ಸಂಧಿ

ಆಲಿಸಲೆ ಶರಣ ಕುಲತಿಲಕ ಚೇರಮ ನೃಪತಿ
ಬಾಳಬಗೆಯಲಿ ಶಂಭುಶರಣರಿಗೆ ಒಲಿದುದನು
ಲಾಲಿಸುವ ಕರ್ನಕ ಮೂರ್ತದ ಸೋನೆ ಸುರಿವಂತೆ
ಮೇಲೊಪ್ಪುತ್ತಿಹ ಶರಣ ಸತ್ಕಥೆಯ ವಿವರಿಸುವೆ ಕೇಳಿನ್ನು ಶರಣ ಜನರೂ

ಮೂಲೋಕದೊಳಗುಳ್ಳ ಶರಣರೆಲ್ಲರ ಬಗೆಯ
ಪೇಳುವರೆ ಜಿಹ್ವೆಗಳು ಎನಗೆ ಸಾಸಿರವಿಲ್ಲ
ಕಾಲಕಂದರ ಕೊಟ್ಟ ಮತಿಯೊಳಗೆ ಪೇಳುವೆನು
ಸಲ್ಲೊಳಿಸಿ ಬಲ್ಲನೀತ ಪೇಳ್ವೆನೀ ಕೃತಿಯೊಳಗೆ ಶರಣರಾಲಿಸಿ ಪಾಲಿಸಿ

ಭವವೆಂಬ ಪಾಪವನು ಕಡಿದು ಕತ್ತರಿಸುವುದು
ಶಿವಯೆಂಬ ವಾಕ್ಯಗಳಲಗಿನಿಂದದು ಬಳಿಕ
ತವೆಬಂದ ಧುರಿತಗಳು ಹರಿದು ಹೋಹವು ಬಳಿಕ
ಭವರೋಗ ವೈದ್ಯನಿಂದ್ರಿಯ ಸೈರಣೆಗೈದವಗೆ ಭವಭವದ ಪಾಪ ಹರವೊ

ಧರಣೆ ಹೋಗದಿರೆ ನಭವು ಪ್ರಜ್ವಲಿಸಿ ಬೆಳಗುವದೆ
ಧರದೊಳಗೆ ಹಿಮ್ಮೆಟ್ಟಿ ಸುರಪನೋಲಗವುಂಟೆ
ಕರುಣವಿಲ್ಲದ ಧರ್ಮಹರಗೆ ಮೆಚ್ಚುವದುಂಟೆ
ಪುರಹರ ಶರಣೆಗಳಿರಲು ಮತ್ತವಗಿದಾ ನರಕ ಭಯ ದೂರಬಾರು    ೨

ಕೇಳಿದರೆ ಭೂಪ ಸದ್ಗುಲದೀಪ ಗುಣಮಣೆಯೆ
ಢಾಳಿಸುವ ದೇಶ ಕರ್ನಾಟಕವು ಬಲುಸಿರಿಯೊಳು
ಆಳುವನು ಬಲ್ಲಿದನು ವೀರಗಣಪತಿರಾಯ
ಕೂಳುಗೊಂಬುತ ಅಖಿಳಮನ್ಯಯರ ಭಾಗಿಸುತ ಪಾಲಿಸುತ ಧರ್ಮದಿಂದಾ

ಮೇಳಯಿಸಿ ಮಂತ್ರಿಮನ್ನೆಯ ದಂಡನಾಯಕರು
ಚೋಳ ಹಮ್ಮೀರಾ ಗುಜ್ಜರ ಪಾಂಡ್ಯ ಲೇಪಾಳ
ವಾಳುವರಸುಗಳು ಕಪ್ಪವ ತೆತ್ತುಕೊಂಡಿಹರು
ಕೊಳ ಹಿಡಿವನು ಮಲತ ಭೂಭುಜರ ಸಂಗ್ರಾಮದೇಳಿಗೆಯ ಝಡಿತೆಯಿಂದಾ  ೩

ಅದಟಿಂದ ಭುಜಬಲ ಪರಾಕ್ರಮದ ಶೌರ್ಯದಿಂ
ದೊದ ವಿದ್ಯೆಯೈಶ್ವರ್ಯದೆಳೆಗಳ ಸೌರಂಬದಿಂ
ಮದುದಿಂದ ಸುಖದ ಸಾಗರದ ಸಂಪದದಿಂದ
ಚದುರಿಂದ ಸಕಲ ಸಂಪದದ ಪ್ರೌಢಿಗಳಿಂದ ಒದವಿಸುವ ಧರ್ಮದಿಂದಾ

ಗದಗದಿಸಿ ಅರಿನೃಪರು ಬಂದು ಕಾಯುವದರಿಂದಾ
ಎದೆಗೆಟ್ಟುಪ್ಪಗಳ ತಂದು ಸುರಿಸುವುದರಿಂದಾ
ಕದನ ಕೇಳಿಗೆ ಬೆದರಿ ಕೈಗಟ್ಟಿನಿಂದುದರಿಂದ
ಸುದತಿಯರ ಬರದಯೇಳ್ಗೆಗಳ ಘಡಣಗಳಿಂದಾ ಚದುರಿಂದಲೊಪ್ಪಿ ನೃಪತಿ  ೪

ವೀರರಿಗೆ ರಣರಂಗ ಧೀರರಿಗೆ ದಲ್ಲಣನು
ಶೂರರಿಗೆ ಸಕಲಗುಣ ಸಾರರಿಗೆ ಅತಿಪ್ರೌಢ
ಕಾರುಣಿಕದ ಪುರುಷ ಗಣಪತಿಯು ಅದಟಿಂದ
ಬಾರಿಯದಟ್ಟುಳ್ಳವನು ಭೂವರರೊಳಗ್ಗಳನು ಪಾಲಿಸುವ ನಾಡ ಬಳಿಕಾ

ಭೂಪತಿಯ ಪಟ್ಟಣಕೆ ಅರ್ಧಯೋಜನದಲ್ಲಿ
ವ್ಯಾಪಿಸುವ ಗವಚೆರುಪುರದ ಮಧ್ಯದೊಳಲ್ಲಿ
ಕಾಪಾಲಿಧರ ಭಕ್ತಗುಂಡಬ್ರಹ್ಮಯ್ಯಗಳು
ಸ್ಥಾಪಿಸಿಯು ಶಿವಭಕ್ತಿ ಜಂಗಮಾರ್ಚನೆಯಿಂದಾ ಸಕಲ ಬಂಧುಗಳು ವೆರಸಿ     ೫

ನೆಂಟರಿಷ್ಟರು ವೆರಸಿ ಪುರಜನದ ಸಲಿಯಿಂದಾ
ಕಂಟಕವ ಪರಿಹರಿಸಿ ಬಡವರಾಧಾರಿಗಳು
ಉಂಟುಮಾಡಿಯೆ ದಾನಧರ್ಮದುನ್ನತಿಗಳನು
ಕಂಟಕ ರಚಿಸಿ ಕಳ್ಳರು ಬಂದು ಮರೆಹೋಗಲು ಕೊಡೆನೆಂಬ ಬಿರಿದನಿಕ್ಕಿ

ವೆಂಟಣಿಸಿ ಮನೆಯ ಮುಂಗಡೆಯ ನಂದಿಯ ಧ್ವಜವು
ಉಂಟುಮಾಡಿಯೆ ಸಕಲ ಬಿರಿದ ಹೊಗಳಿಸುತಿರಲು ಕರೆ
ಕಂಟನಿಗೆ ನಾರದನೆಸಗೆ ಶರಣ ರಘುನವ
ಪೆಂಟಣಿಪ ತೆಗೆಸುವೆ ನೋಡು ನಾರದನೆ ಶರಣರಗ್ಗಳಿಕೆಗಳನೂ       ೬

ಹರನು ಮನದೊಳು ಮೆಚ್ಚಿ ನಸುನಗೆಯು ಪಸರಿಸುತ
ವರಮುನಿಗೆ ನುಡಿದ ನೆಲೆ ನಾರದ ಮುನೀಶ್ವರನೆ
ಬಿರಿದ ನಿಕ್ಕಿದ ಗುಂಡಬ್ರಹ್ಮಯ್ಯಗಳ ದೃಢವ
ವರೆದು ನೋಡುವೆನೇಳು ಮರ್ತ್ಯಲೋಕದೊಳೀಗ ಇರುವ ಶರಣರೊಡಿಯಾ

ಪರಿಕಿಸುವೆನೇಳೆಂದು ಮುನಿಸಹಿತ ಶಂಕರನು
ಉರಿವೈದ ಕನ್ನಗತ್ತಿಯನು ಹಿಡಿದಾಗಾ
ನರಮನುಜರಿವರಿಗಾ ಬಿರಿದುಗಳು ತಮಗೇಕೆ
ಧರೆಮೆಚ್ಚ ಸೋಲಿಸುವೆ ನೋಡು ನಾರದಯೆಂದು ಅವನೀ ತಳಕಿಳಿದು ಬಂದೂ          ೭

ಬಂದು ಕಂಡರು ಶರಣರಗ್ಗಳಿಕೆ ಬಿರಿದುಗಳ
ಮುಂದೆ ರಚಿಸಿದ ನಂದಿ ಹಳದಿಗೆಯ ಸಂಭ್ರಮವ
ಚಂದದಿಂ ದಾನ ಧರ್ಮವು ಜಂಗದಾರ್ಚನೆಯ
ನಿಂದು ನೋಡಿದರಕಟ ಬಲ್ಲಿದರಹುದೆಂದು ಮುಂದಣುದ್ಯೋಗದನುವಾ

ಕಂದುಗೊರಳನು ಮುನಿಯ ಬೇಗದೊಳ್ವೇಳಿದನು
ತಂದೆಯಿವರಿಗೆ ನಿಮ್ಮ ಶ್ರೀಪಾದ ಕೃಪೆಯುಂಟು
ಸಂದೇಹಲೇಕಿನ್ನು ಸಲಹು ಬೇಗದೊಳಿವರ ನೀ
ವೆಂದು ವರಮುನಿಬೇಗ ಹರಗೆ ಬಿನ್ನಯಿಸೆ ಮನದಂದು ಮುನಿಯೊಡನೆ ಪೇಳ್ದಾ         ೮

ಮುಂದೆ ನೋಡನಿವರ ದೃಢಭಕ್ತಿಯದಟುಗಳ
ತಂದು ಗಣಪತಿರಾಯನರಮನೆಯ ಸುವಸ್ತುಗಳ
ಬಂದಿವರ ಮರೆಹೊಗಲು ಅದರೊಳದಟುಗಳಿರಲು
ಮುಂದೆವಂದನುವ ಕಂಡಿವರಗೆಲ್ವೆನು ಮುನಿಯೆ ಮೇಲೆ ಕೊಡುವೆನು ಪದವಿಯಾ

ಈ ಪರಿಯ ಮನದೊಳಗೆ ಹರನೆನೆದು ಮುನಿಸಹಿತ
ಆ ಪುರದ ಬಳಿವಿಡಿದು ನಡಿದು ಕೊಂಡೆಯ ಹತ್ತಿ
ಕಾಪಿನ ಸುಭಟರುಗಳು ಮರದು ನಿದ್ರೆಯೊಳಿರಲು
ಗಾಪಿಸುವ ಸಿದ್ಧನಾಲಿಸುತ ಎಡಬಲದವರ ಭೂಪನರಮನೆಗೆ ಸಾರ್ದು         ೯

ಕರದಿ ಹಿಡಿದನು ಕನ್ನಗತ್ತಿಯನು ಹರ ಬಳಿಕ
ಇರದೆ ಗೋಡೆಯ ನೊತ್ತ ಬರ್ಪಿಂದ ಮಣ್ಣುದುರೆ
ಕರಬೇಗ ಕೈಯಿಂದ ಕಂಡಿಯೊಳಗಿಹ ಮಣ್ಣ
ವರಮುನಿಯು ನಾರದನು ತೆಗೆಯ ಬೇಗದಿಂ ಕಂಡಿ ಕೊರದ ಜಾಳೀಂದ್ರದಂತೇ

ಇರವ ಕಂಡರೊಳಗೆ ದೀವಿಗೆಯ ಪ್ರಭೆಗಳನು
ಸುರಚಿರಕಾಂತಿಯೆಸಗುವ ರತ್ನಮಂಟಪವ
ತರತರದ ಝಲ್ಲರಿಯ ನಾಲ್ದೆಸೆಯಕ್ಕುಚ್ಚಗಳ
ಸ್ಥಿರಗೊಳಿಸಿ ಬಿಗಿದ ಮಣಿಮುತ್ತುಗಳ ಶೃಂಗಾರವ ಇರವ ಕಂಡರು ಬೇಗದೀ  ೧೦

ಎತ್ತನೋಡಿದರೆ ಬಲುಸಿರಿಯ ಸಂಗತಿಗಳಿಂದ
ಒತ್ತಿ ಬಿಗಿದಿಹ ಕನಕ ರಾಜಿಸುವ ನವರತ್ನಗಳಿಂದ
ಉತ್ತುಮದ ಮಣಿಮಯದೊಳೆಸವ ಚಿತ್ರಗಳಿಂದ
ವಿಸ್ತರಿಸಿ ನಾಲ್ದೆಸೆಯ ಬಿಗಿದ ಝಲ್ಲಿಗಳಿಂದ ಶೃಂಗಾರ ನಿಳೆಯವಿಹುದು

ಮತ್ತಗಜಗಮನೆಯ ರಮಣಿಮಯದ ಮಂಚಗಳಿಂದ
ಉತ್ತಮ ಸುವಸ್ತುಗಳು ಸಕಲ ಆಭರಣದಿಂ
ಹತ್ತೆಗಟ್ಟಿದ ಮಣಿಯ ಮುತ್ತುಗಳ ರವದಿಂದ
ವಿಸ್ತರಿಪ ಕಡೆಗಣ್ಣ ಚೆಲ್ವಿಕೆಯ ಸೋಗೆಗಳಾ ಭಟ ಯೌವ್ವನೆಯರಿಹರು       ೧೦

ನೋಡಿ ಮಾತಾಡಿ ಹರ ಮುನಿಯೊಡನೆ ನಸುನಗುತ
ಆಡಿದನಿವ ಜಗಕೆ ಬಲ್ಲಿದನು ಗಣಪತಿಯ
ಕೂಡ ತೊಡಕುಗಳು ಬಂದರೆ ನಮಗೆ ಪಡಿ ಬಲವಿಲಲ
ನಾಡಾಡಿಯವನಲ್ಲ ವೀರಗಣಪತಿಯವನ ಸೂಡಿಕೆಯ ನೋಡು ಮುನಿಪಾ

ಎಡಬಲದ ಮಂದಿರದೊಳಿರುವ ಸ್ತ್ರೀಯರ ಘಡಣೆ
ಬಿಡದೆ ರಾಜಿಸುವ ಸಿರಿಸಂಪತ್ತಿನೇಳ್ಗೆಗಳು
ಪಡಿಗಾಣೆ ನೀ ನೃಪಗೆ ಭೂಪರೊಳಗಗ್ಗಳನು
ಪಿಡಿವನರಿತರೆಯಿವನಾ ಬಿಡುವನಲ್ಲವು ನಮ್ಮ ನಡೆ ಬರಿದೆ ಹೋಹನೇಳು    ೧೨

ಎಂದ ಮಾತನು ಕೇಳಿ ನಸುಗನುತ ಮುನಿವರನು
ಚಂದವಾಯಿತು ನೀವು ಬಂದ ಕಾರ್ಯವು ಅಕಟಾ
ನಂದಿವಾಹನನೆ ನಮ್ಮನು ಹಿಡಿದು ಬಂದಿಪರುಂಟೆ
ತಂದೆಯೀವಾಕ್ಯಗಳು ಚಂದವಾಯಿತು ದೇವಾ ಸಂಧಿಸುವ ಗಣಪತಿಯನೂ

ಸಂದೇಹವನು ಬಿಟ್ಟು ಮುನಿ ಸಹಿತ ನಡೆತಂದು
ನಿಂದು ಗಣಪತಿರಾಯನಿರುವ ಕಾಣುತ ಬಳಿಕ
ಚಂದದಿಂ ರಚಿಸಿರ್ದ ಸೆಜ್ಜೆಮನೆಯನು ಕಂಡು
ಚಂದ್ರಮುಖ ವಾಮದಿಕ್ಕಿನೊಳಿರು ರಾಣಿಯನು ಕಂಡು ಹರ ಬೆರಗಾದನು     ೧೩

ಕಂಡು ಹರ ಬೆರಗಾಗಿ ರೂಪುಗುಣ ಯೌವ್ವನವ
ಅಂಡೆಲೆವ ಕಡೆಗಣ್ಣ ಪುರ್ಬುಸೊಗೆಗಳಿಂದ
ಮಂಡಿತದ ಪೆರೆನೊಸಲ ನಿಡಿಗೆಸದೆಳ್ಗೆಗಳಿಂದಾ
ಬಂಡುಮಾಡುವಳಿವಳೂ ಮೂಜಗದ ವಿಟರುಗಳ ಖಂಡಿತದ ಜಗಮೋಹಿನಿ

ಕಂಡವರು ಹೊರೆದೆಗದು ಹೋಗಬಲ್ಲರೆ ಮುನಿಯೆ
ದಿಂಡೆಯನು ಹರನೆಂದು ಮನದೊಳಗಣಕಿಸಬೇಡಾ
ಕೊಂಡೊಯ್ಯವೆನೀಗಿವಳ ಭೂಮಂಡಲದ ಸರದಿಯದಾಂಟಿ
ದಂಡಿಸುವೆನಲ್ಲಿ ಪಾರ್ವತಿಯ ಬಟ್ಟಿಯ ಬಾರೆ ಒಲ್ಲೆನಾ ಸುರಲೋಕವಾ     ೧೪

ವರಮುನಿಯು ಮನದೊಳಗೆ ನಸುನಗುತ ನೋಡಿದನೆಲೆ
ಗಿರಿಜೇಶ ನಿಮಗಿವಳು ಹಿರಿಯಮಗಳೆಂದು ಮುನಿ
ವರನುಡಿಯೆ ನಸುನಾಚಿ ಲಜ್ಜಿಸಿ ಮನದೊಳಿ
ತ್ತಿರುವ ಗಣಪತಿಯ ಮುಖನೋಡಿ ಕಂಡನು ಬಳಿಕ ಕರವಾಳ ಖಡ್ಗಳನೂ

ಧರಯೊಳಗೆ ಬಲ್ಲಿದವನಿವನೆಂದು ಹರಮೆಚ್ಚಿ
ಉರುವ ಕೈದುವ ತೆಗೆದೊಂದೂಂದ ಹರನೀಡೆ
ವರಮುನಿಯು ಕೈಆಂತು ಕಡೆಗೆ ಮಾಡಿದನಲಗ
ಗುರುವೆ ಬಂದಿತ್ತು ಹೊತ್ತು ಹೇಳಿನ್ನು ತಡಬೇಡ ತಂಗಾಳಿ ಬೀಸುತಿವೇಕೋ  ೧೫

ಎಂದಮುನಿ ನುಡಿಗೇಳಿ ಶಂಭು ಬೇಗದೊಳಾಗ
ಹೊಂದಿ ಭೂಪತಿಯ ಸರಿಸಕೆ ಬಂದು ಕರನೀಡಿ
ಒಂದೊಂದು ವಸ್ತುವಾಭರಣಗಳ ತೆಗೆದಾಗ
ನಂದಿಗೀಶ್ವರ ನೀಡೆ ನಾರದನು ಕೈಕೊಂಡು ಚಂದ ಚಂದದ ವಸ್ತುವಾ

ಇಂದುವದನೆಯ ಮೈಯ್ಯಸಕಲಾಭರಣಗಳ
ನಿಂದು ನೋಡುತದೇವ ನಿಟ್ಟಿಸುತ್ತ ಮನದೊಳಗೆ
ಅಂಡುಗೆಯು ಭುಜಕೀರ್ತಿ ಹಿರೆನೊಸಲ ಬೊಟ್ಟುಗಳ
ಚಂದದಿಂದುಲಿವ ಮುತ್ತಿನ ಮಣಿಯ ಮೂಕುತಿಯ ಕಂದರ್ಪ ವೈರಿ ಬಳಿಕಾ   ೧೬

ಬಂದಿಹನು ಕೊರಳ ಚಿಂತಾಕು ಮುತ್ತಿನ ಸರವ
ಅಂದದಿಂದೆಸೆವ ಕಾಂಚಿಯ ಧಾಮ ಕಟಿಸೂತ್ರ
ಹೊಂದೊಡವು ಹೊನ್ನ ಬಳೆಗಳು ಹಸ್ತಕಡಗಗಳ
ಚಂದ್ರಶೇಖರ ತೆಗೆದು ಕಟ್ಟಿ ಮೊಟ್ಟೆಯ ಬೇಗ ಹರ ಮುನಿಯೊಳಿಂತೆಂದನೂ

ನಂದಿಯ ಕರದೀಗ ಬರಿದೆ ಬಂದೆವು ನಾವು
ಗೊಂದಣದ ಮಂಟಪದ ತೆರಳಿಸುವರಳವಲ್ಲ
ಎಂದು ಹರನುಡಿಯೆ ಮುನಿ ನಸುನಗೆಯುಪರಿಸುತ
ಸಂದದೆಮ್ಮಯ ಸಕಲಕಾರ್ಯಗಳು ಹರಯೇಳಿ ಎಂದು ನಾರದ ನುಡಿದನೂ   ೧೭

ಮುಂಗೋಳಿ ಕೂಗುತಿವೆ ತಡ ಮಾಡಬೇಡಿನ್ನು
ಜಂಗುಳಿಯ ಮನುಜರಿಗೆ ನಿದ್ರೆತಿಳಿದಪುದೀಗಾ
ಅಂಗೈಸಿ ಬೆನ್ನಬಿಡರಕಟ ನಮ್ಮನು ಬೇಗ
x x x x x x x x x x x x ಬಿಜಯಂಗೈಯುವುದುಚಿತವೆನಲು

ಮುನಿಯ ಮಾತಿಗೆ ಶಂಭು ನಸುಗತ ಮನದೊಳಗೆ
ವನಜಾಕ್ಷಿ ಸಖನೇತ್ರ ಕನ್ನಗಂಡಿಯದಾಂಟಿ
ವಿನಯದಿಂದಲೊಂದು ಕುರುಹಿಟ್ಟು ಮುಂದಕ್ಕೆ
ವನಜನಾಭ ಪ್ರಿಯ ಮುನಿಸಹಿತ ತೆರಳಿದನು ಘವನ ನಿನ್ನೇನೇಳ್ಪೆನೂ           ೧೮

ದಾರಿ ದಾರಿಯೊಳಿರಿಸಿ ಒಂದೊಂದು ಬಗೆಬಗೆಯ
ಕಿರಾಣಿಯ ಕನಕ ಸುವಸ್ತುಗಳ ಬಿಸುಡುತಲಿ
ಮೂರುಕಣ್ಣ ಭವಮುನಿ ನಾರದನೂ ಸಂಗಡಿಸಿ
ಊರ ಮುಂದಲ ನಂದಿಕೇಶ್ವರ ನಿಳೆಯವನು ಸೇರಿ ಘನ ಹರುಷದಿಂದಾ

ಓರಂತೆ ವೃಷಭನಿಗೆ ಶೃಂಗರಿಸಿ ಸುವಸ್ತುಗಳ
ಸೇರಿಸಿದರಖಿಳ ಜಲ್ಲಿಯ ಬಿಗಿದು ನಾಲ್ದೆಸೆಯ
ನಾರದನು ತೆಗೆದು ಹೀರಾವಳಿಯ ಸರಗಳನೂ
ವೀರನಂದಿಗೆ ರಚಿಸಿ ಸಕಲಾಭರಣಗಳ ಓರಂತೆ ನೋಡಿ ಬಳಿಕಾ         ೧೯

ಕೋರಿದನು ದಿನಮಣಿಯು ಪೂರ್ವಾಚಲದೊಳುದಿಸಿ
ಊರಬಾಗಿಲ ತೆಗೆಯ ಗವಗಜೆರಪುರದೊಳಗಲ್ಲಿ
ಸಿರಿಜನ ಸುಳಿದಾಡೆ ಪುರದ ಹೊರವಲಯದಲಿವು
ದ್ದಾರಿರಿದ್ದರು ಗುಂಡಬ್ರಹ್ಮಯ್ಯ ಹರಪೂಜೆ ಸೇರಿಸುವ ಸಮಯಕಿಂತಾ

ಮೂರುಕಣ್ಣನು ಮುನಿಯು ಮನದೊಳೇಚನೆಗೊಂಡು
ವೀರಶರಣರ ಗೃಹಕೆ ಒಳಹೊಕ್ಕು ಸಂಧಿಸಲೂ
ಧಾರೆಶರಣರೆದ್ದು ಶ್ರೀಚರಣಕಭಿನಮಿಸಿ
ಓರಂತೆ ಬಿನ್ನಯಿಸಿ ಚಿತ್ತೈಸಿಯೆನಲಾಗ ಕಂಗೆಡುತ ಹರನುಸುರಲೂ೨೦

ಮಗನೆ ಮನದೊಳಗೆ ಕಳವಳವು ಘನ ತೋರುತಿವೆ
ತೆಗವುತಿವೆ ಕರಚರಣ ಮುಂಬರುವ ಭಯದಿಂದ
ಉಗಿ ಬನಿಯ ಮಾಡುತಿವೆ ಕರಣಂಗಳವಾಡಿ
ಮಘಮಗಿಪ ಧೈರ್ಯಗಳ ಬೇರು ಪರಿದೊಣಗುತಿವೆ ಅಘಹರನೆ ಬಲ್ಲನೈಯಿಸೆ

ಅಘಹರನ ಜಂಗಮವು ಮನನೊಂದು ಪೇಳಲ್ಕೆ
ಮೃಗಧರನೆ ಬಲ್ಲರಿವನೇನ ಮಾಡಿದರಕಟಾ
ಹೋಗರೋಗುವ ಭಯ ಮುಖವು ಗಣಿತ ತೋರುತಿವೆ
ತೆಗೆದು ಮನೆಯೊಳಗಿರಿಸಿಯೀ ಬಂದ ಜಂಗಮದ ಮೇಲೆ ಬಂದುದ ಕಾಂಬೆವೂ೨೧

ಅಯ್ಯ ಅಂಜಲಿಬೇಡ ಬರಿದೇಕೆ ಬಳಲುವಿರಿ
ನಿಮ್ಮ ಕಿಂಕರರು ನಾವಿರಲು ಭಯವೆತ್ತಣದು
ವೈಯ್ಯಾರದಿಂದಾಗಮಿಸಿ ನಮ್ಮ ಮಠಗಳಿಗೆ
ನಮ್ಮಯ ಬಿರಿದುಗಳುಂಟು ಮನೆಯ ಮುಂಗಡೆಯೊಳಗೆ ಕೊಡೆನೆಂಬ ಕಡುರವಸವೂ

ಕದ್ದಕಳ್ಳರು ಬಂದು ಮರೆಹೊಗಲು ಕೊಡುವವರಲ್ಲ
ನಿರ್ಧಾರವು ಈ ಮಾತು ನಿಮಗಿನ್ನು ಭಯಬೇಡಾ
ಅಪರಾಧವನೆಸಗಿ ದಂಡೆತ್ತಿ ಭೂಪತಿ ಬರಲು
ನಿರ್ಧರಿಸಿ ಕಾದುವೆವು ನಿಮ್ಮ ಕೊಡುವವರಲ್ಲ ಚಿತ್ತೈಸಿ ನಮ್ಮ ಮನೆಗೇ       ೨೨

ನಾವು ಮಾಡಿದ ಕೆಲಸ ಬಲುಘನವು ಕೇಳಿರೈ
ಭೂ ನಾಥನರಮನೆಯ ಹೊಕ್ಕು ತಂದೆವು ಕಳವ
ನೀವು ನಮ್ಮನು ಮರೆಯ ಹೋಗಿಸಿಕೊಂಡಿರೆ ಅರಸು
ತಾವು ದಂಡೆತ್ತಿ ಬಂದರೆ ನಮ್ಮ ಕಾಯುವವರಾರು ಏನಿದರೇ ಅನುವೆಂದರೂ

ಚಿಂತೆ ಬೇಡವು ಸ್ವಾಮಿ ನಿಮಗೆ ನಮ್ಮಲ್ಲಿರಲು
ಕಾಂತ ದಂಡೆತ್ತಿ ಬಂದರೆ ಕೊಡುವರಲ್ಲಿಗುಮ
ಕಾಂತಬಲ್ಲನು ನಮ್ಮ ಹೃದಯದ ದಟುಗಳಿವನು
ಸಂತೋಷದಲಿ ನಮ್ಮ ಮನೆಯೊಳಗೆ ಸ್ಥಿರವಾಗಿ ಸುಖದೊಳಿರಿ ನೀವೆಂದೆನೇ   ೨೩

ಕೇಳಿ ಶರಣರ ನುಡಿಯ ಸಂತೋಷ ಮಿಗೆತಾಳ್ದು
ಮೇಳೈಸಿ ಮುನಿಸಹಿತ ಹರನಾಗಮನಿಸಿ ಮನೆಗೆ
ಆಳವಾಡುತಲಿರ್ದ ಮನೆಯ ನಾರಿಯರೊಳಗೆ
ಕಳ್ಳ ಬುದ್ಧಿಗಳಿಂತು ಶರಣರಿಗೆ ಬರಬಹುದೇ ಎಂದೆನಲು ಮತ್ತಿತ್ತಲೂ

ಉದಯವಾಗಲು ದೊರೆಗೆ ಸುಖ ನಿದ್ರೆ ತಿಳಿದೇಳೆ
ವದವಿರ್ದ ಕನ್ನಗಂಡಿಯೊಳು ಮರುತನು ಸುಳಿಯೆ
ಬೆದರಿ ಕಂಗೆಡುತಖಿಳ ಜನರನೆಲ್ಲರ ಕರೆಸಿ
ಮುದದಿಂದ ತನ್ನ ಸತಿಯಳ ಮುಖವ ನಿಟ್ಟಿಸುತ ಏಣಿದದ್ಬುತವೆಂದನೂ     ೨೪

ಎಲ್ಲಿಯ ತೊಡರುಗಳ ಬಂದಿತೆಲೆ ನಿನ್ನಿಂದ
ಬಲ್ಲವಕೆ ಬಲು ಘನವುವೆಂದಿದ್ದೆ ನಿಂ
ಬಲ್ಲಿದರನೇಕೆ ಕರೆಸಿದೆ ಭಂಗಕ್ಕೊಳಗಾಗಿ
ನಿಲ್ಲದಿದರನುವ ಪೇಳುವದಲ್ಲದರೆ ನಿನ್ನ ಕಲ್ಲಗಾಣದೊಳರಸುವೆ

ಝಲ್ಲಿ ಸುವಾಭರಣಗಳನಾರಿಗಿದಿರಿತ್ತೆ
ಎಲ್ಲವು ತಾತ್ತವನು ಮಾಜದೆನ್ನೊಳು ಪೇಳು
ಚೆಲ್ಲೆಗಂಗಳನೀರೆ ಮನದ ನಾರಿಗೆ ನೀನು
ಸಲ್ಲಿಲೆಯಿಂದಿತ್ತೆಯನಲೆರಡು ಸಂಧಿ ಸಂಪೂರ್ಣ ಒಳಿತು ಸುರವೆಸ್ತು           ೨೫

ಅಂತು ಸಂಧಿ ೧ಕ್ಕಂ ದಪನು ೨೫ ಕ್ಕಂ
ಮಂಗಳ ಮಹಾಶ್ರೀ ಶ್ರೀ ಶ್ರೀ