ಸಂಧಿ೧೧

ಈಶನು ಭವನಾಶ ಪುರನಾಶಹರನು ವಿ
ಶೇಷ ಕುಲದ ಭೋಷಣನೂ
ದೇಶದಿ ಗಣಪತಿರಾಯನ ಮನೆಯಲಿ
ಈಶ್ವರ ಹೊಕ್ಕ ಕನ್ನದಲಿ    ೧

ಬಲದ ಕೈಯಲ್ಲಿ ಹೊಲಬುಗಟ್ಟಿಗೆ ಹಿಡಿದನು
ನೆಲತಡಿಲೊಳ ಕಡೆಯಾ
ಉಲುಹುನಾಲೈಸುತ ಕಾಲು ಮುಂತಾಗಿಯೆ ವ
ಹಿಲದಲೊಳಹೊಕ್ಕ ಹರನೂ            ೨

ಬೆಳುವೆ ಬೂದಿಯನೂದಿದ ಹರನಿಂದು
ಲಾಳಲಗೊಳಪೆಯೊಳಿರ್ದಾ
ಹೇಳು ಹರಿಯೆ ನೀನೊಳಯ x x ಯ್ಯ
ಕೇಳಯ್ಯ ಜಲಮಯೊಳನೂ೩

ಅಂಜದಿರೆನುತಲಿ ಹೊಕ್ಕನು ಹರಿ ಬೇಗ
ಮಂಜಲ್ಲ ಮಡುವಲ್ಲೆನುತಾ
ರಂಜಿಸಿ ಬಳಿದಿದೆ ನೆಲಗಟ್ಟು
ಕೆಂಜೆಡೆಯ ಭವ ಚಿತ್ತೈಸೂ  ೪

ಹಾಕಿ ನೋಡು ಮಡಿಲಡೆಕೆಯ ನೀನು
ಬೇಕಾದರೆ ಹುಸಿ ಧಿಟವಾ
ಜೋಕೆಯಿಂದಲು x x ನಡವುತ ಕಂಡನು
ಬೇಕಾದ ಬರದ ಚಿತ್ರಗಳಾ    ೫

ನೋಡಯ್ಯ ಹರನಿಲ್ಲಿ ಗೋಡೆಯ ಮೇಲಿದೆ
ಮೂಡಿದೆ ಚಿತ್ರಪವಾಡಾ
ರೂಢಿಯ ಮೇಲೆ ಪುರಾತರು ಮೆರೆದುದ
ನೋಡೆಂದು ತೋರಿದ ಹರಿಯೂ       ೬

ಬಸವರಾಜನು ನಮ್ಮ ಚೆನ್ನಬಸವಣ್ಣನು
ಹೆಸರೆನಿಸಿದ ಕೇಶಿರಾಜಾ
ಅಸದಳ ಮುಟ್ಟಿಯ ಚೌಡಯ್ಯ ಭೋಗಣ್ಣ
ಶಶಿಧರ ನೋಡು ಚಿತ್ತಾರಾ  ೭

ಆಡಿದ ಮಾತಿಗೆ ಈಶನ ತಂದನೂ
ಕೂಡೆಯು ಪುಲಿಗೇರಿಗಿವನೂ
ರೂಢಿಯೊಳಂದಿತ್ತ ಮತ್ತ ಮೆರೆದ ಪವಾಡವ
ಆದಿಮಯ್ಯನ ಚಿತ್ತಾರಾ      ೮

ಕೊಟ್ಟನು ಕಂಗಳ ನಿಮಗೊಬ್ಬ ಶರಣನು
ಪಟ್ಟೆಯ ಕನ್ನಪ್ಪನೀತಾ
ನಿಷ್ಠೆಯುಳ್ಳ ಶರಣ ದಾನ ದುಗ್ಗಳೆಯರು
ಪುಟ್ಟಿದರಿಲ್ಲಿ ಚಿತ್ತಾರಾ     ೯

ಮುನ್ನಲೆ ನೆರೆ ಭಕ್ತ ಹೆಸರಲು ನೋಡುತ
ಹೊನ್ನಿ ತಂದೆಯು ಮಾರಣ್ಣಾ
ಹನ್ನೆರಡು ಖಂಡಗಕ್ಕಿ ಪಾಯಸವನು ಹರ
ಚೆನ್ನನಲುಂಡ ಚಿತ್ತಾರಾ      ೧೦

ಕೊಡಗೂಸಿನ ಕೈಯ್ಯ ಗಡಿಗೆಯ ಹಾಲನು
ಮೃಡನದಿದಾರೋಗಿಸಿದಾ
ಪಡದ ಮುಗುಳ ಕಂಕಣ್ಣ ಕಾಳಿದಾಸಂಗೆಯು
ಮೃಡವರ ವಿತ್ತ ಚಿತ್ತಾರಾ   ೧೧

ಅಲ್ಲಿ ಹರಳಯ್ಯಗೆ ಮಧುವರಸಯ್ಯನು
ಕಲ್ಯಾಣದೊಳಗಿತ್ತ ಮಗಳಾ
ಮೊಲ್ಲೆಯ ಬೊಮ್ಮಣ್ಣ ಜಗದೇವಗಳು
ಅಲ್ಲಿ ಬಿಜ್ಜಳನ ಕೊಂದ ಚಿತ್ತಾರಾ     ೧೨

ಅಮ್ಮವ್ವೆ ರೆಬ್ಬವ್ವೆ ನಿಂಬೆಯಕ್ಕನು
ಸುಮ್ಮಾನಿಯು ಚೋಳಿಯಕ್ಕ
ನಿರ್ಮಳ ಜ್ಞಾನಿಯೂ ಬೊಮ್ಮಕ್ಕ ರೆಮ್ಮವ್ವೆ
ಸುಮ್ಮಾನಿಯಕ್ಕ ಸತ್ಯಕ್ಕಾ   ೧೩

ಕಟ್ಟಿದ ಕೌಪುವಂ ಬಿಟ್ಟು ನೋರ್ಮುಡಿಯಳು
ದಟ್ಟಡಿಯಿಟ್ಟಾಳಾ ವನಿತೆ
ನೆಟ್ಟನೆ ಮಹಾದೇವಿ ಕದಳಿಯ ಹೊಕ್ಕಾಗ
ಕಟ್ಟಿದಿರಿಲ್ಲಿ ಚಿತ್ತಾರಾ       ೧೪

ಶ್ವಪಚೆಯ್ಯನ ಕೈಯಲುಪದೇಶ ಪಡೆದಾ
ಕಪರ್ದಿ ಮೆಚ್ಚಿದ ಸಾಮವೇದಿ
ಸುವಥವಾಗಿಯೆ ಸೊನ್ನಲಗಿಗೆ ಬಂದಾಗ
ತ್ರಿಪುರಾರಿ ಬರೆದ ಚಿತ್ತಾರಾ  ೧೫

ದಕ್ಷನ ತಲೆಯನು ಹೊಡದು ಹೋಮದಲಿಟ್ಟು
ಹತ್ತಿಸಿದನು ಕುರಿದೆಲೆಯಾ
ಅಕ್ಷಯ ತ್ರಿಪುರವನುರುಪಿದ ಚಿತ್ತಾರಾ
ಪ್ರತ್ಯೆಕ್ಷ ಹರನೇ ನೋಡೆಂದಾ            ೧೬

ವಾರಿಧಿಯನು ಕೊಡನಾಗಿಯು ಮಾಡಿಯೆ
ಮೇರುವ ಕಡಗೋಲ ಮಾಡಿ
ಭೋರೆಂದು ಮಾರವ ನಾಗೇಂದ್ರನ ತೆಗೆ ನೇಣು
ಮಾರಾರಿ ನೋಡು ಚಿತ್ತಾರಾ            ೧೭

ಅಸುರರು ಬಾಲಿಯು ತೆಗದಂದು ಕಡವಲ್ಲಿ
ಲಕ್ಷ್ಮುಮಿ ತಾರೆಯು ಹುಟ್ಟಿದರೂ
ಹಿರಿದುಗ್ರ ಕೋಪದಿ ನಾಗೇಂದ್ರ ವಿಷಲುಗುಳೆ
ಸುರರು ಓಡಿದ ಚಿತ್ತಾರಾ    ೧೮

ಹರನು ದೇವರ್ಕಳನಲ್ಲರ ಕಾಯ್ದನು
ಕೊರಳಲ್ಲಿ ಗರಳವ ಧರಿಸಿ
ಹರನಂಧಕಾಸುರನನು ನಾಟ್ಯವಾಡಿದ
ಹಿರಿದು ಸಂಭ್ರಮ ಚಿತ್ತಾರಾ೧೯

ಗಜಾಸುರನ ಸೀಳಿ ಚರ್ಮವನುಗಿದಲ್ಲಿ
ಭುಜಗ ಭೂಷಣ ಹೊದ್ದ ಪರಿಯಾ
ಅಜಗ ಕಪಾಲವ ಪಿಡಿದಿರ್ದ ಪತಿಯನು
ತ್ರಿಗಜಾಧಿಪತಿ ನೋಡುತಿರ್ದಾ          ೨೦

ಉರಿಯ ಹಸ್ತವನಿತ್ತು ಭಸ್ಮಾಸುರನಿಗೆ
ಹರ ನೀವೋಡಿದ ಠಾವೂ
ಹರಿದಾ ಸಂಭ್ರಮ ಚಿತ್ತಾರವೆಂದನೆ
ಹರನಾಚಿ ತಲೆವಾಗಿದನೂ    ೨೧

ಅಲ್ಲಮನನುಮಿಷ ಅಮಲಿಸಿ ಮಡಿವಾಳ
ಗೊಲ್ಲಾಳ ಸಿಂಧು ಬಲ್ಲಾಳಾ
ಅಲ್ಲಿ ಮಯೂರನು ಮಲುಹಣ ಮಲೆರಾಜ
ಎಲ್ಲರ ಚಿತ್ತಾರಗಳೂ        ೨೨

ಚಿಲ್ಲಾಳ ಚಂಗಳೆ ಚೋಳ ಚೆರಮರಾಯ
ನೀಲಕಂಠನು ಚೀರಿಕೊಂಡಾ
ಸಾಲುವಿಡಿದು ಮುಂದೆ ಎಳೆಯುಂಡ ಚಿತ್ತಾರ
ಶೂಲಿ ಚಿತ್ತೈಸೆಂದ ಹರಿಯೂ           ೨೩

ಅರುವತ್ತ ಮೂರಾಸಂಖ್ಯಾತರ ಚಿತ್ತಾರ
ಹರೆ ನೊಸಲಭವ ಚಿತ್ತೈಸೂ
ಕರಗೊರಳಲಿ ರುಂಡ ಮಾಲೆಯು ಸರ್ಪನು
ಮೆರೆವ ಮಹೇಶ ಚಿತ್ತಾರಾ   ೨೪

ಪಂಚಮುಖಂಗಳು ಪಾವಕ ನೇತ್ರ
ಮಿಂಚುವ ಸುಲಿಪಲ್ಲಿನ ಭಾವಾ
ಕೆಂಜಡೆಯು ಮುಂಚೆರಡು ನಯದಾ
ಪಂಚಮುಖಗೆ ಕೈಯ ಮುಗಿದಾ        ೨೫

ಹರಿಹರ ಬ್ರಹ್ಮರ ನೋಡಯ್ಯ ಹರ ನೀನು
ಹಿರಿದ ಸಂಭ್ರಮವೆನುತಾ
ಸುರಲೋಕವಿದು ಹರ ನರಲೋಕ ತಾನಲ್ಲ
ಖರಲೇಸ ಜಯ ಚಿತ್ತಾರಾ   ೨೬

ಹುಸಿಯಲ್ಲ ಹರಿಯೇ ಇವನೊಬ್ಬರಾಯನು
ವಸುಧೆಗೆ ಸಿರಿವಂತನಹುದು
ಶಶಿಧರ ನೋಡಯ್ಯ ವಿಸುನಿಯ ಹರಿವಾಣ
ಕುಸುರಿಗೆಲಸದಾಡ್ಡಾಣಿಗೆ   ೨೭

ತಟ್ಟೆಯು ಬಟ್ಟಲು ಕುಡಿನೀರ ಗಿಂಡಿಯು
ಬಟ್ಟೆಯು ಮಡವಟ್ಟಲುದಕಾ
ಕಟ್ಟಳೆಯಿಲ್ಲದೆ ಹರಳಿಕ್ಕಿ ಮಿಸುನಿಯ
ಒಟ್ಟಿರ್ದ ಉಪಕರಣಗಳೂ  ೨೮

ಅಲ್ಲಿ ಕಂಚಿನ ಮುಟ್ಟ ನೋಡುತ ಕಂಡನು
ಝಲ್ಲಿ ಸೀರೆಯ ಪೆಟ್ಟಿಗೆಗಳಾ
ಬಲ್ಲಿಹ ಬೀಗವ ಮುರಿದು ಮುಚ್ಚಳವನು
ಮೆಲ್ಲನೆ ಕೆಳಗೆ ಹಾಕಿದನೂ  ೨೯

ನೋಡುತ ತೆಗೆದನು ಪಳಿ ಪಟ್ಟಾವಳಿಯ
ಕೋಡೆ ಸುವರ್ಣಾವಳಿಯಾ
ಜೋಡಿಸಿ ತೆಗೆದವ ಹರನು ನಿಡುತಲಿರೆ
ನಿಡಿಸಿಕೊಳ್ಳುತಿರ್ದ ಹರಿಯೂ           ೩೦

ಪಚ್ಚೆಗುಜ್ಜಾವಳಿ ಅಚ್ಚೆಳೆಗಾವಿಯು
ಅಚ್ಚು ಮೆಚ್ಚಿನ ಕಂದರ್ಪಾ
ನಿಚ್ಚಳ ವ್ರಕ್ಷಾವಳಿಯ ಸೀರೆಗಳನು
ಮೆಚ್ಚುತ ಹರ ನಿಡುತಿರ್ದಾ೩೧

ರತಿಕಾಂತದ ಸೀರೆ ನೇತ್ರಾವಳಿಯ ಸೀರೆ
ಅತಿ ಹೊಸ ಕುಮುದಾವಳಿಯೂ
ಲತೆವಳಿ ಶಂಭಾವಳಿಯ ಸೀರೆಗಳನು
ಅತಿವೇಗ ನೀಡಿದ ಹರನೂ   ೩೨

ನಂದಿ ನಾಗರಬಿಂಬ ಸೂರಿಯ ಬಂಧವು
ಚಂದ ಚಂದದ ನಾಗಬಂಧಾ
ಕಂದರ್ಪ ಬೆರಗದಾಳನ್ನ ಸೀರೆಯ
ತಂದು ನಿಡುತಲಿರ್ದ ಹರನೂ            ೩೩

ಸುತ್ತಾವಳಿಯ ಸೀರೆ ಕಸ್ತೂರಿ ಕಾಮನು
ಕಥಾ ಮಲ್ಲಿಯ ನಾನಾ ಬಂಧಾ
ಚಿತ್ರಾವಳಿ ಮಗಾವಳಿ ಸೀರೆಯ
ಮತ್ತವನಿರಿಸಿದ ಹರನೂ     ೩೪

ಹರಿಣ ಬಂಧದ ನಿರಿಮೆರೆವನ್ನ ಸೀರೆಯ
ಉರುಘ ಪಣಿಯು ಆನೆ ಮೊರ್ಗ್ಗಾ
ಸುರವರರಂಗ ತುರಂಗದ ಸೀರೆಯ
ಪುರಹರ ನಿಡುತಲಿರ್ದಾ       ೩೫

ಅರಗು ಪೊಥೆಯ ಸೆರಗು ಮೆರೆವನ್ನ ಸೀರೆಯ
ನರಿಗೆ ವಿಳಾಸ ಸರ್ವಾಂಗಾ
ಕೈರವ ಬಂಧದ ಬಿರಿದು ಬಿರಣಿಗನ
ಹರ ನಿಡುತ್ತಿದ್ದ ಸೀರೆಗಳಾ  ೩೬

ಸೆರಗಿನ ಸೀರೆಯು ಪುಷ್ಪದ ಬಂದವು
ಮೆರೆವಗೆರಡಿ ಮುಸುವಾಳಾ
ಸೂರೆ ತಾರನ ಸೀರೆ ಸವಡಿಯ ಸೀರೆಯ
ತೂರಿ ನೀಡಿದ ಮುರಹರನೂ            ೩೭

ಕುಂಭದೋರಿಯ ಸೀರೆ ರಾಯಶೇಖರ ಸೀರೆ
ಬಿಂಬಚಂದ್ರಗರ್ಭ ಸುಖಿಯೂ
ಕುಂಬಳವಾಡ ಉಭಯದ ಸರಡುವನು
ಶಂಭು ನೀಡಿದನಾಗ ಹರಿಗೆ   ೩೮

ಕುಂಬಳ ಗಂಟಿಕೆ ವೈರಿಗರಂಟನು
ಹೊಂಬಾಳೆ ವರ್ಣ ಶ್ರೀರಾಮಾ
ತುಂಬಿದ ಪೆಟ್ಟಿಗೆ ರಾಯಶೇಖರ ಸೀರೆ
ಸಂಭ್ರಮಿಸುತ ಹರನಿಡೆ       ೩೯

ದುಗುಣಬಣ್ಣದ ಸೀರೆ ಅಸಗಬಣ್ಣದ ಸೀರೆ
ಮುಗಿಲ ತೆರೆಯ ಚೊಕ್ಕದಂಡಾ
ಜಗದೊಬ್ಬ ಗಂಡನು ಕರ್ಪೂರ ತಿಲಕಿಯ
ತೆಗೆದು ನೀಡಿದನಾಗ ಹರನೂ            ೪೦

ಮೇಘ ಕುಂಕುಮ ರೇಖೆ ಯೆಕ್ಕೆಹೂವಿನ ಸೀರೆ
ಶ್ರೀಗೌರಿ ಪೂಜಾ ಬಂಧಾ
ಬೇಗ ನೀಡಿದ ಗುಜರಾತಿ ಮಂಚಿಟಿಕೆಯ
ನಾಗಭೂಷಣ ಹರಿಗಾಗಾ    ೪೧

ಭುಜಬಲ ಭೀಮನ ಚದುರಂಗ ಕೇಸರಿ
ಗಜ ಭೀಮ ಕಾರ್ಜುಳ ರೇಖೆ
ನಿಜದ ನಾರಾವಳಿರಾಯ ಕೋಲಾಹಲ
ತ್ರಿಜಗದಿಪತಿ ನಿಡುತಿರ್ದಾ    ೪೨

ಕಾಡಿಗೆ ನೀರನ್ನು ಸಾವಂತ ಬೀದಿಯು
ರೂಢಿಸಿದಾ ರವಿರಾಯಾ
ನೀಡಿದ ಗಡಿವಾಚಿಯ ಮಂಜಿಡಿಯ
ನೋಡುತ ಕೊಟ್ಟ ಹಚ್ಚಡವಾ         ೪೩

ಪಡಿವಾಳ ಸವಡಿಯು ಚೌಕುಳಿ ಸೀರೆಯು
ಅಡಕೆ ವಣ್ಣಿಗೆ ಕಾಣಿ ಮೆರೆವಾ
ಕಡಿತಾಪ ಮೃಗನಾಳ ಖಗಸಾರ ಸಿದ್ದಿಯ
ಬಡಿನೆರಡುವ ಬಂದಿವಾಳಾ  ೪೪

ರಾವುತ ರಾಯೆನು ರತ್ನ ಪಲ್ಲಕ್ಕಿಯು
ಆ ಹೊತ್ತು ಮೆರೆವ ಹೊಮ್ಮಂಚಿ
ತೀವಿದ ಪೆಟ್ಟಿಗೆ ಗೌರಿಗೆಣಿಯ ಸೀರೆ
ದೇವರು ನೀಡಿದ ಹರಿಗೇ     ೪೫

ಉದಯರಾಗದ ಸೀರೆ ಸುಳಿದು ಮೆರೆವ ಸೀರೆ
ಪದಮದ ಪೂಜಾಬಂಧಾ
ಮದಗಜ ಗಿಣಿರಾಮ ನೈದಿಲ ಹೂವನು
ಮದನಾರಿ ನೀಡಿದ ಹರಿಗೆ    ೪೬

ಮಲೆಯ ದೇಶದ ಸೀರೆ ಜನನ ಮೋಹನ ಸೀರೆ
ಚಲುವಿನ ಸಂಧ್ಯಾರಾಗಾ
ಒಲವ ಫಣಿಯು ಪಂಚನಾಡಿಯ ಸರಡುವ
ಸುಲಿಪಲ್ಲು ನೆರಗು ಸೀರೆಗಳಾ          ೪೭

ಪಲ್ಲಕ್ಕಿಗಿರನು ಕಂಚಿಯಗಡನು
ಬಲ್ಲಿಯ ಕೋಪಣದ ಬಣ್ಣಾ
ವಲ್ಲಭೆಯರ ಕೂಡೆ ಮೆರೆವ ಸೀರೆಗಳನು
ಮಲ್ಲಿಕಾರ್ಜುನ ನೀಡುತ್ತಿರ್ದಾ         ೪೮

ಕಂಡರ್ಥಿಕಾರನು ಸಂಧ್ಯಾರಾಗವು
ದಿಂಡೆ ಗೆಜ್ಜೆ ಪಲ್ಲಕ್ಕಿ
ತಂಡದ ತಳಿಗಾವಿ ತುರಂಗದ ಸೀರೆಯ
ರುಂಡಾಭರಣ ನಿಡುತಿರ್ದಾ  ೪೯

ಸೋಮ ಸೂರಿಯ ಪದ್ಮಹಸ್ತದ ಸೀರೆಯು
ಕಾಮನುರಗ ರವಿರಾಯಾ
ಅಮರಾವತಿಯ ಪೆಂಡೆರಗಿನ ಮೊಂಬಳ್ಳಿ
ಕುಮಂದ ಬಂಧದ ಸೀರೆಗಳಾ            ೫೦

ನಿಚ್ಚಳ ಬಿಳಿದನು ಸ್ಪಟಿಕ ಮುಂದಿಯು
ಅಚ್ಚ ಬಿಳಿದು ಚೋಳು ನಾಡಾ
ಮುಚ್ಚರಿಸುವ ಬಿಳಿದಾಳಂಚ ಪುರದಲಿ
ಉತ್ಸಾಹದಿಂದ ನೀಡಿದನೂ೫೧

ಮದನರೇಖೆಯ ಮಿಳಿಯಾರ ಗಂಟಿಕೆಯನು
ಕದಂಬ ಕಸ್ತೂರಿ ಮಾಂದಳಿರಾ
ಕದನ ಕೋಳಾಹಳ ಗಂಟಿಕ್ಕಿ ಸೀರೆಯ
ಮದನಾರಿ ನೀಡಿದ ಹರಿಗೇ   ೫೨

ಚಂದ್ರಿಕೆ ಉಜ್ಜೆಯಿನಿ ಬಣ್ಣವು ಚದುರಿನ
ಚಂದನ ಸೋಮಶೇಖರನೂ
ತುಂಬಿದ ಪೆಟ್ಟಿಗೆ ಕಾಂತಾತಿಯ ಕೋಪ
ಶಂಭು ನೀಡಿದ ಹರಿಗಾಗಾ   ೫೩

ಪಟ್ಟಾವಳಿಯನು ದೇವಗಿರಿಯ ಸೀರೆ
ಕಟ್ಟಿರ್ದ ಹಚ್ಚಡಗಳನೂ
ಪೆಟ್ಟಿಗೆಯೊಳಗಿರ್ದ ಮದವಿ ಹಚ್ಚಡಗಳಾ
ಕೊಟ್ಟನು ತೆಗೆದಾಗ ಹರಿಗೆ  ೫೪

ಕಂಡು ನೀಡಿದ ಹರ ಝೆಗೆಯನು
ಕೊಂಡು ಹೋಗುವ ಪರಿಯೆನುತಾ
ತುಂಡು ಮಾಡಿಯೆ ಬೀಗವನು ಮುರಿದು ನೀಡೆ
ಸಿಂಧೂರದು ಗುಣಪೆಟ್ಟಿ x x           ೫೫

ಕಾಗಿನ ಪಟ್ಟಿಯು ಪುಲ್ಲಿನ ಪಟ್ಟಿಯು
ಸೋಗೆ ನವಿಲು ದುಗಣಪಟ್ಟಿ
ನಾಗವರ್ಣದ ಪಟ್ಟಿ ಕನಕದ ಪಟ್ಟಿಯ
ಬೇಗದಿ ನೀಡಿದ ಹರನೂ     ೫೬

ಕಬ್ಬಿಣ ಪಟ್ಟಿಯ ಕಂಚಿಯ ಪಟ್ಟಿಯ
ವಜ್ರ ಸಿಂಧೂರ ಪಟ್ಟಿಗಳಾ
ಪ್ರಜ್ವಲವಾಗಿರ್ದ ಪದುಮದ ಪಟ್ಟಿಯ
ಸದ್ಯೋಜಾತ ನೀಡಿದನೂ   ೫೭

ಬೆಳ್ಮೆವೆಟ್ಟಿಯ ಝಗೆ ಸುವರ್ಣವಳಿಯ ಝಗೆ
ಒಲ್ಮೆಯ ಭಾಸುರ ಬಂಧಾ
ತೆಳ್ಳಿಯ ಹೊಂಬಟ್ಟೆಯ ಝಗೆಗಳ ಹರ
ಕೊಳ್ಳೆಯ ಕಟ್ಟಿ ನೀಡಿದನೂ            ೫೮

ಹರನು ಮರುಗಿದನು ಹೆರರೊಡವೆಯ ಕಂಡು
ನರರೆಂತು ಮರುಗರು ನೋಡಾ
ಬರಿದೆ ಬಂದೆವು ನಮ್ಮ ನಂದಿಯ ತಾರದೆ
ಮರದೊ ಬಂಡಿಯ ತರದೆ   ೫೯

ತಂದರೆ ಒಯ್ಯುವೆವು ತನುಮನ ದಣಿವಂತೆ
ಇಂದಿವನೆಲ್ಲವ ಹರಿಯೇ
ಅಂದು ದಾಸಮಯ್ಯಾ ನಿತ್ಯ ವಸ್ತ್ರಗಳಿಂದ
ಇಂದಿವುಲಿ x x ದ ಹರನೂ ೬೦

ನಾಳಿಗಿಲ್ಲ ಹರಿ ಇಂಥ ಸೀರೆಯು
ಏಳೆಂಟು ಮೊಟೆಯ ಕಟ್ಟು
ಹೇಳರೆಂದೆನ ಬೇಡ ಚಳಿಗಾಲಕೆ ಲೇಸು
ಹೇಳೇಳು ತೊಟ್ಟುಕೊ ಝಗೆಯೂ    ೬೧

ಉಡುವರೆ ಕೊಡುವರೆ ಇಲ್ಲಿಗೆ ಬಂದೆವು
ಮೃಡ ಕೇಳು ಎನ್ನ ಬಿನ್ನಪವಾ
ಬಡವರ ಭಕ್ತಿಯ ದೃಢ ನೋಡಲು ಬೇಕು
ಗೊಡವೆ ಬೇಡ ಒಡೆವೆಗಳಾ  ೬೨

ಉಡುವರೆ ತೊಡುವರೆ ಇಲ್ಲಿಗೆ ಬಂದೆವೆ
ಸುಡುವೆನು ಝಗೆಗಳ ನಾನೂ
ನಡುವ ಪಟ್ಟಿಗೆ ಪಟ್ಟದ ರಾಣಿಯ
ತೊಡಿಗೆ ಮುತ್ತನು ತೆಗೆ ಹರನೇ         ೬೩

ಮುರಿದೀಡಾಡಿದ ಬೀಗವ ಬೇಗದಿ
ತೆರೆದನು ಮೇಲು ಮುಚ್ಚಳವಾ
ಮೆರೆವುತಿಹ ರತ್ನದ ಪದಕವ
ಮರೆಯದೊಯ್ಯುವೆ ಎಂದ ಹರನೂ  ೬೪

ಒಡೆವೆಗಾಸೆಯ ಮಾಡಿ ಕಳುವರೆ ಬಂದವೆ
ಮೃಡ ಕೇಳು ಎನ್ನ ಬಿನ್ನಪವಾ
ಬಡವರ ಭಕ್ತಿಯ ದೃಢವ ನೋಡಲುಬೇಕು
ಗೊಡವೆ ಬೇಡ ಒಡೆವೆಗಳಾ  ೬೫

ಮುತ್ತು ಮಾಣಿಕ್ಯ ನವರತ್ನದಾಸೆಯ ಬಿಟ್ಟು
ವೊತ್ತಿನೊಳಿರ್ದ ರಾಣಿಯರಾ
ಚಿತ್ತೈಸು ಹರಸಲಿಯೆಂದು ಹರಿ ಹೇಳೆ
ಹತ್ತಿರೆ ಸಾರಿದ ಹರನೂ      ೬೬

ನಾರಿಯರೆಲ್ಲರು ಮಲಗಿರೆ ಕಾಣುತ
ಆರೆಂದು ಕೇಳಿದ ಹರನೂ
ಸಾರಿಯಿಪ್ಪಳು ತಾಳಧಾರಿ ಮದ್ಧಲೆಕಾರ್ತಿ
ಮುರಾರಿ ಕಾಳೆಯಳಿವಳೂ   ೬೭

ಶಿಖರಿ ಕಂಸಾಳ ಊಳಿಗದವಂದಿರು
ಮುಖ ಚಲುವೆಯು ವಾಸುಕಾರ್ತಿ
ನಖ ಉದ್ಧಾಮುಖ ಕಮಲದ ಬಟ್ಟ ಕುಚದಳು
x x x x x x x x x x x x x x x x x          ೬೮

ಜವಳಿಸಿ ಕಟ್ಟಿರ್ದ ತೋಪಿನ ತೆರೆಯೊಳು
ಅವಳಾರು ಹರಿಯೆ ಹೇಳೆಂದಾ
ಅವಳು ಕಠಾರಿಯ ಹಿಡಿವ ಊಳಿಗಕಾರ್ತಿ
ಶಿವನೆ ಕಸ್ತೂರಿ ಬಳೆಯವಳೂ            ೬೯

ಕಡೆಯಲಿ ಮಲಗಿಹಳವಳು ಕಾಳಾಂಜಿಯ
ಹಿಡಿವ ಊಳಿಗವೆಲೆ ಹರನೇ
ಕಡೆಹದ ಜಂತದ ಮಂಚದುಪ್ಪವಡದ
ಮಡದಿಯರಾರೆಂದಾ ಹರನೂ          ೭೦

ಸೂರಿಯ ವಂಶದ ರಾಯನ ಮಕ್ಕಳು
ಓರಣದಲೆ ಚಲುವೆಯರೂ
ಸೇರಿದ ಸತಿಯರ ಸಾಲು ಸಂಪತ್ತನು
ಮಾರಾರಿ ನೋಡೆಂದ ಹರನೂ          ೭೧

ರಾಯನ ಭೋಗದ ಸತಿಯರು ಇವರೆಲ್ಲ
ನಿವಿತ್ತ ನೋಡಿರೆಯೆನುತಾ
ಜಿಯಾ ಚಿತ್ತೈಸಯ್ಯಯಿವರಿಗೆ ಪನ್ನೀರು
ಆವಾಗ ಮುಕ್ಕಳಿಪುದಕಾ     ೭೨

ಹರಳಿಕ್ಕಿದ ಹೊನ್ನಗಿಂಡಿಯ ಪನ್ನೀರು
ತರುಣಿಯರ ಮಂಚದಡಿಯಾ
ಸರಳಿಸಿ ರನ್ನದ ಠಾವಿನ ಕನ್ನಡಿ
ಹರನೆ ಚಿತ್ತೈಸಾಳುದ್ದಾ      ೭೩

ಮಲಗಿದ್ದ ಸತಿಯರ ಮಗ್ಗುಲಲೊಕ್ಕಿಹ
ಚೆಲುವಾದ ಪಚ್ಚೆ ಕರ್ಪೂರವೂ
ವಲಗದ ಕಸ್ತೂರಿ ಕೆಸರ ಮೆರಮೆಟ್ಟಿ ಹರ
ಕೆಲಕೆ ಸಾರಿದ ಕಿಸುರುಗೊಳುತಾ         ೭೪

ಅಲ್ಲಿಯೇ ಮಲಗಿದ ಸತಿಯರ ಕಾಣುತ
ಎಲ್ಲರ ಕಡೆ ಮೊದಲಾಗಿ
ಇಲ್ಲಿನ್ನು ಸತಿಯರ ಜಾತಿಯ ಹೇಳೆಂದು
ಶಶಿಧರ ಕೇಳಿದ ಹರಿಯಾ
ಅತಿಶಯ ಕೇಳಯ್ಯ ಕರ್ಣಕೆ ಸೊಗಸುವ
ವ್ರತಿಯಿಲ್ಲ ಹರನೆ ಚಿತ್ತೈಸೂ           ೭೬

ಹಸ್ತಿನಿ ಚಿತ್ತಿನಿ ಶಂಕಿನಿ ಇಲ್ಲೀಗ
ಮತ್ತಾ ತೆರೆ ಸೀರೆಯೊಳಗೆ
ಉತ್ತಮ ಜಾತಿ ಪದ್ಮಿನಿಯನು ನೋಡೆಂದು
ವಿಸ್ತರಿಸಿದ ಹರಿ ಹರಗೆ        ೭೭

ಸತಿಯರಲ್ಲಿ ತಾನು ನಾಲ್ಕು ಜಾತಿಯು
ಪ್ರತಿ ಪುರುಷರು ನಾಲ್ಕು ಜಾತಿ
ಮತಿವಂತನಾದರೆ ಹರಿಯೆ ನೀ ಹೇಳೆಂದು
ಹಿತವಾಗಿ ಕೇಳಿದ ಹರನೂ    ೭೮

ಮದಮದಿಸುತ ಮದನಾರುತಲಿಪ್ಪಳು
ಇದು ನೆಲೆಯಿವಳು ಹಸ್ತಿನಿಯೂ
ಅದರ ಕಲೆಯು ಹಸ್ತ ಮಸ್ತಕದಲ್ಲಿಯು
ಮದನಾರಿ ಚಿತ್ತೈಸೆಂದಾ      ೭೯

ಕಿರುಗಾಹಿ ಬೇವು ನಾತವು ಚಿತ್ತಿನಿ ಜಾತಿ
ಕೆದರುವ ಕಲೆ ಗುಹ್ಯದಲಿ
ದುರುದುಂಬಿ ಇದು ನೆಲೆ ಹರಿದು ನುಡಿವ ಮಾತು
ಜರಿವಳು ಜಾಣ್ನುಡಿಗಳನೂ೮೦

ಅಸಿಯ ನಡುವು ದುರ್ಗಂಧದ ಪರಿಮಳ
ಶಶಿಧರ ನೋಡು ಶಂಖಿನಿಯೂ
ಹೊಸ ಕಮಲದ ಮುಖದವಳು ಪದ್ಮಿನಿ ಜಾತಿ
ಎಸದಿಹುದಧರದ ಕಳೆಯೂ೮೧

ಹಸ್ತಿನಿಗಾ ಪೀಠವರ್ಧನ ಕೂಟವು
ಚಿತ್ತಿನಿಗಾ ವಿಟಕೂಟಾ
ಸತ್ಯ ವಿದೂಷಕ ಶಂಖಿನಿ ಕೂಟವು
ಮತ್ತೆ ಪದ್ಮಿನಿಗೆ ನಾಗಲಿಕಾ  ೮೨

ರಾಯನುಪ್ಪವಡದ ಸುತ್ತಣ ತೆರೆಯನು
ದೇವರು ಕೊಯಿದು ಬಿಸುತಾ
ನಾಯಕ ರತ್ನದ ಮಂಚದ ಸುತ್ತಲು
ದೀವಿಗೆಗಳು ಮೆರೆದಿರಲೂ   ೮೩

ಅರಸಿನ ಶಕುನಿಯ ಮಂಚದ ಸುತ್ತಲು
ವಿರಹದ ರಾಗ ಮಾಡುತಲೂ
ಹರನು ಸಂತೋಷದಿ ನೋಡುತ ಬರುತಲು
ಕರುಣೆ ಗಣಪಾಯ ಕಂಡಾ   ೮೪

ಮೆಲ್ಲನೆ ಗಣಪಾ ದೇವಿಯ ಮುಸುಕನು
ಮಲ್ಲಿಕಾರ್ಜುನ ಸಡಿಲಿಸಿರ್ದಾ
ಅಲ್ಲಿ ದೀವಿಗೆಯನು ಹರಿತಂದು ತೋರಲು
ತಲ್ಲಣಿಸಿದ ಹರ ಕಂಡೂ     ೮೫

ಹರಿಯೆ ನೋಡಿವಳು ನರರಿಗೆ ತಾ ಸಾಟಿಯೆ
ಹಿರಿದಾಗತಿತರ ಚೆಲುವೆ
ಖರ ಉಗ್ರ ತಪನು ಕನ್ಯದಾನವ
ನರನಿವ ಮಾಡಿ ಕೊಟ್ಟಿದಾ  ೮೬

x x x x x x x x x x x ಫಲದಿದು
ನಿನ್ನಾಣೆಗೆ ನೋಡಲೆ ಹರಿಯೇ
ಚೆನ್ನೆಯ ಬಾಯಿದೇಕೆ ಅಧರವು ಸುಲಿಪಲ್ಲು
ಕನ್ಯದಿಲೆ ಕಣ್ಣ ಢಾಳಾ        ೮೭

x x x x x x x x x x x x x x x x
x x ಳಿಗುರುಳು ತುಂಬಿಯಂತೆ
ನಳಿತೋಳು ಆನೆಯ ಭುಕ್ಕೆ ಹರಿ ನೋಡು
ಡೊಳ್ಳವ ಪೆರ್ಮೊಲೆ ಪೊಂಗಳಸಾ      ೮೮

ಕರದ x x x x x x x x x x x x x x
ಕರುಣಿಯ ನಡು ಸಿಹಂದತೇ
ತೂರಿ ನೋಡುವೊಳು ತೊಡೆ ಹೊಳೆವ ಬಾಳೆಯ ಕಂಬ
ಭರದ ಜವ್ವನ ದುರವಣಿಯಾ          ೮೯

ಉಂಗಷ್ಟದೆಳೆಗಳು x x x x x
x x x x x x ತುಳುಕಾಡೆ
ತಿಂಗಳ ಹುಣ್ಣಿಮಿ ಚಂದ್ರನನ ಕಾಂತಿಯ
ಬಂಗಾರದಂತೊಪ್ಪಿದವೂ    ೯೦

ನರ ನಾರಿಯರ ಕಂಡು ಹರ ಮರುಳಾದನು
ಹಿರಿದ x x x x x x x x x x x
ಊರ್ವಸಿ ಕುಲೊತ್ತಮೆ ರಂಭೆಗಿಂದತ ಚಲುವೆಯು
ತೊರಿಸಿ ನೋಡು ಎನುತಿರ್ದಾ           ೯೧

ಚತುರ್ಮುಖನರಸರ ಸರಸ್ವತಿಗಿಂತಿವ
ಳತಿಕರ ಚೆಲುವೆ x x x
x x x x ಹೇಳಿವಳು ಮಹಾಲಕುಮಿಗೆ ಸಾಟಿ
ಪೃಥ್ವಿಯೊಳೆಂದನು ಹರನೂ            ೯೨

ನೆರೆದಲ್ಲದಿರಲಾರೆ ನೆರೆವೆ ನಾನಿವಳನು
ಇರಲಾರೆ ಬಿ x x x x x x x
x x x ದ ಸಮ್ಮೆಳಕೆ ತಕ್ಕಳು
ಸರಸ ಮೇಳಾದಿ ಕೂಡುವೆನೂ           ೯೩

ಬೇಡಿದ ಲಂಚವ ನಿನ್ನ ನೀವೇನು ಹರಿ
ಕೂಡುವೆ ನಾನಿವಳೊಡನೆ
ಕಾಡಿ x x x x x x x x x x x
ಬೇಡಿಕೊಂಬೆನು ಹರಿ ನಿನ್ನಾ೯೪

ಕೂಡಲಾಗದು ಹರ ಪರಸತಿಯರನೊಮ್ಮೆ
ನೋಡಲಾಗದು ಕಡೆಗಣ್ಣ
ಕೂಡಿದರೆ x x x x x x x x x x
ಬಡಮನ ನಿಮಗೇ೯೫

ಹರ ನೀನು ನೆನೆವರೇ ಪರವಧು ಸಂಗವ
ಪೊರಿಯ ಮಗಳು ನಿಮಗಿವಳೂ
x x ದ ಮಾತ ಹೇಳದಿರಲೇ ಹರಿ
ನೆರೆದಲ್ಲದೆ ಬಿಡೆನಿವಳಾ      ೯೬

ಕೀಳುಜಾತಿಯ ಮೇಲೆ ತಾನತಿ ಕಷ್ಟವು
ಕೇಳಯ್ಯ ಹರ ನನ್ನ ಮಾತಾ
ಕಾಳುತನದ ಮಾತನಾಡಿದರೆಲೆ ಹರಿ
ನಾಳೆ ಹೇಳು ಧರ್ಮಂಗಳಾ   ೯೭

ಚಿತ್ತ ನೆಟ್ಟವರಲ್ಲಿ ಉತ್ತಮ ಕುಲವುಂಟೆ
ಕತ್ತೆಗೆ ಸುಳಿ ಶುದ್ಧ ಉಂಟೆ
ಹತ್ತೆಂಟು ಪುಲಿಚರ್ಮ ಸರ್ಪ್ಪನ ಲಾಂಛವ
ನಿತ್ತಹೇ ಹರಿ ಸುಮ್ಮನಿಹುದೂ         ೯೮

ಕಚ್ಚಿಕೊಲುವ ಕಡುವಿಷದ ಹಾವುಗಳನು
ಮೆಚ್ಚಿಕೊಟ್ಟ ಹುಲಿದೊಗಲಾ
ಅಚ್ಚಿಗ ವಡಗಿತು ಉತ್ಸಾಹವಾಯಿತು
ಮೆಚ್ಚು ಭಂಡಾರದೊಳಿರಲಿ೯೯

ಪರಸತಿ ಸಂಗವ ಹರ ನೀನು ನೆನೆವರೆ
ಧರೆಯೊಳಗಪಕೀರ್ತಿಯಹುದೂ
ಸುರರೆಲ್ಲ ನಗುವರು ಕೈಲಾಸದೊಳಗಲ್ಲಿ
ಮರಳನೆಂಬರು ಭಕ್ತರೆಲ್ಲಾ  ೧೦೦

ನೆಟ್ಟವಯ್ಯ ದೃಷ್ಟಿ ಬಿಟ್ಟೆ ಕೈಲಾಸವ
ಬಟ್ಟಿಯ ಬಾರೆ ಪಾರ್ವತಿಯಾ
ಕಷ್ಟತನಗಳೆಂದು ನೀನೆನ್ನು ಹರಿಯೆ
ಬಿಟ್ಟೆನು ನಿನ್ನ ಭಕ್ತರನೂ    ೧೦೧

ಕೊಂಡೊಯ್ಯವೆನಿವಳ ಭೂಮಂಡಲದಾಚೆಗೆ
ದಿಂಡೆಯ ನೆಂದಳೆಯೆಂದೂ
ಪಂಡಿತತನಗಳ ಮಾತಿನ್ನು ಸಾಕಯ್ಯ
ಕಂಡೆನು ಬಿಡೆನು ನಾನಿವಳಾ  ೧೦೨

ಪರಸತಿ ಸೀತೆಗೆ ರಾವಣನಳುಪಿಯೆ
ಹರನವ ಕೆಟ್ಟುದನರಿಯಾ
ಅರಸರಿಗೆ ತಲೆದಂಡ ಒಪ್ಪದಯ್ಯಹರ
ಸರಸ ಸಾಕು ಸುಲಿಯಿವಳಾ  ೧೦೩

ನಂದಿವಾಹನ ಹರ ಗಣಪಾದೇವಿಯ
ಮುಂದಲೆಗುರುಳನು ಕೊಯಿದಾ
ಚಂದದ ನಳಿತೋಳ ನಖ ರೇಖೆಯ ಮಾಡಿ
ಮುಂಗೈ ಬಳೆಯನೆಗೊತ್ತಿ    ೧೦೪

ಪಂಜರದೊಳಗಣ ಗಿಣಿಯು ಮಾತಾಡಿತು
ಅಂಜದೆ ಹರನ ಕಾಣುತಲೂ
ನಂಜಿನಗೊರಳದ ನಾಗಭೂಷಣ ನಿಮ್ಮ
ರಂಜಿಪ ಮುಖಗೆಡಿಸುವರೇ  ೧೦೫

ಕುರುಳ ಕೊಯ್ಯುವರೆ ಕುಚ ನಖ ರೇಖೆ ಮಾಳ್ಪರೆ
ತರುವಲಿಯಲ್ಲ ನೀನೀ ಹರಿಯಾ
ಹಿರಿದು ಪಾಪುವು ಹರ ಕೆಡಿಸದಿರೆನುತಲಿ
ತರುಣಿ ಸಾಕಿದ ಗಿಣಿಯರಚೆ  ೧೦೬

ಹೊಕ್ಕರು ಕಳ್ಳರು ಕನ್ನವ ನಿಕ್ಕಿಯೆ
ಸಿಕ್ಕಿದರೇಳಕ್ಕವೊಳಗೆ
ಹೊಕ್ಕನು ಶಿವಲೋಕದಿಂದಲು ಬಂದಿವ
ದಿಕ್ಕನೆ ಹೊದ್ದಾನೆಗಳ ತಾ   ೧೦೭

ಹೆಗ್ಗಡೆಗಿತ್ತಿಯ ಕಾವಲ ಮಂಡಿಯ
ಬೊಗ್ಗನೆಬ್ಬಿಸುಯೇಳಕ್ಕಾ
ಅಗ್ಗಳೆಯರ ಕಳ್ಳ ನರನಲ್ಲಯಿವನಿಗೆ
ಭಗ್ಗೋದೇವನೇಳಕ್ಕಾ       ೧೦೮

ಒಡೆವೆಗಾಸೆಯ ಮಾಡಿ ಬಂದವನಿವನಲ್ಲ
ಪೊಡವಿಗೆ ಪತಿಯೆಂಬಾತಾ
ಬಡಮನ ಬಾಹಿರರೆಂಬರ ಹೊದ್ದುದೆ
ಮೃಡಬಂದ ಬೇಗಯೇಳಕ್ಕಾ            ೧೦೯

ಸೃಷ್ಟಿಗೆ ಚಲುವನು ಕಾಮನೆಂಬಾತನ
ಸುಟ್ಟು ಬೊಟ್ಟೆಟ್ಟ ಬಂದಾತಾ
ಘಟ್ಟಿಯನವರಪ್ಪ ಕೂಡೆ ಬಂದಿಪ್ಪಾತ
ಕಟ್ಟೆವು ಬೇಗೇಳಕ್ಕಾ          ೧೧೦

ಅಸುರರ ವಂಶವ ಹೆಸರು ಗೆಡಿಸಿ ಕೊಂದ
ವಸುಧೆಯೊಳಿಂದವನಕ್ಕಾ
ಹಸುಳೆಗೆ ಕಿರುಗೂಸಾಗಿ ಮೊಲೆಯನುಂಡ
ಪಶುಪತಿ ಬಂದನೇಳಾಕ್ಕಾ    ೧೧೧

ಉಂಡೆನೆಂದಿತ ಚಂಡಿತನವ ಮಾಡಿ
ಭಂಡತ x x x x x x ಲುಣುತಾಗಾ
ತುಂಡಿಸಿ ಕೊಲಿಸಿದ ಚಿಕ್ಕ ಚೀಲಾಳನ
ಕೊಂಡೊಯ್ದು ಕಾಂಚಿಯ ಪುರವಾ    ೧೧೨

ತಾಯಿ ತಂದೆಯಿಲ್ಲ ತರುವಲಿ ಮುನ್ನಲ್ಲ
ಮಾಯಾರಿ ಮರುಳುಗಲೊಡೆಯಾ
x x x x ಹುಟ್ಟನು ಪ್ರಾಯವನರಿಯನು
ಕಾಯದ ಮನು ಜಾತಾನಲ್ಲಾ          ೧೧೩

ಮಂಡೆಯ ಮೇಲೆ ಮತ್ತೊಬ್ಬಳು ಹೆಂಡತಿ
ಭಂಡನು ನಾಚುವನಲ್ಲಾ
ಕಂಡರೆ ಹಿರಿಯನು ಎಂದೆನ್ನ ಬಾರದು
ಉಂಡನು ಚೆನ್ನನ ಮನೆಯಾ೧೧೪

ಎಲುವಿನಾಭರಣವು ಎಲ್ಲ ಜೆಡೆಗಳು
ಕೊಲೆಗೇಡಿಗನು ಇವನಕ್ಕಾ
ಚೆಲುವ ಕಾಮನ ಪಿತ ಸಹಿತಲು ಬಂದನು
ಮಲಗದಿರೆಳೇಳಕ್ಕಾ           ೧೧೫

ಒಲಿಸಿವಲ್ಲದೆ ಕಾಡು ತಿರುತಿಪ್ಪನೀತನು
ಗೆಲಿಸುವ ತನ್ನ ನಂಬಿದರಾ
ಸಲೆಗಳನಾಗಿಯೆ ಬಂದಾತನು ಹರ
ಮಲಗದಿರೇಳು ಬೇಗಕ್ಕಾ    ೧೧೬

ಗಜಚರ್ಮ ಪುಲಿದೊಗಲುಡಿಗೆ ದೇವಾಂಗವು
ಭುಜಗ ಭರಣ ಬಂಗಾರಾ
ಅಜನ ಕಪಾಲವು ಖಟ್ಟಾಂಗ ಡಮರುಗ
ಗಜಮುಖ ಪಿತ ಬಂದ ಕಳಲೂ          ೧೧೭

ತನ್ನ ಬಂಟರ ಮನೆ ರಜತಾದ್ರಿಯ ಮೇಲೆ
ಮುನ್ನಿವ ಕೊಟ್ಟದ ಬೇಡಾ
ಗಂಗಳ್ಮರ ಗುರುತಾ ನೀವ ಲೋಕಕೆ
ಇನ್ನಿವ ಹೊದ್ದಾನೇಳಕ್ಕಾ   ೧೧೮

ಅರಸೆದ್ದು ದೇಶವನಾರಡಿಗೊಂಬರೆ
ಪರಮ ಸದ್ಭಾವ ಹರ ಹುಸಿಯೆ
ಧರೆ ಸುರ ಲೋಕಕೆ ಹರ ಕಳ್ಳನಾದನು
ಇರಬಾರದೇಳೇಳಕ್ಕಾ         ೧೧೯

ಅರಗಿಣಿಯಬ್ಬರ ಅರಮನೆಯೊಳಗೆಲ್ಲ
ಹಿರಿದಾ ಬಲುಹಾಗುತಿರಲೂ
ಅರಸು ಎಚ್ಚೆತ್ತನಾದರೆ ನಮಗಿದು ಮುಪ್ಪು
ಕೊರಳ ಮುರಿದು ಹಾಕು ಹರಿಯೆ      ೧೨೦

ಜೀವದಯಾಪರ ದೇವರ ದೇವನೆ
ಕಾವುದು ಪ್ರಾಣ ದಾನವನೂ
ನಾವು ತಿಳಿದಿರೆ ಜಾತಿಪಕ್ಷಿಗಳಯ್ಯಾ
ಕಾವುದು ಕರೆಕಂಠ ಪ್ರಾಣವನೂ         ೧೨೧

ರುದ್ರ ಈಶಾನ್ಯನೆ ಸದ್ಯೋಜಾತನೆ
ಚಿದ್ರೋಪ ಕಾಯ್ದುಕೊಳ್ಳಯ್ಯಾ
ಮುದ್ದುಮಾತಿಲಿ ಗಿಣಿ ಶರಣು ಶರಣುಯೆನ
ರುದ್ರನು ಕಾಯ್ದ ಪ್ರಾಣವನೂ         ೧೨೨

ಗಿಣಿಯ ಪ್ರಾಣವ ಕಾಯ್ದು ಗಣಪಾದೇವಿಯ
ಸುರಿವರೆದ್ದನು ಹರ ನಾಗಾ
ಕ್ಷಣದೊಳಗೆಚ್ಚರೆ ಕೈತಪ್ಪು ಮಾಡುವ
ಹರ ಕೇಳು ಗಣಪತಿ ರಾಯಾ            ೧೨೩

ಒತ್ತಿನ ಕೈದುವ ನಿತ್ತನಿಡುಹರ
ಉತ್ತಮ ಕಣಿಯು ತಕ್ಕಡೆಯಾ
ಯತ್ತಿವ ಬಲುಬಂಟ ಎಚ್ಚೆತ್ತಲಿರಿವನು
ಯಿತ್ತ ನೀಡು ಕೊಂತಗಳಾ    ೧೨೪

ದಂಡಿವಾಳವು ಚಂದ್ರಾಸ ಮುಸುಂಡಿಯ
ಕಂಡು ನೀಡಿದ ಕಂಪಡಿಯಾ
ಚೆಂಡು ಕೋಲು ಅಲಗಿಬ್ಬಯ
ಕೊಂಡು ನಡೆ ಹರಿಯೆನುತಾ೧೨೫

ಬಲ್ಲೆಹ ಚೋರಹಸ್ತ ಕಳ್ಳಗಠಾರಿಯು
ನೆಲ್ಲೆಹ ವಜ್ರಮುಟ್ಟಿ ಸುರಗಿ
ಸೂಲಂಗಿವುಡಿ ಅಡಾಯುದ್ದವಿಟ್ಟಿಯ
ನೀಲಕಂಠನು ನಿಡುತಿರ್ದಾ    ೧೨೬

ತರಕಸಿ ಸಿಂಗಾಡಿ ಕವಲಂಬು ಗತಿಯ
ತುರಕ ಬಟ್ಟಿರು ಅಂಕುಶವೂ
ಮರಸುತ್ತು ರವಿಬಾಣ ಹೊರವಂಕಿ ಕಿರುಗಾಲು
ಹರಿಣಾಸ್ತ್ರವ ನಿಡುತಿರ್ದಾ   ೧೨೭

ನಾರಾಚದಂಬು ಮುಮ್ಮೊನೆಯಂಬು ಕವಲಂಬು
ಜಾರಾಸ್ತ್ರಕೆಣರಿಗೆಯಂಬೂ
ಗರುಡಾಸ್ತ್ರ ರಸುವಾಳ ಬಾಳೆಯಂಬುಗಳನು
ಹರ ನೀಡಿದನಾಗ ಹರಿಗೆ      ೧೨೮

ರಾಯನ ವೊತ್ತಿ ಸಾಯುದ್ದ ಕೈದುವ
ದೇವರು ಹರಿಗೆ ನೀಡಿದನು
ನಾಯಕ ರತ್ನದ ಮುತ್ತಿನ ಮೆಲ್ಕಟ್ಟ
ಸಾಯಸಗೊಳುತಲು ಕೊಯಿದಾ        ೧೨೯

ಝಲ್ಲನೆ ಮೆಲ್ಕಟ್ಟು ನೆಲಕೆ ಬೀಳದ ಮುನ್ನ
ಮೆಲಾಂತು ಕೊಂಡನು ಹರನೂ
ಅಲ್ಲಿ ಕಟ್ಟುವ ನಮ್ಮ ಓಲಗೆ ಶಾಲೆಗೆ
ಎಲ್ಲವ ಕೊಂಡು ನಡೆ ಹರಿಯೇ        ೧೩೦

ಮುತ್ತು ಮಾಣಿಕ ನವರತ್ನಗಳೊಯಿವರೆ
ಇತ್ತ ಬಂದಿರೆ ಹರ ನೀವು
ಹೊತ್ತುಕೊಳ್ಳಿ ನಿಮ್ಮ ಮನದಣಿವನಿತ್ತನು
ಮತ್ತಿವ ಹೊರ ಬಂದಿಲ್ಲಾ  ೧೩೧

ಮೆಲ್ಲನೆ ರಾಯನ ರಾಣಿಯ ಹರ ನೀನೂ
ನೆಲ್ಲಬೇಡ ಸುಲಿಯೇಳೂ
ಎಲ್ಲಿವನೆಚ್ಚತ್ತರಿನ್ನಾವ ಭಯವಿಲ್ಲ
ಎಲ್ಲ ಕೈದುವ ತೆಗೆದೇ       ೧೩೨

ಮುತ್ತು ಮಾಣಿಕ ನವರತ್ನ ತೆತ್ತಿಸಿ ಯುದ್ಧ
ಉತ್ತಮ ಹೊನ್ನ ಮಂಚದಲಿ
ಮತ್ತಲ್ಲಿ ಗಣಪತಿರಾಯನ ಹೆಂಡತಿ
ಉಪ್ಪವಡಿಸೆ ಗಣಪಾಯೀ   ೧೩೩

ಅಲ್ಲಿಯೆ ಕಾಣುತ ಕುಳಿತ ಹರ ಬೇಗ
ಮೆಲ್ಲನೆ ಮಂಚದ ಮೇಲೆ
ಅಲ್ಲಿ ರಾಣಿಯ ನೋಡಿ ಹರ ಮರಳಾಗಲು
ಇಲ್ಲಿನ್ನು ಬಿಡನೆಂದು ಹರಿಯೂ       ೧೩೪

ಬುದ್ದಿ ಮಾಡಿ ಇನ್ನೆಬ್ಬಿಸಬೇಕೆಂದು
ನಿರ್ಧರಿಸಿದ ಹರಿ ಮನವಾ
ಇದ್ದ ಸವತಿಯರ ತೋರಿಸಿದ ಪಾಪಿಯ
ಹೊದ್ದಲಾಗದು ಹರ ಇವಳಾ          ೧೩೫

ಮುಟ್ಟಲಾಗದು ಹರ ಕಷ್ಟ ಜಾತಿಯಿವ
ಳಿಷ್ಟೆ ಹೇಸಿಕೆಯಿಲ್ಲ ನಿಮಗೆ
ಇಷ್ಟೊಂದು ಸಾತ್ವಿಕ ಇತ್ತಲು ಬರಲೇಕೆ
ಕಷ್ಟದ ಕಳವಿಗೆ ಹರಿಯೇ     ೧೩೬

ತಕ್ಕ ಕಾರ್ಯಕೆ ಹರಿ ಕತ್ತೆಯ ಕಾಲನು
ಮತ್ತೇಕೆ ಹಿಡಿದೆನಿ ಹೇಳಾ
ಪೃಥ್ವಿಪತಿಯ ರಾಣಿ ಗಣಪಾದೇವಿಯು
ಮತ್ತೇನು ಕಷ್ಟವು ಹರಿಯೇ೧೩೭

ಹರ ಮರುಳಾದನು ಗಣಪಾದೇವಿಗೆ
ಹಿರಿದಾ ಪರಿಯಲೆಂದೆನುತಾ
ಖರ ಬೇಗಲಿಬ್ಬಿಸ ಬೇಕೆಂದು ಬುಧ್ದಿಯ
ಹರಿ ನೆನದನು ಮನದೊಳಗೆ  ೧೩೮

ಹೊತ್ತು ಹೋಯಿತೀಗ ದೀವಿಗೆ ಮಸುಳಿತು
ಮತ್ತೀಗ ಬೆಳಗಾಗ ಬಂತೂ
ಚಿತ್ತೈಸು ರಾಯನ ರಾಣಿಯ ಸುಲಿಯೋಳು
ತತ್ತವೇಳೆಗೆ ತಡಬೇಡಾ       ೧೩೯

ಎದ್ದು ಹೋಗಿ ಹರ ಹೊದ್ದಿ ಸಾರಿದನಾಗ
ಮುದ್ದುಮೊಗದ ಗಣಪಾಯಾ
ಉದ್ದಗಂಬಿಯ ಪಿಲ್ಲಿ ಕಾಲ ಬಂಗಾರವ
ರುದ್ರ ತೆಗೆಯ ಹರಿ ನಕ್ಕಾ    ೧೪೦

ಅವಸರವಾಯಿತೆ ಅವಕ್ಕಿಗ ಹರನೆ
ಯುವತಿಗೆ ಮುಖದ ಮೂಗುತಿಯಾ
ಜವಳಿ ಕಾಲುಂಗುರ ಬಂಗಾರವೆಲ್ಲವ
ಯಿವ ಹಿಡಿಮಡಿಲೊಳು ಹರಿಯೆ       ೧೪೧

ಅಂದುಗೆ ಪಾಯವಟ್ಟ ಹೊಂಗೆಜ್ಜೆ ಕಿರಿಪಿಲ್ಲಿ
ಮುಂದಣಂಗುಷ್ಟದೆಳೆಯಾ
ಚಂದವುಳ್ಳ ವೀರಮುದ್ರೆ ಮಂಡಿಗೆಯನು
ಒಂದೊಂದು ಮೆಲ್ಲನೆ ತೆಗೆದಾ          ೧೪೨

ಮಿಸುನಿಯ ಬಂಗಾರ ನವರತ್ನದುಂಗುರ
ಶಶಿಮುಖಿಯರ ಸೊಡಗವಾ
ಹೊಸ ನೀಲದ ಮಾಣಿಕ್ಯದುಂಗುರಗಳ
ಶಶಿಧರ ನೀಡಿದ ಹರಿಗೆ        ೧೪೩

ಗೋಮೇದಿಕ ಪಚ್ಚೆ ಪುಷ್ಟರಾಗವಾದ
ರಾಮಣೀಯಕ ವೈಡೂರ್ಯ
ಪ್ರೇಮದ ರಾಜಾವರ್ತದುಂಗುರವನು
ಸೋಮಶೇಖರ ನೀಡುತಿರ್ದಾ           ೧೪೪

ಸರಲೋಕದೊಳಗಿಲ್ಲ ನರಲೋಕದೊಳಗಿಲ್ಲ
ಹರಿ ನೋಡು ನೀಲದುಂಗುರವಾ
ತರಳೆಯ ಬೆರಳಿನ ವಜ್ರದುಂಗುರವನು
ಪುರಹರ ತೆಗೆದು ನೀಡಿದನೂ            ೧೪೫

ಹವಳದ ಕುಸುರಿಯ ಹೊಳೆವ ಉಂಗುರವನು
ಅವಳ ಹಸ್ತದ ಕಡಗವನೂ
ಅವಳ ಮುಂಗೈಗಳ ಕಸ್ತೂರಿ ಬಳೆಯನು
ಶಿವನು ತೆಗೆದ ನೀಡುತಿರ್ದಾ  ೧೪೬

ಹಸ್ತ ಗಂಡಿನ ರುದ್ರಾಕದಷಿಯ ಕಡಗವು
ಹಸ್ತದ ಸರಗೌಳ ಸರವಾ
ಹಸ್ತದ ಪದ್ಮಸರಂಗಳ ತೆಗೆವುತ
ಮತ್ತದ ತೆಗೆದ ಸೂಡಗವಾ  ೧೪೭

ನಳಿತೋಳಿಗೊಪ್ಪುವ ತೋಳಿನ ಬಳೆಗಳು
ಫಳ ಫಳಿಸುವ ರಕ್ಷೆ ಮಣಿಯಾ
ಹೊಲೆಯ ಜೂಳೆಯ ಕೋರಮುತ್ತನು ತೆಗೆವುತ
ಬಳಿಕ ಭುಜಕೀರ್ತಿಯ ತೆಗೆದಾ            ೧೪೮

ತೆಗೆದು ನೀಡಿದ ಹರ ಚಿನ್ನದ ಸರವನು
ಹೊಗಳುತ ಮಧ್ಯ ಕಂಕಣವಾ
ಮಗುಳವಳಿಕ್ಕಿದ ಬಣ್ಣದ ಸರವನು
ಮುಗುಳು ನಗೆಗಳಿಂದ ತೆಗೆದಾ           ೧೪೯

ಮುತ್ತಿನುತ್ತರಿಗೆಯ ಮಣಿಯ ಸರಂಗಳ
ಉತ್ತಮ ಪದಮೋಕ್ಷ ಸರವಾ
ಹೊತ್ತಕಟ್ಟಿದ ಕೊರಳ ಕುಣಿಕೆಯ
ಹೊತ್ತು ಹೋಯಿತುಯೆಂದು ಮುರಿದಾ         ೧೫೦

ಪೆರೋಜನ ತಾಳಿ ಚಿನ್ನದ ತಾಳಿಯ
ಓರಣ ಸರದ ತಾಳಿಗಳಾ
ಕೊರೆಸಿ ಮಿಂಚುವ ಹೊಂಬಳೆ ಬಂದಿಯ
ಮಾರಾರಿ ತೆಗೆದು ನೀಡಿದನೂ           ೧೫೧

ಒತ್ತಿನ ಮುತ್ತಿನ ಹಾರವ ಹರಿದನು
ಮತ್ತವ ನೀಡಿದ ಹರಿಗೆ
ಉತ್ತಮ ರತ್ನಪದಕ ಕಂಠಮಾಲೆಯ
ಪ್ರತ್ಯೆಕ್ಷ ಹರನು ತೆ(ಗೆದು)ಕೊಟ್ಟಾ     ೧೫೨

ಹೊನ್ನೋಲೆ ಹೊಸಕೊಪ್ಪು ಹೊನ್ನ ಹೂವಿನ ಮುತ್ತು
ಇನ್ನಾರು ಬೆಲೆಬಲ್ಲರೆನುತ
ನಿನ್ನಾಣೇ ಹರಿಯೆ ನೋಡೆಂದು ನೀಡುತ
ಚೆನ್ನಾಗಿ ತೆಗೆದ ಮೂಗುತಿಯಾ         ೧೫೩

ಮುತ್ತಿನ ಸೂಸರ ಮುಂದಲೆ ಶಶಿರವಿ
ವೊತ್ತಿನಯೆಸಳ ಬೈತಲೆಯಾ
ಉತ್ತಮ ಮಿಸುನಿಯ ಮುತ್ತಿನ ಬೊಟ್ಟನು
ತತ್ತಳ ಗೊಳುತಲು ತೆಗೆದಾ  ೧೫೪

ಪೊಡವಿಯನಾಳುವ ಗಣಪತಿರಾಯನ
ಮಡದಿ ಗಣಪದೇವಿಯನೂ
ನಿಡಿಗುರುಳಿನ ಮುಡಿದುರುಬನು ಕೆದರುತ
ಮೃಡ ತೆಗೆದನು ಚೌರಿಯನೂ           ೧೫೫

ರಾಯನ ರಾಣಿಯ ಚೆನ್ನಾಗಿ ಸುಲಿದೆನು
ಆಯಿತೆ ಹರಿ ಹೋಹವೇಳೂ
ಜಿಯಾ ಸಂತೋಷದಿ ಸತಿಯ ಸುಲಿದಿರಿ
ರಾಯನ ಸುಲಿವರಿನ್ನಾರು   ೧೫೬

ಬಲ್ಲಿಹ ವೀರನು ಗಣಪತಿರಾಯನು
ಇಲ್ಲಿ ಸುಲಿಯಲಮ್ಮೆ ನಾನೂ
ವಲ್ಲಭೆಯರ ಕಂಡು ವಹಿಲದಿ ಸುಲಿದಿರಿ
ಬಲ್ಲಿತು ಹರ ವೀರತನವೂ  ೧೫೭

ಆದಿನಾರಾಯಣ ನಾಡಿದ ಮಾತಿಗೆ
ವೇದ ಮೂರುತಿ ನಸುನಗುತಾ
ಹೋದನು ರಾಯನ ಮಂಚದ ದೆಸೆಗಾಗಿ
ಆದರೆ ಸುಲಿದೆವೆನುತಾ        ೧೫೮

ಅವನೀಶ ನಿಕ್ಕಿದ ಮಕುಟುವ ತೆಗೆದನು
ನವರತ್ನ ಪದಕವ ತೆಗೆದಾ
ಭವನಾಧೀಶನ ಚಲುವಾದ ಹಾರವ
ಶಿವನು ತೆಗೆದು ಕೊಟ್ಟ ಹರಿಗೆ           ೧೫೯

ನವಗ್ರಹ ಕುಂಡ ನವರತ್ನದುಂಗುರ
ಸವಡಿ ಹೊಂಬುಡಿ ಬಾಹುಪುಲಿಯಾ
ನವಸರ ಚೌಸರ ವಿಕ್ಕಿದುತ್ತರಿಗಿಯೆ
ಶಿವನು ತೆಗೆದು ನೀಡುತಿರ್ದಾ            ೧೬೦

ಮುತ್ತುಮಾಣಿಕ ನವರತ್ನವು ಕೆತ್ತಿಸಿ
ಮೊತ್ತದ ಬೊಂಬೆ ಬಾವುಲಿಯೂ
ಮತ್ತಲ್ಲಿರಾಯರ ಗಂಡನೆಂಬ ಖಂಡೆಯವ
ಸತ್ಯಶಂಕರ ನೀಡುತಿರ್ದಾ     ೧೬೧

ಅರಸಿನ ರಾಣಿವಾಸ ಗಣಪಾದೇವಿಯ
ಸಿರಿಮುಡಿ ಚೌರಿ ಮುಂತಾಗಿ
ಹರನೀ ಬೇಗ ಕಟ್ಟುಂಗಾರ ಮೊಟ್ಟೆಯ
ಇರಲಿ ಸೂಡಗ ಮಡಿಲೊಳಗೆ            ೧೬೨

ಹೋಗುತ ಹಿಂದವ ಹಾಕುತ ಹೋದರೆ
ರಾಗವೆ ಬೆಂಬಳಿವಿಡಿದೂ
ಬೇಗಲು ಬೆನ್ನಲು ಬಹರು ನಮ್ಮ x x x
ಬೇಗೇಳು ಹರಿ ಬೆಳಗಾತೂ   ೧೬೩

ಮೂರುಜಾವದ ಮೇಲೆ ಮೂರನೆ ಘಳಿಗೆಯು
ಸಾರಿತು ಗಡಿಯಾರ ಹರನೆ
ಬೇರಿದ್ದ ಬೆಳುಬೂದಿಯ ತೆಳಿ x x x x x x
x x ಲೋದಿದ ಕೊಳವೆಯಲಿ            ೧೬೪

ಅರಸುಯೇಳದ ಮುನ್ನ ಕನ್ನವನುಸುಳುತ
ಹರ ಪೌಳಿಗಪ್ಪಡಗೆಡಹಿ
ಸರಗಳ ಮುತ್ತನು ಹರಿದು ಕನ್ನದ ಬಾಯಿ
x x x x x x ಚಲ್ಲಿದ ನಗುತಾ         ೧೬೫

ಹರಿಹರ ಗಣಪತಿರಾಯೆನ ಮನೆಯಲಿ
ಹಿರಿದಾಗಿ ಒಡೆವೆಯ ಕದ್ದೂ
ಗುರುರಾಯ ಕನ್ನವ ಹೊರಮಂಟ ಸಂದಿಗೆ
ಪದನು ನೂರರವತ್ತಾರು     ೧೬೬

ಅಂತು ಸಂಧಿ ೧೧ಕ್ಕಂ ಪದ ೮೧೪ಕ್ಕಂ
ಮಂಗಳ ಮಹಾಶ್ರೀ ಶ್ರೀ ಶ್ರೀ