ಸಂಧಿ-೫

ಹರಿಯು ಹರನು ಕೈಲಾಸನವನಿಬ್ಬರು
ಹಿರಿದು ಸಂಭ್ರಮಿಸುತ್ತಲಿಳಿದೂ
ಭರವಸದಿಂದ ನಡೆದು ಬಂದು ಮೆಲ್ಲನೆ
ಮೇರು ಗಿರಿಯ ತೆಂಕಣಿಂದಾ ೧

ಹಗಲುಗತ್ತಲೆ ಕಾಣಬಾರದು ಕಾನನ
ಹೊಗಲಿಲ್ಲ ರವಿಯಡಗಿದನೂ
ಆಗ ಹರನೆಂದನು ಹರಿಯೊಳು ಮುಂದಕೆ
ಹೋಗುವರೆ ಕತ್ತಲೆಯೆಂದೂ            ೨

ಹರಿಯೆ ನೀನು ಮುಂದಕೆ ನಡೆವೆಯ್ಯ ಬೇಗದಿ
ಹೊಲಬು ಹೊದ್ದುದು ದಾರಿ ನಮಗೆ
ಬರಿಯ ಕೊಯಿವ ಹೆಬ್ಬಿದರ ಮುಳ್ಳುಗಳು
ಹಿರಿದು ಸೆಳೆವ ಸೊಡರಿಗಳೂ            ೩

ಅಡವಿಯೊಳಗೆ ಎಡಗೈದಿರಬಾರದು
ಅಡಿಯಿಡಲಳವಲ್ಲ ಮುಳ್ಳೂ
ಪೊಡವಿಯೊಳಗೆ ಕದ್ದ ಕಳವಿಗೆ ಪ್ರಾಯಶ್ಚಿತ್ತ
ಮೃಡಬೇಗ ನಡೆಯೆಂದ ಹರಿಯೂ     ೪

ಬೆಟ್ಟವಾಳೆಯು ಹುಟ್ಟಿ ಬೆಳೆದಿರ್ದವಲ್ಲಲ್ಲಿ
ಹೆಟ್ಟುಗೆಯರು ಬಂಧು ಬಳಗಾ
ಸೃಷ್ಟಿಯೊಳಗೆ ಮನುಜರೊಂದಾಗಿಹರಂತೆ
ಕಟ್ಟಳೆಯಿಲ್ಲದ ಕದಳೀ      ೫

ಮುಂದಕೆ ಅಡಿಯಿಡೆ ಬಂಡೆಡ್ಡ ಬಿದ್ದಿತು
ಒಂದು ಶಂಖ ಪಾಳಪಾಯಿ
ಎಂದೆಂದು ಹಲಬರ ತಿಂದ ಪಾಪಿಯಿದ
ಸಂಧಿಸದಿರು ಕೊಲಲೆಂದೂ  ೬

ಅಂದು ಸರ್ಪಗೆ ಶಾಪವನಿತ್ತು ನಡೆದನು
ನಂದಿವಾಹನ ವನದೊಳಗೆ
ಮುಂದೆ ಬೆಳೆದು ಬಿದ್ದ ಬಿದಿರು ಬೆತ್ತಲಾಳವು
ಒಂದಾಗಿ ಕಿರುಬಿದಿರುಗಳೂ  ೭

ಆಲವರಳಿ ಗೋಣಿ ಸಾಲ ನೆಲ್ಲಿಯು ಬೆಲ್ಲ
ಮೇಲೆ ಮುತ್ತುಗ ಕಲುಮತಿ
ಓಲೆಯ ಮರ ಜಂಬುನೀರಲು ಗಿಣಿ ಮಾವು
ಓಲಾಡುವ ಫಲ ಹಲಸೂ    ೮

ಕಪ್ಪ x x ಉಯಿಪ್ಪೆ ಹುಣಿಸೆಯ ಮರ ಮಾವು
ತಪ್ಪುಲ ಬೆಲ್ಲವತ್ತಗಳೂ
ಒಪ್ಪವಾಗಿ ಬೆಳೆದಿಪ್ಪ ಕಾನನವನು
ಸರ್ಪಭೂಷಣ ನೋಡಿ ನಡದಾ         ೯

ಆರೋಗ್ಯ ವೃಕ್ಷ ವಾರುಧಿಯನು
ಆರು ಹೇಳುವರಳವಲ್ಲಾ
ಆರಾದು ಕೇಳಿ ಜರಿಧೆನೆಂದರೆ
ಹೇಳಲು ದಿನವೇಳು ಬೇಕೂ ೧೦

ಸಾರಾಯ ಸಂಕೀರ್ಣವಾಗಿ ಅರಣ್ಯವ
ಸೇರಿದೆ ಕಿಂಚಿತ್ತ ನಾನೂ
ಆರಜವಾಗಿಯೂ ಅದು ಮುನ್ನಬಾರದು
ಧಾರಣಿಯೊಳು ಜನಪದಕೆ    ೧೧

ಅಟ್ಟಿ ದಾಳಿಯನಿಟ್ಟು ಮುಟ್ಟಿ ಮೃಗವ ಹಿಡಿ
ದಟ್ಟ ಸೀಳುವ ನಾಯಿಗಳೂ
ಬೆಟ್ಟದೊಳಗೆ ಯಿಪ್ಪ ಹೆಬ್ಬುಲಿ ಕರಡಿಯು
ತೊಟ್ಟನೆ ತೊಳಲುವ ಸಿಂಹಾ           ೧೨

ಕೋಗಿಲೆ ವನದೊಳು ಸೋಗೆ ನವಿಲ ಹಿಂಡು
ಮೂಗು ರಜದ ಅರಗಿಣಿಯೂ
ಹೇಗೆ ಹೇಳಲು ಲಕ್ಷ ಪಕ್ಷಿಜಾತಿಗಳೊಳು
ಬೇಗ ಹವಣಿಸಿ ನಿಲಿಸಿದೆನೂ  ೧೩

ಬಳ್ಳಿ ಹೆಮ್ಮೆರಗಳ ಬಿಗಿದಪ್ಪಿಕೊಂಡಿರ್ದ್ದ
ಒಳ್ಳಿರಿವುತ ಮುಂದೆ ಮರಕೆ
ಕಳೆಯರಿಪ್ಪಲಿ ಪತಿವ್ರತೆಯರಿಲ್ಲ ಹರ
ಒಳ್ಳೆಯ ದೇಶಗಳಿಲ್ಲಾ      ೧೪

ಹರಿಯ ಮಾತನು ಕೇಳಿ ಹರನು ನೋಡುವೆನೆಂದಾ
ನರ ಪಟ್ಟಣದ ಕೆಲ ನೀತಿಯಾ
ಇರದೆ ಅಲ್ಲಿಂದಲು ಭರದಿಂದ ಬರುತಲೆ
ಮರದ ಮೇಲೆ ಕಂಡ ಮುಸ್ಯವಾ        ೧೫

ಕಾನನದೊಳಗಿಪ್ಪ ಕಪಿ ಕೊಂಡ ಮುನುಗಳು
ಸಿನಿಗೊಡಗ ಸಿಂಗಳಿಕಾ
ತಾನಲ್ಲಿಯಿಪ್ಪೆಯ ಮರದ ಮೇಲಣ ಹಣ್ಣ
ಧ್ಯಾನಿಸಿ ಮೇಲೆ ಶಿವಕಂಡಾ  ೧೬

ಕೆಲವು ಕಪ್ಪಿನ ಮೊರೆ ಕೆಲವು ಕೆಂಪಿನ ಮೊರೆ
ಹಲವು ಚಂದದಲಿವೆ ಹರಿಯೆ
ಹಲಬರ ಕೈಯಲಿ ಹಲವು ಸಲವಕೊಂಡ
ಕುಲದಿ ಹೊಮ್ಮಳಿಗನು ಅವನೂ       ೧೭

ಉಂಡ ಸಾಲದ ತೀರಿಸಲಾರದೆ ಮುನ್ನಿನ
ಚಂಡಿ ಭಂಡ ಪೂರ್ವಜನ್ಮಾ
ಕೊಂಡ ಮುಸುವಾದ ಕಾನನದೊಳಗಿವ
ಕಂಡಯ್ಯ ಋಣ ಪಾತಕನಾ  ೧೮

ಉತ್ತು ಹರಗೆ ಬಂಡಿ ಹೂಡುವರೆತ್ತಾಗಿ
ಕತ್ತೆ ಕುದುರೆಯಾಗಿ ಹೇರಿ
ತೊತ್ತು ಕೊಂಡರಾಗಿ ಯೇಳೇಳು ಜಲ್ಮದಿ
ಉತ್ತರಿನುತಲಿ ಹರಣವಾಗಿ  ೧೯

ಹತ್ತು ಬಾರಿಯು ಬಾಯ್ದೆರೆದು ಬೇಡಿದರೆ
ಪ್ರತ್ಯಕ್ಷ ಕೊಟ್ಟ ಸಾಲಗಳಾ
ಇತ್ತರು ಬೇಡಿದರತ್ತ ಹೋಗೆಂಬುರು
ಎತ್ತುಗಲ್ಲನು ಹೇರೆಂದು    ೨೦

ಅರಣ್ಯ ನೋಡುತ ಮರುಗಿರಿಯ ಕಂಡು
ಮ x x x x x x ಹರಿಯಾ
ಓರಣನುರಗುಂಡ ನೀಲಗಿರಿಯ ಮುಂದೆ
ತಾನದು ಕನಕಾ ಚಲವೂ      ೨೧

ದೊಡ್ಡ ಭೂಮಂಡಲದಂತದೆ ಮೇರುವೆ
ಅಡ್ಡಲುರಿಯು ಸಂಜೀವಾ
ಜಡ್ಡಲ್ಲದೆ ಬೆಳು ಮುಗಿಲಂತಿಪ್ಪುದು
ಒಡ್ಡುಹರನರ ಜಾತಾದ್ರಿ    ೨೨

ಎಡನಿದಿರಲಿ ನೋಡಿ ಕಡೆಯಲು ಕಂಡನು
ಬಲ ಕಡೆಯ ಚಂದ್ರಗಿರಿಯ
ಎಡೆವಿಡವಿಲ್ಲದೆ ನಡವುತ್ತ ಕಂಡನು
ಹಿರಿಯ ಹಬ್ಬುಗೆ ಮೇಲೆ ಮೃಗವಾ   ೨೩

ರವಿಯ ಕುದುರೆಯ ಕುರುಪಾಟಗಳಿಗೆ ಮಿಗೆ
ಗಿರಿಯೊಳು ಬೆದರುವ ಮೃಗವೂ
ಸುರ ಪುಷ್ಪಕಗಳ ಹಿರಿದಲ್ಲಾಡುವ
ನೆರವಿಗೊಡಗ ಹಿಂಡುಗಳೂ  ೨೪

ಎಪ್ಪತ್ತೇಳು ಕೋಟಿ ಕಪಿಗಳ ಶ್ರೀರಾಮ
ಗಿಪ್ಪರು ಆರಾನಿಷ್ಠ
ಒಪ್ಪಚ್ಚಿ ಆ ಹರ ಹಣ್ಣುಹಂಪಲಕೊಂಡು
ತಪ್ಪದೊಲೆವರು ಹರನೆ      ೨೫

ಚಕ್ರದಂತೆ ತಿರುಗುತಲಿಪ್ಪ ರಾಹುವ
ಜಕ್ಕುಲಿಸುವ ಮುಂಗಲಿಯೂ
ಹೊಕ್ಕು ನುಂಗುವೆ ಚಂದ್ರ ನೆರಳೆಯನೆಂದೆಂಬ
ಹೆಕ್ಕಳಿಸುವ ಹೆರ್ಬುಲಿಯೂ ೨೬

ಮೇರು ಗಿರಿಯ ಮೇಲೆ ಮುರಾರಿ ನಿಂದಿರ್ದು
ಮಾರ ಪಿತನ ಕೇಳಿದನೂ
ಧಾರುಣಿಯೊಳಗುಳ್ಳ ಪಟ್ಟಣ ಪೆಸರನು
ಆರೈದು ಕೇಳುತ ನಡದಾ    ೨೭

ಪಟ್ಟಿನೂಲು ಒಂಟೆ ಪುರುವಾ ಮೃಗಗಳು
ಹುಟ್ಟಿದ ದೇಶ ದೇಶಗಳಾ
ಸೃಷ್ಟಿಗೀಶ್ವರ ಹರ ನೋಡುತ ನಡದನು
ಕತ್ತಲೆ ದೇಶ ಮುಂತಾಗಿ      ೨೮

ಅಂಗ ವಂಗ ಕಾಳಿಂಗ ಕಾಂಬೂಜವು
ಕೊಂಗು ಕಂಚಿಯ ದೇಶಗಳಾ
ಸಿಂಗಳ ಕಾಶ್ಮೀರ ತೆಲುಗದೇಶಂಗಳ
ಲಿಂಗ ನೋಡುತ ಬರುತಲಿರ್ದಾ         ೨೯

ಬಂಗಾಳಿ ಬರ್ಬರ ಲಂಬ ಕನ್ನಡದೇಶ
ಬಂಗಾರದ ಕೋಟಿ ಲಂಕೆ
ತುಂಗಭದ್ರೆಯು ಹುರುಮಂಜಿಯ ನೋಡುತ
ಮುಂದಣ ನಗರಕೆ ನಡದಾ   ೩೦

ಉಲಿದೇಶ ಸಗರವ ನೋಡುತ ಮುಂದಣ
ಕಲಹತಿಯೆಂಬ ಪಟ್ಟದಾ
ಸಿರಿಯ ನೋಡುತ ಭಾಗೀರಥಿಕೆ ತಾರಾ
ಥರಗೊಂದು ನಡೆದನು ಹಠನೂ        ೩೧

ಲಾಳ ಪುಲೆಯಾಳ ಗುಜ್ಜರ ದೇಶವು
ಜೋಳವೊಡಿಯ ದೇಶಗಳಾ
ಮಾಳವ ಯೇಕಪಾದ ಘೋಡಮುಖ ದೇಶ
ಸ್ತ್ರೀ ರಾಜ್ಯದ ಮೇಲೆ ನಡದಾ           ೩೨

ಡಿಳ್ಳಿಯಿಂದತ್ತಲು ಹನ್ನೊಂದು ವ x x x
ಅಲ್ಲಿ ಕೌರವನ ರಾಜ್ಯಗಳೂ
ಒಳ್ಳೆಯ ಧರ್ಮವು ಉಳ್ಳ ಪಾಂಡವರಾಯ
ರಿಲ್ಲಿ ಇಂದಿತ್ತಲವರೆಯೂ   ೩೩

ಹಿಂದೆ ಅರ್ಜುನ ಪಾಶುಪತಕೆ ತಪಸು ಮಾಡೆ
ಇಂದ್ರಕೀಲಕೆ ಹರ ಬಂದು
ಹಂದಿಯ ನೆಚ್ಚ ಸಂವ್ಯಾಜಕೆ ಹಠ ನೀ
ಒಂದು ಬಾಣವ ನಿತ್ತ ಠಾವೂ            ೩೪

ಅಂದು ತಿರುಕನಾಗಿ ರಾವಣ ತಾ ಬಂದು
ತಂದು ಭಿಕ್ಷುವ ನಿಕ್ಕಿಯೆಂದೆನುತಾ
ಅಂದಿಲ್ಲಿ ಸೀತೆಯನೇ ಹೋಯ್ದ ಠಾವೆಂದೂ
ನಂದಿವಾಹನನಿಗೆಂದ ಹರಿಯೂ         ೩೫

ದೇವ ನಾನು ನನ್ನ ಸತಿ ಸೀತಾದೇವಿಯ
ದೇವನಾನರಸುತ ಬರಲೂ
ದೇವ ಚಿತ್ತೈಸಿಲ್ಲಿ ಹನುಮಂತ ತಾ ಬಂದು
ಈ ವನದೊಳು ನಮ್ಮ ಕಂಡಾ           ೩೬

ಆಯುಷ್ಯ ಮೂರುಕೋಟಿ ಚಂದ್ರಾಯುಧವನು
ಆ ವಿಷದುರಿಯ ಹಸವನೂ
ಮಾಯದ ರಾವಣ ಕನಕಾಸುರನಿಗೆ
ದೇವರಿತ್ತೋಡಿದ ಠಾವೂ    ೩೭

ಬಂದು ನಿಂದನು ಹರನೀಂದ್ರಕೀಲದೊಳಂದು
ಸಂಧಿಸಿ ಉಗ್ರ ತಪಸಿಗಳಾ
ಅಂದಲ್ಲಿ ಅವರಿಗೆ ವರದಿನೆನುತಲು
ನಿಂದನು ಮರುಳಾಗಿ ಹರನೂ           ೩೮

ಹಿಂದೆ ನಮ್ಮನು ಭಂಗ ಪಡಿಸಿದರಸುರರು
ಅಂದಿನ ಭವಣಿಯ ನರಿಯಾ
ಮುಂದಣ ಕೆಲಸವೆಲ್ಲವು ಕೆಟ್ಟಿತೆಂದು
ಚಂದ್ರಧರೆಗೆ ಕೈಮುಗಿದಾ    ೩೯

ನಡಿದು ಬಂದರು ಮಾಸನೂರಿನ ಬಳಿಗಾಗಿ
ಮೃಡನು ಮುಂದೆ ಹಿಂದೆ
ಪೊಡಗಿ ಶರಹರ ಚಿತ್ತೈಸೆನುತಲು
ತೊಡಗಿದ ಹರಿಯು ಸಂಗತಿಯಾ       ೪೦

ವಸುಧೆಯೊಳಿ ಮಡುವೆಲ್ಲಿಯದೆನುತಲು
ಶಶಿಧರ ಬೆಸಗೊಂಡ ಹರಿಯಾ
ಅಸಮಾಕ್ಷ ನಾನಿನ್ನು ನಿಮಗೆ ಬಿನೈಸುವೆ
ಶಶಿ ರವಿ ಜೂಟ ಚಿತ್ತೈಸೂ   ೪೧

ವಾರುಧಿಯೆ ಕೊಡ ಮೇರುವೆ ಕಡಗೋಲು
ಭೂರೆಂಬ ಸರ್ಪನ ನೇಣೂ
ಆರು ಬಣ್ಣಿಸುವರು ಅದರರ್ಭಟೆಯನು
ವೀರ ರಾಕ್ಷಸರೆಲ್ಲ ಹಿಡಿದೂ ೪೨

ಸುರರು ಸರ್ಪನ ಬಾಲ ಸರವಾಗಿ ಹಿಡಿದರು
ಭರದಿಂದ ಕಡುವುತಲಿರಲೂ
ತಿರುಗಲೊಲ್ಲದೆ ನಿಂದು ಕೀಲಿಸೆ ಮಂಥಣ
ಕರದನು ಹರಿಯು ಬ್ರಹ್ಮನನೂ         ೪೩

ಆಗ ಬ್ರಹ್ಮನು ತಂದ ಬಲ್ಲಿದ ಬಾಲಿಯ
ಬೇಗ ಮಂಥಣವನು ಪಿಡಿಯೆ
ನಾಗಭೂಷಣ ಕೇಳು ಮಂಥಣ ತಿರುಗಿತು
ಆಗ ಹುಟ್ಟಿದವು ವಸ್ತುಗಳೂ           ೪೪

ತಾರಾದೇವಿಯು ಜೇಷ್ಠದೇವಿಯು
ವಾರಣ ವಸ್ತು ಮಾಣಿಕವೂ
ಭೂರೆಂದು ಕಡೆವಾಗ ಹುಟ್ಟಿದವೀ ವಸ್ತು
ಓರಣದುತ್ತಮ ಕುದುರೆ      ೪೫

ಉತ್ತಮದಮೃತವು ಅಧಮದ ಸುರೆಯೂ
ಮತ್ತವರಂತರ ಹುಟ್ಟಿ
ಇತ್ತರವನು ದೇವೇಂದ್ರ ಕುಭೇರಗೆ
ಕರ್ತೃವಾದ ಬಾಲಿಗಳಿಗೆ       ೪೬

ಸುರರು ಅಮೃತ ಉಂಡು ಸಂತೋಷಿಸಿಕೊಳೇ
ಕರ ಕಷ್ಟದಸುರರು ಸುರೆಯಾ
ಹಿರಿದು ಸೇವಿಸಿ ಸೊಕ್ಕಿ ಮಂಥಣಗೆದರು
ಹರ ಕೇಳು ಕಾದಿದರಲ್ಲಿ      ೪೭

ಅಸುರರನಂದು ಕೊಂದಸಿಯಲಗಿನ ರಕ್ತ
ವಸುಧೆಗೆರಡು ಬಿಂದು ಬೀಳೆ
ಶಶಿಧರ ಕೇಳಯ್ಯ ಅಡರಿದ ಪುಟ್ಟಿದ
ಅಸಿಯವೆರಡು ಸುರಗಿಗಳೂ ೪೮

ಇಲ್ಲಿ ಇರಿಸಿಹೆವೊಂದ ಮಡುವಲಿ ಸುರಗಿಯ
ಬಲ್ಲಿದ ವೀರ ಸುಭಟರಾ
ಮಲ್ಲಿಕಾರ್ಜುನ ಕೇಳು ಬಿಜ್ಜಳರಾಯನು
ಮೆಲ್ಲನೆ ತೆಗಸುವೆನೆನುತಾ   ೪೯

ಅಲ್ಲಿಗೆ ತರಿಸಿದ ನೇಳುನೂರು ಕೊಡಗೂಸ
ಎಲ್ಲ ದೇಶ ದೇಶದೊಳು
ಬಲ್ಲಿದ ಬಲಿಯನು ಇಕ್ಕಿ ಸುರಗಿಯನು
ನಿಲ್ಲದೆ ತೆಗೆಸುವೆನೆನುತಾ    ೫೦

ಬಂದು ಬಿಡಿಸಿದನು ರೇವಣಸಿದ್ದನು
ಬಂಧನದ ಶಿಶುಗಳನೂ
ನಿಂದು ಮಡುವಿನೊಳು ಸುರಗಿಯ ತೋರಿದ
ಕಂದ ಬಿಜ್ಜಳ ನೋಡೆಂದು   ೫೧

ನಡುಗಿ ಬಿಜ್ಜಳರಾಯ ಸುರಗಿಯ ಕಾಣುತ
ಅಡಿಗೆರಗಿದನು ರೇವಣನಾ
ಮಡಗಿದ ಮುತ್ತಾ ಮಡುವಿಲಿ ಸುರಗಿಯ
ಪೊಡವೀಶ ಹೋದ ಪಟ್ಟಣಕೆ          ೫೨

ನಡಿದರು ಮಡುವಿನ ಗೊಡವೆಯ ಬಿಡುತಲು
ಮೃಡಮುರ ವೈರಿಗಳಾಗ
ಪೊಡವೀಗೀಶ್ವರ ಹರ ಬಳಲಿದಿರೆನುತಲಿ
ಕೊಡುತಿರ್ದ ಹರಿಯು ವೀಳೆಯವಾ    ೫೩

ದೇವ ಚಿತ್ತೈಸಯ್ಯ ಹೌದು ಹವಣಿಲ್ಲಿ
ನಾವು ಹೋಗಬೇಕು ಬೇಗಾ
ನಾವೀ ತೆಲುಗರ ದೇಶವ ನೋಡುತ
ಭೂಮಿ ಪತಿಯ ಪಟ್ಟಣಕೆ   ೫೪

ಹರ ಬಂದು ತೆಲುಗ ದೇಶವ ಹೊಕ್ಕಾಗಲು
ಸುರಿದವು ಮಳೆಗಾಲ ಸುಲಭಾ
ಹಿರಿದಾಗಿ ಬೆಳೆದವು ಧರೆಯಲ್ಲಗಲಕೆ
ಪೊಡವಿಯ ಮೇಲೆ ಹೆಬ್ಬೆಳಸೂ        ೫೫

ಪರುಷವು ಕಬ್ಬಿಣ ದರುಶನವಾದಂತೆ
ತಿರುಕರಿಲ್ಲದೆ ನಾಡೊಳಗೆ
ಕುರುಡರಾಗಿದ್ದರ ಕಣ್ಣೆಲ್ಲ ಬಂದಾಗ
ಬರಡೆಲ್ಲ ಹಯವಾದವೆಂದೂ          ೫೬

ಎಲ್ಲ ದೇಶವ ನೋಡುತ ಹರಿಹರ
ಮೆಲ್ಲ ಮೆಲ್ಲನೆ ಬಂದು ನಿಂದಾ
ಬಲ್ಲಿದ ಗಣಪತಿರಾಯನ ಮೋಹದ
ವಲ್ಲಭೆಯರ ವ್ರತಕಾಗಿ      ೫೭

ದಾನವು ಧರ್ಮವು ಪರಲೋಕ ಸಾಧನ
ತಾನಿದು ಕಳೆಯಯ್ಯ ಹರನೆ
ಮಾನವ ಜಲ್ಮವು ಮತ್ತಿಲ್ಲವೆಂದಾಗ
ತಾನು ಹೇಳಿದ ಹರಿಹರಗೆ    ೫೮

ಕೆರೆಬಾವಿ ಹೂದೋಟ ಮೆರೆವ ದಾನಧರ್ಮ
ಒರಗುತಿಪ್ಪ ಫಲ ತೆಂಗೂ
ಮಿರಿಮಿರ್ರನೆ ಮಿಂಚುವ ಸರಿಗಾಜು ನೆಲಗಟ್ಟು
ತೆರಹಿಲುಪ್ಪರಿಗೆ ಹೊಂಗಳಸಾ          ೫೯

ಬೋನವ ಮಾಡುವ ಗೃಹ ಭೋಜನ ಶಾಲೆ
ಸಾನುರಾಗದ ಸಜಾಗೃಹವೂ
ದಾನ ಧರ್ಮದ ಅರವಟ್ಟಿಗೆ ಗೋಪುರ
ವೇನೆನ್ನಬಹುದು ಸಂಭ್ರಮವಾ         ೬೦

ಚುಂಚು ಬಗುರಿಲೋಹ ಕಂಚಿನ ಕದಗಳು
ಮಿಂಚು ವಧಗಳ ಚಿತ್ತಾರಾ
ಪಂಚ ಭಕ್ಷದ ದೇವಾಂಗದ ಬಾಣಸ
ಕೆಂಚೆಯರಿಪ್ಪರ ಮನೆಯೂ  ೬೧

ವಸವಂತ ಕಾಲದಲೆಸೆವ ಚಪ್ಪರಗಳು
ಬಿಸಿಲ ಝಳಕೆ ಶೈತ್ಯಾಗೊಡುತಾ
ಎಸಳುಮಂಚದ ಕೆಸರು ಪಚ್ಚೆಯ ಗೋಡೆ
ಕಸ್ತೂರಿಯ ಪರಿಮಳದಾ     ೬೨

ಎಳೆ ಬಾಳೆಯ ನಾರಂಗವು ಸುತ್ತಲು
ಕೀಳು ಪಚ್ಚೆಯು ದಾಳಿಂಬಾ
ಮೆಳೈಸಿ ಬೆಳೆದಿಹ ಸುರೆಹೊಂಗೆ ಸಂಪಿಗೆ
ಆಳಾಪ ಅಳಿಯ ಝೆಂಕಾರಾ ೬೩

ಕುಡಿನೀರ ಗುಡುವಣಕೆ ಕೊಡುವ ಪರಿಮ
ಹಿಡಿದು ಕಟ್ಟಿದ ಯಾಲಕ್ಕಿ
ಕಡಿದು ಕಟ್ಟಿದ ಬಡ್ಡಿ ತೊಟ್ಟಿಲಾ ಮಂಚವು
ಒಡನೆ ಬಿಡುವ ಪನ್ನೀರೂ   ೬೪

ಅಲ್ಲವೆಲಕ್ಕಿಯು ನೆಲ್ಲಿಯ ತನಿಗಾಯಿ
ಬೆಲ್ಲವತ್ತದೆಳೆಗಾಯಿ
ಒಳ್ಳೆಯ ಕೆನೆ ಮೊಸರು ಕಲಸೊಗರಗಳು
ಅಲ್ಲಲ್ಲಿ ಪರಿಮಳವೆಸೆಯೆ  ೬೫

ಈಶನ ಪರಿಗಳಿಗಾಗಲೆ ಪರಿಮಳ
ಸೂಸಿದವೆನುತಲು ಕಂಡೂ
ಆಸೆ ಮಾಡಿದ ಹರ ನೋಟಕೆ ಎಣಿಸಲು
ಬೇಸರದೆಬ್ಬಿಸೆ ಹರಿಯಾ     ೬೬

ಎದ್ದು ಬಂದನು ಹರಿ ಸನ್ನೆ ಮಾಡದ ಮುನ್ನ
ರುದ್ರನು ಮುನಿದ ಮೊರೆಯಲಿ
ಇದ್ದ ಸ್ಥಿತಿಯ ಹೇಳುಬೇಡವೆಂದನೆ ಹರಿ
ಹೋದುದ ಹರ ಕೇಳು ಪಾಪಾ          ೬೭

ಉಂಡ ಮನೆಯ ಕದ್ದವರಿಲ್ಲಯ್ಯ
ಹೆಂಡತಿ ಮಾಡದ ಪಾಪಾ
ಗಂಡಗೆ ಭವವಾಗಿ ಕಟ್ಟಿವುಡುವದಯ್ಯ
ಕಂಡ ಹದನ ಕೇಳು ಹರನೆ    ೬೮

ಓರುಗಲ್ಲೊಳಗಣ ಹೊಲಬರಿವರೆ ಹರಿ
ಆರ ಕೇಳುವ ಹೇಳು ನೀನೂ
ನೀರ ಹೊಳೆಯಲೂರ ಮುಂದೆ ನಿಂದು ನಾ
ವಾರೆವ ಶುದ್ಧಿಯ ಹರನೆ    ೬೯

ಅರಮನೆ ಗಾವಲಿನಲ್ಲಿಯೆ ಕೇಳುವ
ನೆರವಿಗಳಲದೊಬ್ಬಳನೂ
ತರುವರಿಗೆಲಸಗಳನು ಮಾಡಿಕೊಳ್ಳದೆ
ವಿವರಿಸಿ ಕೇಳುವ ಹರನೆ       ೭೦

ಓರುಗಲ್ಲ ಕೆರೆಯೇರಿಯ ಯೆಂದಣ
x x x x x x x x ಬಂದೂ
ಸೌರುಭ ಸಂಪಿಗೆ ಸುರಹೊನ್ನೆ ಮಲ್ಲಿಗೆ
ಸೇರಿತು ಪರಿಮಳ ಹರಗೆ      ೭೧

ಪಾದತಿ ಹೊಂಬಾಳೆ ಜಾಜಿ ಸೇವಂತಿಗೆ
ವೇದಿಸಿದ ಪರಿಮಳದಾ
ಮೂದೆ ಮರದೇವ ಕೊಂಡಾಡುತಲಾಗ
ಹೋದನು ತಾವರೆಗೊಳಕೆ   ೭೨

ತಾವರೆ ಪುಷ್ಪದ ಪರಿಮಳ ಬಂದುಂಬ
ವಾಗಲಳಿಯ ಝೆಂಕಾರಾ
ಮಾವು ತೆಂಗು ಹೆರುಳೆ ಜಂಬು ಫಲವನು
ದೇವ ಚಿತ್ತೈಸೆಂದ ಹರಿಯೂ            ೭೩

ಹಲಸು ದಾಳಿಂಬವು ದ್ರಾಕ್ಷೆ ಕಿತ್ತಳೆ ನೆಲ್ಲಿ
ಎಳೆ ಬಳ್ಳಿಯು ಕಂಚು ನಿಂಬೆ
ಓಲವ ಅಂಬರಕೆ ಅಡಕೆಯ ಮರಗಳು
ಕಲುವಾಳೊಂಗ ಸುಗಂಧಾ   ೭೪

ನಂದಿ ವರ್ತಾ ಹೊನ್ನೆ ಕಂದಾವರೆ
ಬಂದುಗೆ ಬಕುಳ ಜಾಜಿಗಳೂ
ಚಂದ್ರಧರನ ಶ್ರೀಚರಣಕೆ ಪರಿಮಳ
ಒಂದಾಗಿ ಬಂದೆರಗಿದವೂ     ೭೫

ಹರಿಹರ ಮೆಲ್ಲನೆ ದೇಶದ ನೋಡುತ
ತಿರುಕರಾಗಿ ಓರುಗಲ್ಲಾ
ಭವದಿಂದಲು ಕೆರೆಗೆ ಬಂದ ನಂದಿ
ಬರೆಯಿತು ಪದ ಯೆಪ್ಪತ್ತಾರು         ೭೬

ಅಂತು ಸಂಧಿ ೫ಕ್ಕಂ ಪದ ೨೫೨ಕ್ಕಂ
ಮಂಗಳ ಮಹಾಶ್ರೀಶ್ರೀಶ್ರೀ