ಸಂಧಿ

ಆಲಿಸಲೆ ಭವ ಸದ್ಗುಲ ದೀಪ ಗುಣಮಣಿಯೆ
ಲೋಲ ಚೇರಮ ನಿನ್ನ ಶರಣರುನ್ನತಿಗಳನು
ಬಾಳ ಬಗೆಯಲಿ ಶರಣರ ದಟಗುಳ ವಿಸ್ತರವ
ಕಾಳುಗೊಂಬುತ ಶರಣ ಗುಂಡಬ್ರಹ್ಮಯ್ಯಗಳು ಮೇಳೈಸಿ ಹರಪದವನೂ
ಮೂಲೋಕಕಧಿಕವೆನಿಸುವ ಶಂಭರಾರಾಧ್ಯ
ಮೇಲೆ ಶರಣರ ಘನವ ವಿಸ್ತರಿಸಿ ಪಾಲಿಪುದು
ಕಾಲಕಂಧರ ಹರನ ಕೈಲಾಸ ಕೈದುದನು
ಮೇಲಪ್ಪ ಕೃತಿಗಳನು ಕನ್ನಡಿಸಿ ಕರುಣದಿಂದೇಳಿಗೆಯ ಶರಣ ಘುನವಾ        ೧

ಮದವೆದ್ದ ಕೋಪದಿಂ ಬಳಿಕ ನಿಟ್ಟಿಸಿ ನಿನ್ನ ವದವಿದಾಭರಣಗಳ ಮತ್ತಾರಿಗಿತ್ತೆಲವೆ
ಹೃದಯದಾಳಾಪಗಳ ಬಿಟ್ಟುಸುರುಯೆನ್ನೊಡನೆ
ಚದುರತನದಿಂದ ನೀ ನಿನ್ನಾರಿಗೊದವಿಸಿದೆ ಹದನ ಹೇಳೆಂದ ಬೇಗಾ
ಬೆದರಿ ಕಂಗಳ ಜಲವ ವದವಿಸುತ ಮನನೊಂದು
ಘದಗಡಿಸಿ ತಾಪದಿಂದೆನನತಿವಳಲ್ಲ
ಮದನ ವೈರಿಯೆ ಬಲ್ಲ ಮನದೊಳಗೆರಡಿಲ್ಲ ಬೆದರಿಸಲು ಬೇಡವಕಟಾ       ೨

ಮಾನಿನಿಯು ಮನದೊಳಗೆ ನಡನಡುಗಿ ಕಣ್ಣೀರ
ಸೂನೆಯನು ಸುರಿ ಸುರಿದು ಕಂಗೆಡುತ ಭೂಪತಿಗೆ
ಏನೆಂಬೆ ನೆಲೆ ದೊರೆಯೆ ನರರು ಬಂದಪುದುಂಟೆ
ಹೀನ ಬುದ್ಧಿಗಳುಂಟೆ ಘನತರದ ಪಾಪಗಳ ಕನಸಿನೊಳಗರಿತುದಿಲ್ಲಾ
ಈ ನಗರಕಧಿಪತಿಯು ಬಲ್ಲಿದನು ನಿನ್ನೊಳಗೆ
ಜ್ಞಾನವಲ್ಲದೆ ಪರರ ಬಯಕೆಗಳೆನಗುಂಟೆ
ಹೀನ ಮಾತುಗಳನಾಡುವರೆ ಪತಿಯೆನಗುಂಟೆ
ಬಾನು ಚಂದಿರ ನೋಡಿದಭವ ಬಲ್ಲನಿದನು ಸಂಶಯವು ಬೇಡೆಂದಳೂ         ೩

ಜಡಿದು ತುಡುಕುವೆ ಕೊಡವ ಸರ್ಪಗಳ ತರಿಸೀಗಾ
ಕಡುಮನದ ದೃಢಗಳನು ನೋಡುಬೇಕಾದರೆಯು
ಬಿಡದೆ ಅಗ್ನಿಯ ಹೊಕ್ಕು ಹೊರವಡುವೆ ನಿಮಿಷದೊಳು
ತಡವೇಕೆ ಎನ್ನ ಪರೀಕ್ಷಿಪುದುಯೆನಲಾಗ ನುಡಿಗೇಳಿ ಸುಮ್ಮನಿರಲೂ
ಮಡದಿಯಾಡಿದ ಮಾತು ಮನದೊಳಗೆ ನೆಡೆಲಾಗ
ಮೃಡಬಲ್ಲನೀಗ ಕನ್ನಹೊಕ್ಕ ಕಳ್ಳರನು
ಹಿಡಿತರಿಸಿ ಶೂಲಕ್ಕೆ ಗುರಿಮಾಳ್ಪೆನವರುಗಳ
ತಡವೇಕೆ ಇದಕೀಗ ತವಕದಿಂದೋಲಗಕೆ ತಂದುಭೂಪ ಬಳಿಕಾ        ೪

ಬಂದುದಾ ಸಮಯದಲಿ ಸೇವಕೂಳಿಗದವರು ನಡೆ
ತಂದು ಕರಗಳ ಮುಗಿದು ಬಿನ್ನೆಯಿಸಲಳುಕುತಿಹ
ಮಂದಿಯನು ಕಂಡಾಗ ಭೂಪ ಕೋಪಿಸುತಾ
ಅಂದವಡಿಸಿದ ನುಡಿಯುಬಲಗೋಪದೇಳ್ಗೆಯಿಂದ ಬಂದು ಓಲಗದಿ ಕುಳ್ಳಿರೇ
ಸಂದಣಿಸಿ ಗಜಬಲವು ದಂಡನಾಯಕ ಸಹಿತ
ತಂದರಲ್ಲಿಯ ಊರ ತಳವಾರರೊಳ ಘಳನ
ತಂದು ಕೂರಿಸೆ ಕನ್ನಗಂಡಿಗಳ ವಿವರವನು
ಇಂದು ಕಳ್ಳರ ತಂದು ಕೊಡದಿರಲು ನಿನ್ನ ಶೂಲಕ್ಕಿಕ್ಕಿಸುವೆನೆಂದಾ  ೫

ಮಂದಿ ಕುದುರೆಯುವೆರಸಿ ಹೆಜ್ಜೆಪಾಡನು ಹಿಡಿದು ಬರೆ
ಚಂದದಿಂದೆಸೆವ ನಗವೊಂದು ಬಿದ್ದಿರೆ ಸಹಿತ
——————————
—————–ಒಂದೊಂದಾಗಿ ಬಲ ಸಹಿತಾ
ವೀರರಿಬ್ಬರ ಹೆಜ್ಜೆವಿಡಿದಳದು ಬರುತಿರಲು
ಸೇರಿಬಂದುದು ಮಾರ್ಗವರ ನಂದಿನಿಕೆಯಕ್ಕೆ
ತೋರಣವ ಕಟ್ಟಿರಲು ಸಕಲ ವಸ್ತುವ ಕಂಡು
ತೋರಿಸುತ ಅರಸಂಗೀನಂದಿಕೇಶ್ವರಾ ನಿಳೆಯದೊಳಗಿಹ ವಸ್ತುವಾ೬

ಊರ ತಳವಾರರಂ ಬೆಂಬಿಡದೆ ಹೆಜ್ಜೆಗಳ
ದಾರಿ ಮೆಟ್ಟಲು ಬಂದು ಗವಜೆರಪುರ ಹೊಕ್ಕು
ಊರ ಗೌಡನ ಕರಸಿ ಚೋರರನು ಕೊಡು ನಿನ್ನ
ಊರ ಹೊಕ್ಕಹರೆನಲು ಸಾರಿಸಿದರಲ್ಲಲ್ಲಿ ಮನೆಮನೆಯ ಹೊಕ್ಕರಸುತಾ
ಎಲ್ಲಿ ನೋಡಿದರು ಕಳ್ಳರ ಬರವು ಕಾಣಿಸದೆ ಮುಂ
ದೆಲ್ಲಿ ನೋಡಿದರೆ ಹೆಜ್ಜೆಗಳ ನಡತೆಗಳಿಲ್ಲ
ಕುಲ್ಲರೀ ಊರೊಳಗೆ ಹೊಕ್ಕು ಮರೆಯಾಗಿಹರೆ
ಬಲ್ಲಿದ ಶರಣರ ಮನೆಯನೋಡೆನೆ ಗೌಡ ಅಸದಳವು ನಮಗೆಂದನೂ           ೭

ಅರಸರಿಗೆ ಅರಿಕೆ ಮಾಡಲು ಮಂತ್ರಿಯೀ ಪದನ
ಕರಸೆಂದು ದೊರೆಪೇಳೆ ದಂಡನಾಯಕನೊಡನೆ
ಇರದೆ ಚರರಂ ಕಳುಹಿ ಗುಂಡಬ್ರಹ್ಮಯ್ಯಗಳ
ನಿಳಯಕೆ ಚರರೈದಿ ಕರ ಮುಗಿದು ಶರಣರಿಗೆ ಇರದೆ ಬಿನ್ನಯಿಸಿ ಬಳಿಕಾ

ದೊರೆಯ ಭವನವ ಹೊಕ್ಕು ಕನ್ನವನು ಕೊರದಲ್ಲಿ
ಇರುಳು ಬಂದಿಲ್ಲಿ ನಿಮ್ಮೆನೆಯೊಳಗಿಹರಂತೆ
ಕರದೊಯ್ದು ಅರಸಂಗೆ ಕಳ್ಳರೊಪ್ಪಿಸಿ ನೀವು
ಬರುವ ಪವಾಡಗಳ ಹರದೊಗಿಸಿ ಬಾಳುವದು ಕರ ಲೇಸು ನಿಮಗೆಂದರೂ      ೮

ಎಲ್ಲಿ ಬಂದಿಹರೆ ಕಳ್ಳರು ನಮ್ಮ ಮನೆಯೊಳಗೆ
ಎಲ್ಲಿಯದೀ ಮಾತು ಎತ್ತಳ ದುಃಖವಿದನು
ಬಲ್ಲವರು ನಾವೆಲ್ಲ ಬರಿದೆ ನುಡಿಯಲಿಬೇಡ
ನಮ್ಮಲ್ಲಿ ಕಳ್ಳರ ಬರುವು ಬಂದುಪದೆ ಕೇಳಿರೈ ಹೋಳು ಮಾತುಗಳು ಬೇಡಾ
ಬಲ್ಲಿದನು ಭಾಸ್ಕರಗೆ ತಮವು ಮುಸುಕುವುದುಂಟೆ
ಜಲದಲ್ಲಿ ಜೀವಿಗಳನಲಂಗೆ ಬೆದರುವುದುಂಟೆ
ಎಲ್ಲಿಯಾದರೂ ಕಳ್ಳರು ಜಂಗಮರೆಬಹುದುಂಟೆ
ನಮ್ಮಲ್ಲಿ ಕಳ್ಳರ ಬರವು ಕನಸಿನೊಳುಂಟೆ ಮರುಳಾಡ ಬೇಡ ಬರಿದೇ          ೯

ಬಲ್ಲಿದರನು ನುಡಿಗೇಳಿ ಬಂದ ಚರಕುಗಳಾಗ
ಅಲ್ಲಿರ್ದು ಕೆಲರೈದಿ ಭೂಪತಿಗೆ ಬಿನ್ನೆಯಿಸಿ
ಎಲ್ಲ ವೃತ್ತಾಂತವನು ಸತಿಕೇಳು ಕೋಪದೊಳು
ಇಲ್ಲಿಗವರನು ಕರಸೆಂದು ಮಂತ್ರಿಗೆ ನುಡಿಯೆ ಬಲ್ಲಿದ ಚರರಿಗೆಂದಾ
ಅರಸೆಂದಪ್ಪಣಿಯ ಶಿರದೊಳಾನುತ ಮಂತ್ರಿ
ಕರದು ಹೇಳಿದ ಶರಣರಲ್ಲಿಗೆ ತಹುದೆನಲು
ಧುರಗಲಿಗಳಾದವರು ಬಂದರಾಗಲೆ ಬೇಗಾ
ನೆರೆ ಕಂಡು ಶರಣರಿಗೆ ಕರಮುಗಿದು ಬೇಗದಲಿ ದೊರೆನಿಮ್ಮ ಕರೆದನೆನಲೂ     ೧೦

ಕೇಳಿ ಮನದೊಳಗೆ ವಿಸ್ತರಿಸಿ ಸಂತೋಷವನು ನೆರೆ
ತಾಳಿದರು ಪರಲೋಕ ನಮಗೆ ಸಾಧನವಾಯ್ತು
ಮೇಳೈಸಿ ಶಿವಪೂಜೆ ಅಷ್ಟವಿದ್ಯಾರ್ಚನೆಯ
ಸಾಳವನು ಪಕ್ಷಿಯನು ಕಂಡಪಯೊಳಗಾಗ
ಬಾಳೈಸಿ ಅಯಗಳ ಸಕಲ ಶೃಂಗಾರದಿಂದ ತನುವಲಂಕರಿಸಿ ಕೂಡೆ
ಇಟ್ಟ ಭಸಿತಾಭರಣ ಭಾಳದಲಿ ಗಂಧಕಸ್ತೂರಿ ತಿಲಕ
ತೊಟ್ಟ ರುದ್ರಾಕ್ಷಿ ಕಂಕಣ ಉರಗಾವಳಿಯು
ಬಟ್ಟ ಮುತ್ತಿನ ಮಣಿಯ ಸರದ ತೊಡರುಗಳಿಂದ
ಕಟ್ಟೆಸಕದಂದ ಪಾದದಲಿಟ್ಟ ಬಿರುದುಗಳಿಂದಾ ಬರುತಿಹ ಶರಣಗಡಣಾ      ೧೧

ಗುಂಡಬ್ರಹ್ಮಯ್ಯಗಳು ತಮ್ಮೊಳಗೆ ಮಾತಾಡಿ
ಅಂಡೆಲೆವ ಪರಲೋಕ ಸಾಧನವು ನಮಗಾಯ್ತು
ಕಂಡಿಂದು ಶೇಖರನೆ ಜಯತು ತ್ರಿಯಾಂಭಕನೇ ಭೂ
ಮಂಡಲದ ಸತಿಸುತ ಧರ್ಮದಾಸೆ ಸಾಕಿನ್ನು ನಮಗೆನುತ ಕಂಡೆಯವ ಹಿಡಿದು ಬಳಿಕಾ
ಮಂಡಿಸಿಯುವಳ ಕಡೆಯಲಿರ್ದಯ್ಯಗಳ ಚರಣಕ್ಕೆರಗಿ
ಗಂಡುಗಲಿಗಳು ತಮ್ಮ ಹರಣದಾಸೆಯ ಬಿಟ್ಟು
ಖಂಡೆಯವ ಆಡಿಕೊಂಡು ಸಕಲ ಭೂಷಣವೆರಸಿ
ಕಂಡಿಂದುಧರನ ಶರಣರು ಹೊರಟು ಬರುತಿರುವ ಆಡಂಬರವ ಪೇಳಲಳವೇ  ೧೨

ನಡೆದು ಬಂದರು ತಮ್ಮ ಕಡು ಸೊಬಗಿನೇಳೆಯಲಿ
ಬಿಡದಡಿಯಿಟ್ಟು ಎಡಬಲದ ಶರಣರ ಗಡಣದಿಂ
ಪೊಡವಿ ಪಾಲಕರಾಯ ನಿದಿರನಿಲ್ಲುಲು ನೋಡಿ
ಕಡುವೈಯಿಲದಿಂದ ನಿಟ್ಟಿಸುತ ಮಂತ್ರಿಯು ಬೇಗಾ ನುಡಿದ ಶರಣರಿಗೆ ಕಥೆಯಾ
ಕಾಣಿಕೆಯನಿಕ್ಕೆರಗಿ ಕೈಯಿಗಳ ಮುಗಿಯದೆ ನೀವು
ಕ್ಷೋಣಿಪನ ಬಳಿಗೈಯ್ದಿ ಬರಿದೆ ನಿಂದಿರಿ ನೀವು
ಕಾಣಿಸದು ನಿಮಗರಸುತನವೆಂಬದಿದಿರಿನಲಿ
ಉಣಿಯದ ಕಳ್ಳರನು ಮನೆಯೊಳಿರಿಸಿದಿರಿನ್ನು ಉಚಿತವೇ ನಿಮಗೆಂದನೂ      ೧೩

ಕರೆಯ ಕಳುಹಿದರೆ ಬಂದೆವು ನಾವು ಅರಸಿನ ಬಳಿಗೆ
ಹಿರಿದು ಕಾಣಿಕೆಯಗಿ ಕೈಯಿ ಮುಗಿದಭವಂಗೆ
ಧರೆಯೊಳಗೆ ಕದ್ದಕಳ್ಳರ ಬರವನರಿವರಲ್ಲ
ಗುರುಲಿಂಗ ಜಂಗಮವು ನಮ್ಮಲ್ಲಿರಲು ಕೊಡುವವರಲ್ಲ ಬಿರಿದು ನಮಗುಂಟು ಮಂತ್ರಿ
ಕಳವ ಕದ್ದವರ ಕನ್ನವ ನಿಕ್ಕಿದವರುಗಳ
ಒಳಗಿರಿಸಿಕೊಂಡು ಜಂಗಮವೆಂದು ಪೂಜಿಪುದು
ಅಳಹುದೆ ಶಿವಮತಕೆ ಶರಣ ಸಂಕುಲದೊಳೆಗೆ
ಬಳವಂತರಾಗೀ ಮಾತ ನುಡಿದಿರಿ ನೀವು ಸಾಕು ಕಳ್ಳರ ಒಪ್ಪಿಸೀ      ೧೪

ಮರೆಹೊಕ್ಕ ಜಂಗಮವ ಕೊಡುವರಲ್ಲ ನಾವು
ಬಿರಿದಿಕ್ಕಿದೆವು ಮಂತ್ರಿಮನೆಯ ಮುಂಗಡೆಯೊಳಗೆ
ಪರಲೋಕದ ಭವ ಮೆಚ್ಚನು ನಾವು ತಪ್ಪಿದರೆ
ದೊರೆತನಕೆ ಅಳುಕಿ ಬಿರಿದುಗಳ ಬಿಡುವವರಲ್ಲ ತೆರೆಮರೆಯ ಮಾತೇಕೆ

ಬಿರುನುಡಿಯ ಮಾತುಗಳ ತೆರನ ಕೇಳುತ ಮಂತ್ರಿ
ತಿರುಗಿ ಅರಸನ ಮುಖವ ನಿಟ್ಟಿಸಲು ದೊರೆ ತಿಇದು
ಉರುಬಿದನು ಬಳಿಕವರ ಘರ್ಜಿಸಿದ ಶರಣರನು
ಬರಿಯೆ ದಣಿಯಲಿ ಬೇಡಾ ಕಳ್ಳರನು ಕೊಡಿ ನೀವು ಉರುವ ಶೂಲಕೆಳೆಸುವೆವೂ           ೧೫

ಕಳ್ಳರನು ಕೊಡದಿರಲು ಅವರಾಜ್ಞೆ ನಿಮಗುಂಟು
ಪೊಳ್ಳು ಮಾತುಗಳಲ್ಲದಟು ಕೊಳ್ಳವು ನಿಮ್ಮ
ಒಳ್ಳೆಯವರು ಸಕಲ ಧರ್ಮಿಕರು ಸಜ್ಜನರಹುದೂ
ಕಳ್ಳರನು ನಮಗಿಕ್ಕಿ ತೋರ್ಪುದೀಗಲೆ ನೀವು ಇಲ್ಲವೇ ಶೂಲವೇರಿ
ಬಾಳಲೋಚನ ಹರನು ನಮಗೆ ಪರಲೋಕವನು
ಮೇಳೈಸಿ ದೊರೆಯ ಮುಖದಲಿ ನುಡಿಸಿ ತೋರಿದನು
ಬಾಳ ಮಾತುಗಳೇಕೆ ನಿಮ್ಮೊಡನೆಯಲೇ ನೃಪತಿ
ಕಾಳು ಬುದ್ಧಿಗಳ ಮನಚಂಚಲವು ನಮಗಿಲ್ಲ ಮೇಳೈಸು ಶೂಲಗಳನೂ       ೧೬

ಹತ್ತುವೆವು ಶೂಲವನು ಹರಸೆ ನಿನ್ನಯ ಮನದ
ಉತ್ಸಹದ ಸಲಿಸುವೆವು ಕಣ್ಣ ಅರ್ತಿಯ ನೀಗಾ
ಮತ್ತ ತನನಿಂದ ಹಿಮ್ಮೆಟ್ಟಿ ಅಳುಕುವರಲ್ಲ
ಕರ್ತೃ ಹರತಾಬಲ್ಲ ಮನದ ದೃಢಗಳ ನೋಡು ವಿಸ್ತರಿಸು ಭೂಪ ಬಳಿಕಾ
ಅರ್ತಿಮಿಗೆ ಶರಣರಂಗೀಕರಿಸಿ ಮನದೊಳಗೆ
ಕೆಚ್ಚೆದೆಯ ಧಟಿಂದ ಭೂಪತಿಗೆ ನುಡಿದರೆಲೆ
ಮತ್ತೇಕೆ ಆಲಸ್ಯ ಬಿಡದೆ ಶೂಲವ ರಚಿಸು
ತತ್ತಳುಂಟೆ ಭೂಪತಿ ನುಡಿದ ವಾಕ್ಯಗಳು ವಿಸ್ತರಿಸು ಬೇಗ ನೃಪತೀ  ೧೭

ಮೃತ್ಯುಯಿದೆಯಳವಡಿಸಿ ನಾವು ಬರುತ್ತಾಯಿದ್ದೇವೆ
ಮಕ್ಕಳಿಗೆ ಧರ್ಮ ಮಾರ್ಗಸ್ತುತಿಯನೆಚ್ಚರಿಸಿ
ಸಮಸ್ತ ಬಂಧುಗಳ ಅನುಕರಿಸಿ ಸ್ತ್ರೀಯರ ತಿಳುಹಿ
ವಿಸ್ತಿರ್ಣದಿಂದ ಗುರುಲಿಂಗ ಜಂಗಮಕೆರಗಿ ಬಹೆವೆಂದು ಮತ್ತಿತ್ತಲೂ
ತರಿಸಿದರು ಘನ ಮರನ ತಂದು ಚರರುಗಳಿಂದ
ಬರಿಸಿದರು ಕಾಮಾಟ ಬಡಗಿಯರ ತಂಡಗಳ ಮಿಗೆ
ವಿಸ್ತರಿಸಿದರು ಶೂಲವನು ಘನತೆಯಿಂದಲಿ ಬಳಿಕ
ವರಿಸಿದರು ಮೊನೆಗಳನು ಕೂರಲಗಿ ನಿಮ್ಮಿಗಿಲು ರಾಯಂಗೆರರುಹೆ ಮತ್ತೆ      ೧೮

ಇತ್ತಲಿ ನಿಳೆಯದಲಿ ಶರಣ ಹರ ಪೂಜೆಯನು
ಉತ್ತಮ ಸುವಸ್ತುವೆಲ್ಲ ಲಿಂಗಕರ್ಪಿಸುತ
ಮತ್ತೆ ಗಮನೆಯರ ತಿಳುಹಲ್ಕವರು ನಿಚ್ಚಯಿಸಿ
ಸತ್ಯಶರಣರು ಅಯ್ಯಗಳಿಗೆ x x ನಮಿಸಿ ನಿಚ್ಚಯಿಸಿ ಬಳಿಕೆಂದರೂ

ಸ್ವಾಮಿಯೆಮ್ಮಯ ಮನೆಯೊಳ ನೋಡಿ ನಾವು ಸುಖವಿಹುದು
ಕಾಮಹರ ಪ್ರತಿರೂಪ ಸಲಹೆಂದು ಕೈಮುಗಿದು
ಸೋಮಶೇಖರ ರೂಪ ಬಿಡದೆಮ್ಮ ರಕ್ಷಿಪುದು
ಭೂಮಿಯೊಳಗಳ ಭೋಗ ಸಾಕೆಮಗೆ ಎಲೆದೇವಾ ಹರಕೃಪೆಯ ಕರುಣಿಸುವದೂ          ೧೯

ಬಿಗಿದುಟ್ಟಕಾಸೆಗಳು ಹೋಗರೋಗುವ ಮುಂಜೆರಗು
ಅಗಣಿತದಲಿ ವೀರಗಂಕಣವು ಕಾಂಚಿಯ ಧಾಮ
ತೆಗೆದಿಕ್ಕಿ ಕಾಲಪೆಂಡೆಯವು ಝಣಝಣರೆನಲು
ಮಘಮಘಿಪ ಗಂಧ ಕಸ್ತೂರಿಬೊಟ್ಟನೊಸಲೊಳಗೆ ಝಗಝಗಿಸುವಾಭರಣವೂ
ಹೊಂಗಂಟೆ ಪಾದದಲಿ ಹೊಳಹೊಳವು ನಸುದೊರೆ
ಅಂಗೈಸಿದಡಿದ ಖಡ್ಗದ ಹೊಳವು ಪ್ರಜ್ವಲಿಸಿ
ಶೃಂಗಾರಿಸಿ ನಡುವಿನೊಳು ಬಲದ ವೊಂಕುಡಿಯೆಸೆಯೆ
ಬಂಗಾರ ಪದಕ ಚೌಕುಳಿ ಕಂಟಮಾಲೆಗಳು ಮುಂಗೈ ವಜ್ರಮುಷ್ಠೀ  ೨೦

ಆನಂದದಿಂದ ಮನದಂದು ಪುರುಷರ ಕೂಡೆ
ಮಾನಿನಿಯರಿಬ್ಬರೊಂದಾಗಿ ಶೃಂಗರಿಸಿದುದು
ಏನೆಂಬೆನವರ ಕಟ್ಟ ಸಕದುನ್ನತಿಗಳನು
ಹೀನವಾದರೆ ಮನವು ಕಾಲ ಭಯವುಂಟೆಂದು ಜ್ಞಾನದಿಂದ ತಿಳಿದು ನೋಡಿ
ಈ ನಮ್ಮ ದೇಹಗಳ ಮೊದಲೆ ಈಡಾಡುವೆವು
ಬಾನು ಚಂದಿರ ಸೂಡಿದ ಭಯಮೆಚ್ಚಲು ಬಳಿಕ
ಭೂನಾಥ ಪರಿಜನವು ಪುರಜನವು ನೋಳ್ಪಂತೆ
ಆನಂದದಿಂದ ಕಾಯವನು ಬಿಸುಡುವೆವೆಂದು ತಮ್ಮಳೆಚನೆ ಬರಿದುದು          ೨೧

ನಿಡಿಗುರುಳ ನೆವರಿಸಿ ತೊಡದು ಕೆಮ್ಮೆಣ್ಣೆಗಳ
ಬಿಡದೆ ಜಡೆಗಳ ತೊಡರು ಎಡೆಯೆಡೆಗೆ ಹೂಮಾಲೆ
ಜಡಿವ ಮುತ್ತಿನ ಬೊಟ್ಟು ಭಸಿತ ಕುಂಕುಮವಿಟ್ಟು
ಕಡೆಗಣ್ಣಡಾಳಗಳು ಹಿಡಿವ ಮನ್ಮಥನಂಬು ಕಡುಸೊಬನಾಂತು ಬಳಿಕಾ
ಪಿಡಿದ ಕಾಮನ ಕೈಯ ಸಿಂಗಡಿಯೆನೆಪುರ್ಬು
ಅಡರಿ ಪೂರ್ವಾದ್ರಿಯನು ತೊಳಪ ನಖಮುಖದಳವು
ಅಡಿಗಡಿಗೆ ಜಡಿವನಾಸಿಕದ ಮೂಕುತಿಯಿಂದಾ
ಬಿಡದೆ ಹೊಳೆಹೊಳೆವ ಪೆರೆ ನೊಸಲ ಸುಖದಿಂದಾ ಶೃಂಗಾರಗೈಯ್ಯುತಿರಲೂ            ೨೨

ಕಬ್ಬುವಿಲ್ಲನ ರಥಕೆ ತಬ್ಬಿಸಿದಗಾರಿಯೆನೆ
ಉಬ್ಬುತಿಹ ಹರುಷದಲಿ ಕರ್ಣದೊಳುತಾ ಟಂಕ
ಒಬ್ಬರೊಬ್ಬರಿಕ್ಕಿ ನಗುನಗುತ ಕನಕದ ಪುವ್ವ
ಎಬ್ಬಿಸುವ ಬಾನಂದಮಯಮಪ್ಪ ಮುತ್ತಿನ ಸರವು ಕಂಠದಲಿ ರಾಜಿಸಿದವೂ
ಹಾರ ಕಂಕಣ ಪದಕ ಭುಜಕೀರ್ತಿ ಹೊಂಗಡಗ
ತೋರ ಮುತ್ತಿನ ಕೊಪ್ಪು ವೀರಮುದ್ರಿಕೆ ಚಳಕೆ
ನಾರಿಯರ ಮಧ್ಯದಲಿ ತೊಳಪ ಕಾಂಚಿಯ ಧಾಮ
ಸೇರಿಸಿದ ಮಂಟಿಕೆಯು ಕೋರಳ ಚಿಂತಾಕುಗಳು ಧೀರೆಯರು ಶೃಂಗರಿಸಲೂ   ೨೩

ಸರದಿ ಮುತ್ತಿನದೊಳು ಪಣಿಬಲುಗಿರಿಯ ಬಿಗಿದಂತೆ
ತರುಮಿಯರು ಉಟ್ಟಪಿತಾಂಬರದ ಬಿಗುಹುಗಳು”ಪೊರವಡುವ ನಸುನಗೆಯು ಹೊರಸೂಸೆ ನಾರಿಯರು
ಇರದೆ ಶೃಂಗರಿಸಿ ಮುಕರವ ನೋಡಿ ಪುರುಷರಿಗೆ ನೆರನಮಿಸಿ ಕರ ಮುಗಿದರೂ
ಪರಲೋಕ ಸಾಧನವು ಬಂದಪುದು ತಡವೇಕೆ
ನೆರೆನೋಡಿ ನಮ್ಮ ಶೂರತ್ವದ ಬಲ್ಮೆಯನು
ಹರಮೆಚ್ಚೆ ನಿಮಗಿಂದ ಮುನ್ನ ಶಿರವರಿದಪೆವು
ಗುರು ಕುಚೆಯರೆಂದ ಮಾತನು ಕೇಳುತಲಿ ಬಳಿಕಾ ಹೊರಹೊಂಟ ಜಯವೆನುತಲೀ       ೨೪

ಇಕ್ಕೆಲದ ಪಾಟಕರ ಕಳಕಳವು ರಾಜಿಸುತ
ಹೊಕ್ಕಳದಿರಣಗಾಳೆ ಬಿರಿದೆತ್ತಿ ಸಾರುತಲಿ
ಅಕ್ಕರಿಂದಲಿ ಜನವು ಅಡಿಯಿಟ್ಟು ನಡೆವುತಿರೆ
ಸಿಕ್ಕ ಹರಿದವರಿವರುಭಯ ಹಸ್ತಗಳನೆಂದು ವಕ್ಕನಾಲಿಸೆನೊಳ್ಪಜನರೂ
ಈ ಪರಿಯ ಬಿರಿದುಗಳ ಹೊಂಗಳಿಸಿ ಗುಂಡಬ್ರಹ್ಮಯ್ಯ
ಕಾಪಾಲಿಧರ ಜಯವೆನುತ ಸೂಲದ ಬಳಿಗೆ
ವ್ಯಾಪಿಸಿಯು ಮನದೊಳಗೆ ಬಲಬಂದು ಬಳಿಗೆ
ಭಾಪುರೇ ಶಂಬುಶಂಕರ ಜಯತುಜಯವೆಂದು ಶೂಲಗಳ ಪೂಜಿಸಿದರೂ        ೨೫

ತೆರೆಯಿಂದ ಶೂಲಗಳ ಮರೆಮಾಡಿ ಬಾಗಿನವ
ಗರುವೆಯರು ಕೊಟ್ಟು ತಮ್ಮ ನದೊಳಗೆ ಗೌರಿಯರ
ಹರಸಿ ಪತಿಗಳ ಚರಣಕ್ಕೆ ಕೈಮುಗಿದಾಗ
ಧರೆಮೆಚ್ಚಿ ಬೊಬ್ಬರದು ಕೊರಳನರಿವೆವುಯೀಗ ತೆರೆಯ ತೆಗೆಸದ ಮುನ್ನಲಿ  ೨೬

ಭಾಳ ಲೋಚನ ಹರನು ರೂಪೊಂದು ಕೈಕೊಂಡು
ಏಳು ನಾರದ ಮುನಿಯೆ ದೊರೆಯ ಸಮ್ಮುಖಕೀಗ
ಬಾಳ ತಪ್ಪನು ಪಿಡಿದು ಶರಣರನು ಮುಖಗೆಡಿಸಿ
ತಾಳು ಮಾಡುವೆ ನಿವರ ಶೂಲಲಿಂಗಕೆ ಸಂತುತದವೇಕೆ ನಡೆಯೆಂದನೂ
ಮೇಳೈಸಿ ಮುನಿವೆರೆಸಿ ದೊರೆಯ ಸಮ್ಮುಖಕಾಗಿ
ಬಾಳಲೋಚನ ಹರನು ಬಲುಮುಪ್ಪಿನೇಳ್ಗೆಯಿಂ
ಗೀಳಿಡುವ ಘನರವದ ಸಂದಣಿಯೊಳಯಿದಿ ಕ
ಟ್ಟಾಳುಗಳರಸಯಿದಿರೆದ್ದು ಅಯ್ಯನ ಕಂಡು ಕರಮುಗಿದು ಚರಣಕೆರಗೆ        ೨೭

ಹರಸಿ ಭಸಿತವನಿಟ್ಟು ನಾರದನು ನುಡಿಯಲ್ಕೆ
ಕರಲೇಸು ಸ್ವಾಮಿ ಎಲ್ಲಿಂದ ಬಂದಿರಿಯೆನಲು
ವರಮುನಿಯು ನುಡಿದನೆಲೆ ಭೂಪತಿಯೆ ನಿನ್ನಿರವ
ಧರೆಯೊಳಗೆ ಕೇಳಿದೆವು ಕೀರ್ತಿ ಘನವೆಂಬುದನು ಬರವುತಾ ಶಿರವೆಮಗೆ
ಇರದೆ ಯೀ ನುಡಿಗೇಳಿ ಅರಸು ಮನದೊಳು ಹಿಗ್ಗಿ
ಹಿರಿಯರೇತಕೆ ನುಡಿವುದಿಲ್ಲಲೆ ತನ್ನೊಳಗೆ
ಪರಿವಿಡಿದ ಮತವಿದೇನು ಕಾರಣವೆಂದು
ಅರಸು ಕೇಳಲು ಮುನಿಯು ನಸುನಗೆಯು ಪಸರಿಸುತ ನುಡಿದು ಮತ್ತಿತ್ತೆಂದನು           ೨೮

ಕೇಳಿ ಬಂದೆವು ಭೂಪ ನಿನ್ನ ಘನ ಕೀರ್ತಿಯನು
ಕಾಳು ಬುದ್ಧಿಯೆನಿಣಿಸೀ ಮಹಾಶರಣರನು
ಬಾಳ ಬಗೆಯಲು ಅಗ್ನಿಗಿಕ್ಕುವದ ಕಂಡೀಗಾ
ಆಳವಾಡುತಲಯ ಮೌನವನು ಕೈಕೊಂಡು ಮೇಳೈಸಿ ನುಡಿವುದಿಲ್ಲ
ಹೇಳಿ ಮಾಡುವುದೇನು ನೀನರಿಯೆ ಬಲುಪಾಪ
ತಾಳಬಾರದು ನಿನ್ನ ರಾಜದೊಳ ಧರ್ಮಿಕರು
ಊಳಿ ಹೋದರು ಕಳ್ಳರಿವರಿಗೇತಕೆ ಶೂಲ
ಕೇಳುವನು ನೀನಲ್ಲವೆಂದು ತಮ್ಮೊಳು ತಾವು ಬಾಳ ಮೌನದಲಿಪ್ಪರು         ೨೮

ಎಂದ ಮಾತನು ಕೇಳಿ ಮನನೊಂದು ಭೂಪತಿಯು
ನಂದಿವಾಹನ ಸಮದ ಜಂಗಮವುಯೆನ್ನೊಡನೆ
ಚಂದದಿಂ ನುಡಿಯಲ್ಕೆ ಶೂಲವನು ಬಿಡುವೆನು
ಮಂದಮತಿ ನರ ಮನುಜ ತಪ್ಪು ಸೈರಿಸು ಕಾಯ್ದು ಚಂದದಿಂ ನುಡಿಯಬೇಕು
ಮಂದರ ಗಾರಿಧರನು ಅರಸಂದ ಮಾತನು ಕೇಳಿ
ಚಂದವಲ್ಲವು ಮನೆಯವರಿಗೇತಕೆ ಶೂಲ
ಎಂದಿನಂದದಿ ನಿನ್ನ ರಾಜ್ಯದೊಳು ಸುಖವಿರಲು
ಬಂದಪುದು ಘನಕೀರ್ತಿ ಗುಂಡಬ್ರಹ್ಮರು ಮುಖದಿ ಕಂದ ಯೀಗಿವರ ಬಿಡಿಸು  ೨೯

ಜಂಗಮದ ನುಡಿಗೇಳಿ ಕೋಪವರ್ಜಿತನಾಗಿ
ಅಂಗಜಾರಿಯ ಭಕ್ತರೇರಲಿ ಬೇಡ ಶೂಲವನು
ಅಂಗೈಸಿ ಮಂತ್ರಿಯೊಳು ಚರರ ಕಳುಹಿಸಿನೆನಲು
ಶೃಂಗರಿಸಿ ಮನದೊಳಗೆ ಗುಡಿಗಟ್ಟಿ ಮಂತ್ರೀಶ ಚರರ ಕಳುಹಲು ಬೇಗದಿ
ಹಿಂಗದೆ ಚರರೈದಿ ಶರಣರ್ಗೆ ಪೊಡವಟ್ಟು
ಅಂಗೈಸಬೇಡ ಶೂಲವನೆಂದು ದೊರೆನುಡಿ
ದಂಗವಿದಪ್ಪಣೆಯು ನಿಮ್ಮ ಬರಹೇಳಿದರೆನಲು
ಕಂಗಳೊಳು ಕಿಡಿಸೂಸೆ ಕೋಪದೇಳ್ಗೆಗಳಿಂದ ನೋಡಿಬಳಿಕಿಂತೆಂದರೂ           ೩೦

ಕರೆಯ ಕಳುಹುವದೇಕೆ ನಮ್ಮ ನಿಮ್ಮರಸುಗಳು
ಬರುವರಲ್ಲವು ನಾವು ಹೋಗಿ ಬೇಗದಿ ನೀವು
ಬರದೀ ಶೂಲಗಳ ಬಿಡುವರಲ್ಲವು ನಾವು
ಮರುಳಾಗ ಬೇಡಿನ್ನು ದೊರೆಗೆಯೆಚ್ಚರಿಸೆಂದು ಶರಣ ಕುಲತಿಲಕ ಪೇಳ್ದಾ
ತಿರುಗಿ ಬಂದರು ಬೇಗ ಚರರೈದಿ ಭೂಪತಿಗೆ
ಕರ ಮುಗಿದೀ ಪರಿಯ ಶರಣರಾಡಿದ ಮಾತ
ಇರದೆ ಬಿನ್ನಯಿಸೆ ಮನದೊಳು ನೊಂದು ಗಣಪತಿಯು
ಹರಹರಾಯೆನುತ ಕರವಾಂತು ಕರ್ಣಕೆ ಬಳಿಕಿರದೆ ಮಂತ್ರಿಯನಟ್ಟಿದಾ           ೩೧

ಬಂದನಾಗಳೆ ಮಂತ್ರಿ ಶರಣರ್ಗೆ ಕರವೆತ್ತಿ
ವಹಿಸುತ ವಿನಯ ವಚನಗಳಿಂದ ಪೇಳಲ್ಕೆ
ಚಂದದಿಂದಲಿ ನೋಡಿ ಮಂತ್ರಿ ಶಿರೋಮಣಿಯ
ಕಂದರ್ಪದಹ ಮೆಚ್ಚ ನಾವು ಶೂಲವ ಬಿಡೆವು ಬಂದಬಟ್ಟಿಯಲಿ ತಿರುಗೂ
ಎಂದ ಮಾತನು ಕೇಳಿ ಮನದೊಳಗೆ ಭುಗಿಲೆದು
ತಂದೆಗಳಿರಾ ಕೇಳಿ ನಿಮಗೇಕೆ ಶೂಲವು ಬರಿದೆ
ಮಂದಮತಿ ಬೇಡಿನ್ನು ತಿಳುಹಿದನು ಭೂಪತಿಯು
ಎಂದಿನಂದದಿ ನಿಮ್ಮ ಗೃಹದೊಳಗೆ ಸುಖವಿರಿ ಬೇಡ ಶೂಲವು ನಿಗೆಯೂ       ೩೨

ಮಂತ್ರಿಯಾಡಿದ ನೀತಿ ವಚನಗಳ ಕೇಳುತಲಿ
ಸಂತೋಷದಿಂದ ಪೇಳ್ದರು ಬಳಿಕ ಸಚಿವನಿಗೆ
ಇಂತಿನ್ನು ನಮ್ಮ ಗೊಡೆವೆಯು ಬೇಡ ನೀ ಹೋಗಿ ಭೂ
ಕಾಂತನಿಗೆ ಅರುಹು ನಾವಿನ್ನು ನಿಲ್ಲುವರಲ್ಲಯೆಂದೆನಲು ತಿರುಗಿ ಮಂತ್ರಿ
ಕಂತು ಹರಭಕ್ತರನು ನೆನೆದು ಮನದೊಳಗೆಣಿಸಿ
ಮುಂತೆಸೆವ ಧೈರ್ಯದೇಳ್ಗೆಗಳ ಸಾಲ್ಗೊಳಿಸುತಲಿ ನಡೆ
ತಂದು ಭೂಪತಿಗೆ ಕರವೆತ್ತಿ ವಿಸ್ತರಿಸಿದನು
ಸಂತತವರ ಕಡುವೀರತ್ವದೇಳ್ಗೆಯನು ನೃಪ ಕೇಳಿ ತಲೆದೂಗಲೂ   ೩೩

ಅರಸು ಬೇಗದಲೆದ್ದು ಹರನಂಘ್ರಿಯ ಬಿನ್ನವಿಸಿ
ಇರದೆ ಬಂದನು ಬೇಗ ಮಂತ್ರಿಗಳ ಗಡಣದಿಂ
ಕರಮುಗಿದು ನುಡಿದ ಕಿಂಕರ ವಚನಗಳ ಬಳಿಕ
ಹರಭಕ್ತರಿವರು ಬಲ್ಲಿದರೆಂದು ತಿಳಿಯದಲಿ ನೆರೆನುಡಿದ ತಪ್ಪಕಾಯ್ದು
ಪರಿಹರಿಸಬೇಕೀಗ ಎನ್ನ ಅಪರಾಧವನು
ಸೆರಗೊಡ್ಡಿ ಬೇಡುವೆನು ನೆರೆ ಧರ್ಮವಿತ್ತಪುದು
ಗುರುವೆ ಶೂಲವು ಬೇಡ ನಿಮಗೀಗಯೆಂದೆನಲು
ದೊರೆಯ ಮುಖವನು ನೋಡಿ ಹರಭಕ್ತ ಗುಂಡಯ್ಯಯಿರವ ಪೇಳಿದನರಸಗೆ  ೩೪

ಯಾಕೆ ನೀನಿಲ್ಲಿ ಬಂದಪರೆ ದೊರೆತನದಲಿ
ವ್ಯಕ್ತವಲ್ಲವು ದೊರೆಯೆ ಕೇಳೆಮ್ಮ ನುಡಿಗಳನು
ಭೂಕಾಂತಿ ರವಿಶಶಿಯು ಸಾಕ್ಷಿಯಹುದಿದಕಿನ್ನು
ನೀ ಕರುಣದಿಂದ ಬಂದಪುದು ಕರ ಲೇಸಹುದು ಸಾಕದಂತಿರಲಿ ಕೇಳೋ ||
ಕಿರಣಗಳು ನೆರೆಮೂಡೆ ಪಶ್ಚಿಮದ ಭಾಗದಲಿ
ಸರಡಿಗಳು ಉಕ್ಕಿ ಬಲು ಮೆರೆದಪ್ಪದರೀಗ
ಧರೆಗಿಳಿದ ಗಂಗೆ ಮರಳಿ ನಭಕಡರಿದರೆ
ಗಿರಿ ಗಿರಿಗಳೆಲ್ಲವಂ ಒಲಿದಾಡುತಿರಲೀಗ ಶರಣ ವಾಕ್ಯವು ತಪ್ಪದೂ            ೩೫

ಗುರುವೆ ನಿಮ್ಮಯ ನುಡಿಗೆ ಉತ್ತರವು ಎನಗಿಲ್ಲ
ಪರಿಹರಿಸಬೇಕೆನೆಗೆ ಜನಪದ ಪವಾಡವನು
ಕರುಣದಿಂ ಕೃಪೆಯಿತ್ತು ಸಲಹಿ ಶೂಲವು ಬೇಡಾ
ದುರದುಂಬಿ ತನದಿಂದ ಬಂದ ತಪ್ಪನು ಕಾಯ್ದು ಕರುಣಿಪುದೊಲಿದು ನೀವು ||
ದೊರೆಯಾಡಿದ ನೀತಿಮಾತುಗಳ ನೆರೆ ಕೇಳಿ
ಹರುಷ ಮನದೊಳಗುಣಿಸಕ್ತರಿಸಿ ಭೂಪತಿಯ
ಉರುವ ಶೂಲನವೀಗ ನಮಗೊಲಿದು ಶಿವಕೊಟ್ಟ
ಮರೆಯ ಮಾತೇಕಿನ್ನು ಹರಗೆ ಸಂದಿತು ಶೂಲ ಬರಿದೆ ನೀ ಬಳಲ ಬೇಡಾ       ೩೬

ಶರಣರಿಗೆ ಶೂಲವನಿರದೆ ರಚಿಸಿದೆನೆಂದು
ದೊರೆ ನಿನ್ನ ಮನದೊಳಗೆ ಹಲವೆನೆಣಿಸಲು ಬೇಡ
ಇರವ ಕಂಡೆವು ನಾವು ಶಂಕರನ ಚರಣಗಳ
ಪರಲೋಕ ಸಾಧನವು ನಮಗೆ ಬಂದಪುದೀಗಾ ಸ್ಥಿರ ರಾಜ್ಯವಾಳು ನೀನು ||
ದೊರೆತನದ ಬಲುಹಿಂದ ಬಡವರನು ಕೊಲಬೇಡಾ
ನೆರೆ ಧರ್ಮದಿಂದ ಪ್ರತಿಪಾಲಿಪುದು ರಾಜ್ಯವನು
ಹರಭಕ್ತರೊಡನೆ ಮಥನಿಸಬೇಡ ನೀನರಿಯೆ
ಗುರುಹಿರಿಯರ ಕಂಡು ದುರುಳು ತನಗಳು ಬೇಡ ಹರನೊಲಿವ ನಿನಗೆ ನೃಪತೀ            ೩೭

ತರಳರನು ನಮ್ಮಂತೆ ಕಂಡು ಪಾಲಿಸು ನೀನು
ಇರನೋಡು ನಮ್ಮದಟುಗಳ ಸೌಕರ್ಯದಿಂ
ಕರಮಪ್ಪ ಶೂಲಗಳು ಸಂದವಾಗಲೆ ಹರಗೆ
ಇರಬಾರದಿನ್ನಿಲ್ಲಿಯೆಂದು ದೊರೆಯೊಳು ಪೇಳೆ ನೆರೆದ ಜನ ಹೊಗಳುವಂತೆ ||
ಇಕ್ಕೆಲದ ಪಾಠಕರ ಘಡಣರಂಜಿಸಿ ಕೂಡೆ
ಹೊಕ್ಕಳಿಸಿ ಬಿರಿದುಗಳೆತ್ತಿ ಹಲವಂಗದೊಳು
ಇಕ್ಕೆ ಖಡ್ಗಕೆ ಕೈಯ ಘರ್ಜಿಸಲರ್ಬುತವು
ಲೆಕ್ಕಸುವರಳವಲ್ಲವರ ಶೂರತ್ವವನೆಂಬಲ್ಲಿ ಸಂಧಿ ಸಂಪೂರ್ಣ     ೩೮

ಅಂತುಸಂಧಿ ೨ಕ್ಕಂ ಪದನು ೬೩ಕ್ಕಂ
ಮಂಗಳ ಮಹಾಶ್ರೀ ಶ್ರೀ ಶ್ರೀ