ಸಂಧಿ-೧

ಶ್ರೀಶಿವ ಕೈಲಾಸವಾಸ ರಾಜೇಶನು
ದೋಷವರ್ಜಿತ ಗಿರಿಜೇಶಾ
ಭಾಷೆ ಸಜ್ಜನ ಭಕ್ತಗುಂಡಬೊಮ್ಮಣ್ಣನ
ವಾಸಿಗೊಲಿದ ಪರಮೇಶಾ   ೧

ಸತ್ಯ ಸದ್ಭಕರ ಸಜ್ಜನ x x x x x
ಭೃತ್ಯರದೊತ್ತು ಬಿನೈಸೆ
ಮರ್ತೈದ ಗುಂಡಬೊಮ್ಮಣ್ಣನ ಮನನೋಡ
ಕರ್ತ್ತಾರು ಒಪ್ಪ ಸಂಭ್ರಮವಾ          ೨

ಶಿವನ ಸದ್ಭಕ್ತರ ಕಿಂಕರರಾದರ
ಅವರ ಕೈಂಕರ್ಯ x x x x
ಭವನದೊಳಿಂದೀ ಕೃತಿಯನು ಪೇಳುವೆ
ಅವನಿಯ ಭಕ್ತರಾಲಿಪುದೂ  ೩

ಲಾಲಿಸಿ ಲೇಸಾಗಿ ಶೂಲಿಯ ಸಂಪತ್ತ
ಓಲಾಡುತುತ್ಸವದಿಂದಾ
ಮೂಲೋಕ x x x ಶರಣಸದ್ಭಕರು
ಲೀಲೆಯಿಂದೊಲಿದವಧರಿಸಿ  ೪

ಕರ್ಮ ನಿರ್ಮಳವಪ್ಪ ಒಮ್ಮೆ ಕೇಳಿದಡೆಯು
ಬ್ರಹ್ಮ ಹತ್ತಿ ಉರಿಗೊಟ್ಟಿದಲಗೂ
ಧರ್ಮ ಶ್ಯೂನ ಪರಲೋಕ x x x
ನಿರ್ಮಳ ಗುರುವಾಕ್ಯಗಳೂ  ೫

ಹಸಿವು ತೃಷೆ ಹುಸಿ ವೈಸನಾದ ಹಾದಿಗಳ
ಗಸಣಿ ವರ್ಜಿತವಾಗಿ ಕೇಳಿ
ಶಶಿಧರ ಸಲುಹುವದೆನೆಗೆ ಹೊದ್ದಲುರುಗೇಶ
ಶಶಿ ಮುಖಿ ಬಾಲ x x x x x           ೬

ಏಕದಂತ ಭುಜಗ ಗಟ್ಟಿನಡೊಳ್ಳು
ಅಜನುರಾರ್ಚಿತ ವರವೀವಾ
ಸುಜನ ಮನೋರಥ ವಿಘ್ನೇಶನ ಪಿತ
ತ್ರಿಜಗಧಿಪತಿ ಹರ ಶರಣೂ   ೭

ಮಂದಮತಿಯಾಗಿ ಚಂದ್ರಧರನ x x x x
x x x x ದುಯಾಗವನಿಕ್ಕಿದವನಾ
ಕೊಂದು ಕುರಿದಲೆಯಿತ್ತ ವೀರಭದ್ರನ ಪಿತ
ನಂದಿವಾಹನ ನಮೋಯೆಂಬೇ           ೮

ಬಾಲ ಬ್ರಹ್ಮಜಾತಿ ಬಲಗೈಯ್ಯ ಬೆತ್ತ x x x
x x x x ಮನಕದ ಕೆಂಜೆಡೆಯೂ
ನೀಲವರ್ಣದ ನವಿಲೇರಿ ದಾತನ ಪಿತ
ಶೂಲಿಯ ನಾ ಬಲಗೊಂಬೆ   ೯

ಕಟ್ಟಿನುತ ಉಪನುತೊಟ್ಟನೆ ಕಚ್ಚುವ
ಮೆಟ್ಟಿದ ಪಾದವಾ ಉಗೆಯ x x x
x x x x x ದಾತನ ಪಿತ
ಬಟ್ಟಾಂಗ ಧರೆಗೆ ವಂದಿಸುವೆ            ೧೦

ಅಯಿದು ಮುಖಗಳಿಗೈದು ನಯನ ವಿ
ರೈಯಿದು ಕಿವಿಯ ದಶಭುಜ ದಾ
ಮೈದುಗಡು ಗಜಚರ್ಮ ತ್ರಿಶೂಲದ
ಭಯ ಹಾದಿಯ x x ಬೊಗೊಂಬೆ      ೧೧

ವಾಸುಗೊಢ್ಯನೇಶಾ ಶರಣ
ಲೇಸೆನೀಸುವ ಭಸ್ಮಲೇಪಾ
ಸಾಸಿರ ನರಶಿರಮಾಲೆಯ ಧರಿಸಿದ್ದ
ಭಾಸುರ ಹರಗೆ ವಂದಿಸುವೆ  ೧೨

ಜೆಡೆ ಮುಕುಟದ ಗಂಗೆಯೆಡೆಗೊರಳದ ಕಪ್ಪು
ನಡುವೆ ಜಡೆಮಾಲೆ ಶಶಿರವಿ ಸೂಡಿದ
ಎಡಬಲ ಜಡೆಮಾಲೆ ಶಶಿರವಿ ಸೂಡಿದ
ಮೃಡನಡಿಗಾನೆರಗುವೆನೂ   ೧೩

ಒಪ್ಪುತಪ್ಪು ನಿಜ ನಯನ ತ್ರಿಜೆಡೆಗಳು
ಸರ್ಪನುತ್ತರ ಜನಿವಾರಾ
ಒಬ್ಬಳು ಎಡದೊಡೆ ಮೇಲೆ ಪಾರ್ವತಿದೇವಿ
ಅಪ್ಪಿಕೊಂಡು ಪುರಹರನಾ  ೧೪

ತಂದೆ ಗಣೇಶನ ತಂದೆ ಈಶ್ವರ ನಿಮ್ಮ
ನೊಂದು ಬಾರಿ ಹೊಗಳುವೆನೂ
ಸಂದ ಪುರಾತನ ಕೃತಿಗೆ ಸನ್ಮತಿಯನು
ಚಂದ್ರಧರನೆ ಕೊಡು ನನಗೇ  ೧೫

ವೇದ ಪುರಾಣಕೆ ಭೇದ್ಯನೆ ಹರ ನಿಮ್ಮ
ಮೇದಿನಿಯೊಳು ಬಲ್ಲ(ವ)ರಾರು
ಆದಿಯನಾದಿಯ ಯುಗದ ಮುನ್ನರಿಯದ
ಭೇದ್ಯನೇ ವರವೀಯೂ ಹರನೇ        ೧೬

ಇಂದುಧರನೇ ನಿಮ್ಮ ಮೆರೆವ ಪುರಾತರ
ನೊಂದು ಬಾರಿ ಹೊಗಳುವೆನು
ಕುಂದು ಹೆಚ್ಚುಗಳೆಂದು ಮುಂದುಗೆವೆಸಬೇಡ
ನಂದಿವಾಹನ ಸಲಹೆನ್ನಾ     ೧೭

ತಂದುಕೊಂಡೆನು ನಾನು ಪ್ರಾಸಿಗೆ ಪದಕ
ಎಂದಾದರೆ ಮೆರೆದವರ
ಹಿಂದು ಮುಂದುಗಳೆಂದು ಕುಂದಿನ ನುಡಿಗಳ
ನಿಂದರು ವಚನಿಸ ಬೇಡಾ     ೧೮

ಈಶನ ಕೈಲಾಸದೊಳಗಣ ಶರಣರ
ಲೇಸಾಗಿ ಹೋಗಳುವೆ ನಾನು
ದೇಶಗಳೊಳಗುಳ್ಳ ಶರಣ ಸದ್ಭಕ್ತರು
ಲೇಸಾಗಿ ಕೇಳಿ ಕೃತಿಯನು    ೧೯

ಜರಿದರೆ ನೀವೆನ್ನ ಎನದು ಜಾಣ್ನುಡಿ
ಮೆರವುದಿಲ್ಲ ಕೊಂಡಾಡೆರೆ
ಗೊರಳ ಭವನ ಚರಣಕೆ ಸಂದರೆ
ಮೆರೆವೆನೀ ಪದದೊಳಗವರಾ            ೨೦

ಭಾವಕರು ಭಕ್ತಿ ಸಜ್ಜನ ಶೀಲರು
ಕೋವಿದರೊಲಿದು ಕೊಂಡಾಡೆ
ದೇವರು ಕೈವಲ್ಯಪದವಿಯನೀವನು
ದೇವಲೋಕವು ಸಾಯುಜ್ಯ  ೨೧

ಲಿಂಗದೇಹಿಯಲ್ಲಿ ಲಿಂಗದ ನೆನಹಿಲ್ಲ
ಲಿಂಗದಲ್ಲಿ ವಿರಹಿತನೂ
ಸಂಗನ ಶರಣರ ಸಂಗವ ಮಾಡಲು
ಗಂಗಾಧರ ಮೆಚ್ಚುವನೂ    ೨೨

ಶಿವಶರಣರ ಭೃತ್ಯ ಶಿವನ ಹಂಗಿಗನು
ಶಿವಕವಿಗಳ ಕಿಂಕರನೂ
ಭುವನದೊಳಗೆ ಕಾಶಿನಾಥ ಹೊಗಳಿದ
ಶಿವಶರಣ ಕಾವ್ಯವನೂ       ೨೩

ಇಂದುಧರನ ಕಾವ್ಯದಂದವ ನಾಂದ್ಯವ
ಚಂದವಾಗಿ ಹೊಗಳಿದೆನು
ಸಂಧಿಸಿ ಬರೆಯಿಪ ಇಪ್ಪತ್ನಾಲ್ಕು ಪದ
ನಂದಿವಾಹನ ವರದಿಂದಾ     ೨೪

ಪ್ರಥಮ ಸಂಧಿ ೧ಕ್ಕಂ ಪದ ೨೪ಕ್ಕಂ
ಮಂಗಳ ಮಹಾಶ್ರೀಶ್ರೀಶ್ರೀ