ನಾಳೆ ವರ್ಷಾಂತ್ಯದಲ್ಲಿ ಗೆಳೆಯರ ಜೊತೆ ಸಂಭ್ರಮ ಆಚರಿಸುವ ಆಲೋಚನೆ ಇದೆಯೇ! ಹಾಗಿದ್ದರೆ ನಿಮಗೊಂದು ಉಪಯುಕ್ತ ಸುದ್ದಿ! ಗೆಳೆಯರ ಒತ್ತಾಯಕ್ಕೆ ಮಡಿದೋ, ಆಶೆಯಿಂದಲೋ ಗಂಟಲು ಮಟ್ಟ ಗುಂಡು ಹಾಕಿದ ಮೇಲೆ ಮಡದಿಯನ್ನು ಎದುರಿಸುವ ಗುಂಡಿಗೆ ಇಲ್ಲದಿದ್ದರೆ ಚಿಂತೆ ಬೇಡ: ಎಲ್ಲವೂ ್ರೆಲಿನ್ ಮಾಯೆ ಎಂದು ತಪ್ಪಿಸಿಕೊಳ್ಳಬಹುದು. ಏಕೆಂದರೆ ಕೆಲವು ತಿಂಗಳುಗಳ ಹಿಂದೆ ಸ್ವೀಡೆನ್ನ ಎಲಿಜಬೆತ್ ಜೆರ್ಲಾಗ್ ಮತ್ತು ಸಂಗಡಿಗರು ಮದ್ಯ ಸೇವನೆಯಲ್ಲಿ ್ರೆಲಿನ್ ಎನ್ನುವ ಹಾರ್ಮೋನ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವರದಿ ಮಾಡಿದ್ದರು. ಆಗ ಅದು ಸುದ್ದಿಯಾಗಿರಲಿಲ್ಲ. ಆದರೆ ಜೀವವಿಜ್ಞಾನ ಕ್ಷೇತ್ರದಲ್ಲಿ ಪ್ರಮುಖವೆನ್ನಿಸುವ ಸಂಶೋಧನೆಗಳನ್ನು ಆಯ್ದು ಪ್ರಕಟಿಸುವ ಫ್ಯಾಕಲ್ಟಿ 1000 ಎನ್ನುವ ವಿಜ್ಞಾನಿಗಳ ಇಂಟರ್ನೆಟ್ ಸಂ, ಜೆರ್ಲಾಗ್ರವರ ಈ ಸಂಶೋಧನೆಯನ್ನು ಒಂದು ಹೊಸ ಪರಿಕಲ್ಪನೆ ಎಂದು ಪ್ರಕಟಿಸಿದೆ.

್ರೆಲಿನ್ ಎನ್ನುವ ಹಾರ್ಮೋನು ನಮಗೆ ಪರಿಚಯವಾಗಿ ಹತ್ತು ವರ್ಷಗಳು ಕಳೆದಿರಬಹುದಷ್ಟೆ. ಅಷ್ಟರಲ್ಲೇ ಅದು ಸಾಕಷ್ಟು ಸುದ್ದಿ ಮಾಡಿದೆ. ಮಿದುಳಿನ ಕೆಲವು ನರಕೋಶಗಳ ಮೇಲೆ ಕಂಡು ಬಂದಿ ವಿಶಿಷ್ಟ ಪ್ರೋಟೀನುಗಳಿಂದಾಗಿ ಇಂತಹುದೊಂದು ಹಾರ್ಮೋನು ಇದೆ ಎಂಬ ಸುಳಿವು ಸಿಕ್ಕಿತ್ತು. ತದನಂತರ ಜಿಎಚ್ಆರ್-ಎಲ್ಆರ್1 ಎಂದು ಗುರುತಿಸಿರುವ ಈ ಪ್ರೊಟೀನುಗಳಿಗಷ್ಟೆ ತಳುಕಿಕೊಳ್ಳುವ ರಾಸಾಯನಿಕಗಳನ್ನು ಹುಡುಕಿದಾಗ ್ರೆಲಿನ್ನ ಅವತರಣವಾಯಿತು.  ನಮ್ಮ ಜಠರ ಹಾಗೂ ಕರುಳಿನ ಒಳಬದಿಯ ಜೀವಕೋಶಗಳು, ಮಿದುಳಿನ ಹೈಪೊಥಲಾಮಸ್ ಎನ್ನುವ ಭಾಗದ ಕೆಲವು ನರಕೋಶಗಳು, ಕೊಬ್ಬಿನ ಅಂಗಾಂಶಗಳು ಈ ಹಾರ್ಮೋನನ್ನು ಸ್ರವಿಸುತ್ತವೆ.

ಇದನ್ನು ಹಸಿವಿನ ಹಾರ್ಮೋನು ಎಂದೂ ಕರೆಯುತ್ತಾರೆ. ಏಕೆಂದರೆ, ಊಟ ಮಾಡಿದ ತಕ್ಷಣದಲ್ಲಿ ನಮ್ಮ ರಕ್ತದಲ್ಲಿ ್ರೆಲಿನ್ನ ಮಟ್ಟ ಅತ್ಯಂತ ಕಡಿಮೆ ಇರುತ್ತದೆ. ಊಟಕ್ಕೆ ತುಸು ಮೊದಲು ಅಥವಾ ಬಹಳ ಹಸಿದಿದ್ದಾಗ ರಕ್ತದಲ್ಲಿ ಇದರ ಪ್ರಮಾಣ ಅತಿ ಹೆಚ್ಚಿರುತ್ತದೆ. ಹೀಗಾಗಿ ಇದು ಹಸಿವನ್ನು ನಿಯಂತ್ರಿಸುತ್ತಿರಬಹುದು ಎಂದು ನಂಬಲಾಗಿದೆ. ಅಷ್ಟೇ ಅಲ್ಲ. ್ರೆಲಿನ್ ಮತ್ತು ನಮ್ಮ ದೇಹದ ಬೆಳೆವಣಿಗೆಯನ್ನು ನಿಯಂತ್ರಿಸುವ ಹಾರ್ಮೋನಿಗೂ (ಗ್ರೋತ್ ಹಾರ್ಮೋನ್ ಗ growth hormone) ಸಂಬಂಧವಿರುವುದನ್ನೂ ಕಂಡು ಕೊಂಡಿದ್ದಾರೆ. ಉದಾಹರಣೆಗೆ,  ಬೆಳವಣಿಗೆ ಅತಿ ಶೀ್ರವಾಗಿದ್ದಾಗ,  ಹುಟ್ಟಿನಿಂದ ಸುಮಾರು ಎರಡು ವರ್ಷ ವಯಸ್ಸಿನವರೆಗಿನ ಅವಧಿಯಲ್ಲಿ, ್ರೆಲಿನ್ ಪ್ರಮಾಣ ಶಿಶುಗಳಲ್ಲಿ ಅತ್ಯಧಿಕವಾಗಿರುತ್ತದೆ. ಅನಂತರ ಇದು ಕ್ರಮೇಣ ಕಡಿಮೆಯಾಗುತ್ತದೆಯಂತೆ. ್ರೆಲಿನ್ಗೂ ಬೊಜ್ಜಿಗೂ ನೇರ ಸಂಬಂಧವಿಲ್ಲದಿದ್ದರೂ ಪ್ರೇಡರ್-ವಿಲ್ಲಿ ಖಾಯಿಲೆ ಎನ್ನುವ ಬೊಜ್ಜಿನ ಖಾಯಿಲೆಯ ರೋಗಿಗಳಲ್ಲಿ ್ರೆಲಿನ್ನ ಪ್ರಮಾಣ ಅತಿ ಹೆಚ್ಚು. ಈ ರೋಗಿಗಳ ಹಸಿವೆಗೆ ಕೊನೆಯಿಲ್ಲ. ತಿನ್ನುವುದಕ್ಕೆ ಮಿತಿಯೂ ಇರುವುದಿಲ್ಲ. ಕೊಟ್ಟದ್ದನ್ನೆಲ್ಲ ನುಂಗುವ ಬಕಾಸುರರು. ಹೀಗಾಗಿ ಬೊಜ್ಜೂ ಜಾಸ್ತಿ.

ಇಂತಹ ಬಕಾಸುರರಿಗೆ ಕಾರಣವಾಗುವ ್ರೆಲಿನ್ ಕಸುರಾಪಾನಕಿಕ್ಕೂ ಪ್ರೇರಣೆಯಾಗಬಹುದು ಎನ್ನುತ್ತದೆ ಜೆರ್ಲಾಗ್ ಸಂಶೋಧನೆ. ್ರೆಲಿನ್ ಮಿದುಳನ್ನು ತಲುಪಿ ಅಲ್ಲಿರುವ ಜಿಆರ್ಎಚ್-ಎಲ್ಆರ್1 ಅನ್ನು ತಳುಕಿದಾಗಷ್ಟೆ ಹಸಿವಿನ ಅನುಭವವಾಗುತ್ತದೆ. ಇದುವೇ ಆಹಾರ ಸೇವನೆಗೆ ಪ್ರೇರಣೆಯಾಗುತ್ತದೆ. ಸುರಾಪಾನಿಗಳು ಹಸಿವೆ ತಡೆಯಲು ಮದ್ಯ ಸೇವಿಸುತ್ತಾರೆನ್ನುವ ಶಂಕೆ ಇದೆ. ಆದರೆ ಜೆರ್ಲಾಗ್ರವರ ಸಂಶೋಧನೆ ಸುರಾಪಾನಕ್ಕೆ ಹಸಿವೆ ಕಾರಣವಲ್ಲ ಎಂದು ನಿರೂಪಿಸಿದೆ. ಇವರು ಇಲಿಗಳ ಮಿದುಳಿನಲ್ಲಿ ಖುಷಿ ಸಂವೇದನೆ ನೀಡುವ ಭಾಗಕ್ಕೆ ್ರೆಲಿನ್ ಹಾರ್ಮೋನನ್ನು ಚುಚ್ಚಿದರು. ಈ ಇಲಿಗಳಿಗೆ ಒಂದು ಬಾಟಲಿಯಲ್ಲಿ ಮದ್ಯವನ್ನೂ, ಇನ್ನೊಂದರಲ್ಲಿ ನೀರನ್ನೂ ನೀಡಿದಾಗ ಅವು ಹೆಚ್ಚಾಗಿ ಮದ್ಯದ ಬಾಟಲಿಯನ್ನೇ ಆಯ್ದುಕೊಂಡವು. ಮದ್ಯವನ್ನೇ ಹೆಚ್ಚೆಚ್ಚು ಸೇವಿಸಿದವು. ಇದೇ ಇಲಿಗಳ ಜಿಆರ್ಎಚ್-ಎಲ್ಆರ್1 ಪ್ರೋಟೀನುಗಳನ್ನು ಬೇರೆ ರಾಸಾಯನಿಕದಿಂದ ಬಂಧಿಸಿ, ಅನಂತರ ್ರೆಲಿನ್ ಚುಚ್ಚಿದಾಗ ಅವುಗಳು ಮದ್ಯದ ಬಾಟಲಿಗೆ ಹೆಚ್ಚಿನ ಗಮನ ಕೊಡಲೇ ಇಲ್ಲ. ಮಿದುಳಿನ ಕೋಶಗಳಲ್ಲಿ ಈ ಪ್ರೊಟೀನ್ಗಳೇ ಇಲ್ಲದ ಇಲಿಗಳೂ ಸಹ, ಮದ್ಯದ ಬಾಟಲಿಗೆ ಹೆಚ್ಚಿನ ಗಮನ ನೀಡಲಿಲ್ಲ.  ್ರೆಲಿನ್ ಮಿದುಳನ್ನು ತಾಕಿ ಪ್ರಚೋದಿಸಿದಾಗಷ್ಟೆ ಇಲಿಗಳು ಮದ್ಯಪಾನವನ್ನು ಬಯಸಿದುವು ಎಂದರ್ಥವಷ್ಟೆ. ಮಿದುಳಿನ ಕೋಶಗಳ ಮೇಲೆ ್ರೆಲಿನ್ನ ಈ ಪ್ರಭಾವ ಮದ್ಯವ್ಯಸನಿಗಳ ಚಟವನ್ನು ಬಿಡಿಸಲು ಅನುಕೂಲಿಯಾಗಬಹುದು ಎಂದು ಜೆರ್ಲಾಗ್ ಆಶಿಸಿದ್ದಾರೆ.

ಮದ್ಯವಷ್ಟೆ ಅಲ್ಲ. ಬಕಾಸುರತನಕ್ಕೂ ಇದು ಕಾರಣವೆಂದು ಅಮೆರಿಕೆಯ ಜೀವವಿಜ್ಞಾನಿಗಳ ತಂಡವೊಂದು ಪತ್ತೆ ಮಾಡಿದೆ. ಮೊನ್ನೆ ಕ್ರಿಸ್ಮಸ್ನಂದು ಬಯಾಲಾಜಿಕಲ್ ಸೈಕಿಯಾಟ್ರಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಇವರ ಸಂಶೋಧನೆ, ಊಟವೆನ್ನುವುದು ಹಸಿವೆಯನ್ನು ನೀಗುವುದಕ್ಕಷ್ಟೆ ಅಲ್ಲ, ಖುಷಿ ಕೊಡುವ ಕೆಲಸವೂ ಹೌದು ಎಂದಿದೆ. ಹೀಗಾಗಿ ಹಸಿವೆ ಇಲ್ಲದಿದ್ದರೂ ಖುಷಿ ಕೊಡುವ ಆಹಾರವನ್ನು ಮತ್ತೆ, ಮತ್ತೆ ಕಬಳಿಸುವಂತೆ ್ರೆಲಿನ್ ಪ್ರಚೋದಿಸುತ್ತದೆಂದು ಟೆಕ್ಸಾಸ್ ವಿಶ್ವವಿದ್ಯಾನಿಲಯದ ಸೌತ್ವೆಸ್ಟರ್ನ್ ಮೆಡಿಕಲ್ ಸೆಂಟರ್ನ ಮನೋವಿಜ್ಞಾನಿ ಜೆಫ್ರಿ ಜಿಗ್ಮನ್ ತಂಡ ಪ್ರಕಟಿಸಿದೆ.

ಹಸಿದಾಗಷ್ಟೆ ನಾವು ಎಗ್ಗಿಲ್ಲದೆ ತಿನ್ನುತ್ತೇವೆ ಎನ್ನುವುದು ನಂಬಿಕೆ. ಆದರೆ ಮದುವೆ ಮನೆಯಲ್ಲಿ ಹೋಳಿಗೆ ಊಟ ಮಾಡುವವರಿಗೆ ಈ ಪ್ರಶ್ನೆ ಎದುರಾಗುವುದೇ ಇಲ್ಲ. ಹೊಟ್ಟೆ ತುಂಬಿದ್ದಾಗಲೂ ಭರ್ಜರಿ ಭೋಜನವನ್ನು ತಿನ್ನುವವರಿದ್ದಾರೆ. ಹೀಗೇಕೆ? ಹೋಳಿಗೆಯ ಆಕರ್ಷಣೆಯೋ? ಸಹಭೋಜನದ ಖುಷಿಯೋ? ಅಥವಾ ನಮಗೇ ಗೊತ್ತಿಲ್ಲದೆ ಮಿದುಳು ಹಾಗೆ ಮಾಡಲು ಪ್ರೇರೇಪಿಸುತ್ತಿದೆಯೋ? ಇನ್ನೂ ಬಗೆಹರಿಯದ ಈ ಪ್ರಶ್ನೆಯ ಮೇಲೆ ಜೆಫ್ರಿ ಜಿಗ್ಮನ್ರವರ ಸಂಶೋಧನೆ ತುಸು ಬೆಳಕು ಚೆಲ್ಲಿದೆ. ಇಂತಹ ನಡವಳಿಕೆಗೆ ಮಿದುಳಿನ ್ರೆಲಿನ್ನಿಂದ ಪ್ರಚೋದಿತವಾದ ಮಿದುಳಿನ ಪ್ರೇರೇಪಣೆಯೂ ಕಾರಣವಿರಬಹುದು ಎಂದು ಅವರ ಸಂಶೋಧನೆ ಸೂಚಿಸಿದೆ.

ಇಲಿಗಳಿಗೆ ಕೊಬ್ಬಿನ ಪದಾರ್ಥ ಎಂದರೆ ಬಹಳ ಇಷ್ಟ. ಹೀಗಾಗಿ ಜಿಗ್ಮನ್ರವರ ತಂಡ ಇಲಿಗಳಿಗೆ ಕೊಬ್ಬು ಹೆಚ್ಚಿರುವ ಚೀಸ್ನಂತಹ ಪದಾರ್ಥಗಳನ್ನು ತಿನ್ನಿಸಿ ಅಭ್ಯಾಸ ಮಾಡಿತು. ಅನಂತರ ಅವುಗಳನ್ನು ಚೀಸ್ಭರಿತ ಆಹಾರ ಮತ್ತು ಸಾಧಾರಣ ಇಲಿ ಆಹಾರ ಎರಡೂ ಇರುವ ಕೊಠಡಿಯಲ್ಲಿ ಬಿಟ್ಟು ಅವು ಯಾವುದನ್ನು ತಿನ್ನುತ್ತವೆ ಎಂದು ಗಮನಿಸಿದರು. ಕೊಠಡಿಯೊಳಗೆ ಬಿಡುವ ಮುನ್ನ ಇಲಿಗಳಿಗೆ ಹೊಟ್ಟೆ ತುಂಬುವಷ್ಟು ಆಹಾರ ನೀಡಲಾಗಿತ್ತು. ಹಾಗೆಯೇ ಅವುಗಳಲ್ಲಿ ಕೆಲವಕ್ಕೆ ್ರೆಲಿನ್ ಚುಚ್ಚುಮದ್ದು ನೀಡಲಾಯಿತು. ್ರೆಲಿನ್ ಚುಚ್ಚಿಸಿಕೊಂಡ ಇಲಿಗಳು ಹೆಚ್ಚಾಗಿ ಚೀಸ್ಭರಿತ ಆಹಾರವನ್ನೇ ಹೆಚ್ಚೆಚ್ಚು ತಿಂದವಂತೆ. ್ರೆಲಿನ್ ಚುಚ್ಚಿಸಿಕೊಳ್ಳದಿದ್ದ ಇಲಿಗಳು ಹೀಗೆ ಮಾಡಲಿಲ್ಲ. ಹೀಗಾಗಿ ್ರೆಲಿನ್ ಚುಚ್ಚಿಸಿಕೊಂಡ ಇಲಿಗಳ ತೂಕ ಹೆಚ್ಚಾಗಿ ಅವು ಬೊಜ್ಜಿನ ಇಲಿಗಳಾದುವು ಎಂದು ಜಿಗ್ಮನ್ ವರದಿ ಮಾಡಿದ್ದಾರೆ. ಹಸಿವೆಯಾದಾಗಲಷ್ಟೆ ಆಹಾರ ಸೇವಿಸುವಂತೆ ್ರೆಲಿನ್ ಪ್ರಚೋದನೆ ನೀಡುವುದಿಲ್ಲ ಅದು ಖುಷಿ ಸಂವೇದನೆ ಗುರುತಿಸುವ ಮಿದುಳಿನ ಭಾಗವನ್ನೂ ಪ್ರಚೋದಿಸುತ್ತಿರುಬಹುದು. ಹೀಗಾಗಿಯೇ ಹೊಟ್ಟೆ ತುಂಬಿದ್ದರೂ ಇಲಿಗಳು ತಿಂಡಿಬಾಕಗಳಾದುವು ಎಂದು ಅವರು ತೀರ್ಮಾನಿಸಿದ್ದಾರೆ.

ಹೊಟ್ಟೆತುಂಬಿದವರು ಹೆಚ್ಚೆಚ್ಚು ತಿನ್ನುತ್ತಾರೇಕೆ ಎಂದು ಈ ಸಂಶೋಧನೆ ತಿಳಿಸುತ್ತದೆ ನಿಜ. ಆದರೆ ಹೊಟ್ಟೆ ಹಸಿದಿದ್ದರೂ, ಕೂಳು ದೊರೆಯದವರಲ್ಲಿ – ನಮ್ಮ ಭಾರತದಲ್ಲಿಯೇ ಸುಮಾರು 30 ಕೋಟಿ ಇಂತಹ ಜನರಿದ್ದಾರೆ – ್ರೆಲಿನ್ ಏನು ಮಾಡುತ್ತದೆ ಎಂಬುದನ್ನು ಇನ್ನು ಪತ್ತೆ ಮಾಡಬೇಕಷ್ಟೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

ಎ.ಎಸ್.ಕೆ.ವಿ.ಎಸ್. ಶರ್ಮ, # 1885, ಶ್ರೀ ಲಕ್ಷ್ಮಿ, 6ನೇ ಮೈನು, 30 ಅಡಿ ರಸ್ತೆ, ಹಂಪಿ ವೃತ್ತದ ಸಮೀಪ, ಹೆಬ್ಬಾಳು 2ನೇ ಹಂತ, ಮೈಸೂರು-570017; ದೂರವಾಣಿ: 0821-2301171; 9886640328; 28.12.2009

1.  Elisabet Jerlhag et al, Requirement of central ghrelin signaling for alcohol reward, PNAS, 2009 Jul 7;106(27):11318-23, 2009  (online Jun 29)

2. Mario Perello et al., Ghrelin Increases the Rewarding Value of High-Fat Diet in an Orexin-Dependent Manner (Available online 25 December 2009), Biological Psychiatry; DOI: 10.1016/j.biopsych.2009.10.030