೧೬ನೇ ಶತಮಾನಕ್ಕೆ ಹಿಂದೆ ಗುಬ್ಬಿಯನ್ನು ಅಮರಗೊಂಡ ಎಂದು ಕರೆಯುತ್ತಿದ್ದರು. ಕವಿ ಮಲ್ಲಣಾರ್ಯ ಇಲ್ಲಿಯ ಮಲ್ಲಿಕಾರ್ಜುನ ದೇವಾಲಯದಲ್ಲಿ ಒಮ್ಮೆ ಪುರಾಣವನ್ನು ಹೇಳುತ್ತಿದ್ದ ಕಾಲದಲ್ಲಿ, ಎರಡು ಗುಬ್ಬಿ ಹಕ್ಕಿಗಳು ಅಲ್ಲಿಗೆ ಬಂದು ಪುರಾಣವನ್ನು ಕೇಳಿ ಮಂಗಳಕಾರ್ಯದ ನಂತರ, ಅಲ್ಲಿಯೇ ಬಿದ್ದು ಮರಣಹೊಂದಿದವು. ತನ್ನ ಯೋಗದೃಷ್ಟಿಯಿಂದ ಗುಬ್ಬಿಹಕ್ಕಿಗಳ ಪೂರ್ವಜ ನ್ಮವೃತ್ತಾಂತವನ್ನು ತಿಳಿದು, ಕವಿಯು ಅಲ್ಲಿಯೇ ಸಮಾಧಿ ಮಾಡಿದ ಈ ಪವಾಡದ ಕಾರಣದಿಂದ, ಅಮರಗೊಂಡ ಎಂಬ ಊರು ಮುಂದೆ ಗುಬ್ಬಿ ಎಂದು ಹೆಸರಾಯಿತೆಂದು ತಿಳಿದುಬಂದಿದೆ.

ಕನ್ನಡ ರಂಗಭೂಮಿಯಲ್ಲಿ ಖ್ಯಾತರಾದ ಡಾ|| ಜಿ.ಎಚ್.ವೀರಣ್ಣನವರ ಗುಬ್ಬಿ ಶ್ರೀ ಚನ್ನಬಸವೇಶ್ವರ ನಾಟಕ ಮಂಡಲಿ ಎಂಬ ಸಂಸ್ಥೆಯು ಪ್ರಾಂತೀಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಖ್ಯಾತಿ ಪಡೆದು, ಕನ್ನಡ ಕಲಾ ರಂಗಕ್ಕೆ ಗಣನೀಯ ಕೊಡುಗೆ ನೀಡಿದೆ. ಕನ್ನಡದ ಮೇರುನಟ ಡಾ|| ರಾಜ್ ಕುಮಾರ್ ರವರು ಈ ಕಂಪನಿಯ ಮೂಲಕ ಕಲಾ ಜಗತ್ತಿಗೆ ಬಂದವರು.

ಶ್ರೀ ಚನ್ನಬಸವೇಶ್ವರ ದೇವಸ್ಥಾನ

ದೂರ ಎಷ್ಟು?
ತಾಲ್ಲೂಕು : ಗುಬ್ಬಿ
ತಾಲ್ಲೂಕು ಕೇಂದ್ರದಿಂದ: ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೨೦ ಕಿ.ಮೀ

 

ಇದು ಅತ್ಯಂತ ಪುರಾತನ ಹಾಗೂ ಮಹತ್ವಪೂರ್ಣವಾಗಿದ್ದು, ಭಕ್ತಾದಿಗಳ ಸಹಕಾರದಿಂದ ಬೃಹದಾಕಾರವಾಗಿ ಬೆಳೆದು, ದಿನನಿತ್ಯ ನೂರಾರು ಭಕ್ತಾದಿಗಳು ದೇವಸ್ಥಾನಕ್ಕೆ ಬಂದು, ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡು, ಧನ್ಯತೆಯಿಂದ ಪುಳಕಿತರಾಗುತ್ತಾರೆ. ಇತ್ತೀಚೆಗೆ ಭಕ್ತರ ಒತ್ತಾಸೆಯಂತೆ, ಸುಸಜ್ಜಿತವಾಗಿ ನವೀಕರಿಸುವ ಉದ್ದೇಶದಿಂದ ಜೀರ್ಣೋದ್ದಾರ ಕಾರ್ಯವನ್ನು ಕೈಗೊಂಡಿದ್ದಾರೆ.

 

ಶ್ರೀ ಗುಬ್ಬಿ ವೀರಣ್ಣ ನವರು

ಸುಮಾರು ಕ್ರಿ.ಶ.೧೮೯೦ ರಲ್ಲಿ ಗುಬ್ಬಿ ಪಟ್ಟಣದಲ್ಲಿ ಹುಟ್ಟಿ ೬ ವರ್ಷದವರಿದ್ದಾಗಲೆ ನಾಟಕ ಮಂಡಲಿಯಲ್ಲಿ ಕೆಲಸಕ್ಕೆ ಸೇರಿ, ಅನೇಕ ಬಾಲನಟನ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಇವರ ಪ್ರಮುಖ ನಾಟಕಗಳೆಂದರೆ ಸದಾರಮೆ, ವಳ್ಳೀಪರಿಣಯ, ಪ್ರಭಾಮಣಿ ವಿಜಯ, ಸುಭದ್ರಾ ಕಲ್ಯಾಣ, ಭಕ್ತ ಕಬೀರ್, ಕುರುಕ್ಷೇತ್ರ ಮುಂತಾದುವುಗಳಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿ ಮತ್ತು ಅಭಿನಯದ ಮೂಲಕ ಜನರ ಮನದಲ್ಲಿ ಆಳವಾಗಿ ಬೇರೂರಿದರು.

ಅವರಿಗೆ ಸಂದ ಪ್ರಶಸ್ತಿಗಳೆಂದರೆ ನಾಟಕರತ್ನ, ಭಾರತದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಮತ್ತು ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ.

 

ಚೇಳೂರು ಬಾವಿ ಮತ್ತು ಕಲ್ಲುಕೋಳಿ

ದೂರ ಎಷ್ಟು?
ತಾಲ್ಲೂಕು : ಗುಬ್ಬಿ
ತಾಲ್ಲೂಕು ಕೇಂದ್ರದಿಂದ: ೨೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೩೫ ಕಿ.ಮೀ

ಈ ಬಾವಿಯು ೫೦ ಅಡಿ ಅಗಲ ೫೦ ಅಡಿ ಉದ್ದ ೫೦ ಅಡಿ ಆಳ ಅಳತೆಯಲ್ಲಿ ಚೌಕಾಕಾರವಾಗಿದ್ದು ಉತ್ತರ ದಕ್ಷಿಣ ದಿಕ್ಕುಗಳಿಂದ ಪ್ರವೇಶ ದ್ವಾರಗಳಿವೆ. ಇದು ಮಳೆ ಬಂದರೆ ತುಂಬುವುದಿಲ್ಲ ಬರ ಬಂದರೆ ಬುತ್ತುವುದಿಲ್ಲ. ಇದು ತುಂಬಿ ಉಕ್ಕಿ ಹರಿಯಿತೆಂದರೆ ಕಲಿಯುಗ ಅಂತ್ಯ ಎಂಬ ಪ್ರತೀತಿ ಇದೆ.

ಕಲ್ಲುಕೋಳಿ ಕೂಗಿದರೆ ಕಲಿಯುಗ ಅಂತ್ಯ ಎಂದು ಹೇಳುತ್ತಾರೆ. ಕೋಳಿ ಎನ್ನುವ ಪದಕ್ಕೆ ಅರ್ಥ ಕೋಳಿ=ದ್ರಾವಿಡ ದೇಶದ ಜನಾಂಗ ಕೋಲಬಾಷೆ. ಕೋಳಿ=ಕೋಲಿಯರು (ಊರಗೊಲ್ಲರು) ಕೋಳಿ=ರಾಜ ಹಂಸ, ಮಾಳಹಂಸ, ಕೋಳಿ=ನವಿಲು ವಾಹನ, ಕೋಳಿ=ದ್ರಾವಿಡರ ವ್ಯಾಪಾರ ಹಡಗುಗಳಲ್ಲಿನ ತೋ ಕೈ ಎನ್ನುವ ನವಿಲು.

 

ಬೇಳೂರು ಮರಳು ಬಸವೇಶ್ವರ:

ಪ್ರಸಿದ್ದವಾದ ದೇವಸ್ಥಾನವಾಗಿದ್ದು ಸುಮಾರು ೮೦೦ ವರ್ಷಗಳ ಹಿಂದೆ ಕಲ್ಯಾಣದ ಕ್ರಾಂತಿಯ ನಂತರ ಶರಣರು ಇಲ್ಲಿಗೆ ಬಂದು ನೆಲೆಸಿ ಸ್ಥಾಪಿಸಿದ್ದಾರೆ.

 

ಹಾಗಲವಾಡಿ ಕೋಟೆ

ದೂರ ಎಷ್ಟು?
ತಾಲ್ಲೂಕು : ಗುಬ್ಬಿ
ತಾಲ್ಲೂಕು ಕೇಂದ್ರದಿಂದ: ೩೫ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೫೫ ಕಿ.ಮೀ

ಮುದಿಯಪ್ಪನಾಯಕ ಎಂಬ ಪಾಳೆಗಾರ ತನ್ನ ಊರ ರಕ್ಷಣೆಗಾಗಿ ಊರ ಸುತ್ತಲೂ ಭದ್ರವಾದ ಕಲ್ಲಿನ ಕೋಟೆಯನ್ನು ಕಟ್ಟಿಸಿದ್ದು ಸುಮಾರು ೭೦ ಅಡಿ ಎತ್ತರ ಇದ್ದು ಇದರ ಮೇಲೆ ನಿಂತು ನೋಡಿದರೆ ಶತ್ರು ಸೈನ್ಯ ಬರುವುದನ್ನು ದೂರದಿಂದಲೆ ನೋಡ ಬಹುದಾಗಿತ್ತು. ಇದನ್ನು ಸುಮಾರು ೬೦೦ ವರ್ಷಗಳ ಹಿಂದೆ ಕಟ್ಟಿದ್ದು ಕೋಟೆಯ ಹೆಬ್ಬಾಗಿಲು ಈಗಲೂ ಸುಸ್ಥಿತಿಯಲ್ಲಿದೆ.

 

ನಿಟ್ಟೂರಿನಲ್ಲಿರುವ ಜೈನ ಬಸದಿ ಹಾಗೂ ಜೈನ ವಿಗ್ರಹಗಳು :

ದೂರ ಎಷ್ಟು?
ತಾಲ್ಲೂಕು : ಗುಬ್ಬಿ
ತಾಲ್ಲೂಕು ಕೇಂದ್ರದಿಂದ: ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೩೦ ಕಿ.ಮೀ