಗಿಯೂ, ಅನುಷ್ಠಾನಕ್ಕೆ ತರಲು ನಿಷ್ಠೆಯಿಂದ ಮಾಡಿದ್ದ ಪ್ರಯತ್ನ -ಅಹಿಂಸೆ ಅಥವಾಪ್ರೇಮ ಪೂರ್ಣವಾಗಿ ಮಾಡಿದ್ದ ಪ್ರಯತ್ನ- ಅಹಿಂಸೆ ಅಥವಾ ಪ್ರೇಮ-ಪೂರ್ಣವಾಗಿ ಸೋತು ಹೋದಂತೆ ಕಂಡುಬಂದಿದ್ದಿತು. ಹಿಂಸೆ ತಾನೇ ತಾನಾಗಿ ಮೇಲೆತ್ತ ನಿಂತಿದ್ದ ಆ ಭೀಕರ ವಾತಾವರಣದಲ್ಲಿ ತಮ್ಮ ಸತ್ವ ಪರೀಕ್ಷೆ ಮಾಡಲು ಅವರು ನಿರ್ಧಾರ ಮಾಡಿದರು. ಧರ್ಮಾಂಧತೆಗೆ ರಾಜಕೀಯದ ಹುಚ್ಚು ಹಿಡಿದು, ಕ್ರೌರ್ಯ ಪರಮಾವಧಿ ಮುಟ್ಟಿದ ಆ ತಾಣದಲ್ಲಿ ಏಕಾಂಗಿ ಶಾಂತಿದೂತನಾಗಿ ಸಂಚರಿಸಿ, ಹಿಂದು ಮುಸಲ್ಮಾನರ ಹೃದಯಗಳಲ್ಲಿ ಸ್ನೇಹ-ಸಮರಸ ಭಾವಗಳನ್ನು ಕರುಣಾ ಭಾವವನ್ನು ಸ್ಥಾಪಿಸಲು ಯತ್ನಿಸಿದರು. ಎಪ್ಪತ್ತೇಳು ವರ್ಷದ ಮುದುಕ ಹಳ್ಳಿಯಿಂದ  ಹಳ್ಳಿಗೆ ನಡೆದು ಹೋದರು. ನೊಂದವರನ್ನು ಸಂತೈಸಿದರು.  ಎಲ್ಲರನ್ನು ಸೇರಿಸಿ ಪ್ರಾರ್ಥನಾ ಸಭೆಗಳನ್ನು ನಡೆಸಿದರು.  ಬುದ್ಧಿವಾದ ಹೇಳಿದರು. ಅದೊಂದು ಮಹಾಕರುಣೆಯ ಕಾರ್ಯವೇ ಆಯಿತು. ಮಾನವ ವ್ಯಕ್ತಿ ಎಂಥ ದೈವತ್ವದ ಮಟ್ಟಕ್ಕೆ ಏರಬಲ್ಲನೆಂಬುವುದಕ್ಕೆ ಚಿರಕಾಲ ನಿಲ್ಲುವ ನಿರ್ದನವಾಯಿತು.

ಶಾಂತಿ ಮೂಡಿತ್ತು. ಎರಡೂ ಕೋಂಉಗಳ ಜನಾಂಗಗಳವರು ತಮ್ಮ ಹೀನ ಕೃತ್ಯಗಳಿಗೆ ತಲೆ ತಗ್ಗಿಸುವಂತಾಗಿತ್ತು. ಗಾಂಧೀಜಿ ದೆಹಲಿಯ ಬಿರ್ಲಾ ಭವನದಲ್ಲಿ ತಂಗಿದ್ದರು.

೫-೩೦ಕ್ಕೆ ಪ್ರಾರ್ಥನಾ ಸಭೆ ನಡೆಸುತ್ತಿದ್ದರು. ಪ್ರಾರ್ಥನೆ ಅವರ ಸರ್ವ ಶಕ್ತಿಯಾಗಿತ್ತು. ಆ ಶುಕ್ರವಾರ ಸಂಜೆಯು ಪ್ರಾರ್ಥನಾ ಸಭೆಗೆ ಹೋಗುವ ಹಾದಿಯಲ್ಲಿದ್ದರು. ಗಾಂಧೀಜಿ ಮುಸಲ್ಮಾನರ ಪಕ್ಷಪಾತಿ ಎಂದು ಭಾವಿಸಿದ್ಧ ನಾಥೂರಾಂ ವಿನಾಯಕ ಗೋಡ್ಸೆ ಎಂಬಾತ, ಹಿಂದು ಧರ್ಮವನ್ನು ಉಳಿಸುವನೆಂಬ ಭ್ರಮೆಯಿಂದ ಅವರನ್ನು ಗುಂಡಿಟ್ಟು ಕೊಂದನು. ಅವನು ಎದೆರೆದುರಿಗೆ ನಿಂತು, ತಲೆಬಾಗಿ ನಮಸ್ಕರಿಸಿ ಮೂರು ಸಲ ಗುಂಡು ಹಾರಿಸಿದನು.

ಗೀತಾ ಧರ್ಮದ ಹೃದಯ ಒಡೆಯಿತು. ಗಾಂಧೀಜಿ ಇಲ್ಲವಾದರು.

ಈ ದುರಂತ ಲೋಕವನ್ನೇ ತಲ್ಲಣಗೊಳಿಸಿತು. ಮಾನವನಿಗೆ ಸತ್ಪಥ ತೋರುತ್ತಿದ್ದ ಮಹಾ ಸಾತ್ವಿಕ ಶಕ್ತಿಯೊಂದು ಕಣ್ಮರೆಯಾಯಿತು. ಮಾನವ ಭಾವ ಉಳ್ಳವರೆಲ್ಲ ಕಣ್ಣೀರಿಟ್ಟರು.

ಗಾಂಧೀಜಿ ಬಿಟ್ಟು ಹೋದ ಭಾಗ್ಯ:

ಗಾಂಧೀಜಿ ಭಾರತಕ್ಕೆ ಬಯಸಿದ ಸ್ವರಾಜ್ಯ, ಸ್ವಾತಂತ್ರ್ಯ ಕೇವಲ ರಾಜಕೀಯ ಸ್ವರೂಪದ್ದಲ್ಲ. ಅದೊಂದು ಹೊಸ ಸಮಾಜಕ್ಕೆ ಹೊಸ ನಾಘರಿಕತೆಗೆ, ಹೊಸ ಸಂಸ್ಕೃತಿಗೆ, ಇವುಗಳಿಗೆಲ್ಲ  ಕಾರಣರಾದ ಹೊಸ ವ್ಯಕ್ತಿಗೆ ಸಾಧನವಾಗಬೇಕಾಗಿತ್ತು. ಅಂಥಹ ಸಮಾಜ ವ್ಯವಸ್ಥೆಯನ್ನು ಅವರು ಪ್ರೇಮವೇ ಅಲ್ಲಿ ಶಾಸನ. ಎಲ್ಲರೂ ಕತೃವ್ಯ ಪರರು. ಅಲ್ಲಿ ಜಾತಿ-ಮತ ಕೋಮುಗಳ ಭಾವನೆಯಿಲ್ಲ. “ಅಸ್ಪ್ರಶ್ಯತೆ”ಯ ಸುಳಿವೇ ಇಲ್ಲಿ ಇರುವುದಿಲ್ಲ. ಧರ್ಮದ ದೃಷ್ಟಿಯಲ್ಲಿ ಸಕಲರೂ ಸಮನಾರು. ಎಲ್ಲರು ದುಡಿಮೆ ಮಾಡಿಜೀವಿಸುವವರು. ಬುದ್ಧಿಯ  ಕೆಲಸ, ಶರೀರ, ಶ್ರಮ- ಇವುಗಳಲ್ಲಿ ಒಂದುಕೀಳು, ಒಂದು ಮೇಲು ಎಂಬ ಭಾವನೆ ಇರದು. ಅಲ್ಲಿ ಯಾವ ಬಗೆಯ ಮಾದಕ ವಸ್ತುಗಳ ಸೇವನೆಗೂ ಅವಕಾಶವಿರುವುದಿಲ್ಲ. ಮಹಿಳೆಯರ ಬಗೆಗೆ ಪೂಜ್ಯ ಭಾವವಿರುತ್ತದೆ. ಪ್ರತಿಯೊಬ್ಬನೂ ಲೋಕ ಕಲ್ಯಾಣಕ್ಕಾಗಿ ತನ್ನ ಪ್ರಾಣವನ್ನು ಕೊಡಲು ಸಿದ್ಧನಿರುತ್ತಾನೆ. ಇಂಥಹ ಸ್ಥಿತಿಯನ್ನು ಅವರು ಸರ್ವೊದಯ ಎಂದುಸಾರಿದರು.

ಮಾನವ ಮಾನವನೊಂದಿಗೆ, ಸಕಲ ಜೀವ ರಾಶಿಯೊಂದಿಗೂ, ಪ್ರಕೃತಿಯೊಂದಿಗೂ, ಅರಿವು ಮತ್ತು ಸಮರಸ ಭಾವದಿಂದ ಬಾಳುವುದೇ ಸರ್ವೋದಯ.

ಸರ್ವೋದಯ ಸಾಧನೆಗೆ ದೀನದಲಿತರ ಸೇವೆ ಪ್ರಥಮ ಕರ್ತವ್ಯವಾಗಿತ್ತು ಗಾಂಧೀಜಿಗೆ. ಅದು ಅವರ ಬದುಕಿನ ಸಾರ್ಥಕತೆಯ ದಿವ್ಯ ಅಂಶವಾಗಿತ್ತು. ಧರ್ಮ-ನೀತಿ  ಇವುಗಳಿಂದ ದೂರವಾದ ಜ್ಞಾನ, ಸಂಪತ್ತು ಮಾನವನ ಪತನಕ್ಕೆ ಹಾದಿಯೆಂದು ಅವರು ನಂಬಿದ್ದರು. ಅವರು ಧರ್ಮೊತ್ಥಾನಕ್ಕಾಗಿ ಹುತಾತ್ಮರಾದರು.

ಜನನಾಯಕನ ಹೊಣೆ ಬಹು ದೊಡ್ಡದು. ಇತರರಿಗೆ ದಾರಿ ತೋರಿಸುವಷ್ಟು ಯೋಗ್ಯತೆ ತನಗುಂಟೇ ಎಂದು ಮತ್ತೇ ಮತ್ತೇ ಆತ ನಿಷ್ಟುರನಾಗಿ ಪರೀಕ್ಷೆ ಮಾಡಿಕೊಳ್ಳುತ್ತಿರಬೇಕು. ತಾನೂ ಇಟ್ಟ ಹೆಜ್ಜೆಯನ್ನು ಅನುಸರಿಸುವವರ ಕೆಲಸಗಳ ಹೊಣೆ ಎಲ್ಲ ತನ್ನದು. ಅವರೆಲ್ಲರ ಮೇಲೆ ಪ್ರಭಾವ ಬೀರಿ ತನ್ನ ಬೋಧನೆಗೆ ವಿರುದ್ಧ ಅವರು ಹೋಗದಂತೆ ನೋಡಿಕೊಳ್ಳುವ ಹೊಣೆ ತನ್ನದು. ಈ ಹೊಣೆ ಹೊರಲು ಸಾಧ್ಯವಿಲ್ಲದವನು ನಾಯಕತವದಿಂದ ದೂರವಿರಬೇಕು. ಅವನ ಮಾರ್ಗವನ್ನು ಇತರರೂ  ಅನುಸರಿಸುವುದರಿಂದ ಅವನು ಸದಾ ಆತ್ಮವಿಮರ್ಶೆ ಮಾಡಿಕೊಂಡು, ಆತ್ಮ ವಿಶ್ವಾಸದಿಂದ ಬದುಕನ್ನು ಸಾಗಿಸಿ, ಅಪೂರ್ಣವಾದ ಜಗತ್ತನ್ನು ಪೂರ್ಣತೆಯ ಕಡೆಗೆ ಸಾಗಿಸಬೇಕೆಂದು ಅವರ ಅಮರ ಸಂದೇಶ.

ಭಗವಂತನಲ್ಲಿ ಅನನ್ಯ ನಂಬಿಕೆ, ಪ್ರಾರ್ಥನೆ ಇವು ಗಾಂಧೀಜಿ ಭಾರತೀಯರಿಗೆ, ಲೋಕಕ್ಕೆ ಬಿಟ್ಟು ಹೋದ ಭಾಗ್ಯ. ಪ್ರಾರ್ಥನೆ ಅವರ ಬಾಳಿನ ಕಣ್ಣು; ಒಂದು ದಿನವೂ ಪ್ರಾರ್ಥನೆ ಮಾಡದೆಯಿರಲು   ಸಾಧ್ಯ ಇರಲಿಲ್ಲ.  “ಮೌನ ಪ್ರಾರ್ಥನೆಯೇ ನನ್ನ ಅತ್ಯಂತ ಶಕ್ತಿ ಅಸ್ತ್ರ” ಎಂದು ಅವರು ಹೇಳಿದರು.

ರಘುಪತಿ ರಾಘವ ರಾಜಾರಾಮ!
ಪತೀತ ಪಾವನ ಸೀತಾರಾಂ

ಈ ಗೀತೆ ಕೇಳೀಬಂದಾಗಲೆಲ್ಲಾ ಗಾಂಧೀಜಿಯ ನೆನಪು ಬರುತ್ತದೆ. ಅಲ್ಲಿ ಅವರ ಆತ್ಮ ಅಗೋಚರವಾಗಿದ್ದು, ಹರಸುತ್ತದೆ.  ಪತಿತವನ್ನು ಪಾವನಗೊಳಿಸುವುದು ಧರ್ಮ; ಅದು ದೇವಶಕ್ತಿ; ಅದನ್ನ ಯಾವ ಹೆಸರಿನಿಂದ ಕರೆದರೇನು? ಎಲ್ಲ ಒಂದೇ, ಸರ್ವರಿಗೂ ಒಳ್ಳೆಯ ಬುದ್ಧಿ ಬರಲಿ, ಇದು ಗಾಂಧೀ ತತ್ವ: ಗಾಂಧೀ ಲೋಕಕ್ಕೆ ನೀಡಿದ ಶಾಶ್ವತ ಜ್ಯೋತಿ.

“ರಾಮ” ಗಾಂಧೀಜಿಗೆ ತಾರಕ ಮಂತ್ರವಾಗಿತ್ತು. ಬಾಲಕನಾಗಿದ್ದಾಗ, ದೆವ್ವ ಪಿಶಾಚಿಗಳಿಗೆ ಹೆದರಿಕೊಳ್ಳುತ್ತಿದ್ದ ಗಾಂಧೀಗೆ, ಅವರು ಮನೆಯ ಸೇವಕಿ ರಂಭಾ ಕಲಿಸಿ, ಧೈರ್ಯ ತಂದುಕೊಟ ಮಂತ್ರ ದಿನವೂ ಬೈಗು-ಬೆಳಗು, ಅವರು ಪಠಿಸುತ್ತಿದ್ದ ಮಂತ್ರ. ಕಡೆಗೆ ಕೊಲೆಗಾರರ ಗುಂಡೇಟು ತಗುಲಿ, ಕೆಳಗೆ ಕುಸಿದು, ಮೈಭೂಮಾತೆಯ ಅಂಕವನ್ನು ಅಪ್ಪಿದಾಗಲೂ ಉಚ್ಚರಿಸಿದ ಮಂತ್ರ- ರಾಮ! ರಾಮ!!