ಸಂಧಿ೧೫

ಓರಗಲ್ಲ ರುದ್ರರಾಯನವರ ಸುತ
ವೀರಪ್ರತಾಪ ಭೂಪಾಲಾ
ಸೂರಿಯ ವಂಶದ ಗಣಪತಿರಾಯನು
ಓರಂತೆ ಗವುಚೆರ ಮುತ್ತೇ    ೧

ಚೆಂಬಕನ ಹರೆಡಕ್ಕೆಯು ಡಮರುಗ
ಬೊಂಬಳಿ ಗೋಮುಖದವುಡೆ
ಕೊಂಬು ಉಕ್ಕಡ ಕಾಳೆ ಕಾಯಗಿಡಿಬಿಡಿ ಭೇರಿ
ತಂಮಟ ತುಡುಮಿನಬ್ಬರವೂ          ೨

ಢಕ್ಕೆ ಪರಿಯ ಢಕ್ಕೆ ಬಿರುದಿನ ಕಾಳೆಯ
ಹೊಕ್ಕಳ ಧ್ವನಿಯ ನಿಸ್ಸಾಳ
ಇಕ್ಕಿದ ದಾಳಿಯ ಗಣಪತಿರಾಯನು
ಹೊಕ್ಕನು ಗವಚೆರಪುರವಾ೩

ಅಸುರ ವಂಶದ ಲಕ್ಕ ಕುದುರೆಯ ನಗರ
ಹೆಸರೆನಿಸಿದ ಮಲ್ಲುಕಾರಾ
ವಸುಧೀಶ ಗಣಪತಿರಾಯನು ಗವಚೆರ
ದೆಸೆಗಿರಿಸಿದ ಕಾವಲಾಗೀ      ೪

ಬೊಬ್ಬೆಯಬ್ಬರಗೇಳಿ ದಿಗ್ಗಜ ಬೆದರಲು
ಹುಬ್ಬೇರಿ ನೆಲನೋಡುವಂತೆ
ಇಬ್ಬರ ಹೆಜ್ಜೆಯ ತಂದು ಹಾಕಿದರಾಗ
ಕೊಬ್ಬಿದರು ಕಳ್ಳರೆನುತಾ    ೫

ಕಂಡರು ಪದಕವ ಹೆಜ್ಜೆಯ ನೆಡಸುತ
ಕೊಂಡು ಬಂದರು ಬೊಬ್ಬಿಡುತಾ
ಗಂಡು ಗೆಲವುತ ಗೆಲವಿನುತ್ಸವದಿಂದ
ಕಂಡನು ತಳವಾರನರಸಾ     ೬

ಪುರವ ಹೊಕ್ಕರು ಹೆಜ್ಜೆಗವಚೆರಪುರವನು
ಧರಣೀಶ ಎಡದ ಹೆಜ್ಜೆ
ಹಿರಿದು ಸಂತೋಷದ ಲಂಗವ ಹೇರಿದ
ಕರವ ಮುಗಿದು ತಳವಾರಾ  ೭

ಊರಹೊಕ್ಕು ಮನೆ ಮನೆಗಳನೆಲ್ಲವ
ಶೋಧಿಸಿಯೆನುತ ಕಳ್ಳರನೂ
ಸೇರಿತು ಕಾಲಾಳು ಮೇಲಾಳು ಬೀಲಾಳು
ಊರ ಸುತ್ತಲು ಅಡ್ಡಗಟ್ಟಿ೮

ಪುರದ ಮುಖ್ಯರ ಕರದಾಣಿ ಭಾರಗಳನು
ಅರಸು ಕೊಳ್ಳೆಂದ ಮಂತ್ರಿಯನು
ಕರೆತಂದು ಕಟ್ಟಿಗೆಯವರು ಪ್ರಜೆಯನಾಗಾ
ಅರಸೆಂದನು ಪುರಜನವೂ    ೯

ಕಾಣಿಕೆ ಗೊಟ್ಟು ಮೈಯಿಕ್ಕುತ ನಿಂದರು
ಕ್ಷೊಣಿಪತಿಗೆ ಪ್ರಜೆ(ಗಳು) ಬಂದೂ
ಕಾಣುತ ಕಳ್ಳರ ಕೊಡಿಯೆಂದು ಕೇಳಿದ
ಧಾರುಣೀಶ ಗಣಪತಿ(ರಾ) ಯಾ        ೧೦

ನಮ್ಮ ಮನೆಯ ಹೊಕ್ಕಕಳ್ಳರ ಹೆಜ್ಜೆಯು
ನಿಮ್ಮ ಪುರವ ಹೊಕ್ಕವೀಗಾ
ಸುಮ್ಮನೆ ಕಳ್ಳರನೊಪ್ಪಿಸಿ ಕೊಡದಿರೆ
ನಿಮ್ಮ ಹೆಜ್ಜೆಯ ಹೊರಹಾಕಿ           ೧೧

ಇಲ್ಲಿ ಗವುಚೆರೊಳು ಕಳ್ಳರುಯಿಲ್ಲೆಂದು
ಎಲ್ಲಾ ಕೊಟ್ಟರು ಆಣೆ ಭಾರವಾ
ಇಲ್ಲೀಗ ನಿಮ್ಮಯ ಪುರದೊಳಗಿರರಾಯ
ನೆಲ್ಲರ ಸೆರೆದೊಯ್ಯುವೆನೆಂದಾ         ೧೨

ಆಣೆ ಭಾರದವೊಲೆಗೊಡಲಣ್ಣ ಪ್ರಜೆ
ಕಾಣುತ ನಡುಗುತಲಂಜುತಲೂ
ಪ್ರಾಣ ವಡಗಿ ಬರಿಡಿಂಬಳಾದರು
ಸಾಣಿಗೊಡ್ಡಿದ ಅಲಗಾಗಿ    ೧೩

ಹಸಿದ ಭುಜಗನಂತೆಂದ ಸಿಂಹದ ಹಂದಿಯ
ಹೊಸ ಹಾವಿನ ರೋಷದಂತೆ
ದೆಸೆಯ ನೋಡಲು ರಾಯ ಪ್ರಜೆಯು ಕಂಗೆಡುತಿರೆ
ಎಸಗಿದನೊಬ್ಬ ಖುಲ್ಲಕನೂ           ೧೪

ಅರಸಿಗಾಣೆ ಭಾರವ ಕೊಟ್ಟು ಕೆಡಬೇಡ
ಕರೆಸೆಂದ ಗುಂಡಬೊಮ್ಮಣ್ಣನಾ
ಪರಿತಂದು ಹೊಕ್ಕರು ತಿರುಕರಾಗಿಬ್ಬರು
ಕರೆಸಿ ಕೇಳಿ ಆ ಮನೆಯಾ      ೧೫

ಕಂಡೆನವರ ಮನೆಹೊಕ್ಕುದ ಕಣ್ಣಾರೆ
ಕೊಂಡೆಯವಲ್ಲೆಂದನವನೂ
ಕೊಂಡು ತೋಳನು ಬೇಡ ಕರಸಿಕೊಂಡಿರೆಂದು
ದಂಡನಾಥನು ಮಂತ್ರಿಯೆಂದಾ          ೧೬

ಬಿರುದಿನ ಭಕ್ತಿಯ ಚಲಿಗಳವರು ಜಿಯ್ಯಾ
ಕರೆದಡೆಮಗೆ ಬಾಹರಲ್ಲಾ
ಉರದಲಿ ಲಿಂಗವ ಧರಿಸಿದರಲ್ಲದೆ
ಮರಳಿ ಭವಿಯು ಮನೆ ಹೋಗರು      ೧೭

ಪಟ್ಟಣಸ್ವಾಮಿ ಓರುಗ್ಲಲಿಗೆ ರಾಯ
ನೆಟ್ಟನೆ ಚಿತ್ತೈಸುವರೂ
ಸೃಷ್ಟಿಗೊಡೆಯ ನೀನೇ ಬಲ್ಲೆಯೆನುತಲು
ಬಿಟ್ಟು ಹಿಂಗಿದರಾಗ ಪ್ರಜೆಯಾ         ೧೮

ಕರೆದು ತರಿಸಿ ಗುಂಡಬೊಮ್ಮಯ್ಯರ
ಅರಸು ಮಂತ್ರಿಗೆ ಹೇಳಲಾಗಿ
ಹರಿದು ಹೋದರು ಕಟ್ಟಿಗೆಕಾರರು
ಕರದರು ರಾಯನ ಬಳಿಗೆ      ೧೯

ಅಂದಾರಾಯವರೊಳು
ನಿಂದು ಮಾತಾಡದೆಯಿರಲೂ
ಹಿಂದಕೆ x x x ರಾಗ ಬೆದರುತ
ಬಂದರು ರಾಯನ ಬಳಿಗೆ     ೨೦

ರಾಯನಾಜ್ಞೆಗೆ ಬಾರರೆಮ್ಮನು ಲೆಕ್ಕಿಸ
ರಾಯ ವಡ್ಡೆಯಿಲ್ಲವೆನುತಾ
ವೀರವತಾರರು ಕಳ್ಳರ ಕೊಡರೆಂದು
ರಾಯ ಚಿತ್ತೈಸೆಂದರೂ       ೨೧

ಕಡುಗೋಪ ಕುಡಿಯಿಟ್ಟು ಗಣಪತಿರಾಯನು
ಕಡೆಗಣ್ಣ ಮಂತ್ರಿಯ ನೋಡಿ
ಕೊಡದೆ ಕಳ್ಳರ ನೀವಡಗಿಸಿಕೊಂಡರೆ ಕಡಿಸಿ
ಶೂಲಕೆ ಹಾಕಿಸುವೆನೂ        ೨೨

ಸತಿಯಾದ x x x x x x ಶೂಲಕೆ
ಅತಿವೇಗ ಹಾಕಿಸದಿರಲೂ
ಪೃಥ್ವಿಯ ಕಳವೆಲ್ಲವು ನಿಲ್ಲದುಯೆಂದು
ಹಿತವಂತ ಮಂತ್ರಿ ಬಿನೈಸೆ    ೨೩

ಗುಂಡಬೊಮ್ಮಣ್ಣನ ಹಿಡಿದು ತಹಯೆಂದು
x x x x x x ಹಲವರನೂ
ತಂಡ ತಂಡದೊಳು ಗಿಡಿಬಿಡಿ ಗಾಳೆಯ
ದಂಡು ಮುತ್ತಿತು ಬಂದು ಮನೆಯಾ   ೨೪

ಮುರಿದು ಬಿಸಾಡಿರೊ ಮುಂದಣ ಬಾಗಿಲ
ತೆರೆಯದಿದ್ದರೆ ಕದನೆನುತಾ
ಒರಲುತ x x x x x x ಅರುವತ್ತು ಸಾವಿರ
ತೆರೆಯಿಲ್ಲ ಕುದುರೆಯ ಪೌಜೂ        ೨೫

ನೆರೆದು ಮುತ್ತಿದವಾನೆ ಕುದುರೆಯ ಕಾಲಾಳು
ಹರಿಗೆ ಸಬಳದ ದಳಬಂದೂ
ಕರದು ಹೇಳಿದ ಹರ ಗುಂಡಬೊಮ್ಮಣ್ಣರ
ಹಿರಿದು ನಂಬಿಯೆ ಕೆಟ್ಟವೆಂದೂ         ೨೬

ಶ್ರೀ ಗುರಲಿಂಗವೇ ನೀವು ಅಂಜಲುಬೇಡ
ಹೋಗಾಡೆವು ಬರಿ ಮಾತಾ
ಆಗನು ಪಡವೆವು ಭಕ್ತಿಯಂಜನ ಮೆಚ್ಚಿ
ಈ x x x x x x x x x x ವೆಮಗೆ     ೨೭

ಆಡಿದರಾಚಾರ ತಪ್ಪದೇ ಲೇಸಾಗಿ
ಆಡಿಸಿ ಗುಂಡಬೊಮ್ಮಣ್ಣಾ
ನೋಡಿ ಮಾಡುವದೇನು ಕ್ಷಣಿಕ ದಿಗ್ಗಜಗಳ
ಮೇಲೆಯಿದ್ದರ ಕೇಳಿ ಗುರುವೇ         ೨೮

ಪೃಥ್ವೀಶ ಗಣಪತಿರಾಯ x x x x x x ಮ
ತತ್ತರಿದರಿಸುವ ನಿಮ್ಮಾ
ಕತ್ತಲೆಗಲಿದಾ ಮಂಜು ಪರ್ವತಗಳು
ಮುತ್ತಲು ಬೆದರದು ಗುರುವೇ         ೨೯

ಪೊಡವಿಪ ರಾಯಗೆ ಇದಿರುಂಟೆ ಗುಂಡಬೊಮ್ಮಾ
ಒಡೆದ ಮುತ್ತನು x x
ಕಡಿದುರುಂಟೆಸಿ ಸದುಳಿಯಲಿ ವಜ್ರವ
ಕೆಡಬೇಡ ನಿಮ್ಮಿಂದ ಮಗನೇ            ೩೦

ಸೂಕರ ನರಕದಿ ಹೊರಳಿದಿರಲಿ ಬಾರೆ
ಆ ಕುಂಜರ ಬೇದರವುದೇ
ಭೂಕಂಪವಾದರೆ ಕಲಗಿರಿ ಬೆದರದೆ
ಸಾಕಿದಕಂಜೆವು ಗುರುವೇ     ೩೧

ಹರನೆ ಚಿತ್ತೈಸೆಂದು ಹರಿಯು ಬಿನೈಯಿಸಿದ
ಹಿರಿದಾಶ್ವೆರಿಯಗಳೆನುತಾ
ಸರಕು ಮಾಡರು ರಾಯ ಧಾಳಿಯೆತ್ತಿದರೊಮ್ಮೆ
ಹರಭಕ್ತಿ ನೆಲೆಗೊಂಡಿತೆಂದಾ೩೨

ದೇವ ನೀವು ಮೆಚ್ಚನುಂಗದೆಯಿವರಿಗೆ
ಈವುದು ಗಣಪದಗಳನೂ
ತಾವಿಂದು ಮೆರೆವರು ಭಕ್ತಿಯ ಲೇಸಾಗಿ
ನೀವು ಮೆಚ್ಚಲೆಂದು ಹರಿಯೂ         ೩೩

ಸುತ್ತಲರಸು ಧಾಳಿ ಮುತ್ತಿತು ಮಠವನು
ಮತ್ತೊಳಗಿರ ಬಾರದೆನುತಾ
ಸತ್ಯ ತಪ್ಪದೆ ಮೆರೆಯೊಕ್ಕರ ಕಾವೆವೆಂ
ಬೊತ್ತಿಯಾದುದ ಬಿರುಗಾಳೆ            ೩೪

ಭಾವ ಮೈದುನರಿಬ್ಬರು ಬಂದರಾಗಲು
ಭೂವರ ಮಂತ್ರಿಯ ಬಳಿಗೆ
ತಾವೆಲ್ಲವೋಡಿತು ಪರಿವಾರ ಕಾಣುತ
ದೀವಸ ಮಂತ್ರಿ ತಾನುಳಿದಾ  ೩೫

ಕರೆದು ಹೇಳಿದ ಮಂತ್ರಿ ಗುಂಡಬೊಮ್ಮಣಗೆ
ಹಿರಿದ ಬುದ್ದಿಯ ನಾಗಾ
ಅರಸು ಬಂದು ಬಿಟ್ಟನಾರರವೆಯೊಳಗೀಗ
ಕರಸು ಕಳ್ಳರ ಸಾಯಬೇಡಾ೩೬

ಕದ್ದರು ರಾಯನ ಮನೆಯ ಕನ್ನವ ನಿಕ್ಕಿ
ಇದ್ದೊಡೆವೆಯ ತಂದರವರೂ
ನಿರ್ಧರಿಸಿಯೆ ಆಣೆಭಾರವ ಕೊಟ್ಟರು
ಇದ್ದವರೀ ಪುರದೊಳಗೆ      ೩೭

ನಿಮ್ಮ ಮನೆಯೊಳಿದ್ದ ಕಳ್ಳರ ತರಸಿರೈ
ನಿಮ್ಮಲ್ಲಿ ಜತನಗಳಾಗಿ
ನಿಮ್ಮ ಮನಕೆ ಸಂದೇಹಗಳಿಲ್ಲದಿರೆ
ನಮ್ಮ ರಾಯನ ಕಾಣೆಯೆಂದಾ          ೩೮

ನಮ್ಮಲ್ಲಿ ಮಠದೊಗಿಹರವರಿಬ್ಬರು
ನಮ್ಮ ಶ್ರೀಗುರು ಜಂಗಮವೂ
ನಿಮ್ಮ ಅರಸಿಗಂಜಿವೊಪ್ಪಿಸಿ ಕೊಡೆವಯ್ಯ
ನಮ್ಮ ಭಕ್ತಿಯ ಬಿರುದಗೆಡಿಸೀ          ೩೯

ಮೊರೆಯ ಹೊಕ್ಕವರನು ಕೊಡುವವರಾವಲ್ಲ
ಹೆರೆ ನೊಸಲಭವಗೆಯೊಮ್ಮೆ
ಬರಿಯ ಹೆಮ್ಮೆಯ ಮಾಡಿ ಬಿರುದಿನ ಭಕ್ತಿಗೆ
ಬೆರೆತು ಸಾಯಲು ಬೇಡವೆಂದಾ         ೪೦

ಸತ್ತರುತ್ತಮವಾಯ್ತು ಮರುಜನ್ಮವೆಮಗಿಲ್ಲ
ಮೃತ್ಯುಂಜಯನ ಕೃಪೆಯುಂಟು
ಇತ್ತು ಕರೆಯಯ್ಯ ಗುಂಡಬೊಮ್ಮಯ್ಯ ಕಳ್ಳರ
ಸತ್ತುಕಾಂಬಾ ಸ್ವರ್ಗವೇಕೇ   ೪೧

ಸ್ವರ್ಗಾದಿ ಭೋಗವು ದುಗ್ಗಾದಿ ಪತ್ಯವು
ಭಗ್ಗೊದೇವನೆ ನಮಗೆ
ಅಗ್ಗಳೆಯದ ಮಾತಾಡಿಯೇ ಗುಂಡಬೊಮ್ಮ
ಕೊಗ್ಗುದಿಯಲಿ ಕೆಡಬೇಡಾ  ೪೨

ಕೆಡುವುದು ನಮ್ಮಯ ಭವಭವ ಕೇಳಯ್ಯ
ಮೃಡನೆ ಶ್ರೀಗುರುವೆ ಜಂಗಮವೂ
ಕೊಡುವುದು ಕಳ್ಳರ ರಾಯನ ಕಾಂಬುದು
ಕೆಡಲಿಸೆ ನಂಬೆಂದ ಮಂತ್ರೀ   ೪೩

ಅನವರತವು ನಾವು ನಂಬಿಹೆವೆಲೇ ಮಂತ್ರಿ
ಮನುಮಥ ವೈರಿ ಚಿನ್ಮಯನಾ
ಮನಮುಟ್ಟಿ ನಂಬಿಕೆ ನಿಮ್ಮ ಜೀವಕೆ ತಪ್ಪೆ
ಅನುಮಾನ ಬೇಡಿನ್ನು ನಂಬೀ           ೪೪

ಶಂಭುವ ನೆರೆದರಿಂಬುಗೊಂಬನು ನಮ್ಮ
ಗಂಭೀರ ಮಂತ್ರಿ ನೀ ಕೇಳೋ
ಶಂಭುಶ್ರೀಯಂಬಕ ದೇವನು ನಮಗುಂಟೂ
ಇಂಬುಗೊಂಬವನಲ್ಲ ಕಳವಾ           ೪೫

ಕಳವು ಅನ್ಯಾಯವು ಹುಳುವಿನ ಕೊಂಡದ
ಹಳುವರೆ ಗುರಿಯ ಮಾಡುವುದೂ
ಸುಳಿದು ಸುತ್ತಿ ನೀನು ಮತ್ತೆ ಮಾಡುವದೇನು
ಹೊಳವುದಿಲ್ಲವು ಭಕ್ತಿ ಫಲಕೆ           ೪೬

ಕದ್ದ ಕಳ್ಳರಿಗಾಗಿ ಎದ್ದು ಹೊಗಲು ಬೇಡ
ರುದ್ರರಾಯನ ಸುತ್ತಲಿರಿಸೂ
ಹೊದ್ದಿದಾಪರಾಧಗಳಿಗೀಗ ಹರಿ(ವ) ವು ನಿಂ
ಮ್ಮಿಬ್ಬರ ಕೈಕಾಲು ತಲೆಯೂ          ೪೭

ಮಂತ್ರಿ ಗರ್ವದ ಸಿರಿಯಿಂದ ನಾಗರಾಜ
ಇಂಥ ಮಾತನಾಡಬೇಡಾ
ಎಂತಯ್ಯ ಕಳ್ಳರ ಕೊಡದಾಗ ಗುಂಡಬೊಮ್ಮ
ಇಂತೀಗ ನಿಮ್ಮ ಪ್ರಾಣ ಹರಿ(ವ) ವೂ  ೪೮

ದಿಂಡೆಯ ತನದಲಿ ಕದ್ದು ತರಿಸಿಕೊಂಡು
ಗಂಡು ಮಿಕ್ಕಿರಿ ನೀವೆಲ್ಲವೂ
ಕಂಡು ಬದುಕಿನ ನಮ್ಮ ರಾಯನ ಕಳ್ಳರ
ಕೊಂಡು ಬಂದೊಪ್ಪಿಸಿರೆಲವೂ          ೪೯

ಬಿರಿ ಮುಗುಳರಳು ಕಮಲದಳಂದದಿ
ಶರಣರಿಬ್ಬರು ನಸುನಗುತಾ
ಶಿರವುಳ್ಳದೊಂದಕೆ ಹಗೆ ಹತ್ತುಯಿದ್ದೆನು
ವರ ಮಂತ್ರಿ ನಾಗರಾಜ ಕೇಳೋ         ೫೦

ಬದುಕುವೆವೆಮ್ಮಯ ಗುರುಪಾಡುತ್ತಿದ್ದವ
ಸದುಕರಣಿಯ ಸವಿಕೇಳು
ಉದಕದೊಳಗಿದ್ದಾನೆಗಳು ನಂಗಿದುದಯ್ಯ
ಹದಕನೀವುಗಳದು ಕೇಳಾ     ೫೧

ಹರಿಹರ ಬ್ರಹ್ಮರು ಬಂದರೆ ಕೊಡೆವೆಮ್ಮೆ
ಬಿರಿದ ನುಂಗಿದ ಭಕ್ತಿ ನಮಗೇ
ಹಿರಿದು ಲೇಸಾಗಿಯೆ ಹಿಂದಿಕ್ಕಿಕೊಂಡೆವು
ನರಮಂತ್ರಿ ನಾಗರಾಜ ಕೇಳೊ            ೫೨

ಕಾರಣವಿಲ್ಲದೆ ಪರರಿಗೆ ಸಾವರ
ಧಾರುಣಿಯೊಳು ಕಂಡೆವೆನುತಾ
ವೀರ ಗುಂಡಬೊಮ್ಮಣ್ಣನ ಮಾತಿಗೆ
ಓರಂತೆ ಬೆರಗಾದ ಮಂತ್ರೀ   ೫೩

ನಮ್ಮ ರಾಯನ ಮನೆಹೊಕ್ಕ ಕಳ್ಳರ ನಾವು
ನಿಮ್ಮಲ್ಲಿ ಬಿಟ್ಟು ಹೋದಾಗಾ
ನಮ್ಮ ನಾಲಿಗೆ ಹಾಯಿಸಿ ಕೊಲಿಸುವರಾಯನು
ಸಮ್ಮನೆ ತೆರಳಿ ಬನ್ನಿಯೆಂದಾ           ೫೪

ಒಡನೆ ನಾವಿಬ್ಬರು ನಿಮ್ಮಡೆ ಬಂದಾಗ
ಹಿಡಿ ತಂದರೆಂಬುದು ಲೋಕ
ಒಡನೆ ಹೇಳು ನಿಮ್ಮರಾಯನ ಕೂಡೆನೆ
ನುಡಿಯಲಮ್ಮದೆ ಮಂತ್ರಿ ಮೂಢಾ    ೫೫

ರುದ್ರರಾಯನ ಸುತ ಗಣಪತಿರಾಯನು
ಗರ್ದ್ದಿಸಿದನು ಮಂತ್ರಿಗಳಾ
ಇದ್ದಲಂಚವ ಕೊಂಡವರನೊಡಿಸಿ
ಎದ್ದು ಬಂದಿರಿತ್ತಲೆಂದಾ     ೫೬

ಸೈರಿಸಿದನು ಮಂತ್ರಿ ಅರಸಿನ ಕೋಪವ
ತರಹರಿಸಿಯೆ ಕೊಳ್ಳೆಲೆನುತಾ
ಸರಿದು ಹೋಹವರಲ್ಲ ನಿಮ್ಮಾಣೆಯೆಲೆರಾಯ
ಬಿರಿದುಗಳೆ ಬರುತಹರೇ      ೫೭

ಎತ್ತಿ ಹಿಡಿದ ಸುತ್ತ ಪಲ್ಲವ ಸತ್ತಿಗೆ
ಒತ್ತಿಲಿ ದಾಳಿಪ ಚವುರಾ
ಚಿತ್ತಾರದಿಂದಲು ಹೊಗಳಪಾಠಕ ಜನ
ವೊತ್ತಿಲಿ ಕಾಳೆಯುಘಡಿಸೀ   ೫೮

ಥಳಥಳ ಮಿಂಚುವ ಗೂಳಿಯ ಹರಿಗೆಯ
ಹೊಳೆವ ಠೆಕ್ಕೆಯ ನಂದಿ(ಯ) ಮೇಲೆ
ಬಿಳಿವಿಡಿದೆತ್ತಿದ ಗಜ ಸಿಂಹದಲಗಿನ
ನೆಳಲೊಳು ಗುಂಡಬೊಮ್ಮಣ್ಣಾ       ೫೯

ಭಕ್ತರಿಗುಳ್ಳದು ನಂದಿಯ ಕಂಬವು
ಮತ್ತಾ ಹಳದಿಗೆ ಯೇಕೆ
ವಿಸ್ತಾರ ಗಜ ಸಿಂಹ ಬಿರಿದುಗಳೇಕೆಂದು
ಪೃಥ್ವೀಶ ಮಂತ್ರಿಯ ಕೇಳಾ೬೦

ಛಪನ್ನ ದೇಶದ ಹದಿನೆಂಟು ಸಮಯಕೆ
ಕರ್ತರು ಇವರೆಲೆ ರಾಯ
ದರ್ಪದಿಂದಲುಯಿವರಾರಿಗೆ ಹೆದರರು
ತಪ್ಪುವರಲ್ಲ ಸತ್ಯವನೂ    ೬೧

ಇದ್ದು ಮಾರಿಗೆ ಬಿದ್ದೂಟವನಿಕ್ಕಿಯೆ
ಬಿದ್ದಮಾರಿಯ ಹಲ್ಲ ಕಳದೂ
ನಿರ್ಧಾರವಾಗಿಯೆ ಬಂದ ಮಾರಿಯ ಬೇಗ
ಎದ್ದು ಇದಿರುಗೊಳುತಿಹರೂ          ೬೨

ಬಾರದ ಮಾರಿಗೆ ಬಳಿಯನುಟ್ಟುವರು
ಆರಿಗಾದರು ಪಟ್ಟಗಟ್ಟೀ
ವೀರ ಪ್ರತಾಪರು ಇವರಿಟ್ಟದೆ ಬೊಟ್ಟು
ಧಾರುಣಿಯೊಳು ಕೇಳುರಾಯ           ೬೩

ಕಲ್ಲಗಾಣಕೆಯಿಕ್ಕಿ ಸಿಡಿಗೆ ಹಾಕಿಸುವನೂ
ಇಲ್ಲಿದ ನೋಡಬೇಕೆಂದೂ
ಅಲ್ಲಿ ನೆರೆಯಿತೋರಗಲ್ಲ ಪಟ್ಟಣದೊಳು
ಎಲ್ಲರು ಸ್ತ್ರಿಬಾಲ ಸಹಿತಾ  ೬೪

ನೋಟಕರವರೊಳು ಯಿಕ್ಕವಲು x x x x
x x x x x x ರು ಯಿವರೆನಲೂ
ಕೂಟ ಸಾಕ್ಷಿಗಳಾಗಿ ಉಂಟ್ಟೆಲ್ಲೆನುತಲಿ
ಕೋಟಲೆಗೊಳುತಿಪ್ಪರಲ್ಲಿ  ೬೫

ಕಳ್ಳರೆಂದೆಂಬರು ಕೆಲಬರೂ ಅದರೊಳು
ಒಳ್ಳಿದರೆಂಬರು ಕೆಲರೂ
ಕಳ್ಳರ ಕೈ x x x x x x ಕೊಂಬರೆಂಬರು
ಕುಳ್ಳಿತ ನೆರದಿಯ ಜನರೂ   ೬೬

ಬಾಯಿವುಳಿವುಡು ಬರೆವರೆಂದರೆ
ನೂಯ ನುಡಿದ ಮನುಜರಿಗೆ
ಮಾಯಾರಿ ಬಲ್ಲನು ಆರು ಅರಿಯ x x x x
x x x x ರುತ್ತ ಮರಿಮ್ಮೆಟ್ಟೀ          ೬೭

ತೊಡರು ಬಾವುಲಿ ಎಡಗಾಲಲು ಪೆಂಡೆಯ
ಹಿಡಿದ ಹರಿಗೆ ಕತ್ತಿಸಹಿತಾ
ಅಡಿಯಿಡೆ ಖಡೆಯದ ಝಣಝಣರ x x
x x x ರು ದೂಸಕರೂ        ೬೮

ನಡದು ಬಂದರಾ ಮೃಡಭಕ್ತರೆಂದಾಗ
ಕಡುಗಲಿ ಗುಂಡಬೊಮ್ಮಣ್ಣರೂ
ಪೊಡವೀಶ ರಾಯ ಗಣಪತಿನೋಲಗದಿ
ದ್ದೆಡೆಗೆ ಬಂದರಾಗ            ೬೯

ಭಾವ ಮೈದುನಗಳಿಬ್ಬರು
ಜೀವದಾಸೆಗಳಿಲ್ಲವೆನುತಾ
ಭೂವರ ಗಣಪತಿರಾಯಗೆ ಕೈತಪ್ಪಿ
ನೀವಿರರು ಮಾಳ್ಪರೆನುತಾ   ೭೦

ಅರಸಿನ ಜತನಕೆ ಮೈಗಾವಲಾಳನು
ಇರಿಸಿದ ಮಂತ್ರಿ ನಾಲ್ದೆಸೆಗೇ
ನೆರೆದ ಜನರು ಕೊಂಡಾಡಿತು
ಪರಿವಾರದಳವನು ಕಂಡೂ೭೧

ಉಟ್ಟು ಕಟ್ಟಿದ ತಳಿರುಗಾವಿಯ ಕಾಸೆಯು
ಇಟ್ಟು ಸರ್ವಾಂಗದ ಭಸಿತಾ
ತೊಟ್ಟರು ದ್ರಾಕ್ಷಿಯ ತಳಪ ಕಾಂತಿಯ ದೇಹ
ದಟ್ಟಡಿಯಿಟ್ಟು ನಿಂದಿರಲೂ            ೭೨

ಕಡುಗೋಪದಿ ಕಣ್ಣಗಿಡಿಗಳ ಸೂಸುತ
ಕುಡಿಮೀಸೆ ಕುಣಿಸುವ ರುವುದ್ರದಲಿ
ಪೊಡವೀಶ ಗಣಪತಿರಾಯ ಕಾಣುತ ಮಂತ್ರಿ
ಹೊಡೆದು ಶೂಲಕೆ ಹಾಕಿಸೆಂದಾ         ೭೩

ಚಿತ್ರವಿಧಿಯ x x x x ಖಂಡ ವಿಕ್ಕಿಸಿ
ತತ್ತರದರಿದಲ್ಲದಿವರಾ
ಮತ್ತೆ ದೇಶದ ಕಳವೆಲ್ಲ ನಿಲ್ಲದುದೆಂದು
ಪೃಥ್ವೀಶರಾಯ ಕೋಪಿಸಿದಾ          ೭೪

ಬಂದಾಗ ರಾಯಗೆ ನೋಡ ಮಟ್ಟುದಿಲ್ಲೆ
x x x x x x ಕಾಣಿಕೆಯಿಕ್ಕಿರೆಲ್ಲಾ
ನಿಂದಿರ್ದರೊನೆತೆಯ ಪಾರಣಿಯಾದಂತೆ
ಒಂದೆ ಪತಿಯವಿರದಲಿ        ೭೫

ಕಾಣಿಕೆ ಮಣಿ ಪದಕೆಣಿಕಾರರು ರಾಗ
ಕಾಣಿಕೆಯಿಕ್ಕಿರೊ ಎನಲೂ
x x x ರು ಲಿಂಗಜಂಗಮಕಲ್ಲದೆ
ಕಾಣಿಕೆಯಿಲ್ಲ ಭವಿಗಳಿಗೇ    ೭೬

ಶೀಲವಂತ ಲಿಂಗೋತ್ತಮರಾದರೆ
ಲೀಲೆಯಲಿರಬೇಕು ಹರನಾ
ಲೋಕದೊಳು ನಿಮ್ಮ ನೆಮ್ಮಲುಬಹುದೆ
ನಾಲಗೆ x x x ಗುಂಡಬೊಮ್ಮಾ        ೭೭

ನಾಲಗೆ ಹರಮಂತ್ರ ಪಂಚಾಕ್ಷರಿಯನು
ಶೂಲಿಯ ಜಪಿಸುತಲಿಹುದೂ
ಶೂಲಿಯ ಜಪಿಸಿಯೆ ವರಗಳ ಪಡೆಯಿರಿ
ಭೂಲೋಕದೊಳು ಕನ್ನವಿಕ್ಕಾ          ೭೮

ವರವ ಪಡೆದವೊಮ್ಮೆ ಶ್ರೀ x x ಗದ
ಚರಣಾಮೃತವ ಸವಿವುದನೂ
ಸವಿದು ಷಡುರುಚಿಯರಿಯಿರಿ ಗುಂಡಬೊಮ್ಮ
ಕರಿಗಳಾದಿರಿ ಕಬ್ಬಹೊಕ್ಕಾ   ೭೯

ಒಚ್ಚತವಾಗಿಯೆ ಕನ್ನವಿಕ್ಕುವುದನು
ಮೆಚ್ಚಿದರತಿ ಮರುಳಾಗಿ
ಹೆಚ್ಚುಕುಂದಿನ ಮಾತು ಮಚ್ಚರಕಾಗದೆ
ಬೆಚ್ಚುವರಲ್ಲಲೆ ರಾಯಾ   ೮೦

ನಿಚ್ಚಟರಾದರೆ ಬೆದರರು ಗುಂಡಯ್ಯ
ಬೆಚ್ಚುವರನ್ಯಾಯದವರೂ
ಬೆಚ್ಚುವರಾವಲ್ಲ ಗುರುಪಾದ ತೀರ್ಥವು
ವೊಚ್ಚುತವಾಯಿತು ರಾಯಾ           ೮೧

ದೇಶದೊಳಗೆ ಕದ್ದಕಳ್ಳರ ಸಂಗವು
ಈಶನ ಶರಣರಿಗೇಕೋ
ವಾಸಿಬೇಡ ರುದ್ರಗಣಗಳು ಮೆಚ್ಚರು
ದೋಷವಾಚರಕೆ ಕೊರತೇ    ೮೨

ಖೋಡಿ ಕೊರತೆಯ ಮಾತುಗಳೆಂಬೆಲ್ಲವ
ನಾಡಬಹುದೆ ರಾಯ ನೀನೂ
ರೂಢಿಯೊಳಗೆ ಮದ್ದಕುಣಿಕೆಯ ತಿಂದಂತೆ
ಆಡಿದ ಗುಂಡಬೊಮ್ಮ ಮಾತಾ        ೮೩

ಮದ್ದ ಕಾಣಿಕೆಯೆಂಬ ಕೊರತೆಯ ಮಾತುಬೇಡ
ರುದ್ರಗೆ ಸುಲುಹುದು ಪುಷ್ಪಾ
ನಿರ್ಧಾರ ಶುದ್ಧರು ನೀವು ಹುದಳಕೆ
ಕದ್ದ ಕಳ್ಳರನೊಪ್ಪಿಸೆಂದಾ  ೮೪

ದೇಶಾಂತರ ಗುರುಲಿಂಗ ಜಂಗಮ ಬಂದು
ವಾಸವಾಗಿ ನಮ್ಮಲಿರಲೂ
ವೇಷದಿಂದ ಬಂಗಾರವ ನಿನ್ನ ಬಂಟ
ವಾಸಿಮಾಡಿ ಹಾಕಿಹೋದಾ  ೮೫

ಶೃತದೃಷ್ಟವನು ಮಾನವಂಗದ ಕಳವಿವು
ಸತಿಯರುರದ ಹಾದರವೂ
ಪೃಥ್ವಿಯೊಳಗೆ ನಮ್ಮ ಮೇಲಿಗ ಹೊತ್ತಾಗ
ಅತಿ ವೇಗ ಭಂಗಿ ತರಹೆವೂ   ೮೬

ಕದ್ದ ಕಳ್ಳರ ನೀವು ಜಂಗಮವೆಂಬಿರಿ
ಸಧ್ಯ ಫಲದಲಂಗವಿದ್ದೂ
ಬಿದ್ದಿದ್ದ ಕುರುಹಿನ ಪದಕವ ತೋರಿದ
ರುದ್ದಿಯ ಮಾತು ಬೇಡೆನುತಾ         ೮೭

ಸಾವಿರ ಕಾಲದ ಶೀಲವಂತಿಕೆ ತಾನು
ಆವರಿಸಿತು ನಿಮಗಿಂದೂ
ಇವುದು ಕಳ್ಳರ ಭಂಗಬಡಲು ಬೇಡ
ನೀವು ಬದುಕಬಲ್ಲ ಬೇಗಾ  ೮೮

ನಮ್ಮ ಶ್ರೀಗುರುಲಿಂಗ ನಮ್ಮ ಮಠದೊಳಿರೆ
ಸುಮ್ಮನೆ ಕಳ್ಳರೆನ್ನಬಹುದೇ
ಒಮ್ಮೆಗೆ ನಿಂದಿಸಿ ನುಡಿವುದರಿಂದೀಗ
ಸುಮ್ಮನೆ ಕೊಲುವುದು ಲೇಸೂ         ೮೯

ಇವರಿಗ ನ್ಯಾಯ ಮಾಡಿದೆಯಾದರೆ
ಅವನೀಶ ಕೇಳು ಪಾಪಗಳಾ
ಸವನಿಸಿಪ್ಪುದು ಮುಂದೆ ಹುಳುಗೊಂಡ ನಿನಗೆಂದು
ಶಿವನಾಣೆಯೆಂದ ಗುಂಡಯ್ಯ            ೯೦

ತಪ್ಪದೆಯೊಳಿದರನು ಕಳ್ಳರೆಂದಾಗ
ಬಪ್ಪುದು ನರಕವು ನಿಮಗೇ
ದರ್ಪದಿ ದೇಶವ ತಿಂದ ಕಳ್ಳರ ತಂದು
ಒಪ್ಪಿಸು ಸಾರಿದೆ ಕೆಡದೇ     ೯೧

ಓರುಗಲ್ಲ ರುದ್ರರಾಯನ ಸುತ ಕೇಳು
ಸೇರದು ಕಷ್ಟ ಮಾತೂ
ವಾರುಧಿ ಮಧ್ಯದ ಧಾರುಣಿಯೊಳಗೆಲ್ಲ
ಶ್ರೀಗುರು ಕಳ್ಳರೂಹರೇ      ೯೨

ನಿಮ್ಮರಮನೆಯೊಳು ಹೊಕ್ಕಕಳ್ಳರ ನೀನು
ಸುಮ್ಮನೆ ಬೆಂಬಿಟ್ಟು ಬಂದೂ
ನಮ್ಮ ಮನೆಯೊಳಿರ್ದ ಗುರುಜಂಗಮವ ಬೇಡ
ಲಿನ್ನಾವ ಮಾತಿಲ್ಲ ಕೊಡೆವು           ೯೩

ಬೇಡ ಬೇಡ ಗುಂಡಬೊಮ್ಮ ಪಂದ್ಯಣ ನಮ್ಮೊಳು
ಕೊಡು ಗರ್ವಬೇಡ ಕಳ್ಳರನೂ
ಅಡಿಗಡಿಗೆ ಕದ್ದ ಕಳ್ಳರ್ಬೇಕೆಂದು
ಸೆಡಹು ಬೇಡಿರಲೋ ಕೊಡಿರೋ       ೯೪

ಒಂದು ನಂದಿಯ ಕೊಲ ಮರೆಯಿಂದ ದೇಶವ
ನೊಂದೆ ಪರಿಯಲಿ ಕದ್ದೂ
ಇಂದು ತನಕ ಹಾಳು ಮಾಡಿದಿರಿಬ್ಬರು
ಸಂದನರಿಸುವೆ ಕೈಕಾಲಾ      ೯೫

ಎತ್ತ ಕಟ್ಟಿಸಿ ಎಳೆಹೂಟವ ಹೂಡಿಸಿ
ತತ್ತರಿದರಿಸುವೆ ನಿಮ್ಮಾ
ಮತ್ತೀ ಮಾತಿಗೆ ಹೆದರುವರಾವಲ್ಲ
ಭಕ್ತಿ ಛಲವು ಕೇಳು ರಾಯಾ  ೯೬

ಕಾದ ಕಬ್ಬುನ ಉಂಡ ನೀರಿನ ನಾದವ
ಭೇದಿಸಿ ಕಾರಿಸುವವನೂ
ಸಾಧಿಸಿ ನಿಮ್ಮಲ್ಲಿ ಕದ್ದ ಕಳ್ಳರ ಕೊಡಿ
ವಾದಿಸಿ ಕೆಡಬೇಡ ನೀವೂ     ೯೭

ಗುರು ಮೂರುತಿ ನಮ್ಮ ಜಂಗಮದೇವರ
ನರರಿಗೊಪ್ಪಿಸುವವರಲ್ಲಾ
ಅರಿ ಬಿರುದಿನ ಕಾಳೆ ಊದಿಸ ಸಲ್ಲದು
ಪುರಹರ ಮನಗಂಡು ನಗುವಾ          ೯೮

ಉಪ್ಪರ ಗುಡಿಗಟ್ಟಿ ಬಂದ ಜಂಗಮರೆಲ್ಲಿ
ತಪ್ಪದೆ ಮಾಡುವರೆಂದೂ
ಯಪ್ಪವಾ ಧರ್ಮದ ನುಡಿಯನೆ ಕೇಳಿಯೆ
ಬಪ್ಪುದುಂಟೆಯಿತ್ತ ನಾವೂ  ೯೯

ನೀವು ಬಂದರಾವಾ ಕೊರತೆಯು ನಮಗಿಲ್ಲ
ಭಾವರ ಕೊಡೆವು ಜಂಗಮವಾ
ಆವಾಗ ಗುಂಡಬೊಮ್ಮಹಿಂದಿಕ್ಕಿ ಕೊಂಡಾಗ
ಸಾವಿರಿ ಶೂಲದ ಮೇಲೆ      ೧೦೦

ಒಂದೆ ಮಾತಿನ್ನು ಹಿಂದಿಕ್ಕಿ ಕೊಂಡೆವು
ಮಂಡಲ ಪತಿರಾಯ ಕೇಳೊ
ಇಂದುಧರನು ಬಂದರಿಂದೊಪ್ಪಿಸೆವಿಲ್ಲಿ
ಬಂದ ಮಾರಿಯು ಬರಲಿ ಗುರುವಾ    ೧೦೧

ಗುರು ಶಿಷ್ಯರಿಬ್ಬರು ಹಿರಿದ ಸತ್ಯರು
ಹಿರಿಯರಿಗೀ ಕನ್ನಗಳವೇ
ಪರಿಹಾಸ್ಯದ ಮಾತನಾಡಿ ಗಣಪತಿರಾಯ
ನೊರದು ನೋಡಲು ಬೇಡನಮ್ಮಾ    ೧೦೨

ಬಂದ ಮಾರಿಯು ತಾನೊಂದು ನೂರಾದರೆ
ಒಂದು ಮುಂಡಕೆ ಶೂಲವೊಂದೇ
ಕೊಂಡುಕೋ ನಮ್ಮ ನೂಂಭತ್ತು ಶೂಲದಿ
ಇಂದೆಮ್ಮೆ ಗುರುವನೊಪ್ಪಿಸೇ          ೧೦೩

ಗಂಡುಗೆಡದೆ ನೀವು ಭಾಷೆಯ ಕೊಡಬೇಡ
ದಿಂಡೆಯ ತನುಗಳ ಮಾಡೀ
ಚಂಡಿಯಾಗಿಯಪಕೀತಿಗೆ ಹೇಸಿರಿ
ಗುಂಡಬೊಮ್ಮಯ್ಯ ಕೇಳೆಂದಾ          ೧೦೪

ತಂದೊಪ್ಪಿಸುವುದೆ ಲೇಸು ಕಳ್ಳರ ನೀವು
ನೊಂದು ಮುಂದುಗೆಡಬೇಡಾ
ಇಂದೆಮ್ಮ ಮರೆಯೊಕ್ಕು ಶಿವನ ಜಂಗಮವನು
ಕೊಂದರೆ ಕೊಡವೆಲೆ ರಾಯಾ            ೧೦೫

ಕೊಡದೆ ಹಿಂದಿಕ್ಕಿ ಕೊಂಡಾಗ ಗುಂಡಬೊಮ್ಮ
ಕೆಡುವಿರಿ ಪ್ರಾಣಗಳಿಂದಾ
ಕೊಡೆವು ಜಂಗಮಪಾದದು ಗುರು ಬಿದ್ದಲ್ಲಿಯೆ
ಕೆಡೆಹುವೆವೆಮ್ಮೊಡಲುಗಳಾ೧೦೬

ಕೊಟ್ಟ ಭಾಷೆಯ ಕೇಳಿ ಗಣಪತಿರಾಯನು
ಕಟ್ಟುಗ್ರ ಕೋಪಗಳಿಂದಾ
ಬೆಟ್ಟವ ನಡರುವ ಹೆಬ್ಬಲಿಯಾದಂತೆ
ನೆಟ್ಟನಾದವು ಕುಡಿಮೀಸೆ    ೧೦೭

ಜೆಡೆಯ ಜಂಗಮ ರೂಪು ವೇಷಗಳಾಗಿಯೆ
ಪೊಡವಿಯೊಳಗೆ ಕಳುವುದನೂ
ಬಿಡಿಸುವೆನಿಲ್ಲೀಗ ಕಡಿಸಿ ಶೂಲಕೆ ಹಾಕಿ
ಕೆಡಿಸುವೆ ಗುಂಡಬೊಮ್ಮ ನಿಮ್ಮಾ     ೧೦೮

ನೊಸಲಗಣ್ಣ ಭವನ ಶಶಿಯ ನೋಡಿದವನ
ವಿಷಮಲೋಚನ ಶರಣರನೂ
ವಸುಧೆಯೊಳಗೆ ಕೆಣಕಿ ಬದುಕಿದವರಿಲ್ಲಯ್ಯ
ಘಸಣೆ ಬೇಡ ಜಂಗಮದಾ   ೧೦೯

ಜಂಗಮ ಜಗದಾರಾಧ್ಯರಾದರೆ
ಸಂಗವೇಕೋ ಕನ್ನಗಳದಾ
ಸಂಗಬಸವನ ಶರಣ ಕೆಣಕಿಯೆ
ಭಂಗಬಟ್ಟರು ರಾಯ ಕೇಳೂ           ೧೧೦

ನೊಸಲಲು ಬ್ರಹ್ಮನು ಬರದ ಬರಹನೊಮ್ಮೆ
ಹೆಸರು ಗಾಣಿಸದೆ ತೊಡುವರೂ
ವಸುಧೆಯೊಳು ಗಜಸಿಂಹದ ಕೂಸಿನ
ಮುಸುಕ ತೆಗೆವವೆ ಹುಲು ಮೃಗವೂ   ೧೧೧

ಪ್ರತ್ಯಕ್ಷ ಎನ್ನಯ ದೇಶದೊಳಗೆ ಯಿದ್ದು
ಮತ್ತೆನ್ನ ಮನೆ ಕನ್ನವಿಕ್ಕೀ
ಅತ್ತಪವಮಾನವ ಕೊಂಡ ಜಂಗವವನು
ತತ್ತರಿದರಿಸುವೆನೆಂದಾ        ೧೧೨

ಹೆರಸಿಪ್ಪೆಯೊಳಗಿದ್ದ ಕಬ್ಬಿನ ರಸವನು
ನೆರೆ ಸವಿವ ಗಜದಂತೇ
ಕುರಿ ಮೇಯಬಲ್ಲುದೆ ರಸವಾಮೃತವನು
ನರಗುರಿಯಾದಲೆ ರಾಯಾ೧೧೩

ನಮ್ಮ ಜರಿದು ನೀನು ಮಾಡುವೆದೇನೆವೊ
ನಿಮ್ಮ ಜಂಗಮ ನೀವುಗೂಡೀ
ನಮ್ಮ ಜಂಗಮದ ಪ್ರತಾಪವ ನೀಗಲಿಂ
ನೊಮ್ಮೆ ಹೇಳುವೆ ಕೇಳು ರಾಯಾ      ೧೧೪

ಕೃತಯುಗ ತೇತ್ರಾಯುಗ ದ್ವಾರಪರದಲ್ಲಿ
ಪ್ರತಿಯುಗವಾ ಮೂರರಲ್ಲೀ
ಅತಿಶಯವಾಗಿಯೆ ಮೆರೆದುದ ಹೇಳುವೆ
ಪೃಥಿವೀಶ ಕೇಳು ಜಂಗಮದಾ          ೧೧೫

ಕೊಂದು ಮೆರೆದರವರಂದು ನಿಂದಕರನು
ಹಿಂದಕೆ ಕೇಳಿ ಬಲ್ಲೆಯ ರಾಯಾ
ಅಂದಿನಿಂದಿನ ಆಚಾರವೊಂದೇ
ಇಂದೇನು ಬೇರಿಲ್ಲ ರಾಯಾ            ೧೧೬

ಕೇಳಿ ಬಲ್ಲೆನು ನಾನು ಗುಂಡಬೊಮ್ಮಯ್ಯನೀ
ಹೇಳದಿರಯ್ಯ ಹಳೆ ಮಾತಾ
ಕೇಳು ಗಣಪತಿರಾಯ ಹಳಸೂದೆ ಜಂಗಮ
ಹೇಳುವೆ ನೀಗ ದ್ರುಷ್ಟಗಳಾ೧೧೭

ದ್ರುಷ್ಟವೆಂದೆನೆಲೊ ನನ್ನ ಮನೆಯ ಹೊಕ್ಕು
ಪೆಟ್ಟಿಗೆ ಹೊಡೆಯದೆ ಕದ್ದ
ಹೊಟ್ಟಿಗೆ ಹೊಡೆಯದೆ ಕದ್ದಕಳ್ಳರ ಬಿಟ್ಟು
ಮುಟ್ಟಬಹುದೇ ಜಂಗಮವಾ          ೧೧೮

ಹಳೆಯ ಸುದ್ದಿಯ ಹೇಳಿ ಹೋಳಾದರೆ ಬಿಡೆನಾನು
ತಳು ಬೇಡ ಕಳ್ಳರ ಕೊಡಿರೂ
ಸ್ಥಳ ಕುಳಗಳ ಕೇಳು ಗಣಪತಿರಾಯ ನೀ
ಬಳಿಕಾ ಮಾತಲ್ಲ ಕಲಿಯುಗದಾ       ೧೧೯

ಚೋಳು ದೇಶವನಾಳುತಲಿಹನರಸಾಗಿ
ಭೋಳತನದ ಪಾಂಡ್ಯಚೈನಾ
ಕೇಳು ನಿಮ್ಮವರನು ವಾದಿಸಿದಲ್ಲಿ
ಹೇಳುವೆನವನು ಮಾಡಿದುದಾ          ೧೨೦

ತನ್ನ ಭಾಷೆಗೆ ತಂದು ಏಳುನೂರು ಸವಣರ
ಚೆನ್ನಾಗಿ ಶೂಲಕ್ಕಿಕ್ಕಿಸಿದಾ
ಅನ್ಯಾಯದವರನು ಕೊಂದರವರಂದು
ಇನ್ನಾವ ಮಾತೇಕೋ ನಿಮಗೇ          ೧೨೧

ನೀನಾವ ಧರ್ಮದಿ ಬಂದೆಯೋ ಗಣಪತಿ
ಹೀನದ ಮಾತನಾಡುತ್ತಿರುವೇ
ಶ್ವಾನ ದೂಷಕರನು ಕೊಲಲಂಜಿ ಬಿಟ್ಟರೆ
ತಾನಾಗ ಕಲ್ಯಾಣದರಸಾ     ೧೨೨

ಕೊಂದರನ್ಯಾಯದಿ ಬಂದು ದುರ್ಜನರನು
ಹಿಂದಣ ಮಾತೇಕೋ ನಿಮಗೇ
ಅಂದು ಮೂಗುಳ ಹಲ್ಲ ಹೊಯ್ದರು ಹಗದಲಿ
ನಿಂದವೆ ಶಾಸನ ರಾಯಾ      ೧೨೩

ಶಾಸನದೊಳಗಣ ಸಾಸಿರ ಮಾತೆಲ್ಲ
ಈಸೊಂದು ಕಳ್ಳರಿಗೇಕೋ
ಈಶನ ಲಾಂಛನ ಜಂಗಮಹರೆ ಹೊಲ್ಲ
ವಾಸೆ ಮಾತುಬೇಡ ರಾಯಾ೧೨೪

ಹೋದ ಯುಗದ ಮಾತ ಹೇಳದಿರಲೋ ನೀ
ವಾದಿಸಿ ಬಾಯ ಕಟ್ಟಬೇಡಾ
ಆ ದಿನ ಕೊಂದರವರು ದೋಷಕರನು
ಮೇದಿನಿಯೊಳು ಕೇಳೆಲವೋ೧೨೫

ಕೇಳಿಬಲ್ಲೆನು ನಾನು ಹೇಳಿದಿರಾ ಮಾತ
ಕೇಳಿರೊ ಗುಂಡಬೊಮ್ಮ ದಿಟವೂ
ನಾಳೆ ಬಹುದು ನಮಗೀಗಲೆ ಬರಲಿನ್ನು
ಕೇಳಿ ನಿಮ್ಮ ಕೊಲೆಗಂಜೆ      ೧೨೬

ಅಂಜೆನಂಜೆನೆಂಬ ಬಂಜೆಯ ನುಡಿಬೇಡ
ಅಂಜದರಾರೋ ಜಂಗಮಕೆ
ಅಂಜುವನಿದು ಧೀರ ಬ್ರಹ್ಮರಾಕ್ಷಸನು
ಅಂಜದೆ ಬದುಕಿದರಿಲ್ಲಾ     ೧೨೭

ಸೀತಾದೇವಿಯನೊಯ್ಯದಂಜನಾತನ
ಸೇರುವ ಕಟ್ಟೆಯೆ ತೂಲರೇ
ಆರುಕೊಂದರು ಅಂದೊಂದುಂಟಾಗಿಯೇ
ತರಂಜಿಕೆ ದ್ರುಷ್ಟವಿರಲೂ    ೧೨೮

ನೆಟ್ಟನೆ ಕನ್ನದ ಬಾಯಲು ಸಿಡಿದಿದ್ದು
ದ್ರುಷ್ಟವಲ್ಲವೆ ಗುಂಡಬೊಮ್ಮಾ
ದಿಟ್ಟತನದಿ ಕದ್ದು ಕಟ್ಟುತರವೇಕೆ
ಬಿಟ್ಟು ಹೋಗುವನಲ್ಲ ನಿಮ್ಮಾ      ೧೨೯

ಮುಟ್ಟಬಲ್ಲದೆ ಭದ್ರಗಜದ ಮೇಲಿದ್ದರೆ
ಹೊಟ್ಟೆಗೆ ಹೊಡೆಯದ ಶ್ವಾನಾ
ಇಷ್ಟೊಂದು ಮಾತೆಕೋ ಈಶ ಕಳನಾಗೆ
ಮೆಟ್ಟಿಕೊಲಿಸುವೆ ಮದಗಜದೀ         ೧೩೦

ಮದಗಜವೆಂದರೆ ಹೆದರಾದೆ ಸಿಂಹವು
ಇದು ಬೇಡ ಜಂಗಮದೊಡನೆ
ಹದನ ಕಂಡೆನು ನಿಮ್ಮ ಮೊರೆಹೊಕ್ಕವರಿಗೆ
ಇದೆ ನೋಡು ನಿಮಗೆ ಮದ್ದರದೂ    ೧೩೧

ಮದ್ದರದೆನೆಂಬ ಮಾತಿಗೆ ಗುಂಡಬೊಮ್ಮ
ರುದ್ರಗೋಪವನರೆರೆ ತಾಳ್ದೂ
ಹೊದ್ದಬಹುದೆ ವಡಬಾಗ್ನಿ ಜಂಗಮವನು
ರುದ್ರರಾಯನ ಸುತ ಕೇಳೋ            ೧೩೨

ವಡಬಾನಳ ತಾನು ಕಟ್ಟುವಡದನಾ
ಪೊಡವೀರರಾಯನ ಕೈಯ್ಯಾ
ನಡುನಾಡ ಗೂಳಿಗೆಳಾದಿರೊ ಗುಂಡಬೊಮ್ಮ
ಕೆಡಬೇಡ ಕಳ್ಳರ ಕೊಡಿರೋ೧೩೩

ದೇಶಾಧಿಪತಿಯೆಂಬ ಹೆಮ್ಮೆಯ ಸಿರಿಯಲಿ
ಈಸೊಂದು ನುಡಿವರೇ ಕೆಟ್ಟೂ
ದೋಷಕರಾದರ ಹಲ್ಲನೆ ಕಳವರು
ವಾಸಿ ದೇಶಾಂತರ ಮಾಡೀ   ೧೩೪

ಹಲವು ಪರಿಯಲೆಮ್ಮ ಹೆದರಿಸಿ ಛಲವನು
ಬಲುಹಿಲಿ ಬಿಡಿಸುವೆನೆನುತಾ
ತೆಲವಾಲ ಗಾಯವಡದ ಹುಲಿಯಂತೆ ರಾಯ
ಕೆಲದ ಗದ್ದುಗೆಯ ಹೊಯ್ದೆದ್ದಾ     ೧೩೫

ದವಡಗದ್ದಳಿಗರ ಹವಣನು ಕಂಡೆನು
ಇವರಿಗೆ ತಕ್ಕ ಶೂಲಗಳಾ
ಅವನೀಶ ಕರಹೇಳಿದ ಭಂಡಿಕಾರರ
ಭುವನದಾಕಾಶದುದ್ದಿಯವಾ           ೧೩೬

ಭದ್ರಗಜವು ಗುಂಡಬೊಮ್ಮಣ್ಣಗಳಿಗೆ
ರುದ್ರನ ಸುತ ಗಣಪತಿಗೆ
ಹೊದ್ದಿದ ಕಳವಿನ ಸಂವಾದ ಸಂಧಿಗೆ
ನಿರ್ಧಾರ ಚವುತಾಳ ಶತಕಾ   ೧೩೭

ಅಂತು ಸಂಧಿ ೧೫ಕ್ಕಂ ಪದ ೧೨೬ಕ್ಕಂ
ಮಂಗಳಾ ಮಹಾಶ್ರೀ ಶ್ರೀ ಶ್ರೀ