ಪಾಟಿಯನ್ನು ಪುಸ್ತಕ ಕಟ್ಟಿಗೆಯ ತುಂಡು ಅಥವಾ ಆಡಲು ಕುಳಿತವರೊಬ್ಬರ ತೊಡೆಗೆ ಆನಿಸಿ ಇಟ್ಟುಕೊಳ್ಳುತ್ತಾರೆ. ಇಬ್ಬರು ಅಥವಾ ನಾಲ್ಕಾರು ಜನರು ತಮ್ಮ ತಮ್ಮ ಕಡ್ಡಿಯೊಂದಿಗೆ ಆಡಲು ಪ್ರಾರಂಭಿಸುತ್ತಾರೆ. ಪ್ರತಿಯೊಬ್ಬರು ಒಬ್ಬರ ನಂತರ ಇನ್ನೊಬ್ಬರಂತೆ ಪಾಟಿಯ ಮೇಲ್ಭಾಗದಲ್ಲಿ ಇಡುತ್ತಾರೆ. ಅದು ಉರುಳಿ ಕೆಳಗೆ ಬೀಳುತ್ತದೆ. ಹೀಗೆ ಒಂದರ ನಂತರ ಇನ್ನೊಂದು ಕಡ್ಟಿ ಉರುಳಿ ಬೀಳುವಾಗ ಬಡಸಿಕೊಂಡ ಕಡ್ಡಿ, ಬಡಿದ ಕಡ್ಡಿಯ ಯಜಮಾನನಿಗೆ ದೊರಕುತ್ತದೆ.