ಸಂಧಿ-೭

x x x ಕೇಳುತ ವೋರಗಲ್ಲಿನ ಕಾವಲ
ಪುರಹರ ಮುಂದಕೆ ನಡೆದಾ
ಬರುತಲು ಶೂಲದ ಮೇಲಣ ಹೆಣಗಳು
ಇರುತಿರೆ ಹರ ಕಂಡು ನಿಂದಾ ೧

ಹೇಳು ಹರಿಯೇ ಇವರೇನು ಮಾಡಿದರಯ್ಯಾ
ಹಾಳಾಯಿತು ಸಂಸಾರಾ
ಕಾಳು ಮೂಳರು ಕದ್ದು ಪಟ್ಟಣದೊಳಗೆಲ್ಲ
ಹೂಳಿಸಿಕೊಂಡರು ತಲೆಯಾ ೨

ಹುಲ್ಲಸರಲಿಗಟ್ಟಿ ಹೊಲೆಯರು ಎಳತಂದು
ಇಲ್ಲಿ ಬಿಸಾಡಿದರು ಹರನೆ
ಇಲ್ಲಿ ಮಾಡಿದ ಅಪರಾಧಗಳೇನೆಂದು
ಅಲ್ಲಿ ಕೇಳುತಲಿದ್ದ ಹರಿಯಾ          ೩

ಪರವಧು ಸಂಗವ ಬಯಸಿ ಹೋಗಿ ಹರ
ದೊರಕಿಸಿಕೊಂಡ ಸ್ಥಿತಿಯಾ
ನರಕದಕೊಂಡ ಧರರೆಕ್ಕಿ ಯಮ ಕೊಲೆ
ಪುರಹರ ಸ್ವರ್ಗಗಳಿಲ್ಲಾ     ೪

ಕದ್ದು ಕನ್ನದ ಬಾಯ ರೊದ್ದಿ ಸತ್ತವರಿಗೆ
ಸಿದ್ಧಾಂತವು ನರಕಗಳೂ
ಹೊದ್ದಿಸಬಹುದುಂಟುಗಳಲಿಗಿ ಪಾಪ
ನಿರ್ಧಾರ ಸ್ವರ್ಗತ್ವವಿಲ್ಲಾ  ೫

ಕನ್ನಗಳವು ಖರೆ ಪಾಪವೆಂದೆ ಹರಿ
ಇನ್ನೊಲ್ಲೆ ನಾನೀ ಕಳವಾ
ಇನ್ನುಳ್ಳ ಪಾಪವು ನಿಮ್ಮ ನಿರೂಪಗ
ಳೆನ್ನೇತಕೆ ಹರ ಹುಸಿವೇ      ೬

ನ್ಯಾಯವ ಸಭೆಯೊಳು ತಪ್ಪಿಸಿದ ನುಡಿದವ
ಗೇನು ವಿಧಿಯು ಹೇಳು ಹರಿಯೇ
ಜಿಯಾ ಚಿತ್ರೈಸಯ್ಯಾ ನೀವೆನ್ನರಿಯರೆ
ಶ್ವಾನನಾಗಿಯೆ ಜನಿಸುವನೂ            ೭

ಖುಲ್ಲತನದಿ ಕುಂಟ ಸಾಕ್ಷಿಗಳಾಗಿಯೆ
ಬಲ್ಲೆನೆಂಬವಗೇನು ಹರಿಯೇ
ಹಲ್ಲ ಕಳದು ಯಮದೂತರು ಹುಳುಗೊಂಡ
ದಲ್ಲಿ ನಾಲಿಗೆಯನೇ ಕೊಯಿದೂ       ೮

ಸವೂರುಗಲ್ಲ ಹೊರ ಕೋಟೆಯ ಸಾರಿಯೆ
ವೂರಣ ಶೂಲದ ಹೆಣವಾ
ಮಾರಹರನು ಕಂಡು ಕೇಳಿದ ಹರಿಯನು
ವೀರರಿವರು ಆರು ಹೇಳೂ   ೯

ಪಟ್ಟಣದೊಳು ಕದ್ದು ಸಿಕ್ಕಿದ ಕಳ್ಳರ
ಕುಟ್ಟಿ ನೆರಿದ ಕಂದ ಹರಿಯಾ
ಕೆಟ್ಟೆವು ಹರಿಯೆ ಬೆಟ್ಟಿತು ಕನ್ನಗಳವಿನ
ಬಟ್ಟೆ ಬೇಡಂದನು ಹರನೂ ೧೦

ನಿಗಮಾಗಮಗಳು ನಿಲುಕಿಯೆ ಕಾಣವು
ಅಘಹರ ನಿಮ್ಮ ಪಾಠವನೂ
ಜಗದ ಜೀವರು ನಿಮ್ಮನು ಮುಟ್ಟಿ ಬಲ್ಲರೆ
ನಿಗಮಗೋಚರ ಹರ ನೀನು ೧೧

ಎತ್ತ ಕದ್ದವರನು ಎಳೆಹೂಟಿಗಟ್ಟಿಯೆ
ತೊತ್ತ ಕದ್ದವರ ಕೈಕಾಲಾ
ಕತ್ತರಿಸುತಲಿರೆ ಕಾಣುತ ಹರನಲ್ಲಿ
ಮತ್ತಾಗ ಬೆದರುತ ನಿಂತಾ   ೧೨

ಹಿರಿದು ಹೊಲ್ಲಹವಿ ಕಳವೆಂಬುದು ಹರಿ
ತಿರುಗಿ ಹಿಂದೆಕೆ ಸಾಕಿನ್ನೂ
ಹರ ಕೇಳು ತಿರುಗಲು ಕೊರತೆಯು ಬಪ್ಪುದು
ಖರೆ ಬೇಗ ನಡೆಯೆಂದು ಹರಿಯೂ     ೧೩

ಗಂಟುಗಳ್ಳರ ತಂದು ಗುಂಟವಪೆಟ್ಟಲು
ಗಂಟಲು ಗಾಣೆ x x x x ಲೂ
ಕಂಟಕ ತಪ್ಪದು ಕಾಲು ನಡುಗುತಿವೆ
ಬಂಟ ಬೇಡ ಹರಿ ತಿರುಗೂ   ೧೪

ಎಡಗೈಯ್ಯ ಕಟ್ಟಿ ಹೊಡೆದರೆ ತಲೆಗಳ
ಬುಡ ಬುಡನುರುಳುತ ಮುಂಡಾ
ಮೃಡನು ಕಂಡು ಭಯಗೊಂಡಂತೆ ನಿಲ್ಲಲು
ಕಡೆಗಣ್ಣಿಲಿ ಕಂಡ ಹರಿಯಾ  ೧೫

ಆಡಲಮ್ಮೆನು ಹರ ಹೇಡಿಗೊಳಿನ ಹೇಡ
ನೋಡಲಂ ಮೂವರುಂಟೆ ನಿಮ್ಮಾ
ನಾಡಾಡಿಗಳಂತೆ ನರನು ನೀನಲ್ಲಯಯ್ಯಾ
ಬೇಡಿಕೊಂಬೆನು ನಡೆ ಹರನೇ            ೧೬

ತುಂಡು ತುಂಡು ದಂಡುರುಳಿದ ಮುಂಡವು
ತಂಡ ತಂಡದ ಕೊರೆ ಮೂಗೂ
ಮುಂಡೆಯ ಮಗನಿವ ದಿಂಡೆಯ ನೆಲೆಹರಿ
ಕಂಡೆಯ ಕಳ್ಳರ ವಿಧಿಯಾ    ೧೭

ದುರಿತಾರಣ್ಯ ಕುಠಾರನೆ ಕೇಳಯ್ಯ
ದುರಿತವೆಂಬುದು ನಿಮಗುಂಟೇ
ನೆರದದುಲಿತ ನಿಮ್ಮ ನೆನದರೆ ಪರಿಹಾರ
ನಿರವಯ ನಡೆಯೆಂದು ಹರಿಯಾ       ೧೮

ಸುಳಿದಾಗ ಸುಲಿದರದಳದುಳ ಹೊಕ್ಕರ
ಕಳವು ಹಾದರದಿ ಸಿಕ್ಕಿದರಾ
ಬೆಳೆದ ಕೈಯ್ಯ ಕಿತ್ತದಳಾರು ಮುಂತಾಗಿ
ಎಳೆದು ಬಿದ್ದರೆ ಹರ ಕಂಡಾ ೧೯

ಮುನ್ನ ಕದ್ದರ ವಿಧಿ ಚೆನ್ನಾಗಿ ಹರಿನೋಡು
ಇನ್ನೊಲ್ಲೆ ನಾನೀ ಕಳವಾ
ಅನ್ಯಾಯ ನಮ್ಮದು ಗೆಲವಾದರೆನಿತಿಲ್ಲ
ನಿನ್ನಾಣೆ ಹಿಂದಕೆ ತಿರುಗೂ   ೨೦

ಆಡಿದ ಮಾತಿಗೆ ಮಾಡಿದೆ ಹರ ನೀನು
ಖೋಡಿ ಕೈಲಾಸದೊಳ್ಳಾತೂ
ಹೇಡಿ ಮಾತಾಡಿ ಬೆದರಿಸಿದಾಗಲಿ
ನೋಡಿ ನಗುವ ನಾರಾದನೂ            ೨೧

ನರಲೋಕಕ ಬಂದು ಕಳಲೊಲ್ಲದೆ ಹೋಗೆ
ಸುರರೆಲ್ಲರು ನಗುವರು ನಮ್ಮಾ
ಹರ ನೀನು ಬೆದರದೆ ಮುಂದಕೆ ಸುಮ್ಮನೆ
ಖರ ಬೇಗ ನಡೆಯೆಂದು ಹರಿಯೂ     ೨೨

ಅರಿದು ಬಂದು ನಿಮ್ಮ ಅರಸಿನ ಬಂಟರು
ಮರೆಯಲಿ ಹಿಡಿದು ಕೊಂಡಾಗ
ತರಿದು ತುಂಡನೆ ಮಾಡಿ ಆನೆ ಕುದುರೆಯನು
ಬರಿ ಕೈವೆನೆಂದನು ಹರಿಯೂ            ೨೩

ಅಘಹರ ನೀನಿನ್ನು ಬೇಗದಿ ನಡೆಯಯ್ಯ
ಹೋಗಬೇಕು ಪಟ್ಟಣದೊಳಗಾ
ಹಗಲಿನೊತ್ತು ಹೋಗುತ ಕಂಡರು
ನೆಗಳು ಮೊಸಳೆ ಕೂರ್ಮಗಳೂ           ೨೪

ಎಮ್ಮೆ ಮೊಸಳೆ ಕೋಲು ಮೊಸಳೆ ಹೆಮ್ಮೊಸಳೆಯ
ಬ್ರಹ್ಮಾಂಡ ಕಮಠ ಮಂಡೂಕಾ
ತಮ್ಮೊಳು ನೆಗೆದಾಡಿ ಸೊಕ್ಕುತಲಿಹ ಮೀನ
ನೊಮ್ಮೆ ನೋಡುತ ಹರ ನಡದಾ      ೨೫

ಕಾಗೆ ಗೆಂಡು ಗುಚ್ಚು ಹಾವು ಮೀನು ಮರಿಮೀನು
ಸಿಗುಡಿಸಿಲು ಮುಂಗೆಂಡೂ
ಹಾಗೆ ಕೆಂಗೆಡಿಗೆ ದಾಳಿಯ ನಿಡುತಿಪ್ಪ
ಹಾಗಲಿಸದ ಬಲುಮೀನೂ   ೨೬

ಗೊರವಿ ಗುರುಡ ಹೇರಾಳೆಯು ಹೆಂಮೀನು
ಮುರಿಗೊಡ ಮುಳು ನೆತ್ತಿಗಣ್ಣಾ
ಅರಜು ಗಿಱಿಲುಯಿಳಿಯಂಬುದಾವಾಗಿರು
ಹರಿದಾಡುವ ಹಂದಿಮೀನೂ            ೨೭

ತುರುಗಿಮೀನು ಹೆಮ್ಮಾಲುಗೊಗರ ಮೀನು
ನೆರೆದಿರ್ದ ಹದ್ದುಮೀನುಗಳೂ
ಹೊದಳೆಗೊದಳೆ ಬಾಳೆ ಮೀನಿನ ನೆರವಿಯ
ಹರಿಹರ ನೋಡುತ ನಡದಾ ೨೮

ಆನೆ ಮೀನು ಕದಳಿರ ಮೀನುಗಳನು
ತಾನಲ್ಲಿ ಚೇಳಿನ ಮೀನೂ
ಹೀನ ಹೆಸರು ಮೂಕೊರತಿಯ ಮೀನು
ತಾನಲ್ಲಿ ನೋಡುತ ನಡದಾ            ೨೯

ಎಡೆಗಡೆಗಿರುತಿರ್ಪ ಕುದುರೆ ಮೀನುಗಳಿಂದ
ನಡುವೆ ಬಂದರದಾನೆ ಮೀನೂ
ಮೃಡ ಮುರವೈರಿಯು ನೋಡುತ ಮುಂದಕೆ
ಗಡಣದಿಂದಲು ನಡೆತಂದಾ  ೩೦

ಬೆಂಡು ಗುಂಡಿಗೆ ತೆಪ್ಪ ಬೇಟೆಯ ಹರಿಗೋಲು
ತಂಡ ತಂಡದಿ ಮೀನಕೊಲಲೂ
ದಿಂಡೆಯರೆಲ್ಲರು ಗಾಣಗಟ್ಟಿಗೆಯಿಂದ
ಉಂಡೆಯ ಹಾಕಿಯೆಕೊಲಲೂ           ೩೧

ಕುಟಿಲತನದಿ ಮೀನ ಕೊಲುತಿರೆ ಕಾಣುತ
ನಿಟಿಲಾಕ್ಷ ಪಾಪಗಳೆಂದಾ
ಘಟಿಸುವ ಹಗೆ ಪಾಪ ಹರಜಾತಿ ಧರ್ಮವು
ನಟಿಸಿ ಉತ್ತಮ ಮಾಡೆ ಪಾಪಾ         ೩೨

ಹೋಗಬಾರದು ಸುತ್ತ ಬೆತ್ತ ಬಿದಿರು ಮೊಳೆ
ನಾಗಲೋಕದುಧದಗಳೂ
ಬಿಗಿ ಬೆಳದುಯಿಪ್ಪ ಸೀಗೆ ಕೆಂಜಿಗೆ ಮುಳ್ಳು
ಬಾಗಿ ಹೊಂಗಲಯಿಲ್ಲ ಗಜುಗೂ      ೩೩

ಕಬ್ಬಳ್ಳಿ ಸೊಡರಿಯು ಬೊಬ್ಬುಲಿ ಜಾಲಿಯು
ಕೊಬ್ಬಿ ಬೆಳೆದ ಕಿರುಬಿದಿರೂ
ಉರ್ಬ್ಬಿಯೊಳಗೆ ಬಂದ ಅರಿರಾಯರ ಎದೆ
ಗಬ್ಬುಲಿಕ್ಕುವದೆಲೆ ಹರನೇ  ೩೪

ನುಸುಳಿ ಹೋಹರೆಯಿಲ್ಲ ಇರು ಹೇಗೆ ದಾರಿಯು
ಎಸಗಿ ಕೊಂಬವನಾವ ರಾಯಾ
ದೆಸೆಯ ರಾಯರ ಕೈಯ್ಯಕಪ್ಪವ ಕೊಂಬನು
ಶಶಿಧರ ಗಣಪತಿ ರಾಯಾ    ೩೫

ಪಾಟಿಸಿಕೊಂಡ ನೆಂಬರಿಗಿಗಲು
ಕೋಟಿಗಿಂದಲುರಗಳುದ್ದಾ
ಕೋಟಿಲೆಗೊಬ್ಬರು ಅರಿರಾಯರು ಬಂದು
ಗೋಟು ಮೂಲೆಯ ಹೋಗುತಿಹರೂ            ೩೬

ಚಕ್ರವ್ಯೂಹದ ಕೋಟಿಯನೆಂದು ಕೌರವ
ನಿಕ್ಕೆ ಸತ್ತನು ಅಭಿಮನ್ಯುವೂ
ಹೊಕ್ಕೆನೆಂದರೆ ತೆಕ್ಕದು ಹರ ಕೇಳು
ಮಿಕ್ಕಿದವರಿಗಳವಲ್ಲಾ       ೩೭

ಹರಿಯೆ ನಿನ್ನ ಮಾತು ಕೇಳುತಲೆನ್ನಮನ
ಧರೆಗಿಳಿಯಿತು ನಿನ್ನಾಣೆ
ಉರವಣಿಸಿಯೆ ನಾವು ಓರಗಲ್ಲ ಹೊಕ್ಕಾಗ
ಅಭಿಮನ್ಯು ಸತ್ತ ಕಥೆಯಾಯಿತೂ      ೩೮

ಕೊಳು ಹೊಗದಿದು ಕೋಟಿಯು ಬಲ್ಲಿತು
ಸೀಳು ಕಲ್ಲಿಗೆ ಸಂಕೋಲೆಯೂ
ದಾಳಿಯಾಗಿ ಮುತ್ತಿಕೊಂಡೆನೆಂದರೆ
ಏಳು ಸುತ್ತು ಜಲಮಯವೂ ೩೯

ಎತ್ತಿ ಬಂದು ಮುತ್ತಿಕೊಂಬರಾಯರಿಗಿದು
ಮತ್ತೆ ಯತಿಪುರದ ಕೋಟಿ
ಹತ್ತಿರ ಹೋಗಿ ನೋಡಲು ಹಸದಳ
ಚಿತ್ತೈಸೆಂದನು ಹರಿಯೂ    ೪೦

ಬಂದು ನಿಂದನು ಹರ ಬಾಗಿಲುವಾಡದ
ಚಂದವ ನೋಡೆಂದು ಹರಿಯೂ
ಸಂಧಿಸಿ ನುಸುಳುವ ಚೋರ ಕಂಡಿಗಳನು
ಅಂದವ ಮತ್ತೆ ತೋರುತಲೂ           ೪೧

ಕುಸುರಿಗೆಲಸ ಪಚ್ಚೆಯಿಂಗಲಿಕದಿಂದ
ಲೇಸವ ಜಗುಲಿ ಚುಂಚುಲೊವೆ
ಹೊಸ ಹೊನ್ನ ಕೆಲಸದ ಕೋಟಿಯ ತೆನೆಗಳ
ಶಶಿಧರ ನೋಡುತ ನಡೆದಾ  ೪೨

ಇಂದ್ರ ನಿಲುವು ಚಂದ್ರಕಾಂತದ ಶೃಂಗಾರ
ಸಂಧಿಸಿ ಕೆತ್ತಿಸಿದಂತೆ
ಚಂದವಾಗಿ ಹೊನ್ನ ಕನ್ನಡಿಗಳು ಕಟ್ಟಿ
ನಿಂದ ಸತ್ತಿಯ ಸಾಲಗಳೂ   ೪೩

ಮುಂದೋಡಿ ಮರೆದಿಪ್ಪನು ಕಣ ಕೊತ್ತಳ
ಕೊಂಡೊಂದು ಅಟ್ಟಣಿ ನಿಲಿಸಿ
ಬಂದು ಕಾದುವರನುಯಿಡುವ ಡೆಂಕಣಿಗಳು
ನಿಂದಿರ್ದ ಮರುಳು ಕೈಗಳೂ ೪೪

ಹರ ನಿನ್ನ ದ್ವಾರಾವತಿ ಪುರಕಿಂತಲು
ಹಿರಿದು ಶೃಂಗಾರ ಓರುಲ್ಲೂ
ಧರಣಿಜೆಯನುವೊಯಿದ ರಾವಣ ತಾನಿರ್ದ
ಸಿರುತಯ ಲಂಕೆಗೆ ಸರಿಮಿಗಿಲೂ         ೪೫

ಅರಿ ನೃಪಾಂಕುಶವೆಂಬ ಭೈರವ ಡೆಂಕಣಿ
ಉರುಳುವ ಮಿಡಿವ ಚಿಮ್ಮೂಗನೂ
ಕರಿಘಟೆ ಸಂಹಾರ ರಾಯ ಡೆಂಕಣಿಗಳ
ಪುರಹರ ನೋಡುತ ನಡದಾ ೪೬

ತಿರುಹಿಯಿಟ್ಟರೆ ಅರೆಗಾವುದ ಹೋಗುವ
ಭರವಸೆ ಸೂಸು ಡೆಂಕಣಿಯೂ
ಥರದ ಕೊಪ್ಪರಿಗೆಯ ಕಾದೆಣ್ಣಿಗಳನು
ಭರದ ಸವಜಿಗೊಳಪೆ          ೪೭

ಅಂಬಲಿ ಮಳಲನು ಕಾಸಿಯೆ ಚೆಲ್ಲುವ
ಡಿಂಬಿನ ಕಬ್ಬಿಣ ಹುಟ್ಟೂ
ಕೊಂಬರೆಯಸದಳ ದುಂಮಡೆಯ ಸಲುಯೆ
ನೆಂಬನು ದುರ್ಗ ಸಂಭ್ರಮವಾ           ೪೮

ಒಳ ಕಡೆಯಿಂದಿಟ್ಟು ಯಲೆಯ ನೇಣು
ಅಳವಡಿಸಿದ ಬರ ಸಿಡಿಲೂ
ಕೊಳಬಾರದ ದುರ್ಗವರಿರಾಯರಿಗೆಂದು
ಹೊಗಳುತ ನಡಿದನು ಹರನೂ          ೪೯

ಕವಣೆಯ ಕಲ್ಲಿನ ಬೆಟ್ಟದ ರಾಶಿಯು
ಹವಣಿಲ್ಲ ಬೇನೆಯದಸಿಯೂ
ಸವಡಿಸಿ ಕಟ್ಟಿದ ಬಂಡಿಯ ಹಾರಿಯೂ
ಶಿವನೆ ಚಿತ್ತೈಸೆಂದು ಹರಿಯೂ          ೫೦

ಸುತ್ತಲು ಕಟ್ಟಿರ್ದ ಜವುಗಿನ ಒಳಗೆಲ್ಲ
ಬೆಟ್ಟರ್ದದಸಿಗಳ ಮಾಯವೂ
ಮುತ್ತಿನಡದು ಕುದುರೆ ಮೆಟ್ಟಲುಬಾರದು
ಕರ್ತ ನೀನೋಡೆಂದ ಹರಿಯೂ          ೫೧

ಹರನೆ ಚಿತ್ತೈಸಯ್ಯ ದುರ್ಗದ ಸಿರಿಯನು
ಧರೆಗೆ ಬಲ್ಲಿದ ಗಂಪತಿಯಾ
ಸರಳು ಬೊಳೆಯು ಮಿಂಟೆ ಮುಮೊನೆ ಕವಲಂಬು
ಸಬಳ ವಿಟ್ಟಯ ಬಣವೆಗಳೂ           ೫೨

ಪಟ್ಟಿಯ ಕೋಟಿ ಕಠಾರಿ ಕಬ್ಬಿಣಗೋಲು
ಬೆಟ್ಟವೊಟ್ಟಿರ್ದ ಬಲ್ಲೆಹವೂ
ಕಟ್ಟಿರ್ದ ಖೆಡೆಯ ಸಿಂಗಾಡಿ ಮರವಿಲ್ಲು
ಪಟ್ಟಣ ದುರ್ಗ ಸಂವರಣೆ   ೫೩

ಹರನೆ ಚಿತ್ತೈಸಯ್ಯ ಓರುಗಲ್ಲಲ್ಲಿದು
ಹಿರಣ್ಯಕ ಗೊಮಂತ ದುರ್ಗಾ
ಉರುಹಿದೆ ನೀನಂದು ತ್ರಿಪುರದ ಕೋಟಿಗೆ
ಸರಿಮಿಗಿಲೆಂದನು ಹರಿಯೂ ೫೪

ಜರೆಯ ಮಗನು ಜರಾಸಂಧ ತಾನಿರ್ದ
ಚೌರಾಸಿರಿಗೆ ಮಿಗಿಲೂ
ನರರ ಪಟ್ಟಣವಲ್ಲ ಯೆಮನಾಗೈಗಳೆಂದು
ಪುರಹರ ನೋಡುತ ನಡದಾ ೫೫

ಬೇಗ ಬಂದನು ಹರ ಬಾಗಿಲು ವಾಡಕೆ
ಆಗಲು ನಿಂದು ನೋಡುತಲೂ
ತೂಗಿದ ಮಕುಟವ ಸಂಭ್ರಮಗಾಣುತ
ಆಗ ಹರಿಗೆ ತೋರಿಸಿದಾ      ೫೬

ಖಿನ್ನಸಬಾರದು ಕದಗಳ ಕೆಲಸವು
ಬಿನ್ನಾಣಿ ಕೊಡಿದನಂದೂ
ಚಿನ್ನದ ಗುಬ್ಬಿಯ ಪದುಮದ ತಗಡಿನ
ಉನ್ನತ ಸಂಭ್ರಮ ಹರಿಯೇ ೫೭

ಅರಿರಾಯರಿಗೆಲ್ಲ ಯೀ ದುರ್ಗಾ ಅಳವಲ್ಲ
ಹಿರಿದು ಸಂಪತ್ತುಗಳೆನುತಾ
ಹರನೂ ಕೊಂಡಾಡುತ ಓರಗಲ್ಲನೆ ಹೊಕ್ಕ
ಪದ ಅಯಿವತ್ತೆಂಟಕೆ ಸಂಧಿ  ೫೮

ಅಂತು ಸಂಧಿ ೭ಕ್ಕಂ ಪದ ೪೦೬ಕ್ಕಂ
ಮಂಗಳ ಮಹಾಶ್ರೀ ಶ್ರೀ ಶ್ರೀ