ಸಂಧಿ೧೨

ತ್ರಿಜಗಾಧಿಪತಿ ಹರ ಭುಜಗಾಭಾರಣನು
ಅಜ ಸುರರಿಗೆಯೆಲ್ಲ ಒಡೆಯಾ
ಗಜ ಚರ್ಮಾ ಪುಲಿಧಾರಿ ಕನ್ನವ ಹೊರವಂಟು
ನಿಜಲಿಂಗ ಹರನಿಂದಿರ್ದಾ     ೧

ನಂದಿವಾಹನ ಹರ ಕನ್ನವ ಹೊರವಂಟ
ಮುಂದಣ ಸಂಧಿಯ ಕೇಳಿ
ಅಂದಾರ x x x ಚ್ಚತು ಆಡಿದ ಮಾತ
ಚಂದ್ರಧರನು ಕೇಳುತಿರ್ದಾ   ೨

ಇಲ್ಲಿ ಕುಳ್ಳಿರು ಹರಿ ಕನ್ನದ ಹುಡಿಯಲಿ
ಮೆಲ್ಲನೆ ಹೋಹ ಕೇಳಿನ್ನೂ
ಎಲ್ಲವ ಕೇಳುವ ಅರ x x x x x x ನು
ನಿಲ್ಲದೆ ಹೋಹಾ ಮತ್ತಾಗಾ           ೩

ರಾಯನ ಮಂಚದ ತಲೆದೆಸೆಯಲ್ಲಿಯೆ
ವಾಯುಸುಳಿಯೆ ಕನ್ನದಲಿ
ಮಾಯದ ಕಣ್ಣೊಳಗೆಂಣಿಯು ಹೊ x x
x x x ವೆ ಬೂದಿಯೇಕಾಗಿ  ೪

ಮುಚ್ಚಿದ ಕಂಗಳು ತೆರೆಯಲು ಬಾರದೆ
ಅಚ್ಚಿಗ ಗೊಳುತಲು ಅರಸೂ
ಹುಚ್ಚಗೊಂಡಂತೆಯು ಚಿನ್ನದ ಗಿಂಡಿಯ
ಬೆಚ್ಚುತ್ತ (ಎದ್ದನು) ರಾಯಾ          ೫

ಕೋಪಿಸಿದನು ಎದ್ದು ನಿದ್ರೆಯು ತಿಳಿದುದು
ಭೂಪತಿ ಉಳಿದವರಾ
ತೋಪಿನ ತರೆಸೀರಿ ಕೊಯ್ದು ಬಿದ್ದಿರೆ ಕಂಡೂ
ಭಾಪುರೆಯೆನುತ ಚಿಂತಿಸಿದಾ೬

ಸುತ್ತಲು ಮಲಗಿದ್ದ ರಾಣಿವಾಸವ ಕಂಡು
ಮತ್ತಲ್ಲಿ ನೋಡಿಯೆ ರಾಯಾ
ಉತ್ತಮ ಬಂಗಾರ ಹೊದ್ದು ದೇವಾಂಗವು
ವ್ಯರ್ಥವಾಗಿಯೆ ಹೋಗಿರಲೂ          ೭

ತನ್ನೊಳು ಮಲಗಿದ್ದ ಗಣಪತಿರಾಯನ
ಚೆನ್ನಾಗಿ ಮೊಗ ನೋಡಿ(ದ)ರಾಯಾ
ಖಿನ್ನನಾದನು ಮುಖನಖ ರೇಖೆಯ ಕಂಡು
ಖಿನ್ನವಾಗಿರುದರದಲಿ        ೮

ಆರು ಕೊಟ್ಟಿಗರದಾಮೃತವನು
ಆರು ಗಲ್ಲವ ಸೀಳಿದವನು
ಆರಿಗೆ ಕೊಟ್ಟಿ ನೀ ಮುಂದಲೆ ಗುರುಳನು
ಆರನೆರದೆ ಹೇಳು ಗಣಪ      ೯

ಬೆಂದಿತು ಸಂಸಾರ ಹೆಂಗೂಸು ಜಲ್ಮಗ
ಳೆಂದಳಲುತ ಗಣಪಾಯಿ
ಹಿಂದಣ ಜನ್ಮದ x x x x x x ಲಿದು
ಇಂದೇನನರಿಯೆನು ರಾಯಾ೧೦

ಅರಿಯೆನೆಂದು ನೀನಾಡಿದೆ ಗಣಪಾಯಿ
ಮೆರೆವ ಪದಕವಾರಿಗಿತ್ತೆ
ಮರದೊಳಗಿದ್ದಳ ಜರದರಂಜುವೆ ನಾ
ಕರಿಕಂಠಬಲ್ಲ ನಿನ್ನಾಣೆ       ೧೧

ರಸಬಸಿವ ಮಾತ ಬಾಯಲಿ ನುಡಿವಿರಿ
ಹುಸಿಯಲ್ಲ ಹೃದಯ ತುಂಬಿಹುದೂ
ಕುಸುರಿದವೆನೆಂದು ಅರಸಿದ ಕೈದುವ
ಹೆಸರಿಗೊಂದಿಲ್ಲ ಆಯುಧವೂ         ೧೨

ಕನಕ ದೊರೆಯ ಚಂದ್ರಾಸವ ಕಾಣದೆ
ಮನಸಿರಿ ನೊಂದು ಇಂತಿಸಿದಾ
ತನುಗುಳ್ಳ ಬತ್ತಿಸ ಕೈದುವನರಸುತ
ಮನೆಯೊಳು ಕಂಡ ಕನ್ನವನೂ           ೧೩

ಖಿನ್ನನಾನದು ರಾಯ ಕನ್ನವಿಕ್ಕಿರೆಕಂಡು
ಇನ್ನೇತರಪಮಾನವೆನುತಾ
ಚೆನ್ನೆಯರ ಕಥನದಿಂದಲು ಬಂದಿತು
ಇನ್ನಿವರು ಕಳ್ಳರಲ್ಲಾ       ೧೪

ಛಪ್ಪನ್ನ ದೇಶದ ರಾಯರು ಕೇಳಿಯೆ
ತಪ್ಪದೆ x x x ವಂತಾಯಿತೂ
ಅಪ್ಪಿತು ಅಪಕೀರ್ತಿ ಅರಿರಾಯರೊಳೆಂದು
ಕುಪ್ಪಳಿಸುತ ಚಿಂತಿಸುತಾ    ೧೫

ರಾಯನ ರಾಣಿಯನು ಸುಲಿದರುಯೆಂದೆಂಬ
ಕೇಳಿಕೆಯಾಯಿತು ಮೂಜಗಕೆ
x ಯಿಕವಣಿಯ ಕೈದು ಹೋದವುಯೆಂಬ
ಪ್ರಾಣದೆಸೆಯಿನ್ನೇಕೆ           ೧೬

ಅರಸಿನ ಅಪಮಾನ ಹೋಯಿತೆಂದೆಂಬ
ಸರಸದ ಮರುಳಾಟವಾಯಿತೂ x
x x ಹೊಕ್ಕರಸಿಯೆ ಹಿಡಿತಂದು ಕಳ್ಳರ
ಅರಿಸುವೆ ಗರಗಸದಿಂದಾ      ೧೭

ಬೇಟದ ಬೆಂಬಳಿಗಾರು ಹೊಕ್ಕರು ಹೇಳು
ಆಟಕಬೇಡ ಹಾದರದಾ
ಗೂಟವ x x x x x x ಕೂರಿಸುವೆ
ಕೂಠಣಿ ಯಾರು ಹೇಳೆಂದಾ೧೮

ರಾಯನಾಡಿದ ಮಾತ ಕೇಳುತ ಗಣಪಾಯಿ
ಬಾಯಿಬಿಟ್ಟಳು ನಡುಗುತಲಿ
ಜಿಯಾ ಚಿತ್ತೈಸಯ್ಯ ಬಿನ್ನಹ ಮಾಡುಎ
ಬಾಯಿಗೆ x x x x x x       ೧೯

ರಾಯ ನೀನಿಲ್ಲದೆ ಆರುಸೇರರು
ವಾಯಕದಪರಾಧವಿಂದೂ
ಮಾಯದ ಮಾರಿಯು ಸವತಿ ಹೆಗ್ಗಡಗಿತ್ತಿ
ದಾಯಿಗರಾಗಿ ಮಾಡಿದರೂ೨೦

ಶ್ರೀಗುರುಲಿಂಗ x x x x ಮನುವನು
ನಾಗಭೂಷಣ ಬಲ್ಲರಾಯಾ
ಈಗಿಲ್ಲಿ ಬರಹೇಳಿ ಮಾತಿಲ್ಲದನ್ನಕ
ಹೋಗೆ ಬಾಹುರು ಹೇಳಲಾ೨೧

ಮಾತಾಡಿ ಬರಹೇಳಿ ಕರಸಿದೆ x x x
ಮಾತಾಪಿತರ ಕೊಂಡಾಡುವಳು
ಯೇತಕೆ ಬಾಯನು ಕಟ್ಟುವೆ ಗಣಪಿನಿ
ಮಾತು ತೊತ್ತಿರ ಕೈಯ್ಯ ಕರಸಿ         ೨೨

ತೊತ್ತಿರ ಕೈಯಲು ಕರೆಸಿದನಾದರೆ
ಮತ್ತೆ ಸೂರಳ ಕೇಳು ರಾಯ
ನಿತ್ಯ ಹುಳುವಿನ ಕೊಂಡದಲಿಕ್ಕುಯೆ
ಮೃತ್ಯುಂಜಯನು ತಾ ಕೊಲ್ಲಲಿ      ೨೩

ಹೆಂಗುಸು ರೂಪಿಲಿ ಕರಕೊಂಬಿರಿ ನೀವು
ತಿಂಗಳ ಕತ್ತಲೆಯೊಳಗೆ
ಭಂಗಿಸಿನು x x ನಂಜುವೆನೆಲೆ ರಾಯ
ಗಂಗಾರಮಣ ಭಲಾ           ೨೪

ಉತ್ತಮ ಸತ್ಯವ ನುಡಿದ ಗಣಪಾಯಿ
ಮತ್ತಾರು ಕುರುಳ ಕೊಯ್ದವರೂ
ಸತ್ತವರು ಮರದೂರ x x x ರುಸಲಿ
ಚಿತ್ತೈಸೊಡಂಬಿಟ್ಟುದಿಲ್ಲಾ            ೨೫

ಹೆಂಡತಿ ಹೆಡೆ x x x x x x x x x x
ಕಂಡೆನು ಗಣಪಿ ನಿನ್ನಲ್ಲಿ
ಮಂಡಲ ಪತಿಕೇಳು ಪರಪುರುಷರು ತನ್ನ
ಗಂಡ x x ದರವು ಶ್ರೀಗುರುವೇ         ೨೬

ಶ್ರೀಗುರುನೊದರಲೆಂದೆಲೆ ಗಣಪಿನಿ
ನೀಗ ನಮ್ಮಯ ಮಾತು ಹುಸಿಯೆ
ನಾಗಭೂಷಣ ಮೆಚ್ಚದಿಬ್ಬೆಯ ತುಡುಕುವೆ
ಆಗ ತಪ್ಪಲಿರಿಸೂ೨೭

ಮುಂಗೈಯ ಕಂಕಣಕೆ ಕನ್ನಡಿ
ಕುಂಗ ಕುಚದ ತೋಳ ಮೇಲೆ
ಅಂಗದ ನಖರೇಖೆಯು ಮೈಯೊಳಗಿದ್ದು
ಭಂಗವಿಲ್ಲದ ಬಾಯನೊ    ೨೮

ಹೇಡಿಗೊಳ್ಳದೆ ರಾಯ ಸರ್ಪನ ತುಡುಕುವೆ
ಕೂಡಿದ ವಿಷಗಳ ಕುಡಿವೆ
ಮಾಡುವೆ ಉರಿಗಿಚ್ಚ ಹೊಕ್ಕು ಸತ್ಯವ ರಾಯ
ಆಡಲಮ್ಮೆನು ಅತಿಮಾತಾ  ೨೯

ನಾರಿಯರೆಂಬರನಾರು ನಂಬುವರು
ಧಾರುಣಿಯೊಳು ಕೇಳಲಾಗಾ
ಮಾರಿಯ ಬಾಯನು ಕಟ್ಟಿಯೆ ನುಡಿದಿರಿ
ವೋರಂತೆ ದೃಷ್ಟಗಳಿದ್ದೂ  ೩೦

ಮಡಿದ ಹೊಸ ಹೂವ ಬಾಡಿದವಾದರೆ
ಓಡಿದರೆ ಕೆಂಡಕಂಜಿ
ನೋಡು ನೊಸಲತಿಲಕವ ಮನುಳಿಸಿತಾದರೆ
ಕೂಡಿಯಿರಿಸುವಿರಿ ರಾಯಾ  ೩೧

x x ವಳು ಮಾಯಾರಾಣಿಯ ನಿವಳತಿ
ಸಾಧಿಸಿ ಕೊಟ್ಟ ಪುರಾತ
ವಾದಿಸದೆ ಹೇಳು ಕುರುಳ ಕೊಯ್ಯದವರನು
ಖೇದಿಸಿ ಕೊಲಿಸುವೆನವರಾ೩೨

ಪರ ಪುರುಷರಿಗಾನು ಕುರುಳ ಕೊಟ್ಟವಳೆಂದು
ಪರೀಕ್ಷಿಸದೆ ಕೊಲ್ಲಬೇಡಾ
ಪುರಹರ ಬಲ್ಲನು ಅರಿದೀಗ ಕೊಟ್ಟರೆ
ಧರಣೀಶ ನಿನ್ನ ಮೇಲಾಣೆ   ೩೩

ತಿರುಗುವ ಪಹರಿಯ ಕಾವಲ ಕಳಿದಿಲ್ಲಿ
ಬರಲರಿಯರು ನರರಿಲ್ಲಿ
ಸುರಲೋಕ ನರಲೋಕಕ್ಕೆಲ್ಲವೊಡೆಯನು
ಹರನಾಗಬೇಕು ಬಂದವನೂ ೩೪

ಇಬ್ಬರು ಹೆಂಡಿರ ಗುಣಲಿಲ್ಲೆಂದು ಹರ
ನೊಬ್ಬನೆ ಬಂದನು ಕಳಲೂ
ಉಬ್ಬಿನೀಶ್ವರ ಹರ ಕಳ್ಳನೆನುತಲಿಹೆ
ಕೊಬ್ಬಿ ನುಡಿದೆ ಬಾಯಿ ಹುಳಿಯೆ      ೩೫

ಹ(ರಣ)ಮಾಡಿ ನಮ್ಮ ಹುಚ್ಚರ ಮಾಡಿ
ಮರಳಿ ಮರಳಿ ಬಾಯಕಟ್ಟಿ
ಹಿರಿದಾ ಮರುಳಾಟ ನಮ್ಮೊಡನೆನನುತಲು
ಕರತರಿಸುತಲಿದ್ದ ಸತಿಯಾ  ೩೬

(ಸತಿ) ನಂಬಿಯೆ ಹತವಾಯಿತು ಕೆಲವರು
ಪೃಥ್ವಿಯೊಳಗೆ ಕೇಳಲಾಗಾ
ಮತಿವಂತ ಶ್ರೀರಾಮರಭಿಮಾನ ಹೋಯಿತು
ಅತಿ ಚೆಲುವೆಯು ಸೀತೆಯಿಂದಾ         ೩೭

x x x x x x ಮೃತ್ಯುಂವೆಂಬುವ ನಿಂದು
ಕಂಡೆನು ಗಣಪಿ ನಿನ್ನಲ್ಲಿ
ಮಂಡಲಪತಿ ವಿಕ್ರಮಾದಿತ್ಯರಾಯನ
ಮಂಡೆಯು ಬೋಳಾಯಿತೆಂದೂ        ೩೮

ರಾಯನು ತನ್ನಯ ರಾಣಿವಾಸದಲೆ
ನೊಯ ನುಡಿದು ಕರತರಿಸೆ
ಬಾಯಿಗೇಳುತ ಹರ ಹೊರಗಿದ್ದುನಗುತಲು
ಆಯಿತೆ ಹರಿಯೆ ಕೇಳೆಂದಾ   ೩೯

ಗಲ್ಲದ ಮೇಲೆಲ್ಲ ನಖರೇಖೆ ಮೂಡಿದೆ
x x x x ಮೈಯ್ಯಲು ಕುರುಹಾ
ನಿಲ್ಲಬಾರದು ರಾಯ ಹುಯ್ಯಲು ಬಂದಾನು
ಇಲ್ಲಿಂದ ಹೋಗುವ ಹರಿಯೆ           ೪೦

ಹತ್ತೆಂಟು ಬಾಗಿಲ ಬಿಯ್ಯಗ x x x
ಹೊತ್ತು ಹೋಯಿತೆಂದು ಮುರಿದಾ
ಕತ್ತಲೆಯೊಳು ಹಿಂದೆ ಹುಯ್ಯಲನಾಲಿಸು
ಅತ್ತನಡದ ಹರ ಬೇಗಾ       ೪೧

ಗಣಪತಿರಾಯನ ಮನೆಯ ಭಂಡಾರ
x x x x ಗಳ್ಳನಾಗಿ ಕದ್ದೂ
ಕ್ಷಣದೊಳಗೆಚ್ಚರಿ ಹೋಗುಲಿದ್ದೇವೆ
ಅಣಕವಲ್ಲ ಸಾರಿದೆವೂ      ೪೨

ಸೂಳೆಗೇರಿಯ ಕಾವ ತಳವಾರರೆಲ್ಲರ
ಕೊಳ ಕಿಕ್ಕಿ ಕೀಲಪೆಟ್ಟಿ
ಮೇಳೈಸಿ x x x x x x ಶೂಲವನೇರಿಸಿ
ಬಾಳೈಸಿ ಹರಬೇಗ ನಡದಾ  ೪೩

ಹೆಬ್ಬಾಗಿಲ ಮದಸೊಕ್ಕಿದಾನೆಗಳನು
ಕಬ್ಬಿಣ ಸರಪಳಿ x x x x
ಸರ್ಪಕಾವಲ ಮಂದಿ ಮಲಗಿರೆ ಕಟ್ಟಿದ
ರಿಬ್ಬರೊಂದಾಗಿ ಮುಂದಲೆಯಾ        ೪೪

ಅವರವರೊಂದಾಗಿ ಎಡಗೈಯ್ಯ ಕಟ್ಟಿಯೆ
ಅವರ ಕೈದುವ ಮೆಟ್ಟಿ ಮುರಿದೂ
x x x x ವೋರುಗಲ್ಲೊಳಗೆಲ್ಲ
ಶಿವನು ನಗುತ ಹೋಗುತ್ತಿದ್ದಾ        ೪೫

ತಂಬಟ ಗಿಡಬಿಡಿ ಚೆಂಬಕವರೆಗಳು
ಎಂಬ ವಾದ್ಯವನೆಲ್ಲ ಹರಿದೂ
ಬೊಂಬುಳಿ ಹೆಗ್ಗಾಳೆ ಕೊಳಲ x x ಯ
ಶಂಭು ಹೊಡೆದು ಪುಡಿಮಾಡಿ           ೪೬

ಕೊಂಬು ಕೊಳಲು ಚಿನ್ನಗಾಳೆಗಳೊಳಗೆಲ್ಲ
ತುಂಬಿಗಿಡಿದು ಸಗಣಿಯನೂ
ಸಂಭ್ರಮಿಸುತ ವೋರುಗಲ್ಲ ಪಟ್ಟವ x
x x x ಹೊರವಂಟ ನಗುತಾ೪೭

ಇತ್ತಲು ಗಣಪತಿರಾಯನು ಸತಿಯರ
ಮತ್ತೆ ಕೋಪಿಸುತಲಿಂತೆಂದಾ
ಉತ್ತಮವಾಗಿರ್ದ ಕಂಠಮಾಲೆಯ ಸರ
ವಿತ್ತು ಕಳುಹಬೇಕೆ ಗಣಪಿ    ೪೮

ತೊಟ್ಟಿದ್ದ ಬಂಗಾರ ಉಟ್ಟಿದ್ದ ಸೀರೆಯ
ಕಟ್ಟಿದ್ದ ಮುತ್ತಿನ ಸರವಾ
ಕೊಟ್ಟು ಕಳುಹಲೇಕೆ ಮೋಹಗಳಿಂದಲು
ಯಿಟ್ಟಯಲಿಡಿಸುವೆ ಗಣಪಿ೪೯

ಪೃಥ್ವಿಗೆ ಬೆಲೆಯಿಲ್ಲ ಮುತ್ತಿನ ಮೂಗುತಿ
ಯಿತ್ತು ಕಳಹ ಬೇಕೆ ಗಣಪಿ
ನತ್ತುಯಿದ್ದಗೆ ಮೈಯ್ಯ ಬಂಗಾರ ತೆಗೆವಾಗ
ತೊತ್ತಿನ ಮಗಳೆ ಹೇಳೆಂದಾ  ೫೦

ಅರಿರಾಯರ ಕೈಯ್ಯ ಕಪ್ಪವನಿ ಬೇರೆ
ತರಲು ಹೋದುದಿಲ್ಲವೈಸೆ
ಇರುಳು ಉಪ್ಪವಡಿಸಿ ಮನೆದೊಳು ನೀನಿದ್ದೆ
ತರುಣಿಯರೊಳು ಕೋಪ ಬೇಡಾ      ೫೧

ಇನ್ನಿರಬಾರದು ಸುಮ್ಮನೆಯೆನುತಲು
ಚೆನ್ನಿಗಿತ್ತಿಯು ಗಣಪಾಯಿ
ನಿನ್ನಮೈಯ ಬಂಗಾರವ ನೀ ತೋರು
ನನ್ನ ಕೊಲಲು ಬೇಡ ರಾಯ            ೫೨

ಹೆದರಿ ನೋಡಿದ ರಾಯ ತನ್ನಯ ಪದಕವ
ಕೆದರುವ ಕಡುಗೋಪದಿಂದಾ
ಅದು ಮೊದಲಾಗಿದ್ದ ಬಂಗಾರ ಹೋಗಿರೆ
ಇದು ಹೊಸ ಪರಿ ಕಳವೆಂದಾ            ೫೩

ಹಾವುಗೆ ಹಡಪ ಕಾಳಾಂಜಿಯ ಊಳಿಗ
ಭಾವೆಯರೆಲ್ಲ ಸಂದಣಿಸಿ
ದೀವಿಗೆ ಹಿಡಿದವು ಸಲ ಬೊಂಬಾಳದ
ತಾವು ಕೈಗೊಟ್ಟು x x ಕೆಳದಿಯರೂ              ೫೪

ಊಳಿಗದವರಲ್ಲಿ ಉಘುಡಿಸುತಬಾರೆ
ಕೇಳುತ ರಾಯ ಕೋಪಿಸುತಾ
ಸೀಳಿಯೆ ಕೋಪಿಸುತಾ
ಸೀಳಿಯೆ ಕೊರಿಸುವೆ ತಳವಾರನೆಂದೂ
ಯೇಳುತ ಬಂದ (ರಾಯಾ)  ೫೫

ಅರಮನೆಯೊಳಗತಿ ಅಬ್ಬರವಾಗಲು
ಪರಿವಾರವೆಚ್ಚಿತ್ತು ಕೇಳಿ
ಮುರಿದು ಮುಂದಲೆಗಟ್ಟಿಯಿಬ್ಬರೊಂದಾಗಿರೆ
ಹೊರಳುತ ಕೈದುವನರಸಿ    ೫೬

ಬೊಬ್ಬೆಯು x x x ಬ್ಬರವಾಗಲು
ಹೆಬ್ಬರೆ ವೋಡದಿರೆ ಕಂಡೂ
ಟೆಬ್ಬರಿಸುತವೆಲ್ಲ ಕಂಗೆಟ್ಟರಾಗಲು
ಬೆಬ್ಬಳಗೊಳುತಲು ನಾಚಿ   ೫೭

ಕೊಂಬನೂದವರನು ವಾಗುತ x x
x x x x ಗಡಿಗಿಡಿದಿರಲೂ
ಬೊಂಬಳಿ ಚಿನ್ನಗಳೊಡದಿರೆ ನಾಚುತ
ತುಂಬಿದರು ಕಣ್ಣ ನೀರಾ     ೫೮

ಬೊಗ್ಗಿನ ಹರೆಗಳು ಸನ್ನೆ ತಮ್ಮಟಿಗಳು
ನುಗ್ಗು ನೂರಾಗಿರೆ ಕಂಡೂ
ಒಗ್ಗೂಡೆಯಲ್ಲ ಭಂಗಿತರಾದರು
ಕಣ್ಣಾಲೆಗಳಾದಂತೆ            ೫೯

ಅರಿರಾಯಟ್ಟಿದ ಬಿರುದಿನ ಕಳ್ಳರು
ಪರದೇಶದಿಂದಲು ಬಂದೂ
ಅರಸಿನ ಮನಯೊಳು ದಳದುಳ ಹೊಕ್ಕರು
ಪರಿವಾರ ಕೆಟ್ಟೆವೆಂದೆನುತಾ  ೬೦

ಅರಸಾಗ ಕರೆಸಿದನೈವರು ಮಂತ್ರಿಯ
ಕರಸಿದ ಪಹರಿಯ ಹೆಣ್ಣೂ
ಪರಿತಂದು ಸಮ್ಮುಖವಾದರು ಹೆದರುತ
ಹಿರಿಯ ಹೆಗ್ಗಡೆಗಿತ್ತಿಯರೂ೬೧

ಹಿರಿದಾ ದುಗುಡದ ರಾಯನ ಕಾಣುತ
ಕರಗಳ ಮುಗಿದು ಮಂತ್ರಿಗಳೂ
ಪರಿವಾರ ಬಿನ್ನಹ ಮಾಡುತಲಿದೆ ರಾಯ
ಇರುವೆನು ದುಗುಡ ಚಿತ್ತೈಸೂ          ೬೨

ನಿಂದು ಬಿನ್ನಹ ಮಾಡೆ ಹೆಗ್ಗಡೆಗಿತ್ತಿಯು
ಬಂದು ಹೊಕ್ಕವರು ಕಳ್ಳರಲ್ಲಾ
ಒಂದನು ಮುಟ್ಟರು ಒಡೆವೆ ವಸ್ತುಗಳನು
ಇಂದಿದು ಹೊಸತಲ್ಲರಾಯಾ          ೬೩

ಎಂದ ಮಾತಿಗೆ ರಾಯನುಗ್ರಕೋಪದಿ
ಹಿಂದೆ ಮಂತ್ರಿಯ ಮೊಗ ನೋಡಿ
ಇಂದಿಗೆ ಹೋಯಿತು ನಿನ್ನಿಂದಭಿಮಾನ
ಎಂದು ಕೋಪಿಸುತಿದ್ದ ರಾಯಾ        ೬೪

ಆಡಿದ ನುಡಿಗಳಲ್ಲಿ ಉತ್ತರಗಾಣದೆ
ಬೇಡಿಗೊಳುತ ಮಂತ್ರಿಗಳೂ
ನೋಡು ನಮ್ಮಲಿರಾಯ ಅಪರಾಧವುಳ್ಳರೆ
ಈಡಾಡಿಸಾನೆ ನಮ್ಮಾ        ೬೫

ಕರದು ತೋರಿಸಿದರು ತಳವಾರಿಗಾಗ
ಅರಮನೆಯೊಳಗೆ ಕನ್ನವನೂ
ಕರಿಸಯ್ಯ ಕಳ್ಳರ ನಿನ್ನಯ ಮಾತಲಿದು
ಅರಿಸುವೆ ಕೈಕಾಲ ನಿನ್ನಾ     ೬೬

ಹೋಯಿತು ತನ್ನಯ ತಲೆಯೆಂದು ತಳವಾರ
ಬಾಯ ಬಿಡುತ ನಡೆತಂದಾ
ದಾಯದಿನ್ನಾವುದುಯೆನುತಲು ಕಂಡನು
ರಾಯನ ಮನೆಯ ಕನ್ನವನೂ           ೬೭

ಕನ್ನದ ಬಾಯಲು ಚೆಲ್ಲಿದ ಮುತ್ತನು
ಚೆನ್ನಾಗಿ ತಳವಾರ ಕಂಡಾ
ಮುನ್ನವೆ ಭಾಷೆಯ ಕೊಟ್ಟು ಬಂದಲಿವರು
ಇನ್ನೀ ನಾಡವರಲ್ಲಾ         ೬೮

ಹಿಡಿದ ಕೈದೀವಿಗೆ ಬೆಳಗಿಂದ ಹೆಜ್ಜೆಯ
ಅಡಿವೆಜ್ಜೆ ಅಳೆದು ನೋಡುತಲೂ
ನಡಿದು ಬರುತ ಕಂಡಗೊಲ್ಲರ ಬಾಗಿಲ
ನಡುವೆ ಬಿದ್ದಿದ್ದ ಕಂಕಣವಾ            ೬೯

ತಂದು ತೋರಿದರಾಯ ಗಂಡುಗೆ ಕಂಕಣ
ಮಂದಿಯನಿರಿಸಿ ಬಾಗಿಲಲಿ
ಮುಂದಣ ಬಾಗಿಲು ಚೋರಕಂಡಿಗಳನು
ಒಂದನ ತೆಗೆಯ ಬೇಡೆಂದಾ  ೭೦

ಪರದೇಶದಿಂದಲು ಬಂದಕಳ್ಳರು ಅಲ್ಲ
ಇರಿಸು ಕಾವಲದಾರಿಗೆನುತಾ
ಅರಸು ಕಳುಹಿದ ತಳವಾರ ಬಂದಾಗ
ಅರಸುತ್ತಿದ್ದರು ಹೆಜ್ಜೆಗಳನೂ         ೭೧

ನಡೆದು ಬರುತ ಕಂಡರೊಡದಿದ್ದ ಹರೆಗಳ
ಮುರಿದು ಮಾಡಿದ ಕೈದುಗಳನೂ
ಬಿಡದಡಿವಜ್ಜೆಯರಸುತ ಕಂಡರು
ಕಡಗ ಹೊನ್ನ ಬಳೆಗಳನೂ   ೭೨

ತಳವಾರ ಕಳುಹಿದ ರಾಯನ ಬಳಿಗಾಗ
ಕಳುಹಿನ ಕಂಕಣವೆನುತಾ
ಬಳಲುತ ರಾಯಗೆ ಕರು(ದು)  ತೋರಿಸಿದರು
ಮೆರೆವ ರತ್ನದ ಕಂಕಣವಾ   ೭೩

ಹರಿದರು ಹರೆಗಳ ಮುರಿದರು ಕೈದುವ
ತಳವಾರ ಪಹರಿಯ ಮಂದಿಗಳಾ
ಕುರುಹಾಗಿ ಮುಂದಲೆ ಎಡಗೈಯ್ಯ ಕಟ್ಟುತ
ಒರಲುತ ಹೋದರು ರಾಯಾ           ೭೪

ಬಾಗಿಲ ಬೀಗವ ಮುರಿದು ಈಡಾಡುತ
ಹೋಗುತಲಿದ್ದರು ರಾಯಾ
ಮೂಗು ಹೋದಂತೆಲ್ಲ ನಾಚುತ ಪರಿವಾರ
ಹೀಗೆ ಭಂಗವಿಟ್ಟ ನಾವೂ    ೭೫

ಮೌನಗೊಂಡಿದ್ದನು ಗಣಪತಿರಾಯನು
ತಾನು ಮೂಗಿಲಿ ಬೆರಳಿಟ್ಟೂ
ಹೀನವಾಯಿತು ಅಪಮಾನ ಹೋದವುಯಂದು
ತಾನು ಚಿಂತಿಸುತ್ತಿದ್ದಾ ರಾಯಾ        ೭೬

ಹಿಡಿವ ಕೈದುವು ಹೋಗಿ ನಗೆಗೆಡೆಯಾದವು
ಪೊಡವಿ ಪಾಲಕರೊಳೆಂದೆನುತಾ
ನುಡಿದು ಹೇಳು ಕಳ್ಳರೆ ಸಾಕೆನುತಲು
ದುಗುಡವಡ(ಗ)ಲಿ ರಾಯ ಕೇಳಾ       ೭೭

ಬಲ್ಲಿದರೆರಡಾಳ ಹೆಜ್ಜೆಗಳಲ್ಲದೆ
ಇಲ್ಲವಯ್ಯ ಬೆರಳೂ
ಎಲ್ಲಿ ಹೊಕ್ಕರೆ ಹೊಕ್ಕು ಹಿಡಿತಂದು ಶೂಲಕೆ
ಅಲ್ಲಿಯೆ ನೆಳಸುವೆನೆಂದಾ   ೭೮

ಅರಿರಾಯರಟ್ಟಿದ ಬಿರುದಿನ ಕಳ್ಳರು
ಧರೆಗಿಳಿವರು ಕಳ್ಳರೆನುತಾ
ತರಲು ಅಟ್ಟಿದರೆಮ್ಮಖಂಡೆಯ ಕಠಾರವ
ಹಿರಿದು ವಾಸೆಗಳೆಂದ ರಾಯಾ           ೭೯

ಕಟ್ಟಾಳುಗಳಾಗಿ ಹೊಕ್ಕ ಕಳ್ಳರಿಗೆ
ಮುಟ್ಟಿ ಹಿಡಿದು ತಾರದಿರಲೂ
ಹುಟ್ಟೆನು ತನ್ನಯ ತಂದೆ ರುದ್ರರಾಯಗೆ
ಹುಟ್ಟಿದೆ ಹಾದರಕೆಂದಾ     ೮೦

ಹಸಿದ ಹೆಬ್ಬಲಿಯೆಂತೆ ವಸಿ x x x x x x
ಹೊಸ ಹಾವಿನ ರೋಷದಂತೆ
ಹೊಸದನು ಕುಡಿಮೀಸೆ ಕಿಡಿಗಳನುಗುಳಲು
ಮಸೆದ ಖಡ್ಗ ಝಳಪಿಸುತಲಿ           ೮೧

ಹೋಗಬಾರದು ಅಪಮಾನಗಳೆನುತಲು
ಈಗ ಹುಯ್ಯಲ ಹೋಹೆನೆನುತಾ
ಬೇಗನೆ (ತನ್ನಿರಿ) ಆನೆ ಕುದುರೆಯ ನೆಂದು
ಆಗ ಮಂತ್ರಿಗೆ ರಾಯ ಹೇಳೆ  ೮೨

ಕಟ್ಟುಗ್ರಕೋಪದಲರಸು ಮಂತ್ರಿಗಳನು
ನಿಷ್ಟೂರದಿಂದ ಕೋಪಿಸುತಾ
ದಟ್ಟಡಿಯಿಟ್ಟನು ಕಳ್ಳರ ತಹನೆಂದು
ಮುಟ್ಟಿ ಹೊಡೆಯ ಸನ್ನೆಡೋಳು      ೮೩

ಡೋಳು ನಿಸ್ಸಾಳವು ಸನ್ನೆದಂಬಟ ರವ
ಮೇಳೈಸಿ ಗಿಡಿಬಿಡಿ ಹೊಡೆಯೆ
ಕೇಳಿ ಮನ್ನೆಯರೆಲ್ಲ ಗೊಳ್ಳೆಯದೆಗದರು
ಘೀಳಿಡೆ ಧರೆಯ ದಿಗ್ಗಜವೂ೮೪

ಹಿಡಿದ ಬಿಲ್ಲನು ತಾರದಿರಿಸಿ ಕೆಟ್ಟಿವುಯೆಂದು
ನಡುಗುತ ನುಡಿದನು ಹರನೂ
ಒಡನಿಬ್ಬರೊಂದಾಗಿ ಹೋದರೆ ಕೆಡುವೆವು
ಕಡೆಗೆ ಸಿಡಿದು ನಡೆ ಹರಿಯೇ೮೫

ನಾನೊಬ್ಬನಿದ್ದಿಯೆ ಸಿಕ್ಕಿದೆನಾದರೆ
ನೀನು ಓಡಿಹೋಗು ಹರಿಯೆ
ಹೀನವಾಗದ ಹಾಗೆ ಕೈಲಾಸಕೆ ಹೋಗಿ
ನೀನು ಹುಯ್ಯಲ ಕೊಡು ಹರಿಯೆ      ೮೬

ಜೀವದಯಾಪರಕಾಯ ನೀನೆಲ್ಲರ
ಆವ ಮಾತುಗಳಾಡ ಬೇಡಾ
ಸಾವುಬಂದು ನಮ್ಮ ಹಿಡಿದರು ಸಾಯಾದಲೆ
ನಾವು ತೋರುವ ಕಯ್ಯಯ್ಯ ಗುಣವಾ            ೮೭

ಅಟ್ಟಿಬಂದು ನಮ್ಮ ಅರಸಿನ ಬಂಟರು
ಕಟ್ಟಿದಿರಲು ಕಾಂಬಂತೆ
ನಿಟ್ಟೋಡಿದಲೋಡಿ ಗವಚೆರನೆ ಹೊಕ್ಕು
ನಿಷ್ಠೆಯ ಮಾಡುವನವರಾ  ೮೮

ಬಾಡಿತು ನೈದಿಲು ಓಡಿತು ತಮವೆಲ್ಲ
ಮೂಡಿ ಪಂಚ ಜವರಳಿದವೂ
ಕೂಡಿದವಾ ತುಂಬಿ ಝಂಕಾರವರೆಗಳು
ಪಾಡುತಿದ್ದವು ಕೊಕ ಮಿಥುನಾ         ೮೯

ಕತ್ತಲೆ ಹರಿಯಿತು ನಕ್ಷತ್ರವಡಿಗಿತು
ಸುತ್ತ ಜಕ್ಕವಕ್ಕಿ ನಲಿಯೆ
ಪೃಥುವಿಯ ಜನರೆಲ್ಲ ಹರುಷಿತರಾದರು
ಪ್ರತ್ಯಕ್ಷ ರವಿ ಮೂಡಿದನೂ  ೯೦

ಇರುಳು ಚಾವಡಿಯೊಳು ಗಣಪತಿರಾಯನು
ಕರಸಿದ ತನ್ನ ಮಂತ್ರಿಗಳಾ
ನೆರದಿ ಸೇನೆಯ ಹೆಜ್ಜೆ ಹೋಗುವ ಸಂಧಿಯ
ಪದ ತೊಂಬತ್ತೊಂದನು ಕೇಳಿ           ೯೧

ಅಂತು ಸಂಧಿ ೧೨ಕ್ಕಂ ಪದ ೯೦೫ಕ್ಕಂ
ಮಂಗಳ ಮಹಾಶ್ರೀ ಶ್ರೀ ಶ್ರೀ