ಶಂಭುಲಿಂಗಾಯ ನಮಃ | ನಮಃ ಸ್ತುಂಗ ಶಿರಸ್ತುಂಬಿ ಚಂದ್ರಚಾಮರ ಚಾರವೆ | ತ್ರೈಲೋಕ್ಯ ನಗರಾರಂಭ ಲಸ್ತಂಭಾಯ ಶಂಭುವೇ | ……… ಸೂರ್ಯಕೋಟಿ ಸಮಷ್ಟಿ ಬಾ | ನಿರ್ವಿಘ್ನ ಗುರುವೇ ದೇವಾ ಸರ್ವತಾ | ………… |ಆದಿ ಅಲ್ಲಮಾ ಪ್ರಭುವಿನ ಸಂಮುಖದಲ್ಲಿ ಪಂಚಮುಖಗಳು ಹುಟ್ಟಿದವು | ಪಂಚಮುಖಗಳಿಂದ ಪಂಚ ಬ್ರಹ್ಮರು ಹುಟ್ಟಿದರು | ಅನಂತ ಕೋಟಿ ಮಹಾಕಾಲ ಪ್ರಳಯಂಗಳು | ಕೇವಲ ತೇಲುವಾಗ | …….. ಕಾಳದುಂದು ಮಹಾದುಂದು | ಕಾಳ ಕಾಳಂಧಕಾರವಾದದಂದು | ನಿರಾಕಾರನೆ ಬಲಿದು….. ಯ್ತು | ಅದು ಹೇಗೆಂದೊಡೆ | ಶೂನ್ಯವೆ ನೆಲೆಗೊಂಡು | ಪಂಚಮುದ್ರಿಗಳಿಂದ ಜನಿಸಿದ | ಪಂಚಬ್ರಹ್ಮರಿಂದ …. ಬ್ರಹ್ಮಸ್ವಯಂ ಜ್ಯೋತಿಯಲ್ಲಿ ನಿಃಶೂನ್ಯವೇ ನೆಲೆಗೊಂಡು | ದಂಡಿಕ ಬ್ರಹ್ಮ | ಸಿದ್ಧರ್ಲೊಕವಾಯ್ತು | ಕಾಳ ಶೂನ್ಯವೆ ಸಂಯುಕ್ತವಾಗಿ | ಕುಂಡಲಿ ಬ್ರಹ್ಮದಲ್ಲಿ ಜ್ಯೋತಿ ನಿರ್ಮಿತವಾಯ್ತು | ಪೂರ್ಧ್ವಶೂನ್ಯದ …. ಆರ್ಧಾ ಅಣುಬಿಂದು ಪರಬ್ರಹ್ಮ ಪರಂಜ್ಯೋತಿ ಪ್ರಕಾಶವಾಯ್ತು | ಒಟ್ಟು ಶೂನ್ಯ…. ದಂ …. ಗಿ ಆರ್ಧಾ ಬಿಂದು ಪರಬ್ರಹ್ಮದಲ್ಲಿ ಸುಬದ್ಧ ಜ್ಯೋತಿಯಾಗಿ ಪ್ರಜ್ವಲಿಸಿತೂ | ಯಿಂತೀ ಪಂಚ ನಿಷ್ಕಲ ಬ್ರಹ್ಮವು ಕೂಡಿ | ಜಗಂಜ್ಯೋತಿಯಾದ ಓಂಕಾರ …. ಸ್ವರೂಪ ವಾಯ್ತು | ಅನಂತಕೋಟಿ ಜಲಪ್ರಳಯವನೆಲ್ಲ ಹರಿಕೊಂಡು ಹೋಯ್ತು | ಅದು ಹೇಗೆಂದೊಡೆ | ಓಂಕಾರದ ಕೊನೆಯಲ್ಲಿ ಮೂರ್ತಗೊಂಡು | ಸದ್ಯೋಜಾತ ಮುಖದಿಂ ನೋಡಲು | ಯಿ ಜಲ ಪ್ರಳಯದಲ್ಲಿ ನಂದೀಶ್ವರನು ಅಂತರಿಕ್ಷದಲ್ಲಿಯಿದ್ದನು | ಅವಾಗ | ಸದ್ಯೋಜಾತ ಮುಖದಿಂ ಬ್ರಹ್ಮ ಹುಟ್ಟಿದ ವಾಮದೇವ ಮುಖದಿಂ ವಿಷ್ಣು ಹುಟ್ಟಿದ | ಈಶಾನ್ಯ ಮುಖದಿಂ ರುದ್ರ ಹುಟ್ಟಿದ | ತತ್ಪುರುಷ ಅಘೋರಾ | ಯಿ ಮುಖಗಳಿಂದ ಇಂದ್ರಾಸುರ ಮುನಿಗಳು ಹುಟ್ಟಿದರು | ಇವರು ಜಲಪ್ರಳಯವ ನೋಡಿ ನಂದೀಶ್ವರನಂ ಹಿಡಿದರು | ಶೃತಿ | ಒಂದು ಪಾದವ ಬ್ರಹ್ಮ ಹಿಡಿದನು ಒಂದು ಪಾದವ ವಿಷ್ಣು ಹಿಡಿದನು | ಒಂದು ಪಾದವ ರುದ್ರ ಹಿಡಿದನು | ಮತ್ತೊಂದು ಪಾದವನೂ | ಇಂದ್ರಾ ಮೊದಲಾದಖಿಳದಿವಿಜ ವೃಂದ ಹಿಡಿದರು ಸಕಲ ಗಣತತಿ ಚಂದದಲಿ ಹೊಗಳುತಿರ್ದರು ನಂದಿ ಜಯವೆನುತಾ | ಈತನ ಅಣುಮಲ ಮಾಯಾ ಮಲದಿಂದ ಜಲಪ್ರಳಯವು ಹೇಗಾಯ್ತು | ಇದು ಬಸವ ಚಾರಿತ್ರದೆಂದೂ ಶೃತಿ ಹೇಳಿಯಿದೆ | ಓಂಕಾರ ಪ್ರಣಮದಿಂದ ಜನಿಸಿದವು ಪ್ರಣಮಂಗಳು | ಮೊದಲು ಅಕಾರವೆಂಬೊ ಪ್ರಣಮದಿಂದ ಜನಿಸಿದವು ಮೂರು ಪ್ರಣಮಂಗಳು | ಅವರ ನಾಮಗಳು | ಅ ವರ್ಣಾಕ್ಷರ ಬ್ರಹ್ಮವು | ಅದ್ರಭ್ಯ ಬ್ರಹ್ಮವು | ದ್ರುಭ್ಯಬ್ರಹ್ಮ | ಯಂತಿವು ಚಿದಾನಂದ ಸ್ವರೂಪವು | ಇವು ಮೂರು ಬ್ರಹ್ಮವು ಒಂದಾಗಲಿ | ಅಲ್ಲಿ ಪರಾತ್ಪರನೆಂಬ ಮೂರ್ತಿ ಹುಟ್ಟಿದನು | ಯೀ ಮೂರ್ತಿಯಿಂದ ಆದಿ ರುದ್ರನು ಹುಟ್ಟಿದನು | ಈತನ ಸ್ವರೂಪ | ಆದಿ ಬಿಂದುವೆ ಧ್ವಜಂ | ಬೀಜಮಧ್ಯೆತುತೇಕುಲಂ | ಬೀಜನಾಸ್ತಿಕುಲಂ | ನಾಸ್ತಿ ತಸ್ಮಿಂನ್ಶಿವಕುಲಂಭವೆತ್| ಯೆಂಬ ಶಿವ ಬೀಜಾ ಸಂಸ್ಕಾರವಾದ | ಭಸಿತ ಯಗ್ಞೋಪವಿತಾ | ಪರಮ ಪವಿತ್ರಯೆಂಬ ಜನಿವಾರಾ | ಸಾಹಸ್ರ ಮುಖದ ಚಂದ್ರಾಯುಧವೇ ಆಯುಧ | ಶಿವಪಥ ದ್ರೋಹಿಗಳ ಸೀಳುವ ಉನ್ನತ ಬಾಹುಗಳು ಬಹಳ ಭಕ್ತವತ್ಸಲಾ | ಸಜ್ಜನ ಶುದ್ಧಶಿವಾಚಾರ | ವೀರಮಾಹೇಶ್ವರರ ನಿರೂಪವೆ ನಯನಾ | ಇಂತ್ತಪ | ಮೂರ್ತಿಯೆ ಮಹೇಶ್ವರನು | ಕ್ಷಿರವರ್ಣಾ ಯಳಿಯ ಪೂಣಿತದವರ್ಣಾ | ತನ್ನಿಲವರ್ಣಾ | ಯೆಂಬ ಮೂರು ರತ್ನದ ರಸವಾ ಕಡಿದ್ಯೆರಗಿದಾ ಕೋಟಿ ಬೆಳಗಿನವರ್ಣಾ | ಕೊಂಚನಲ್ಲ ಕರಿಕನಲ್ಲ ಸಾವಧಾನಲ್ಲ ಘಳಿಗಳಿಪ ರೌದ್ರ ಭಯಂಕರ ಬ್ಯಳಗಿನ ರೂಪು | ಪಂಚಶಿರ ಪಂಚಮುಖ | ದಶಭುಜಾ ಚಂದ್ರಾರ್ಕವಂನ್ಹಿಗಳೆ ನಯನಾ | ಮುಖವೈದಕ್ಕೆ ನಯನ ಹದಿನೈದು | ಯಿಪ್ಪತ್ತುಯೆರಡು ಸಾವಿರ ಜಡೆ | ಗಂಗಾಂತರಂಗ ಜಟದೌತ ಜಠಾಕಲಾಪಂ | ಮತ್ತಂ | ಗಂಗಾ ತರಂಗರಮಣೀಯವಾದ ಜಠಾ | ಕಲಾಪಂ | ವಿಶ್ವತೊಚಕ್ಷು ವಿಶ್ವತೊ | ವಿಶ್ವತೊಬಾಹು ವಿಶ್ವತೊನಾಶಿಕಾ | ವಿಶ್ವತೊವುದ್ಧರ ವಿಶ್ವತೊ ತನು | ವಿಶ್ವತೊಪಾದ ನಾಗಕುಂಡಲಾ | ನಾನಾಭರಣ | ತ್ರಿಶೂಲ ಢಮುರುಗ | ಪರಶು ವಜ್ರಾಂಕುಶ | ಜಟ್ಟಾಂಗಲನಾಕಬಾಣಾ | ಝಗ್ದರಶಲ್ಲ್ಯ ಪ್ರಬಲ | ಸಮೆಘವೆಂಬ ದಶಭುಜಕ್ಕೆ ದಶ ಆಯುಧ | ಕುಂತದ ಮೇಲೆ ವಿಶ್ವಶ್ವನನ ಪೆಣನು | ಬ್ರಹ್ಮಕಪಾಲ ಮುಸಿಕಿರ್ದ ಅಘೋರವಿದ್ಯಾ | ನಾನಾವೃತ್ತಿ | ನಾನಾ ಉಪನಿಷತ್ವದ | ಅಮೋಘ ಪೂಜನೆ | ಅರವತ್ತು ಆರುಕೋಟಿ ದೈತ್ಯರ ಶಿರಮಾಲೆ | ಚಂಡಕೀರ್ತಿಗಳೆ ಮುಖ | ಗಡ ಬಡಿಯ ವುದ್ಗಣವು | ವಾಮ ಶಕ್ತಿ | ಕೆಂಜರಿಗಂಣು ಜಂಜರುದೆಲೆ | ಹರಿಯ ವರಹ ಅವತಾರದ ಬೆನ್ನು | ಅಸ್ತಿಯ ಕಂಕಳ ನಾಮಾಯುಧ | ಹರಿನಯನಾರ್ಚಿತ ಪಾದಪದ್ಮಂ | ಸುರನದಿಯ ಜಲಪಾತ್ರೆ | ಮಂದಾರ ಪರಿಜಾತಕಂ | ಮಂದಾರ ಕೈವಲ್ಯ | ಬೆಳ್ಳಿಯ ಪರ್ವತಗದ್ದುಗಿ | ಕರಿಚರ್ಮವೆಂಬ ವಸ್ತ್ರಾ | ತಂಬ್ರವರ್ಣನೆಂಬಾ ಸರ್ಪನ ಯತ್ನೋಪವಿತಾ | ಸಾಮಾವೇದ | ರುದ್ರ ಗಾಯತ್ರಿ | ವ್ಯಾಗ್ರ ಚರ್ಮದ ಮಲ್ಲುಡಿಗಿ | ಕಾಮನ ಸುಟ್ಟ ಬೂದಿಯೆಂಬಭಸ್ಮಾಂಗಾ | ವೃಷಭವಾಹನವು ಮಯುಕ್ತ ಪಾಪಕ್ಷಯವ ಮಾಡುವ ಬಾಹು | ಸತ್ಯಸದ್ಭಕ್ತಿ ಗುಣಾಬ್ದಿ ಚಂದ್ರನೀಗ ನಯನಾ | ಯಿಂತಪ್ಪ | ಆದಿ ರುದ್ರಮೂರ್ತಿಯ | ಶ್ರೀ ಮಹಾ ಕೈಲಾಸ ವಾಸದಲ್ಲು | ಶ್ರೀಪರ ಶಿವಮೂರ್ತಿಯು | ಸಿಂಹಾಸನರೂಢನಾಗಿರ್ದ ಸಮಯದಲ್ಲು ಹರಿಸುರ ಬ್ರಹ್ಮದಿ ದೇವತೆಗಳು | ಒಡ್ಡೋಲಗಂಗೊಟ್ಟುಯಿರುವಲ್ಲಿ | ನಂದಿನಾಥದೇವಾ ಆ ಪರಶಿವಮೂರ್ತಿಗೆ ನಮಸ್ಕರಿಸಿ ವಿನಯ ಭಯಭಕ್ತಿಯಿಂದ ಕಿಂಕರತ್ವದಿಂದ ಬಿನ್ನೈಸುತ್ತಿರ್ದೊಡದಿಂತ್ತೊಂದಡೆ | ಹೇ ದೇವಾದಿ ದೇವಾ ದೇವ ಶಿಖಾಮಣಿ ಶ್ರೀ ಮನ್ಮಾಹ ಘನವಸ್ತುವೇ | ಪರಾತ್ಪರಮೂರ್ತಿಯೇ ಶ್ರೀ ರುದ್ರಭಾರತದಲ್ಲಿ ನಿರೂಪಿಸುವ | ಮೂಲತತ್ವವು ಹೇಗೆ ನಿರ್ಮಿತವಾದವು | ಸರ್ವಮೂಲ ಬೀಜಕ್ಷರಂಗಳು ಹೇಗೆ ಜನಿಸಿದವು | ಪರತತ್ವಕ್ಷರಂಗಳು ಹೇಗೆ ನಿರ್ಮಿತವಾದವು | ಪಂಚಾಕ್ಷರಂಗಳು ಉದಯವಾದವು | ಅವರವರ ಅಭಿದಾನ ಅಕ್ಷರಂಗಳು | ಹೇಗೆ ಆಕಾರವಾದವು | ಮತ್ತಂ | ಬ್ರಹ್ಮಾಂಡಗಳು | ಹೇಗೆ ಸೃಷ್ಟಿಯಾದವು | ಪಂಚಪ್ರಣಮ ಪಂಚ ಪಿಂಡಾಂಡ ದೇಹಗಳು | ಮನೋಕ್ಷೋಭ ಶಂಕೆ | ಸ್ತಿತಿ ಬೇಧಾದಿ ಆಧಾರಂಗಳು | ಹೇಗೆ ಹುಟ್ಟಿದವು | ಸಮಸ್ತ ಸಚರಾಚರಂಗಳು | ಹೇಗೆ ಜನಿಸಿದವು | ಚತುರ್ದಶ ಭವನಗಳು | ಹೇಗೆ ಹುಟ್ಟಿದವು | ಸಮಸ್ತ ಸಚರಾಚರಂಗ ಸಪ್ತಾದ್ವೀಪಂಗಳು| ಹೇಗೆ ನಿರ್ಮಿತವಾದವು | ಪಂಚಶತಕೋಟಿ ವಿಸ್ತರ್ಣಾವುಳ್ಳ ಭೂಮಿಯಲ್ಲಿ ಯೇನೇನು ವಸ್ತು ಹುಟ್ಟಿದವು | ಪಂಚಮಹಾ ವಾದ್ಯ ತಾಳ ಸಂಕೀರ್ಣಗಳು ಹೇಗೆ ಹುಟ್ಟಿದವು | ಬ್ರುಣ ಭಗವಾನ್ಕೇಳು | ಸದ್ಗುಣಲೈಶ್ವರ್ಯ ಸಂಪನ್ನನಾದ | ಪರಶಿವಮೂರ್ತಿಯೇಯಿಂತಿದರ ಬೇಧಾದಿ ಬೇಧಗಳ | ನಾನರಿಯೆನೆಂದು | ಶ್ರೀ ರುದ್ರನ ಚರಣಕ್ಕೆ ನಮಸ್ಕರಿಸಿ ಯತಿದೇವ ಎನಗೆ ನಿಮ್ಮ ಪ್ರಸಾದ ವಾಕ್ಯವಿನಿಂದ ನಿರೂಪಿಸೆಂದು ನಂದಿನಾಥ ದೇವರು | ಶ್ರೀ ರುದ್ರ ಪರಶಿವಮೂರ್ತಿಗೆ ಬಿಂನೈಸಲು |

ಆ ಪರಶಿವನು ಕೃಪಾವಲೋಚನದಿಂದ ನೋಡಿ ರಹಸ್ಯ ಮುಖನಾಗಿ | ಇಂತೆದನು || ಶ್ಲೋಕ || ಭ್ರುಣುನಂದಿಮಹತ್ಮಾ ನಾಂ | ವೇದಾಗ ಮಗೊಚರಂ | ಸುಜ್ಞಾನ ಜಗತ್ಸಾಕ್ಷಿ | ಸರ್ವಶಾಕ ವಿಶಾರದಃ | ಜೀವಸ್ಸಪರಮಂಬಿಜೋ ಮಹಿಧರ ಜಗತ್ಸುಕಾ | ಯಿಶ್ವರಂ ಮೇವಾಚಾ | ಶೈಯ್ಯ | ಪಂಚಪ್ರಣಮ ಸಂಭಃ | ಭ್ರುಣುನಂದೀಶ್ವರ ಕೇಳು | ಮೋಕ್ಷ ಸರ್ವಶಾಖಿಗಳು | ವಿಚಾರಿಸಿದ ವರಮೂರ್ತಿಯೆ| ಪ್ರಥಮದಲ್ಲಿ ಅಂಡಪಿಂಡ | ಬ್ರಹ್ಮಾಂಡಗಳ ನಿರೂಪಿಸುದೆನೆಸಲು | ಅಂದೆಂತು ಸ್ವಾಮಿ ನಿರೂಪಿಸಿರೆಂದು ಬಿಂನೈಸಲು | ಕಾಳದು ಮಹಾದಂದು | ಕಾಳಕಾಳಾಂಧಕಾರವಾದುದಂದು | ಅನಂತಕೋಟಿ ಮಹಾಕಾಲ ಪ್ರಳಯಂಗಳು | ಕೇವಲ ತೇಲುವಾಗ | ಸರ್ವಶೂನ್ಯ | ನಿರಾಕರಮಯವಾದ | ನಿರಾಕಾರವೆ ಬಲಿದು ಆಕಾರವಾಯ್ತು | ಓಂಕಾರ ಪ್ರಣಮದಿಂದ ಜನಿಸಿದವು ಪಂಚಪ್ರಣಮಂಗಳು | ಪಂಚಪ್ರಣಮಂಗಳಲ್ಲಿ ಪಂಚಮೂರ್ತಿಗಳು ಹುಟ್ಟಿದರು | ಶಕ್ತಿ ಕಲೆಯೆಂದರೆ ಈಶ್ವರಾ | ಶಾಂತಾತೀತ ಕಲೆಯೆಂದರೆ ಮಹೇಶ್ವರಾ | ವಿದ್ಯಾ ಕಲೆಯೆಂದರೆ ರುದ್ರಾ | ಪ್ರತಿಷ್ಠಾಕಲೆಯೇ ಈಶ್ವರಂಗೆ ಉಮಾಶಕ್ತಿಯಾದಳು | ಮಹೇಶ್ವರಂಗೆ ಇಚ್ಛಾಶಕ್ತಿಯಾದಳು | ರುದ್ರಂಗೆ ರುದ್ರಾಣಿಯಾದಳು | ವಿಷ್ಣುವಿಂಗೆ ಲಕ್ಷ್ಮಿಯಾದಳು | ಬ್ರಹ್ಮಂಗೆ ಸರಸ್ವತಿಯಾದಳು | ಮತ್ತಂ | ಆದಿರುದ್ರನಬ್ರು ಮಧ್ಯೆದಲ್ಲಿ | ದಶರುದ್ರರು ಹುಟ್ಟಿದರು | ಆದಿರುದ್ರನ ಉನ್ಮನೆಯ ಸ್ಥಾನದಲ್ಲಿ | ಅನಂತರುದ್ರರು ಹುಟ್ಟಿದರು | ಆದಿರುದ್ರನ ಅಪ್ರತಿಶಿಕಿಯಲ್ಲಿ | ಏಕಾದಶ ರುದ್ರರು ಹುಟ್ಟಿದರು | ಆದಿರುದ್ರನ ತ್ರಿಕುಟ ಸ್ಥಾನದಲ್ಲಿ ಏರಡೆಂಬತ್ತು ಕೋಟಿ ಪ್ರಮಥರು ಹುಟ್ಟಿದರು | ಆದಿರುದ್ರನ ವಾಮ ಕಪೋಲದಲ್ಲಿ | ಅಗಣಿತ ಶಿರದ ದೇವಗಣಂಗಳು | ಐದು ನಿರ್ಬುದದ ಐದು ಅರ್ಬುದದ ತೊಂಬತ್ತುಯೆಂಟು ಕೋಟಿ ಐದು ಲಕ್ಷಣದ ಐದು ಸಾವಿರದವರು ಹುಟ್ಟಿದರು | ಮತ್ತಂ ಆದಿರುದ್ರನ ದಕ್ಷಿಣ ಕಪೋಲದಲ್ಲಿ | ಹನ್ನೊಂದು ಕ್ಷೊಣೆ ಅಮರಗಣಂಗಳು ಹುಟ್ಟಿದರು | ಆದಿರುದ್ರನ ಶಿರದಲ್ಲಿ | ಆರುಕೋಟಿ ತೇರಸ ಮಹಾಗಣಂಗಳು ಹುಟ್ಟಿದರು | ಆದಿರುದ್ರನ ವಾಮ ಕದಪಿನಲ್ಲಿ ನೂತನ ಗಣಂಗಳು ಹುಟ್ಟಿದರು | ಆದಿರುದ್ರನ ಬಲದ ಕಣ್ಣುಲತೆಯಲ್ಲಿ | ಅಷ್ಠಮೂರ್ತಿಗಳು ಅಷ್ಠ ಭೈರುವರು | ಯೋಗಿಣಿಯರು ಹುಟ್ಟಿದರು |

ಇಂತಪ್ಪ ಆದಿರುದ್ರಮೂರ್ತಿಯು ತ್ರಿಪುರವನ್ನು ಸಂಹಾರ ಮಾಡುವಾಗ | ಕಚರನೆಂಬಾ ಗಾಂಧರ್ವನು | ಆದಿರುದ್ರಮೂರ್ತಿಯು ತ್ರಿಪುರವನ್ನು ಸಂಹಾರ ಮಾಡುವಾಗ | ಕಚರನೆಂಬಾ ಗಾಂಧರ್ವನು | ಆದಿರುದ್ರನ ಹತ್ತಿರ ಸೇವೆ ಮಾಡುತ್ತಯಿದ್ದರು | ತ್ರಿಪುರವನ್ನು ಸಂಹಾರಮಾಡಿ ಬರುವಷ್ಟರಲ್ಲಿ | ದಕ್ಷಿಣ ದಿಕ್ಕಿನಲ್ಲು | ಘಟಕಚಕ್ರದಾಕಾರವಾಗಿ | ವಾಸನವೆಂಬಾ ಕುಂಬೇಶ್ವರ ಲಿಂಗವು | ವಾಯುವೆಂಬಾ ಶಕ್ತ ಆಧಾರದಿಂದ ತಿರುಗುತ್ತಾಯಿತ್ತು | ಈ ಗಾಂಧಾರ್ವನು ನೋಡಿ | ಪ್ರಕಾಶ ಜ್ವಾಲಬಂಧನಗಳಿಂದ | ತಪವಂ ಬಲಿದು ಆದಿ ರುದ್ರನನ್ನು ಒಲಿಸಿದನು | ಇವನ ತಪೋಬಲಕ್ಕೆ ಮೆಚ್ಚಿ ಏನು ಬೇಡುತ್ತಿ ಬೇಡುಯನಲು ಸ್ವಾಮಿ ಈ ವಾಯು ಆಧಾರವಾಗಿ ತಿರುಗುವ ಲಿಂಗವು ಯಾಕೆ ತಿರುಗುತ್ತದೆ ಇದನ್ನು ಯಾರು ಮಾಡಿದರು | ಎಂದು ಕೇಳಲು | ಆದಿ ರುದ್ರನು ಕೋಪವನ್ನು ತಾಳಿ ಶಾಪವಂ ಕೊಟ್ಟನು | ಈ ಶಾಪ ನನಗೆ ಸಂಭವಿಸಿತೆಂದು | ಲಿಂಗವಂ ಪಿಡಿದು ನಿಂತುಕೊಳ್ಳಲು | ರುದ್ರನು ನಂದೀಶ್ವರನಂ ಹಿಡಿದು | ಈ ಗಾಂಧರ್ವನಿಗೆ ಲಿಂಗ ಪ್ರತಿಷ್ಠೆ ಮಾಡಿಕೊಟ್ಟನೂ | ಸ್ವಾಮಿ ಈ ಶಾಪ ಹ್ಯಾಗೆ ನಿಶ್ಶಾಪವಾಗುತ್ತದೆಂದು ಕೇಳಲು | ರುದ್ರಮೂರ್ತಿಯು ಹೇಳಿದನು | ಎಲೋ ಗಾಂಧರ್ವನೆ ಇದೆ ಚಕ್ರದ ಮೇಲೆ ಮೃತ್ಯಕಿಯ ಭಾಂಡಗಳು | ಲಿಂಗಾಕೃತಿಯ ಮಾಡಿ | ಶಿವಜಂಗಮದ ಸೇವೆ ಮಾಡಿದರೆ ಈ ಶಾಪ ನಿಶ್ಯಪ ಆಗುವದೆಂದು ಹೇಳಲು | ಸ್ವಾಮಿ ಈ ಚಕ್ರವು ಹೇಗೆ ನನಗೆ ಸಾಧ್ಯವಾಗುವದು ಇದರ ಅಭಿಪ್ರಾಯವೆನೆಂದು | ಕೇಳಲು | ಆವಾಗ ರುದ್ರಮೂರ್ತಿಯು ಹೇಳಿದನು | ಆಕಾರವೇ ಅಡಿಯ ಸೂಲದ ಗೂಟ | ಚಕಾರವೇ ಚಕ್ರ ಬಕಾರವೇ ಬೆತ್ತ | ಶಿಕಾರವೆ ಸೀಳುವ ಜನಿವಾರ | ಈ ಪ್ರಕಾರ ಚಕ್ರದ ಆಧಾರ | ನಿನನಗೆ ಪಂಚಾಕ್ಷರಿಯೇ ಆಧಾರ | ಗುರುಪಂಚಾಕ್ಷರಿ | ಹರಪಂಚಾಕ್ಷರಿ | ಶಿವ ಪಂಚಾಕ್ಷರಿ | ಪಾರ್ವತಿ ಪಂಚಾಕ್ಷರಿ | ಆತ್ಮ ಪಂಚಾಕ್ಷರಿ | ಇವುಗಳನ್ನು ಜಪಿಸಿದರೆ ನಿನಗೆ ಸಾಧ್ಯವಾಗುವುದೆಂದು ಹೇಳಿ ಅದೃಶ್ಯವಾದನು |

ಈ ಗಾಂಧರ್ವನು ಗದಗದ ನಡುಗಿ ಅದೃಶ್ಯವಾಗಿ | ಆದಿರುದ್ರನ ಪಾದದ ಧೂಳದಲ್ಲಿ … |ಜನಿಸಿ ಕೋಲಹರ ಗುಂಡಯ್ಯನೆಂದು ಹೆಸರಂ ಪಡೆದನು | ಯಿತಗೆ ಕುಲಮಹಾಸ್ವಾಮಿ ಕುಂಬೇಶ್ವರ ಲಿಂಗ | ಈತನ ಗೋತ್ರ ವೃಷಭ ಗೋತ್ರ | ಧರ್ಮ ಸಿಂಹಾಸನ | ಚಕ್ರದ ಮಠ ಗೊಳಕಲ್ಲು ಬಡಗಿ ಈ ಪ್ರಕಾರ ಕೊಟ್ಟು | ಈತನು ಇದೆ ಚಕ್ರದ ಮೇಲೆ ಮೃತ್ಯುಕಿಯ ಬಾಂಡಗಳು | ಲಿಂಗದ ಬಟ್ಟಲುಗಳಂ ಮಾಡಿ ಶಿವ ಜಂಗಮದ ಸೇವೆಯಲ್ಲು ಇದ್ದನು | ಆವಾಗ | ತೇತ್ರಾಯುಗದಲ್ಲು ಕುಂಭಜ ಋಷಿಯ ಕರುಣದಿಂದ ಇಬ್ಬರ ಮಕ್ಕಳಂ ಪಡೆದನು | ಇವರ ನಾಮ | ಗುಂಡಯ್ಯ ಬರಹ್ಮಯ್ಯ | ನೆಂದು ಹೆಸರಂ ನಿಟ್ಟು | ಗುಂಡಯ್ಯಗೆ ಶಿವಕ್ಕ ಬ್ರಹ್ಮಯ್ಯಗೆ ಮಹದೇವಕ್ಕ | ಇವರ ಲಗ್ನ ಮಾಡಿದ ಬಳಿಕಾ | ಕುಂಬೇಶ್ವರನ ಕರುಣದಿಂದ ಗುಂಡಮಕ್ಕಳಂ ಪಡೆದರು | ಇವರ ನಾಮ ಆದಿತ್ಯ ಕೈಲಾಸಪುರದ ಶಿವನಾಗಯ್ಯನ ಮಗಳು ಚೆಂನ್ನಮ್ಮನ ಗುಂಡಯ್ಯಗೆ ಲಗ್ನ ಮಾಡಿದ ಬಳಿಕಾ | ಕೈಲಾಸ ಪುರದಲ್ಲು ಶಿವಜಂಗಮದ ಸೇವಾದಲ್ಲು ಇದ್ದರು|

ಕೊಲಹಲನೆಂದು ಬಿರುದು ಪೊಗಳಿಸುತ್ತಯಿರುವ ಅಷ್ಟರಲ್ಲಿ ಒಂದು ದಿನ ಕಹಳೆಯ ಧ್ವನಿಯ | ಆದಿ ರುದ್ರನು ಕೇಳಿ ನಾರದರಂ ಕೂಡಿಕೊಂಡು | ಓರಗಲ್ಲ ಗಣಪತಿರಾಯನ ಮನಿ ಕನ್ಯಮಂ ಮಾಡಲು | ಹೋಗುವ ಅಷ್ಟರಲ್ಲಿ ಗಣಪತಿರಾಜನ ದಂಡು ಬೆನ್ನ ಹತ್ತಿ ಹಿಡಿಯಬೇಕೆಂದು ಹೋಗುವಾಗ | ಹರಿವೂಲಿಯಿಂದ ಬರುವಾಗ | ಅಲ್ಲಿ ನಿಂತನು ಹರುಮ ಗಟ್ಟಿಯೆಂಬಾ ಗ್ರಾಮವಾಯ್ತು | ಮುಂದಕ್ಕೆ ಹೋಗುವಷ್ಟರಲ್ಲಿ ಕೆಂಧೂಳ ಮುಸುಕಿತು | ಅಲ್ಲಿ ನಿಂತನು | ಕ್ಯಂಗೊಂಡವೆಂಬಾ ಗ್ರಾಮವಾಯ್ತು | ಮುಂದಕ್ಕೆ ಹೋಗುವಲ್ಲಿ ಅರುವಿಲ್ಲದ ಹೋಗುವಷ್ಟರಲ್ಲಿ | ಅಲ್ಲಿ ನಿಂತನು | ಅರುಬುಗೊಂಡವೆಂಬಾ ಗ್ರಾಮವಾಯ್ತು | ಮುಂದಕ್ಕೆ ಗುಂಡಯ್ಯ ಬ್ರಹ್ಮಯ್ಯನೆಂಬುವರ ಗ್ರಾಮವಾಯ್ತು | ಮುಂದಕ್ಕೆ ಗುಂಡಯ್ಯ ಬ್ರಹ್ಮಯ್ಯನೆಂಬುವರ ಗ್ರಾಮಕ್ಕೆ | ಹೋಗಿ ಅವರನ್ನು ಮೊರೆಹೊಕ್ಕನು | ಆವಾಗ ದಂಡು ಬಂದು ಮುತ್ತಿಗೆಯ ಹಾಕಿ | ಇವನ ಕೊಡುಯೆಂದು ಕೇಳುವಲ್ಲಿ ಕೊಡುವುದಿಲ್ಲವೆಂದು | ಈ ಪ್ರಜೆ ಪರಿವಾರವನೆಲ್ಲ ಸಂಹಾರ ಮಾಡಿದನು | ಆವಾಗ ಗಣಪತಿರಾಜನು ಇವರನ್ನ ಶೂಲಕ್ಕೆ ಹಾಕಿಸಬೇಕೆಂದು ಶೂಲವ ನಡಿಸಿದನು | ಈ ಗುಂಡಯ್ಯಗಳು ಹೋಗಿ ಶೂಲವಂಮುಟ್ಟುವಷ್ಟರಲ್ಲಿ ಶೂಲವು ಚಿಗಿತು ವನಂತ್ರಗಳಾದವು | ಗಣಪತಿ ರಾಜನು ಇವರು ದೊಡ್ಡವರೆಂದು | ಕಾಣಿಕೆಯಂ ಕೊಟ್ಟು ಹಿಂದಿರುಗಿ ಹೋದನು | ಇದು ಕುಂಬೇಶ್ವರವತಾರಣ | ಗುಂಡಬ್ರಹ್ಮಯ್ಯನ ಪುರಾಣದಲ್ಲಿ ಹೇಳಿದೆ |

ಗುಂಡಯ್ಯ ಬ್ರಹ್ಮಯ್ಯ | ಹೀಗೆ ಯಿರಲಿಕ್ಕಾಗಿ ಒಂದಾನೊಂದು ದಿನ ಇವರು ಭಾಂಡರಿಗಳ ಬಡಿಯುವ ತಾಳ ಸಂಕೀರ್ಣ ಧ್ವನಿಯಂ ಕೇಳಿ ಪರಮೇಶ್ರನು ಈತನ ಮುಂಭಾಗದಲ್ಲು ನಾಟ್ಯವಂ ನಾಡಿದನು | ಇವರು ತಿಗಿರಿಯ ಸುತ್ತವರಿದು ಬಿದ್ದಂತ ಮೃತ್ಯುಕಿ ಕನಕವಾಗುತ್ತಿತ್ತು | ಕೊಲಹಲರೆಂದು ಬಿರುದಾಂಕಿತಯಿತ್ತು | ಈ ಪರಮೇಶ್ವರನು ನಾಟ್ಯ ಆಡುವುದಕ್ಕೆ ನಾನು ಶ್ರೇಷ್ಠನಾದೆನಲ್ಲ | ಎಂಬ ಗರ್ವದಿಂದ ಸುಮ್ಮನೆ ಇದ್ದನು | ಈ ಪರಮೇಶ್ವರನು ದಣಿದು ಬೇಸತ್ತು ನೀರಿನ ಅರುವಿಯನ್ನು ಒಣಗಿಸಿದನು ನಾನು ಈತನಿಗೆ ಸೋತೆನೆಂಬ ಪಂಥದಿಂದ ಅರುವಿಯ ಮೇಲೆ ಉಗುಳಿ ಬಡಿದನು | ಅಯ್ಯ ಕುಂಬಾರ ಕರ್ಮ ನಿನ್ನ ಬಿರಿದಿಗೆ ಬಂತು ಸುಡಲೆ ಅಂತ ಹೇಳಿದನು | ಪೂರ್ವದಲ್ಲಿ ಸುಡುತ್ತಿದ್ದುಯಿಲ್ಲ | ಆವಾಗ ಈ ಗುಂಡಯ್ಯ ಬ್ರಹ್ಮಯ್ಯನ ಕೈಲಾಸಕ್ಕೆ ತೆಗೆದುಕೊಂಡು ಹೋಗುವ ಅಷ್ಟರಲ್ಲಿ ಸ್ವಾಮಿ ನಿಮ್ಮ ಅಂಶ ಭೂಲೋಕದಲ್ಲಿ ಕುರುಹು ಇರಬೇಕೆಂದು | ಕೇಳಿದಲ್ಲಿಗೆ ೧೨ ಮಂದಿ ಗುಂಡಯ್ಯಗಳು ಕ್ಷತ್ರಿಯರ ಗರ್ಭದಲ್ಲಿ ಉದ್ಭವಿಸಿ ಕೈಲಾಸಕ್ಕಂ ಹೋದರು ಇವರ ನಾಮ | ಆದಿಗುಂಡ | ಚಕ್ರಿಯ ಗುಂಡ | ತ್ರಿಭುವನ ಮೂಲ ಚಕ್ರಗುಂಡ | ಬ್ರಹ್ಮದಂಡ | ಭೂದಂಡ ಬ್ರಹ್ಮಂಡ ಬಾಂಡಕಂ | ಜೀವಮೇರು ಅಜಂಡಬಾಂಡೋಧರ | ಬಾದರಾಯಣಿ ಬಾದ ಮೈಯ್ಯೆ | ಬಾರಿಗುಂಡ | ಪಂಚಕಳಶ ಪ್ರತಿಷ್ಠಾಪನ ಗುಂಡ | ಪಂಚಕಳಸಕ್ಕೆ ಆಗ್ನಾಧಾರಕ ಗುಂಡ | ಇಂತಪ್ಪ ಆದಿಯಾದ ಉಮಾಪತಿಗೆ | ಭೂಮಿ ಗುಂಡಾಚಾರ್ಯರಿಗೆ ಕುಲ ಮಹಾಸ್ವಾಮಿ ಕುಂಬೇಶ್ವರಾ | ಇದು ಚರಲಿಂಗದ ಶಾಖೆ | ಆಚಾರ್ಯ ರೇವಣಸಿದ್ದೇಶ | ಮರುಳುಸಿದ್ಧಾಚಾರ್ಯ | ರಾಮಿದೇವಾಚಾರ್ಯ | ಗುರುಪಂಡಿತಾಚಾರ್ಯ | ಚೂತಮಧ್ಯದಿನಿಂದ ಪಂಚವಣ್ಣಿಗಿಯ ಸಿದ್ಧನಂಜೇಶ್ವರಾ | ಈ ಪಂಚಾರ್ಯದಿಂದ ಈ ಗುಂಡೈಯ್ಯಗಳು | ವೀರಶೈವ ದೀಕ್ಷೆಯನ್ನು ಹೊಂದಿದರು | ಪಂಚಕಲಶ ಪ್ರತಿಷ್ಠಾಪನ ಗುಂಡ ಪಂಚಕಲಶಕ್ಕೆ ಆಗ್ನಾಧಾರಕ ಗುಂಡ | ಮರುಳಾರಾಧ್ಯರಿಂದ ವೀರಶೈವ ದೀಕ್ಷೆಯನ್ನು ಹೊಂದಿದರು | ಬ್ರಹ್ಮದಂಡ ಬಾಂಡಕ ಏಕೋರಾಮ ತಂದೆಗಳಿಂದ ವೀರಶೈವ ದೀಕ್ಷೆಯನ್ನು ಹೊಂದಿದರು | ಚಕ್ರಿಗುಂಡ ತ್ರಿಭುವನ ಗುಂಡ ಪಂಡಿತಾರಾಧ್ಯರಿಂದ ವೀರಶೈವ ದೀಕ್ಷೆಯನ್ನು ಹೊಂದಿದರು. |ಭೂಮಿಗುಂಡ ಆದಿಗುಂಡ ವಿಶ್ವಾರಾಧ್ಯರಿಂದ ವೀರಶೈವ ದೀಕ್ಷೆಯನ್ನು ಹೊಂದಿದರು | ಬಾದರಾಯಣ ಬಾದಮೈಯ್ಯ ಇವರು ವೀರಶೈವ ದೀಕ್ಷೆಯನ್ನು ಹೊಂದಲಿಲ್ಲ.

ಇವರು ಕುಂಬೇಶ್ವರ ದೇವರ ಮಾಡುವ ವಿವರ

ಚಕ್ರದಾಕೃತಿಯ ರಂಗವಂ ಹೊಯ್ದು | ಯಿದರ ಮೇಲೆ ತಿಗುರಿಯಂ ಇಟ್ಟು ಓಂ | ಯಿದರ ಮೇಲೆ ತುಂಬಿದ ಕೊಂಡನಂ ಇಟ್ಟು | ಆಂ | ಇದರ ಮೇಲೆ ಚಂದನ ಕಾಷ್ಠೆ ಜಲಹರಿಯೆಂ ಯಿಟ್ಟು | ಯಿದರ ಮೇಲೆ | ಹ್ರಿಂ | ಈಶ್ವರನ ಆಕೃತಿ ಶಿಲದ ಶಿವಲಿಂಗವಂ ನಿಟ್ಟು | ಓಂ | ಯೆಂದು ಸುರಿಗಿಯಂ ಸುತ್ತಿ ಇದರೊಳಗೆ ದಕ್ಷಿಣಾಭಿಮುಖವಾಗಿ ಮಾಡುವುದು | ಇದರ ಮುಂಭಾಗದಲ್ಲು ಉತ್ತರಾಭಿಮುಖವಾಗಿ ಪಂಚಕಲಸ ಸ್ಥಾಪನ ಮಾಡುವುದು |

ಕುಂಬೇಶ್ವರ ದೇವರ ಪರಡಿಯಲಿ ದ ೭ ಪರಡಿ ಕಟ್ಟುವದು | ಕೊಬ್ಬರಿ ಬಟ್ಟಲು ೭ ಉತ್ತುತ್ತಿ ಹಣ್ಣು ೭ ಬೆಟ್ಟಡಕಿ ೭ | ಅರಿಸಿನ ಕೊಂಬು ೭ | ೩೫ ದುಟ್ಟ ರೊಕ್ಕ ಯಿ ಪರಡಿ ಗುಂಡೆಯ್ಯಗಳು ತೆಗೆದುಕೊಳ್ಳಬೇಕು. ೭ ಪರಡಿ ಕಳಸಕ್ಕೆ ಅದರಂತೆ ಕಟ್ಟುವುದು ಜಂಗಮಾಚಾರ್ಯರು ತೆಗೆದುಕೊಳ್ಳಬೇಕು.

ದೇವರ ಮಾಡಿದಾಗ ಕಲಶ ಸ್ಥಾಪನ ಮಾಡಿ ಪೂರ್ವಾಭಿ ಮುಖವಾಗಿ ಮಾಂಗಲ್ಯಧಾರಣ ಮಾಡುವದು

ಈ ಪ್ರಣಮಗಳು ಚಕ್ರಕ್ಕೆ ಶೂಲದ ಗೂಟಕ್ಕೆ ಅಂ | ರೇವಣರಾಧ್ಯರಿಗೆ ಹೊಂದಿದ ಗುಂಡೈಯ್ಯಗಳ ಮೂಲಿ ವರುಣ ದಿಕ್ಕು | ಮರುಳಾರಾಧ್ಯರಿಗೆ ಹೊಂದಿದ ಗುಂಡಯ್ಯಗಳ ಮೂಲಿ ಕುಭೇರ ದಿಕ್ಕು | ಏಕೋರಾಮರಾಧ್ಯರಿಗೆ ಹೊಂದಿದ ಗುಂಡೆಯ್ಯಗಳ ಮೂಲಿ ವಾಯುವ್ಯ ದಿಕ್ಕು | ಪಂಡಿತಾರಾಧ್ಯರಿಗೆ ಹೊಂದಿದ ಗುಂಡೆಯ್ಯಗಳ ಮೂಲಿ ಯಮದಿಕ್ಕು | ವಿಶ್ವಾರಾಧ್ಯರಿಗೆ ಹೊಂದಿದ ಗುಂಡೆಯ್ಯಗಳ ಮೂಲಿ ಈಶಾನ್ಯ ದಿಕ್ಕು | ಇವರು ಕಟ್ಟಿಮನಿಯವರು ಇವರಿಗೆ ಲಗ್ನಕ್ಕೆ ರೂ. ೨ ಆಣೆ ಉಡಿಕಿಗೆ ರೂ. ೧ ಆಣೆ,  ಯೀ ಪ್ರಕಾರ ಬಾಬ್ತುವುಂಟು | ಇವರ ಮನಿಯಲ್ಲಿ ಉಡುಕಿ ಬಿಡಿಕಿ ಸಂಬಂಧ ಇರಕೂಡದೂ |

ಈ ಗುಂಡಯ್ಯಗಳು ಮಾಡುವ ಕಸಬು ಭೂಮಿಗುಂಡ ಆದಿಗುಂಡ ಇವರು ಮೃತ್ತೈಕಿಯ ತಂದು ಮಾರಿಕೊಂಡು ಶಿವಜಂಗಮದ ಸೇವೆ ಮಾಡಬೇಕು | ಚಕ್ರಗುಂಡ ತ್ರಿಭುವನಗುಂಡ ತಿಗುರಿಯ ಮಾಡಿಕೊಂಡು ಶಿವಜಂಗಮದ ಸೇವೆ ಮಾಡಬೇಕು | ಜೀವಮೇರುಂ ಗುಂಡ ತಿರುಗಿ ಗೂಟ ಸ್ಥಾಪನ ಮಾಡಬೇಕು | ಬಾಂಡೋದರ ಗುಂಡ ಮೃತ್ತುಕಿಯ ಬಾಂಡಳ ಮಾಡಬೇಕು | ಪಂಚ ಕಳಶ ಪ್ರತಿಷ್ಠಾಪನಾ ಗುಂಡ ಮೃತ್ಯುಕಇಯ ಕಲಶಗಳ ಮಾಡಬೇಕು | ಪಂಚಕಲಶ ಪ್ರತಿಷ್ಠಾಪನ ಗುಂಡ ಬಾಂಡಗಳ ಮಾಡುವರಿಗೆ ಮುದ್ರಿಗಳ ಮಾಡಿಕೊಡಬೇಕು | ಈ ಪ್ರಕಾರ ಗುಂಡಯ್ಯಗಳು ತಮ್ಮ ತಮ್ಮ ಕಸಬುಗಳ ಮಾಡಬೇಕೆಂದು ಶೃತಿಯಲ್ಲಿ ಹೇಳುವುದು | ಶೃತಿ | ದನಿಸಂರಮದಾ ಚಕ್ರದಶ ಚಕ್ರಿ ಸಮಧ್ವಜ | ದಶಧ್ವಜ | ಸಮೊವೈಖ್ಯಾ | ದಶ ವೆಖ್ಯಾಸಮೊಸ್ತುಪಾ ||

ಕುಂಬಾರ | ಗಾಣಿಗ | ಸೂಳಿ | ರಾಜ | ಇವರು ಮಾಡುವ ಪಾಪವೆನು ಸ್ವಾಮಿಯನೆ | ತೃಣಮಮೋಕ್ಷೆ ಕೇಳೈಯ್ಯ | ಹತ್ತು ಮಂದಿ ಕಸಬರು ಮಾಡುವ ಪಾಪವನ್ನು ಒಬ್ಬ ಕುಂಬಾರ ಮಾಡುತಿಹನು | ಈತನಿಗೆ ಅಘೋರ ನರಕ ತಪ್ಪದು ಇತನು ತಿರುಗಿಯ ಮೇಲೆ | ಮೃತ್ಯುಕಿಯ ಬಾಂಡವ ಮಾಡಿ ಲಿಂಗಾಕೃತಿಯನ್ನು ಕೊಂದೆಯೆಂದರೆ ನೂಲುಯೆಳೆಯಿಂದ ಛೇದಿಸುವನು | ಲಿಂಗ ಹತ್ತೈದೆಯ್ಯಹರೆಂದು ಹೇಳುವದು ಇದಕ್ಕೆ | ಆವಾಗ್ಗೆ ಕರ್ಪೂರ ಬಟ್ಟಲು ಕಮಂಡಲವಂ ಮೂಲ ಸ್ಥಾಪಿಸಿ ಯತಿಜಿತ ಚಿರಜಂಗಮಕ್ಕೆ ಕೊಟ್ಟರೆ | ಈ ಪಾತಕ ನಿವಾರಣವೆಂದು ಶೃತಿ ಹೇಳುವುದುನರಿಯಬೇಕು | ಯಿಲ್ಲವಾದರೆ,  ಅಘೋರ ನರಕ ತಪ್ಪದು ನಂದಿನಾಥ ಪ್ರಭುವೇ ||

ಈ ಗುಂಡಯ್ಯಗಳ ಅಂಶದಲ್ಲಿ ಮೂಲಪುರುಷರು ತಿರುನೀಲಕಂಠರು | ಇವರು ಕುಂಬೇಶ್ವರ ದೇವರ ಪೂಜೆ ಮಾಡುವದಕ್ಕೆ ಇವರ ಆಚಾರ ವಿಚಾರ ಮಾಡುವದಕ್ಕೂ ಮುಖ್ಯ ಬಾಧ್ಯತೆಯವರು | ಯಾರ್ಯಾರುಯೆಂದರೆ ಕಟ್ಟಿಮನಿ ೧. ಕಸಬಿಮನಿ ೧ ಚತಾದ್ರಿ ಮನಿ ೧ | ಸ್ವಯಂಬುಶೆಟ್ಟಿ ಮನಿ ೧ | ಗೌಡ ಮನಿ ೧| ಈ ಐದು ಜನರು ಮಾಡುವ ನಿರ್ಣಯ | ಕಟ್ಟಿಮನಿಯವರಲ್ಲಿ ೧ ಒಂದು ವೀರಶೈವ ದೀಕ್ಷೆಯ ಮಾಡಬೇಕು | ಈತನು ಬ್ರಹ್ಮಚಾರಿ ಆಶ್ರಮದಲ್ಲಿಯಿರಬೇಕು | ಈತನು ಲಗ್ನಕ್ಕೆ ೫ ಟಂಕೆ ರೊಕ್ಕ ತೆಗೆದುಕೊಳ್ಳಬೇಕು ಉಡಿಕಿ ಆದರೆ ೨ ಟಂಕೆ ರೊಕ್ಕ ತೆಗೆದುಕೊಳ್ಳಬೇಕು | ಈತನು ಶಿವಜಂಗಮದ ಸೇವೆಯಲ್ಲೇ ಇರಬೇಕು | ಕಸಬಿಯಾತನು ಈತನ ಆಗ್ನೆಯಂತೆ ನಡಿಬೇಕು | ಚಿತಾದ್ರಿಯೆಂಬುವಾತನು ಕುಂಬೇಶ್ವರ ದೇವರ ಪೂಜೆ ಮಾಡಬೇಕು | ಶೆಟ್ಟಿಯಂಬುವಾತನು ಅಪ್ಪು ತಪ್ಪು ತಕರಾದಿಗಳನ್ನು ವಿಚಾರ ಮಾಡಿ | ಗೌಡನ ಕಡೆಗೆ ಬಂದು ಹೇಳಬೇಕು | ಗೌಡನು ಕಟ್ಟಿಮನಿಯವರಿಗೆ ತಿಳಿಸಬೇಕು | ಇವರು ಮತ್ತು ಈ ಕುಲದ ನಿರ್ಣಯ ಕಟ್ಟಿ ಮನಿಯಲ್ಲಿ ತೀರ್ಪು ಮಾಡಿಕೊಳ್ಳಬೇಕು.