ವಾಸ್ತವವಾಗಿ ಬೀಸುವ ಗಾಳಿಗೆ ಮಾರುತವೆಂದು ಹೆಸರು. ಗಾಳಿಯ (ಮಾರುತ) ವೇಗವನ್ನು ಅಳೆಯಲು ಬೋಫರ್ಟ್ ಸ್ಕೇಲ್ (ಮಾಪನ) ಎಂಬ ಅಳತೆಯಿದೆ. ಇದನ್ನು 1-12 ಎಂದು ವರ್ಗೀಕರಿಸಲಾಗಿದೆ. ಮೇಲಿನ ಲೇಖನದಲ್ಲಿ ಈ ಪರಿಣಾಮಗಳನ್ನು ಕೊಡಲಾಗಿದೆ.

ಪಕ್ಕದ ಚಿತ್ರವನ್ನು ನೋಡಿ. ಅತಿಬಲವಾಗಿ ಬೀಸುವ ಮಾರುತದ ಮಾರ್ಗದಲ್ಲಿ ಬೆಳೆಯುವ ಈ ಗಿಡದ ರೂಪ! ಮಾರುತ ಅಥವಾ ಗಾಳಿ ಒಂದೇ ದಿಕ್ಕಿನಿಂದ ಬೀಸುತ್ತಿದೆಯೆಂಬುದು ಮರ ನೋಡಿದೊಡನೆ ತಿಳಿಯುತ್ತದೆ. ಬೀಸುವ ದಿಕ್ಕಿನಿಂದ ಅತ್ತ ಕಡೆಗೆ ಬಾಗಿದೆ ಈ ಮರ. ಇದು ಇನ್ನೂ ಒಂದು ವಿಷಯವನ್ನು ಸೂಚಿಸುತ್ತದೆ.  ತಾನು ಬೀಸುವ ದಿಕ್ಕಿನಿಂದ ಗಾಳಿಗೆ ತಡೆಯೇ ಇಲ್ಲದೆ, ಅದು ಮರವನ್ನು ಹೀಗೆ ಬಾಗಿಸುತ್ತದೆ. ಪ್ರಪಂಚದಲ್ಲಿ ಬೀಸುವ ಗಾಳಿ ಒಂದು ಮುಖ್ಯ ವಿದ್ಯಮಾನ. ಮಳೆ ಬರಬೇಕಾದರೆ ಇದು ಅನಿವಾರ್ಯ. ಹೀಗೆ ಚಲಿಸುವ ಗಾಳಿಯ ದಿಕ್ಕು ಒಂದು ಸಾಧಾರಣ ವಿನ್ಯಾಸದಲ್ಲಿರುತ್ತದೆ.  ಭೂಮಿ ಭ್ರಮಣವು ಈ ಬೀಸುವಿಕೆಯ ದಿಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ.  ಉತ್ತರಾರ್ಧ ಗೋಲದಲ್ಲಿ ನೈರುತ್ಯ ದಿಕ್ಕು ಮತ್ತು ದಕ್ಷಿಣಾರ್ಧ ಗೋಲದಲ್ಲಿ ವಾಯವ್ಯ ದಿಕ್ಕುಗಳ ಕಡೆಗೆ ಗಾಳಿಯು ಬೀಸುತ್ತದೆ.  ತೀವ್ರ ಮಾರುತವು ಪದಾರ್ಥಗಳನ್ನು, ಕಟ್ಟಡಗಳನ್ನು ಎತ್ತಿ ಒಗೆಯುವಷ್ಟು ಬಲವುಳ್ಳದ್ದು ಎಂದ ಮೇಲೆ ಗಾಳಿಯಲ್ಲಿ ಇಂತಹ ಶಕ್ತಿಯಿದೆ. ಇದನ್ನು ಬಳಸಲು ಇಂದು ಅನೇಕ ಪ್ರಯತ್ನಗಳು ನಡೆದಿವೆ. ಇದರಿಂದ ವಿದ್ಯುತ್ ಪಡೆಯುವ ತಂತ್ರಜ್ಞಾನವು ರೂಪುಗೊಂಡಿದೆ. ನೆದರ್‌ಲೆಂಡ್ (ಹಾಲೆಂಡ್, ಡೆನ್ಮಾರ್ಕ್) ನಂತಹ ಬಯಲು ದೇಶಗಳಲ್ಲಿ ಯಾವ ತಡೆಯಿಲ್ಲದ ಬೀಸುವ ಗಾಳಿಯಿಂದ ಗಿರಣಿಯನ್ನು ನಡೆಸುತ್ತಾರೆ. ಈ ಗಾಳಿಯಂತ್ರದಿಂದ ಧಾನ್ಯಗಳನ್ನು ‘ಬೀಸು’ವುದು, ನೀರೆತ್ತುವುದನ್ನೂ ಅವರು ಸಾಂಪ್ರದಾಯಿಕವಾಗಿ ರೂಢಿಸಿಕೊಂಡಿದ್ದರು.