ಸಂಧಿ೧೮

ಶೂಲಿರ ಶರಣರು ಲಾಲಿಸಿ ಕೇಳಿರೆ
ಮೇಲಿಲ್ಲ ಸಂಧಿಯೊಂದೇ
ಭೂಲೋಕದೊಳಗಿಹ ಗುಂಡಬೊಮ್ಮಣ್ಣನು
ಶೂಲವೇರುವ ಸತ್ಯವನೂ   ೧

ಅವರು ಕೊಟ್ಟರು ತಮ್ಮ ಸತಿಯರಿಬ್ಬರಿಗೆ
ತವಗಿಂಥ ಮುಂಚಿನ ಶಸ್ತ್ರಗಳಾ
ಶಿವಗಣ ತಿಂಥಿಣಿ ನೋಡಿ ನೀವೆನುತಲು
ಅವರು ನಿಂದರು ಅನುವಾಗಿ೨

ಅತ್ತಲಿತ್ತಲಿ ದೃಷ್ಟಿ ಪಲ್ಲಟವಾಗದೆ
ಚಿತ್ತೈಸಿ ನಿಮ್ಮ ತೊತ್ತಿರನೂ
ಚಿತ್ರ ವಿಚಿತ್ರದಿ ರೊಹಿತದೆಗವುತ
ರಕ್ತ(ದೋಕುಳವ)ಮಾಡಿದರೂ        ೩

ಅಟ್ಟಿಯಾಡಿ ದೇಹ ರುಧಿರದೊಕುಳಿಯಾಡೆ
ಕೆಟ್ಟುವೋಡಿತು ದೋಷಕರೂ
ಕೊಟ್ಟರು ಹರಕೆಯ ಸುರರು ಕೈಲಾಸದೊ
ಳಟ್ಟಣೆ ಮೆಟ್ಟಿ ನೋಡಿದರೂ          ೪

ಬಲದ ಕೈಯಲಿ ಕಿತ್ತಲ ಹಿಡಿದುಕೊಂಡು
ಎಡದ ಕೈಯಲಿ ಬೊಬ್ಬೆಗೊಡುತ್ತಾ
ಲಲನೆಯರು ತಮ್ಮ ಹೃದಯವ ಬಗಿವುತ
ನಲಿದರು ಮಿದುಳನಿಟ್ಟಾಡಿ  ೫

ವಾಹಮಹಸ್ತದಿ ತಮ್ಮ ಮಂಡೆಯ ಪಿಡಿಯುತ
ಕೋಮಲೆಯರು ಬಲಗೈಯ್ಯಾ
ಕಾಮಹರನನೆ ನಾವು ತಮ್ಮ ಶಿರವಾ
ದಾರುತಿಯನು ಮಾಡಿದರೂ            ೬

ತಮ್ಮ ವಲ್ಲಭರಿಗೆ ತಾವು ನಿವಾಳಿಸಿ
ಬ್ರಹ್ಮಾಂಡದಬೊಬ್ಬೆಗೊಡುತ
ಸುಮ್ಮಾನದಿಂದಲು ಜಂಗಮಭಕ್ತರು
ತಮ್ಮ ಉತ್ಸಹ ಉಘೇಯೆನುತಾ      ೭

ನಾರಿಯರಿಬ್ಬರು ಉತ್ಸಹಗೊಂಡರು
ವೀರರಿಬ್ಬರು ಬೊಬ್ಬೆಗೊಡುತಾ
ಶೌರಿಯಲಿಮ್ಮಡಿಯಾಗುತ ಶೂಲದ
ಮೇಲೆ ಮಣಿಯ ಹತ್ತಿದರೂ            ೮

ಭವ ಚಪ್ಪರಿಸುತ ಬೊಂಬೆಯ ಕೊಡಲಾಗ
ಗಜಬಜಿಸುತ ಮೂರು ಲೋಕಾ
ಗಜವು ಕಂಗೆಟ್ಟವು ಅಷ್ಟದಿಕ್ಕನು ಹೊತ್ತ
ಭುಜಗ ನಡುಗಿ ಹೆಡೆಯುಡಿಗೆ           ೯

ಒಡಲೊಳು ತಲೆಯನು ಅಡಗಿಸಿಯೆಕೊಂಡನು
ಗಡಗಡ ನಡುಗಿಯೆ ಕಮಠಾ
ಸಿಡಿಲಿ ಹೊಡೆದಂತಾಗ ಭಯಗೊಂಡು ಬಿದ್ದಿತು
ಪೊಡವಿಯ ದೋಷಕ ಜನರೂ          ೧೦

ಹೆದರಿ ಹಮ್ಮೆಸಿಯೆ ಮೃತವಾಗಿ ಕೆಲಬರು
ಒಡದುಕೊಳ್ಳುತ ಕೈಕಾಲಾ
ತೊದಲಿಸಿ ನುಡಿವುತ ನೆಲವನಕಚ್ಚಿಯೆ ಬಿದ್ದು
ಹೋದ ಕುಳಿಗೊಂಡಿತು ಜನರೂ       ೧೧

ಬಾಯ ಬಿಟ್ಟುದೊಂದೆಗರುಳನು ಕಾರುತ
ಹೊಯ್ದಕಟ್ಟಿದ ತೊರದೂಡಿ
ಕಾಯ ಢೆಂಡೆಣಿಸುತ ಬಾಯೊಳು ಬೆರಳಿಟ್ಟು
ಹೊಯ್ದೋಡಿದರೆಡಬಲಕೇ  ೧೨

ಹರನ ಸದ್ಭಕ್ತರ ಬೊಬ್ಬೆಯಬ್ಬರಕ್ಕೆಲ್ಲ
ಧರೆಯೊಳು ನೆರೆದ ದೂಸಕರೂ
ಕೊರಳಲಸುವಕಾರಿ ತರೆಯ ಮೇಲೊರಗಿತು
ಮರುಳ ಬಳಿಗ ಮೇಳದಂತೆ  ೧೩

ಚಂದ್ರಶೇಖರನು ಅರಿಯದ ಕುರಿಗಳು
ಮುಂದೆ ಬಿದ್ದರು ತರಿಯೆಂದೂ
ಒಂದು ಬಾರಿ ಶೂಲವಯಳೊಕ್ಷ ಮಾಡಲು
ಸಂಧಿಸೆ ಮೊನೆ ಭುಜದಲ್ಲಿ   ೧೪

ತೋರಿತು ಮರು ಮೊನೆ ಬಲದಳ್ಳೆಯ ಮೇಲೆ
ಮೀರಿತು ಮರುಮೊನೆ ಮೂಡಿ
ಹಾರಿ ಹಮೈಸಿತು ಕೆಲವರು ರಕ್ತವಕಾರಿ
ಸೂರೆ ಹೋಯಿತು ಸುರಲೋಕಾ       ೧೫

ನಿಚ್ಚಟ ವೀರರು ತಮ್ಮ ಪಾದಗಳನು
ಚಚ್ಚರಿಸಿ ಮೇಲಕೆ ನೀಡೆ
ಬೆಚ್ಚಿತು ಬ್ರಹ್ಮಾಂಡ ವೋಡುವಂತೆ ಸುರಲೋಕ
ನುಚ್ಚಾಗಿ ತಾರಕಿವುದುರೆ     ೧೬

ಆಕಾಶಗಂಗೆ ತಾನಗಲಕೆ ಕದಡಿತು
ನೂಕಾಡಿತು ತಳಮಳಲೂ
ಲೋಕೇಶ ಹರನ ಒಡ್ಡೋಲಗ ಕದಡಿತು
ಭೂಕಂಪ ಕುಲಗಿರಿಯದುರೇ            ೧೭

ಹರ ತಮ್ಮ ಮಕುಟವ ನೂಲಿದನು ಹರುಷದಿ
ಶರಣರ ಸತ್ಯದುತ್ಯವಕೆ
ತರಣಿ ಮಂಡಲದಲ್ಲಿ ರಥದ ತೇಜಿಗಳೆಲ್ಲ
ಬರುತ ಹೆದರಿ ಚಂಡಿಯಾಗೆ  ೧೮

ನವಗ್ರಹಗಳು ಎಲ್ಲ ಬೆದರಿದವಾಕ್ಷಣ
x x x ನಾದಿತ್ಯರು ಬೆದರೆ
ಶಿವಬಲ್ಲ ಕೈಲಾಸ ಸುರಲೋಕದೊಳಗೆಲ್ಲ
ಹವಣಿಸೆ ನರಕುಗೊಳೆಯವಾ            ೧೯

ಇಂದ್ರನು ಬಿದ್ದನು ಆನೆಯ ಮೇಲಿದ್ದು
ಅಂದಮರಾವತಿಯೊಳಗೆ
ಮುಂದೆ ಬಿದ್ದನು ಆಚರಿಸುತ ಅಗ್ನಿಯು
ನಿಂದಿರ್ದ ತಗರ ಮೇಲಿಂದಾ  ೨೦

ಉದ್ದಿಯ ಕೋಣನ ಮೇಲಿದ್ದ ಯಮರಾಜ
ಬಿದ್ದನು ನೆಲಕೆ ಅಪ್ಪಳಿಸಿ
ಬಿದ್ದನು ನೈರುತಿ ನರಹರನದಿಂದ
ಬಿದ್ದನು ವರುಣ ಮೇಗಳಿಂದಾ         ೨೧

ವಾಯುಬಿದ್ದ ನಾಗಯೆರಳೆಯ ಮೇಲಿದ್ದು
ಬಾಯ ಬಿಟ್ಟನು ಕುಭೇರಾ
ಆಯಾಸಗೊಂಡನು ಕುದುರೆಯ ಮೇಲಿರ್ದು
ಆಯಿತೀಶ್ಯಾನನುತ್ಸಹವೂ  ೨೨

ನರಲೊಳು ಗುಂಡಬೊಮ್ಮಣ್ಣ ಶೂಲದ
ಲಿರಲೊಂದು ಕ್ಷಣವೆಂದೆನುತಾ
ಹರನು ಕೊಂಡಾಡುತ ಮಕುಟವನೊಲದನು
ಶರಣರು ಬಲ್ಲಿದರೆಂದಾ     ೨೩

ಸರಿಯಲ್ಲಯಿವರಿಗೆ ಹಿಂದಣ ಶರಣರು
ಇರಿಸದಿಗೊಯಿಲೆನೆಂದೆನುತಾ
ಹರ ನಿಮ್ಮ ಕಂಡಾಗ ಭಕ್ತರು ಬಿಡರೆಂದು
ಅರಿವು ದೊರದಿರೆಂದಾ        ೨೪

ಗುಂಡಬೊಮ್ಮಣ ಕೊಂಡಾಡುತ್ತಿದ್ದನು
ಖಂಡೆಂದು ಮೌಳಿ ಮಹೇಶಾ
ಚಂಡ ಪ್ರಚಂಡರಿಗೇವನು ಗಣಪದ
ಹೆಂಡರು ಸಹಿತೆಂದ ಹರನೂ೨೫

ಈಗ ಹೋಗಿ ನಾನು ಭೃಂಗಿಯ ಕಳುಹಿವೆ
ಬೇಗದಿ ಪುಷ್ಪಕ ಸಹಿತಾ
ನಾಗಭೂಷಣ ನಾಗ ಹರಿಯೊಳು ಹೇಳುತ
ಬೇಗ ಕೈಲಾಸಕೆ ನಡೆದಾ      ೨೬

ಹರ ನರಲೋಕಕಕೆ ಹೋಗಿ ಬಂದುದ ತಾನು
ಗಿರಿಜೆ ಕೈಲಾಸದಿ ಕೇಳಿ
ಹಿರಿದು ಶೃಂಗರಿಸುತ ಗುಡಿ ತೋರಣಗಟ್ಟಿ
ಹರನರಮನೆ ಕೈಲಾಸಾ       ೨೭

ಹರನ ಮುಂದೆ ಹರಿ ಕೈವಾರಿಸುತಲು
ಬರುತಿರೆ ಮೆಲ್ಲನೆ ನಡದೂ
ಪುರದಿಂದಲಾ ನಂದಿಯ ಭೃಂಗಿ ಸಮ್ಮೇಳದಿ
ಇದಿರುಗೊಂಡರು ವಾದ್ಯ ಸಹಿತಾ      ೨೮

ಮುತ್ತಿನಕ್ಷತೆ ನವರತ್ನದಾರತಿಯನು
ಪೃಥ್ವಿಮಾತೆಯು ಪಾರ್ವತಿಯೂ
ಸತ್ಯಶಂಕರ ಹರ ಚಿರಂಜೀವಿಯೆನುತಲು
ಉತ್ತಮಾಂಗಕೆ ಸೇಸೆದಳಿದೂ            ೨೯

ಅರಸಿ ಆರತಿಯೆತ್ತಿ ಸಾಸ್ಟಾಂಗವೆರಗಿಯೆ
ಹಿರಿದು ಬಳಲಿದೆ ದೇವಯೆನುತಾ
ಸಿರಿಮುಡಿಯೊಳು ಗಣ ಗಂಗಾದೇವಿಯ
ಖರಬಳಲಿದೆ ಇಳೆಯೆನುತಾ  ೩೦

ಹಿಂದೆ ಮಡಹಿದೆ ನೀ ಅಸುರರ ಶಿರಗಳ
ರುಂಡಮಾಲೆಯು ಕೊರಳಲ್ಲಿ
ಸಂಧಿಸಿ ಸರಗೊಂಡು ಕೊರಳಲ್ಲಿ ಯೆಲುಮಾಲೆ
ಒಂದೆ ಗಜಚರ್ಮ ಹೊದಕೆ   ೩೧

ನೋಡಿದ ಬಿದಿಗೆಯ ಚಂದ್ರಮ ನೊಂದುವ
ನೋಡಲು ಗರಗಳದ ಕಪ್ಪೂ
ಕೂಡಣಕೆಂಜೆಡೆ ನೊಸಲಕಂಗಳ
ಜೋಡಿಸಿ ಕರ್ಣ ಕುಂಡಲವೂ            ೩೨

ಐದು ಮುಖಂಗಳು ಈರೈದು ಭುಜವೊಪ್ಪೆ
ಕೈಲಾಸ ಪುರವಾಸಿ ಹರನೂ
ದಯ ಧರ್ಮಪಾಲಕ ಭಸಿತ ಭೂಷಣಹರ
ಭಯ ಹರಿ ಓಲಗವಿತ್ತಾ      ೩೩

ಸೋಮಶೇಖರ ಒಡ್ಡೋಲಗವಿತ್ತುದ
ನಾ ಮುನಿಜನ ಕೇಳುತಾಗಾ
ರಾಮಣಿಯಕವಾಗಿ ಬಂದರುಘೆಯೆಂದು
ಆ ಮಹಿಮರು ಏಕಾದಶರೂ೩೪

ಬಂದು ಕುಳಿತರಾಗ ದ್ವಾದಶಾದಿತ್ಯರು
ನಂದಿವಾಹನಗೆ ವಂದಿಸುತಾ
ಬಂದು ಕುಳಿತನಾಗ ಹರಿಹರ ನೆಡೆಯಲಿ
ನಿಂದು ಮೈಯಿಕ್ಕಿ ವಂದಿಸುತಾ         ೩೫

ಚತುರ್ಮುಖ ಬ್ರಹ್ಮನು ಬಲದಲ್ಲಿ ಕುಳಿತ
ಪತಿ ರವಿ ಶಶಿ ಕೋಟಿಗಳೂ
ನುತಜನದೊಡೆಯ ನೊಲಗದಲಿ ಕುಳಿತರು
ಹಿತವಂತ ಮರುಳ ತಂಡಗಳೂ          ೩೬

ಸಿದ್ದ ವಿದ್ಯಾಧರ ಮನುಮುನಿ ಯಕ್ಷರು
ರುದ್ರಾವತಾರ ರಾಕ್ಷಸರೂ
ಇದ್ದ ಖೇಚರರು ಭೂಚರು ಕಿಂಪುರುಷರು
ಇದ್ದರು ಕಿನ್ನರರಲ್ಲಿ                     ೩೭

ಆರು ಭುಜವು ಮೂರು ನಯನದಿಯೆರದಿಂದ
ಕೋರೆದಾಡೆಯು ಕುಡಿಮೀಸೆ
ಮೀರಿ ದಕ್ಷನ ಶಿರವ ಹೊಡದು ಹೋಮದೊಳಿಟ್ಟ
ವೀರ ವೀರೇಶ್ವರ ಬಂದಾ    ೩೮

ಬಂದು ಕುಳಿತರಾಗ ಗರುಡ ಗಾಂಧರ್ವರು
ಒಂದೆಸೆಯಲಿ ಗೃಹ್ಯಕರೂ
ಹಿಂದೆಮುಂದೆ ಹರ ನೆಡೆದಲಿ ಬಲದಲಿ
ಬಂದು ಕುಳ್ಳಿರೆ ಸುರನಿಕರಾ  ೩೯

ಆರು ಮುಖಂಗಳು ಈರಾರು ನಯನವು
ತೋರಿ ಮೆರವ ಸುಲಿಪಲ್ಲೂ
ಏರಿದ ನವಿಲು ಕೆಂಜೆಡೆಗೆದರುತ ಬಂದ
ಕಾರ್ತಿಕ ಸ್ವಾಮಿ ಕುಮರಾ    ೪೦

ಗಜಮುಖ ಏಕದಂತ ಭೂಜಗ ಕಟ್ಟಿನ ಡೋಳು
ಅಜ ಸುರರ್ಚಿತ ವರವೀವಾ
ಸುಜನ ಸಜ್ಜನ ಮೋಷಕ ನೇರಿಕೊಂಡು
ಭುಜಬಲ ವಿಘ್ನೇಶ ಬಂದಾ೪೧

ಬಂದು ಕುಳಿತರಾಗ ಬದ್ದಿಯ ಬಾಯೂರು
ಬಂದರು ಉರಗ ಬಾಯವರೂ
ಬಂದರು ಚರಣದ ಮೇಲೆಲ್ಲ ಕಂಗಳು
ಬಂದರಂಗಾಲ ಕಣ್ಣವರೂ   ೪೨

ಮೃಡನೊಬ್ಬಗೆ ಮೂರುಕಂಗಳಾದರೆ
ಎರಡು ಸಾವಿರ ಕಣ್ಣವರೂ
ಎಡೆದೆರಹಿಲ್ಲದೆ x x x ಯೆಲ್ಲ ಬಾಯೊರು
ಸಡಗರದಲ್ಲಿ ಕುಳ್ಳಿತರೂ   ೪೩

ವರಹ ಮುಖಂಗಳು ವೃಶ್ಚಿಕ ಮುಖಗಳು
ಒರಣ ಕಪಿಮುಖದವರೂ
ಭೇರುಂಡ ಶರಭನು ಉರಗಮುಖಂಗಳ
ವೀರರು ಬಂದರೋಲಗಕೇ   ೪೪

ತುರಗ ವ್ಯಾಘ್ರ ಶಾರ್ದೂಲ ಮುಖದವರು
ನರಮೃಗ ಸಿಂಹ ಮುಖದರೂ
ನೆರದಿದ್ದ ಕುರಿದಲೆ ಮುಖದವರಿದ್ದರು
ಹರನ ಒಡ್ಡೋಲಗದೊಳಗೇ           ೪೫

ದಂಡಿನಿ ಶಾಕಿನಿ ದುರ್ಗಿ ಭೈರವಿ ಡಾಕಿನಿ
ಚಂದೇಶ್ವರಿ ಯೋಗಿಣಿ
ಚಂಡ ಚಾಮುಂಡಿ ಕಾಳ ರಾತ್ರಿಯ
x x x x x x x x x x x x x x x x x x x x x
x x x x x x x x x x x x x x x x x x x x x x x x x          ೪೬

ಕನಕ ವರ್ಣ ಗೌತವನೂ
ಮುನಿ ಜಮದಗ್ನಿಯು ಜೈಮಿನಿ ಭಗಿರಥ
ತ್ರಿಣೆಯನೋಲಗಕೆಲ್ಲ ಬರಲೂ        ೪೭

x x x x x x x x x x x x x x x x x x x
x x x x x x x x x x x x x x x x
ಸೀಸೆ ಸಮುದ್ರವ ನಾಮೋಶನ ಗೊಂಡ
ಆ ಮುನಿ ಅಗಸ್ತ್ಯನು ಬಂದಾ            ೪೮

ಪಾರುಸ ಮಾಂಡವ್ಯ ಸನತ್ಕುಮಾರನು
ನಾರಂದ ಭೃಗುಮೈತ್ರೇಯ
x x x x x x x x x x x x x x x x
x x x x x x x x x x x x x x x x             ೪೯

ಬಂದ(ನು)  ಕುಶಾವರ್ತಮುನಿಯಿತಿ ವೇಗದಿ
ಬಂದು ಕುಳಿತ ವಾಮದೇವಾ
ಬಂದನು ವಿಶ್ವಾಮಿತ್ರ ಮುನೀಶ್ವರ
ನಂದಿವಾಹನನ ಒಲಗಕೆ       ೫೦

ವೀರ x x x x x x x x x x x x
x x x x x x x x x x x x x ಯೂ
ಚೇರಮರಾಯನು ಮೊನೆಯಾಂಧಾರನು
ವೀರ ಚೋಳನು ನಂಬಿಯಣ್ಣಾ         ೫೧

ಚೋಳಪ್ಪ ಕನ್ನಪ್ಪ ಪಿಳ್ಳಾರೆ ನೈನಾರು
ಚೋಳಿಯಕ್ಕನು ವರದಾನಿ
ಜೋ x x x x x x x x x x
x x x x x x x x x x x x x x       ೫೨

ಕಲಿ ಗುಗ್ಗಳದೇವ ಇಳೆಯಾಂಡ ನೈನಾರು
ಕಾಲಿ ಕಾಮನುಜೆಯಾರೆ
ಕಲಿಗಣನಾಥನು ಯಿರುದಂಡಿಚೀಲಾಳ
ತಿರುನೀಲಕಂಠದೇವಯ್ಯಾ   ೫೩

x x x x x x x x x x ಸಂಖ್ಯೆಯ
ಪರವೆನಾಚಿ ಚಿಪ್ಪುಲಿಯೂ
ಭರದಿಂದ ಬಂದನು ದೀಪದ ಕಲಿಯಾರು
ಹರನ ಒಡ್ಡೋಲಗಕಾಗಾ   ೫೪

ಅಂಗಸಂಗದ ಸಸಿಲಿಂಗನ x x x
x x x x x x x x ವೀಣಾದಿನಾಥಾ
ಗಂಗಾಧರನ ವೋಲಗೈದಿ ಬಂದಿತು
ಲಿಂಗಪೂಜಕ ನೈನಾರೇ       ೫೫

ದಂಡಾಧೀಶನು ಬಸವರಾಜೇಶನು
ಪಂಡಿತಾರಾಧ್ಯ ಜ x x x x
x x x x x x x x x x x x x x
x x x x x ಯದ ಮಾರಣ್ಣಾ          ೫೬

ಮಡಿವಾಳ ಮಾಚಯ್ಯ ಮುಡಿಯದ ಸಂಗಮದೇವ
ಪಡಿಹಾರಿ ಬೊಮ್ಮಣಯ್ಯಗಳೂ
ಹಡಪದ ರೇಚಪ್ಪ ಮಾದಿಗ x x x x x x x x x
x x x x x x x x x          ೫೭

x x x x x ಬೊಮಣ್ಣ ಕನ್ನದ ಮಾರಣ್ಣ
ಜಕ್ಕಿಯಾರ ಬೊಮ್ಮಣ್ಣಾ
ಮುಕ್ಕಣ್ಣನ ಭಕ್ತಿ ಮಡು ಬೊಮ್ಮಣ್ಣ ಬಂದ
ಚಿಕ್ಕ ಬುಗುಡ ಬೊಮ್ಮಣ್ಣಾ           ೫೮

x x x x x x x x x x x x x x x x x x x x x x x x
ಒಡನೆಯುಸಿಡಿ ಬೊಮ್ಮಣ್ಣಾ
ಗಡಿಗೆಯ ಹಾಲಿನ ಕೊಡಗೂಸು ಕೊಳೂರು
ಬಿಡು ಮುಡಿಯ ಮಹಾದೇವಿ           ೫೯

ಸೂಳೆಯ ಮಹಾದೇವಿ x x x x x x x
x x x x x x x x x x x x x

x x x x x x x x x x x x x x ಚಾಕಲ ದೇವಿಯು
ಡೊಳೊವ್ವೆ ಯೆಮ್ಮವೆಗಳೂ           ೬೦

ಬಾಲೆ ಕೊಲ್ಲಲದೇವಿ ರೆಬ್ಬವೆ ಅರಸವ್ವೆ
ಭೂ x x x x x x x x x x x x x x x x
x x x x x x x x x x x x x x x x x x x x x x x x x x
x x x x x x x x x x x x x x x x ದಯ್ಯಾ  ೬೧

ಆದಿಮಯ್ಯನು ಸಾಮವೇದಿ ಬೋಗಣ್ಣನು
ಮೇಧಾವಿ ರುದ್ರ ಮಾದಯ್ಯ
ಮೇದಾರ ಕೇತಯ್ಯನನುಮಿಷ ಕೇತಯ್ಯ
ದೇವ ಹಾದರದ ಬೊಮ್ಮಣ್ಣಾ        ೬೨

ತೆಲುಗೇಶ ಮಸಣಯ್ಯ ಡೋಹರ ಕಕ್ಕಯ್ಯ
ಕಲಕೇತ ಬೊಮ್ಮಣಯ್ಯಗಳೂ
ತೆಲುಗರ ಬೊಮ್ಮಣ್ಣ ಜೇಡರ ದಾಸಯ್ಯ
ನುಲಿಯ ಚಂದಯ್ಯ ನೂಹಿಲನೂ      ೬೩

ಗೋವಿಂದ ಭಟ್ಟರು ಬಿಬ್ಬಬಾಚ್ಯನು
ಹಾವಿನ (ಹಾಳ ಕಲ್ಲಯ್ಯ) ಮಸಣೇಶಾ
ದೇವರೋಲಗಕಾಗ ಮಳೆರಾಜನುದುಭಟಿ
ತಾವಾಗ ಬಂದು ಕುಳಿತರೂ  ೬೪

ಶಂಕರ ದಾಸಯ್ಯ ಮೋಳಿಗೆ ಮಾರಣ್ಣ
ಸುಂಕಿ ಸೋಮನಜ್ಜದಾಸಾ
x x x x x x x x x x ಯ್ಯ ಪ್ರಸಾದ ದಾಸಯ್ಯ
ಸುಂಕಿಬಂಕಣ್ಣ ಮಾರಣ್ಣಗೊಂಡಾ    ೬೫

ವೆಂಕ ಮಂಚಣ್ಣನು ಮೋರಟದ ಬಂಕಣ್ಣ
ಬಿಂಕದ ಜಟ್ಟಿ ಮಾರಣ್ಣಾ
ಮುಂಕೊಂಡು ಬಂದರು ಹರನ
ಶಂಕರ ಭಕ್ತಿ ಜಕ್ಕಣ್ಣಾ        ೬೬

ಮೊಲ್ಲೆಯ ಬೊಮ್ಮಣ್ಣ ಬಿಜ್ಜಮಹಾದೇವಿ
ಹರಳಯ್ಯ ಮಧುವರಸಯ್ಯ
ಅಲ್ಲಮನನುಮಿಷ ಜಗದೇವಯ್ಯನು
ಎಲ್ಲಕೊಂಡದ ಮಹಾದೇವಿ            ೬೭

ಬಂದು ಕುಳಿತನಾಗ ಗೊಲ್ಲಾಳರಾಯ
ಬಂದನು ಸಿಧುಬಲ್ಲಾಳಾ
ಬಂದು ಕುಳಿತರೊಟ್ಟಾಗಿ ಗಣಂಗಳು
ನಂದಿವಾಹನನೋಲಗಕೇ     ೬೮

ಕಿನ್ನರ ಕಿಂಪುರಷ ಗರುಡ ಗಂಧರ್ವರು
ಸನ್ನರ್ದ ವಿ x x x x x x x x x x
ಚೆನ್ನಾಗಿ ಮನು ಮುನಿಸಿದ್ದರು ಕುಳಿತು
ಪನ್ನಂಗ ಭೂಷಣನಿದಿರಾ    ೬೯

ವರರಾಣಿ ರಂಭೆ ಮೇನಕೆ ತಿಲೋತ್ತಮೆಯರು
ನೆರದಿದ್ದ ಕಿನ್ನಾರಿಯರೂ
ಸುರಪ ದಿಕ್ಪಾಲಕ ದೇವರ್ಕಳಿದ್ದರು
ಹರನೊಡ್ಡೋಲಗದೊಳಗೆ  ೭೦

ಭವನಾದಿತ್ಯರು ದೇವಗಣಂಗಳು
ರವಿ ಶಶಿಕೋಟಿಗಳೆಲ್ಲಾ
ಕವಿ ಗಮಕಿಗಳೊಂದೆಸೆಯಾಗಿ ಕುಳಿತರು
ಪವನನುಘಡಿಸುತ ಹರನಾ  ೭೧

x x x x x ದೇವತೆ ಉದ್ದಂಡ ಚೌಡೇಶ್ವರಿ
ಗಂಡು ಭೈರವಿ ಕಾಳರಾತ್ರಿ
ಚಂಡಿ ದುರ್ಗಿ ಯೋಗಿಣಿ ಶಾಕಿನಿಯರು
ಸೊಂಡಿಲ ಗಣಪ ಭಾರತಿಯೂ          ೭೨

ದೇಶ ದೇಶದೊಳೆಲ್ಲ ಪುರಾತನರ
ಲೇಸಾಗಿ ಹೊಗಳುವೆ ನಾನು
ಈಶನ ಕೈಲಾಸದೊಳಗಿಹ ಶರಣರ
ಈಶನ ಶರಣರು ಕೇಳೀ        ೭೩

ಭಂಡಾರಿ ಬಸವಣ್ಣ ಬಡಿಹೋರಿ ಬೊಮ್ಮಣ್ಣ
x x x x x ವಿಕ್ರಮ ಸಾವಣ್ಣಾ
ಕೊಂಡುಗುಳಿಯ ಕೇಶಿರಾಜನು ಪುಷ್ಪದ
ಯಿಂಡೆಯ ಶಾಂತಿಮೈಯ್ಯಗಳೂ       ೭೪

ಅಕ್ಕನು ಮಹದೇವಿ ಚಿಕ್ಕಬಸವಣ್ಣ
ಜಕ್ಕಿಯರ ಬೊಮ್ಮಣ್ಣ x x
x x x ಲಯದಾಳು ಕುದುರೆ ರುದ್ರಾಕ್ಷೆಯ
ಹಕ್ಕರಿಕೆಯ ಚೇರಮನೂ     ೭೫

ಮಡಿವಾಳ ಮಾಚಯ್ಯ ಜೇಡರ ದಾಸಯ್ಯ
ಮೃಡನ ಭಕ್ತಿಗೆ ಬಲ್ಲಿದರೂ
ಹಿಡಿದು ಮಾರಿಚೆಯ್ಯ x ಕೊಟ್ಟಣಗುಟ್ಟಿಪ
ಜಡೆಯ ಶಂಕರ ದಾಸಿಮಯ್ಯ           ೭೬

ಕೆಂಬಾವಿ ಬೋಗಣ್ಣ ಕುಂಬಾರ ಗುಂಡಯ್ಯ
ಶಂಭುಗೆ ಮೊಲೆಯೂಡಿದಾಂಬೆ
ನಿಂಬಿ ಚೆಂಗಳೆ ಚೋಳರಾಯನು ವೆಜ್ಜವ್ವೆ
ನಿಂಬಿಯಕ್ಕನು ವರದಾನೀ    ೭೭

ಬೊಬ್ಬೆಯ ಬಸವಣ್ಣ ಬಿಬ್ಬ ಬಾಚಯ್ಯನು
ದಗ್ಗಳೆ ಸೂಳೆ ಮಾಯಕ್ಕಾ
ಕಬ್ಬತಂದು ಕಲ್ಲನಂದಿಯ ಮೆರೆಸಿದ
ಒಬ್ಬ x x x ರ ಬೊಮ್ಮಣ್ಣಾ         ೭೮

ಅಲ್ಲಮನುದ್ಭಟ ತೆಲುಗು ಬೊಮ್ಮಣ್ಣ
ಬಲ್ಲಿದ ಲೆಂಕ ಮಂಚಣ್ಣಾ
ಕಲ್ಲಲಿಟ್ಟು ಲಿಂಗವಕ್ಕರು ಕುಚಕನ್ನು
ಎಲ್ಲಕೊಂಡದ ಮಹಾದೇವಿ            ೭೯

x x x x x x ಯ ಬೊಮ್ಮಣ ಚಾಮಣ್ಣ
ನುಲಿಯ ಚಂದಯ್ಯ ಕಣ್ಣಪ್ಪಾ
ಬಲ್ಲಿದ ಭಕ್ತರ ಶರಣನು ಇದ್ದನು
ಅಲ್ಲಿ ಮೋಳಿಗೆಯ ಮಾರಣ್ಣಾ        ೮೦

ಬಳ್ಳವ ಹೂಡಿಸಿಲಿ x x x x x x x x ದ
ಬಳ್ಳಿಹ ಭಕ್ತ ಮಲ್ಲಯ್ಯ
ಮೊಳೆಯ ಕಿತ್ತು ನೆತ್ತಿಯ ಶಿವಗೆ ಅರ್ಪಿಸಿದನು
ಇಳೆಯಾಂಡ ಗುಡಿಯ ಮಾರಯ್ಯ      ೮೧

ನರ ಭೂ ಜನ ದಿಟ್ಟೆಯಾಯಿತು ಯೆಂದಾಗ
ಹರ x x x x x x x x x x x ಬೇಡೆ
ಅರಿದಿತ್ತ ತನ್ನಯ ಮಗ ಚೀಲಾಳನ
ಕರದೊಯ್ದು ಕಾಂಚಿಯ ಪುರವಾ      ೮೨

ಅಜಗಣ್ಣ ನೋಹಿಲ ಸಿದ್ಧರಾಮಯ್ಯನು
ಮಧುವರಸಯ್ಯ ಹರಳಯ್ಯ
ಭುಜಗ ಭೂಷಣನನು ಒಲಿಸಿದ ಶರಣನು
ತ್ರಿಜಗದೊಳಗೆ ಚೆನ್ನಯ್ಯಾ   ೮೩

ಹಡಪದ ಅಪ್ಪಣ್ಣ ದೃಢಭಕ್ತ ಕಕ್ಕಯ್ಯ
ಬಿಡದೆ ಹಾದರದ ಬೊಮ್ಮಣ್ಣಾ
ಮೃಡನ ಒಡ್ಡೋಲಗದೊಳಗಿದ್ದ ಶರಣ
ಪೊಡವಿಯ ಶರಣರು ಕೇಳೀ೮೪

ತೆತ್ತಿಸ ಕೋಟಿ ದೇವರ್ಕಳು ಋಷಿಯರು
ಸುತ್ತ ಕುಳಿತ ಗಣದೊಳಗೆ
ಸತ್ಯಶಂಕರ ಹರ ಕೊಂಡಾಡುವನು
ಭಕ್ತಿಗೆ ಗುಂಡಾಬೊಮ್ಮಣ್ಣನಾ         ೮೫

ಆಡಿ ಅಡಗಿತಿಲ್ಲ ಮಾಡಿಹೋಯಿತಿಲ್ಲ
ನೋಡಿರೆ ವಿಪರೀತವೆನುತಾ
ಕೂಡಿಕೊಂಡು ಬಾ ಭೃಂಗಿ ನೀ ಹೋಗೆಂದು
ರೂಢಿಗೇಶ್ವರ ಕಳುಹಿದನೂ೮೬

ಮಾಡಿದ ಭಕ್ತಿಯ ಮರೆಯಲು ಬಾರದು
ನಾಡ ಮಾತುಗಳೇಕೆನುತಾ
ಕೂಡೆ ಹೂ ಮಳೆಗರಸುವೆನೆಂದು ಹರ ತಾ
x x x x x ಸಿ ಕೊಟ್ಟ ಪುಷ್ಪಕವಾ     ೮೭

ಕಾರುಣ್ಯಂಬುಧಿ ಕರುಣಾಕರ ಹರ
ಈರೇಳು ಭುವನದೊಡೆಯಾ
ನಾರಾಯಣ ಪ್ರಿಯ ನಾಗಭೂಷಣ ಹರ
ಭೂರನೆ ಭೃಂಗಿ ಹೋದಾ    ೮೮

ಅಂಗಜಾರಿ ಅಜಸಂಹಾರಿ ಬೆಸನಿಯೆ
ಹಿಂಗಿದ ಭೃಂಗಿಯೊಲಗವಾ
ಮಂಗಳಮಯವಾಗಿ ತುಂಬುರ ನಾರಂದ
ಸಿಂಗರಿಸಿತು ತಮ್ಮ ಮೇಳಾ  ೮೯

ಚಂಬಕವರೆಯುತ್ಸವದಿಂದ ಮೊಳಗಲು
ರಂಭೆ ಕಿನ್ನರಿಯರು ಮುಂದೆ
ತುಂಬಿ ತುಳುಕಿ ಸುರರುಲಿದುಘೆಯೆಂದೆನೆ
ಅಂಬಾರಡಿಸುರಸಿಕರಾ        ೯೦

ದೇವ ದುಂದುಭಿಗಳು ಮೊಳಗುತ್ಸವದಿಂದ
ದೇವಲೋಕವು ಉಘೇಯೆನಲೂ
ದೇವರು ಹೂವಿನ ಮಳೆಯನು ಕರಸಿದ
ದೇವರು ಗುಂಡಬೊಮ್ಮಣಗೆ           ೯೧

ಹರನ ಸದ್ಭಕರು ಕರವೆತ್ತಿ ಕುಣಿದಾಡೆ
ಧರಣೀಶ ಗಣಪತಿ ರಾಯಾ
ಮರುಳಾಗಿಯೇ ನಿಂದು ನೋಡಿ ಚಿಂತಿಸುತಲೆ
ಮರಳಿದ ತನ್ನ ಮಂದಿರಕೆ    ೯೨

ಮುತ್ತುಮಾಣಿಕ ನವರತ್ನ ತೆತ್ತಿಸಿದವು
ಉತ್ತಮ ಸುವರ್ಣ ಪುಷ್ಪಕವಾ
ಸತ್ಯವ x x x ಕೇಳಿ ಸುರಲೋಕಕೆನುತಾ
ಹತ್ತಿರ ಭೃಂಗಿ ತಂದಿಳುಹೇ  ೯೩

ಬಂದು ಕುಳ್ಳಿರಿ ನಿಮ್ಮ ಸತಿಯರ ಸಹಿತಲೂ
ಬಂದಿವೆ ಪುಷ್ಪಕವೆನುತಾ
ಸಂದಿತು ನಿಮ್ಮಯ ಬಿರುದೆಂದು ಹರನೆಂದ
ನೆಂದು ಭೃಂಗೀಶ ಹೇಳಿದನೂ           ೯೪

ಅಮರ ಗಣಂಗಳು ಕೊಂಡಾಡುತ್ತಿದ್ದರು
ಕ್ರಮದಿಂದ ಗುಂಡಬೊಮ್ಮಣನಾ
ರಮಣಿಯವಾಗಿಯೆ ನಿಮ್ಮಯ ಬಿರುದೆಗೆ
ಶಿವಗೆ ಭಂಡಾರಿಸಿತೆನುತಾ    ೯೫

ಶೂಲದ ಮೇಲಿರ್ದ ಗುಂಡಬೊಮ್ಮಣ್ಣನು
ಮೇಲ ನೋಡಿಯೆ ಕಣ್ಣುದೆರೆದೂ
ಶೂಲಿಯು ಕಳುಹಿದ ಭೃಂಗಿಯ ಕಾಣುತ
ಲೀಲೆಯಿಂದಿದಿರ್ಗೊಂಡರಾಗಾ          ೯೬

ಬಂದು ಬಳಲಿದೆಯಯ್ಯ ಭೃಂಗೀಶ ನೀನಿಂದು
ಅಂದಾತನನುಪಚರಿಸಿ
ಚಂದ್ರಧರನ ಕಾಂ x x x x x x ನೀ ನಿಂದ
ಲೆಂದು ಏರಿದರು ಪುಷ್ಪಕವಾ            ೯೭

ದೇವರು ಕಳುಹಿದ ದಿವ್ಯ ಪುಷ್ಪಕದೊಳು
ತಾವಾಗ ಸತಿಯರು ಸಹಿತಾ
ಭಾವ ಭಕ್ತಿಗಳಿಂದ ಕರಮುಗಿದಲ್ಲಿಂದ
ಶ್ರೀಗುರುಲಿಂಗ ಜಂಗಮಕೇ೯೮

ಶರಣ ಸದ್ಬಕ್ತರ ಕರುಣದ ಕೃಪೆಯಿಂದ
ಹರ ಚರಣವ ಕಾಂಬೆವೆನುತಾ
ಪರಲೋಕ ಸಾಧನ ಸಂಗಡವಾಯಿತು
ಸುರಲೋಕಕೆ ಹೋದೆಪೆವೂ೯೯

ಚಿನ್ನಬಾಂಬುಳಿ ಶಂಖ ತಾಳ ಮದ್ದಳೆ ಘಂಟಿ
ಹೊನ್ನಚೆಂಬಕವರೆ ಮೊಳಗೆ
ಸನ್ನದ್ದರಾಗಿಯೆ ತುಂಬುರ ನಾರಂದ
ಉನ್ನತುತ್ಸವದಿ ಪಾಡುತಲಿ            ೧೦೦

ರಂಬೆ ಊರ್ವಸಿಯರು ಪಾತ್ರವನಾಡುತ
ಸಂಭ್ರಮಿಸುತ ಭೃಂಗಿಮೊಳಗೆ
ಅಂಬರದಿ ಸುರರುಘೆಯೆನುತಿದ್ದರು
ತಂಮಟ ಭೇರಿ ವಾದ್ಯದಲಿ   ೧೦೧

ಹೋದವು x x x x x x ಶಿವಲೋಕರಾಗಲೆ
ಆದವು ಉತ್ಸವ ಜನಕೇ
ಆ ದಿನ ಶರಣರು ಕೈಯೆತ್ತಿ ಕುಣಿದರು
ಮೇದಿನಿಯೊಳು ತಮತಮಗೇ           ೧೦೨

ತೋರುತ ಹೋದನು ಭವಲೋಕವ ಭೃಂಗಿ
ತೋರಿದ ದೇವ ಲೋಕವನೂ
ತೋರಿಸಿದ ಮುಂದೆ ಕೈಲಾಸ ಶಿಖರವ
ತೋರುತ ನಡದ ಭೃಂಗೀಶಾ            ೧೦೩

ದೂರದಿ ಬೆಳುಮುಗಿಲಂದದಿ ಹೇಳುವುದು
ವೀರಣ ರಜತಾದ್ರಿ ಕೋಟಿ
ಮಾರಾರಿಯರ ಮನೆ ಹೊನ್ನುಪ್ಪರಿಗೆಯ
ವೀರರಿಗಾಗಿ ತೋರಿಸಿದಾ     ೧೦೪

ಅಲ್ಲಿ ಸುತ್ತ ಮುತ್ತ ಮೆರೆವ ಉಪ್ಪರಿಗೆಯು
ಎಲ್ಲಾ ಶರಣರ x x x x
ಬಲ್ಲಿದ ಶರಣರು ಗುಂಡಬೊಮ್ಮಣ್ಣಗೆ
ಎಲ್ಲವ ತೋರಿದ ಭೃಂಗೀ   ೧೦೫

ಚಂಬಕ ಹರಢಕ್ಕೆ ಡಮರುಗ ಪಟಹವು
ಬಾಂಬುಳಿ ಗೋಮುಖ(ವಾ) ಡ x x
ತಂಮಟ ಗಿಡಿಬಿಡಿ ಥೋಳಿ ನಿಸ್ಸಾಳವು
ಸಂಭ್ರಮಿಸುತ ನಾಗಸ್ವರವೂ            ೧೦೬

ರಾಯಗಿಡಿಬಿಡಿ ಭೇರಿ ಪಟಹ ಡಿಂಡಿಮ ಶಂಕ
ತೂರಣವರೆಯು ಲಗ್ಗೆ ಧ್ವನಿಯಾ
ಮಾಯಲಿ ಮದನ ವಿರೋಧಿಯು ಕೇಳಿದ
ತೀವಿದಿಡ್ಡೋಲಗದೊಳಗೆ   ೧೦೭

ಕರುಣೆಗಳರಸನ್ನು ತರಣಿ ಶಶಿ ಜೂಟ
ಹಿರಿದು ಸಂತೋಷಗಳಿಂದಾ
ಶರಣರು ಗುಂಡಬೊಮ್ಮಣ್ಣಗಳವರೀಗ
ಬರುತಿಹ ಸಿರಿಯೆಂದು ಹರನೂ         ೧೦೮

ಮಾರಾರಿ ಬೆಸನಿತ್ತ ಮಾರುತಗಾಗಲು
ತೋರಣ ಗುಡಿಗಟ್ಟಿಸೆನುತಾ
ಭೋರನಾರತಿ ಧಾರ ಸುರರು ಕಿನ್ನರರು
ನಾರಿಯರೆಂದು ಸಾರಿದರೂ  ೧೦೯

ಹರನ ನಿರೂಪದಿ ಸಾರಿದೆನುನುತಲಿ
ಮರಳಿ ಹೇಳಿದ ಮಾರತನೂ
ಶರಣರನಿದಿರ್ಗ್ಗೊಳ್ಳ ಹೋಗಲು ಹೇಳಿದ
ಪುರದ ಪಂಚಮ ವಾದ್ಯ ಸಹಿತಾ        ೧೧೦

ತೋರಣ ಗುಡಿಗಳು ಪನ್ನೀರ ಛೆಳೆಯವು
ಕೇರಿ ಕೇರಿಯೊಳು ಶೃಂಗರಿಸೆ
ನಾರಿಯರಾರತಿ ಪಂಚಮ ವಾದ್ಯದಿ
ವೀರರನಿದರ್ಗೊಳ್ಳುತ ನಡಯೀ        ೧೧೧

ಬರುತ ಬರುತ ಕೈಲಾಸದ ಬಾಗಿಲ
ನಿರುತದಿಂದಲು ಹೊರಹೊಂಟೂ
ಹರುಷದಿಂದಲಿದಿರ್ಗ್ಗೊಂಡರು ಶರಣರು
ಭರದಿಂದ ಗುಂಡಬೊಮ್ಮಣ್ಣರಾ      ೧೧೨

ಹರನ ಕೈಲಾಸವ ಹೋಗುವಾಗ ಸಂದಣಿ
ಉರವಣಿಗಳನೇನನೆಂಬೆ
ನೆರವಿ ನೋಟಕ ಮಂದಿಗಾವಳಿ ಜನರನು
ಹೊರಳಿಯ ಮಾರುತ ನಿಲ್ಲಿಸ್ಸೆ        ೧೧೩

ಬಾರದ ಭವಿಗಳ ಬಂದ ಪಾತಕರನು
ಸಾರೆ ನೂಕಿ ಕೊಲ್ಲೆನುತಾ
ಆರಿಗೆ ಸದರವೂ ಭಕ್ತಿಹೀನರಿಗೆಂದು
ಮಾರುತ ಜರುದು ನೂಕಿದನೂ         ೧೧೪

ಧಾನವು ಧರ್ಮವು ಪರೋಪಕಾರವು
ನೆನವು ಮಾಡದೆ ಬರಿದೆ
ದೀನರಾಗಿದ್ದರುಯಮನಾಲಯ ಕೈದಿ
ಏನುಕಾರಣಯಿತ್ತ ಬರಲೂ  ೧೧೫

ಮುಂದಣ ಪಯಣಕೆ ಸಂಬಳವಿಲ್ಲದೆ
ಹಿಂದಕೆ ಹೋದರು ಎನುತಾ
ಎಂದೆಂದು ಸಂಸಾರ ನೆಲೆಯೆಂದು ಮೆರೆದಿರಿ
ಮುಂದೆನ ನುಡಿರಿ ಯೆಂದಾ  ೧೧೬

ಮಾಯಾಪಾಶದ ಬಲೆಯೊಳು ಬಿದ್ದಿದ್ದು x
x x x x x ದೆ ಲೋಭದಿಂದಾ
ಸಾಯಿರೋನರಗುರಿ ಹೋಗೆಂದು ಮಾರುತ
ನೂಯ್ಯ ನುಡಿದು ನುಕುತಿರ್ದಾ         ೧೧೭

ಭಕ್ತಹೀನರು ನೀವು ಭವವಿನ್ನು ಹಿಂಗದು
ಭಕ್ತ ಜಂಗಮಮವಾಗಬಹುದೆ
ನೊಕ್ಕಿ ಬಂದಿರಿ ಸಾಕು ಹೋಗಿರೋ ನಿಮಗಿನ್ನು
ಸಿಕ್ಕದು ಶಿವನೋಲಗವೂ    ೧೧೮

ಪಾಪಿ ಕೋಪಿ ದಾನ ಧರ್ಮ ಹೀನರನೆಲ್ಲ
ಕೊಪಿ x x x x x x x x x ಸೂಕಿ
ಆ ಪುರವರದ ಬಾಗಿಲ ನಿಕ್ಕಿಸುತಲು
ಕಾಪಾಲಿ ಬಳಿಗೆ ನಡದನೂ   ೧೧೯

ನಡದವು ಪುಷ್ಪಕ ಹರನ ವೋಲಗಕಾಗಿ
ಒಡನೆ x x x x x x x x x x x ಮೇಳಾ
ಹಿಡಿದು ಊದುವ ವಾಸುಕಾರರ ಕಾಳೆಯ
ಸಡಗರ ಸಂಬ್ರಮ ಮುದದಿಂದಾ        ೧೨೦

ತುಂಬುರ ನಾರಂದ ದಿಬ್ಬರ ಗೀತವು
ರಂಬೆ ಊರ್ವಸಿಯ ಪಾತ್ರ
ಶಂಭುವ ಕೈಲಾಸ ಸೂಳೆಗೇರಿಯೊಳೆಲ್ಲ
ಇಂಬಿಲ್ಲ ಪುಷ್ಪಕ ಬರಲೂ  ೧೨೧

ಈರೇಳು ಕೇರಿಯ ಈ ಥರದೊಳಗೆಲ್ಲ
ಓರಣ ಮಕರ ತೋರಣಾ
ಸಾರಣಿ ಕುಂಕುಮ ಪನ್ನೀರ ಛಳೆಯದಿ
ಸೂರಿಯ ಸೋಮ ವೀಧಿಗಳೂ          ೧೨೨

ಓರಣವಾಯಿತು ಕಂಚಿಯ ಪುರವಲ್ಲಿ
ಮಾರಾರಿ x x ಪಟ್ಟಣದೊಳಗೆ
ವೀರ ಸಿರಿಯಾಳನ ಪಟ್ಟಣದೊಳಗೆಲ್ಲ
ಸಾರ ಶ್ರೀಗಂಧದಂಗಡಿಯೂ೧೨೩

ನೋಡುತ ಹೋದರು ಗುಂಡಬೊಮ್ಮಣ್ಣರು
ಕೂಡೆ ಪಂಚಮ ಸಹಿತಾ
ಕೂಡೆ ಕಂಡರು ದೂರದಿಂದವೇರಾಗಲು
ರೂಢಿಗೀಶ್ವರನರಮನೆಯಾ೧೨೪

ಕಾಮಾರಿಯರ ಮನೆಗಾಣುತಲಿಳಿದರು
ಆ ಮಹಿಮ x x x x x ಕವಾ
ಸೋಮಧರೆಗೆ ಮೈಯಿಕ್ಕುತ ನಡದರು
ಕಾಮಿನಿಯರು ಸಹಿತಾಗ      ೧೨೫

ನಡದು ಬರುತ ಪೊಡಮಡುತಿರೆ ಮುಂದನೆ
ಪೊಡವ ವಾದ್ಯದ ರವವೆಸೆಯೆ
x x x x ರಹುಗಳಿಲ್ಲ ಕೈಲಾಸದೊಳಗೆಲ್ಲ
ಎಡಬಲ ನೋಟಕ ಜನರೂ  ೧೨೬

ಇಕ್ಕೆಲದಲಿ ಮುಂದೆ ಉಲಿವ ಪಾಠಕರಲ್ಲಿ
ಹೊಕ್ಕರು ಹರನರಮನೆಯಾ
ಮಿಕ್ಕು ಮೀರಿಮೆ x x x x x x x ಹೊಕ್ಕರು
ಮುಕ್ಕಣ್ಣ ಹರ ಕರುಣೆನುತಾ           ೧೨೭

ಉತ್ತಮ ಮೀಸಲು ಭಕ್ತಭಂಡಾರದ
ರತ್ನವ ಕಾಣಿಕೆಗೊಟ್ಟೂ
ಮತ್ತಲ್ಲಿ ಶಿವನಂಘ್ರಿಕಮಲದಿ ಹೊರಳಿದ
ಸತ್ಯರು ಗುಂಡಬೊಮ್ಮಣ್ಣಾ           ೧೨೮

ಹರ ಶ್ರೀಚರಣಕೆ ಹೊರಳಿಯು ದಣಿದರು
ಶರಣರು ಸತಿಯರು ಸಹಿತಾ
x x x x x x x x x x x x x x x x x x x x x ಕರುಣದಿ
ಶರಣರ ಹರದಿಂದಾ           ೧೨೯

ಒರೆದು ನೋಡಿದೆ ಗುಂಡಬೊಮ್ಮಣ್ಣ ನಿಮ್ಮನು
ಹಿರಿದಾಗಿ ಬಳಲಿದಿರೆನುತಾ
ಅರಿಬಿರಿ ದಿನ ಭಕ್ತಿ ತೀರಿತು ನಿಮಗೆಂದು
ಮರಳಿ ಸಂತೈಸಿದ ಹರನೂ  ೧೩೦

ಅಮರ ಗಣಂಗಳು ರುದ್ರ ಗಣಂಗಳು
ಅರವತ್ತು ಮೂವರು ಕೂಡಿ
ಹರನು ಕೊಂಡಾಡುತ ಹೇಳಿದ ವೀರರ
ಸಿರಿಯನು ಹರ ಬ್ರಹ್ಮರೊಡನೆ          ೧೩೧

ದೆಸೆಯ ಗಣಂಗಳು ಅಸಮಸಂಖ್ಯಾತರು
ಹೆಸರ ಕೇಳಿರೆ ಇವರುಗಳಾ
ವಸುಧೀಶ ಗಣಪತಿರಾಯಗೆ ಕೊಡದೆಮ್ಮ
ಬಸಿದ ಶೂಲಗಳ ನೇರಿದರೂ            ೧೩೨

ಹಲವು ಪರಿಯಲಿ ಹರೆ ಕೊಂಡಾಡುತಿದ್ದನು
ಛಲವಾದಿ ಗುಂಡಬೊಮ್ಮಣ್ಣರಾ
ಸಲುವ ಮಕ್ಕಳು ನೀವು ಗಣಪತಿಯಿಂದಲು ನಿಮ್ಮ
ಲಲನೆಯರಿಬ್ಬರು ಸಹಿತಾ   ೧೩೩

ಬಂಧು ಬಳಗ ತಾಯಿ ತಂದೆಯರೆಲ್ಲರು
ಎಂದೆಂದು ಶಿವಭಕ್ತರೆನುತಾ
ನಂದಿವಾಹನ ಹರಕೊಂಡಾಡುತಿದ್ದನು
ತಂದಲ್ಲಿ ಗುಂಡಬೊಮ್ಮಣ್ಣರಾ       ೧೩೪

ಬಾರಯ್ಯ ಗುಂಡಯ್ಯ ಬೊಮ್ಮಯ್ಯ ನಿಮ್ಮ
ವಾರಿಬ್ಬರು ಸಹಿತಾ
ಬಾರಯ್ಯ ಬಳಲಿದಿರೆಮ್ಮಣೆಯೆನುತಲು
ಮಾರಾರು ಕೆಗಳ ಪಿಡಿದಾ    ೧೩೫

ಕರದು ಕುಳ್ಳಿರಿಸಿದ ಶರಣರನಿಬ್ಬರ
ಹರನು ಆನಂದ ಲೀಲೆಯಲಿ
ಕರುಣಿಸಿ ಕೊಟ್ಟನು ಗುಂಡಬೊಮ್ಮಣ್ಣಗೆ
ಸ್ಥಿರವಾಗಿ ಗಣ ಪದವಿಯನೂ          ೧೩೬

ಪರಿಪರಿ ಮಾಣಿಕದೊಪ್ಪು ಉಪ್ಪರಿಗೆಯ
ಕರಿಮುಖನರಮನೆ ನೆರೆಯ
ಹರನು ಕೊಟ್ಟನು ಗುಂಡಬೊಮ್ಮಣ್ಣಗಳಿಗೆ
ಸ್ಥಿರ ಸಾಯುಜ್ಯ ಪದವಿಯನೂ        ೧೩೭

ಭಾವನು ಮೈದುನು ಸಂಗಡವಿರೆಲೆಂದು
ತಾವೆಣಿಯಗಲದಿರೆನುತಾ
ದೇವರು ಶರಣರ ಕೊಂಡಾಡುತಲಿರ್ದನು
ದೇವ ಸಭೆಯು ಗಣ ಪೊಗಳೇ           ೧೩೮

ಮನ್ಮಥ ವೈರಿಯ ಚೆನ್ನಾಗಿ ಭಜಿಸಿಯೆ
ಮುನ್ನಿನವರು ಗಣ ಪದವಾ
ಉನ್ನತವಾಗಿಯೆ ಪಡೆದರು ಶಿವಲೋಕ
ವಿನ್ನಾವ ಸಂಶಯವಿಲ್ಲಾ    ೧೩೯

ಸೆಲೆ ನೆಲೆಯಾಯಿತು ಕೈಲಾಸ ವಾಸವು
ಛಲವಾದಿ ಗುಂಡಬೊಮ್ಮಣ್ಣಗೆ
ಸುಲಭರು ಶಿವ ಸರ್ವ ಶರಣರು ಕೇಳಿಯೆ
ನೆಲೆಯಹುದೀ ಕೈಲಾಸ       ೧೪೦

ಒಪ್ಪುಗೊಂಡರು ಹರ ಗುಂಡಬೊಮ್ಮಣ್ಣರ
ಒಪ್ಪುವ ಕೈಲಾಸದೊಳಗೆ
ಒಪ್ಪವಾಯಿತು ಭಕ್ತಿ ಜಂಬು ದ್ವೀಪದೊಳೆಂದು
ಸರ್ಪಭೂಷಣ ಕೃಪೆಯಿಂದಾ            ೧೪೧

ವಾಸುಗಿ ಭೂಷಣ ಈಶ ಸರ್ವೇಶ್ವರ x x
ಸಾಸಿರ ನಾಮಧೀಶ್ವರನೂ
ಭೂಸುರ ಶತಕೋಟಿ ತೇಜನೊರ್ಪ್ಪಿದನೂ
ಲೇಸಾಗಿ ಕೈಲಾದದೊಳಗೆ    ೧೪೨

ಅಂಬಿಕೆಯರ ಸಮನಾಟ್ಯ x x x x x x x x x x
x x x x x x x x x x x x x x x x x x
x x x x x x x x x ದ್ದ ರವಿಕೋಟಿ ತೇಜನು
ಶಂಭು ವೊಪ್ಪಿದ ಕೈಲಾಸದಲಿ          ೧೪೩

ವರ ಗುರುರಾಯನು ವಿಶ್ವೇಶ್ವರನ
ವರಸುತ ಮಾಧವಮೂರ್ತಿ
ಗುರು ಕರುಣಗಳಿಂದಲು ಮುನ್ನಲೊದಗಿದ
ಶರಣ ಚರಿತ ಸಂಪೂರ್ಣ      ೧೪೪

ಗುಂಡಬೊಮ್ಮಣ್ಣನ ಕಾವ್ಯದ ಜಗದೊಳು
ಕೊಂಡಾಡಿಯೆ ಪಾಡುತಿರಲೂ
ಖಂಡೆಂದು ಮೌಳಿಯ ಖಂಡಿತ ವದವೀವ
ಕಂಡು ಹೇಳಿದ x x x x      ೧೪೫

ಅಳಿಯ ಸೋಮ ಮಲ್ಲಿನಾಥ ಭೂಪಾಲನ
ಕರಣಿಕ ನರಸಪ್ಪನ ಸುತನೂ
ಇಳೆಯೊಳಾತನ ಸುತ ಮಧುವರಸನ ಮಗ
ತಿಳಿದು ಹೇಳಿದ ಕಾಶೀಪತಿಯೂ        ೧೪೬

ಹರನ ಕಿಂಕರ ನಾನು ಶರಣರ ಶಿಶುನಾನು
ಭರದಿಂದ ಕಾವ್ಯದ ತಪ್ಪಾ
ಗುರುಲಿಂಗ ಜಂಗಮ ಹಿರಿಯರು ಶರಣರು
ಮರುಳ ನುಡಿಯ ನೊಪ್ಪುಗೊಳಲಿ     ೧೪೭

ನಾರಾಯ x x x x x x x x x x x x ಕರುಣದ
ಕಾರುಣ್ಯದಿಂದಲು ಚರಿತೆ
ಪಾರಾಯ(ಣ) ವಾಯಿತು ಪುರಾತನರ ಕೃಪೆಯಲು
ದಾರಿಯನರಿಯೇ ನಾನಿದರಾ            ೧೪೮

ವಸುಧೆಯೊಳಾವನು ಕೇಳಿನಾದಡೆ
x x x x ಸಲಹುವನವರಾ
ಯೆಸೆವ ಕನಕ ಕನ್ಯದಾನ ಕಾಮಾರ್ಥವು
ಪಶುಪತಿ ಕೊಡುವ ಕೇಳ್ದರಿಗೆ           ೧೪೯

ಯುಗಯುಗದಿ ಮಾಡಿದ ಪಾಪವು ಪರಿಹರ
ಜಗದೀಶ ಘನ ಪದವೀವಾ
ಜಗದಾರಾಧ್ಯನೆ ಅಘ ಸಂಹಾರಿಯೆ
ಮೃಗಧರ ಜೂಟ ಬಿನ್ನಪವು            ೧೫೦

ಶರಣರಿಗಾರು ಸರಿಯಲ್ಲವೆಂದನು
ಕರುಣಿಕ ಮಧುವಪ್ಪ ಸುತನೂ
ವರೆದು ಹೇಳಿದ ಬೊಮ್ಮಣ್ಣ ಚರಿತೆಯ
ಶರಣರ ಶಿವೈಕ್ಯರು ಕೇಳೇ    ೧೫೧

ಒಪ್ಪಿಸಿದೆನು ಶಿವ ಶರಣರ ಕಾವ್ಯವ
ತಪ್ಪದೆ ಹದಿನೆಂಟು ಸಂಧಿ
ಒಪ್ಪಗೊಂಡವು ಪದ ಸಾವಿರದಾರುನೂರ ಹದಿಮೂರು
ಒಪ್ಪಿತು ಶಿವನ ಚರಣಕೆ      ೧೫೨

ಅಂತು ಸಂಧಿ ೧೮ಕ್ಕಂ ಪದ ೧೬೧೩ಕ್ಕಂ
ಮಂಗಳ ಮಹಾಶ್ರೀ ಶ್ರೀ ಶ್ರೀ