ಸಂಧಿ೧೦

ಕೇಳಿರೈಶರಣರುಮುಂದಣಸಂಧಿಯ
ಹೇಳುವೆಹರಕರುಣದಲಿ
ಬಾಳಾಕ್ಷಕನ್ನವನಿಕ್ಕಲುಕುಳಿತು
ಕೇಳಿದೆಕೊಟನಯೆಡನಾ    

ಬಲದಲುಉಳಿದವುಹಾಲಕ್ಕಿಗಳಾಗ
ನೆಲೆಗೊಂಡುಬಾಯಿಗೂಡಿದವೂ
ಚಲುವಶಕುನವೆಂದುಹರನುರಿಗ್ಗಣ್ಣವನೆತ್ತಿ
ನಲಿದುಸಂತೋಷದಿಹರಿಯೂ     

ಏಳುಹರನೇಬೆಳಗಾಯಿತುಬೇಗದಿ
ಬೀಳುತಲಿದೆಇಬ್ಬನಿಯೂ
ಕೊಳೆಸೊಕ್ಕುತಿಳಿದೆಚ್ಚತ್ತರಾದಡೆ
ಕೇಳಯ್ಯಕಳವಿಲ್ಲನಮಗೇ         

ಕನ್ನವನಿಕ್ಕಲುಕುಳಿತುಹರಬೇಗ
ಚೆನ್ನಾಗಿಮರಹಿನೊಳಗೆ
ಪನ್ನಂಗಧರಹರಚಿತ್ತೈಸೆನುತಲು
ಕನ್ನಗತ್ತಿಯನಿತ್ತಹರಿಯೂ೪

ಅರ್ಚಿಸಿಬಳಹದಿಮೂರೇಣುನೋಡೆಯ
ಅಚಾಗಿಚೌಧಾರೆಗಳಾ
ಉತ್ಸಾಹದಿಂದಲುಮತಿವರ್ಗ್ಗವಹಾಸಿ
ವೊಚ್ಚತವಾನೆಂದಹರಿಯೂ        

ಅಲ್ಲಿಯೆಇಳುಹಿದಕನ್ನಗತ್ತಿಯಹರ
ಮೆಲ್ಲನೆಮಂತ್ರವಜಪಿಸಿ
ಅಲ್ಲಿಸಾಧ್ಯವಾಗೆನೆಗೆಂದೆನುತಲು
ಅಲ್ಲಿಅರ್ಚಿಸಿದಪುಷ್ಪದಲಿ         

ತೆಗೆದುಕೊಂಡನುಕನ್ನಗತ್ತಿಯಕೆಯ್ಯ
ಅಘಹರಶರಣರನೆನೆದೂ
ಮಗಳೆಬೆನ್ನಲುಹರಿಯನುವಾಗೆನುತಲು
ಜಗದೀಶ್ವರಪೇಳ್ದಾಗ    

ಮೂಡಿದಮಂಡಿಯಡಗಾಲನಿಕ್ಕಿಯೆ
ಗೋಡೆಯಕತ್ತಿಯಸಿಕ್ಕಿಸಿದಾ
ಮಾಡಿದಕದಮುನ್ನಕಲ್ಲಿಗೆಮೂಡಿತು
ನೋಡಿಬಾಗಿತುಮೊನೆಹರಿಯೇ    

ಕಲ್ಲಿನಗೊಡೆಯಮನೆಎಲ್ಲಹರಕೇಳು
ಎಲ್ಲವುಬರಿಯಮಣ್ಣಿಲಸಾ
ಬಲ್ಲಿತಾಗಿಪ್ಪುದುಸುಣ್ಣದಗಾರೆಯು
ನಿಲ್ಲಬೇಡವೊಬೇಗಮಾಡೂ      

ಕನ್ನಗತ್ತಿಯಮೊನೆಗಾಂತಿರ್ದಕಲ್ಲನು
ಚೆನ್ನಾಗಿತೆಗೆದಜಾಣಿನಲಿ
x x x x x x x x x x x x
ಹೂಮಂಚದತೆಲೆದೆಸೆಯೂ         ೧೦

ಹಿಡಿದನುಹರಿಯಲ್ಲಿಉಬ್ಬುಸೀರೆಯಬೇಗ
ಮೃಡಮೌಳಿಗಪ್ಪಡಗಟ್ಟಿ
ಕೂಡೆಬೆಳುವೆಬೂದಿಹೊಲಬುಗಟ್ಟಿಗೆಯನು
ನಿಡಿಸಿಕೊಡನುಹರನೂ     ೧೧

ಟೊಂಕದವಂಕುಡಿಗಳೆನೋಲನೆಕಟ್ಟಿ
ಶಂಕರನನುವಾಗಿನಿಂದಾ
ಶಂಖಿಸದೆಳೆಂದುಬೆಳುವೆಬೂದಿಯ
ಪಂಕಜನಾಭನುಕೊಟ್ಟಾ   ೧೨

ಬರಿತಾಗಿಹಿಡಿಚೆಂಡುಹೊತ್ತಿಯೆಹರ
ಮೆಲ್ಲನೆಹೊಲಬುಗಟ್ಟಿಗೆಯಾ
ಅಲ್ಲಿನಿಡಿಯೆನೀನೆಲ್ಲವನಾರೈ
ಮಲ್ಲಿಕಾರ್ಜುನವೊಳಕಡೆಯಾ       ೧೩

ನೀಲಕಠನೆನೀನುಕಾಲನಿಡಿಯೆಹೋಗು
ಮೇಲೆಯೆಚ್ಚರಲವರೊಳಗೆ
ಕಾಲತೆಗೆಯುವುದುಕನ್ನದಹೊರೆಯಿಕೆ
ಮೇಲಾವಭಯವಿಲ್ಲಹರನೇ       ೧೪

ತಲೆಮುಂತಾಗಿಯೆಒಳಕೆಹೋದರೆ
ಕೊಲುವರುಒಳಗಿಂದಹರನೇ
ನಿಲಲಮ್ಮೆದೆಯೆನಮನಬೆಚ್ಚುತಲದೆ
ತಲೆಯನೆಚ್ಚಲುಬೇಡಯೆನ್ನಾ      ೧೫

ಪೊಡವಿಯೊಳಗೆನಿಮ್ಮನವಮಾನಮಾಳ್ವರು
ಬಡಮನವರುಮಾಡಬೇಡಾ
ಹೊಡೆವರುತಲೆಗಳನೆಂದುಹೇಳಿದೆಹರಿ
ಗೊಡವೆಯನಾನೊಲ್ಲೆಕಳವಾ      ೧೬

ಮನದೊಳುಸಂತೋಷವೆನಗಿಲ್ಲಹರಿಯೆ
ತನುವೆಲ್ಲನಡುಗುತಿದಯ್ಯಾ
ಅನುಮಾನವಿಲ್ಲದೆಒಳಗಾನುಹೋಗುವಡೆ
ಘನವಾಯಿತೆನಗತಿಚಿಂತೆ    ೧೭

ನಿನಗೇಕೆಚಿಂತೆಯುಮನದೊಳುಹರನೆ
ಜನನಮರಣವುಂಟೆನಿಮಗೇ
ತನುವೊಂದುಉಳ್ಳರತಾನದುಸಾಕು
ನಿನಗೆನುತಪ್ಪಹರಿಯೇ     ೧೮

ಹರನುಕನ್ನದಬಾಯಹುಲ್ಲನುಆರಿಸಿ
ಮೂರವುದೆನೆಂದನುಹರಿಯಾ
ನರರತಮಂಧದನಿದ್ದೆಯಗುರುಕೈಯ್ಯ
ಹರನೀನುಹೋಗುಬೇಗಲೆಂದಾ    ೧೯

ಅರಸುಯೆಚ್ಚೆತ್ತರೆಹೊರಗೆನಿರ್ದ್ದೆಂಗನ್ನ
ನಿರಿಸಿನೀನೋಡುವೆಹರಿಯೇ
ಕರೆಕರೆಗಾದಿದೆಹೋಗುವನುನಾನಲ್ಲ
ಹರಿಯದಾಗಿಭಯವೆಂದಹರನೂ   ೨೦

ಹರಿನಿನ್ನಮುಟ್ಟವರಾರಿನರರೊಳು
ಉರುಹಿದೆಕಾಮನನಂದೂ
ಓರೆದೆಕನ್ನವಮಾಡಿಹರನಿನ್ನಮೈಯೊಳು
ನರರೇನಮಾಳ್ವರುನಿಮ್ಮಾ         ೨೧

ಹೋಯಿತು x x x x x x ಶಿರಹರನಿಮ್ಮಿಂದ
ಬೀಯ್ಯದಮಾತುಗಳೇಕೇ
ಮಾಯಾರಿಚಿತ್ತೈಸುಬೇಗಹೋಗುವೆಹೇಳು
ಬಾಯಬನ್ನಣೆಬೇಡಹರನೇ        ೨೨

ಜರೆಯಮಗನುಜರಾಸಂಧನಕೊಂದೆಯ
ಹಿರಣ್ಯಕನುದರವಬಗೆದೆ
ಶರಧಿಯಮಧ್ಯದೊಳಿರ್ದರಾವಣನನು
ಶಿರಹತ್ತಹರಿಯೆಚ್ಚೆನಾನೂ         ೨೩

ನರರುಬಂದುನಿಮ್ಮಹಿಡಿದರಾದರೆ
ಹರಕೇಳುಎನ್ನಸಾಹಸವಾ
ಧರೆಸಹಿತೋರುಗಲ್ಲಕೈಲಾಸಕ್ಕೊಯ್ಯುವೆನು
ಅರಮನೆಮುಂತಾಗಿಇದನಾ         ೨೪

ನೀನೇನುಬಡವನೆಹರಿಯೆನೀಕೇಳಯ್ಯ
ವಾನರಕುಲಕರಸಾದೆ
ತಾನುವಾಹನವಾದಗರುಡನುನಿನಗಂದು
ನೀನಂದುಕೊಂದೆಬಾರಿಯನೂ       ೨೫

ಅಸದಳದವರನುಕುಂಭಕರ್ಣನಕೊಂದೆ
ವಸುಧೆಯೊಳಿದಿರಾರುನಿನಗೇ
ವಶವಲ್ಲದೆವಿಧಿಸಿಕ್ಕಿಸಿತಾದರೆ
ಎಸಗುವರಾರುಭವರವನೂ          ೨೬

ವಿಧಿಯಗೆದ್ದೆನೆಂದು x x x ನರಹಿದೆ
ಮುದದಿದ್ವಾರಕಿಯಕೋಟಿಯನೂ
ವಿಧಿಯವಿಧಾತ್ರಗೆಗೆಲುವರೆಅಳವಲ್ಲ
ವಿಧಿವಶವಾಗದವರಾರೂ  ೨೭

ವಿಧಿಯಿಂದಲುಮತ್ತೆನಮ್ಮಹಸ್ತದಲ್ಲಿದೆ
ಇದೆನೋಡುಬ್ರಹ್ಮಕಪಾಲಾ
ವಿಧಿಯೆಕೊಂದೆನೆಂದುಹೋದರುಳಿಗೊಂಡೆನೀ
ಸದರವಲ್ಲವಿಧಿಹರಿಯೇ೨೮

ಕಡೆಗೆವಿಧಿಯಗೆದ್ದೆನೆಂದುಶೂದ್ರಿಕವೀರ
ಕಡಿದುಕೊಂಡನುತನ್ನಕಾಲಾ
ಒಡನೆಬಂದಿತಾಗಮಾಯಾಕುದುರೆಯು
ಸದರವಲ್ಲವುವಿಧಿಹರಿಯೇ        ೨೯

ಬೆನ್ನಲುಬಂದಿತುಯೆಳಗನಹಚ್ಚೆಯು
ಚೆನ್ನಾಗಿಯೆಶೂದ್ರಿಕನಾ
ಸನ್ನದ್ದವಾಗಿಯೆಯಳಗನತಲೆಯಿರೆ
ನಿನ್ನಾಣೆಹಿಡಿದರುಅವನಾ೩೦

ಸುರರುನಿಶಾಚರಕದನದಿಕಾದಿಸಿ
ಸುರಮನಮೈಯನುಕೆಡಿಸಿ
ವರುಣನಕೈಯ್ಯಲುರಥವನುಹೊಡಿಸಿಯೆ
ಹಿಡಿದುಕಾಡಿತುವಿಧಿಯರಿಯೇ[1]     ೩೧

ಹರನೀನುಹಣೆಯಲಿಬರದಿರ್ದಬರಹವು
ಸ್ಥಿರವಲ್ಲದೆಹುಸಿಯುಂಟೆ
ಎರಡಿಲ್ಲದೆವಿಧಿವಿಧಾತ್ರ x x x ಹೆ
ಹರನೀನುಹೋಗುಅಂಜಬೇಡಾ    ೩೨

ಕೇಳಯ್ಯಹರನೀನುಗಡಿಯಾರಬಡಿಯಿತು
ಏಳಯ್ಯಬೆಳಗಾನಬಂತೂ
ಹೇಳುವೆಹದಿನಾರುಘುಳಿಗೆಗಳಾದವು
ಕೂಳಸೊಕ್ಕುತಿಳಿದಾವೂ   ೩೩

ನಿದ್ರೆಯುತಿಳಿದಾಗಹೋಗಲುಅನುವಲ್ಲ
ನಿದ್ದಿತಪ್ಪದೆಹೋಗುಬೇಗಾ
ನಿರ್ಧಾರಹರಿನೀನನುವಾಗ x ತಲು
ಎದ್ದುನಿಂದನುಹರನಾಗಾ೩೪

ಹರಿಹರಬ್ರಹ್ಮರುಮೊದಲಾಗಿಯೆಲ್ಲರೆ
ಹಿರಿದಾಗಿವಿಧಿಕಾಡಿತೆನುತಾ
ಹರಕನ್ನದೊಳಗನುಹೋಗುವಾಗಣಸಂಧಿ
ಬರೆದನುಪದನಾಲ್ವತ್ತೊಂಬತ್ತೂ   ೩೫

ಅಂತು ಸಂಧಿ ೧೦ಕ್ಕಂ ಪದನು ೬೪೮ಕ್ಕಂ
ಮಂಗಳ ಮಹಾಶ್ರೀಶ್ರೀಶ್ರೀ

 

[1] ಪದ್ಯ ೩೨ ರಿಂದ ೪೫ರವರೆಗಿನ ಗರಿಗಳು ಮುರಿದಿವೆ.