ಸಂಧಿ

ಹೇಳುವುದು ಆರಾಧ್ಯ ಶಂಕರನೆ ಮೆಲ್ಗತೆಯ
ಆಲಿಸಲು ಶರಣ ಘನಮನಕೆ ಇಂಪಾಗುತಿದೆ
ಹೇಳುವುದು ಕರುಣದಿಂ ಶರಣರುನ್ನತಿಗಳನು
ಮೇಳೈಸಿ ಶೂಲವನು ಕೈಲಾಸಪುರಕೆದ್ದ ಬೊಳೈಸಿ ಹರನೊಲಿದುದಾ ||
ಕೇಳಯ್ಯ ಶರಣರೊಳಗಗ್ಗಳರಕ ತನವನು
ಧೂಳಿಪಟವನು ಮಾಡಿ ಯಮನ ಭಟರಂಗೆಲ್ದು
ಏಳಿಗೆಯ ಲೋಕಕೆ ತೋರ್ಪಂತೆ ಮುಂದಕೆ
ಬಾಳ ಬಗೆಯಲಿ ಪೇಳ್ದದೊರೆಯನುದ್ದಂಡಿಸಿಯು ನಿಶ್ಚಯಿಸಿ ಗುಂಡಬ್ರಹ್ಮಾ           ೧

ಭೇರಿ ತಮ್ಮಟ ಹರೆಯು ಗಿರಿಬಿಡಿಯು ನಿಸ್ಸಾಳ
ಭೂರಿಡುವ ಕಹಳೆಳ ದಸೆವೆಣ್ಣು ದೆಸೆಯಲಿ
ಭೇರೆ ಭೇರೆಯು ನುಡಿವರಣಗಾಳೆ ಮೃದಂಗ
ಚೀರುತಿಹ ಸಕಲ ವಾದ್ಯದರವ ಸಹ ಮೊಳಗಲೆ ಹರ ನೋಡಿ ಮನದಿನಲಿದೂ ||
ವೀರರಿವರಿಬ್ಬರನು ಸಲೆನೋಡು ನಾರನೆ
ದೀರತ್ವ ಕುಂದಿಲ್ಲ ಪ್ರಾಣದಾಸೆಗಳಿಲ್ಲ
ಓರಂತೆ ದೊರೆ ಪೇಳೆ ಸುಮ್ಮನಿರಿಸಿದರವನ
ನಾರಿಯರದಟುಗಳ ನೋಡಿದೆಯ ನಾರದೆಯ ನಾರದನೆ ಮೀರಿದ ಪರಾಕ್ರಮಗಳಾ       ೨

ನಂದಿಗೀಶ್ವರ ಮುನಿಯು ಮಾತಾಡುವನೀತರೊಳು
ಬಂದು ಶೂಲಕೆ ನಮಿಸಿ ಕರಮುಗಿದು ದೇವಾಂಗೆ
ಮುಂದುವರಿ ವಗ್ಗಳಿಕೆಯಿಂದ ಶೂಲವನಡರಿ
ಚಂದದಿಂ ಖಡ್ಗವನು ಬಿಡದೆ ವದರಿಸುತಿರರಲು ಅಂದವಡೆದಾ ಸತಿಯರು ||
ಚಂದದಿಂ ತಳಿಗೆಯಲಿ ಬಿಡುಮುತ್ತಿನಾರತಿಯ
ತಂದು ಸೂಸುತ ತಮ್ಮ ತಮ್ಮ ಪತಿಗಳಿಗಾಗ
ಗೊಂದಣದ ವೀರಸೇಸೆಯನಿಟ್ಟು ಹರಸಿಮನ
ದಂದು ಮಂಡಿಸಿ ಬಳಿಕ ಒಟ್ಟ ಕುಚೆಯರು ನಲಿದು ಮಂಡಿಯನು ರಚಿಸಿ ಬಳಿಕಾ          ೩

ಕಡೆಯವ ಪಿಡಿದು ಕರದಲಿ ಝಳಪಿಸಿಯು ಕೂಡೆ
ಗಂಡುಗಲಿಗಳ ಮುಂದೆ ಶಿರಕೆ ಕತ್ತಿಯನೆತ್ತಿ
ಕಂಡಿಸಿತು ಹೊನ್ನರವು ಕೆಂಬೂನಲು ಹೊರಸೂಸೆ
ಅಂಡಲೆಯಾರ್ಭಟವು ಗಲಿಗಲಿಗಲಿಯನಲು ಕೊಂಡೆಯ್ದ ಹರ ಪ್ರಾಣವಾ ||
ಗಂಡುಗಲಿಗಳು ಸತಿಯರಾನಂದವನು
ಮಂಡೆಯನು ತೂಗಿ ನಲಿನಲಿದುಬ್ಬಿ ಮನದೊಳಗೆ
ಗಂಡೆದ್ದು ಮನವುಬ್ಬಿ ಮಲತು ಶೂಲವ ನೋಡಿ
ಕಂಡೆಯವ ಹಿಡಿದು ಶೂಲದ ಮೊನೆಗೆ ದೇಹಗಳ ಅಂಡಲೆಯ ಸುರದಿ ಕರವೂ  ೪

ಕೊಂಡಾಡಿ ಆನಂದದಿಂದ ಹೂಮಳೆಗಳನು
ತಂದು ಸುರಿವ ನೀತಿರೊಳು ಗುಂಡಬ್ರಹ್ಮಯ್ಯಗಳು
ಗಂಡುಗಲಿಗಳುಯೆದೆಯನ್ನು ಚಳಿಸೆ ಶೂಲದಲಿ
ಕಂಡ ಧರಿಜನ ಮತ್ತೆ ಹಲವು ಚಂದದೊಳಗಾಗ ಕೊಂಡಾಡೆ ಹರ ಕಂಡನು ||
ಕಂಡಿಂದುಶೇಖರನು ಹೆಚ್ಚಿ ಮನದೊಳುನಲಿಯೆ
ಬಂದುದಾಗಲೆ ದೇವಪುಷ್ಪಕವು ಶರಣಗೆ
ಅಂಡೆಲೆದು ದೇವದುಂದುಭಿ ಮೊಳಗಿದವು ಕೂಡೆ
ಗೊಂಡೊಯ್ದೀಶ್ವರನಾಗ ಗುಂಡಬ್ರಹ್ಮಣ್ಣಗಳ            ೫

ಅಂತುಸಂಧಿ ೩ಕ್ಕಂ ಪದನು ೬೮ಕ್ಕಂ
ಮಂಗಳ ಮಹಾಶ್ರೀ ಶ್ರೀ ಶ್ರೀ